ಚಕ್ಕೋತ: ಸಸ್ಯದ ಜಾತಿಗಳು, ಪೊಮೆಲೊ

ಇದು ದೇವನಹಳ್ಳಿಯ ಹೆಸರುವಾಸಿ ಹಣ್ಣು.

ದಕ್ಷಿಣ ಪೂರ್ವ ಏಷಿಯಾದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ದೊಡ್ದ ಹಣ್ಣುಗಳು ಬಾಚಣೆಗೆಯಂತಹ ದೊಡ್ದ ತೊಳೆಗಳನ್ನು ಒಳಗೊಂಡಿರುತ್ತದೆ. ಇದು ಒಗರು ಮತ್ತು ಸ್ವಲ್ಪ ಕಹಿಮಿಶ್ರಿತ ಹುಳಿಯ ರುಚಿ ಹೊಂದಿರುವುದರಿಂದ ಇದನ್ನು ಆಸ್ವಾದಿಸುವವರು ಕೆಲವರು ಮಾತ್ರ. ಆದುದರಿಂದ ಇದು ಪ್ರಪಂಚದಲ್ಲಿ ಜನಪ್ರಿಯ ಹಣ್ಣುಗಳ ಸಾಲಿಗೆ ಸೇರಿಲ್ಲ. ಈ ಹಣ್ಣಿನಲ್ಲಿ 'ಎ' 'ಬಿ' ಮತ್ತು 'ಸಿ' ಜೀವಸತ್ವಗಳು ಹೇರಳವಾಗಿವೆ.ಈ ಹಣ್ಣಿನ ಹೊರಸಿಪ್ಪೆ ತೆಗೆದು ತೊಳೆಗಳನ್ನು ಹಾಗೆಯೇ ಬಿಡಿಸಿ ತಿನ್ನುತ್ತಾರೆ.

ಚಕ್ಕೋತ: ಮಣ್ಣು ಮತ್ತು ಹವಾಗುಣ, ತಳಿಗಳು, ಬೀಜ ಮತ್ತು ಬಿತ್ತನೆ
ಚಕ್ಕೋತ

ಮಣ್ಣು ಮತ್ತು ಹವಾಗುಣ

ಇದಕ್ಕೆ ಇಂತಹುದೇ ಮಣ್ಣು[ಶಾಶ್ವತವಾಗಿ ಮಡಿದ ಕೊಂಡಿ] ಮತ್ತು ಹವಾಗುಣ ಬೇಕೆಂಬ ವಿಶಿಷ್ಟತೆ ಇಲ್ಲ. ಕಿತ್ತಳೆ[ಶಾಶ್ವತವಾಗಿ ಮಡಿದ ಕೊಂಡಿ]ಯನ್ನು ಬೆಳೆಯುವ ಎಲ್ಲಾ ಪ್ರದೇಶಗಳಲ್ಲಿ ಇದು ಬೆಳೆದೀತು. ಶುಷ್ಕ ಮತ್ತು ಹೆಚ್ಚು ಉಷ್ಣತೆಯ ವಾತಾವರಣವಿರುವ ಪ್ರದೇಶಗಳು ಇದಕ್ಕೆ ಬಹು ಸೂಕ್ತ. ಹೆಚ್ಚು ಮಳೆ ಬಂದರೂ ಅಡ್ದಿ ಇಲ್ಲ.

ತಳಿಗಳು

ಇದರಲ್ಲಿ ಪ್ರದೇಶದಿಂದ ಪ್ರದೇಶಗಳಿಗೆ ಅನುಗುಣವಾಗಿ ಅನೇಕ ವಿಧಗಳು ಕಂಡು ಬಂದರೂ ನಿಶ್ಚಿತ ಮತ್ತು ವರ್ಣಿಸಿದ ವಿಧಗಳು ಇಲ್ಲ.

ಬೀಜ ಮತ್ತು ಬಿತ್ತನೆ

ಇದು ನಿಂಬೆ ಜಾತಿಯಲ್ಲಿ ಕಂಡುಬರುವ ಏಕಭ್ರೂಣೀಯ ಸಸ್ಯ. ಇದನ್ನು ಜಟಿಕಟ್ಟಿ, ಜಾಂಬೂರಿ ಮುಂತಾದ ಆಧಾರಸಸಿಗಳ ಮೇಲೆ ಕಸಿಕಟ್ಟಿ ಕಸಿಗಿಡಗಳನ್ನು ಪಡೆದುಕೊಳ್ಳಲಾಗುತ್ತದೆ. ಕಿತ್ತಳೆಯಲ್ಲಿ ವಿವರಿಸಿದಂತೆ ಗುರಾಣಿಕಸಿ ವಿಧಾನವನ್ನು ಹೆಚ್ಚಾಗಿ ಬೆಳೆಸಲಾಗುತ್ತದೆ.ಇದನ್ನು ನಾಟಿ ಮಾಡುವ ಅಂತರ ಪ್ರದೇಶದಿಂದ ಪ್ರದೇಶಕ್ಕೆ ಬದಲಾದರು ಸಾಮಾನ್ಯವಾಗಿ ೫-೬ಮೀ. ಅಂತರದ ಸಾಲುಗಳಲ್ಲಿ ೫-೬ಮೀ.ಗೊಂದರಂತೆ ನಾಟಿ ಮಾಡಲಾಗುತ್ತದೆ.

ಕೊಯ್ಲು ಮತ್ತು ಇಳುವರಿ

ಇದು ದಕ್ಷಿಣ ಭಾರತದಲ್ಲಿ ನವೆಂಬರ್‍ನಲ್ಲಿ ಕೊಯ್ಲಿಗೆ ಬರುತ್ತದೆ. ಕಾಯಿಗಳು ಕೊಯ್ಲಿಗೆ ಬಂದಾಗ ಕಡುಹಸಿರಿನಿಂದ ತಿಳಿಹಸಿರು ಬಣ್ಣಕ್ಕೆ ತಿರುಗುತ್ತವೆ. ಚೆನ್ನಾಗಿ ಬೆಳೆದ ಪ್ರತಿಯೊಂದು ಸಸಿಯಿಂದ ಸುಮಾರು ೧೦೦-೨೦೦ ಹಣ್ಣುಗಳನ್ನು ಪಡೆಯಬಹುದು.

ಉಲ್ಲೇಖ

Tags:

ಚಕ್ಕೋತ ಮಣ್ಣು ಮತ್ತು ಹವಾಗುಣಚಕ್ಕೋತ ತಳಿಗಳುಚಕ್ಕೋತ ಬೀಜ ಮತ್ತು ಬಿತ್ತನೆಚಕ್ಕೋತ ಕೊಯ್ಲು ಮತ್ತು ಇಳುವರಿಚಕ್ಕೋತ ಉಲ್ಲೇಖಚಕ್ಕೋತ

🔥 Trending searches on Wiki ಕನ್ನಡ:

ಜೈ ಕರ್ನಾಟಕಬರವಣಿಗೆಜೈಮಿನಿ ಭಾರತದಲ್ಲಿ ನವರಸಗಳುಸಂಸದೀಯ ವ್ಯವಸ್ಥೆಭಾರತೀಯ ಸಂವಿಧಾನದ ತಿದ್ದುಪಡಿವಿಭಕ್ತಿ ಪ್ರತ್ಯಯಗಳುಆರ್ಚ್ ಲಿನಕ್ಸ್ಭಗವದ್ಗೀತೆಅರವತ್ತನಾಲ್ಕು ವಿದ್ಯೆಗಳುಕರ್ನಾಟಕದ ಆರ್ಥಿಕ ಪ್ರಗತಿಇಮ್ಮಡಿ ಬಿಜ್ಜಳಅನುಷ್ಕಾ ಶೆಟ್ಟಿಸರ್ ಐಸಾಕ್ ನ್ಯೂಟನ್ಕರ್ನಾಟಕ ಪೊಲೀಸ್ಭಾರತದ ಚುನಾವಣಾ ಆಯೋಗಕ್ಯಾನ್ಸರ್ಪ್ಲಾಸಿ ಕದನನಾ. ಡಿಸೋಜಜಾನ್ ನೇಪಿಯರ್ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಪ್ರಜಾಪ್ರಭುತ್ವದ ಲಕ್ಷಣಗಳುಇತಿಹಾಸಡಿ. ದೇವರಾಜ ಅರಸ್ಕರ್ನಾಟಕದ ಏಕೀಕರಣಆದೇಶ ಸಂಧಿಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಬೇವುಛತ್ರಪತಿ ಶಿವಾಜಿಶಂಕರ್ ನಾಗ್ದಕ್ಷಿಣ ಭಾರತದ ನದಿಗಳುವ್ಯಕ್ತಿತ್ವ ವಿಕಸನಬ್ರಾಹ್ಮಣಮಯೂರ (ಚಲನಚಿತ್ರ)ರಾಷ್ಟ್ರಕೂಟಸವದತ್ತಿಸ್ತನ್ಯಪಾನಕನ್ನಡ ಛಂದಸ್ಸುಸಜ್ಜೆಬಂಡಾಯ ಸಾಹಿತ್ಯಓಂ ನಮಃ ಶಿವಾಯಚಾರ್ಮಾಡಿ ಘಾಟಿಕಾವೇರಿ ನದಿಬ್ಯಾಂಕ್ಭಾರತೀಯ ಶಾಸ್ತ್ರೀಯ ನೃತ್ಯಲೋಕಸಭೆಚಪಾತಿಜವಾಹರ‌ಲಾಲ್ ನೆಹರುಪೊನ್ನ೧೯೭೧ರ ಭಾರತ-ಪಾಕಿಸ್ತಾನ ಯುದ್ಧರೋಗಭಾರತದ ರಾಷ್ಟ್ರೀಯ ಚಿಹ್ನೆವರ್ಣಾಶ್ರಮ ಪದ್ಧತಿನಾಯಕತ್ವನಯನ ಸೂಡಬೊನೊಭಾರತದ ರಾಷ್ಟ್ರಪತಿಗಳ ಪಟ್ಟಿವಾಲಿಬಾಲ್ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆವಿರಾಮ ಚಿಹ್ನೆಎರಡನೇ ಮಹಾಯುದ್ಧಉಪ್ಪಿನ ಸತ್ಯಾಗ್ರಹಶ್ರೀ ರಾಮಾಯಣ ದರ್ಶನಂಉಡುಪಿ ಜಿಲ್ಲೆಮುಹಮ್ಮದ್ಅಭಿಮನ್ಯುಧೀರೂಭಾಯಿ ಅಂಬಾನಿಬುಟ್ಟಿಯೇಸು ಕ್ರಿಸ್ತಆ ನಲುಗುರು (ಚಲನಚಿತ್ರ)ಅಲಂಕಾರಕನ್ನಡ ರಾಜ್ಯೋತ್ಸವಭಾರತೀಯ ಸಂಸ್ಕೃತಿನೆಹರು ವರದಿಸ್ತ್ರೀಚಂದ್ರಶೇಖರ ಕಂಬಾರ🡆 More