ಉಸ್ತಾದ್ ಫಯಾಜ್ ಖಾನ್

'ಉಸ್ತಾದ್ ಫಯಾಜ್ ಖಾನ್' ರದು ಬಹುಮುಖ ಪ್ರತಿಭೆ.

೩ ದಶಕಗಳ ಕಾಲ ಸಾರಂಗಿ-ಹಾಡುಗಾರಿಕೆ, ತಬಲಾವಾದನಗಳಿಂದ ಜನಾನುರಾಗಿಯಾಗಿದ್ದಾರೆ. ಕುಂದಗೋಳ, ಹುಬ್ಬಳ್ಳಿ, ಸವಾಯ್ ಗಂಧರ್ವರ ಸಂಗೀತೋತ್ಸವ, ಚೈನ, ಮಲೇಶಿಯಾ, ದುಬೈ, ಜರ್ಮನಿ, ಕೆನಡಗಳಲ್ಲಿನ ವೇದಿಕೆಗಳಲ್ಲಿ 'ಸಾರಂಗಿ ನುಡಿಸಿ, ಹಾಡಿ. ಸಂಗೀತಾಭಿಮಾನಿಗಳನ್ನು ರಂಜಿಸಿದ್ದಾರೆ.

ಸಂಗೀತಯಾನದ ಆರಂಭ

ಸಂಗೀತಗಾರರ ವಂಶದಲ್ಲಿ ಬೆಳೆದುಬಂದ 'ಫಯಾಜ್', ಅಜ್ಜ, ಮೈಸೂರು ಆಸ್ಥಾನದಲ್ಲಿ ವಿದ್ವಾನ್, ತಂದೆ ಧಾರವಾಡಆಕಾಶವಾಣಿಯಲ್ಲಿ ಕಲಾವಿದ, ಕಛೇರಿಗಳನ್ನು ಕೊಡುವುದಲ್ಲದೆ ಮನೆಯಲ್ಲೂ ಸಂಗೀತ ಪಾಠ ಹೇಳಿಕೊಡುತ್ತಿದ್ದರು. ಫಯಾಜ್, ಮನೆಯಲ್ಲಿದ್ದ ಹಲವಾರು ವಾದ್ಯಗಳನ್ನು ನುಡಿಸಲು ಕಲಿತರು. ತಂದೆಯವರ ಜೊತೆ ಸಾರಂಗಿ ನುಡಿಸಲು ಹೋಗುತ್ತಿದ್ದರೂ ಅವರಿಗೆ ಪ್ರೀತಿಯಾದ ವಾದ್ಯವೆಂದರೆ ತಬಲಾ. ಗುರುಮುಖೇನ ೧೨ ನೆಯ ವರ್ಷದಲ್ಲಿ ಕಲಿಕೆ ಆರಂಭವಾಯಿತು. ಪಂ.ಬಸವರಾಜ ಬೆಂಡಿಗೇರಿ ಶಿಷ್ಯರಾದರು. ಮಕ್ಕಳಿಗೆ ಸಂಗೀತದ ಶಿಕ್ಷಣ ಕೊಡಲು ಇಷ್ಟಪಡುತ್ತಿರಲಿಲ್ಲ. ೧೯೮೯-೯೦ ರಾಷ್ಟ್ರಮಟ್ಟದ ಆಕಾಶವಾಣಿ ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನ ಗಳಿಸಿದರು. ತಂದೆ ಗತಿಸಿ ೪ ವರ್ಷಗಳೇ ಆಗಿದ್ದವು.

ಮುಂಬಯಿನಲ್ಲಿ

ಪದ್ಮಭೂಷಣ ಪಂ.'ರಾಮ್ ನಾರಾಯಣ್ ಜಿ'ಯವರ ಬಳಿ ಗುರುಕುಲ ಪದ್ಧತಿಯಲ್ಲಿ ೬ ವರ್ಷಗಳ ಕಾಲ ಸಾರಂಗಿವಾದ್ಯವನ್ನು ಅಭ್ಯಾಸಮಾಡಿದರು. ಪಾಟಿಯಾಲ ಘರಾನದ 'ಉಸ್ತಾದ್ ಅಲ್ತಾಫ್ ಹುಸೆನ್ ಖಾನ್ ಸಾಹೇಬ'ರಿಂದ ಸಂಗೀತ ಕಲಿತರು. ಗುರುಸೇವೆ ಸಂಗೀತ ಕಲಿಕೆಗಳ ಮಧ್ಯದಲ್ಲಿ, ಮುಂಬಯಿಯ 'ಸಮುದ್ರದಂಡೆ' 'ಪುಟ್ಪಾತ್' ಗಳಲ್ಲಿ ಮಲಗಿ ಹೇಗೋ ಒಂದು ವರ್ಷ ಕಳೆದರು.

ಹಿರಿಯ ಗಾಯಕರ ಬಳಿ ಕಲಿಕೆ

'ಓಂಕಾರ್ ನಾಥ್ ಠಾಕೂರ್', 'ಬಡೆ ಗುಲಾಂ ಆಲಿಖಾನ್ ಸಾಹೇಬ್', 'ಅಮೀರ್ ಖಾನ್ ಸಾಹೆಬ್', 'ಕುಮಾರ ಗಂಧರ್ವ'ರ ಬಳಿಸಂಗೀತ ಪಾಠಕಲಿತರು. ತಬಲಾವಾದಕ 'ಪಂ ಸುರೇಶ್ ವಾರ್ ಕರ್',ರ ಗೋರೆಗಾವ್ ನಲ್ಲಿದ್ದ ಹೋಟೆಲ್ ನ 'ದತ್ತಾತ್ರೇಯ ಲಾಡ್ಜ್' ನಲ್ಲಿ 'ಕೌಸರ್ ಖಾನ್', 'ಕಿಶನ್ ಮಾಲಾ' ಎಂಬ ಕಲಾವಿದರ ಜೊತೆ ಒಂದು ಸಾವಿರ ರೂಪಾಯಿ ಕೊಟ್ಟು ವಸತಿಯ ಏರ್ಪಾಡುಮಾಡಿಕೊಂಡರು. 'ವಿಜಯ್ ಘಾಟೆ' ಎಂಬ ನವ ಕಲಾವಿದನಿಗೆ ವಾರಕ್ಕೆ ೨-೩ ದಿನ ಸಂಗೀತ ಪಾಠ ಮಾಡಿ 'ಮೆಹರ್ಬ ಜಾನ್' ಮಾಡಿ ಜೀವನೋಪಾಯ ಕಂಡುಕೊಂಡರು. ೧೯೯೦ ಬಹಳ ಕಷ್ಟದ ವರ್ಷವಾಗಿತ್ತು. 'ರೂಪಕ್ ಕುಲಕರ್ಣಿ'ಯವರು ಮುಂಬಯಿ ಆಕಾಶವಾಣಿಯಲ್ಲಿ ತಿಂಗಳಿಗೆ ೧೦ ದಿನ 'ಸ್ಟಾಫ್ ಆರ್ಟಿಸ್ಟ್' ಆಗಿ 'ಕಾಂಟ್ರಾಕ್ಟ್' ಕೊಡಿಸಿದರು. ರಾತ್ರಿ ಗುರುಗಳ ಮನೆಗೆ ಹೋಗಿ ಸಾರಂಗಿ ಕಲಿಯಬೇಕಿತ್ತು. ಡಿಸೆಂಬರ್ ೬ ೧೯೯೨ 'ಬಾಬ್ರಿ ಮಸೀದಿ ಪ್ರಕರಣ'ದಿಂದ ಮುಂಬಯಿ ಜೀವನ ಸ್ಥಬ್ಧವಾಗಿತ್ತು. ದಾದರ್ ನಲ್ಲಿ 'ಉಸ್ತಾದ್ ಬಾಲೇಖಾನ್' ತಂದೆ,ಸಂಗೀತ ಪಾಠಶಾಲೆಯಲ್ಲಿ ಕಲಿಸುತ್ತಿದ್ದರು. ರಾತ್ರಿ ಗೋರೆಗಾಂ ನ 'ರಾಧಾಮಾಯಿ ಚಾಳ್' ಗೆ ಬರುತ್ತಿದ್ದರು. 'ಸುರೇಶ್ ತಳವಾಳ್ಕರ್' ಆಸಮಯದಲ್ಲಿ ೧೫ ದಿನ ೩ ಜನರನ್ನು ತಮ್ಮ ಕೋಣೆಯಲ್ಲೇ ಇಟ್ಟುಕೊಂಡು ಸಂರಕ್ಷಿಸಿದರು.

೧೯೮೯-೯೦

  • ಧಾರವಾಡದ ಆಕಾಶವಾಣಿಯ ಮೂಲಕ ರಾಷ್ಟ್ರಮಟ್ಟದ ಆಕಾಶವಾಣಿಸಂಗೀತ ಸ್ಪರ್ಧೆಯ ವಾದನ ವಿಭಾಗದಲ್ಲಿ ಪ್ರಥಮ ಪುರಸ್ಕಾರ ಗೆದ್ದಿದ್ದಾರೆ.
  • ಬೆಂಗಳೂರಿನ ಅಕಾಡೆಮಿ ಆಫ್ ಮ್ಯೂಸಿಕ್ ಅತ್ಯುತ್ತಮ ವಾದಕ ಪ್ರಶಸ್ತಿ. ಗದುಗಿನ ವೀರೇಶ್ವರ ಪುಣ್ಯಾಶ್ರಮ ಪುಟ್ಟರಾಜು ಕೃಪಾ ಭೂಷಣ ಬಿರುದು,
  • ಬೆಂಗಳೂರಿನ ಭಾರತಿ ಸಂಸ್ಕೃತಿ ಕಲಾಕೌಮುದಿ ಪುರಸ್ಕಾರ,
  • ಗೋಕುಲಂ ಆರ್ಟ್ ಫೌಂಡೇಶನ್ ಕಲಾವಸಂತ ಪುರಸ್ಕಾರ,,
  • ಸಿದ್ದಾಪುರದ ದಿಯಾ ಪ್ರತಿಷ್ಠಾನ, ಸ್ವರ ಸಾಮ್ರಾಟ್ ಪುರಸ್ಕಾರ,

ಧಾರವಾಡಕ್ಕೆ

ಆಗಸ್ಟ್,೧೯೯೪ ರಲ್ಲಿ ಧಾರವಾಡಕ್ಕೆ ಬಂದರು. ಕೊಲ್ಹಾಪುರದ 'ಅರುಣ್ ಪೊದ್ದಾರ್', ಅವರಿಗೆ ಸಹಾಯಮಾಡಿದರು.

ಬೆಂಗಳೂರಿನಲ್ಲಿ

'ಮೈಸೂರ್ ಅರಮನೆಯ ದಸರಾ ಸಂಗೀತ ಕಛೇರಿ' 'ನಿರುಪಮಾ ರಾಜೇಂದ್ರ ನರ್ತಕ ಜೋಡಿ', ಸಾರಂಗಿ ಹಾಡುಗಾರಿಕೆ, ನಿರ್ದೇಶನ 'ಪ್ರವೀಣ್ ರಾವ್,' ಬೆಂಗಳೂರಿನಲ್ಲಿ ನೆಲೆಸಲು ಅನುಕೂಲಮಾಡಿಕೊಟ್ಟರು.

ಉಪೇಂದ್ರರ 'ಎ' ಚಿತ್ರಕ್ಕೆ ಟೈಟಲ್ ಹಾಡು

ಚಿತ್ರಸಂಗೀತದಲ್ಲಿ ನೆಲೆಯೂರಲು ಅನುವುಮಾಡಿಕೊಟ್ಟಿತು. 'ಹಂಸಲೇಖ', 'ಗುರುಕಿರಣ್', 'ವಿ.ಮನೋಹರ್',ಮೊದಲಾದವರ ಚಿತ್ರಗಳಲ್ಲಿ ಹಾಡಿದರು. 'ಕಿಶನ್ ದಾಲ್ಮಿಯ' 'ಉಸ್ತಾದ್ ಫಯಾಜ್ ಖಾನ್' ರ, ಗಜಲ್ ಗಳನ್ನು ಕೇಳಿ ಪ್ರಭಾವಿತರಾದರು.

೧೯೯೫ ರಲ್ಲಿ, ಮದುವೆ

ಸದಾಶಿವ ನಗರ ವಿಜಯಾ ಆರ್ಟ್ಸ್ ನಲ್ಲಿ ಮನೆಕೊಡಿಸಿದರು. 'ಮೈಸೂರಿನ ಲಯನ್ಸ್' ನಲ್ಲಿ 'ಮುರುಳಿ ನಂದಿನಿ ಮೆಹ್ತಾ' ನರ್ತನಕ್ಕೆ 'ಸಾಥ್' ಕೊಡುತ್ತಿದ್ದಾರೆ. ಮಾಯಾದೀದಿ ತಂಡಕ್ಕೆ ಆಗಾಗ, ನಿರುಪಮ ರಾಜೇಂದ್ರರಿಗೆ ಹಾಡುಬರೆದು ರೆಕಾರ್ಡ್ ಮಾಡಿಕೊಟ್ಟಿದ್ದಾರೆ. ಈ ಹಾಡನ್ನು ಅವರು ೧೯೯೪ ರಿಂದ ಬಳಸಿಕೊಳ್ಳುತ್ತಿದ್ದಾರೆ.

೨೦೦೫-೬

'ಪಂ. ತಾರಾನಾಥ'ರಲ್ಲಿ ಕಾರ್ಯಕ್ರಮ ಕೊಡುತ್ತಿದ್ದಾರೆ.'ಪಂ.ಪರಮೇಶ್ವರ್ ಹೆಗಡೆ'ಯವರ ಬಳಿ ಸಾರಂಗಿ ಸಾಥ್ ನೀಡುತ್ತಿದ್ದಾರೆ. 'ಪಂ ಎಮ್.ಆರ್. ಗೌತಮ್', ಪಂ. ತಾರಾನಾಥ್ ಸಹಾಯಮಾಡುತ್ತಿದ್ದಾರೆ.

ದಾಸವಾಣಿಯ ಜೊತೆ

'ಪಂ.ಮಲ್ಲಿಕಾರ್ಜುನ್ ಮನ್ಸೂರ್,'ದಾಸಸಾಹಿತ್ಯವನ್ನು ತಮ್ಮ ಸಂಗೀತದಲ್ಲಿ ಅಳವಡಿಸಿಕೊಂಡರು. ಭಕ್ತಿಪ್ರಧಾನವಾದ ದಾಸಸಾಹಿತ್ಯವನ್ನು 'ಪಂ.ಭೀಮಸೇನ ಜೋಶಿ'ಯವರು ಹಾಡಿ ಜನಪ್ರಿಯಮಾಡಿದರು. ರಾಗಗಳನ್ನು ವಿಸ್ತರಿಸಲು ಅಪಾರ ಸೌಲಭ್ಯವಿದೆ. ನಾಡಿನ ಗಾಯನ ಸಂಪ್ರದಾಯದ ಅವಿಭಾಜ್ಯ ಅಂಗವಾಗಿದೆ. ಹಿರಿಮಗ 'ಸರ್ಫರಾಜ್', ಸಾರಂಗಿ ಹಾಡುಗಾರಿಕೆಯಲ್ಲಿ ಚಿಕ್ಕ ಮಗ ಪಂ.ತಾರಾನಾಥರಲ್ಲಿ 'ಸರೊಡ್ ವಾದ್ಯ'ವನ್ನು ಅಭ್ಯಾಸಮಾಡುತ್ತಿದ್ದಾನೆ. ಜೀವನ ಸಂಗೀತದ ಅನುಬಂಧದಿಂದ ಜಾಗೃತವಾಗಿದೆ.

ಹಲವಾರು ವೇದಿಕೆಗಳಲ್ಲಿ

ಉಸ್ತಾದ್ ಫಯಾಜ್ ಖಾನ್ ಕೆಳಗೆ ನಮೂದಿಸಿದ ಸಂಗೀತ ವೇದಿಕೆಗಳಲ್ಲಿ ಮತ್ತು ಇನ್ನೂ ಹಲವಾರು ಪ್ರತಿಷ್ಠಿತ ಸಂಸ್ಥೆಗಳಲ್ಲಿ ತಮ್ಮ ಕಾರ್ಯಕ್ರಮ ಕೊಟ್ಟರು.

  • ನಾದಬ್ರಹ್ಮ ಮ್ಯೂಸಿಕಲ್ ಫೆಸ್ಟಿವಲ್, ಪುಣೆ,
  • ವಾರಣಾಸಿಯ ಸಂಕಟಮೋಚನ್ ಮ್ಯೂಸಿಕಲ್ ಫೆಸ್ಟಿವಲ್
  • ಮಿರಜ್ ನ ಅಬ್ದುಲ್ ಕರೀಮ್ ಖಾನ್ ಸಂಗೀತೋತ್ಸವ,

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

Tags:

ಉಸ್ತಾದ್ ಫಯಾಜ್ ಖಾನ್ ಸಂಗೀತಯಾನದ ಆರಂಭಉಸ್ತಾದ್ ಫಯಾಜ್ ಖಾನ್ ಮುಂಬಯಿನಲ್ಲಿಉಸ್ತಾದ್ ಫಯಾಜ್ ಖಾನ್ ಹಿರಿಯ ಗಾಯಕರ ಬಳಿ ಕಲಿಕೆಉಸ್ತಾದ್ ಫಯಾಜ್ ಖಾನ್ ೧೯೮೯-೯೦ಉಸ್ತಾದ್ ಫಯಾಜ್ ಖಾನ್ ಧಾರವಾಡಕ್ಕೆಉಸ್ತಾದ್ ಫಯಾಜ್ ಖಾನ್ ಬೆಂಗಳೂರಿನಲ್ಲಿಉಸ್ತಾದ್ ಫಯಾಜ್ ಖಾನ್ ಉಪೇಂದ್ರರ ಎ ಚಿತ್ರಕ್ಕೆ ಟೈಟಲ್ ಹಾಡುಉಸ್ತಾದ್ ಫಯಾಜ್ ಖಾನ್ ೧೯೯೫ ರಲ್ಲಿ, ಮದುವೆಉಸ್ತಾದ್ ಫಯಾಜ್ ಖಾನ್ ೨೦೦೫-೬ಉಸ್ತಾದ್ ಫಯಾಜ್ ಖಾನ್ ದಾಸವಾಣಿಯ ಜೊತೆಉಸ್ತಾದ್ ಫಯಾಜ್ ಖಾನ್ ಹಲವಾರು ವೇದಿಕೆಗಳಲ್ಲಿಉಸ್ತಾದ್ ಫಯಾಜ್ ಖಾನ್ ಉಲ್ಲೇಖಗಳುಉಸ್ತಾದ್ ಫಯಾಜ್ ಖಾನ್ ಬಾಹ್ಯ ಸಂಪರ್ಕಗಳುಉಸ್ತಾದ್ ಫಯಾಜ್ ಖಾನ್

🔥 Trending searches on Wiki ಕನ್ನಡ:

ಅಲ್ಲಮ ಪ್ರಭುಕೆ.ವಿ.ಸುಬ್ಬಣ್ಣಎಚ್ ನರಸಿಂಹಯ್ಯಕರ್ನಾಟಕದ ತಾಲೂಕುಗಳುಮೈಸೂರು ದಸರಾಬೆಳವಡಿ ಮಲ್ಲಮ್ಮಓಂ ನಮಃ ಶಿವಾಯಲಕ್ನೋಲಕ್ಷ್ಮೀಶಮುಖ್ಯ ಪುಟಭಾವಗೀತೆವಿಧಾನ ಸಭೆಅವ್ಯಯದಿಕ್ಕುಕುಮಾರವ್ಯಾಸದರ್ಶನ್ ತೂಗುದೀಪ್ಅಮೇರಿಕದ ಫುಟ್‌ಬಾಲ್ಮಾದರ ಚೆನ್ನಯ್ಯಭಾರತೀಯ ಸಶಸ್ತ್ರ ಪಡೆಟೊಮೇಟೊಬಾರ್ಲಿಟಾಮ್ ಹ್ಯಾಂಕ್ಸ್ಮೈಸೂರು ಚಿತ್ರಕಲೆತಾಳಮದ್ದಳೆಕರ್ನಾಟಕದಲ್ಲಿ ಕನ್ನಡೇತರ ಭಾಷೆಗಳು ಮತ್ತು ಸಾಹಿತ್ಯಒಂದನೆಯ ಮಹಾಯುದ್ಧಸಂವತ್ಸರಗಳುಕರ್ನಾಟಕದ ಮಹಾನಗರಪಾಲಿಕೆಗಳುಅಂಕಿತನಾಮಆಧುನಿಕ ಕನ್ನಡ ಕಾವ್ಯದ ಬೆಳವಣಿಗೆದ್ರವ್ಯವಿಷ್ಣುವರ್ಧನ್ (ನಟ)ಭಾರತದಲ್ಲಿನ ಶಿಕ್ಷಣವೀರಪ್ಪ ಮೊಯ್ಲಿಕಾವೇರಿ ನದಿಸೋನು ಗೌಡಸಂಚಿ ಹೊನ್ನಮ್ಮಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕರ್ನಾಟಕದ ಮುಖ್ಯಮಂತ್ರಿಗಳುವಾಣಿಜ್ಯ(ವ್ಯಾಪಾರ)ಕೇಂದ್ರಾಡಳಿತ ಪ್ರದೇಶಗಳುಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಭಾರತದ ಚುನಾವಣಾ ಆಯೋಗನಾಡ ಗೀತೆಕೆ. ಎಸ್. ನಿಸಾರ್ ಅಹಮದ್ಸಮೂಹ ಮಾಧ್ಯಮಗಳುಕದಂಬ ರಾಜವಂಶಸಾಮಾಜಿಕ ಸಮಸ್ಯೆಗಳುಕನ್ನಡ ಗುಣಿತಾಕ್ಷರಗಳುಹಿಂದೂ ಮಾಸಗಳುನಾಲ್ವಡಿ ಕೃಷ್ಣರಾಜ ಒಡೆಯರುಗೋಪಾಲಕೃಷ್ಣ ಅಡಿಗಶ್ರವಣ ಕುಮಾರಐತಿಹಾಸಿಕ ನಾಟಕವೆಂಕಟೇಶ್ವರ ದೇವಸ್ಥಾನಅಖಿಲ ಭಾರತ ಬಾನುಲಿ ಕೇಂದ್ರಪ್ರವಾಹಡಿ.ವಿ.ಗುಂಡಪ್ಪಜೋಡು ನುಡಿಗಟ್ಟುದ್ರಾವಿಡ ಭಾಷೆಗಳುಹರಪ್ಪಕುಟುಂಬವ್ಯಕ್ತಿತ್ವಮಳೆಧ್ವನಿಶಾಸ್ತ್ರಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಮಾಸ್ತಿ ವೆಂಕಟೇಶ ಅಯ್ಯಂಗಾರ್ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುತಾಜ್ ಮಹಲ್ರಸ(ಕಾವ್ಯಮೀಮಾಂಸೆ)ಮುಟ್ಟುದ.ರಾ.ಬೇಂದ್ರೆಹೆಣ್ಣು ಬ್ರೂಣ ಹತ್ಯೆಕಾನೂನುಭಂಗ ಚಳವಳಿಧರ್ಮವರ್ಗೀಯ ವ್ಯಂಜನಅಂಬರ್ ಕೋಟೆಭರತ-ಬಾಹುಬಲಿಕ್ಷಯ🡆 More