ಅರಕೇರಿಯ

ಅರಕೇರಿಯ ಅರಕೇರಿಯೇಸೀ ಕುಟುಂಬಕ್ಕೆ ಸೇರಿದ ನಿತ್ಯ ಹಸುರಾಗಿರುವ, ದೈತ್ಯಾಕಾರದ ಮರ.

ಅರಕೇರಿಯ
Temporal range: Triassic–Recent
PreꞒ
O
S
D
C
P
T
J
K
Pg
N
ಅರಕೇರಿಯ
Araucaria araucana growing around a lake in Neuquén, Argentina
Scientific classification
ಸಾಮ್ರಾಜ್ಯ:
Plantae
Division:
Pinophyta
ವರ್ಗ:
Pinopsida
ಗಣ:
Pinales
ಕುಟುಂಬ:
Araucariaceae
ಕುಲ:
Araucaria

Juss.
Type species
Araucaria araucana 
Pav.
ಅರಕೇರಿಯ
Worldwide distribution of Araucaria species.

ಪ್ರಭೇದಗಳು

ಇದರಲ್ಲಿ 15 ಪ್ರಭೇದಗಳಿದ್ದು ಇವು ಮುಖ್ಯವಾಗಿ ಆಸ್ಟ್ರೇಲಿಯ, ದಕ್ಷಿಣ ಅಮೆರಿಕ ಹಾಗೂ ಪೆಸಿಫಿಕ್ ದ್ವೀಪಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತವೆ. ಹೀಗೆ ಮೂಲತಃ ದಕ್ಷಿಣಾರ್ಧಗೋಳವಾದರೂ ಹಲವು ಪ್ರಭೇದಗಳನ್ನು ಪ್ರಪಂಚದ ಬೇರೆ ಬೇರೆ ದೇಶಗಳಲ್ಲೂ ಬೆಳೆಸಿದ್ದಾರೆ. ಭಾರತದಲ್ಲೂ ಇದರ ಪ್ರಭೇದಗಳಾದ ಕುಕಿಯೈ, ಕನಿಂಗ್‍ಹ್ಯಾಮಿಯೈ ಎಕ್ಸೆಲ್ಸ ಮತ್ತು ಇಂಬ್ರಿಕೇಟಗಳನ್ನು ಬೆಳೆಸಲಾಗುತ್ತಿದೆ.

ಲಕ್ಷಣಗಳು

ಗೋಪುರಾಕೃತಿಯ ಈ ಮರ ಸಾಮಾನ್ಯವಾಗಿ 30-60 ಮೀ. ಎತ್ತರಕ್ಕೆ ಬೆಳೆದು, ಸುಮಾರು 3-4 ಮೀ. ದಪ್ಪವಿರುತ್ತದೆ. ಈ ಮರಕ್ಕೆ ಅದರದೇ ಆದ ವಿಶಿಷ್ಟ ಹಾಗೂ ಸುಂದರವಾದ ಆಕೃತಿ ಇದ್ದು ಉದ್ಯಾನಗಳಿಗೆ ಶೋಭೆಯನ್ನುಂಟುಮಾಡುತ್ತದೆ. ಮರದಿಂದ ಸುತ್ತಲೂ ಮೇಲ್ಮುಖವಾಗಿ ಬಾಗಿರುವ ರೆಂಬೆಗಳು ಹೊರಟಿರುತ್ತವೆ. ಕಾಂಡದಿಂದ ರಾಳ ತಯಾರಾಗುತ್ತದೆ. ಇದರ ಎಲೆಗಳು ಹಸುರು, ಚೂಪು ಮತ್ತು ಬಿರುಸು. ಕೆಲವು ಪ್ರಭೇದಗಳಲ್ಲಿ ಎರಡು ರೀತಿಯ ಎಲೆಗಳಿರುವುದೂ ಉಂಟು. ಈ ಜಾತಿಯಲ್ಲಿ ಗಂಡು ಮತ್ತು ಹೆಣ್ಣುಮರಗಳು ಬೇರೆ ಬೇರೆಯಾಗಿರುತ್ತವೆ. ಗಂಡುಮರದಲ್ಲಿ ಕೊಳವೆಯಾಕಾರದ ಗಂಡು ಶಂಕುಗಳಿರುತ್ತವೆ. ಪ್ರತಿಯೊಂದು ಶಂಕುವಿನಲ್ಲೂ ಒತ್ತಾಗಿ ಸುತ್ತುವರಿದು ಜೋಡಣೆಗೊಂಡಿರುವ ಅನೇಕ ಕೇಸರಗಳಿರುತ್ತವೆ. ಹೆಣ್ಣುಮರದಲ್ಲಿ ಗುಂಡಗಿರುವ ಹೆಣ್ಣು ಶಂಕುಗಳಿದ್ದು ಪ್ರತಿಯೊಂದರಲ್ಲಿಯೂ ಅನೇಕ ಅಂಡಕಧರ ಬೀಜಗಳಿವೆ. ಇವು ಪಟ್ಟಿಗೆ ಅಂಟಿಕೊಂಡಿರುತ್ತವೆ. ಈ ಮರದ ಹಲವಾರು ಪ್ರಭೇದಗಳನ್ನು ಸಾಮಾನ್ಯವಾಗಿ ಉದ್ಯಾನಗಳಲ್ಲೂ ತೋಟಗಳಲ್ಲೂ ಅಲಂಕಾರಕ್ಕಾಗಿ ಬೆಳೆಸುತ್ತಾರೆ. ಶೀತ ದೇಶಗಳಲ್ಲಿ ಈ ಮರಗಳನ್ನು ಎಳೆಯವಾಗಿರುವಾಗ ಕುಂಡಗಳಲ್ಲಿ ಬೆಳೆಸುತ್ತಾರೆ.

ಉಪಯೋಗಗಳು

ಭಾರತದಲ್ಲಿ ಬೆಳೆಯುವ ಕನಿಂಗ್‍ಹ್ಯಾಮಿಯೈ ಪ್ರಭೇದದಿಂದ ಒಳ್ಳೆಯ ಬೆಲೆಬಾಳುವ ಚೌಬೀನೆ ದೊರಕುತ್ತದೆ. ಇದನ್ನು ಬೀರು, ಪೆಟ್ಟಿಗೆ, ಪ್ಲೈವುಡ್ ತಯಾರಿಕೆ ಇತ್ಯಾದಿ ಕೆಲಸಗಳಿಗೆ ಉಪಯೋಗಿಸುತ್ತಾರೆ

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

ಅರಕೇರಿಯ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಅರಕೇರಿಯ ಪ್ರಭೇದಗಳುಅರಕೇರಿಯ ಲಕ್ಷಣಗಳುಅರಕೇರಿಯ ಉಪಯೋಗಗಳುಅರಕೇರಿಯ ಉಲ್ಲೇಖಗಳುಅರಕೇರಿಯ ಬಾಹ್ಯ ಸಂಪರ್ಕಗಳುಅರಕೇರಿಯ

🔥 Trending searches on Wiki ಕನ್ನಡ:

ಛಂದಸ್ಸುಕಾರವಾರಓಂ ನಮಃ ಶಿವಾಯಪ್ರತಿಷ್ಠಾನ ಸರಣಿ ಕಾದಂಬರಿಗಳುಬಸವೇಶ್ವರಭಾರತದ ರಾಷ್ಟ್ರಗೀತೆಶೃಂಗೇರಿತೀರ್ಥಹಳ್ಳಿಚುನಾವಣೆವಿಜ್ಞಾನಶಾಸನಗಳುನಾಗರೀಕತೆಭಾರತದ ಪ್ರಧಾನ ಮಂತ್ರಿಗಳ ಪಟ್ಟಿಭೂತಾರಾಧನೆಭೀಮಾ ತೀರದಲ್ಲಿ (ಚಲನಚಿತ್ರ)ಭೋವಿಜ್ವಾಲಾಮುಖಿಮಳೆಗಾಲಕೃಷ್ಣಾ ನದಿಕರ್ಣಸಾಮಾಜಿಕ ಸಮಸ್ಯೆಗಳುತೆಂಗಿನಕಾಯಿ ಮರಬಸವರಾಜ ಬೊಮ್ಮಾಯಿಕ್ರಿಯಾಪದವಿಚ್ಛೇದನಕನಕದಾಸರುಯೋಗಿ ಆದಿತ್ಯನಾಥ್‌ಹನುಮಂತವಿಜಯಪುರಸಚಿನ್ ತೆಂಡೂಲ್ಕರ್ಮಲ್ಲಿಕಾರ್ಜುನ ಜ್ಯೋತಿರ್ಲಿಂಗಭಾರತದ ಸಂವಿಧಾನ ರಚನಾ ಸಭೆಗುಬ್ಬಚ್ಚಿಕದಂಬ ರಾಜವಂಶಬಾಲ್ಯ ವಿವಾಹಕುರುಹಲ್ಮಿಡಿ ಶಾಸನಗೋತ್ರ ಮತ್ತು ಪ್ರವರಅಲಾವುದ್ದೀನ್ ಖಿಲ್ಜಿಲಿಂಗಾಯತ ಪಂಚಮಸಾಲಿಚಿತ್ರದುರ್ಗಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಹಿಂದುಸ್ತಾನಿ ಶಾಸ್ತ್ರೀಯ ಸಂಗೀತಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಪ್ಲೇಟೊಭಾರತದಲ್ಲಿ ಬ್ರಿಟಿಷ್ ಆಳ್ವಿಕೆಗಾಳಿಪಟ (ಚಲನಚಿತ್ರ)ಕೆ. ಎಸ್. ನರಸಿಂಹಸ್ವಾಮಿಕನ್ನಡ ಸಂಧಿಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಹಿಂದೂ ಮದುವೆಪರಮಾತ್ಮ(ಚಲನಚಿತ್ರ)ಕವಿಗಳ ಕಾವ್ಯನಾಮಸಮುದ್ರಗುಪ್ತಹವಾಮಾನಕರ್ನಾಟಕ ಸರ್ಕಾರತೀ. ನಂ. ಶ್ರೀಕಂಠಯ್ಯಲಿನಕ್ಸ್ವಿಜಯದಾಸರುಕನ್ನಡ ಸಾಹಿತ್ಯಗಂಗಾಎರಡನೇ ಮಹಾಯುದ್ಧಕನ್ನಡಪ್ರಭಮಲ್ಲಿಕಾರ್ಜುನ್ ಖರ್ಗೆಪ್ರೀತಿಬುಡಕಟ್ಟುಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಶಿರ್ಡಿ ಸಾಯಿ ಬಾಬಾಸಮಾಜಶಾಸ್ತ್ರಕರ್ನಾಟಕದ ತಾಲೂಕುಗಳುಬೀಚಿತಾಳಗುಂದ ಶಾಸನಪೊನ್ನಲೋಕಸಭೆಇಚ್ಛಿತ್ತ ವಿಕಲತೆಎಂ.ಬಿ.ಪಾಟೀಲಅಲೆಕ್ಸಾಂಡರ್ಮಧುಮೇಹಪ್ರಶಸ್ತಿಗಳು🡆 More