ಇಂಗ್ಲಿಷ್ ವ್ಯಾಕರಣ ವು ಭಾಷಾ ನಿಯಮಗಳ ಸಂಗ್ರಹವಾಗಿದ್ದು, ಇಂಗ್ಲಿಷ್ ಭಾಷೆಯ ಗುಣ ಲಕ್ಷಣಗಳನ್ನು ಅದು ವಿವರಿಸುತ್ತದೆ.
ಕೆಲವು ನಿರ್ದಿಷ್ಟ ಮಾದರಿಗಳಿಗೆ ಅನುಸಾರವಾಗಿ ಅದರ ಅಂಶಗಳನ್ನು ಸಂಯೋಜಿಸುವುದೇ ಭಾಷೆ. ಈ ಲೇಖನವು ಕೆಳಗೆ ನಮೂದಿಸಿದ ವಿಚಾರಗಳಿಗೆ ಸಂಬಂಧಿಸಿದೆ. (ಹಾಗೂ ಸೀಮಿತವಾಗಿದೆ): ಭಾಷೆಯ ರಚನಾ ಘಟಕಗಳಾದ ಶಬ್ದರೂಪ ರಚನಾ ಶಾಸ್ತ್ರ, morpheme (ರೂಪಾಕೃತಿ)ಗಳು ಮತ್ತು word (ಪದ)ಗಳ ಬಳಸಿದ ಅರ್ಥಪೂರ್ಣ phrase (ಪದಗುಚ್ಛ)ಗಳು, clause (ವಾಕ್ಯಾಂಶ)ಗಳು, ಮತ್ತು sentence (ವಾಕ್ಯ)ಗಳ ರಚನೆಗೆ ಸಂಬಂಧಿತ ನಿಯಮಗಳು. ಯಾವುದೇ ಭಾಷೆಯ ವ್ಯಾಕರಣವನ್ನು ಸಾಮಾನ್ಯವಾಗಿ ಎರಡು ವಿಭಿನ್ನ ರೀತಿಗಳಲ್ಲಿ ಪ್ರಸ್ತಾಪಿಸಬಹುದು: ವಿವರಣಾತ್ಮಕ - ಇದು ಸಾಮಾನ್ಯವಾಗಿ ವಿಶಾಲ ಭಾಷಾ ಪ್ರಯೋಗ ಸಂಗ್ರಹದ ವ್ಯವಸ್ಥಿತ ವಿಶ್ಲೇಷಣೆ; ಹಾಗೂ, ವಿಧಾಯಕ -(ಭಾಷಾ ಬಳಕೆ ಕಟ್ಟಳೆ) ಇದು ಮಾತನಾಡುವವರ ಭಾಷಿಕ ಪ್ರವೃತ್ತಿಗೆ ಅನ್ವಯಿಸಲೆಂದು ಭಾಷಾ ಸೂತ್ರಗಳನ್ನು ಗುರುತಿಸಿ ಬಳಸುವುದಾಗಿದೆ; (ಇದನ್ನು ನೋಡಿ: ಭಾಷಾಧ್ಯಯನದ ಅನುಶಾಸನ, ಹಾಗೂ, ವಿವರಣಾತ್ಮಕ ಭಾಷಾಧ್ಯಯನ). ವಿಧಾಯಕ ವ್ಯಾಕರಣವು ಇಂಗ್ಲಿಷ್ ವ್ಯಾಕರಣದಲ್ಲಿನ ಹಲವು ಮುಕ್ತ ಚರ್ಚಾಸ್ಪದ ವಿಚಾರಗಳಿಗೆ ಸಂಬಂಧಿಸಿದೆ. ಇದು ಕಾಲಾನಂತರದ,ಭಾಷಾ ಬಳಕೆಯಲ್ಲಿನ ಬದಲಾವಣೆಗಳನ್ನು ಪ್ರತಿನಿಧಿಸಿ ಆಗಾಗ್ಗೆ ನಿರೂಪಿಸುತ್ತದೆ. ಇಂಗ್ಲಿಷ್ ಭಾಷೆಯಲ್ಲಿ ಬಹಳಷ್ಟು ಚಾರಿತ್ರಿಕ, ಸಾಮಾಜಿಕ ಮತ್ತು ಪ್ರಾದೇಶಿಕ ವ್ಯತ್ಯಾಸ ಮತ್ತು ಏರಿಳಿತಗಳಿವೆ. ಉದಾಹರಣೆಗೆ, ಬ್ರಿಟೀಷ್ ಇಂಗ್ಲೀಷ್ ಮತ್ತು ಅಮೆರಿಕನ್ ಇಂಗ್ಲಿಷ್ ಭಾಷೆಗಳಲ್ಲಿ ಹಲವಾರು ಶಬ್ದಕೋಶೀಯ(ಶಬ್ದಾರ್ಥ ನಿಘಂಟಿನ) ಭಿನ್ನತೆಗಳಿವೆ; ಆದಾಗ್ಯೂ, ವ್ಯಾಕರಣ ಭೇದಗಳು ಎದ್ದು ಕಾಣುವಷ್ಟು ಗಮನಾರ್ಹವಾಗಿಲ್ಲ, ಸೂಕ್ತವೆನಿಸಿದಲ್ಲಿ ಮಾತ್ರ ಇವುಗಳನ್ನು ಚರ್ಚೆಗೊಳಪಡಿಸಲಾಗುವುದು. ಇನ್ನೂ ಹೆಚ್ಚಿಗೆ, ಇಂಗ್ಲಿಷ್ ಭಾಷೆಯ ಭಾಷಾಪ್ರಭೇದಗಳು ಇಲ್ಲಿ ವಿವರಿಸಿದ ವ್ಯಾಕರಣಕ್ಕಿಂತಲೂ ವಿಭಿನ್ನ ದಿಕ್ಕಿನಲ್ಲಿ ಚದುರಿವೆ; ಅವುಗಳನ್ನು ಸುಲಭವಾಗಿ ಮತ್ತು ಸುಲಲಿತವಾಗಿ ತಿಳಿಸಲಾಗಿದೆ. ಈ ಲೇಖನವು ಸರ್ವೆಸಾಮಾನ್ಯವೆನಿಸಿದ ಪ್ರಸಕ್ತ ಪ್ರಮಾಣಿತ ಗುಣಮಟ್ಟದ ಇಂಗ್ಲಿಷ್ ಭಾಷೆಯನ್ನು ವಿವರಿಸುತ್ತದೆ. ಪ್ರಸಾರ, ಶಿಕ್ಷಣ, ಮನರಂಜನೆ, ಸರ್ಕಾರ ಮತ್ತು ವಾರ್ತಾ ಸುದ್ದಿ ವರದಿಗಳಂತಹ ಸಾರ್ವಜನಿಕ ಭಾಷಣ,ಪ್ರವಚನ ಇತರೆಡೆಗಳಲ್ಲಿ ಬಳಸಿದ ಭಾಷಾಶೈಲಿಗಳನ್ನು ವಿವರಿಸುತ್ತದೆ. ಪ್ರಮಾಣಿತ ಇಂಗ್ಲಿಷ್ ಭಾಷೆಯು ಔಪಚಾರಿಕ ಮತ್ತು ಅನೌಪಚಾರಿಕ ಉಕ್ತಿಗಳೆರಡನ್ನೂ ಒಳಗೊಂಡಿದೆ.
ಏಳು ಪ್ರಮುಖ ಪದ ವರ್ಗಗಳನ್ನು ಇಲ್ಲಿ ವಿವರಿಸಲಾಗಿದೆ. ಅವುಗಳೆಂದರೆ: noun (ನಾಮಪದ), verb (ಕ್ರಿಯಾಪದ), adjective (ವಿಶೇಷಣ), adverb (ಕ್ರಿಯಾವಿಶೇಷಣ), preposition (ಉಪಸರ್ಗ), conjunction (ಸಂಬಂಧಾವ್ಯಯ) ಮತ್ತು determiner (ಸ್ವರೂಪ ನಿರ್ಣಾಯಕ). ಇವುಗಳಲ್ಲಿ ಮೊದಲ ಆರನ್ನು ಸಾಂಪ್ರದಾಯಿಕವಾಗಿ 'parts of speech (ಭಾಷಾಖಂಡಗಳು ಅಥವಾ ಪದವಾಚಕಗಳು)' ಎಂದು ಉಲ್ಲೇಖಿಸಲಾಗಿದೆ. ಪದ ವರ್ಗಗಳಲ್ಲಿ ಕೆಲವು ಸಣ್ಣ, ಅಲ್ಪಸಂಖ್ಯಾತ ಗುಂಪುಗಳೂ ಸಹ ಇವೆ, ಉದಾಹರಣೆಗೆ interjections (ಭಾವಸೂಚಕಾವ್ಯಯ)ಗಳು. ಆದರೆ ಇವು ಇಂಗ್ಲಿಷ್ ಭಾಷೆಯ ವಾಕ್ಯಾಂಗ ಮತ್ತು ವಾಕ್ಯರಚನೆಯೊಳಗೆ ಹೊಂದಿಕೊಳ್ಳುವುದಿಲ್ಲ.;Open and closed classes (ಮುಕ್ತ ಮತ್ತು ವ್ಯಂಜನಾಂತ್ಯದ ವರ್ಗಗಳು)ಮುಕ್ತ ಪದ ವರ್ಗಗಳು ಹೊಸ ಪದಗಳಿಗೆ ಅವಕಾಶ ನೀಡುತ್ತವೆ; ಸಂಕುಚಿತ ಪದ ವರ್ಗಗಳು ಅವಕಾಶ ನೀಡುವುದು ಬಹಳ ವಿರಳ.[4] ನಾಮಪದಗಳಲ್ಲಿ ಉದಾಹರಣೆಗೆ 'celebutante' (ಸೆಲೆಬ್ಯುಟೆಂಟ್)'('ಫ್ಯಾಷನ್ ಔತಣಗಳಿಗೆ ಭೇಟಿ ನೀಡುವ ಖ್ಯಾತನಾಮರು) ಮತ್ತು 'mentee' (ಮೆಂಟೀ) (ಆಪ್ತ ಸಲಹೆಗಾರರಿಂದದ ಸಲಹೆ ಪಡೆದ ವ್ಯಕ್ತಿ) ಮತ್ತು ಕ್ರಿಯಾವಿಶೇಷಣವಾದ '24/7' (ಅರ್ಥಾತ್ - ದಿನದ ಇಪ್ಪತ್ತನಾಲ್ಕೂ ಗಂಟೆಗಳು, ವಾರದಲ್ಲಿ ಏಳೂ ದಿನಗಳ ಸಂಕೇತ-ಸೂಚಕ) ("I am working on it 24/7" (ಅರ್ಥ: ನಾನು ಇದನ್ನು ಸರಿಪಡಿಸಲು ಇಡೀ ದಿನ, ಇಡೀ ವಾರ ಯತ್ನಿಸುತ್ತಿರುವೆ)) ಈ ತೆರನಾದ ಹೊಸ ಪದಗಳು, ಇದಕ್ಕಾಗಿ ನಾಮಪದಗಳು ಮತ್ತು ಕ್ರಿಯಾವಿಶೇಷಣಗಳ ಹಿನ್ನಲೆಯಲ್ಲಿ ಇವುಗಳನ್ನು ಮುಕ್ತ ವರ್ಗಗಳೆಂದು ಪರಿಗಣಿಸಬಹುದು. ಆದರೂ, ಸರ್ವನಾಮ 'his' ಅಥವಾ 'her' ಬದಲಿಗೆ 'their' ಎಂಬ ಲಿಂಗ-ತಟಸ್ಥ ಏಕವಚನವನ್ನು ಬಳಸುವುದು 40 ವರ್ಷಗಳಿಂದಲೂ ಸ್ವೀಕರಿಸಲಾಗಿಲ್ಲ. (ಉದಾಹರಣೆಗೆ: "Each new arrival should check in their luggage.") (ಅರ್ಥ: ಇಲ್ಲಿ ಆಗಮಿಸುವ ಪ್ರತಿಯೊಬ್ಬರೂ ತಮ್ಮ ಸಾಮಗ್ರಿ-ಸರಂಜಾಮನ್ನು ದಾಖಲಿಸಿಕೊಳ್ಳಬೇಕು) ಹಾಗಾಗಿ, ಸರ್ವನಾಮಗಳು ಸಂಕುಚಿತ ವರ್ಗಕ್ಕೆ ಸೇರುತ್ತವೆ. ;Word classes and grammatical forms (ಪದ ವರ್ಗಗಳು ಮತ್ತು ವ್ಯಾಕರಣ ವಾಕ್ಯ ರಚನಾ ರೂಪಗಳು)ಕೆಲವೊಮ್ಮೆ ಒಂದೇ ಪದವು ಹಲವು ಪದ ವರ್ಗಗಳಿಗೆ ಸೇರಬಹುದು. ಪದದ ವರ್ಗ ಆವೃತ್ತಿಗೆ 'lexeme (ಪದದ ಮೂಲಾಂಶ)' ಎನ್ನಲಾಗಿದೆ. ಉದಾಹರಣೆಗೆ, 'run' (ರನ್) (ಓಟ) ಎಂಬ ಪದವು ಸಾಮಾನ್ಯವಾಗಿ ಕ್ರಿಯಾಪದವಾಗಿರುತ್ತದೆ, ಆದರೆ ಅದು ನಾಮಪದವೂ ಆಗಬಹುದು ("It is a ten mile run to Tipperary.") (ಅರ್ಥ:ಇಲ್ಲಿಂದ ಟಿಪೆರರಿಗೆ ಇದು ಹತ್ತು ಮೈಲುಗಳ ಓಟವಾಗಿದೆ); ಹಾಗಾಗಿ ಇವೆರಡೂ ವಿವಿಧ ಪದ ಘಟಕಗಳಾಗಬಹುದು. ಇನ್ನೂ ಹೆಚ್ಚಿಗೆ, ಇದೇ ಭಾಷಾಪದಘಟಕ ಹಲವು ವ್ಯಾಕರಣದ ರೂಪಗಳನ್ನು ಹೊಂದಬಹುದು. ಉದಾಹರಣೆಗೆ, ಕ್ರಿಯಾಪದದ (ಅಂಗ) ಘಟಕವಾಗಿ 'run (ರನ್)' ಹಲವು ಎಲ್ಲೆಯುಳ್ಳ ರೂಪಗಳನ್ನು ಹೊಂದಿವೆ: 'runs (ರನ್ಸ್),' 'ran (ರಾನ್)' and 'ರನಿಂಗ್ (ರನಿಂಗ್).' ಒಂದು ವರ್ಗದಲ್ಲಿನ ಪದಗಳು ಕೆಲವೊಮ್ಮೆ ಇನ್ನೊಂದು ವರ್ಗದಲ್ಲಿರುವ ಪದಗಳಿಂದ ಪಡೆದ ಉಪ ಉತ್ಪನ್ನಗಳಾಗಿ ಹೊಸ ಪದಗಳ ಸೃಷ್ಟಿಗೆ ದಾರಿಯಾಗಬಹುದು. ಉದಾಹರಣೆಗೆ, 'aerobics (ಏರೊಬಿಕ್ಸ್)' ಎಂಬ ನಾಮಪದವು ಇತ್ತೀಚೆಗೆ 'aerobicised (ಏರೊಬಿಕೈಸ್ಡ್)' ಎಂಬ ಹಲವು ವಿಶೇಷಣಗಳ ಸೃಷ್ಟಿಗೆ ಕಾರಣವಾಗಿದೆ ("the aerobicised bodies of Beverly Hills celebutantes." ).;Phrase classes (ಪದಗುಚ್ಛದ ವರ್ಗಗಳು) ಪದಗಳ ಒಟ್ಟುಗೂಡುವಿಕೆಯಿಂದಾದ ಸಮೂಹವೇ phrase (ಪದಗುಚ್ಛ)ಗಳಾಗುತ್ತವೆ. ಇವು ಸ್ವತಃ ಪದ ವರ್ಗದ ಗುಣ-ಲಕ್ಷಣ ಹೊಂದುತ್ತವೆ. ಈ ವರ್ಗಗಳನ್ನು phrase classes (ಪದಗುಚ್ಛದ ವರ್ಗಗಳು) ಎನ್ನಲಾಗುತ್ತದೆ. The ancient pulse of germ and birth ಎಂಬ ಪದಗುಚ್ಛವು 'The ancient pulse of germ and birth was shrunken hard and dry' ಎಂಬ ವಾಕ್ಯದಲ್ಲಿ noun (ನಾಮಪದ)ವಾಗಿ ವರ್ತಿಸುತ್ತದೆ. (ಥಾಮಸ್ ಹಾರ್ಡಿ, The Darkling Thrush ) ಹಾಗಾಗಿ ಅದು ಒಂದು noun phrase (ನಾಮಪದ ಪದಗುಚ್ಛ) ಆಗಿದೆ. ಇತರೆ phrase classes (ಪದಗುಚ್ಛ ವರ್ಗಗಳು) ಹೀಗಿವೆ: verb phrases (ಕ್ರಿಯಾಪದ ಪದಗುಚ್ಛಗಳು), adjective phrases (ವಿಶೇಷಣ ಪದಗುಚ್ಛಗಳು), adverb phrases (ಕ್ರಿಯಾವಿಶೇಷಣ ಪದಗುಚ್ಛಗಳು), prepositional phrases (ಪದದ ಹಿಂದೆ ಸೇರಿಸಿದ ಅಥವಾ ಪೂರ್ವ ಪ್ರತ್ಯಯಗಳು,ಉಪಸರ್ಗದ ಪದಗುಚ್ಛಗಳು) ಮತ್ತು determiner phrases (ಸ್ವರೂಪ ನಿರ್ಣಾಯಕ ಪದಗುಚ್ಛಗಳು).(ಸ್ವತಂತ್ರ ವಾಕ್ಯದ ಪ್ರಧಾನ ಕ್ರಿಯಾಪದವಿಲ್ಲದ ಶಬ್ದ ಸಮೂಹ)
Nouns (ನಾಮಪದಗಳು) ಅತಿದೊಡ್ಡ ಪದ ವರ್ಗವನ್ನು ಸೃಷ್ಟಿಸುತ್ತವೆ. ಕಾರ್ಟರ್ ಮತ್ತು ಮೆಕಾರ್ಥಿ ಪ್ರಕಾರ, ನಾಮಪದಗಳು 'ಜನರು, ಪ್ರಾಣಿಗಳು, ನಿರ್ಜೀವ ವಸ್ತುಗಳು, ಸ್ಥಳಗಳು, ಘಟನೆಗಳು, ಲಕ್ಷಣಗಳು ಮತ್ತು ಸ್ಥಿತಿಗಳು ಸೇರಿದಂತೆ ವಿಶ್ವದಲ್ಲಿ ವಿವಿಧ ಅಂಶಗಳು ಮತ್ತು ವರ್ಗಗಳನ್ನು' ಸೂಚಿಸುತ್ತವೆ. ಇದರ ಫಲವಾಗಿ, 'Mandela,' 'jaguar,' 'mansion,' 'volcano,' 'Timbuktoo,' 'blockade,' 'mercy,' ಮತ್ತು 'liquid' ಇವೆಲ್ಲವೂ ಸಹ ನಾಮಪದಗಳು (nouns). ನಾಮಪದಗಳನ್ನು ಸಾಮಾನ್ಯವಾಗಿ ಅವುಗಳ ರೂಪಗಳಿಂದ ಗುರುತಿಸಲಾಗುವುದಿಲ್ಲ. ಆದರೂ, '-age' ('shrinkage'), '-hood' ('sisterhood'), '-ism' ('journalism'), '-ist' ('lyricist'), '-ment' ('adornment'), '-ship' ('companionship'), '-tude' ('latitude'), ಮುಂತಾದ ಕೆಲವು ಸಾಮಾನ್ಯ suffixes (ಪದದ ಕೊನೆ ಭಾಗಕ್ಕಿರುವ ಪ್ರತ್ಯಯಗಳು) ನಾಮಪದಗಳ identifiers (ಗುರುತುಕಾರಕಗಳು,ಸೂಚಕಗಳು) ಆಗಿರುತ್ತವೆ. ಆದರೂ, ಕೆಲವು ಅಪವಾದಗಳಿವೆ: 'assuage' ಮತ್ತು 'disparage' ಕ್ರಿಯಾಪದಗಳಾಗಿವೆ (verbs); 'augment' ಕ್ರಿಯಾಪದವಾಗಿದೆ, 'lament' ಸಹ ಕ್ರಿಯಾಪದವಾಗಬಹುದು ಮತ್ತು 'worship' ಕ್ರಿಯಾಪದವಾಗಿದೆ. ಕ್ರಿಯಾಪದ ಮತ್ತು ಗುಣವಾಚಕ,ವಿಶೇಷಣಗಳನ್ನು ಪರಿವರ್ತಿಸಿ ನಾಮಪದಗಳ ಸೃಷ್ಟಿಸಬಹುದು. 'a boring talk,' 'a five-week run,' 'the long caress,' 'the utter disdain,' ಮುಂತಾದ ಉದಾಹರಣೆಗಳಲ್ಲಿ ನಾಮಪದಗಳಿವೆ.;ಸಂಖ್ಯೆ, ಲಿಂಗ, ಮಾದರಿ, ನಮೂನೆ ಮತ್ತು ವಾಕ್ಯರಚನೆಯ ಲಕ್ಷಣಗಳು. ನಾಮಪದಗಳು singular (ಏಕವಚನ) ಮತ್ತು plural (ಬಹುವಚನ) ರೂಪಗಳನ್ನು ಹೊಂದಿವೆ. ಹಲವು ಬಹುವಚನ ರೂಪಗಳು -s ಅಥವಾ -es ಅಕ್ಷರಗಳೊಂದಿಗೆ ಕೊನೆಗೊಳ್ಳುತ್ತವೆ (dog/dogs, referee/referees, bush/bushes) ಆದರೆ ಎಲ್ಲವೂ ಇದೇ ರೀತಿಯಲ್ಲಿರುವುದಿಲ್ಲ (woman/women, axis/axes, medium/media). ಕೆಲವು ಇತರೆ ಭಾಷೆಗಳಿಗಿಂತಲೂ ಭಿನ್ನವಾಗಿ, ವಾಕ್ಯದಲ್ಲಿ ಕ್ರಿಯಾಪದದ ರೂಪವನ್ನು ಪ್ರಭಾವಿಸುವ ವ್ಯಾಕರಣದ ಲಿಂಗವನ್ನು ನಾಮಪದಗಳು ಹೊಂದಿರುವುದಿಲ್ಲ. ಆದರೂ, ಜೀವಂತ (ಪುಲ್ಲಿಂಗ ಅಥವಾ ಸ್ತ್ರೀಲಿಂಗ)ಗಳಿಗೆ ಹಲವು ನಾಮಪದಗಳನ್ನು ಉಲ್ಲೇಖಿಸಬಹುದು (mother/father, tiger/tigress, alumnus/alumna, male/female). ಅರ್ಥಕ್ಕೆ ಸಂಬಂಧಿಸಿದಂತೆ, ನಾಮಪದಗಳನ್ನು ಅವುಗಳ ಸೂಚ್ಯಾರ್ಥ ಇಲ್ಲವೆ ಶಬ್ದಾರ್ಥಗಳ ಪ್ರಕಾರ ವರ್ಗೀಕರಿಸಬಹುದು: common nouns (ರೂಢನಾಮಗಳು) ('sugar,' 'maple,' 'syrup,' 'wood'), proper nouns (ಅಂಕಿತನಾಮಗಳು), ("Cyrus," "China"), concrete nouns () ("book," "laptop") ಮತ್ತು abstract nouns (ಅನ್ವರ್ಥನಾಮಗಳು) ("heat," "prejudice"). ಪರ್ಯಾಯವಾಗಿ, ಅವುಗಳನ್ನು ವ್ಯಾಕರಣದ ಪ್ರಕಾರ ಗುರುತಿಸಬಹುದು: count nouns (ಎಣಿಸಬಹುದಾದ ನಾಮಪದಗಳು) ('clock,' 'city,' 'colour') ಮತ್ತು non-count nouns (ಎಣಿಸಲಾಗದ ನಾಮಪದಗಳು) ('milk,' 'decor,' 'foliage'). ನಾಮಪದಗಳ ಗುರುತಿಸಲು ಸಹಾಯಕವಾಗುವ ಹಲವಾರು ವಾಕ್ಯರಚನೆಯ ನಿಯಮದ ಲಕ್ಷಣಗಳನ್ನು ಅನುಸರಿಸಲಾಗುತ್ತದೆ. ನಾಮಪದಗಳು (ಉದಾಹರಣೆಗೆ: ರೂಢನಾಮ 'cat') ಕೆಳಕಂಡಂತಿವೆ:
ನಾಮಪದ ಪದಗುಚ್ಛಗಳು (noun phrases) ವಾಕ್ಯಗಳೊಳಗೇ ವ್ಯಾಕರಣದ ಪ್ರಕಾರ ನಾಮಪದಗಳಾಗಿ ಕಾರ್ಯನಿರ್ವಹಿಸುವ ಪದಗುಚ್ಛಗಳಾಗಿವೆ. ಜೊತೆಗೆ, ನಾಮಪದಗಳು 'heads' ಅಥವಾ ನಾಮಪದ ಪದಗುಚ್ಛಗಳ ಮುಖ್ಯ ಪದಗಳಂತೆ ವರ್ತಿಸುತ್ತವೆ. ಉದಾಹರಣೆಗೆ (ಮುಖ್ಯಪದಗಳು ಎದ್ದುಕಾಣುವ ಅಕ್ಷರಗಳಲ್ಲಿ ನಮೂದಿಸಲಾಗಿವೆ):
ಪ್ರಧಾನ ಪದವು ಪರಿವರ್ತಕಗಳು (modifiers) , ಅಥವಾ ಕ್ರಿಯಾರ್ಥದ ಪರಿಪೂರಕಗಳು (complement) ಅಥವಾ ಎರಡನ್ನೂ ಸಹ ಹೊಂದಬಹುದು. ಪರಿವರ್ತಕಗಳು ಪ್ರಧಾನ ಪದದ ಮುಂಚೆ ಸಂಭವಿಸಬಹುದು ("The real raw-knuckle boys ...," ಅಥವಾ "The burnt-out ends ...") ಇವುಗಳನ್ನು pre-modifiers ಎನ್ನಲಾಗಿದೆ; ಅಥವಾ, ಮುಖ್ಯಪದದ ನಂತರ ಸಂಭವಿಸಬಹುದು ("who know what fighting means ...") ಇವುಗಳನ್ನು post-modifiers ಎನ್ನಲಾಗಿದೆ. ಉದಾಹರಣೆಗೆ: "The rough, seamy-faced, raw-boned College Servitor ..." ಉದಾಹರಣೆಗೆ, ಪರಿವರ್ತನಾ-ಪೂರ್ವ ಪದಗುಚ್ಛವು ('The') ಎಂಬ ಸ್ವರೂಪ ನಿರ್ಣಾಯಕಗಳನ್ನು, ('rough,' 'seamy-faced,' ...) ಎಂಬ ವಿಶೇಷಣಗಳು ಮತ್ತು ('College') ಇತರೆ ನಾಮಪದಗಳನ್ನು ಹೊಂದಿದೆ. ಪರಿಪೂರಕಗಳು (Complements) ಮುಖ್ಯಪದಗಳ ನಂತರವೂ ಸಹ ಸಂಭವಿಸುತ್ತದೆ. ಆದರೂ, ನಾಮಪದ ಪದಗುಚ್ಛದ ಅರ್ಥವನ್ನು ಪೂರ್ಣಗೊಳಿಸಲು ಅವುಗಳ ಅಗತ್ಯವಿದೆ (post-modifiers ಅಷ್ಟು ಅಲ್ಲ). ಉದಾಹರಣೆಗೆ (ಪರಿಪೂರಕಗಳನ್ನು ವಾಲಿದ ಅಕ್ಷರಗಳಲ್ಲಿ ನಮೂದಿಸಲಾಗಿದೆ; ಪ್ರಮುಖಪದಗಳನ್ನು ಎದ್ದುಕಾಣುವ ಅಕ್ಷರಗಳಲ್ಲಿ ನಮೂದಿಸಲಾಗಿದೆ):
ವಾಕ್ಯದೊಳಗಿನ, ನಾಮಪದದ ಪದಗುಚ್ಛವು ವ್ಯಾಕರಣ ವಿಷಯದ ಕರ್ತೃ, ಕರ್ಮ ಅಥವಾ ಪರಿಪೂರಕದ ಅಂಗವಾಗಿರಬಹುದು. ಉದಾಹರಣೆಗಳು (ನಾಮಪದ ಪದಗುಚ್ಛಗಳನ್ನು ವಾಲಿದ ಅಕ್ಷರಗಳಲ್ಲಿ ನಮೂದಿಸಲಾಗಿದೆ; ಪ್ರಮುಖ ಪದಗಳನ್ನು ಸ್ಥೂಲ ಅಕ್ಷರಗಳಲ್ಲಿ ನಮೂದಿಸಲಾಗಿದೆ):
ನಾಮಪದಗಳ ನಂತರ ಕ್ರಿಯಾಪದಗಳದ್ದು ಎರಡನೆಯ ಅತಿ ದೊಡ್ಡ ಪದಸಮೂಹದ ವರ್ಗವಾಗಿದೆ. ಕಾರ್ಟರ್ ಮತ್ತು ಮೆಕಾರ್ಥಿ ಪ್ರಕಾರ, ಕ್ರಿಯಾಪದಗಳು (verbs) 'ಕ್ರಿಯೆಗಳು, ಘಟನೆಗಳು, ಪ್ರಕ್ರಿಯೆಗಳು ಮತ್ತು ವಸ್ತುಸ್ಥಿತಿಗಳನ್ನು' ಸೂಚಿಸುತ್ತವೆ. ಹಾಗಾಗಿ, 'smile,' 'stab,' 'climb,' 'confront,' 'liquefy,' 'wake,' 'reflect' - ಇವೆಲ್ಲವೂ ಸಕರ್ಮಕ ಕ್ರಿಯಾಪದಗಳು (ತಪ್ಪು ಅಸಂಬದ್ಧ)(verbs). ಕೆಲವು ಅಂತ್ಯಪ್ರತ್ಯಯಗಳನ್ನು ಅಗಾಗ್ಗೆ ಕ್ರಿಯಾಪದಗಳೊಂದಿಗೆ ಜೋಡಿಸಲಾಗುತ್ತದೆ. ಉದಾಹರಣೆಗಳು: '-ate' ('formulate'), '-iate' ('inebriate'), '-ify' ('electrify') and '-ise' ('sermonise'). ಇದರಲ್ಲಿ ಅಪವಾದಗಳಿವೆ: 'chocolate' ಎಂಬುದು ನಾಮಪದ, 'immediate' ವಿಶೇಷಣ, 'prize' ನಾಮಪದವಾಗಬಹುದು ಮತ್ತು 'maize' ಸಹ ನಾಮಪದವಾಗಿದೆ. ಹೊಸ ಕ್ರಿಯಾಪದಗಳ ಸೃಷ್ಟಿಗೆ ಪೂರ್ವಪ್ರತ್ಯಯಗಳನ್ನು (Prefixes) ಬಳಸಬಹುದು. ಉದಾಹರಣೆಗೆ: 'un-' ('unmask'), 'out-' ('outlast'), 'over-' ('overtake') ಮತ್ತು 'under-' ('undervalue').(ಅಂದರೆ ವರ್ತಮಾನದ ಪ್ರಥಮ ಪುರುಷ ಪ್ರತ್ಯಯ ಬಳಕೆ ಮಾಡಲಾಗಿದೆ). ಹೀಗೆ ಪರಿವರ್ತನೆಯ ಮೂಲಕ ಕ್ರಿಯಾಪದಗಳಿಂದ ನಾಮಪದಗಳ ಸೃಷ್ಟಿ ಸಾಧ್ಯವೋ, ಇದರ ವಿರುದ್ಧಕ್ರಮವೂ ಸಹ ಸಾಧ್ಯ:
ವಿಶೇಷಣಗಳಿಂದ ಕ್ರಿಯಾಪದಗಳನ್ನು ರಚಿಸಬಹುದು:
ಮೂಲರೂಪ ಬದಲಾವಣೆಗೊಳ್ಳುವ ಕ್ರಿಯಾಪದಗಳು ಕ್ರಮಬದ್ಧವಲ್ಲದ ಕ್ರಿಯಾಪದಗಳಾಗಿರುತ್ತವೆ. ಪ್ರತಿಯೊಂದು ರೂಪಕ್ಕೂ ಹೊಂದುವಂತಹ ಅಂತ್ಯಗಳು ಯಾವಾಗಲೂ ಏಕರೂಪದ್ದಾಗಿರುವದಿಲ್ಲ. ಉದಾಹರಣೆಗಳು:
ವ್ಯಾಕರಣ ರೂಪಗಳ ಪ್ರತಿಯೊಂದು ವರ್ಗಕ್ಕೂ ವಿಭಿನ್ನ ರೂಪನಿಷ್ಪತ್ತಿ(ವಿಭಕ್ತಿ ಅಥವಾ ಆಖ್ಯಾತ) ಹೊಂದಿರುವ ಏಕೈಕ ಇಂಗ್ಲಿಷ್ ಕ್ರಿಯಾಪದ 'be'. ಮೂಲ ರೂಪ: be; ವರ್ತಮಾನ ರೂಪ: am, are; -s ರೂಪ: is; -ing ರೂಪ: being; ಭೂತಕಾಲ ರೂಪ: was, were; -ed ಕೃದಂತ: been. ;Type and characteristics (ವಿಧಗಳು ಮತ್ತು ವೈಶಿಷ್ಟ್ಯಗಳು)ಕ್ರಿಯಾಪದಗಳು (Verbs) ಮೂರು ವ್ಯಾಕರಣ ರೀತಿಗಳಲ್ಲಿ ಬರುತ್ತವೆ: lexical (ಶಬ್ದಕೋಶೀಯ), auxiliary (ಸಹಾಯಕ) ಮತ್ತು inflectional (ರೀತಿಸೂಚಕ/ಕ್ರಿಯಾ ಭಾವನಿರ್ದೇಶಕ). ಶಬ್ದಕೋಶೀಯ ಕ್ರಿಯಾಪದಗಳು ಮುಕ್ತ ವರ್ಗದ ಅಂಗವಾಗಿದ್ದು, ಬಹಳಷ್ಟು ಕ್ರಿಯಾಪದಗಳನ್ನು (ಸ್ಥಿತಿ, ಕ್ರಿಯೆ, ಪ್ರಕ್ರಿಯೆ ಮತ್ತು ಘಟನೆಗಳು) ಒಳಗೊಂಡಿರುತ್ತವೆ. ಉದಾಹರಣೆಗೆ, 'dive,' 'soar,' 'swoon,' 'revive,' 'breathe,' 'choke,' 'lament,' 'celebrate,' 'consider,' 'ignore' ಇವೆಲ್ಲವೂ ಶಬ್ದಕೋಶೀಯ ಕ್ರಿಯಾಪದಗಳು. ಸಹಾಯಕ ಕ್ರಿಯಾಪದಗಳು ಸಂಕುಚಿತ ವರ್ಗದ ಅಂಗವಾಗಿದ್ದು, ಕೇವಲ ಮೂರು ಶಬ್ದಗಳನ್ನು ಹೊಂದಿರುತ್ತವೆ: be, do, ಮತ್ತು have. ಸಹಾಯಕ ಕ್ರಿಯಾಪದಗಳು ಶಬ್ದಕೋಶೀಯ ಕ್ರಿಯಾಪದಗಳಾಗಿದ್ದರೂ ಸಹ, ಇತರೆ ಕ್ರಿಯಾಪದಗಳಿಗೆ ಹೆಚ್ಚಿನ ಮಾಹಿತಿ ಸೇರಿಸುವುದು ಅವುಗಳ ಮುಖ್ಯ ಕ್ರಿಯೆಯಾಗಿದೆ. ಈ ಮಾಹಿತಿಯು (a) aspect (progressive, perfect) (ಸ್ಥಿತಿ ಗತಿಸೂಚಕ, ಪೂರ್ಣವಾಚಕ), (b) passive voice (ಕರ್ಮಣಿ ಪ್ರಯೋಗ) ಮತ್ತು (c) clause type (interrogative, negative) (ವಾಕ್ಯಾಂಶ ವಿಧ) (ಪ್ರಶ್ನಾತ್ಮಕ, ನಕಾರಾತ್ಮಕ)) ಸೂಚಿಸುತ್ತದೆ. ಕೆಳಗಿನ ಉದಾಹರಣೆಗಳಲ್ಲಿ, ಸಹಾಯಕ ಕ್ರಿಯಾಪದವು ಎದ್ದುಕಾಣುವ ಅಕ್ಷರಗಳಲ್ಲಿ ಹಾಗೂ ಶಬ್ದಕೋಶೀಯ ಕ್ರಿಯಾಪದವು ವಾಲಿದ ಅಕ್ಷರಗಳಲ್ಲಿದೆ.
ಭಾವಸೂಚಕ ಕ್ರಿಯಾಪದಗಳು (Modal verbs) ವ್ಯಕ್ತಿ, ಸಂಖ್ಯೆ ಮತ್ತು ಕಾಲರೂಪಗಳಿಗೆ (tense) ರೂಪನಿಷ್ಪತ್ತಿ (inflect) ಮಾಡುವುದಿಲ್ಲ. ಉದಾಹರಣೆಗಳು:
ಕ್ರಿಯಾಪದಗಳೂ ಸಹ ಅವುಗಳನ್ನು ಗುರುತಿಸಲು ನೆರವಾಗುವ ಲಕ್ಷಣಗಳನ್ನು ಹೊಂದಿವೆ:
ಕ್ರಿಯಾಪದದ ಪದಗುಚ್ಛಗಳು ಸಂಪೂರ್ಣ ಕ್ರಿಯಾಪದಗಳಿಂದ ಕೂಡಿರುತ್ತವೆ. ಇವು ಶಬ್ದಕೋಶೀಯ, ಸಹಾಯಕ ಮತ್ತು ಭಾವಸೂಚಕ ಕ್ರಿಯಾಪದಗಳಾಗಬಹುದು. ಮುಖ್ಯಪದವು ಕ್ರಿಯಾಪದ ಪದಗುಚ್ಛದಲ್ಲಿನ ಮೊದಲ ಕ್ರಿಯಾಪದವಾಗಿದೆ. ಉದಾಹರಣೆ:
ಕ್ರಿಯಾಪದದ ಪದಗುಚ್ಛದಲ್ಲಿ ಭಾವಾರ್ಥ ಸೂಚಕವು ಮೊದಲು ಬರುತ್ತದೆ, ನಂತರ ಒಂದು ಅಥವಾ ಹಲವು ಸಹಾಯಕ ಕ್ರಿಯಾಪದಗಳು, ಆಂತ್ಯದಲ್ಲಿ ಪದಕೋಶೀಯ (ಮುಖ್ಯ) ಕ್ರಿಯಾಪದವು ಬರುತ್ತದೆ. ಕ್ರಿಯಾಪದ ಪದಗುಚ್ಛವು ರೀತಿಸೂಚಕ ಮತ್ತು ಸಹಾಯಕ ಕ್ರಿಯಾಪದಗಳ ಸಂಯುಕ್ತವನ್ನು ಹೊಂದಿದ್ದಲ್ಲಿ, ಇದು ಸಾಮಾನ್ಯವಾಗಿ ಈ ಕ್ರಮದಲ್ಲಿ ಜೋಡಣೆಯಾಗಿರುತ್ತದೆ: modal verb (ಭಾವ ಸೂಚಕ ಕ್ರಿಯಾಪದ) >> perfect (ಪೂರ್ಣವಾಚಕ) have >> progressive (ಗತಿಸೂಚಕ) be >> passive (ಕರ್ಮಣೀಪ್ರಯೋಗ) be >> Lexical verb (ಪದಕೋಶೀಯ ಕ್ರಿಯಾಪದ). ಉದಾಹರಣೆಗಳು:
ಕಾಲರೂಪದೊಂದಿಗೆ verb phrases (ಕ್ರಿಯಾಪದ ಪದಗುಚ್ಛಗಳು) ಬದಲಾಗಬಹುದು; ಹಾಗಾಗಿ ಅವುಗಳನ್ನು "tensed verb phrases (ಕಾಲರೂಪದ ಕ್ರಿಯಾಪದ ಪದಗುಚ್ಛಗಳು)" ಎನ್ನಲಾಗಿದೆ. ಉದಾಹರಣೆ:
ಹಲವು ಕಾಲರೂಪವಲ್ಲದ ಪ್ರಭೇದಗಳೂ ಸಹ ಇವೆ:
ಮೊದಲ ನಿರೂಪಣೆಯಲ್ಲಿ, 'practicing' ಎಂಬುದರ ಕಾಲಾವಧಿಯನ್ನು past (ಭೂತಕಾಲ) ಮುಖ್ಯ ವಾಕ್ಯಾಂಶದಲ್ಲಿರುವ "was"ನಿಂದ ನಿರ್ಣಯಿಸಲಾಗುತ್ತದೆ. ಎರಡನೆಯ ನಿರೂಪಣೆಯಲ್ಲಿ, "practicing"ನ ಕಾಲಾವಧಿಯನ್ನು (present (ವರ್ತಮಾನ) ಮತ್ತು future (ಭವಿಷ್ಯ) ಮುಖ್ಯ ವಾಕ್ಯಾಂಶದಲ್ಲಿರುವ "will in time"ನಿಂದ ನಿರ್ಣಯಿಸಲಾಗುತ್ತದೆ.
ಕ್ರಿಯಾಪದದ ಪದಗುಚ್ಛಗಳು (Verb phrases) ವಾಕ್ಯದ ಎರಡು ಭಾಗದಲ್ಲಿನ ಧಾತು ಸ್ಥಿತಿಗಳನ್ನು ಸೂಚಿಸಬಹುದು: progressive (ಗತಿಸೂಚಕ) ಮತ್ತು perfect (ಪೂರ್ಣವಾಚಕ) . ಸ್ಥಿತಿಯು (aspect) ಮಾತನಾಡುವವರ ಸಮಯದ ಗ್ರಹಿಕೆಯ ಕುರಿತು ಹೆಚ್ಚಿನ ಮಾಹಿತಿ ನೀಡುತ್ತದೆ. ;Progressive aspect (ಗತಿಸೂಚಕ ಸ್ಥಿತಿ)ಗತಿಸೂಚಕ ಸ್ಥಿತಿಯು ಸಹಾಯಕ be ರೂಪ ಮತ್ತು ಪದಕೋಶೀಯ ಕ್ರಿಯಾಪದ -ing ಪ್ರತ್ಯಯ ರೂಪವನ್ನು ಹೊಂದಿರುತ್ತದೆ. ಉದಾಹರಣೆಗಳು:
"
ಅಂತಿಮವಾಗಿ, ಗತಿಸೂಚಕ ಮತ್ತು ಪೂರ್ಣವಾಚಕ ಇವೆರಡೂ ಸ್ಥಿತಿಗಳನ್ನು ಕ್ರಿಯಾಪದ ಪದಗುಚ್ಛದಲ್ಲಿ ಸೇರಿಸಬಹುದು: "They've been laughing so hard that their sides hurt."
ಕರ್ಮಣಿ ಪ್ರಯೋಗವು (passive voice ) ಘಟನೆಯೊಂದರಲ್ಲಿ ವಿವಿಧ ಭಾಗವಹಿಸುವವರ ಪಾತ್ರಗಳ ಕುರಿತು ಮಾಹಿತಿ ನೀಡುತ್ತದೆ. ಇದು ಸಹಾಯಕ ಕ್ರಿಯಾಪದ "be" ಹಾಗೂ ಪದಕೋಶೀಯ ಕ್ರಿಯಾಪದದ "-ed" ಕೃದಂತದೊಂದಿಗೆ ರಚನೆಯಾಗುತ್ತದೆ. ಉದಾಹರಣೆಗಳು:
ಕ್ರಿಯಾಪದ ಪದಗುಚ್ಛವು ಕ್ರಿಯಾರ್ಥ ಸೂಚಿಸುವ ಧಾತುರೂಪವನ್ನೂ ಸಹ ಸೂಚಿಸಬಹುದು. ಇದು 'ಘಟನೆಗಳ ವಾಸ್ತವಿಕ ಅಥವಾ ಅನ್ಯಥಾ ಸ್ಥಿತಿ'ಯನ್ನು ಸೂಚಿಸಬಹುದು. ಇಂಗ್ಲಿಷ್ ಭಾಷೆಯಲ್ಲಿ ಮೂರು ವಿಧಗಳ ಧಾತುರೂಪಗಳಿವೆ: indicative (ನಿಶ್ಚಯಾರ್ಥಕ), imperative (ಆಜ್ಞಾರ್ಥಕ) ಮತ್ತು Mood (ಸಂ-ಭಾವನಾರ್ಥಕ) ;Indicative mood (ನಿಶ್ಚಯಾರ್ಥಕ)ಇಂಗ್ಲಿಷ್ ಭಾಷೆಯಲ್ಲಿ ನಿಶ್ಚಯಾರ್ಥಕ ರೂಪವು ಸರ್ವೇಸಾಮಾನ್ಯ. ಇದು ವಾಸ್ತವಿಕ ರೂಪದ್ದಾಗಿದ್ದು, ವ್ಯಕ್ತಿ, ಕಾಲರೂಪ, ಸಂಖ್ಯೆ, ಸ್ಥಿತಿ, ಕ್ರಿಯಾರೀತಿಗಳ ವಿಭಿನ್ನ ಆಯ್ಕೆಗಳನ್ನು ಒಳಗೊಂಡಿರುವ ಬಹಳಷ್ಟು ರಚನೆಗಳು ನಿಶ್ಚಯಾರ್ಥಕ ರೂಪದ್ದಾಗಿವೆ. ಉದಾಹರಣೆಗಳು:
ಆಜ್ಞಾರ್ಥಕ ರೂಪವು ಅವಾಸ್ತವಿಕ ರೂಪವಾಗಿದ್ದು, ನಿರ್ದೇಶನ ನೀಡಲು ಬಳಸಲಾಗುತ್ತದೆ:
ಇದು ಸಹ ಅವಾಸ್ತವಿಕ ರೂಪವಾಗಿದ್ದು, ಬೇಡಿಕೆ, ಆಶಯಗಳನ್ನು ಉಲ್ಲೇಖಿಸುತ್ತದೆ. ಕ್ರಿಯಾಪದದ ಆಧಾರರೂಪವನ್ನು ಯಾವುದೇ ರೂಪನಿಷ್ಪತ್ತಿಯಿಲ್ಲದೇ(ರೂಪ ಬದಲಾವಣೆ ಇಲ್ಲದೆ) ಬಳಸುತ್ತದೆ.' ಇಂಗ್ಲಿಷ್ನಲ್ಲಿ ಇದು ಬಹಳ ಅಪರೂಪ, "demand," "request," "suggest," "ask," "plead," "pray," "insist," ಇತ್ಯಾದಿ ಪದಗಳ ನಂತರವೇ ಬಳಸಲಾಗುತ್ತದೆ. ಉದಾಹರಣೆಗಳು:
ಕಾರ್ಟರ್ ಮತ್ತು ಮೆಕಾರ್ಥಿ ಪ್ರಕಾರ, 'ನಾಮಪದ ಅಥವಾ ಸರ್ವನಾಮವೊಂದಕ್ಕೆ ಸೇರಿಸಲಾದ ಗುಣಗಳು, ಲಕ್ಷಣಗಳು ಮತ್ತು ಸ್ಥಿತಿಗಳನ್ನು ವಿಶೇಷಣಗಳು ವಿವರಿಸುತ್ತವೆ.' ನಾಮಪದಗಳು ಮತ್ತು ಕ್ರಿಯಾಪದಗಳಂತೆಯೇ, ವಿಶೇಷಣಗಳನ್ನು ಅದರ ಅಂಶಗಳ ರೂಪದ ಆಧಾರದ ಮೂಲಕ ಗುರುತಿಸಲಾಗದು. ಆದರೂ, ನಾಮಪದಗಳಿಗೆ ಕೆಲವು ಅಂತ್ಯ ಪ್ರತ್ಯಯಗಳನ್ನು ಸೇರಿಸುವುದರ ಮೂಲಕ ವಿಶೇಷಣಗಳ ರಚನೆಯಾಗುತ್ತವೆ. ಉದಾಹರಣೆಗಳು: "-al" ("habitual," "multidimensional," "visceral"), "-ful" ("blissful," "pitiful," "woeful"), "-ic" ("atomic," "gigantic," "pedantic"), "-ish" ("impish," "peckish," "youngish"), "-ous" ("fabulous," "hazardous"). As with nouns and verbs, there are exceptions: ನಾಮಪದಗಳು ಮತ್ತು ಕ್ರಿಯಾಪದಗಳಂತೆ, ಕೆಲವು ಅಪವಾದಗಳಿವೆ: "homosexual" ನಾಮಪದವಾಗಬಹುದು, "earful" ನಾಮಪದವಾಗಿದೆ, "anaesthetic" ನಾಮಪದವಾಗಬಹುದು, "brandish" ಕ್ರಿಯಾಪದವಾಗಿದೆ. ಇತರೆ ವಿಶೇಷಣಗಳಿಗೆ ಅಂತ್ಯ ಪ್ರತ್ಯಯಗಳನ್ನು ಸೇರಿಸಿ ಅಥವಾ ಇನ್ನೂ ಸಾಮಾನ್ಯವಾದ ಒಂದು ಪೂರ್ವಪ್ರತ್ಯಯ ಸೇರಿಸುವುದರ ಮೂಲಕ ವಿಶೇಷಣಗಳನ್ನು ರಚಿಸಬಹುದು: weakish, implacable, disloyal, irredeemable, unforeseen. ಕ್ರಿಯಾಪದಕ್ಕೆ "a" ಪೂರ್ವಪ್ರತ್ಯಯವನ್ನು ಸೇರಿಸುವುದರ ಮೂಲಕ ಹಲವು ವಿಶೇಷಣಗಳನ್ನು ರಚಿಸಬಹುದು: "adrift," "astride," "awry.";Gradability ಶ್ರೇಣಿಕೃತಗೊಳಿಸುವ(ವಿಂಗಡಿಸುವ) ಸಾಧ್ಯತೆ ವಿಶೇಷಣಗಳು ಎರಡು ರೀತಿಗಳಲ್ಲಿವೆ: ಶ್ರೇಣಿಯಾಗಿಸಬಹುದಾದ ವಿಶೇಷಣಗಳು (gradable adjectives) ಮತ್ತು ಶ್ರೇಣಿಯಾಗಿಸಲಾಗದ ವಿಶೇಷಣಗಳು (non-gradable adjectives) ಶ್ರೇಣಿಯಾಗಿಸಬಹುದಾದ ವಿಶೇಷಣಗಳಲ್ಲಿ, ಅವುಗಳೊಂದಿಗಿನ ಗುಣಗಳು ಅಥವಾ ಸ್ವಭಾವ ಲಕ್ಷಣಗಳು ಹಂತ-ಹಂತಗಳಲ್ಲಿರುತ್ತವೆ. ಉದಾಹರಣೆಗೆ, "hot" ಎಂಬ ವಿಶೇಷಣಕ್ಕೆ ನಾವು ಹೀಗೆ ಹೇಳಬಹುದು: not at all hot (ಬಿಸಿಯೇ ಇಲ್ಲ), ever so slightly hot (ಅತ್ಯಲ್ಪ ಬಿಸಿ), only just hot (ಸ್ವಲ್ಪ ಬಿಸಿ), quite hot (ಸಾಕಷ್ಟು ಬಿಸಿ), very hot (ಬಹಳ ಬಿಸಿ), extremely hot (ವಿಪರೀತ ಬಿಸಿ), dangerously hot (ಅಪಾಯಕರವಾಗಿ ಬಿಸಿ), ಇತ್ಯಾದಿ. ಇದರಿಂದಾಗಿ, "hot" ಎಂಬುದು ಶ್ರೇಣಿಯಾಗಿಸಬಹುದಾದ ವಿಶೇಷಣ. ಶ್ರೇಣಿಯಾಗಿಸಬಹುದಾದ ವಿಶೇಷಣಗಳು ಸಾಮಾನ್ಯವಾಗಿ ವಿರುದ್ಧಾರ್ಥಕ ಪದಗಳನ್ನು ಹೊಂದಿರುತ್ತವೆ: hot/cold, hard/soft, smart/dumb, light/heavy. ಕೆಲವು ವಿಶೇಷಣಗಳನ್ನು ಶ್ರೇಣಿಯಾಗಿಸಲು ಅಥವಾ ಪರಿವರ್ತನೆ ಮಾಡಲು ಯಾವುದೇ ಆಸ್ಪದವಿರುವುದಿಲ್ಲ. ಇಂತಹವನ್ನು ಶ್ರೇಣಿಯಾಗಿಸಲಾಗದ ವಿಶೇಷಣಗಳು ಎನ್ನಲಾಗಿದೆ. ಉದಾಹರಣೆಗೆ: pregnant, married, incarcerated, condemned, adolescent (ವಿಶೇಷಣವಾಗಿ), dead, ಇತ್ಯಾದಿ. ಸಾಂಕೇತಿಕ ಅಥವಾ ಸಾಹಿತ್ಯದ ಭಾಷೆಯಲ್ಲಿ, ಪ್ರಕ್ರಿಯೆಯೊಂದನ್ನು ಒತ್ತಿ ಹೇಳಲು, ಶ್ರೇಣಿಯಾಗಿಸಲಾಗದ ವಿಶೇಷಣವನ್ನು ಕೆಲವೊಮ್ಮೆ ಶ್ರೇಣಿಯಾಗಿಸಬಹುದು ಎಂದು ಪರಿಗಣಿಸಬಹುದಾಗಿದೆ:
ಶ್ರೇಣಿಯಾಗಿಸಲಾಗದ(ವರ್ಗೀಕರಿಸಲಾಗದ) ವಿಶೇಷಣವು ತಾನು ಶ್ರೇಣಿಯಾಗಿಸಬಹುದಾದ ಇನ್ನೊಂದು ಅಧಿಕಾರ್ಥತೆಯಿರಬಹುದು. ಉದಾಹರಣೆಗೆ, ಶಬ್ದಗಳಿಗೆ "dead" ಎಂಬ ವಿಶೇಷಣವನ್ನು ಅನ್ವಯಿಸಿದಲ್ಲಿ ಅದು 'ಮಂದ' ಅಥವಾ 'ಕಂಪನಶೀಲವಲ್ಲ' ಎಂಬ ಅರ್ಥವನ್ನು ನೀಡಬಹುದು. ಈ ಅರ್ಥದಲ್ಲಿ, ಇದನ್ನು ಶ್ರೇಣಿಯಾಗಿಸಬಹುದಾದ ವಿಶೇಷಣವಾಗಿ ಬಳಸಲಾಗಿದೆ:
ಶ್ರೇಣಿಯಾಗಿಸಬಹುದಾದ ವಿಶೇಷಣಗಳು ಅಧಿಕ ಗುಣಗಳ ತೋರಿಕೆ (comparative) ಮತ್ತು ಅತ್ಯುನ್ನತ ಮಟ್ಟ ತೋರುವ ಅಥವಾ ತಮರೂಪಗಳಲ್ಲಿ (superlative) ಸಂಭವಿಸಬಹುದು. ಹಲವು ಸಾಮಾನ್ಯ ವಿಶೇಷಣಗಳ ಮೂಲರೂಪಗಳಿಗೆ, "-er" (ತರರೂಪ) and "-est" (ತಮರೂಪ) ಸೇರಿಸಿ ರಚಿಸಬಹುದು: cold, colder, coldest; hot, hotter, hottest; dry, drier, driest ಇತ್ಯಾದಿ; ಆದರೂ, ಇತರೆ ವಿಶೇಷಣಗಳಿಗೆ ಅಗತ್ಯ ಶ್ರೇಣಿಗಳನ್ನು ನೀಡಲು "more" ಮತ್ತು "most" ತರರೂಪ ಮತ್ತು ತಮರೂಪಗಳ ಅಗತ್ಯವಿದೆ: more apparent, most apparent; more iconic, most iconic; more hazardous, most hazardous. ಕೆಲವು ಶ್ರೇಣಿಯಾಗಬಹುದಾದ ವಿಶೇಷಣಗಳ ರೂಪದಲ್ಲಿ ಬದಲಾವಣೆಯುಂಟು: good, better, best; bad, worse, worst; little, less, least; some/many, more, most.
ವಿಶೇಷಣ ಪದಗುಚ್ಛ ವು ಒಂದೇ ಒಂದು ವಿಶೇಷಣ, ಅಥವಾ, ಪರಿವರ್ತಿತ ಯಾ ಪರಿಪೂರಕಗೊಂಡಿರುವ ಒಂದು ವಿಶೇಷಣವನ್ನು ಹೊಂದಿರಬಹುದು. ವಿಶೇಷಣಗಳು ಸಾಮಾನ್ಯವಾಗಿ ಕ್ರಿಯಾವಿಶೇಷಣ ಪದಗುಚ್ಛಗಳಿಂದ ಪರಿವರ್ತಿತವಾಗಿರುತ್ತವೆ (ಎದ್ದುಕಾಣುವ ಅಕ್ಷರಗಳಲ್ಲಿ ಕ್ರಿಯಾವಿಶೇಷಣ; ವಾಲಿರುವ ಅಕ್ಷರಗಳಲ್ಲಿ ವಿಶೇಷಣ):
ವಿಶೇಷಣ ಪದಗುಚ್ಛವು, ವಿಶೇಷಣ, ತದನಂತರ (ಸಾಮಾನ್ಯವಾಗಿ ಉಪಸರ್ಗ ಪದಗುಚ್ಛ ರೂಪದಲ್ಲಿರುವ) ಪರಿಪೂರಕ (complement) ಅಥವಾ ಒಂದು "that" ವಾಕ್ಯಾಂಶವನ್ನು ಸಹ ಹೊಂದಬಹುದು. ವಿವಿಧ ವಿಶೇಷಣಗಳಿಗೆ ವಿವಿಧ ಕ್ರಿಯಾರ್ಥಪೂರಕ ಮಾದರಿಗಳ ಅಗತ್ಯವುಂಟು (ವಾಲಿರುವ ಅಕ್ಷರಗಳಲ್ಲಿ ವಿಶೇಷಣ; ಎದ್ದುಕಾಣುವ ಅಕ್ಷರಗಳಲ್ಲಿ ಕ್ರಿಯಾಪೂರಕಗಳು):
ವಿಶೇಷಣ ಪದಗುಚ್ಛದಲ್ಲಿರುವ "that" ವಾಕ್ಯಾಂಶದ ಉದಾಹರಣೆಗಳು (ವಾಲಿರುವ ಅಕ್ಷರಗಳಲ್ಲಿ ವಿಶೇಷಣ; ಎದ್ದುಕಾಣುವ ಅಕ್ಷರಗಳಲ್ಲಿ ವಾಕ್ಯಾಂಶ):
ವಿಶೇಷಣ ಪದಗುಚ್ಛವು, ಪರಿವರ್ತನ-ಪೂರ್ವವನ್ನು ಕ್ರಿಯಾವಿಶೇಷಣ ಪದಗುಚ್ಛದಿಂದ, ಹಾಗೂ ಪರಿವರ್ತನ-ನಂತರವನ್ನು ಪರಿಪೂರಕದಿಂದ ಜೋಡಿಸಬಹುದು (ವಿಶೇಷಣಗಳು ವಾಲಿದ ಅಕ್ಷರಗಳಲ್ಲಿ ಹಾಗೂ ಪರಿಪೂರ್ವಕವನ್ನು ಎದ್ದುಕಾಣುವ ಅಕ್ಷರಗಳಲ್ಲಿ):
ವಿಶೇಷಣ ಪದಗುಚ್ಛವು ನಾಮಪದ ಅಥವಾ ಸರ್ವನಾಮವನ್ನು ಬದಲಿಸಿದಾಗ ಅದು ಗುಣಸೂಚಕ (attributive) ಆಗುತ್ತದೆ (ಎದ್ದುಕಾಣುವ ಅಕ್ಷರಗಳಲ್ಲಿ ವಿಶೇಷಣ ಪದಗುಚ್ಛ; ವಾಲಿರುವ ಅಕ್ಷರಗಳಲ್ಲಿ ನಾಮಪದ):
ವಾಕ್ಯದ ಆಖ್ಯಾತದಲ್ಲಿರುವ ವಿಶೇಷ ಗುಣವಾಚಕ (predicate) ವಿಶೇಷಣ ಪದಗುಚ್ಛವು ಸಂಭವಿಸಿದಲ್ಲಿ ಅದು ಆಖ್ಯಾತ (predicative) ಎನ್ನಲಾಗಿದೆ (ವಿಶೇಷಣ ಪದಗುಚ್ಛವು ಎದ್ದುಕಾಣುವ ಅಕ್ಷರಗಳಲ್ಲಿ):
ಕಾರ್ಟರ್ ಮತ್ತು ಮೆಕಾರ್ಥಿ ಪ್ರಕಾರ, ಕ್ರಿಯಾವಿಶೇಷಣಗಳು 'ವಿಶಾಲ ತಳಹದಿಯ ಮೇಲೆ ಕಾರ್ಯಗಳನ್ನು ಮಾಡಬಲ್ಲ ಪದಗಳ ವರ್ಗವಾಗಿವೆ. ಸಮಯ, ನಡವಳಿಕೆ, ಸ್ಥಳ, ಶ್ರೇಣಿ ಮತ್ತು ಘಟನೆಯ ಪುನರಾವರ್ತನ, ಕ್ರಿಯೆ ಅಥವಾ ಪ್ರಕ್ರಿಯೆ - ಇವೆಲ್ಲ ಸೂಚಿಸಲು ಕ್ರಿಯಾವಿಶೇಷಣಗಳು ವಿಶಿಷ್ಟವಾಗಿ ಮುಖ್ಯವೆನಿಸಿವೆ.' ಅವುಗಳು ಕ್ರಿಯಾಪದ, ವಿಶೇಷಣ ಅಥವಾ ಇತರೆ ಕ್ರಿಯಾ ವಿಶೇಷಣಗಳನ್ನು ಪರಿವರ್ತಿಸುತ್ತವೆ. ವಿಶೇಷಣಗಳು ಮತ್ತು ಕ್ರಿಯಾವಿಶೇಷಣಗಳು ಆಗಾಗ್ಗೆ ಅದೇ ಪದದಿಂದ ಸೃಷ್ಠಿಯಾಗುತ್ತವೆ. ಅವುಗಳಿಗೆ ಹೊಂದಿಕೊಳ್ಳುವ ವಿಶೇಷಣ ರೂಪಗಳಿಗೆ "-ly" ಸೇರಿಸುವುದರ ಮೂಲಕ ಕ್ರಿಯಾವಿಶೇಷಣಗಳಲ್ಲಿ ಅಸಂಖ್ಯಾತ ಪದಗಳು ರಚನೆಯಾಗುತ್ತವೆ. ಈ ವಿಶೇಷಣಗಳನ್ನು ಗಮನಿಸಿ: "habitual," "pitiful," "impish." ಕ್ರಿಯಾವಿಶೇಷಣಗಳನ್ನು ರಚಿಸಲು ನಾವು ಇವುಗಳನ್ನು ಬಳಸಬಹುದು:
ಕ್ರಿಯಾವಿಶೇಷಣಗಳಲ್ಲಿ ಸಾಮಾನ್ಯವಾಗಿ ಕಂಡುಬಂದ ಅಂತ್ಯದ ಪ್ರತ್ಯಯಗಳೆಂದರೆ "-ward(s)" ಮತ್ತು "-wise":
ಕೆಲವು ಕ್ರಿಯಾವಿಶೇಷಣಗಳು ವಿಶೇಷಣಗಳಂತೆಯೇ ರೂಪಗಳನ್ನು ಹೊಂದಿವೆ:
ಕೆಲವು ಕ್ರಿಯಾವಿಶೇಷಣಗಳು ವಿಶೇಷಣಗಳಿಗೆ ಸಂಬಂಧಿಸಿರುವುದಿಲ್ಲ:
... would she heave one little sigh to see a bright young life so rudely blighted, ...?"
ಕೆಲವು ಕ್ರಿಯಾವಿಶೇಷಣಗಳು ವಿಶೇಷಣದ ತರರೂಪ ಮತ್ತು ತಮರೂಪಗಳಿಗೆ ರೂಪನಿಷ್ಪತ್ತಿಯಾಗುತ್ತವೆ:
ವಾಕ್ಯದೊಳಗೇ ಸಾಮೂಹಿಕ ಕ್ರಿಯಾವಿಶೇಷಣದಂತೆ ವರ್ತಿಸುವ ಪದಗುಚ್ಛವೇ ಕ್ರಿಯಾವಿಶೇಷಣ ಪದಗುಚ್ಛ. ಇನ್ನೊಂದು ರೀತಿಯಲ್ಲಿ ಹೇಳಬೇಕಾದರೆ, ಇದು ಕ್ರಿಯಾಪದ (ಅಥವಾ ಕ್ರಿಯಾಪದ ಪದಗುಚ್ಛ), ವಿಶೇಷಣ (ಅಥವಾ ವಿಶೇಷಣ ಪದಗುಚ್ಛ), ಅಥವಾ ಕ್ರಿಯಾವಿಶೇಷಣವನ್ನು ಪರಿವರ್ತಿಸುತ್ತದೆ. ಕ್ರಿಯಾವಿಶೇಷಣ ಪದಗುಚ್ಛದ ಮುಖ್ಯಪದವು (ರೋಮನ್ ಬೋಲ್ಡ್ಫೇಸ್ ಅಕ್ಷರಗಳಲ್ಲಿದೆ) ಕ್ರಿಯಾವಿಶೇಷಣವಾಗಿದ್ದು, ಇನ್ನೊಂದು ಕ್ರಿಯಾವಿಶೇಷಣದಿಂದ ಪರಿವರ್ತಿತವಾಗಬಹುದು (ಇಟಾಲಿಕ್ಸ್ ಬೋಲ್ಡ್ಫೇಸ್ ಅಕ್ಷರಗಳಲ್ಲಿದೆ):
ಕ್ರಿಯಾವಿಶೇಷಣದ ಪದಗುಚ್ಛವು "be" ಎಂಬ ಕ್ರಿಯಾಪದದ ಪೂರಕದ ಅಂಶವಾಗಬಹುದು. ಅದು ಸಾಮಾನ್ಯವಾಗಿ ಸ್ಥಳವನ್ನು ಸೂಚಿಸುತ್ತದೆ (ಕ್ರಿಯಾವಿಶೇಷಣ ಪದಗುಚ್ಛವು ಎದ್ದುಕಾಣುವ ಅಕ್ಷರಗಳಲ್ಲಿ; "be"ನ ರೂಪವು ವಾಲಿರುವ ಅಕ್ಷರಗಳಲ್ಲಿ):
ಕ್ರಿಯಾವಿಶೇಷಣ ಪದಗುಚ್ಛಗಳು ಆಗ್ಗಿಂದಾಗ್ಗೆ ಕ್ರಿಯಾಪದಗಳ ಪರಿವರ್ತಕಗಳಾಗಿರುತ್ತವೆ:
ಕ್ರಿಯಾವಿಶೇಷಣ ಪದಗುಚ್ಛಗಳು ಇತರೆ ವಿಶೇಷಣಗಳು ಮತ್ತು ಇತರೆ ಕ್ರಿಯಾವಿಶೇಷಣಗಳನ್ನು ಆಗಾಗ್ಗೆ ಪರಿವರ್ತಿಸುತ್ತವೆ (ಪರಿವರ್ತಕ ಎದ್ದುಕಾಣುವ ಅಕ್ಷರಗಳಲ್ಲಿ; ಪರಿವರ್ತಿತವಾದದ್ದು ವಾಲಿರುವ ಅಕ್ಷರಗಳಲ್ಲಿ):
ಕ್ರಿಯಾವಿಶೇಷಣ ಪದಗುಚ್ಛಗಳು ನಾಮಪದ ಪದಗುಚ್ಛಗಳ (ಅಥವಾ ಸರ್ವನಾಮ ಪದಗುಚ್ಛಗಳ) ಹಾಗೂ ಉಪಸರ್ಗದ ಪದಗುಚ್ಛಗಳ ಪರಿವರ್ತಕಗಳಾಗಬಹುದು (ಕ್ರಿಯಾವಿಶೇಷಣ ಪದಗುಚ್ಛಗಳು ಎದ್ದುಕಾಣುವ ಅಕ್ಷರಗಳಲ್ಲಿ; ಪರಿವರ್ತಿತ ಪದಗುಚ್ಛಗಳು ವಾಲಿರುವ ಅಕ್ಷರಗಳಲ್ಲಿ):
ಕ್ರಿಯಾವಿಶೇಷಣಗಳು ಸ್ವರೂಪ ನಿರ್ಣಾಯಕಗಳನ್ನೂ ಸಹ ಪರಿವರ್ತಿಸುತ್ತವೆ (ಪರಿವರ್ತಕಗಳು ಎದ್ದುಕಾಣುವ ಅಕ್ಷರಗಳಲ್ಲಿ; ಪರಿವರ್ತಿತಗಳು ವಾಲಿದ ಅಕ್ಷರಗಳಲ್ಲಿ):
ಕಾರ್ಟರ್ ಮತ್ತು ಮೆಕಾರ್ಥಿ ಪ್ರಕಾರ, 'ಒಂದು ಕ್ರಿಯೆ, ಘಟನೆ, ಪ್ರಕ್ರಿಯೆಯ ಕುರಿತು ಸಮಯ, ಸ್ಥಳ, ವಿಧಾನ,ನಡವಳಿಕೆ ಮತ್ತು ಶ್ರೇಣಿ ಕುರಿತು ಮಾಹಿತಿ ನೀಡುವುದರ ಜೊತೆಗೆ, ಕ್ರಿಯಾವಿಶೇಷಣಗಳು ಟೀಕಾ-ಟಿಪ್ಪಣಿಯನ್ನು ಸಹ ಸೂಚಿಸುತ್ತದೆ; ಆ ಇಡೀ ವಾಕ್ಯದತ್ತ ಮಾತನಾಡುವ ವ್ಯಕ್ತಿಯ ಧೋರಣೆ ಮತ್ತು ದೃಷ್ಟಿಕೋನವನ್ನು ಇಲ್ಲಿ ಸೂಚಿಸಬಹುದು.' ಉದಾಹರಣೆಗಳು:
ಕ್ರಿಯಾವಿಶೇಷಣದ ಪದಗುಚ್ಛಗಳು ವಾಕ್ಯದಲ್ಲಿರುವ ಎರಡು ವಾಕ್ಯಾಂಶಗಳ ಅಥವಾ ಉಪವಾಕ್ಯಗಳ ನಡುವಿನ ಸಂಬಂಧವನ್ನು ಸೂಚಿಸುತ್ತವೆ. ಇಂತಹ ಕ್ರಿಯಾವಿಶೇಷಣಗಳನ್ನು ಸಾಮಾನ್ಯವಾಗಿ 'linking adverbs (ಸಂಪರ್ಕ ಅಥವಾ ಜೋಡಣಾ ಕ್ರಿಯಾವಿಶೇಷಣಗಳು)' ಎನ್ನಲಾಗುತ್ತದೆ. ಉದಾಹರಣೆ:
ಉಪಸರ್ಗಗಳು ಒಂದು ಸಮಯದಲ್ಲಿ ನಡೆಯುವ ಎರಡು ಘಟನೆಗಳು, ಅಥವಾ, ಇಬ್ಬರು ವ್ಯಕ್ತಿಗಳ, ಅಥವಾ, ಎರಡು ವಸ್ತುಗಳ ನಡುವಿನ ವಿಸ್ತಾರ ಸಂಬಂಧವನ್ನು ನಿರೂಪಿಸುತ್ತವೆ. ಇವು ಸಂಕುಚಿತ ವರ್ಗದ ಅಂಶವಾಗಿರುತ್ತವೆ. ಎರಡು ಅಸ್ತಿತ್ವಗಳ ನಡುವಿನ ಆಮೂರ್ತ ಸಂಬಂಧಗಳನ್ನು ಸಹ ಇದು ನಿರೂಪಿಸುತ್ತವೆ: ಉದಾಹರಣೆಗಳು:
ಉಪಸರ್ಗಗಳೊಂದಿಗೆ ಉಪಸರ್ಗದ ಪರಿಪೂರಕಗಳಿರುತ್ತವೆ. ಇವು ಸಾಮಾನ್ಯವಾಗಿ ನಾಮಪದಕ್ಕೆ ಸಂಬಂಧಿಸಿದ ಪದಗುಚ್ಛಗಳಾಗಿರುತ್ತವೆ. ಮೇಲಿನ ಉದಾಹರಣೆಗಳಲ್ಲಿ, ಉಪಸರ್ಗದ ಪರಿಪೂರಕಗಳು ಹೀಗಿವೆ:
ಉಪಸರ್ಗವು ತನ್ನ ಕ್ರಿಯಾರ್ಥಪೂರಕದೊಂದಿಗೆ ಸೇರಿಕೊಂಡಾಗ ಉಪಸರ್ಗದ ಪದಗುಚ್ಛದ ರಚನೆಯಾಗುತ್ತದೆ. (ಕ್ರಿಯಾಪದದೊಂದಿಗೆ ಸಹಕಾರಿಯಾಗಿ ವಾಕ್ಯ ರಚನೆ ಹಾಗು ಕ್ರಿಯೆಯಲ್ಲಿ ಭಾಗಿಯಾಗುವುದು) ಮೇಲಿನ ಉದಾಹರಣೆಗಳಲ್ಲಿ, ಉಪಸರ್ಗದ ಪದಗುಚ್ಛಗಳು ಹೀಗಿವೆ:
ಕಾರ್ಟರ್ ಮತ್ತು ಮೆಕಾರ್ಥಿ ಪ್ರಕಾರ, 'ಸಂಬಂಧಾವ್ಯಯಗಳು; (Conjunctions) ಪದಗುಚ್ಛಗಳು, ವಾಕ್ಯಾಂಶಗಳು ಮತ್ತು ವಾಕ್ಯಗಳ ನಡುವೆ ವಿವಿಧ ತಾರ್ಕಿಕ ಸಂಬಂಧಗಳನ್ನು ಸೂಚಿಸುತ್ತವೆ.' ಎರಡು ವಿಧಗಳ ಸಂಬಂಧಾವ್ಯಯಗಳಿವೆ: ಸಮಭಾಗಿತ್ವ ಸ್ಥಾನದ ಸಂಬಂಧಾವ್ಯಯಗಳು (coordinating conjunctions) ಮತ್ತು ಅಧೀನಸ್ಥಾನದ ಸಂಬಂಧಾವ್ಯಯಗಳು (subordinating conjunctions).
ಸಮಾನಸ್ಥಾನದ ಸಂಬಂಧಾವ್ಯಯಗಳು 'ಸಮರೂಪದ ವ್ಯಾಕರಣ ನಿಯಮಗಳ ಹೊಂದಿರುವ ಅಂಶಗಳನ್ನು' ಜೋಡಿಸುತ್ತವೆ. ಸಂಬಂಧಿತ ಅಂಶಗಳು ಒಂದು ಪೂರ್ವಪ್ರತ್ಯಯದಿಂದ ಹಿಡಿದು ಇಡೀ ವಾಕ್ಯದ ವರೆಗೂ ಇರಬಹುದು. ಉದಾಹರಣೆಗಳು:
correlative conjunction (ಜತೆಬಳಕೆಯ ಸಂಬಂಧಾವ್ಯಯ) ರಚನೆಗೆ ಬೇಕಾದ ಅಂಶಗಳ ಒಂದು ಜೊತೆಯಾಗಿದೆ, ಇದರಲ್ಲಿ ಪ್ರತಿಯೊಂದು ಅಂಶವೂ ಸುಸಂಘಟಿತವಾಗಬೇಕಾದ ವ್ಯಾಕರಣದ ಅಂಶದೊಂದಿಗೆ ಸಂಬಂಧಿತವಾಗಿದೆ. ಇಂಗ್ಲಿಷ್ನಲ್ಲಿ ಸಾಮಾನ್ಯವಾದ ಸಂಬಂಧ-ಪದಗಳು (ಜತೆ-ಜೋಡಿ ಬಳಕೆಯ ಪದಗಳು) ಹೀಗಿವೆ:
ಅಧೀನ ಸಂಬಂಧಾವ್ಯಯಗಳು ಕೇವಲ ವಾಕ್ಯಾಂಶಗಳನ್ನು ಒಂದಕ್ಕೊಂದು ಸೇರಿಸುತ್ತವೆ. ತಮ್ಮ ಜೊತೆಗಿರುವ ವಾಕ್ಯಾಂಶವನ್ನು ಒಂದು ಅಧೀನ ಸಂಬಂಧಾವ್ಯಯ (subordinate clause) ವನ್ನಾಗಿಸುತ್ತದೆ. ಇಂಗ್ಲಿಷ್ನಲ್ಲಿ ಕೆಲವು ಅಧೀನ ಸಂಬಂಧಾವ್ಯಯಗಳು ಹೀಗಿವೆ (of time (ಸಮಯಕ್ಕೆ ಸಂಬಂಧಿಸಿ)): after, before, since, until, when, while; (cause and effect (ಕಾರಣಗಳು ಮತ್ತು ಪರಿಣಾಮಗಳು)): because, since, now that, as, in order that, so; (condition (ಪರಿಸ್ಥಿತಿ)): if, unless, only if, whether or not, whether or no, even if, in case (that) ಇತ್ಯಾದಿ. ಉದಾಹರಣೆಗಳು:
ಪೂರ್ಣಾರ್ಥ ನೀಡುವ ಪದಗಳ ಸಮೂಹಕ್ಕೆ ವಾಕ್ಯವೆನ್ನಲಾಗಿದೆ. ಇಂಗ್ಲಿಷ್ ಭಾಷೆಯಲ್ಲಿ ವಾಕ್ಯದ ಮೊದಲ ಅಕ್ಷರವು ಯಾವಾಗಲೂ ದೊಡ್ಡಕ್ಷರದಲ್ಲಿದ್ದು (capitalised initial letter), ಕೊನೆಯ ಪದದ ನಂತರ ಪೂರ್ಣವಿರಾಮ (full stop) ಇರುತ್ತದೆ. ವಾಕ್ಯವೇ ವ್ಯಾಕರಣದ ಅತಿದೊಡ್ಡ ಅಂಗವಾಗಿದೆ. ಒಂದು ವಾಕ್ಯಕ್ಕಿಂತಲೂ ಹೆಚ್ಚು ಪಠ್ಯವಿರುವುದು ವ್ಯಾಕರಣಾಲೋಕ ಪರಿಧಿಯ ಬದಲಿಗೆ, ಅದೆಷ್ಟೇ ಚಿಕ್ಕದಾಗಿರಲಿ, ಮಾತುಕತೆ/ಸಲ್ಲಾಪಗಳಂತೆ ಒಂದು ಕಿರು ಅಥವಾ ದೊಡ್ಡ ಪ್ರಬಂಧದ ಪರಿಧಿಗೆ ಸೇರಬಹುದು. ವ್ಯಾಕರಣದ ಪ್ರಮುಖಾಂಶವೆನಿಸಿದ ವಾಕ್ಯಾಂಶಗಳನ್ನು (clauses) ವಾಕ್ಯಗಳು ಹೊಂದಿರುತ್ತವೆ. ವಾಕ್ಯಾಂಶವು ಸಾಮಾನ್ಯವಾಗಿ ನಾಮಪದದ ಪದಗುಚ್ಛವಾಗಿರುವ ಕರ್ತೃ, ಹಾಗೂ, ಕರ್ಮಪದ ಅಥವಾ ಪರಿಪೂರಕವನ್ನು ಹೊಂದಿರುವ ಪ್ರತ್ಯಯವೊಂದನ್ನು ಹೊಂದಿರುತ್ತದೆ. ಅವನು ಬರುವನು
ಮೊದಲ ಇಂಗ್ಲಿಷ್ ವ್ಯಾಕರಣ ದ ಪಾಂಫ್ಲೆಟ್ ಫಾರ್ ಗ್ರ್ಯಾಮರ್ನ್ನು ವಿಲಿಯಮ್ ಬುಲಕರ್ ಎಂಬಾತ ರಚಿಸಿದ. ಲ್ಯಾಟಿನ್ ಭಾಷೆಯಂತೆಯೇ ಇಂಗ್ಲಿಷ್ ಸಹ ನಿಯಮಬದ್ಧವಾಗಿತ್ತೆಂದು ಸಾಧಿಸುವುದು ಇದರ ಉದ್ದೇಶವಾಗಿತ್ತು. 1586ರಲ್ಲಿ ಇದನ್ನು ಪ್ರಕಟಿಸಲಾಯಿತು. ಸುಮಾರು 1534ರಲ್ಲಿ ಪ್ರಕಟಿತ ವಿಲಿಯಮ್ ಲಿಲಿಯವರ ಲ್ಯಾಟಿನ್ ವ್ಯಾಕರಣ, 'ರುಡಿಮೆಂಟಾ ಗ್ರ್ಯಾಮಾಟಿಕೆಸ್'ನ್ನು ಶಾಲೆಗಳಲ್ಲಿ ಬಳಸುವಂತೆ 1542ರಲ್ಲಿ ಏಳನೆಯ ಹೆನ್ರಿ ಅನುಶಾಸನದೊಂದಿಗೆ ಆಜ್ಞೆ ಹೊರಡಿಸಿದ್ದ. ಹಾಗಾಗಿ, ಆ ಕಾಲದಲ್ಲಿ ಇಂಗ್ಲೆಂಡ್ನ ಶಾಲೆಗಳಲ್ಲಿ ಅದನ್ನು ಬಳಸಲಾಗುತ್ತಿತ್ತು. ಈ ಲ್ಯಾಟಿನ್ ವ್ಯಾಕರಣ ಲೇಖನ ಆಧರಿಸಿ ಬುಲಕರ್ ಸಮಗ್ರ ವ್ಯಾಕರಣ ಬರಹ ಸಿದ್ದಪಡಿಸಿದ. ಬುಲಕರ್ ಇಂಗ್ಲಿಷ್ ಭಾಷೆಯಲ್ಲಿ ತನ್ನ ವ್ಯಾಕರಣ ರಚಿಸಿ, ತನ್ನದೇ 'ಸುಧಾರಿತ ಕಾಗುಣಿತ ವ್ಯವಸ್ಥೆ' ರೂಪಿಸಿದ. ಆದರೂ, ಆತನ ನಂತರ ಹೆಚ್ಚು-ಕಡಿಮೆ ಒಂದು ಶತಮಾನದವರೆಗೂ, ಇಂಗ್ಲಿಷ್ ವ್ಯಾಕರಣದ ಬಗೆಗಿನ ಹಲವು ಲೇಖನಗಳು ಲ್ಯಾಟಿನ್ ಭಾಷೆಯಲ್ಲೇ ಬರೆಯಲಾಗುತ್ತಿತ್ತು, ಏಕೆಂದರೆ ಲೇಖಕರು ತಮ್ಮ ಪಾಂಡಿತ್ಯ ಮೆರೆಯಲು ಇಚ್ಛಿಸುತ್ತಿದ್ದರು. ಸುಮಾರು 1685ರಲ್ಲಿ ಪ್ರಕಟಗೊಂಡ ಕ್ರಿಸ್ಟೊಫರ್ ಕೂಪರ್ನ 'ಗ್ರ್ಯಾಮೆಟಿಕಾ ಲಿಂಗ್ವೇ ಆಂಗ್ಲಿಕನೆ' ಲ್ಯಾಟಿನ್ ಭಾಷೆಯಲ್ಲಿ ರಚಿಸಿದ ಕೊನೆಯ ಇಂಗ್ಲಿಷ್ ವ್ಯಾಕರಣ ಲೇಖನವಾಗಿತ್ತು.ಇತ್ತೀಚಿನ 19ನೆಯ ಶತಮಾನದ ಕಾಲದಲ್ಲಿಯೂ ಸಹ, ಪ್ರಾಚೀನ ಗ್ರೀಕ್ ಮತ್ತು ಲ್ಯಾಟಿನ್ ವ್ಯಾಕರಣಕ್ಕಿಂತಲೂ ಇಂಗ್ಲಿಷ್ ವ್ಯಾಕರಣ ಭಿನ್ನವಾಗಿದೆ ಎಂದು ಸಾಧಿಸಲು, ಜನಪ್ರಿಯ ಇಂಗ್ಲಿಷ್ ವ್ಯಾಕರಣದ ಕರ್ತೃ ಲಿಂಡ್ಲೆ ಮರ್ರೆ 'ವ್ಯಾಕರಣದ ಆಧಾರ ಗ್ರಂಥದ ಸಾಕ್ಷ್ಯ'ಗಳನ್ನು ಉಲ್ಲೇಖಿಸಬೇಕಾಯಿತು.
{{cite book}}
: CS1 maint: multiple names: authors list (link){{cite book}}
: CS1 maint: multiple names: authors list (link){{cite book}}
: CS1 maint: multiple names: editors list (link){{cite book}}
: CS1 maint: multiple names: authors list (link){{cite book}}
: CS1 maint: multiple names: authors list (link)This article uses material from the Wikipedia ಕನ್ನಡ article ಇಂಗ್ಲಿಷ್ ವ್ಯಾಕರಣ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.