ವೆಂಗಿನಾಡು

ವೆಂಗಿನಾಡು - ಪಶ್ಚಿಮ ಗೋದಾವರಿಯ ಎಲ್ಲೋರದ ಉತ್ತರಕ್ಕಿರುವ ಪೆದ್ದ ವೇಗಿ ಪ್ರದೇಶವೆಂದು ಇತಿಹಾಸಕಾರರ ಅಭಿಪ್ರಾಯವಾಗಿದೆ.

ಹರಿಷೇಣ ಕೃಷ್ಣಾ ಮತ್ತು ಗೋದಾವರಿ ನಡುವೆ ಇರುವ ಪ್ರದೇಶ ವೆಂಗಿ ಎಂದು ಕರೆದಿದ್ದಾನೆ. ಯುವಾನ್ ಚಾಂಗ್ (ಹ್ಯೂಯನ್ ತ್ಸಾಂಗ್)ನು ಪಿಂಗ್.ಕಿ.ಲೇ.ಯನ್ನು ವೆಂಗಿಪುರವೆಂದು ಕರೆದಿದ್ದಾನೆ. ಇದನ್ನು ಪಲ್ಲವ ಶಾಸನಗಳಲ್ಲಿ ವೆಂಗಿರಾಷ್ಟ್ರ ಎಂದೂ ಕರೆಯಲಾಗಿದೆ. ವೆಂಗಿ ಎಂಬ ಹೆಸರು ನಿರ್ದಿಷ್ಟ ಅರ್ಥದಲ್ಲಿ ರಾಜಧಾನಿಗೂ ವಿಶಾಲಾರ್ಥದಲ್ಲಿ ಒಂದು ರಾಷ್ಟ್ರ, ದೇಶ, ಮಂಡಲಕ್ಕೂ ಅನ್ವಯಿಸುತ್ತಿದ್ದಂತೆ ಕಾಣುತ್ತದೆ. ಗೋದಾವರಿ ಮತ್ತು ಕೃಷ್ಣಾನದಿಗಳ ನಡುವೆ ಇರುವ ಪ್ರದೇಶಕ್ಕೆ ಮಾತ್ರ ವೆಂಗಿಯೆಂದೂ ಗೋದಾವರಿಯಿಂದ ಕಳಿಂಗದವರೆಗಿರುವ ಪ್ರದೇಶಕ್ಕೆ ಆಂಧ್ರವೆಂದೂ ಕರೆಯುತ್ತಿದ್ದರೆಂದು ವ್ಯಕ್ತವಾಗುತ್ತದೆ. ವೆಂಗಿ ಅತಿ ಪ್ರಾಚೀನ ಕಾಲದಿಂದಲೂ ದೇಶ-ವಿದೇಶಗಳೊಡನೆ ವಾಣಿಜ್ಯ-ವ್ಯಾಪಾರ ಮೊದಲಾದ ಸಂಪರ್ಕ ವಿಟ್ಟುಕೊಂಡು, ಸಂಸ್ಕøತಿಯ ಬೆಳೆವಣಿಗೆಯಲ್ಲಿಯೂ ಮಹತ್ತರ ಪಾತ್ರವಹಿಸಿದೆ. ಲೆಂಡಲೂರು, ಪೆದ್ದ ಮತ್ತು ಚಿನ್ನವೆಂಗಿಯ ಸುತ್ತಲೂ ಅನೇಕ ಐತಿಹಾಸಿಕ ಸ್ಮಾರಕಗಳಿವೆ.

ಇತಿಹಾಸ

ವೆಂಗಿಯನ್ನು ಸಾತವಾಹನರ ಸಾಮಂತ ಅರಸನಾದ ಸಾಲಂಕಾಯನ ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ. ವಿಜಯದೇವ ವರ್ಮ ವೆಂಗಿಯಲ್ಲಿ ಅಧಿಕಾರ ಸ್ಥಾಪಿಸಿದ. ಅವನ ಅನಂತರ ಸಮುದ್ರಗುಪ್ತನ ಸಮಕಾಲೀನನಾದ ಹಸ್ತಿವರ್ಮ ಮೊದಲಾದವರು ಆಳಿದ ತರುವಾಯ ವಿಜಯ ಸ್ಕಂದನ ಆಳಿಕೆಯಲ್ಲಿ ಪಲ್ಲವರಿಂದ ಸೋಲಿಸಲ್ಪಟ್ಟರು. ಅನಂತರ ಪಲ್ಲವರಿಂದ ವಿಷ್ಣುಕುಂಡಿ ವಂಶಜರು ವೆಂಗಿಯ ಸ್ವಾತಂತ್ರ್ಯ ಪಡೆದು 5ನೆಯ ಶತಮಾನದ ಆದಿ ಭಾಗದವರೆಗೂ ಲೆಂಡಲೂರನ್ನು ರಾಜಧಾನಿಯ ನ್ನಾಗಿ ಮಾಡಿಕೊಂಡು ಆಡಳಿತ ನಡೆಸಿದ ವಿಷಯ ಅನೇಕ ಶಾಸನಗಳಿಂದ ತಿಳಿಯುತ್ತದೆ. ಇವರು ವೆಂಗಿಯನ್ನು 150 ವರ್ಷಗಳವರೆಗೂ ಆಳಿದರು. ಚಳುಕ್ಯಎರಡನೆಯ ಪುಲಕೇಶಿ ವಿಷ್ಣುಕುಂಡಿ 4ನೆಯ ಮಾಧವನನ್ನು ಸೋಲಿಸಿ ವೆಂಗಿ ರಾಜ್ಯವನ್ನು ವಶಪಡಿಸಿಕೊಂಡು ಅಲ್ಲಿ ತನ್ನ ತಮ್ಮ ಕುಬ್ಜವಿಷ್ಣುವರ್ಧನನನ್ನು ನೇಮಿಸಿದ.

ವಿಷ್ಣುಕುಂಡಿವಂಶಜರು ವಿಷ್ಣುವರ್ಧನನ ಕಾಲದಿಂದಲೇ ಬೇರೆಯವರ ಅಧೀನಕ್ಕೆ ಒಳಪಟ್ಟು ವೆಂಗಿ ರಾಜ್ಯವನ್ನು ಆಳುತ್ತಿದ್ದರೆಂದು ನೀಲಕಂಠ ಶಾಸ್ತ್ರೀಯವರು ಅಭಿಪ್ರಾಯಪಟ್ಟಿದ್ದಾರೆ. ಇವನ ವಂಶದವರೇ ಆದ ಪೂರ್ವ ಚಾಳುಕ್ಯರು 5 ಶತಮಾನಗಳವರೆಗೆ ವೆಂಗಿರಾಜ್ಯದಲ್ಲಿ ಆಳಿಕೆ ನಡೆಸಿದರು. ರಾಷ್ಟ್ರಕೂಟರ ಮೂರನೆಯ ಗೋವಿಂದ ವೆಂಗಿ ರಾಜ್ಯವನ್ನು ಪಡೆಯಲು ಪ್ರಯತ್ನಿಸಿದ. ಆದರೆ ವಿಜಯಾದಿತ್ಯ ಇವನ ಮೇಲೆ ಯುದ್ಧಮಾಡಿ ತನ್ನ ಪ್ರದೇಶವನ್ನು ಉಳಿಸಿಕೊಂಡ. ರಾಷ್ಟ್ರಕೂಟ ಮತ್ತು ಪೂರ್ವ ಚಾಳುಕ್ಯರ ನಡುವಿನ ಕದನದಲ್ಲಿ ಶತ್ರುಗಳು ಮತ್ತು ದಂಗೆಕೋರರು ವೆಂಗಿಯನ್ನು ಸುಟ್ಟು ನಾಶಮಾಡಿದರು. ಅನಂತರ ಅಮ್ಮರಾಜ ಎಲ್ಲರನ್ನೂ ಸೋಲಿಸಿ ವೆಂಗಿಪುರವನ್ನು ತ್ಯಜಿಸಿ ರಾಜಮಹೇಂದ್ರಪುರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡನೆಂದು ಕೆಲವರು ಅಭಿಪ್ರಾಯಪಟ್ಟಿ ದ್ದಾರೆ. ಆದರೆ ಇದಕ್ಕೆ ಸಾಕಷ್ಟು ಆಧಾರವಿಲ್ಲ. ಆದರೂ ವೆಂಗಿ ಎಂಬ ಹೆಸರು ರಾಜ್ಯದ ಹೆಸರಾಗಿ ಶಾಶ್ವತವಾಗಿ ಉಳಿದಿದೆ. ಇಂದು ವೆಂಗಿಪುರ ಹಾಳಾಗಿದ್ದು ಅದರ ಅವಶೇಷಗಳನ್ನು ಕಾಣಬಹುದಾಗಿದೆ. ಪ್ರಾಚೀನದಲ್ಲಿ ವೆಂಗಿ ಇದ್ದ ಸ್ಥಳದಲ್ಲಿ ಲೆಂಡಲೂರು, ಚಿನ್ನವೇಗಿ, ಪೆದ್ದವೇಗಿ ಮೊದಲಾದ ಹಳ್ಳಿಗಳಿವೆ.

10ನೆಯ ಶತಮಾನದ ವೇಳೆಗೆ ಚೋಳರ ಒಂದನೆಯ ರಾಜರಾಜ ಬಾದಾಮಿ ಚಳುಕ್ಯರನ್ನು ಸದೆಬಡಿದು ಶಕ್ತಿವರ್ಮನನ್ನು ವೆಂಗಿಯ ಅರಸನನ್ನಾಗಿ ಮಾಡಿದ. ಅನಂತರ ರಾಜರಾಜನ ಮಗ ರಾಜೇಂದ್ರ ವೆಂಗಿಮಂಡಲವನ್ನು ಆಕ್ರಮಿಸಿಕೊಂಡ. 13ನೆಯ ಶತಮಾನದ ವೇಳೆಗೆ ಕಾಕತೀಯರು ವೆಂಗಿಯನ್ನು ವಶಪಡಿಸಿಕೊಂಡ ಸ್ವಲ್ಪಸಮಯದಲ್ಲೇ ರೆಡ್ಡಿ ಮನೆತನದ ಆಳಿಕೆಗೆ ಒಳಗಾಯಿತು. 1454ರ ವೇಳೆಗೆ ಕಳಿಂಗ ಅಥವಾ ಒರಿಸ್ಸದ ಗಜಪತಿ ಅರಸರು ರಾಜ್ಯ ವಿಸ್ತರಿಸಿ, ಕೊಂಡವೀಡು, ವೆಂಗಿಯೂ ಸೇರಿದಂತೆ ಗೋದಾವರಿ ಪ್ರಾಂತ ಗಜಪತಿಯ ಆಳಿಕೆಗೆ ಬಂದಂತೆ ಕಾಣುತ್ತದೆ.

ವೆಂಗಿನಾಡು 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಎಲ್ಲೋರಕಲಿಂಗಕೃಷ್ಣಾ ನದಿಗೋದಾವರಿಪಲ್ಲವಹ್ಯುಯೆನ್ ತ್ಸಾಂಗ್

🔥 Trending searches on Wiki ಕನ್ನಡ:

ವಿಜಯಪುರಕುವೆಂಪುಓಂ ನಮಃ ಶಿವಾಯಶಾಂತರಸ ಹೆಂಬೆರಳುಭಾರತದಲ್ಲಿ ಬಡತನಇಮ್ಮಡಿ ಪುಲಕೇಶಿಶ್ರೀ ರಾಘವೇಂದ್ರ ಸ್ವಾಮಿಗಳುಛತ್ರಪತಿ ಶಿವಾಜಿನಾಯಕ (ಜಾತಿ) ವಾಲ್ಮೀಕಿಸ್ಯಾಮ್ ಪಿತ್ರೋಡಾಪ್ರಜ್ವಲ್ ರೇವಣ್ಣಮಹಾತ್ಮ ಗಾಂಧಿಊಳಿಗಮಾನ ಪದ್ಧತಿಸಾಲುಮರದ ತಿಮ್ಮಕ್ಕಚಿಲ್ಲರೆ ವ್ಯಾಪಾರಚನ್ನಬಸವೇಶ್ವರಏಡ್ಸ್ ರೋಗಮುಹಮ್ಮದ್ವಾಲ್ಮೀಕಿಭಾರತೀಯ ಅಂಚೆ ಸೇವೆಜಾತ್ಯತೀತತೆಗುಪ್ತ ಸಾಮ್ರಾಜ್ಯಕಪ್ಪೆ ಅರಭಟ್ಟಸಂವಹನಮಳೆಕಲಿಯುಗಅಸ್ಪೃಶ್ಯತೆಕೈಗಾರಿಕೆಗಳುಮುದ್ದಣಮುಖ್ಯ ಪುಟಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಕರ್ನಾಟಕದ ಕಲೆ ಮತ್ತು ಸಂಸ್ಕೃತಿಸಂದರ್ಶನರಮ್ಯಾಅಂಬಿಗರ ಚೌಡಯ್ಯಅಸಹಕಾರ ಚಳುವಳಿರಾಹುಲ್ ಗಾಂಧಿಸಮಾಜ ವಿಜ್ಞಾನಪ್ರೇಮಾಹೆಚ್.ಡಿ.ದೇವೇಗೌಡಎಂ. ಕೆ. ಇಂದಿರರೋಮನ್ ಸಾಮ್ರಾಜ್ಯವರದಕ್ಷಿಣೆಉಡಮಣ್ಣುನವೋದಯಜವಹರ್ ನವೋದಯ ವಿದ್ಯಾಲಯಕನ್ನಡ ಕಾಗುಣಿತಯು. ಆರ್. ಅನಂತಮೂರ್ತಿಮಲೇರಿಯಾಉದಯವಾಣಿಜಯಪ್ರಕಾಶ ನಾರಾಯಣಯಕ್ಷಗಾನಮಾನ್ವಿತಾ ಕಾಮತ್ಗೌತಮ ಬುದ್ಧಕಾವ್ಯಮೀಮಾಂಸೆದ್ರೌಪದಿ ಮುರ್ಮುಕಬ್ಬುಹೈದರಾಲಿವಾಯು ಮಾಲಿನ್ಯಭಾರತದ ಮುಖ್ಯ ನ್ಯಾಯಾಧೀಶರುತಾಳೀಕೋಟೆಯ ಯುದ್ಧಶಾಲೆರಾಮ್ ಮೋಹನ್ ರಾಯ್ಭಾಮಿನೀ ಷಟ್ಪದಿನೀರಾವರಿಮೂಢನಂಬಿಕೆಗಳುಕೊರೋನಾವೈರಸ್ಕುಟುಂಬಭಾರತಕ್ರಿಯಾಪದಪಟ್ಟದಕಲ್ಲುಮಲ್ಟಿಮೀಡಿಯಾವೀರೇಂದ್ರ ಪಾಟೀಲ್ಗೋಲ ಗುಮ್ಮಟಧಾರವಾಡಸುಭಾಷ್ ಚಂದ್ರ ಬೋಸ್🡆 More