ಮಹೇಶ್ ಮಹದೇವ್: ಭಾರತೀಯ ಸಂಗೀತ ಸಂಯೋಜಕ

ಮಹೇಶ್ ಮಹದೇವ್
ಮೂಲಸ್ಥಳಬೆಂಗಳೂರು, ಕರ್ನಾಟಕ
ಸಂಗೀತ ಶೈಲಿಚಲನಚಿತ್ರ ಸಂಗೀತ, ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ
ವೃತ್ತಿಸಂಗೀತ ಸಂಯೋಜಕ, ಗೀತರಚನಾಕಾರ, ಗಾಯಕ
ಸಕ್ರಿಯ ವರ್ಷಗಳು೨೦೦೧-ಇವರೆಗೆ
ಅಧೀಕೃತ ಜಾಲತಾಣhttps://maheshmahadev.com/

ಮಹೇಶ್ ಮಹದೇವ್ ಭಾರತೀಯ ಸಂಗೀತ ಸಂಯೋಜಕರು, ಗೀತರಚನಾಕಾರು ಹಾಗೂ ಗಾಯಕರು.ಇವರು ತಮಿಳು ಹಾಗೂ ಕನ್ನಡ ಚಲನಚಿತ್ರಗಳಲ್ಲಿ ಸಂಗೀತ ನಿರ್ದೇಶಕರು, ಗೀತರಚನಾಕಾರರಾಗಿದ್ದಾರೆ. ಕರ್ನಾಟಕ ಸಂಗೀತ ಮತ್ತು ಹಿಂದುಸ್ತಾನಿ ಸಂಗೀತದಲ್ಲಿ ೫೦ಕ್ಕೂ ಹೆಚ್ಚು ಹೊಸ ರಾಗಗಳನ್ನು ಸೃಷ್ಟಿಸಿ ಅದರಲ್ಲಿ ಅನೇಕ ವರ್ಣಗಳು, ಕೃತಿಗಳು ಹಾಗೂ ಭಕ್ತಿಗೀತೆಗಳ ಸಂಯೋಜನೆ ಮಾಡಿದ್ದಾರೆ ಇವರು ಕನ್ನಡ, ತೆಲುಗು, ತಮಿಳು, ಹಿಂದಿ, ಇಂಗ್ಲೀಷ್, ಮರಾಠಿ, ಸಂಸ್ಕೃತ ಭಾಷೆಗಳಲ್ಲಿ ಸಂಗೀತ ಸಂಯೋಜಿಸಿದ್ದಾರೆ

ಆರಂಭಿಕ ಜೀವನ

ಮಹೇಶ್ ಮಹದೇವ್ ಅಕ್ಟೋಬರ್ ೨೮, ೧೯೮೧ ಬೆಂಗಳೂರಿನಲ್ಲಿ ಜನಿಸಿದರು. ತಂದೆ (ಮಹದೇವ ರಾವ್), ತಾಯಿ (ಮಂಜುಳ ಜಾಧವ್).ಇವರು ಲಂಡನ್ ನ ರಾಯಲ್ ಸ್ಕೂಲ್ ಆಫ್ ಮ್ಯೂಸಿಕ್ ನಲ್ಲಿ ಪಾಶ್ಚಾತ್ಯ ಸಂಗೀತ ತರಬೇತಿ ಪಡೆದಿದ್ದಾರೆ, ಶಾಸ್ತ್ರೀಯ ಸಂಗೀತದಲ್ಲಿ ಔಪಚಾರಿಕವಾಗಿ ತರಬೇತಿ ಪಡೆದಿಲ್ಲದಿದ್ದರೂ ಇವರದ್ದು ಬಾಲಪ್ರತಿಭೆ. ಹಿಂದುಸ್ತಾನಿ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಅನೇಕ ಹೊಸ ರಾಗಗಳನ್ನು ಸೃಷ್ಟಿಸಿ ಅದರಲ್ಲಿ ಅನೇಕ ವರ್ಣಗಳು, ಕೃತಿಗಳು, ಬಂದಿಶ್ ಗಳು ಹಾಗೂ ಗೀತೆಗಳನ್ನು ರಚಿಸಿ ಸಂಗೀತ ಸಂಯೋಜನೆಗಳ ಕೊಡುಗೆ ನೀಡಿದ್ದಾರೆ. ಇವರು ಶಿವಶಕ್ತಿ ಎಂಬ ಸಂಸ್ಥೆ ಸ್ಥಾಪಿಸಿ ಹಲವಾರು ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ೨೦೧೦ ರಲ್ಲಿ ಬೆಂಗಳೂರಿನಲ್ಲಿ ಇವರ ಸಾರಥ್ಯದಲ್ಲಿ ನಡೆದ ಬಾಲಿವುಡ್ ನಟ ಮನೋಜ್ ಕುಮಾರ್, ಭಾರತಿ ವಿಷ್ಣುವರ್ಧನ್ ಉಪಸ್ಥಿತಿಯ "ಮಧುರ್ ಸಂಗೀತ್ ಸಂಗೀತ ಕಾರ್ಯಕ್ರಮ, ೨೦೧೫ ಇವರ ಸಾರಥ್ಯದಲ್ಲಿ ಬೆಂಗಳೂರಿನಲ್ಲಿ ನಡೆದ ಚಲನಚಿತ್ರ ಗೀತೆ ಹಾಗೂ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಸಂಮಿಲನದ "ಗೀತ್ ಬಂದಿಶ್ ಮಿಲನ್" ಕಾರ್ಯಕ್ರಮ ಗಮನಾರ್ಹವು. ಇವರ ಗಾಯಕಿ ಪ್ರಿಯದರ್ಶಿನಿಯೊಂದಿಗೆ ಪ್ರಿಸಂ ಫೌಂಡೇಶನ್ ಎಂಬ ಕಲೆ ಮತ್ತು ಸಂಗೀತ ಸಂಸ್ಥೆಯ ಮೂಲಕ ವೈದ್ಯರು, ವಿದ್ಯಾರ್ಥಿಗಳು ಹಾಗೂ ಸಂಗೀತಾಸಕ್ತರಿಗೆ ಸಂಗೀತ ಕಲಿಸುತ್ತಿದ್ದಾರೆ.

ಹಿಂದೂಸ್ತಾನಿ ಸಂಗೀತ ವೃತ್ತಿಜೀವನ

'ಭಾರತ ರತ್ನ' ಪಂಡಿತ್ ಭೀಮಸೇನ್ ಜೋಶಿ (ಭೀಮ್)  ತಾನ್ ಸೇನ್ (ಸೇನ್) ರವರ ಹೆಸರಲ್ಲಿ ಸೃಷ್ಟಿಸಿದ 'ಭೀಮ್ ಸೇನ್' ಹೊಸ ರಾಗದಲ್ಲಿ  'ಗಿರಿಧರ್ ಗೋಪಾಲ್ ಶ್ಯಾಮ್' ವಿಲಾಂಬಿತ್ ಮತ್ತು ಮಧ್ಯ ಲಯ ಬಂದಿಶ್ ರಚಿಸಿದ್ದಾರೆ. ಇದೇ ರಾಗದಲ್ಲಿ 'ಮನ್ ಕೆ ಮಂದಿರ್ ಅಯೋರೇ' ದೃತ್ ಲಯ ಬಂದಿಶ್ ಸಂಯೋಜನೆ ಮಾಡಿದ್ದಾರೆ ಇವರು ಸೃಷ್ಟಿಸಿದ ಹೊಸ ರಾಗ ಮುಕ್ತಿಪ್ರದಾಯಿನಿಯಲ್ಲಿ 'ಧ್ಯಾನ್ ಕರು ಝಾತಾ' ಎಂಬ ಮರಾಠಿ ಅಭಾಂಗ್ ರಚನೆ ಮಾಡಿದ್ದಾರೆ

ಕರ್ನಾಟಕ ಸಂಗೀತ ವೃತ್ತಿಜೀವನ

ಮಹೇಶ್ ಮಹದೇವ್ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪ್ರಚಲಿತವಿಲ್ಲದ ಹಲವಾರು ರಾಗಗಳಲ್ಲಿ ಕೃತಿ ರಚನೆ ಮಾಡಿದ್ದಾರೆ. ಶ್ರೀರಂಗಪ್ರಿಯ, ತಪಸ್ವಿನಿ, ಮಯೂರಪ್ರಿಯ, ಏಕಮುಖ, ಬಿಂದು ರೂಪಿಣಿ ಮತ್ತು ಹಲವಾರು ಹೊಸ ರಾಗಗಳನ್ನು ಸೃಷ್ಟಿಸಿ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಪರಿಚಯಿಸಿದ್ದಾರೆ. ಶ್ರೀಸ್ಕಂದ ಎಂಬ ಅಂಕಿತನಾಮದಲ್ಲಿ ಕರ್ನಾಟಕ ಸಂಗೀತದಲ್ಲಿ ವಿವಿಧ ತಾಳ ಪ್ರಕಾರ ಹಾಗೂ ರಾಗಗಳಲ್ಲಿ ಕೃತಿ, ತಿಲ್ಲಾನ, ಕೀರ್ತನೆಗಳು, ದಾಸರ ಪದಗಳನ್ನು ಸಂಯೋಜಿಸಿದ್ದಾರೆ. ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರಾದ ಸಂತ ತ್ಯಾಗರಾಜರ ಹೆಸರಿನಲ್ಲಿ "ಶ್ರೀ ತ್ಯಾಗರಾಜ"ಎಂಬ ಹೊಸ ರಾಗ ಸೃಷ್ಟಿಸಿ "ಶ್ರೀ ರಾಮಚಂದ್ರಂ ಭಜಾಮಿ" ಎಂಬ ಕರ್ನಾಟಕ ಸಂಗೀತದ ಕೃತಿಯನ್ನು ರಚಿಸಿದ್ದಾರೆ. ಕರ್ನಾಟಕ ಸಂಗೀತದ ದಿಗ್ಗಜರಾದ ಟಿ. ಎಂ. ತ್ಯಾಗರಾಜನ್ ರವರ ಜನ್ಮಶತಾಬ್ಧಿ ಸಲುವಾಗಿ ಅವರ ಹೆಸರಿನಲ್ಲಿ ತ್ಯಾಗರಾಜ ಮಂಗಳಂ ಎಂಬ ರಾಗ ಸೃಷ್ಟಿಸಿ "ಧ್ಯಾನ ಮೂಲಂ ಗುರು" ಎಂಬ ಉಗಾಭೋಗ ಹಾಗೂ ಕೃತಿಯನ್ನು ರಚಿಸಿ ಗೌರವ ಸಲ್ಲಿಸಿದ್ದಾರೆ.

ಚಲನಚಿತ್ರ ವೃತ್ತಿಜೀವನ

ರಾಯ್ ಲಕ್ಷ್ಮಿ, ಮುಖೇಶ್ ತಿವಾರಿ ಅಭಿನಯದ ಝಾನ್ಸಿ ಐ.ಪಿ.ಎಸ್ ಎಂಬ ಕನ್ನಡ ಚಲನ ಚಿತ್ರದಲ್ಲಿ ಗೀತರಚನೆ ಮಾಡಿದ್ದಾರೆಆನ್ಡ್ರಿಯಾ ಜರಿಮಿಯಾ, ಮನೋಬಾಲ, ಕೆ. ಏಸ್. ರವಿಕುಮಾರ್ ಅಭಿನಯದ ಮಾಳಿಗೈ' ಎಂಬ ತಮಿಳು ಚಿತ್ರಕ್ಕೆ ಸಂಗೀತ ಸಂಯೋಜಿನೆ ಮಾಡಿದ್ದಾರೆ ೨೦೨೨ರಲ್ಲಿ ತರೆ ಕಂಡ 'ಖಡಕ್ 'ಎಂಬ ಕನ್ನಡ ಚಿತ್ರದಲ್ಲಿ ಸಾಹಿತ್ಯ ಮತ್ತು ದೃಶ್ಯ ಸಂಯೋಜಕ ಮತ್ತು ಸಹಾಯಕ ಸಂಗೀತ ನಿರ್ದೇಶಕರಾಗಿದ್ದಾರೆ, ಮಂಜು ಮೂವೀಸ್ ನ 'ರಿದಂ' ಎಂಬ ಕನ್ನಡ ಚಲನಚಿತ್ರದಲ್ಲಿ ಸಂಗೀತ ನಿರ್ದೇಶಕನಾಗಿ ನಟನೆ ಮಾಡಿದ್ದಾರೆ.

ಮಹೇಶ್ ಮಹದೇವ್ ಸೃಷ್ಟಿಸಿರುವ ಹೊಸ ರಾಗಗಳು

ಮಹೇಶ್ ಮಹದೇವ್ ಕರ್ನಾಟಕ ಸಂಗೀತ ಮತ್ತು ಹಿಂದುಸ್ತಾನಿ ಸಂಗೀತದಲ್ಲಿ ೫೦ಕ್ಕೂ ಹೆಚ್ಚು ಹೊಸ ರಾಗಗಳನ್ನು ಸೃಷ್ಟಿಸಿದ್ದಾರೆ. ಅದರಲ್ಲಿ ಕೆಲವು ಈ ಕೆಳಕಂಡಂತಿದೆ.

  1. ಮುಕ್ತಿಪ್ರದಾಯಿನಿ - ವಕುಳಾಭರಣ ಜನ್ಯ
  2. ಶ್ರೀರಂಗಪ್ರಿಯ - ಸರಸಾಂಗಿ ಜನ್ಯ
  3. ಭೀಮ್ ಸೇನ್ - ಕೋಕಿಲಪ್ರಿಯ ಜನ್ಯ
  4. ಶ್ರೀಸ್ಕಂದ
  5. ಶ್ರೀ ತ್ಯಾಗರಾಜ, ಧರ್ಮಾವತಿ ಜನ್ಯ
  6. ಬಿಂದುರೂಪಿಣಿ,
  7. ನಾದ ಕಲ್ಯಾಣಿ - ಮೇಚ ಕಲ್ಯಾಣಿ ಜನ್ಯ
  8. ತಪಸ್ವಿ
  9. ಮಯೂರಪ್ರಿಯ,
  10. ಅಮೃತ ಕಲ್ಯಾಣಿ - ಮೇಚ ಕಲ್ಯಾಣಿ ಜನ್ಯ
  11. ರಾಜಸಾಧಕ- ಮೇಚ ಕಲ್ಯಾಣಿ ಜನ್ಯ
  12. ತ್ಯಾಗರಾಜ ಮಂಗಳಂ - ಗೌರಿಮನೋಹರಿ ಜನ್ಯ

ಡಿಸ್ಕೋಗ್ರಫಿ

ವರ್ಷ ಚಿತ್ರ / ಧ್ವನಿಸುರುಳಿ ಭಾಷೆ ಹಾಡು ಗಾಯಕರು(ಗಳು) ಸಾಹಿತ್ಯ ಆಡಿಯೋ ಲೇಬಲ್ ಉಲ್ಲೇಖಗಳು
೨೦೧೬ ಮೋದಕಪ್ರಿಯ ಗಣರಾಜ ಸಂಸ್ಕೃತ 'ಮೂಷಿಕ ವಾಹನಾ' ಮಹೇಶ್ ಮಹದೇವ್, ಪ್ರಿಯದರ್ಶಿನಿ ಸಾಂಪ್ರದಾಯಿಕ ಪಿ.ಎಂ.ಆಡಿಯೋಸ್
ಮುದಾಕರಾತ್ತ ಮೋದಕಂ ಪ್ರಿಯದರ್ಶಿನಿ ಶ್ರೀ ಆದಿ ಶಂಕರಾಚಾರ್ಯರು ಪಿ.ಎಂ.ಆಡಿಯೋಸ್
ಮಹಾಗಣಪತಿಂ ಪ್ರಿಯದರ್ಶಿನಿ ಮುತ್ತುಸ್ವಾಮಿ ದೀಕ್ಷಿತರು ಪಿ.ಎಂ.ಆಡಿಯೋಸ್
ಪ್ರಣಮ್ಯ ಶಿರಸಾದೇವಂ ಪ್ರಿಯದರ್ಶಿನಿ ಸಾಂಪ್ರದಾಯಿಕ ಪಿ.ಎಂ.ಆಡಿಯೋಸ್
ಕೈಲಾಸ ಶಿಖರವರೆ (ಲಾಲಿ) ಪ್ರಿಯದರ್ಶಿನಿ ಸಾಂಪ್ರದಾಯಿಕ ಪಿ.ಎಂ.ಆಡಿಯೋಸ್
೨೦೧೬ ಮಹಾರುದ್ರಂ ಮಹದೇಶ್ವರಂ ಸಂಸ್ಕೃತ ಶ್ರೀ ಮಹದೇಶ್ವರ ಸುಪ್ರಭಾತಂ ಪ್ರಿಯದರ್ಶಿನಿ ಮಹೇಶ್ ಮಹದೇವ್ ಪಿ.ಎಂ.ಆಡಿಯೋಸ್
ಓಂಕಾರ ಪ್ರಣವಮಂತ್ರ ಸ್ವರೂಪಂ ಪ್ರಿಯದರ್ಶಿನಿ, ಮಹೇಶ್ ಮಹದೇವ್,

ಸುನಿಲ್, ವೇಣು

ಮಹೇಶ್ ಮಹದೇವ್ ಪಿ.ಎಂ.ಆಡಿಯೋಸ್
ಶ್ರೀ ಮಹದೇಶ್ವರ ಪಂಚರತ್ನಂ ಪ್ರಿಯದರ್ಶಿನಿ ಮಹೇಶ್ ಮಹದೇವ್ ಪಿ.ಎಂ.ಆಡಿಯೋಸ್
ಶ್ರೀ ಮಹದೇಶ್ವರ ಅಷ್ಟಾದಶನಾಮಾವಳಿ ಮಹೇಶ್ ಮಹದೇವ್, ಪ್ರಿಯದರ್ಶಿನಿ ಮಹೇಶ್ ಮಹದೇವ್ ಪಿ.ಎಂ.ಆಡಿಯೋಸ್
ಶ್ರೀ ಮಹದೇಶ್ವರ ಲಾಲಿ ಪ್ರಿಯದರ್ಶಿನಿ ಮಹೇಶ್ ಮಹದೇವ್ ಪಿ.ಎಂ.ಆಡಿಯೋಸ್
೨೦೧೬ ಶ್ರೀ ಶಂಕರ ಸ್ತೋತ್ರ ರತ್ನ ಸಂಸ್ಕೃತ ಗಣೇಶ ಪಂಚರತ್ನಂ ಪ್ರಿಯದರ್ಶಿನಿ ಶ್ರೀ ಆದಿ ಶಂಕರಾಚಾರ್ಯರು ಪಿ.ಎಂ.ಆಡಿಯೋಸ್
ಶ್ರೀ ಮೀನಾಕ್ಷಿ ಪಂಚರತ್ನಂ ಪ್ರಿಯದರ್ಶಿನಿ ಶ್ರೀ ಆದಿ ಶಂಕರಾಚಾರ್ಯರು ಪಿ.ಎಂ.ಆಡಿಯೋಸ್
ಶ್ರೀ ಶಿವಪಂಚಾಕ್ಷರ ಸ್ತೋತ್ರ ಮಹೇಶ್ ಮಹದೇವ್, ಪ್ರಿಯದರ್ಶಿನಿ ಶ್ರೀ ಆದಿ ಶಂಕರಾಚಾರ್ಯರು ಪಿ.ಎಂ.ಆಡಿಯೋಸ್
ಶ್ರೀ ಶಾರದಾ ಭುಜಂಗಂ ಪ್ರಿಯದರ್ಶಿನಿ ಶ್ರೀ ಆದಿ ಶಂಕರಾಚಾರ್ಯರು ಪಿ.ಎಂ.ಆಡಿಯೋಸ್
ಶ್ರೀ ಹನುಮಾನ್ ಪಂಚರತ್ನಂ ಪ್ರಿಯದರ್ಶಿನಿ, ಮಹೇಶ್ ಮಹದೇವ್,

ಸುನಿಲ್ ಮಹದೇವ್

ಶ್ರೀ ಆದಿ ಶಂಕರಾಚಾರ್ಯರು ಪಿ.ಎಂ.ಆಡಿಯೋಸ್
ನಾರಾಯಣ ಸ್ತೋತ್ರಂ ಪ್ರಿಯದರ್ಶಿನಿ, ಮಹೇಶ್ ಮಹದೇವ್ ಶ್ರೀ ಆದಿ ಶಂಕರಾಚಾರ್ಯರು ಪಿ.ಎಂ.ಆಡಿಯೋಸ್
ಕಾಲಭೈರವಾಷ್ಟಕಂ ಮಹೇಶ್ ಮಹದೇವ್, ಪ್ರಿಯದರ್ಶಿನಿ ಶ್ರೀ ಆದಿ ಶಂಕರಾಚಾರ್ಯರು ಪಿ.ಎಂ.ಆಡಿಯೋಸ್
ಅಚ್ಯುತಾಷ್ಟಕಂ ಪ್ರಿಯದರ್ಶಿನಿ ಶ್ರೀ ಆದಿ ಶಂಕರಾಚಾರ್ಯರು ಪಿ.ಎಂ.ಆಡಿಯೋಸ್
೨೦೧೮ ಸುರ್ ಸಂದ್ಯಾ ಹಿಂದಿ ಆಯಾ ಸಮಯ್ ಜವಾನೋ ಜಾಗೋ ಉಮಾ ಶೇಷಗಿರಿ ಆರ್ಎಸ್ಎಸ್ ಸಾಂಪ್ರದಾಯಿಕ ಪ್ರಿಸಮ್ ಫೌಂಡೇಶನ್
ಹಿಂದಿ ಜಯ ದುರ್ಗೇ ದುರ್ಗತಿ ಪರಿಹಾರಿಣಿ ಉಮಾ ಶೇಷಗಿರಿ ಬ್ರಹ್ಮಾನಂದ ಪ್ರಿಸಮ್ ಫೌಂಡೇಶನ್
ಕನ್ನಡ ಪಾಲಿಸೋ ಶ್ರೀ ಹರಿ ಉಮಾ ಶೇಷಗಿರಿ ಹರಪ್ಪನಹಳ್ಳಿ ಭೀಮವ್ವ ಪ್ರಿಸಮ್ ಫೌಂಡೇಶನ್
ಉರ್ದು ದಿಲ್ ಕಾ ದಿಯಾ ಜಲಾಯ ಉಮಾ ಶೇಷಗಿರಿ ಸಾಂಪ್ರದಾಯಿಕ ಪ್ರಿಸಮ್ ಫೌಂಡೇಶನ್
ಸಂಸ್ಕೃತ ಅಜಂ ನಿರ್ವಿಕಲ್ಪಂ ಉಮಾ ಶೇಷಗಿರಿ ಶ್ರೀ ಆದಿ ಶಂಕರಾಚಾರ್ಯರು ಪ್ರಿಸಮ್ ಫೌಂಡೇಶನ್
ಕನ್ನಡ ಓ ನನ್ನ ಚೇತನ ಉಮಾ ಶೇಷಗಿರಿ ಕುವೆಂಪು ಪ್ರಿಸಮ್ ಫೌಂಡೇಶನ್
೨೦೧೮ ಸಂತಾಂಚೆ ಅಭಂಗ್ ಮರಾಠಿ ಧ್ಯಾನ್ಕ ಕರೂ ಙಾತಾ ಜಯತೀರ್ಥ ಮೇವುಂಡಿ ಶ್ರೀ ಸಮರ್ಥ ರಾಮದಾಸರು ಪಿ.ಎಂ.ಆಡಿಯೋಸ್
ಮಹಾಲಕ್ಷ್ಮೀ ಬಾರಮ್ಮ ಕನ್ನಡ ಮಹಾಲಕ್ಷ್ಮೀ ಬಾರಮ್ಮ ಪ್ರಿಯದರ್ಶಿನಿ, ಮಹೇಶ್ ಮಹದೇವ್ ಮಹೇಶ್ ಮಹದೇವ್ ಮ್ಯೂಗಸ್ ರೆಕಾ‍ಡ್ಸ್
ಮಹಾಲಕ್ಷ್ಮೀ ತಾಯೇ ವಾ ತಮಿಳು ಪೊನ್ಮಳೈ ತನಿಲೇ ಪ್ರಿಯದರ್ಶಿನಿ, ಮಹೇಶ್ ಮಹದೇವ್ ಜಿ ಕೃಷ್ಣಕುಮಾರ್ ಮ್ಯೂಗಸ್ ರೆಕಾ‍ಡ್ಸ್
೨೦೧೯ ಸಾವನ್ ಕೇ ಬಾದಲ್ ಹಿಂದಿ ನೀಲೇ ಗಗನ್ ಮೇ ಪ್ರಿಯದರ್ಶಿನಿ ಅಭಿಷೇಕ್ ಚೊಖಾನಿ ಪಿ.ಎಂ.ಆಡಿಯೋಸ್
ನಾರೇಯಣ ನಾಮಾಮೃತಂ ತೆಲುಗು ಶ್ರೀ ನಾರೇಯಣ ನಾಮಾಮೃತರಸ ಪ್ರಿಯದರ್ಶಿನಿ ಕೈವಾರ ತಾತಯ್ಯ ಶ್ರೀ ಯೋಗಿ ನಾರೇಯಣರು ಪಿ.ಎಂ.ಆಡಿಯೋಸ್
ತೆಲುಗು ಧಿಮಿ ಧಿಮಿ ಧಣ ಧಣ ಎಸ್.ಪಿ.ಬಾಲಸುಬ್ರಮಣ್ಯಂ, ಪ್ರಿಯದರ್ಶಿನಿ

ಮಹೇಶ್ ಮಹದೇವ್, ರಘುರಾಂ

ಪಿ.ಎಂ.ಆಡಿಯೋಸ್
ಕನ್ನಡ ನಾನೇನು ಬಲ್ಲೆನೋ ಪ್ರಿಯದರ್ಶಿನಿ ಪಿ.ಎಂ.ಆಡಿಯೋಸ್
ಕನ್ನಡ ಮರೆಯಲಾರೆನಮ್ಮ ಬದರಿ ಪ್ರಸಾದ್ ಪಿ.ಎಂ.ಆಡಿಯೋಸ್
ತೆಲುಗು ರಾಮ ರಾಮ ಮುಕುಂದ ಮಹೇಶ್ ಮಹದೇವ್, ಪ್ರಿಯದರ್ಶಿನಿ ಪಿ.ಎಂ.ಆಡಿಯೋಸ್
ಕನ್ನಡ ಈ ದೇಹದೋಳಗಿದ್ದು ಪ್ರಿಯದರ್ಶಿನಿ ಪಿ.ಎಂ.ಆಡಿಯೋಸ್
ಕನ್ನಡ ಮಂಗಳಂ ಅಮರನಾರೇಯಣಗೆ ಮಹೇಶ್ ಮಹದೇವ್, ಪ್ರಿಯದರ್ಶಿನಿ ಪಿ.ಎಂ.ಆಡಿಯೋಸ್
೨೦೧೯ ಸದ್ಗುರು ಶ್ರೀ ಯೋಗಿ ತೆಲುಗು ನರುಡು ಗುರುಡನಿ ನಮ್ಮೇವಾರಮು ಎಸ್.ಪಿ.ಬಾಲಸುಬ್ರಮಣ್ಯಂ, ಪ್ರಿಯದರ್ಶಿನಿ ಕೈವಾರ ತಾತಯ್ಯ ಶ್ರೀ ಯೋಗಿ ನಾರೇಯಣರು ಪಿ.ಎಂ.ಆಡಿಯೋಸ್
ಕನ್ನಡ ಆತ್ಮಧ್ಯಾನಿಸೋ ಮನುಜ ಪ್ರಿಯದರ್ಶಿನಿ ಪಿ.ಎಂ.ಆಡಿಯೋಸ್
ತೆಲುಗು ಅಂಡಜವಾಹನ ಕುಂಡಲಿಶಯನ ಮಹೇಶ್ ಮಹದೇವ್, ಪ್ರಿಯದರ್ಶಿನಿ ಪಿ.ಎಂ.ಆಡಿಯೋಸ್
ಕನ್ನಡ ಇಲ್ಲಿ ನೀ ನಿವಾಸ ಮಾಡಿರುವುದೇನೋ ಪ್ರಿಯದರ್ಶಿನಿ ಪಿ.ಎಂ.ಆಡಿಯೋಸ್
ಕನ್ನಡ ಕಂಡೇನು ಶ್ರೀ ರಂಗನ ಎಸ್.ಪಿ.ಬಾಲಸುಬ್ರಮಣ್ಯಂ ಪಿ.ಎಂ.ಆಡಿಯೋಸ್
ತೆಲುಗು ಏಕಾಕ್ಷರಮೇ ಬ್ರಹ್ಮಾಕ್ಷರಮೈ ಪ್ರಿಯದರ್ಶಿನಿ ಪಿ.ಎಂ.ಆಡಿಯೋಸ್
ತೆಲುಗು ಮಂಗಳಂ ಶತಕೋಟಿ ಮನ್ಮಥಾಕಾರುನಕು ಮಹೇಶ್ ಮಹದೇವ್, ಪ್ರಿಯದರ್ಶಿನಿ ಪಿ.ಎಂ.ಆಡಿಯೋಸ್
ವನ್ಪುಲಿವಾಹನ ಶಬರೀಶ ತಮಿಳು ವರುವಾಯ್ ವಿರೈವಾಯ್ ಮಹೇಶ್ ಮಹದೇವ್, ಪ್ರಿಯದರ್ಶಿನಿ ಸಾಂಪ್ರದಾಯಿಕ ಪಿ.ಎಂ.ಆಡಿಯೋಸ್
೨೦೨೦ ರಂಗನ ಮರೆಯಲಾರೇನಮ್ಮ ಕನ್ನಡ ರಂಗನ ಮರೆಯಲಾರೇನಮ್ಮ ಬದರಿ ಪ್ರಸಾದ್ ಕೈವಾರ ತಾತಯ್ಯ ಪಿ.ಎಂ.ಆಡಿಯೋಸ್
ಕೈವಾರ ಯೋಗಿ (ಸಿಂಗಲ್) ತೆಲುಗು ಧಿಮಿಧಿಮಿ ಭೇರಿನೌಬತ್ತು ಎಸ್.ಪಿ.ಬಾಲಸುಬ್ರಮಣ್ಯಂ, ಪ್ರಿಯದರ್ಶಿನಿ

ಮಹೇಶ್ ಮಹದೇವ್, ರಘುರಾಂ

ಕೈವಾರ ತಾತಯ್ಯ ಶ್ರೀ ಯೋಗಿ ನಾರೇಯಣರು ಪಿ.ಎಂ.ಆಡಿಯೋಸ್
ನಮೋ ವೆಂಕಟೇಶಾಯ ತೆಲುಗು ನರುಡು ಗುರುಡನಿ ಎಸ್.ಪಿ.ಬಾಲಸುಬ್ರಮಣ್ಯಂ, ಪ್ರಿಯದರ್ಶಿನಿ ಕೈವಾರ ತಾತಯ್ಯ ಪಿ.ಎಂ.ಆಡಿಯೋಸ್
ಕಂಡೇನು ಶ್ರೀರಂಗನಾಥನ (ಸಿಂಗಲ್) ಕನ್ನಡ ಕಂಡೇನು ಶ್ರೀರಂಗನಾಥನ ಚೆಲುವ ಮೂರುತಿ ಎಸ್.ಪಿ.ಬಾಲಸುಬ್ರಮಣ್ಯಂ ಕೈವಾರ ತಾತಯ್ಯ ಪಿ.ಎಂ.ಆಡಿಯೋಸ್
ಮಾಳಿಗೈ

(ಇನ್ನು ಬಿಡುಗಡೆಯಾಗದ ಚಲನಚಿತ್ರ)

ತಮಿಳು ಓಂಕಾರ ಪ್ರಣವಮಂತ್ರ ಸ್ವರೂಪಂ ಪ್ರಿಯದರ್ಶಿನಿ ಪ್ರಿಯದರ್ಶಿನಿ, ಮಹೇಶ್ ಮಹದೇವ್
೨೦೨೩ ಶ್ರೀ ತ್ಯಾಗರಾಜ ರಾಗ ಸಂಸ್ಕೃತ ಶ್ರೀ ರಾಮಚಂದ್ರಂ ಭಜಾಮಿ ಪ್ರಿಯದರ್ಶಿನಿ ಮಹೇಶ್ ಮಹದೇವ್ ಪಿ.ಎಂ.ಆಡಿಯೋಸ್

ಉಲ್ಲೇಖಗಳು

ಮಹೇಶ್ ಮಹದೇವ್: ಆರಂಭಿಕ ಜೀವನ, ಹಿಂದೂಸ್ತಾನಿ ಸಂಗೀತ ವೃತ್ತಿಜೀವನ, ಕರ್ನಾಟಕ ಸಂಗೀತ ವೃತ್ತಿಜೀವನ 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

🔥 Trending searches on Wiki ಕನ್ನಡ:

ಪುತ್ತೂರುಸಮಾಜ ವಿಜ್ಞಾನಬಾಹುಬಲಿಭಾರತದಲ್ಲಿ ಪಂಚಾಯತ್ ರಾಜ್ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಪರೀಕ್ಷೆಆಯ್ದಕ್ಕಿ ಲಕ್ಕಮ್ಮಕೈವಾರ ತಾತಯ್ಯ ಯೋಗಿನಾರೇಯಣರುಕನ್ನಡ ರಂಗಭೂಮಿಸುರಪುರದ ವೆಂಕಟಪ್ಪನಾಯಕಸಂವಹನಊಳಿಗಮಾನ ಪದ್ಧತಿವೃಕ್ಷಗಳ ಪಟ್ಟೆ2020 ಬೇಸಿಗೆ ಪ್ಯಾರಾಲಿಂಪಿಕ್ಸ್ಶ್ರೀವಿಜಯಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಅಣುಬೇಸಿಗೆಕನ್ನಡದಲ್ಲಿ ಕಾದಂಬರಿ ಸಾಹಿತ್ಯಭಾರತದಲ್ಲಿ ನಿರುದ್ಯೋಗಸಹಕಾರಿ ಸಂಘಗಳುಮೇರಿ ಕೋಮ್ಕೃತಕ ಬುದ್ಧಿಮತ್ತೆತ್ಯಾಜ್ಯ ನಿರ್ವಹಣೆಮೂಲಧಾತುಸಮಾಸಮುಟ್ಟುಹಂಪೆಕೆ. ಅಣ್ಣಾಮಲೈಶಾಲಿವಾಹನ ಶಕೆಒಡಲಾಳವಚನಕಾರರ ಅಂಕಿತ ನಾಮಗಳುಮಂತ್ರಾಲಯಬಾಲ್ಯ ವಿವಾಹಗುಪ್ತಗಾಮಿನಿ (ಧಾರಾವಾಹಿ)ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಯೂಟ್ಯೂಬ್‌ಕರ್ನಾಟಕ ಐತಿಹಾಸಿಕ ಸ್ಥಳಗಳುಭಾರತದ ಬುಡಕಟ್ಟು ಜನಾಂಗಗಳುಬಹಮನಿ ಸುಲ್ತಾನರುಧೊಂಡಿಯ ವಾಘ್ಸಂತಾನೋತ್ಪತ್ತಿಯ ವ್ಯವಸ್ಥೆಆದೇಶ ಸಂಧಿಜಾಗತಿಕ ತಾಪಮಾನ ಏರಿಕೆಮೂಲಭೂತ ಕರ್ತವ್ಯಗಳುಸಾರಾ ಅಬೂಬಕ್ಕರ್ಕುಟುಂಬರನ್ನಗಡಿಯಾರಭಾರತದ ಸರ್ವೋಚ್ಛ ನ್ಯಾಯಾಲಯಹ್ಯಾಲಿ ಕಾಮೆಟ್ಅಸ್ಪೃಶ್ಯತೆಮಧ್ವಾಚಾರ್ಯಪಾಟಲಿಪುತ್ರಚಂಪೂಆಗಮ ಸಂಧಿಭರತನಾಟ್ಯಹೆಣ್ಣು ಬ್ರೂಣ ಹತ್ಯೆಕನ್ನಡದಲ್ಲಿ ಮಹಿಳಾ ಸಾಹಿತ್ಯನಯಸೇನಜೀಮೇಲ್ಸುಭಾಷ್ ಚಂದ್ರ ಬೋಸ್ಕದಂಬ ಮನೆತನಮೂಲಧಾತುಗಳ ಪಟ್ಟಿಉಪನಯನಸಿಂಧನೂರುನುಡಿಗಟ್ಟುಮೆಕ್ಕೆ ಜೋಳಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಉಪ್ಪು (ಖಾದ್ಯ)ಗೂಗಲ್ಕೆ. ಎಸ್. ನಿಸಾರ್ ಅಹಮದ್ಕರ್ನಾಟಕ ಯುದ್ಧಗಳುಸಿದ್ಧಯ್ಯ ಪುರಾಣಿಕಯಕೃತ್ತುವೆಂಕಟೇಶ್ವರ ದೇವಸ್ಥಾನನಾಗರಹೊಳೆ ರಾಷ್ಟ್ರೀಯ ಉದ್ಯಾನವನಮೌರ್ಯ ಸಾಮ್ರಾಜ್ಯ🡆 More