ತಪನ್ ಕುಮಾರ್ ಪ್ರಧಾನ್

ಡಾ.ತಪನ್ ಕುಮಾರ್ ಪ್ರಧಾನ್ ಅವರು ೧೯೭೨ರಲ್ಲಿ ಲಕ್ಷ್ಮೀ ಸಾಗರ, ಒಡಿಶಾದ ಭುವನೇಶ್ವರದಲ್ಲಿ ಜನಿಸಿದರು.

ಇವರು ಪ್ರಶಸ್ತಿ ವಿಜೇತ ಭಾರತೀಯ ಲೇಖಕ, ಕವಿ ಮತ್ತು ಕಾರ್ಯಕರ್ತ. ಡಾ ಪ್ರಧಾನ್ ಉತ್ತಮವಾಗಿ ಇಂಗ್ಲೀಷ್ ಭಾಷೆಗೆ ಅನುವಾದ ಮಾಡುತ್ತಿದ್ದರು. ಅವರು ತಮ್ಮದೇ ಒರಿಯಾ ಕವಿತೆ "ಕಲಹಂಡಿ" ಆಂಗ್ಲ ಭಾಷೆಗೆ ಅನುವಾದಿಸಿದಕ್ಕೆ ಅವರಿಗೆ ಸಾಹಿತ್ಯ ಅಕಾಡೆಮಿಯವರಿಂದ ಗೋಲ್ಡನ್ ಜುಬ್ಲಿ ಇಂಡಿಯನ್ ಲಿಟರೇಚರ್ ಕವನ ಅನುವಾದ ಪ್ರಶಸ್ತಿ ದೊರಕಿತು. ಇವರ ಇತರ ಪ್ರಶಸ್ತಿ ಪಡೆದ ಜನಪ್ರಿಯ ಕವನಗಳು ಈಕ್ವೆಶನ್, ದಿ ಅವರ್ ಆಫ್ ಕಮ್ಮಿಂಗ್, ವಿಂಡ್ಸ್ ಇನ್ ದಿ ಆಫ್ಟರ್‌ನೂನ್', 'ಎಫಿಟಫ್' ಹಾಗು ಬೋಧಿಸತ್ವ.

ತಪನ್ ಕುಮಾರ್ ಪ್ರಧಾನ್
ತಪನ್ ಕುಮಾರ್ ಪ್ರಧಾನ್
ಡಾ. ತಪನ್ ಕುಮಾರ್ ಪ್ರಧಾನ್
ಜನನ೨೯೭೨ ಅಕ್ಟೋಬರ್, ೨೨
ಭುವನೇಶ್ವರ
ವೃತ್ತಿಕವಿ, ಚಳುವಳಿಗಾರರು, ಬ್ಯಾಂಕರ್, ನಿರ್ವಾಹಕ
ಭಾಷೆಒಡಿಯ, ಇಂಗ್ಲೀಷ್, ಹಿಂದಿ
ರಾಷ್ಟ್ರೀಯತೆಭಾರತೀಯ
ಪೌರತ್ವಭಾರತೀಯ
ವಿದ್ಯಾಭ್ಯಾಸಸಮಾಜಶಾಸ್ತ್ರದಲ್ಲಿ ಡಾಕ್ಟರೇಟ್
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಉತ್ಕಲ ವಿಶ್ವವಿದ್ಯಾಲಯ, ಬಿಜೆಬಿ ಕಾಲೇಜ್, ಲಕ್ಷ್ಮಿಸಾಗರ್ ಹೈಸ್ಕೂಲ್
ಪ್ರಮುಖ ಕೆಲಸ(ಗಳು)ಕಲಹಂಡಿ, ಇಕ್ವೆಶನ್, ವಿಂಡ್ ಇನ್ ದಿ ಅಪ್ಟರ್‌ನೂನ್
ಪ್ರಮುಖ ಪ್ರಶಸ್ತಿ(ಗಳು)ಸಾಹಿತ್ಯ ಅಕಾಡೆಮಿ
ಬಾಳ ಸಂಗಾತಿಸುವಶ್ರಿ
ಮಕ್ಕಳುಓಂ ಸತ್ಯಂ

ಪ್ರಶಸ್ತಿ ವಿಜೇತ ಕೃತಿಗಳು

೨೦೦೭ ರಲ್ಲಿ ಡಾ ಪ್ರಧಾನ್‌ರವರ ಪ್ರಬಂಧಕ್ಕೆ ಇಂಡಿಯನ್ ಎಕ್ಸ್‌ಪ್ರೆಸ್ ಸಿಟಿಜ಼ೆನ್ ಫಾರ್ ಪೀಸ್ ಪ್ರಶಸ್ತಿಯನ್ನು ಶ್ಯಾಮ್ ಬೆನಗಲ್‌ನವರು ಕೊಟ್ಟರು. ೨೦೦೭-೦೮ ರಲ್ಲಿ ಅವರು ಭಾಗವಹಿಸಿದ ಅಖಿಲ ಭಾರತ ಅಂತರ್ ಬ್ಯಾಂಕ್ ಹಿಂದಿ ಪ್ರಬಂಧ ಸ್ಪರ್ಧೆಯಲ್ಲಿ ಮೊದಲ ಪ್ರಶಸ್ತಿ ಗೆದ್ದರು. ಅವರು ಮೈಕ್ರೋ ಫೈನಾನ್ಸ್ ಮತ್ತು ಆರ್ಥಿಕ ಸೇರ್ಪಡೆಯನ್ನು ಕುರಿತು ಪ್ರಬಂಧಗಳು ಬರೆದಿದಕ್ಕೆ ಪ್ರಶಸ್ತಿಗಳು ದೊರಕಿವೆ. ಅವರು ಭಾರತೀಯ ರಿಸರ್ವ್ ಬ್ಯಾಂಕ್ ನಡೆಸಿದ ಆರ್.ಬಿ.ಐ ಬೆಳ್ಳಿ ಮಹೋತ್ಸವ ಪ್ರಬಂಧ ಸ್ಪರ್ಧೆಯಲ್ಲಿ ಮೊದಲ ಪ್ರಶಸ್ತಿಯನ್ನು ಪಡೆದುಕೊಂಡರು. ೨೦೦೭ರಲ್ಲಿ ಆರ್ಬಿಐ ಬ್ರಾಂಡ್ ಬಿಲ್ಡಿಂಗ್ ಸ್ಪರ್ಧೆಯಲ್ಲಿ ತನ್ನ ವಿಡಂಬನಾತ್ಮಕ ಪ್ರಬಂಧ "ಡ್ರೀಮಿಂಗ್ ಫಾರ್ ಆರ್.ಬಿ.ಐ ಬ್ರಾಂಡ್" ಮೊದಲ ಬಹುಮಾನ ಪಡೆದುಕೊಂಡಿತು. ೨೦೦೧ರಲ್ಲಿ ನಡೆದ ವಿಶ್ವ ಹ್ಯಾಬಿಟೆಟ್ ಡೇ ಸ್ಪರ್ಧೆಯಲ್ಲಿ ಹಸಿರು, ಇಂಟೆಲಿಜೆಂಟ್ ಕಟ್ಟಡಗಳು ಮತ್ತು ನಗರ ಮೂಲಸೌಕರ್ಯ ಎಂಬ ಪ್ರಬಂಧಗಳಿಗೆ ಮೂರು ಬಹುಮಾನಗಳನ್ನು ಪದೆದ್ದಿದ್ದಾರೆ. ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿಯೇ ಅವರು ಅನೇಕ ಸಾಹಿತ್ಯ ಬಹುಮಾನಗಳನ್ನು ಗೆದ್ದುಕೊಂಡಿದ್ದಾರೆ. ಬೌದ್ಧ ಪ್ರಬಂಧಗಳಿಗೆ ಉಪಾಸಿಕ ಕಮಲಾದೇವಿ ಪ್ರಶಸ್ತಿ , ಸಣ್ಣ ಕಥೆಗಳಿಗೆ ಶಥದ್ರು ಪ್ರಶಸ್ತಿ ಮತ್ತು ಕವನಗಳಿಗೆ ಅಂಕುರ್ ಬಹುಮಾನ ಇತ್ಯಾದಿ. ಅವರು ೧೯೯೩-೯೪ ರ ಅವಧಿಯಲ್ಲಿ ಉತ್ಕಾಲ್ ಸಾಹಿತ್ಯ ವಿಜೇತರಾದರು.

ಪ್ರಧಾನ್ ಆರ್.ಬಿ.ಐ ಗವರ್ನರ್‌‌ರಿಂದ ಅಂತರ ಬ್ಯಾಂಕ್ ಪ್ರಬಂಧ ಸ್ಪರ್ದೆದಲ್ಲಿ ಮೊದಲ ಬಹುಮಾನ ಪಡೆದರು. ೨೦೧೩ರಲ್ಲಿ ಕವನ ಮಂಡಲ ನಡೆಸಿದ ಅಖಿಲ ಭಾರತ ಕವನ ಸ್ಪರ್ಧೆಯಲ್ಲಿ ಪ್ರಧಾನ್‌ರವರ ಕವಿತೆ "ದಿ ಬುದ್ಧ ಸ್ಮೈಲ್ಡ್" ಮೊದಲ ಪ್ರಶಸ್ತಿಯನ್ನು ಪಡೆದಿದೆ.

ಸಾಹಿತ್ಯಕ ಶೈಲಿ ಮತ್ತು ಪ್ರಖ್ಯಾತ ಕೆಲಸಗಳು

ದೀನರ ಮತ್ತು ಸಾಮಾಜಿಕವಾಗಿ ತುಳಿತಕ್ಕೊಳಗಾದವರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವರ ಬರವಣಿಗೆಯಲ್ಲಿ ಪ್ರಸ್ಥಾಪಿಸಿರುತ್ತಾರೆ. ಕ್ಯಾವ ಅನುವಾದಕನಾಗಿ ಮೂಲ ಭಾಷೆ ಕವನದಲ್ಲಿಯ ತಾಲ ಹಾಗು ಲಯವನ್ನು ಉಳಿಸಿಕೊಳ್ಳಲು ಶ್ರಮಿಸುತ್ತಾರೆ. ಅವರ ಕವನ, ಪ್ರಬಂಧ, ವ್ಯಂಗ್ಯಚಿತ್ರ ಮತ್ತು ಸಣ್ಣ ಕಥೆಗಳು ಇಂಡಿಯನ್ ಲಿಟರೇಚರ್, ಜರ್ನಲ್ ಆಫ್ ಪೊಯಟ್ರಿ ಸೊಸೈಟಿ, ದಿ ಸ್ಟೇಟ್ಸ್‌ಮೆನ್ , ದಿ ಟೈಮ್ಸ್ ಆಫ್ ಇಂಡಿಯಾ, ದಿ ಸಮಾಜ ಮತ್ತು ದಿ ಏಷ್ಯನ್ ಎಜ್ ಎಂಬ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. "ಡ್ಯಾನ್ಸ್ ಆಫ್ ಶಿವ", "ಐ", "ಶಿ ಅಂಡ್ ದಿ ಸಿ", "ದಿ ಬ್ಯಾನ್ಡ್ ಆರ್ಟಿಸ್ಟ್", "ಎ ವುಮೆನ್ಸ್ ಸೆಂಟ್", "ಟು ವುಮೆನ್", "ಮೈ ಜರ್ಮನ್ ಫ್ರೆಂಡ್", "ಅ ಕ್ಯಾಬ್ ಫಾರ್ ಸೆವೆಂಟೀನ್", "ಎ ಟೇಸ್ಟ್ ಫಾರ್ ರಾಟ್ಸ್, "ರನ್ ಅಪ್ ಟು ಕಿಲ್" ಮತ್ತು "ಹೌ ಐ ಬಿಕೇಮ್ ರೈಟರ್" ಇತ್ಯಾದಿ ಇವರ ಪ್ರಮುಖ ಸಣ್ಣ ಕಥೆಗಳು. ಇವರ ಬಹುತೇಕ ಕೃತಿಗಳು ಅನಾಮಧೇಯವಾಗಿ ಅಥವಾ ವಿವಿಧ ಮಿಥ್ಯಾನಾಮಗಳಲ್ಲಿ ಪ್ರಕಟವಾಗಿವೆ. ಮಾನುಪಾಸಂಟ್ ಬರೆದ ಅಪರೂಪದ ಕವಿತೆಗಳನ್ನು ಫ್ರೆಂಚ್ ನಿಂದ ಇಂಗ್ಲೀಷ್ ಭಾ‌ಷೆಗೆ ಅನುವಾದ ಮಾಡಿದ್ದಾರೆ. ವಿವಿಧ ದೇಶಗಳಲ್ಲಿಯ ಜಾನಪದ ಹಾಡುಗಳನ್ನು ಸಂಗ್ರಹಿಸಿದ್ದಾರೆ. ಅವರು ಅನೇಕ ಆಧ್ಯಾತ್ಮಿಕ ಪುಸ್ತಕಗಳನ್ನೂ ಅನುವಾದಿಸಿದ್ದಾರೆ. ಇದರಲ್ಲಿ ಪರಮಹಂಸ ಯೋಗಾನಂದರ ಪುಸ್ತಕಗಳೂ ಸೇರಿವೆ. ವಿದ್ಯಾರ್ಥಿ ಜೀವನದಲ್ಲಿ ಬರೆದ ಇವರ ಕೆಲವು ಮೊದಲ ಕವನಗಳು ವಿವಿಧ ಮಿಂಬಲೆ ತಾಣದಲ್ಲಿ ಲಭ್ಯವಿದೆ.

ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರದ ವಿರುದ್ಧ ಹೊರಾಟ

ಡಾ.ಪ್ರಧಾನ್ ಸಾರ್ವಜನಿಕ ಸಂಸ್ಥೆಗಳ ಪಾರದರ್ಶಕತೆಯನ್ನು ತರುವುದಕ್ಕೆ ಸತತವಾಗಿ ಹೊರಾಟ ಮಾಡಿದರು. ಮಾಹಿತಿ ಹಕ್ಕು ಕಾಯ್ದೆಯನ್ನು ಬಳಸಿ ಸಾರ್ವಜನಿಕ ವ್ಯವಹಾರಗಳಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಬಹಿರಂಗ ಮಾಡಿದ್ದಾರೆ. ೨೦೦೯ರಲ್ಲಿ ಅವರು ಭಾರತದ ಕೇಂದ್ರ ಮಾಹಿತಿ ಆಯೋಗಕ್ಕೆ ಆರ್ಬಿಐ ಅಪ್ರೇಸಲ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ಬಗ್ಗೆ ಒಂದು ಮನವಿ ಮಾಡಿದ್ದರು. ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಪಿಎಆರ್(ಪಾರ್) ವರದಿಯನ್ನು ಪಡೆಯಲು ಆರ್ಬಿಐನ ಮೊದಲ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಯರಲ್ಲಿ ಎರಡನೇಯ ವ್ಯಕ್ತಿಯಾದರು. ಸಿಐಸಿ ಅಭಿಪ್ರಾಯದಲ್ಲಿ ಪಾರ್ "ಗೌಪ್ಯ ವೈಯಕ್ತಿಕ ಮಾಹಿತಿ". ಇದರ ವಿರುದ್ಧವಾಗಿ ಪ್ರಧಾನ್‌ ಪಾರ್ ವೈಯಕ್ತಿಕ ಮಾಹಿತಿಯಲ್ಲ ಇದು ಸಾರ್ವಜನಿಕ ಸೇವಕರು ಮಾಡುತ್ತಿರುವ ಸಾರ್ವಜನಿಕ ಸೇವೆಯ ಮೌಲ್ಯಮಾಪನ ಎಂದು ವಾದಿಸಿದ್ದಾರೆ. ಪ್ರಧಾನ್ ಪಾರ್ ಅಂಕಗಳನ್ನು ಪೂರ್ಣ ಸಾಮಾಜಿಕವಾಗಿ ಬಹಿರಂಗ ಪಡಿಸಬೇಕೆಂದು ಈಗಲೂ ಹೊರಾಟ ಮಾಡುತ್ತಿದ್ದಾರೆ. ಇವರ ಮನವಿಯ ನಂತರ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಎಲ್ಲಾ ನೌಕರರಿಗೆ ಪಾರ್ ವರದಿಗಳನ್ನು ನೀದಬೇಕೆಂದು ಆದೇಶಿಸಿತ್ತು. ಶ್ರೀಮತಿ ಉಷಾ ತೋರಟ್(ಮಾಜಿ ಉಪ ಆರ್‌‌ಬಿಐ ಗವರ್ನರ್) ಅವರ ಮಾತಿನಲ್ಲಿ ಪ್ರಧಾನ್‌ರವರು ವೈಯಕ್ತಿಕ ಕುಂದುಕೊರತೆಗಳನ್ನು ನಿವಾರಿಸಲು "ಮಾಹಿತಿ ಹಕ್ಕು ಕಾಯ್ದೆಯನ್ನು ಕುಶಲ ಬಳಕೆ" ಮಾಡಿದ್ದಾರೆ. ಮಾಹಿತಿ ಹಕ್ಕು ಕಾಯ್ದೆ ಬಳಸಿ ಭಾರತೀಯ ರೈಲ್ವೆ, ಕೇಂದ್ರ ನೇರ ತೆರಿಗೆಗಳ ಮಂಡಳಿ, ಏರ್ ಇಂಡಿಯಾ ಮತ್ತು ಭಾರತೀಯ ನಗರಗಳಲ್ಲಿ ನಗರಾಭಿವೃದ್ಧಿ ಅಧಿಕಾರಿಗಳ ಮಾಡುತ್ತಿರುವ ಅಕ್ರಮಗಳನ್ನು ಬಹಿರಂಗಪಡಿಸಿದ್ದಾರೆ. ಡಾ ತಪನ್ ಕುಮಾರ್ ಪ್ರಧಾನ್ ಡ್ರಗ್ ಮಾಫಿಯಾ ವಿರುದ್ಧ ವಕಾಲತ್ತು ನಡೆಸಿ ಈ ಪದಾರ್ತಗಳನ್ನು ನಿಷೇಧ ಮಾಡಿಸಿದ್ದಾರೆ.

ಸಂಶೋಧನೆ ಮತ್ತು ಇತರ ಚಟುವಟಿಕೆಗಳು

ತಪನ್ ಕುಮಾರ್ ಪ್ರಧಾನ್ 
ಪ್ರಶಸ್ತಿ ಸ್ವೀಕರಿಸುತ್ತಿರುವುದು

ಯುಜಿಸಿ ಸಹಭಾಗಿತ್ವನಾಗಿ, ಪ್ರಧಾನ್‌ರವರಿಗೆ ೨೦೦೧ರಲ್ಲಿ ತತ್ತ್ವಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ನೀಡಲಾಯಿತು. ಕಂಧಮಲ್ ಜಿಲ್ಲೆಯ ಕಂಧ್-ಪನ ಸಂಘರ್ಷ, ಭದ್ರಕ್‌‌ನಲ್ಲಿಯ ಹಿಂದು-ಮುಸ್ಲಿಮ್ ಸಂಬಂಧ, ಒಡಿಶಾದ ಜೈಪುರ್ ಜಿಲ್ಲೆಯ ಬ್ರಹ್ಮಬರಡನಲ್ಲಿ ಹರಿಜನ-ಸವರ್ಣ ಜಾತಿಯ ಚಟುವಟಿಕೆಗಳಿಗೆ ಪರಿಹಾರ ನೀಡುವುದ್ದಕ್ಕೆ ಸಂಶೋಧನೆ ಮಾಡಿದ್ದಾರೆ. ೧೯೯೯ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್, ದೆಹಲಿಯ ಕಚೇರಿಯಲ್ಲಿ ಅಧಿಕಾರಿಯಾಗುವ ಮುನ್ನ ಫಕೀರ್ ಮೋಹನ್ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರವನ್ನು ಕಲಿಸುತ್ತಿದ್ದರು .

ಬ್ಯಾಂಕರ್ ವೃತ್ತಿಜೀವನ

೨೦೦೦ರಿಂದ ೨೦೦೫ರವರಿಗೆ ಡಾ ಪ್ರಧಾನ್‍ ಮುಂಬಯಿ ಆರ್‌ಬಿಐನ ಸಂಚಿಕೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ೨೦೦೫-೨೦೧೦ ಅವಧಿಯಲ್ಲಿ, ವಲಯ ತರಬೇತಿ ಕೇಂದ್ರದಲ್ಲಿ ಸಿಬಿಡಿ ಬೆಲಾಪೂರ್, ಆರ್‌ಬಿಐನ ಸದಸ್ಯರಾಗಿದ್ದರು. ಇಲ್ಲಿ ಬ್ಯಾಂಕಿಂಗ್, ಫೈನಾನ್ಸ್, ಮಾನವ ಸಂಪನ್ಮೂಲ ನಿರ್ವಹಣೆ, ಭಾರತೀಯ ಆರ್ಥಿಕತೆ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ಪಾಠ ಮಾಡುತ್ತಿದ್ದರು. ಅವರು ೨೦೦೮ ರಲ್ಲಿ ಕೃಷಿ ಮತ್ತು ಬ್ಯಾಂಕಿಂಗ್ ಬಗ್ಗೆ ನಡೆದ ೫ನೇ ರಾಷ್ಟ್ರಿಯ ಹಿಂದಿ ಸೆಮಿನಾರ್ ಸಂಯೋಜಕರಾಗಿದ್ದರು. ೨೦೧೦-೨೦೧೪ ಆರ್ಬಿಐ ತಿರುವನಂತಪುರಮ್ನಲ್ಲಿ ಉಪ ಜನರಲ್ ಮ್ಯಾನೇಜರ್‌ರಾಗಿ ಲೆಕ್ಕ ಪರಿಶೋದನ, ಬಜೆಟ್, ಗ್ರಾಮೀಣಾಭಿವೃದ್ಧಿ ಮತ್ತು ಬ್ಯಾಂಕಿಂಗ್ ನೋಡಿಕೊಳ್ಳುತ್ತಿದ್ದರು. ೨೦೧೪ರಲ್ಲಿ, ಪ್ರಧಾನ್ ಆರ್ಬಿಐ ಬಿಟ್ಟು ಒಡಿಶಾ ಸರ್ಕಾರದಲ್ಲಿ ಸೇರಿಕೊಂಡರು ನಂತರ ಹಣಕಾಸು ಇಲಾಖೆಯಲ್ಲಿ ನಿರ್ದೇಶಕರಾಗಿ ನೇಮಕಗೊಂಡರು.

ವೈಯಕ್ತಿಕ ಜೀವನ

ಡಾ ತಪನ್ ಪ್ರಧಾನ್ ರವರು ಪ್ರಸಿದ್ಧಿ ಒಡಿಸ್ಸಾ ನರ್ತಕಿಯಾದ ಸುವಶ್ರೀ ಎಂಬಾಕೆಯನ್ನು ಅಕ್ಟೋಬರ್ ೨೬, ೨೦೦೧ರಲ್ಲಿ ವಿವಾಹಯಾದರು. ಅವರ ಮಗ ಓಂ ಸತ್ಯಂ.

ಉಲ್ಲೇಖಗಳು

Tags:

ತಪನ್ ಕುಮಾರ್ ಪ್ರಧಾನ್ ಪ್ರಶಸ್ತಿ ವಿಜೇತ ಕೃತಿಗಳುತಪನ್ ಕುಮಾರ್ ಪ್ರಧಾನ್ ಸಾಹಿತ್ಯಕ ಶೈಲಿ ಮತ್ತು ಪ್ರಖ್ಯಾತ ಕೆಲಸಗಳುತಪನ್ ಕುಮಾರ್ ಪ್ರಧಾನ್ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರದ ವಿರುದ್ಧ ಹೊರಾಟತಪನ್ ಕುಮಾರ್ ಪ್ರಧಾನ್ ಸಂಶೋಧನೆ ಮತ್ತು ಇತರ ಚಟುವಟಿಕೆಗಳುತಪನ್ ಕುಮಾರ್ ಪ್ರಧಾನ್ ಬ್ಯಾಂಕರ್ ವೃತ್ತಿಜೀವನತಪನ್ ಕುಮಾರ್ ಪ್ರಧಾನ್ ವೈಯಕ್ತಿಕ ಜೀವನತಪನ್ ಕುಮಾರ್ ಪ್ರಧಾನ್ ಉಲ್ಲೇಖಗಳುತಪನ್ ಕುಮಾರ್ ಪ್ರಧಾನ್ಇಂಗ್ಲೀಷ್ಒಡಿಶಾಕವಿಪ್ರಶಸ್ತಿಗಳುಭಾರತೀಯಭುವನೇಶ್ವರ

🔥 Trending searches on Wiki ಕನ್ನಡ:

ತೀ. ನಂ. ಶ್ರೀಕಂಠಯ್ಯಕಳಸವಾದಿರಾಜರುಕೆ. ಅಣ್ಣಾಮಲೈಚುನಾವಣೆವಸ್ತುಸಂಗ್ರಹಾಲಯಹೆಚ್.ಡಿ.ದೇವೇಗೌಡಆರತಿಹನುಮಾನ್ ಚಾಲೀಸತ್ಯಾಜ್ಯ ನಿರ್ವಹಣೆಮೂಲಧಾತುಹೊಯ್ಸಳಪಂಪ ಪ್ರಶಸ್ತಿಅನುರಾಧಾ ಧಾರೇಶ್ವರಬಿ. ಆರ್. ಅಂಬೇಡ್ಕರ್ಪರಿಣಾಮಆದಿ ಶಂಕರಭಾರತದ ಇತಿಹಾಸಖ್ಯಾತ ಕರ್ನಾಟಕ ವೃತ್ತಕರಗಅರ್ಥಶಾಸ್ತ್ರರವಿಕೆಮಂಗಳ (ಗ್ರಹ)ತ್ರಿವೇಣಿಅಲಂಕಾರಕನ್ನಡ ಚಳುವಳಿಗಳುಗ್ರಹಪಂಜೆ ಮಂಗೇಶರಾಯ್ಧರ್ಮಸ್ಥಳಭಾರತದ ಸ್ವಾತಂತ್ರ್ಯ ಚಳುವಳಿಭಾರತದಲ್ಲಿ ಮೀಸಲಾತಿಎತ್ತಿನಹೊಳೆಯ ತಿರುವು ಯೋಜನೆಜವಾಹರ‌ಲಾಲ್ ನೆಹರುಮಡಿಕೇರಿಪಾರ್ವತಿಭಾರತದ ಪ್ರಧಾನ ಮಂತ್ರಿಭೋವಿಮೋಕ್ಷಗುಂಡಂ ವಿಶ್ವೇಶ್ವರಯ್ಯಭಾರತದ ಸರ್ವೋಚ್ಛ ನ್ಯಾಯಾಲಯಕನ್ನಡದಲ್ಲಿ ವಚನ ಸಾಹಿತ್ಯಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಮಜ್ಜಿಗೆಸುಧಾ ಮೂರ್ತಿಕನ್ನಡ ಅಕ್ಷರಮಾಲೆಕಾವ್ಯಮೀಮಾಂಸೆಭಾರತದ ಪ್ರಧಾನ ಮಂತ್ರಿಗಳ ಪಟ್ಟಿಭಾರತದ ಆರ್ಥಿಕ ವ್ಯವಸ್ಥೆಭಾರತೀಯ ಕಾವ್ಯ ಮೀಮಾಂಸೆಬಾಲಕಾರ್ಮಿಕಸರ್ವೆಪಲ್ಲಿ ರಾಧಾಕೃಷ್ಣನ್ಸಮಾಜಶಾಸ್ತ್ರಅಯೋಧ್ಯೆಬಸವೇಶ್ವರತುಂಗಭದ್ರ ನದಿಬಯಲಾಟರಾಷ್ಟ್ರಕವಿಹೊಯ್ಸಳ ವಿಷ್ಣುವರ್ಧನಶಬ್ದಮಣಿದರ್ಪಣದೆಹಲಿ ಸುಲ್ತಾನರುಸ್ಕೌಟ್ಸ್ ಮತ್ತು ಗೈಡ್ಸ್ಕೆ.ಎಲ್.ರಾಹುಲ್ಅಂಟುರವಿಚಂದ್ರನ್ಭತ್ತಚದುರಂಗ (ಆಟ)ಕರ್ಮಧಾರಯ ಸಮಾಸಮೈಸೂರು ಸಂಸ್ಥಾನನಗರೀಕರಣರಾಶಿಕನ್ನಡ ಗುಣಿತಾಕ್ಷರಗಳುಬೆಂಗಳೂರು ಗ್ರಾಮಾಂತರ ಜಿಲ್ಲೆವೇದಭಾರತದ ಸಂಸತ್ತುಅನುರಾಗ ಅರಳಿತು (ಚಲನಚಿತ್ರ)ವ್ಯಕ್ತಿತ್ವಪಟ್ಟದಕಲ್ಲುರಕ್ತದೊತ್ತಡವಿಜ್ಞಾನ🡆 More