ಪಿ.ಬಿ.ಧುತ್ತರಗಿ

ಪಿ.

ಬಿ. ಧುತ್ತರಗಿ (ಪುಂಡಲೀಕಪ್ಪ ಬಸನಗೌಡ ಧುತ್ತರಗಿ) ಕರ್ನಾಟಕದ ಒಬ್ಬ ರಂಗಭೂಮಿ ಕಲಾವಿದರು. ಬಾಗಲಕೋಟೆ ಜಿಲ್ಲೆಯ ಶೂಲೇಭಾವಿ ಗ್ರಾಮದ ಇವರು ರಂಗಭೂಮಿ ಕಲಾವಿದರಾಗಿ, ನಾಟಕಗಳ ರಚನೆ-ನಿರ್ದೇಶಕರಾಗಿ, ನಾಟಕ ಕಂಪನಿಯ ಮಾಲೀಕರಾಗಿ ಕೆಲಸ ಮಾಡಿದ್ದಾರೆ. ಜನಪ್ರಿಯ ಚಲನಚಿತ್ರವಾದ ಸಂಪತ್ತಿಗೆ ಸವಾಲ್, ಮೊದಲು ಜನಪ್ರಿಯ ನಾಟಕವಾಗಿ ಪ್ರದರ್ಶನವಾಗಿದ್ದು ಇವರು ನಾಟಕ ಕಂಪನಿಯಲ್ಲಿ. ಈ ನಾಟಕವನ್ನು ರಚಿಸಿ-ನಿರ್ದೇಶಿಸಿದವರು ಧುತ್ತರಗಿಯವರು.

ರಂಗಭೂಮಿಯಲ್ಲಿ ಇವರು ಮಾಡಿರುವ ಕೆಲಸಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರವು ಗುಬ್ಬಿ ವೀರಣ್ಣ ಪ್ರಶಸ್ತಿಯನ್ನು ಇವರಿಗೆ ನೀಡಿದೆ. ಆದರೆ ಎಂಬತ್ತು ವರ್ಷ ವಯಸ್ಸಿನ ಇವರು, ಇನ್ನೂ ಆರ್ಥಿಕವಾಗಿ ತೊಂದರೆಯಲ್ಲಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಹಿರಿಯ ನಾಟಕಕಾರ ಹಾಗೂ ನಿರ್ದೇಶಕ ಪುಂಡಲೀಕಪ್ಪ ಬಸನಗೌಡ ಧುತ್ತರಗಿ (78)ಯವರು ೧ನೇ ನವೆಂಬರ ೨೦೦೭ರಲ್ಲಿ ಕೆರೂಡಿ ಆಸ್ಪತ್ರೆಯಲ್ಲಿ ನಿಧನರಾದರು. ಪುಂಡಲೀಕ ಬಸವನಗೌಡ ಧುತ್ತರಗಿ ವೃತ್ತಿರಂಗಭೂಮಿಯ ಪ್ರಖ್ಯಾತ ನಾಟಕಕಾರರು. ನಟ, ನಾಟಕ ಕಂಪನಿಯ ಮಾಲೀಕರು ಆಗಿದ್ದ ಇವರು ರಚಿಸಿದ ನಾಟಕಗಳನ್ನು ಬಹುತೇಕ ಎಲ್ಲ ನಾಟಕ ಕಂಪೆನಿಗಳೂ ಪ್ರಯೋಗಿಸಿವೆ. ಹಾಗಾಗಿ ಐದು ದಶಕಗಳ ಕಾಲ ಕನ್ನಡ ವೃತ್ತಿ ರಂಗಭೂಮಿಯ ಅವಿಭಾಜ್ಯ ಅಂಗವಾಗಿದ್ದರು. ಧುತ್ತರಗಿ ರಚಿಸಿದ ಸಂಪತ್ತಿಗೆ ಸವಾಲು ವರ್ಗ ಸಂಘರ್ಷ ಕುರಿತ ಮೊದಲ ನಾಟಕ. ಡಾ. ರಾಜಕುಮಾರ್ ನಾಯಕನ ಪಾತ್ರದಲ್ಲಿ ಅಭಿನಯಿಸಿದ ಇದೇ ಹೆಸರಿನ ಚಲನಚಿತ್ರ ಭಾರಿ ಜನಪ್ರಿಯ ಚಿತ್ರವಾಯಿತಲ್ಲದೆ, ತಮಿಳು, ತೆಲುಗು, ಮಲೆಯಾಳಿ ಭಾಷೆಯಲ್ಲೂ ಚಿತ್ರೀಕರಣಗೊಂಡು 4 ಭಾಷೆಯಲ್ಲಿ ಮೂಡಿಬಂದ ಹೆಗ್ಗಳಿಕೆ ಪಡೆಯಿತು. `ಕಲ್ಪನಾ ಪ್ರಪಂಚದಿಂದ ಆರಂಭಿಸಿ ಒಟ್ಟು 63 ನಾಟಕಗಳನ್ನು ರಚಿಸಿರುವ ಧುತ್ತರಗಿ ಅವರ ಮಲಮಗಳು (ಮುದುಕನ ಮದುವೆ), ತಾಯಿಕರುಳು, ಸುಖದ ಸುಪ್ಪತ್ತಿಗೆ, ಸಂಪತ್ತಿಗೆ ಸವಾಲು, ಸೊಸೆ ತಂದ ಸೌಭಾಗ್ಯ (ಚಿಕ್ಕಸೊಸೆ) ಕಿತ್ತೂರು ಚೆನ್ನಮ್ಮ, ಸಿಂಧೂರ ಲಕ್ಷ್ಮಣ, ಪುರಂದರದಾಸ ಮುಂತಾದವು ಶ್ರೇಷ್ಠ ಹಾಗೂ ಜನಪ್ರಿಯ ನಾಟಕಗಳಾಗಿದ್ದು, ವಿವಿಧ ನಾಟಕ ಕಂಪೆನಿಗಳಲ್ಲಿ ಹಾಗೂ ಗ್ರಾಮೀಣ ಹವ್ಯಾಸಿಗಳಲ್ಲಿ ಲಕ್ಷಗಟ್ಟಲೆ ಪ್ರದರ್ಶನ ಕಂಡಿವೆ. ಪತ್ನಿ ಸರೋಜಮ್ಮ ಧುತ್ತರಗಿ ವೃತ್ತಿರಂಗಭೂಮಿಯ ಜನಪ್ರಿಯ ತಾರೆ. ಪತ್ನಿಯೊಂದಿಗೆ 15 ವರ್ಷಕ್ಕಿಂತ ಹೆಚ್ಚು ಕಾಲ ನಾಟಕ ಕಂಪೆನಿಯೊಂದನ್ನು ಅವರು ನಡೆಸಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ (1985), ರಾಜ್ಯೋತ್ಸವ ಪ್ರಶಸ್ತಿ (1996)ಗೆ ಭಾಜನರಾದ ಅವರಿಗೆ ಕನ್ನಡ ರಂಗಭೂಮಿಯ ಅತ್ಯುನ್ನತ ಪ್ರಶಸ್ತಿಯಾದ ಗುಬ್ಬಿ ವೀರಣ್ಣ ಪ್ರಶಸ್ತಿಯನ್ನು 2000ರಲ್ಲಿ ಪ್ರದಾನ ಮಾಡಲಾಗಿತ್ತು. ಪತ್ನಿ ಸರೋಜಮ್ಮನವರಿಗೆ ಪ್ರಸಕ್ತ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿತ್ತು. ಅವರು ಇತ್ತ ಬೆಂಗಳೂರಿನಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿದ್ದಾಗಲೇ ಅತ್ತ ಧುತ್ತರಗಿ ಅವರು ನಿಧನರಾಗಿದ್ದು ಮನಕಲುಕುವಂತೆ ಇತ್ತು.

ಉಲ್ಲೇಖ

[೧]

Tags:

ರಂಗಭೂಮಿಸಂಪತ್ತಿಗೆ ಸವಾಲ್

🔥 Trending searches on Wiki ಕನ್ನಡ:

ಭಾರತೀಯ ಜನತಾ ಪಕ್ಷತೆಲುಗುಕರ್ನಾಟಕದ ಹಬ್ಬಗಳುಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಪೂರ್ಣಚಂದ್ರ ತೇಜಸ್ವಿಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಲೆಕ್ಕ ಪರಿಶೋಧನೆಅನುಭೋಗಗೋತ್ರ ಮತ್ತು ಪ್ರವರಶೈಕ್ಷಣಿಕ ಮನೋವಿಜ್ಞಾನಚೀನಾಭಾರತದ ಸಂವಿಧಾನ ರಚನಾ ಸಭೆಭಾರತದ ಜನಸಂಖ್ಯೆಯ ಬೆಳವಣಿಗೆಬೀಚಿಉಪನಿಷತ್೧೭೮೫ಸಲಗ (ಚಲನಚಿತ್ರ)ಧರ್ಮರಾಮಜ್ಞಾನಪೀಠ ಪ್ರಶಸ್ತಿಹವಾಮಾನಯುವರತ್ನ (ಚಲನಚಿತ್ರ)ಬಾಬು ಜಗಜೀವನ ರಾಮ್ಗ್ರಹಜೇನು ಹುಳುಮಡಿವಾಳ ಮಾಚಿದೇವನಾ. ಡಿಸೋಜಪಿ.ಲಂಕೇಶ್ಸಗಟು ವ್ಯಾಪಾರಆಲಿವ್ತಾಪಮಾನತಾಳಗುಂದ ಶಾಸನಚೈತ್ರ ಮಾಸಕಿಂಪುರುಷರುಹರಿಹರ (ಕವಿ)ಪೊನ್ನಕರ್ಣಾಟಕ ಬ್ಯಾಂಕ್ಎನ್ ಆರ್ ನಾರಾಯಣಮೂರ್ತಿಮುದ್ದಣಹಂಪೆಮಹಿಳೆ ಮತ್ತು ಭಾರತಚದುರಂಗ (ಆಟ)ಚಂದ್ರಭಾರತದ ನದಿಗಳುಗ್ರಾಮೀಣ ಪ್ರಾದೇಶಿಕ ಬ್ಯಾಂಕ್ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗೀಳು ಮನೋರೋಗಉತ್ತರ ಕರ್ನಾಟಕಚೋಮನ ದುಡಿಮಲ್ಲಿಕಾರ್ಜುನ ಜ್ಯೋತಿರ್ಲಿಂಗನವೋದಯಉಡುಪಿ ಜಿಲ್ಲೆಮಾಹಿತಿ ತಂತ್ರಜ್ಞಾನವಿನಾಯಕ ದಾಮೋದರ ಸಾವರ್ಕರ್ದಶಾವತಾರಪಾಲಕ್ಅಲಾವುದ್ದೀನ್ ಖಿಲ್ಜಿಭಾರತದ ಸ್ವಾತಂತ್ರ್ಯ ಚಳುವಳಿಸರ್ಪ ಸುತ್ತುರಾಶಿನೈಸರ್ಗಿಕ ಸಂಪನ್ಮೂಲಕುಮಾರವ್ಯಾಸಕಾದಂಬರಿವಾದಿರಾಜರುವಿಧಾನ ಸಭೆಹಾಗಲಕಾಯಿಅಮೆರಿಕಉಪ್ಪಿನ ಸತ್ಯಾಗ್ರಹಲಕ್ಷ್ಮೀಶಪಶ್ಚಿಮ ಘಟ್ಟಗಳುಅಡೋಲ್ಫ್ ಹಿಟ್ಲರ್ಜೀವನನೀನಾದೆ ನಾ (ಕನ್ನಡ ಧಾರಾವಾಹಿ)ವಿಶಿಷ್ಟಾದ್ವೈತಸಿಂಗಾಪುರವಿನಾಯಕ ಕೃಷ್ಣ ಗೋಕಾಕಪತ್ರಕರ್ನಾಟಕದ ಶಾಸನಗಳು🡆 More