ಟೆಲಿಮಿಟ್ರಿ

ಟೆಲಿಮೆಟ್ರಿ (ದೂರಮಾಪನೆ) ಎಂದರೆ ದೂರದ ಒಂದು ಭೌತಿಕ ಘಟನೆಯನ್ನು ತಿಳಿಯುವ ವ್ಯವಸ್ಥೆ ಹಾಗೂ ದೂರದಿಂದ ಅಳೆಯುವ ವ್ಯವಸ್ಥೆ.

ಇದು ಎಲೆಕ್ಟ್ರಾನಿಕ್ ಎಂಜಿನಿಯರಿಂಗಿನ ಒಂದು ವಿಭಾಗ.

ಟೆಲಿಮಿಟ್ರಿ
ಉಪ್ಪುನೀರಿನ ಮೊಸಳೆಯ ಬೆನ್ನಿನ ಮೇಲೆ ಅದರ ಚಲನವಲನ ತಿಳಿಯುವಂತೆ ಅಳವಡಿಸಲಾದ ಜಿ.ಪಿ.ಎಸ್.ಸಾಧನ

ಈ ಪದವು ಸಾಮಾನ್ಯವಾಗಿ ನಿಸ್ತಂತು ದತ್ತ ವರ್ಗಾವಣೆ ವ್ಯವಸ್ಥೆಗಳನ್ನು (ಉದಾ. ರೇಡಿಯೊ, ಶ್ರವಣಾತೀತ, ಅಥವಾ ಅವರಕ್ತ ವ್ಯವಸ್ಥೆಗಳನ್ನು ಬಳಸುವುದು) ಸೂಚಿಸುತ್ತದೆಯಾದರೂ, ಇದು ದೂರವಾಣಿ ಅಥವಾ ಕಂಪ್ಯೂಟರ್ ಜಾಲ, ದ್ಯುತಿ ಸಂಪರ್ಕಕೊಂಡಿ ಅಥವಾ ವಿದ್ಯುತ್ ತಂತಿ ವಾಹಕಗಳಂತಹ ಇತರ ತಂತಿಯುಳ್ಳ ಸಂವಹನಗಳಂತಹ ಇತರ ಮಾಧ್ಯಮಗಳ ಮೂಲಕ ವರ್ಗಾಯಿಸಲಾದ ದತ್ತವನ್ನು ಕೂಡ ಒಳಗೊಳ್ಳುತ್ತದೆ. ಅನೇಕ ಆಧುನಿಕ ದೂರಮಾಪನೆ ವ್ಯವಸ್ಥೆಗಳು ಜಿಎಸ್ಎಂ ಜಾಲಗಳ ಕಡಿಮೆ ವೆಚ್ಚ ಮತ್ತು ಸರ್ವವ್ಯಾಪಕತೆಯ ಅನುಕೂಲತೆಯನ್ನು ಬಳಸಿಕೊಳ್ಳುತ್ತವೆ; ಇವು ದೂರಮಾಪನೆ ದತ್ತವನ್ನು ಪಡೆಯಲು ಮತ್ತು ಪ್ರಸಾರಿಸಲು ಎಸ್ಎಂಎಸ್‍ನ್ನು ಬಳಸುತ್ತವೆ.

ಸಾಧಾರಣವಾಗಿ ಅತಿ ದೂರದಿಂದ ವಸ್ತುವಿನ ಪರಿಮಾಣ ಅಥವಾ ಗುಣಗಳನ್ನು ತಿಳಿಯುವುದು ಟೆಲಿಮೆಟ್ರಿಯ ಉದ್ದೇಶ. ಮೋಜಣಿದಾರರೂ, ಎಂಜಿನಿಯರುಗಳು ಇದನ್ನು ಬಳಸುತ್ತಾರೆ. ಒಂದು ಸ್ಥಳದಲ್ಲಿ ಭೌತಿಕ ಪರಿಮಾಣಗಳನ್ನು ಅಳೆಯುವುದು ಮತ್ತು ಈ ಮಾಹಿತಿಯನ್ನು ಅಪೇಕ್ಷಿತ ಜಾಗಕ್ಕೆ ಕಳುಹಿಸಿ ತಿಳಿಸುವುದು, ಇದನ್ನು ಟೆಲಿಮಿಟ್ರಿ ವ್ಯವಸ್ಥೆ ಒಳಗೊಂಡಿರುತ್ತದೆ.

ಚಾಲಕ ಸಹಿತ/ರಹಿತ ವಿಮಾನಗಳ ಪರೀಕ್ಷಾ ಹಾರಾಟದಲ್ಲಿ ಅವುಗಳ ದಕ್ಷತೆ ಮತ್ತು ಹವಾಬಲೂನುಗಳಿಂದ ಹವೆಗೆ ಸಂಬಂಧಿಸಿದ ಸುಸಂಗತ ಮಾಹಿತಿ ಪಡೆಯಲು 1930ರ ದಶಕದಲ್ಲಿ ಈ ತಂತ್ರವಿದ್ಯೆ ವಿಕಸಿಸಿತು.

ರೇಡಿಯೊ ದೂರಮಾಪನೆ

ರೇಡಿಯೊ ದೂರಮಾಪನೆ ಎಂದರೆ ದೂರದಲ್ಲಿರುವ ಮಾಪನೋಪಕರಣ ದಾಖಲಿಸಿದ ಅಥವಾ ಗ್ರಹಿಸಿದ ಮಾಹಿತಿಯನ್ನು ರೇಡಿಯೊ ತರಂಗಗಳ ಮುಖೇನ ಪಡೆದು ಮರು ದಾಖಲಿಸಿ ಸೂಚಿಸುವ ಅಥವಾ ಪ್ರದರ್ಶಿಸುವ ಪ್ರಕ್ರಿಯೆ (ರೇಡಿಯೊ ಟೆಲಿಮೆಟ್ರಿ).

ರೇಡಿಯೊ ದೂರಮಾಪನ ಪ್ರಕ್ರಿಯೆಯ ಹಂತಗಳು: 1. ಅಪೇಕ್ಷಿತ ಮಾಹಿತಿಯ ಗ್ರಹಿಕೆ; 2. ರೇಡಿಯೊ ತರಂಗಗಳ ಮುಖೇನ ರವಾನಿಸಬಹುದಾದ ಸಂಜ್ಞೆಯಾಗಿ ಮಾಹಿತಿಯ ಪರಿವರ್ತನೆ; 3. ಅಪೇಕ್ಷಿತ ಸ್ಥಳಕ್ಕೆ ಅದರ ರೇಡಿಯೊ ಪ್ರಸಾರ ಮತ್ತು 4. ಪ್ರಸಾರಿತ ಸಂಜ್ಞೆಗಳನ್ನು ಗ್ರಹಿಸಿ ಅಪೇಕ್ಷಿತ ರೂಪಕ್ಕೆ ಪರಿವರ್ತನೆ.

ಅಪೇಕ್ಷಿತ ಮಾಹಿತಿಯನ್ನು ದೋಷರಹಿತವಾಗಿ ಗ್ರಹಿಸುವ, ಗ್ರಹಿಸಿದ್ದುದನ್ನು ಪ್ರಸಾರಯೋಗ್ಯ ಸಂಜ್ಞೆಗಳಾಗಿ ಪರಿವರ್ತಿಸುವ ಹಾಗೂ ಬಿತ್ತರಿಸುವ ಉಪಕರಣದ ದಕ್ಷತೆ, ಸಂಜ್ಞೆಗಳನ್ನು ಗ್ರಹಿಸಿ ಅಪೇಕ್ಷಿತ ರೂಪಕ್ಕೆ ಪರಿವರ್ತಿಸುವ ಉಪಕರಣದ ದಕ್ಷತೆ ಮುಂತಾದವನ್ನು ಈ ತಂತ್ರದ ಯಶಸ್ಸು ಅವಲಂಬಿಸಿದೆ. ಕೆಲವು ಸನ್ನಿವೇಶಗಳಲ್ಲಿ ಪ್ರಸಾರೋಪಕರಣ ಸರಳವೂ ಹಗುರವೂ ಅಗ್ಗಬೆಲೆಯದೂ ಆಗಿರಬೇಕು (ಉದಾ: ವನ್ಯಜೀವಿ ಅಧ್ಯಯನ).

ಉಪಯೋಗಗಳು

ಇದು ಬಾಹ್ಯಾಕಾಶದಲ್ಲಿ ಬಳಕೆಯಾಗುತ್ತದೆ. ಮಾನವರಹಿತ ಉಪಗ್ರಹದಲ್ಲಿ ಉಷ್ಣತೆ, ಕಾಂತಕ್ಷೇತ್ರ, ವಿಕಿರಣದ ತೀಕ್ಷ್ಣತೆ ಮತ್ತು ಬದಲಾಗುತ್ತಿರುವ ಇತರ ಪರಿಮಾಣಗಳನ್ನು ಅಳೆಯಲು ಬಳಸಲಾಗುತ್ತದೆ. ಮಾನವ ಸಹಿತ ಉಪಗ್ರಹಗಳಲ್ಲಿ ಗಗನಯಾತ್ರಿಯ ನಾಡಿ ಮಿಡಿತ, ರಕ್ತದೊತ್ತಡ, ಉಸಿರಾಟದ ಗತಿಗಳನ್ನು ತಿಳಿಸುವ ಉಪಕರಣಗಳು ಈ ವ್ಯವಸ್ಥೆಯಲ್ಲಿರುತ್ತವೆ. ಪ್ರಯೋಗ ಶಾಲೆಯಲ್ಲಿ ನಡೆಸಲು ಸಾಧ್ಯವಾಗದ ಜೀವ ವಿಜ್ಞಾನದ ಮೂಲಭೂತ ಪ್ರಾಣಿಗಳ ನಿಸರ್ಗ ಜೀವನ ಸಂಶೋಧನೆ ಕಾರ್ಯದಲ್ಲಿ ಟೆಲಿಮಿಟ್ರಿ ನೆರವಾಗುತ್ತದೆ.

ಅಪೇಕ್ಷಿತ ಮಾಹಿತಿಯನ್ನು ನೇರವಾಗಿ ಗ್ರಹಿಸುವುದು ಕಷ್ಟ ಅಥವಾ ಅಸಾಧ್ಯ ಮತ್ತು ಅಪಾಯಕಾರಿಯಾದ ಸನ್ನಿವೇಶಗಳಲ್ಲಿ ಈ ತಂತ್ರದ ಬಳಕೆ ಇದೆ. ಎಂದೇ, ‘ದೂರಮಾಪನ’ದಲ್ಲಿ ‘ದೂರ’ ಮುಖ್ಯ ನಿರ್ಣಾಯಕವಲ್ಲ. ಉದಾಹರಣೆಗೆ, ವ್ಯೋಮನೌಕೆಯ ಅಥವಾ ಅದಕ್ಕೆ ಎದುರಾಗುವ ಭೌತಪರಿಸ್ಥಿತಿಗಳ, ಅಪಾಯಕಾರೀ ವಿಕಿರಣವುಳ್ಳ ಸ್ಥಳದಿಂದ, ವಾಯುಗೋಳದ ಹೊರಸ್ತರಗಳಿಂದ ಉಪಯುಕ್ತ ಮಾಹಿತಿ ಪಡೆಯುವುದು, ತಾಪ, ವಾಯುಸಾಂದ್ರತೆ, ವಿಕಿರಣ ಸಾಂದ್ರತೆ, ಸೂಕ್ಷ್ಮ ಉಲ್ಕಾಪಿಂಡಗಳ ತಾಡನೆಯ ಪ್ರಮಾಣ, ಕಂಪನಗಳ ಪ್ರಮಾಣ-ಇವೇ ಮೊದಲಾದ 30 ವಿಭಿನ್ನ ಚರಗಳ ಮಾಹಿತಿಯನ್ನು ಈ ತಂತ್ರಮುಖೇನ ಪಡೆಯಬಹುದು. ವನ್ಯಪ್ರಾಣಿಗಳ, ಪಕ್ಷಿಗಳ ಚಲನಪ್ರರೂಪ ದಾಖಲಿಸಲೂ ಈ ತಂತ್ರದ ಬಳಕೆ ಇದೆ.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

ಟೆಲಿಮಿಟ್ರಿ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಟೆಲಿಮಿಟ್ರಿ ರೇಡಿಯೊ ದೂರಮಾಪನೆಟೆಲಿಮಿಟ್ರಿ ಉಪಯೋಗಗಳುಟೆಲಿಮಿಟ್ರಿ ಉಲ್ಲೇಖಗಳುಟೆಲಿಮಿಟ್ರಿ ಬಾಹ್ಯ ಸಂಪರ್ಕಗಳುಟೆಲಿಮಿಟ್ರಿ

🔥 Trending searches on Wiki ಕನ್ನಡ:

ಬಿರಿಯಾನಿಭಾರತದಲ್ಲಿನ ಚುನಾವಣೆಗಳುರಾಸಾಯನಿಕ ಗೊಬ್ಬರಭಾರತದ ಸರ್ವೋಚ್ಛ ನ್ಯಾಯಾಲಯಲಕ್ಷ್ಮಿವಾಲ್ಮೀಕಿಕೆ. ಅಣ್ಣಾಮಲೈಹರಿಹರ (ಕವಿ)ಮಕರ ಸಂಕ್ರಾಂತಿಕರ್ನಾಟಕ ರತ್ನಹಲ್ಮಿಡಿ ಶಾಸನಜಿ.ಎಸ್. ಘುರ್ಯೆಜೋಡು ನುಡಿಗಟ್ಟುಕನ್ನಡ ಛಂದಸ್ಸುಸಂಧಿಎಲೆಕ್ಟ್ರಾನಿಕ್ ಮತದಾನಪಠ್ಯಪುಸ್ತಕಯು.ಆರ್.ಅನಂತಮೂರ್ತಿನಾಮಪದಹೊಯ್ಸಳ ವಿಷ್ಣುವರ್ಧನಗಣಗಲೆ ಹೂಕೃಷಿ ಉಪಕರಣಗಳುಮಲೆನಾಡುಜಾಗತಿಕ ತಾಪಮಾನ ಏರಿಕೆಭಗವದ್ಗೀತೆಕನ್ನಡ ಗುಣಿತಾಕ್ಷರಗಳುವೈದೇಹಿಸ್ಫಿಂಕ್ಸ್‌ (ಸಿಂಹನಾರಿ)ಅಲಂಕಾರಅಟಲ್ ಬಿಹಾರಿ ವಾಜಪೇಯಿಅಕ್ಷಾಂಶ ಮತ್ತು ರೇಖಾಂಶಗುರುರಾಜ ಕರಜಗಿಚಿತ್ರದುರ್ಗ ಕೋಟೆಮಂಕುತಿಮ್ಮನ ಕಗ್ಗಸಾರ್ವಜನಿಕ ಹಣಕಾಸುಹೃದಯಮಾನವನ ಚರ್ಮಕ್ರೀಡೆಗಳುಶಬ್ದಕೆಳದಿ ನಾಯಕರುಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಮುದ್ದಣದೇಶಗಳ ವಿಸ್ತೀರ್ಣ ಪಟ್ಟಿಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಕರ್ಣಬುಡಕಟ್ಟುಮಳೆಪಿ.ಲಂಕೇಶ್ಅನ್ವಿತಾ ಸಾಗರ್ (ನಟಿ)ಭಾರತೀಯ ಸಂಸ್ಕೃತಿಲಕ್ಷ್ಮಣನವಣೆರಾಮ್ ಮೋಹನ್ ರಾಯ್ಬಸವೇಶ್ವರಪಪ್ಪಾಯಿಯೋಗ1935ರ ಭಾರತ ಸರ್ಕಾರ ಕಾಯಿದೆರಾಜ್‌ಕುಮಾರ್ನೇಮಿಚಂದ್ರ (ಲೇಖಕಿ)ಸಿಹಿ ಕಹಿ ಚಂದ್ರುಗುರು (ಗ್ರಹ)ಭಾರತದಲ್ಲಿ ಪಂಚಾಯತ್ ರಾಜ್ರಾಧಿಕಾ ಕುಮಾರಸ್ವಾಮಿಸುಧಾ ಮೂರ್ತಿನರೇಂದ್ರ ಮೋದಿಮಲ್ಲಿಕಾರ್ಜುನ ಜ್ಯೋತಿರ್ಲಿಂಗನಾನು ಅವನಲ್ಲ... ಅವಳುನಿರುದ್ಯೋಗಪಂಪಆಲಿವ್ರೈತವಾರಿ ಪದ್ಧತಿಹೊಂಗೆ ಮರಟೆನಿಸ್ ಕೃಷ್ಣಗಾಂಜಾಗಿಡಭಾರತಈಸ್ಟ್‌ ಇಂಡಿಯ ಕಂಪನಿ🡆 More