ಗುಳುಮಾವು

Large-Flowered Bay Tree
ಗುಳುಮಾವು
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
Angiosperms
(ಶ್ರೇಣಿಯಿಲ್ಲದ್ದು):
Magnoliids
ಗಣ:
Laurales
ಕುಟುಂಬ:
Lauraceae
ಕುಲ:
Persea
ಪ್ರಜಾತಿ:
P. macrantha
Binomial name
Persea macrantha
(Nees) Kosterm.

ಗುಳುಮಾವು ಲಾರೇಸೀ ಕುಟುಂಬಕ್ಕೆ ಸೇರಿದ ಒಂದು ನಿತ್ಯಹರಿದ್ವರ್ಣದ ಮರ. ಮ್ಯಾಕಿಲಸ್ ಮ್ಯಾಕ್ರಾಂತ ಅಥವಾ ಪರ್ಸಿಯ ಮ್ಯಾಕ್ರಾಂತ ಇದರ ಶಾಸ್ತ್ರೀಯ ಹೆಸರು. ಚಿಟ್ಟುತಂಡ್ರಿ ಮರ ಇದರ ಪರ್ಯಾಯನಾಮ.

ಹರಡುವಿಕೆ

ಬಿಹಾರ ರಾಜ್ಯದ ಹಲವಾರು ಪ್ರದೇಶಗಳಲ್ಲೂ ಕರ್ನಾಟಕಉತ್ತರ ಕನ್ನಡ,ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳ ನಿತ್ಯಹರಿದ್ವರ್ಣದ ಕಾಡುಗಳಲ್ಲೂ ಇದು ಸ್ವಾಭಾವಿಕವಾಗಿ ಬೆಳೆಯುತ್ತದೆ.

ಲಕ್ಷಣಗಳು

ಇದು ಸುಮಾರು ೨೭ ಮೀ ಎತ್ತರಕ್ಕೆ ಬೆಳೆಯುವ ದೊಡ್ಡ ಗಾತ್ರದ ಮರ. ಮುಖ್ಯ ಕಾಂಡ ಕವಲೊಡೆಯದೆ ನೇರವಾಗಿ ಸುಮಾರು ೭.೫ ಮೀ ಉದ್ದಕ್ಕೂ ೩ ಮೀ ದಪ್ಪಕ್ಕೂ ಬೆಳೆಯುತ್ತದೆ. ತೊಗಟೆ ತಿಳಿ ಕಂದುಬಣ್ಣದ್ದು. ಬಲು ಒರಟಾಗಿದೆ, ಎಲೆಗಳು ಉದ್ದುದ್ದವಾಗಿ ಭಲ್ಲೆಯಾಕಾರದಲ್ಲಿದೆ. ಹೂಗಳು ಹಳದಿ ಬಣ್ಣದವು; ಪ್ಯಾನಿಕಲ್ ಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ.

ಉಪಯೋಗಗಳು

ಗುಳುಮಾವಿನ ಚೌಬೀನೆ ಸಾಧಾರಣ ದೃಢತೆಯುಳ್ಳದ್ದೂ ಹಗುರವಾದದ್ದೂ ಆಗಿದೆ. ಹೊಳಪಿನಿಂದ ಕೂಡಿ ನುಣುಪಾಗಿರುವುದಲ್ಲದೆ ಸಮರಚನಾ ವಿನ್ಯಾಸವನ್ನು ಪ್ರದರ್ಶಿಸುತ್ತದೆ. ಹೊಸದಾಗಿ ಕಡಿದಾಗ ಕಿತ್ತಳೆಮಿಶ್ರಿತ ಕಂದುಬಣ್ಣದ್ದಾದ ಇದು ಕಾಲಕ್ರಮೇಣ ಕೆಂಪುಮಿಶ್ರಿತ ಕಂದು ಬಣ್ಣಕ್ಕೆ ತಿರುಗುತ್ತದೆ. ಸೀಳದೆ, ಬಿರುಕು ಬಿಡದೆ ಒಣಗುತ್ತದೆ ಮತ್ತು ಬಹು ಕಾಲ ಬಾಳಿಕೆ ಬರುತ್ತದೆ. ಈ ಕಾರಣಗಳಿಂದಾಗಿ ಚೌಬೀನೆಯನ್ನು ಹಲವಾರು ಕಾರ್ಯಗಳಿಗೆ ಬಳಸುತ್ತಾರೆ. ಟೀ ಪೆಟ್ಟಿಗೆ, ಮನೆಕಟ್ಟಲು ಬಳಸುವ ಹಲಗೆ, ಬೆಂಚು ಇತ್ಯಾದಿ ಪೀಠೋಪಕರಣಗಳು, ಚಾವಣಿ ಹಲಗೆ, ಸ್ಲೇಟು ಚೌಕಟ್ಟು ಮುಂತಾದವುಗಳ ತಯಾರಿಕೆಯಲ್ಲಿ ಉಪಯುಕ್ತವೆನಿಸಿದೆ. ದೋಣಿ ಮಾಡಲೂ ಬಳಸುವುದಿದೆ.

ಔಷಧೀಯ ಗುಣಗಳು

ಗುಳುಮಾವಿನ ತೊಗಟೆಯನ್ನು ಅಸ್ತಮಾ, ಸಂಧಿವಾತ ರೋಗಗಳಿಗೆ ಔಷದಿಯನ್ನಾಗಿ ಉಪಯೋಗಿಸುತ್ತಾರೆ. ಎಲೆಗಳನ್ನು ವ್ರಣಗಳಿಗೆ ಹಚ್ಚಲು ಬಳಸುತ್ತಾರೆ.

ಗುಳುಮಾವು 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಗುಳುಮಾವು ಹರಡುವಿಕೆಗುಳುಮಾವು ಲಕ್ಷಣಗಳುಗುಳುಮಾವು ಉಪಯೋಗಗಳುಗುಳುಮಾವು ಔಷಧೀಯ ಗುಣಗಳುಗುಳುಮಾವು

🔥 Trending searches on Wiki ಕನ್ನಡ:

ದೇಶಗಳ ವಿಸ್ತೀರ್ಣ ಪಟ್ಟಿಗುಡಿಸಲು ಕೈಗಾರಿಕೆಗಳುರುಮಾಲುರಾಮನಗರಲೋಪಸಂಧಿತೀ. ನಂ. ಶ್ರೀಕಂಠಯ್ಯರೌಲತ್ ಕಾಯ್ದೆಸರಸ್ವತಿಮೈಸೂರು ಸಂಸ್ಥಾನಭಾರತದ ಸ್ವಾತಂತ್ರ್ಯ ಚಳುವಳಿಪಿತ್ತಕೋಶಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಆಶಿಶ್ ನೆಹ್ರಾಕನ್ನಡ ಗುಣಿತಾಕ್ಷರಗಳುಸಂಯುಕ್ತ ರಾಷ್ಟ್ರ ಸಂಸ್ಥೆರಾಜಾ ರವಿ ವರ್ಮಚರ್ಚ್ವಿಶ್ವೇಶ್ವರ ಜ್ಯೋತಿರ್ಲಿಂಗಪ್ಯಾರಾಸಿಟಮಾಲ್ಸಂಭೋಗತೆಂಗಿನಕಾಯಿ ಮರವಿಜಯಪುರಸೂರ್ಯ (ದೇವ)ದಾವಣಗೆರೆರಾಮ್ ಮೋಹನ್ ರಾಯ್ಮೈಸೂರು ಅರಮನೆಕೆ. ಅಣ್ಣಾಮಲೈಧರ್ಮಸ್ಥಳಪೊನ್ನಿಯನ್ ಸೆಲ್ವನ್ಮಾರಾಟ ಪ್ರಕ್ರಿಯೆಭಾವಗೀತೆಶಿವಪ್ಪ ನಾಯಕಲಿಂಗಾಯತ ಪಂಚಮಸಾಲಿಶ್ರೀ ಕೃಷ್ಣ ಪಾರಿಜಾತಗರ್ಭಕಂಠದ ಕ್ಯಾನ್ಸರ್‌ಪ್ರಜಾಪ್ರಭುತ್ವದ ಲಕ್ಷಣಗಳುಭಗವದ್ಗೀತೆಆಯುಷ್ಮಾನ್ ಭಾರತ್ ಯೋಜನೆಭಗತ್ ಸಿಂಗ್ಸಂಚಿ ಹೊನ್ನಮ್ಮಸಾವಯವ ಬೇಸಾಯಗುರು (ಗ್ರಹ)ಶಂಕರ್ ನಾಗ್ವಿಜಯಪುರ ಜಿಲ್ಲೆಯ ತಾಲೂಕುಗಳುಶಾಮನೂರು ಶಿವಶಂಕರಪ್ಪಹೊಯ್ಸಳ ವಿಷ್ಣುವರ್ಧನಶಿರ್ಡಿ ಸಾಯಿ ಬಾಬಾವಚನ ಸಾಹಿತ್ಯಹೆಣ್ಣು ಬ್ರೂಣ ಹತ್ಯೆಆದಿವಾಸಿಗಳುಯಲಹಂಕಕ್ರೀಡೆಗಳುಪಂಚ ವಾರ್ಷಿಕ ಯೋಜನೆಗಳುಪಂಪ ಪ್ರಶಸ್ತಿಗಾಳಿಪಟ (ಚಲನಚಿತ್ರ)ಸಂವಹನವೃತ್ತಪತ್ರಿಕೆನವಣೆಕೃಷ್ಣರಾಜಸಾಗರಸಮಾಜ ಸೇವೆನಗರೀಕರಣಬಿರಿಯಾನಿಕೆ. ಎಸ್. ನಿಸಾರ್ ಅಹಮದ್ವಚನಕಾರರ ಅಂಕಿತ ನಾಮಗಳುವಾಲ್ಮೀಕಿರಾಷ್ಟ್ರೀಯ ಉತ್ಪನ್ನಕಾವ್ಯಮೀಮಾಂಸೆಭೋವಿಮಹಾತ್ಮ ಗಾಂಧಿಬಾಗಲಕೋಟೆಕೇದರನಾಥ ದೇವಾಲಯಚಿತ್ರದುರ್ಗಮಾನವನ ವಿಕಾಸಗಂಗ (ರಾಜಮನೆತನ)🡆 More