ಕರ್ನಾಟಕ ಅಂತರ್ಜಲ ಪ್ರಾಧಿಕಾರ

ನಗರಗಳಲ್ಲಿ ವಿಶೇಷವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ಹತ್ತು ಜಿಲ್ಲೆಗಳ 35 ತಾಲ್ಲೂಕುಗಳಲ್ಲಿ ಅಂತರ್ಜಲದ ಮೀರೆಳೆತದಿಂದಾಗಿ ಉದ್ಭವಿಸಿದ ಸಮಸ್ಯೆಯನ್ನು ಪರಿಗಣಿಸಿದ ಕರ್ನಾಟಕ ಸರ್ಕಾರ 2011ರಲ್ಲೇ ಕರ್ನಾಟಕ ಅಂತರ್ಜಲ ಕಾಯ್ದೆ ( ನಿಯಂತ್ರಣ ಹಾಗೂ ನಿರ್ವಹಣೆ) ಕಾಯ್ದೆಗೆ ಒಪ್ಪಿಗೆ ನೀಡಿ, ಇದರ ಭಾಗವಾಗಿ 2012ರಲ್ಲಿ ಕರ್ನಾಟಕ ಅಂತರ್ಜಲ ಪ್ರಾಧಿಕಾರ ರಚಿಸಿತು.


ಕರ್ನಾಟಕ ಅಂತರ್ಜಲ ಪ್ರಾಧಿಕಾರ ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಈ ಕಾಯ್ದೆಯನ್ವಯ ಸದ್ಯ ಬೆಂಗಳೂರು ನಗರದ ಎಲ್ಲ ಕೊಳವೆ ಬಾವಿಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಹಾಗೆಯೇ ಹೊಸತಾಗಿ ಕೊಳವೆ ಬಾವಿಗಳನ್ನು ತೆಗೆಯಲು ಸರ್ಕಾರದ ಅನುಮತಿ ಪಡೆಯಬೇಕು.

ಬೆಂಗಳೂರು ನಗರದ ವಾರ್ಷಿಕ ಮಳೆ ಪ್ರಮಾಣ ಸುಮಾರು 900 ಮಿ.ಮೀ.ಗಳಷ್ಟು. ಬಿದ್ದ ಮಳೆ ನೆಲದಾಳದಲ್ಲಿ ಜಿನುಗಲು ಟಾರ್ ರಸ್ತೆಗಳು ತಡೆಯೊಡ್ಡುತ್ತವೆ. ಅಲ್ಲದೆ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಹಾಗೂ ಜಲಮಂಡಳಿಗೆ ಸೇರಿದ ಸುಮಾರು ಮೂರು ಲಕ್ಷಕ್ಕೂ ಅಧಿಕ ಕೊಳವೆ ಬಾವಿಗಳು ಬೆಂಗಳೂರು ನಗರದಲ್ಲಿವೆ. ಸರ್ಕಾರದ ನಿಯಮವನ್ನು ಮೀರಿ ನೋಂದಣಿ ಮಾಡಿಕೊಳ್ಳದೆ ಕೊಳವೆ ಬಾವಿಗಳನ್ನು ತೋಡಿದರೆ ಗರಿಷ್ಠ ರೂ. 10,000 ದವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ.


ನಗರದಲ್ಲಿ ನೀರಿನ ಲಭ್ಯತೆ

ಜಲಭೂವಿಜ್ಞಾನಿಗಳ ಅಧ್ಯಯನದ ಪ್ರಕಾರ ಬೆಂಗಳೂರಿನಲ್ಲಿ ವಾರ್ಷಿಕ 66,400 ಹೆಕ್ಟೇರು ಮೀಟರು ಮಳೆ ಬೀಳುತ್ತದೆ. ಈ ಪೈಕಿ 17,040 ಹೆಕ್ಟೇರು ಮೀಟರು ಓಡು ನೀರಾಗಿ ಹರಿದುಹೋಗುತ್ತದೆ. ಭೂಮಿಯೊಳಗೆ ಜಿನುಗಿ ಅಂತರ್ಜಲ ಮರುಪೂರಣೆಯಾಗುವ ನೀರಿನ ಪ್ರಮಾಣ 3,290 ಹೆಕ್ಟೇರು ಮೀಟರ್. ಸುಮಾರು ಶೇ. 71.14 ಭಾಗದ ಮಳೆ ನೀರು ಬಾಷ್ಪವಾಗಿ ಹೋಗುತ್ತದೆ. ಇನ್ನು ಕಾವೇರಿ ನದಿಯ ನೀರನ್ನೇ ಪ್ರಮುಖವಾಗಿ ಬಳಸುತ್ತಿರುವ ಬೆಂಗಳೂರಿಗೆ ಲಭ್ಯವಾಗುತ್ತಿರುವ ನೀರಿನ ಪ್ರಮಾಣ 24,923 ಹೆಕ್ಟೇರು ಮೀಟರ್. ಆದರೆ ವಾರ್ಷಿಕ ಬೇಡಿಕೆ ಇರುವುದು 48,600 ಹೆಕ್ಟೇರ್ ಮೀಟರ್. ಸದ್ಯದಲ್ಲಿ 3.12 ಲಕ್ಷ ಕೊಳವೆ ಬಾವಿಗಳು ಬೆಂಗಳೂರಿನಲ್ಲಿ ಕಾರ್ಯನಿರತವಾಗಿವೆ. ಇವುಗಳಿಂದ ಎತ್ತುತ್ತಿರುವ ನೀರಿನ ಪ್ರಮಾಣ ವಾರ್ಷಿಕ 12,451 ಹೆಕ್ಟೇರು ಮೀಟರ್ ಅಂದರೆ ಮರುಪೂರಣೆಗಿಂತ ನೀರಿನ ಎಳೆತವೇ ಶೇ. 378 ಭಾಗ. ಬೆಂಗಳೂರಿಗೆ ಕೊರತೆ ಇರುವ ನೀರಿನ ಪ್ರಮಾಣ 11,226 ಹೆಕ್ಟೇರು ಮೀಟರು. ಚರಂಡಿಯಲ್ಲಿ ಹರಿದುಹೋಗುವ ನೀರಿನ ಪ್ರಮಾಣ 17,040 ಹೆಕ್ಟೇರು ಮೀಟರು. ಈ ಬಾಬತ್ತಿನ ನೀರನ್ನು ಸಂರಕ್ಷಿಸಲು ಅವಕಾಶವಿದೆ. ಅಲ್ಲದೆ ಕೊಳಚೆ ನೀರಾಗಿ ಹರಿದುಹೋಗುತ್ತಿರುವ 26,300 ಹೆಕ್ಟೇರು ಮೀಟರು (ವಾರ್ಷಿಕ_ ನೀರನ್ನು ಮೂರನೇ ಹಂತದಲ್ಲಿ ಶೇ. 70 ಭಾಗವನ್ನು ಸಂಸ್ಕರಿಸಿದರೂ ಪೂರೈಕೆ ಮತ್ತು ಬೇಡಿಕೆಯ ನಡುವಿನ ಅಂತರವನ್ನು ಗಣನೀಯವಾಗಿ ಕಡಿಮೆ ಮಾಡಬಹುದು.

ಉಲ್ಲೇಖ

  • Journal of The Geological Society of India, Vol. 81, No.5, May, 2013

Tags:

ಬೆಂಗಳೂರು

🔥 Trending searches on Wiki ಕನ್ನಡ:

ಋಗ್ವೇದಅರ್ಜುನಓಂ ನಮಃ ಶಿವಾಯವಿಮರ್ಶೆಕೈಗಾರಿಕೆಗಳುಕನ್ನಡ ವ್ಯಾಕರಣಕ್ರೀಡೆಗಳುಶಂಕರದೇವಭಾರತದಲ್ಲಿ ಕೃಷಿಭಾರತದಲ್ಲಿ ಮೀಸಲಾತಿವಿತ್ತೀಯ ನೀತಿಕನ್ನಡ ಗುಣಿತಾಕ್ಷರಗಳುಅಂಬರೀಶ್ಭಾರತದಲ್ಲಿ ಪಂಚಾಯತ್ ರಾಜ್ಕಲಾವಿದಕಾನೂನುಕರ್ನಾಟಕನಯಾಗರ ಜಲಪಾತಬಡತನಯೋಗ ಮತ್ತು ಅಧ್ಯಾತ್ಮಭಾರತದ ಸಂಯುಕ್ತ ಪದ್ಧತಿತಲಕಾಡುಕನ್ನಡ ಕಾಗುಣಿತವಿಭಕ್ತಿ ಪ್ರತ್ಯಯಗಳುವಿಕ್ರಮ ಶಕೆಭಾರತದ ಪ್ರಧಾನ ಮಂತ್ರಿಗಳ ಪಟ್ಟಿಯೇಸು ಕ್ರಿಸ್ತಮೌರ್ಯ ಸಾಮ್ರಾಜ್ಯಸರ್ ಐಸಾಕ್ ನ್ಯೂಟನ್ಪೃಥ್ವಿರಾಜ್ ಚೌಹಾಣ್ಕನ್ನಡಕರ್ನಾಟಕ ಐತಿಹಾಸಿಕ ಸ್ಥಳಗಳುಕನ್ನಡ ಕಾವ್ಯಹದ್ದುದಿಯಾ (ಚಲನಚಿತ್ರ)ಚಿಪ್ಕೊ ಚಳುವಳಿರತನ್ ನಾವಲ್ ಟಾಟಾಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಮೂಢನಂಬಿಕೆಗಳುಕ್ರಿಕೆಟ್‌ ಪರಿಭಾಷೆಶಿಶುನಾಳ ಶರೀಫರುಷೇರು ಮಾರುಕಟ್ಟೆಮಲೆನಾಡುದಿಕ್ಕುಕನ್ನಡ ಪತ್ರಿಕೆಗಳುಆರ್ಥಿಕ ಬೆಳೆವಣಿಗೆವಾಲಿಬಾಲ್ಬೆಳಗಾವಿಮೈಸೂರುಪ್ಯಾರಾಸಿಟಮಾಲ್ಸಿಂಧನೂರುರಾಮಾಚಾರಿ (ಕನ್ನಡ ಧಾರಾವಾಹಿ)ಸಂಗೊಳ್ಳಿ ರಾಯಣ್ಣಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಕನ್ನಡದಲ್ಲಿ ವಚನ ಸಾಹಿತ್ಯಒಡಲಾಳವಾದಿರಾಜರುಮೂಲವ್ಯಾಧಿಟೈಗರ್ ಪ್ರಭಾಕರ್ಹಣಕಾಸುಕಪ್ಪು ಇಲಿಜೈ ಕರ್ನಾಟಕಕನ್ನಡ ಸಾಹಿತ್ಯ ಸಮ್ಮೇಳನಆಗಮ ಸಂಧಿಪತ್ರಕೇಶಿರಾಜಕ್ರಿಕೆಟ್ರಸ(ಕಾವ್ಯಮೀಮಾಂಸೆ)ಹೂವುಮಾನವ ಹಕ್ಕುಗಳುಪಾಂಡವರುಸಕಲೇಶಪುರಜಾತ್ಯತೀತತೆಸಲಗ (ಚಲನಚಿತ್ರ)ಮಲೈ ಮಹದೇಶ್ವರ ಬೆಟ್ಟಗದ್ದಕಟ್ಟುಋತು🡆 More