ಉಪಗ್ರಹ ಆರ್ಯಭಟ: ಭಾರತದ ಮೊದಲ ಉಪಗ್ರಹ

ಆರ್ಯಭಟ ಭಾರತದ ಮೊಟ್ಟಮೊದಲ ಕೃತಕ ಉಪಗ್ರಹದ ಹೆಸರು.

ಪ್ರಾಚೀನ ಭಾರತೀಯ ಗಣಿತಜ್ಞ ಆರ್ಯಭಟನ ಗೌರವಾರ್ಥವಾಗಿ ಈ ಹೆಸರನ್ನು ಇದಕ್ಕೆ ಇಡಲಾಯಿತು. ಇದನ್ನು ಭಾರತದ ಇಸ್ರೋ ಸಂಸ್ಥೆಯು ಬೆಂಗಳೂರಿನಲ್ಲಿರುವ ತನ್ನ ಉಪಗ್ರಹ ಕೇಂದ್ರದಲ್ಲಿ ನಿರ್ಮಿಸಿತು. ಈ ಉಪಗ್ರಹವು ತನ್ನ ಅಕ್ಷದಲ್ಲಿ ಗಿರಕಿ ಹೊಡೆದು ತನ್ನ ಸ್ಥಿರತೆಯನ್ನು ಕಾಯ್ದುಕೊಳ್ಳುವ ತೆರನಾಗಿತ್ತು. ಏಪ್ರಿಲ್ ೨೧, ೧೯೭೫ ರಲ್ಲಿ ರಷ್ಯದ ಸಹಾಯದಿ೦ದ ರಷ್ಯದ ಕಪುಟ್ಸಿನ್ ಯಾರ್ ಎ೦ಬ ಉಡ್ಡಯನ ಕೇ೦ದ್ರದಿ೦ದ ಈ ಉಪಗ್ರಹವನ್ನು ಕಕ್ಷೆಗೆ ಒಯ್ಯಲಾಯಿತು. ಉಪಗ್ರಹ ೨೬ ಮುಖಗಳನ್ನು ಹೊ೦ದಿದ್ದು, ಸುಮಾರು ೧.೪ ಮೀ ವ್ಯಾಸವನ್ನು ಹೊ೦ದಿತ್ತು. ೨೪ ಮುಖಗಳ ಮೇಲೆ ಸೌರಚಾಲಿತ ವಿದ್ಯುತ್ ಕೋಶಗಳನ್ನು (ಬ್ಯಾಟರಿಗಳನ್ನು) ಅಳವಡಿಸಲಾಗಿತ್ತು. ಆರ್ಯಭಟ ಉಪಗ್ರಹದ ಮುಖ್ಯ ಉದ್ದೇಶಗಳು ಹೀಗಿದ್ದವು:

  • ಎಕ್ಸ್-ರೇ ಖಗೋಳಶಾಸ್ತ್ರದ ಅಧ್ಯಯನ
  • ಸೌರಭೌತಶಾಸ್ತ್ರದ (solar physics) ಅಧ್ಯಯನ
ಉಪಗ್ರಹ ಆರ್ಯಭಟ: ಭಾರತದ ಮೊದಲ ಉಪಗ್ರಹ
ಆರ್ಯಭಟ ಉಪಗ್ರಹ

ಆದರೆ ಕಕ್ಷೆಯಲ್ಲಿ ಬಿಟ್ಟು ನಾಲ್ಕೇ ದಿನಗಳಲ್ಲಿ ಆರ್ಯಭಟ ಉಪಗ್ರಹದಲ್ಲಿ ವಿದ್ಯುಚ್ಛಕ್ತಿ ವೈಫಲ್ಯ ಉ೦ಟಾಗಿ ಐದನೇ ದಿನ ಭೂಮಿಯಿ೦ದ ಉಪಗ್ರಹಕ್ಕೆ ಇದ್ದ ಸ೦ಪರ್ಕ ಕಡಿದುಹೋಯಿತು. ಫೆಬ್ರವರಿ ೧೧, ೧೯೯೨ ರಂದು ಉಪಗ್ರಹವನ್ನು ಅದರ ಕಕ್ಷೆಯಿ೦ದ ಭೂಮಿಯ ವಾತಾವರಣಕ್ಕೆ ಕುಸಿಯಿತು.

Tags:

ಆರ್ಯಭಟ (ಗಣಿತಜ್ಞ)ಏಪ್ರಿಲ್ ೨೧ಕೃತಕ ಉಪಗ್ರಹ೧೯೭೫

🔥 Trending searches on Wiki ಕನ್ನಡ:

ಗಣೇಶಚಿಕ್ಕಮಗಳೂರುರಾವಣದೆಹಲಿ ಸುಲ್ತಾನರುದ್ಯುತಿಸಂಶ್ಲೇಷಣೆಪು. ತಿ. ನರಸಿಂಹಾಚಾರ್ಕೊಡಗಿನ ಗೌರಮ್ಮನಾಗರೀಕತೆಕರ್ನಾಟಕದ ಏಕೀಕರಣಪೆರಿಯಾರ್ ರಾಮಸ್ವಾಮಿಬೆಂಗಳೂರು ಗ್ರಾಮಾಂತರ ಜಿಲ್ಲೆಆನೆಸವರ್ಣದೀರ್ಘ ಸಂಧಿಮುರುಡೇಶ್ವರಹರಪ್ಪಸಂದರ್ಶನಋಗ್ವೇದದುಶ್ಯಲಾಪಾರ್ವತಿಜ್ಯೋತಿಷ ಶಾಸ್ತ್ರತೆಂಗಿನಕಾಯಿ ಮರಇತಿಹಾಸಒಡೆಯರ್ಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಬಾಲಕಾರ್ಮಿಕಗುಡಿಸಲು ಕೈಗಾರಿಕೆಗಳುರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ವೀರೇಂದ್ರ ಪಾಟೀಲ್ಜಾಗತೀಕರಣಬೌದ್ಧ ಧರ್ಮಮಂಟೇಸ್ವಾಮಿಮಿಲಾನ್ಜಿ.ಎಸ್.ಶಿವರುದ್ರಪ್ಪಕನ್ನಡ ಚಳುವಳಿಗಳುನೀರುಕಾಂತಾರ (ಚಲನಚಿತ್ರ)ವೆಬ್‌ಸೈಟ್‌ ಸೇವೆಯ ಬಳಕೆಕೈವಾರ ತಾತಯ್ಯ ಯೋಗಿನಾರೇಯಣರುಮೂಲಧಾತುಪ್ರಜಾವಾಣಿರಾಮಾಚಾರಿ (ಕನ್ನಡ ಧಾರಾವಾಹಿ)ಮಡಿಕೇರಿಸ್ವಚ್ಛ ಭಾರತ ಅಭಿಯಾನಚದುರಂಗ (ಆಟ)ವಿವಾಹಹೈದರಾಬಾದ್‌, ತೆಲಂಗಾಣಕರ್ಮಬುಡಕಟ್ಟುಸೀತೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಹೊಂಗೆ ಮರಭಾರತದ ಚುನಾವಣಾ ಆಯೋಗಜಿ.ಪಿ.ರಾಜರತ್ನಂಚಂದ್ರಯಾನ-೩ಬೆಂಗಳೂರುಹಣವಿಜಯನಗರ ಸಾಮ್ರಾಜ್ಯರತ್ನತ್ರಯರುತೆನಾಲಿ ರಾಮ (ಟಿವಿ ಸರಣಿ)ಕನ್ನಡದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ಕೃಷ್ಣರಾಜನಗರಐಹೊಳೆಸ್ವರಭಗವದ್ಗೀತೆಷಟ್ಪದಿಕಮಲಮಾನಸಿಕ ಆರೋಗ್ಯಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಅಮ್ಮಅವ್ಯಯಮಲ್ಟಿಮೀಡಿಯಾಪಾಲಕ್ಮಂಡಲ ಹಾವುಮೈಸೂರು ಸಂಸ್ಥಾನವ್ಯವಸಾಯ🡆 More