ತಾಳಮದ್ದಳೆ

ಉತ್ತರ ಕನ್ನಡ ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಂಡುಬರುವಂತಹ ಕಲೆಯಾಗಿರುವುದು.

ಯಕ್ಷಗಾನದ ಈ ಪದ್ಧತಿಗೆ 'ಪ್ರಸಂಗ', 'ಬೈಟಾಕು', 'ಯಕ್ಷಗಾನ ಕೂಟ', 'ಜಾಗರಣೆ' ಎಂದೂ ಕರೆಯುತ್ತಾರೆ. ಈ ಕಲೆಯಲ್ಲಿ ಪಾತ್ರಧಾರಿಗಳು ಬಣ್ಣ ಹಚ್ಚದೆ ಪ್ರತ್ಯೇಕ ವೇಷಭೂಷಣವಿಲ್ಲದೆ ಕುಳಿತಲ್ಲಿಯೆ ಅಭಿನಯಿಸುವ ಯಕ್ಷಗಾನವಾಗಿರುವುದು. ತಾಳಧಾರಿಗಳಾದ ಭಾಗವತರು ಮೃದಂಗ ವಾದನದ ಮೇಳವಿಟ್ಟುಕೊಂಡು ಆಖ್ಯಾನವನ್ನು ಹೇಳುವುದರಿಂದ ಇದಕ್ಕೆ 'ತಾಳ ಮದ್ದಳೆ' (ತಾಳಮದ್ದಲೆ) ಎಂಬ ಹೆಸರು ಬಂದಿದೆ ಎಂದು ಹೇಳುವರು. ಯಕ್ಷಗಾನದ ಮೊದಲ ಹಂತ ಈ ತಾಳಮದ್ದಳೆಯೆಂದು ಹೇಳುತ್ತಾರೆ. ನಾಲ್ಕಾರು ಜನ ಒಂದೆಡೆ ಸೇರಿಕೊಂಡು ಒಂದು ಕಥೆಯಲ್ಲಿನ ಬೇರೆ ಬೇರೆ ಪಾತ್ರಗಳ ಚಿತ್ರಣವನ್ನು ಪದ್ಯಗಳ ಆಧಾರದ ಮೇಲೆ ತಮ್ಮ ಪ್ರತಿಭೆಯಿಂದ ಮಾತಿನ ಮೂಲಕ ಚಿತ್ರಿಸುತ್ತ ಹೋಗುವರು. ಪುರಾಣ ಕತೆಗಳನ್ನು ಹೇಳುವುದರಿಂದ, ಕೇಳುವುದರಿಂದ ಪುಣ್ಯಪ್ರಾಪ್ತಿಯಾಗಿ, ಇಷ್ಟಾರ್ಥ ಸಿದ್ಧಿಯೂ ಆಗುವುದೆಂಬ ನಂಬಿಕೆಯ ಹಿನ್ನೆಲೆಯಲ್ಲಿ ಈ ಕಲೆ ಬೆಳೆದುಬಂದಿದೆ ಎನ್ನುತ್ತಾರೆ.

ಸ್ವರೂಪ

ಹವ್ಯಾಸಿ ಕಲೆಯಾಗಿ ಬೆಳೆದುಬಂದಿರುವ ಈ ಕಲೆಯು ಸಾಮಾನ್ಯವಾಗಿ ಬೇಸಿಗೆಯಲ್ಲಿ ನಡೆಯುತ್ತದೆ. ಹಬ್ಬ ಹರಿದಿನಗಳಲ್ಲಿ ಹಿರಿಯರ ಪುಣ್ಯ ತಿಥಿಗಳಲ್ಲಿ, ಕೆಲವು ಕಡೆ ಪ್ರತಿ ಶನಿವಾರವೂ ತಾಳ ಮದ್ದಳೆ ನಡೆಯುತ್ತದೆ. ತಾಳಮದ್ದಳೆಯು ನಡೆಯುವುದು ಬಹುತೇಕವಾಗಿ ರಾತ್ರಿಯ ಸಮಯದಲ್ಲಿ. ಈ ಕಲೆಗೆ ವಿಶೇಷವಾದಂತಹ ರಂಗಸಜ್ಜಿಕೆಯೇನೂ ಇರುವುದಿಲ್ಲ. ಪ್ರೇಕ್ಷಕರಿಗೆ ಕಾಣುವಂತಹ ಎತ್ತರದ ವೇದಿಕೆಯಿರುತ್ತದೆ. ಸಾಮಾನ್ಯವಾಗಿ ದೊಡ್ಡ ಮನೆಗಳ ಜಗುಲಿಯ ಮೇಲೆ ಇಲ್ಲವೆ, ವಿಶಾಲವಾದ ಮನೆಗಳ ಅಂಗಳದಲ್ಲಿ ನಡೆಯುವುದೇ ಹೆಚ್ಚು. ಕಡಿಮೆ ಸಂಖ್ಯೆಯ ಪ್ರೇಕ್ಷಕರಾದರೆ ಕಂಬಳಿ, ಜಮಖಾನೆಗಳನ್ನು ಹಾಸಿ, ಒರಗು ದಿಂಬುಗಳನ್ನು ಇಟ್ಟಿರುತ್ತಾರೆ. ಅರ್ಥ ಹೇಳುವವರು ಒಂದು ಕೊನೆಯಲ್ಲಿ ಕುಳಿತಿರುತ್ತಾರೆ. ಮಧ್ಯೆ ಭಾಗವತರು ಮತ್ತು ಮೃದಂಗ, ಶೃತಿಯವರಿರುತ್ತಾರೆ. ಪಾತ್ರದವರು ಎರಡು ಸಾಲುಗಳಲ್ಲಿ ಎದುರು ಬದುರಾಗಿ ಕುಳಿತುಕೊಳ್ಳುವರು. ಉದಾಹರಣೆಗೆ, ಮಹಾಭಾರತಕ್ಕೆ ಸಂಬಂಧಿಸಿದ ಪ್ರಸಂಗವಾದರೆ, ಕೌರವ ಪಕ್ಷದವರು ಒಂದು ಕಡೆ ಕುಳಿತರೆ ಪಾಂಡವ ಪಕ್ಷದವರು ಇನ್ನೊಂದು ಕಡೆ ಕುಳಿತುಕೊಳ್ಳುವರು. ಸಭಾ ಮಧ್ಯದಲ್ಲಿ ಎಣ್ಣೆಯ ದೀಪ, ಗಂಧದ ಕಡ್ಡಿ ಹಚ್ಚಿಡುವರು. ಜೋಡಿ ಬಾಳೆ ಎಲೆಯಲ್ಲಿ ತುಸು ಅಕ್ಕಿ, ತೆಂಗಿನಕಾಯಿಗಳನ್ನು ಮುಡುಪಾಗಿ ತೆಗೆದಿಟ್ಟ ನಂತರ ಗಣಪತಿ ಪೂಜೆಯೊಂದಿಗೆ ಕಾರ್ಯಕ್ರಮವು ಆರಂಭವಾಗುತ್ತದೆ. ಭಾಗವತರು ತಾಳ ಬಾರಿಸುತ್ತ ಪದ್ಯ ಹೇಳುವಾಗ ಮದ್ದಳೆಕಾರರು ಮತ್ತು ಶೃತಿಕಾರರು ಮೇಳಗೂಡಿಸುತ್ತಾರೆ.

ಅರ್ಥ ಸಂಭಾಷಣೆ

ತಾಳಮದ್ದಳೆಯಲ್ಲಿ ಕಲಾವಿದರು ಕೈ ಕಣ್ಣು ಮುಖಗಳಿಂದ ಭಾವ ಪ್ರದರ್ಶನ ಮಾಡುತ್ತಾರೆ. ಇದರಲ್ಲಿ ಭಾಗವತನೇ ಸೂತ್ರಧಾರನಾಗಿರುವನು. ಸಂದರ್ಭದ ಪದ್ಯಗಳನ್ನು ಹಾಡುತ್ತಲೇ ಆ ಹಾಡಿಗೆ ಸಂಬಂಧಿಸಿದ ಪಾತ್ರಧಾರಿ ಮಾತು ಆರಂಭಿಸುತ್ತಾನೆ. ಒಬ್ಬ ಪಾತ್ರಧಾರನ ಮಾತಿಗೆ ಇನ್ನೊಬ್ಬ ಪಾತ್ರಧಾರ ಉತ್ತರ ಕೊಡಲು ಭಾಗವತ ಹಾಡಿನ ಮೂಲಕ ದಾರಿ ಮಾಡಿಕೊಡಬೇಕು. ಭಾಗವತ ಕಂದಪದ್ಯಗಳ ಜೊತೆಗೆ ಹಲವಾರು ಮಟ್ಟುಗಳಲ್ಲಿ ಪದ್ಯಗಳನ್ನು ಹಾಡುತ್ತಾರೆ. ರಾತ್ರಿ ಆರಂಭವಾಗುವ ತಾಳಮದ್ದಳೆಯು ಬೆಳಗಾಗುವವರೆಗೂ ನಡೆದು ಮಂಗಳಾಚರಣೆಯೊಂದಿಗೆ ಮುಕ್ತಾಯವಾಗುತ್ತದೆ.

ಪ್ರಸಿದ್ಧ ಭಾಗವತರುಗಳು

  • A.s.ಮಹಾಬಲಗಿರಿ ರಾವ್ ಭಾಗವತರು ಅಮಚಿ (ಸೊರಬ).9480739505
  • ನೆಬ್ಬೂರು ನಾರಾಯಣ ಭಾಗವತರು
  • ಕೆರೆಮನೆ ಮಹಾಬಲ ಹೆಗಡೆ
  • ಕೃಷ್ಣ ಭಾಗವತ ಬಾಳೆಹದ್ದ
  • ಕೆ.ಜೆ.ರಾಮರಾವ್
  • ದುರ್ಗಪ್ಪ ಗುಡಿಗಾರ
  • ನಾರಾಯಣ ಭಾಗವತ ಉಪ್ಪೂರು
  • ರಾಮಚಂದ್ರ ನಾವುಡರು
  • ಭಾಗವತ ನೀಲಾವರ ರಾಮಕೃಷ್ಣಯ್ಯ
  • ಭಾಗವತ ನೀಲಾವರ ಲಕ್ಷ್ಮೀನಾರಾಯಣಯ್ಯ
  • ಕಡತೋಕಾ ಮಂಜುನಾಥ ಭಾಗವತ
  • ಕಡತೋಕಾ ಕೃಷ್ಣ ಭಾಗವತ
  • ಕಡತೋಕಾ ಲಕ್ಷ್ಮೀನಾರಾಯಣ ಭಾಗವತ
  • ಸುಬ್ರಾಯ ಭಾಗವತ ಕೆಪ್ಪೆಕೆರೆ
  • ಹಸ್ತೋಟಾ ಮಂಜುನಾಥ ಭಾಗವತ
  • ಹಸ್ತೋಟಾ ಗಜಾನನ ಭಾಗವತ
  • ಬಲಿಪ ನಾರಾಯಣ ಭಾಗವತರು
  • ಬಲಿಪ ಪ್ರಸಾದ ಭಟ್ಟ
  • ಬಲಿಪ ಶಿವಶಂಕರ ಭಟ್ಟ
  • ಕುರಿಯ ಗಣಪತಿ ಶಾಸ್ತ್ರಿ
  • ಕೆರೆಮನೆ ರಾಮ ಹೆಗಡೆ
  • ಕಾಳಿಂಗ ನಾವಡರು
  • ಅನಂತ ಪದ್ಮನಾಭ ಪಾಟಕ ಕಾರ್ಕಳ
  • ವಿದ್ವಾನ್ ಗಣಪತಿ ಭಟ್ಟರು
  • ಕೊಳಗಿ ಕೇಶವ ಹೆಗಡೆ
  • ಸುಬ್ರಹ್ಮಣ್ಯ ಧಾರೇಶ್ವರ
  • ಐನಬೈಲ ಪರಮೇಶ್ವರ ಹೆಗಡೆ
  • ದಂತಳಿಕೆ‌ ಅನಂತ ಹೆಗಡೆ
  • ಜೋಗೀಮನೆ ಗೋಪಾಲಕೃಷ್ಣ ಭಾಗವತ
  • ಬಾಡ ಉಮೇಶ ಭಟ್ಟ
  • ದಿನೇಶ ಅಮ್ಮಣ್ಣಾಯ
  • ಪದ್ಯಾಣ ಗಣಪತಿ ಭಟ್
  • ಪುತ್ತಿಗೆ ರಘುರಾಮ ಹೊಳ‍್ಳ
  • ಕೆ.ಜೆ‌.ವೇಣುಗೋಪಾಲ
  • ತಿಮ್ಮಪ್ಪ ಭಾಗವತ ಬಾಳೆಹದ್ದ
  • ಲೀಲಾವತಿ ಬೈಪಡಿತ್ತಾಯ
  • ಕಾವ್ಯಶ್ರೀ ಅಜೇರು
  • ಅಮೃತಾ ಅಡಿಗ
  • ಹಿಲ್ಲೂರು ರಾಮಕೃಷ್ಣ ಹೆಗಡೆ
  • ರಾಘವೇಂದ್ರ ಜನ್ಸಾಲೆ
  • ಪಟ್ಲ ಸತೀಶ ಶೆಟ್ಟಿ
  • ವಿಘ್ನೇಶ್ವರ ಕೊಂಟೆಬೀಡು

ಉಲ್ಲೇಖಗಳು

ತಾಳಮದ್ದಳೆಯ ಒಂದು ನೋಟ:ನೋಡಿ https://www.youtube.com/watch?v=RbPtmXeIowQ

Tags:

ತಾಳಮದ್ದಳೆ ಸ್ವರೂಪತಾಳಮದ್ದಳೆ ಅರ್ಥ ಸಂಭಾಷಣೆತಾಳಮದ್ದಳೆ ಪ್ರಸಿದ್ಧ ಭಾಗವತರುಗಳುತಾಳಮದ್ದಳೆ ಉಲ್ಲೇಖಗಳುತಾಳಮದ್ದಳೆಉತ್ತರ ಕನ್ನಡಯಕ್ಷಗಾನ

🔥 Trending searches on Wiki ಕನ್ನಡ:

ಕರ್ನಾಟಕ ಲೋಕಸಭಾ ಚುನಾವಣೆ, 2019ವಿರಾಮ ಚಿಹ್ನೆಮೈಸೂರುಜಿ.ಪಿ.ರಾಜರತ್ನಂಮನೆಕನ್ನಡತಿ (ಧಾರಾವಾಹಿ)ವಿಮರ್ಶೆಕರ್ನಾಟಕದ ತಾಲೂಕುಗಳುಸಂದರ್ಶನಆನೆಕೆರೆ (ಚನ್ನರಾಯಪಟ್ಟಣ ತಾಲ್ಲೂಕು)ಬೆಳಕುಕುದುರೆಪೂನಾ ಒಪ್ಪಂದಭಾರತದ ರಾಷ್ಟ್ರಪತಿಗಳ ಪಟ್ಟಿಧಾರವಾಡಸಾಲುಮರದ ತಿಮ್ಮಕ್ಕಬಸವ ಜಯಂತಿಹನುಮ ಜಯಂತಿಕಾಮಸೂತ್ರಕರ್ನಾಟಕದ ಮಹಾನಗರಪಾಲಿಕೆಗಳುಇಂಡಿಯನ್ ಪ್ರೀಮಿಯರ್ ಲೀಗ್ಸಂಖ್ಯೆಅಡಿಕೆಕನ್ನಡ ಜಾನಪದಶಾಂತರಸ ಹೆಂಬೆರಳುನಾಗರೀಕತೆಭೋವಿಸುಧಾ ಮೂರ್ತಿಪ್ಯಾರಾಸಿಟಮಾಲ್ಮಾಸ್ತಿ ವೆಂಕಟೇಶ ಅಯ್ಯಂಗಾರ್ಭಾರತದ ರೂಪಾಯಿಹುಲಿವಿಜಯ್ ಮಲ್ಯಹೊಂಗೆ ಮರಕಂಸಾಳೆಸೀತೆರವಿಕೆಜನ್ನಕ್ರಿಕೆಟ್ಚದುರಂಗ (ಆಟ)ವಲ್ಲಭ್‌ಭಾಯಿ ಪಟೇಲ್ಸವರ್ಣದೀರ್ಘ ಸಂಧಿವಿಕಿಪೀಡಿಯಕನ್ನಡ ಕಾಗುಣಿತವಂದೇ ಮಾತರಮ್ಕೇಶಿರಾಜಶಬ್ದ ಮಾಲಿನ್ಯಚಿಂತಾಮಣಿಭಾರತದ ಸರ್ವೋಚ್ಛ ನ್ಯಾಯಾಲಯಕರಗ (ಹಬ್ಬ)ಸಾವಿತ್ರಿಬಾಯಿ ಫುಲೆಹಾಸನ ಜಿಲ್ಲೆಸಿದ್ದಲಿಂಗಯ್ಯ (ಕವಿ)ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳುಚಿಕ್ಕಮಗಳೂರುಆಟಿಸಂಲಸಿಕೆ1935ರ ಭಾರತ ಸರ್ಕಾರ ಕಾಯಿದೆರಾಷ್ಟ್ರೀಯ ಸೇವಾ ಯೋಜನೆಏಡ್ಸ್ ರೋಗಎಸ್.ಎಲ್. ಭೈರಪ್ಪಕಬ್ಬುಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಭಕ್ತಿ ಪ್ರತ್ಯಯಗಳುವಿನಾಯಕ ದಾಮೋದರ ಸಾವರ್ಕರ್ಸ್ತ್ರೀಇತಿಹಾಸಹೊಯ್ಸಳ ವಾಸ್ತುಶಿಲ್ಪಅರ್ಥಶಾಸ್ತ್ರಅಂತಿಮ ಸಂಸ್ಕಾರಪುಟ್ಟರಾಜ ಗವಾಯಿಜರಾಸಂಧಹಯಗ್ರೀವರಾಮ ಮಂದಿರ, ಅಯೋಧ್ಯೆಗಾಂಧಿ- ಇರ್ವಿನ್ ಒಪ್ಪಂದಪಾಕಿಸ್ತಾನಚಪ್ಪಾಳೆ🡆 More