ಜ್ಯೋತಿ ಗುರುಪ್ರಸಾದ್

೧೯೬೫ ಜುಲೈ ೧೬ರಂದು ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ಜನಿಸಿದ ಇವರು ಈಗ ಕಾರ್ಕಳದಲ್ಲಿ ವಾಸಿಸುತ್ತಿದ್ದಾರೆ.

ಜ್ಯೋತಿ ಗುರುಪ್ರಸಾದ್
ಜ್ಯೋತಿ ಗುರುಪ್ರಸಾದ್

ಜ್ಯೋತಿ ಗುರುಪ್ರಸಾದ್

ಮೈಸೂರು ವಿ.ವಿ.ಯಿಂದ ಕನ್ನಡ ಎಂ.ಎ.ಪದವಿ.ಕರ್ನಾಟಕ ಮುಕ್ತ ವಿ.ವಿ.ಇಂದ ಇಂಗ್ಲಿಶ್ ಎಂ.ಎ.ಪದವಿ ಪಡೆದರು. ಹಲವು ಕಾಲೇಜುಗಳಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿರುವ ಅನುಭವ.

ಕೃತಿಗಳು

  • ಚುಕ್ಕಿ-ಕವನ ಸಂಕಲನ
  • ಮಾಯಾ ಪೆಟ್ಟಿಗೆ - ಕವನ ಸಂಕಲನ
  • ಈ ಕ್ಷಣ - ಅಂಕಣ
  • ಕಣ್ಣ ಭಾಷೆ - ಅಂಕಣ
  • ಜೋಲಿ ಲಾಲಿ- ಅಂಕಣ

ಪ್ರಶಸ್ತಿಗಳು

"ಚುಕ್ಕಿ" ಕವನ (೨೦೦೩)ಸಂಕಲನ ವಿಶಿಷ್ಟ ಸಂಕಲನವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರುಜುವಾತು ಪ್ರಕಾಶನದಿಂದ ಬೆಳಕು ಕಂಡ "ಚುಕ್ಕಿ" ಸಂಕಲನದ ಹಸ್ತಪ್ರತಿಗೆ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋದನಾ ಕೇಂದ್ರದ ಪ್ರತಿಷ್ಟಿತ "ಕಡೆಂಗೋಡ್ಲು ಕಾವ್ಯ ಪ್ರಶಸ್ತಿ" ಲಬಿಸಿದೆ. ಚುಕ್ಕಿ ಕವನ ಸಂಕಲನಕ್ಕೆ ಗುಲ್ಬರ್ಗಾಾದ ಸೇಡಂನ "ಅಮ್ಮ"ಪ್ರಶಸ್ತಿ . ಹಾಸನದ "ಲೇಖಕಿ"ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿವೆ. ತುಮಕೂರಿನಿಂದ ಪ್ರಕಟಗೊಳ್ಳುವ ಮಹಿಳೆಯರೇ ನಡೆಸಿಕೊಂಡು ಬರುವ ಕೈ ಬರಹದ ಮಾಸ ಪತ್ರಿಕೆ "ಶೈನಾ"ಗೆ ಐದು ವರ್ಷಗಳಿಂದ "ಕಣ್ಣ ಭಾಷೆ"ಎಂಬ ಅಂಕಣ ಬರೆಯುತ್ತಿದ್ದಾರೆ. ವಾರ್ತಾ ಭಾರತಿಯಲ್ಲಿ "ಜೋಲಿ ಲಾಲಿ"ಅಂಕಣ ಬರೆಯುತ್ತಿದ್ದಾರೆ. ಮುಂಬೈಯ ಜಗಜ್ಯೋತಿ ಕಲಾ ವೃಂದದ ಸುಶೀಲಾ ಶೆಟ್ಟಿ ಸ್ಮಾರಕ ೨೦೦೯ನೇ ಸಾಲಿನ ಕಾವ್ಯ ಪ್ರಶಸ್ತಿಗೆ ಜ್ಯೋತಿ ಗುರುಪ್ರಸಾದ್ ಇವರಿಗೆ ಸಂದಿದೆ. ಬಂಟ್ವಾಳ ತುಂಬೆ ನಿರತ ಸಾಹಿತ್ಯ ಸಂಪದ ಕೊಡಮಾಡುವ "ನಿರತ ಪ್ರಶಸ್ತಿ ೨೦೦೯ "ಇವರ ಮಾಯಪೆಟ್ಟಿಗೆಗೆ ಲಬಿಸಿದೆ. ಗುಲ್ಬರ್ಗಾ ‘ಕಾವ್ಯ ಜ್ಯೋತಿ’ ಹಾಸನ ಲೇಖಕಿಯರ ‘ಲೇಖಕಿ ಪ್ರಶಸ್ತಿ’ ಬೆಂಗಳೂರಿನ ‘ಸಾಹಿತ್ಯ ಸೇತು’ ಪ್ರಶಸ್ತಿ ಲಭಿಸಿದೆ. ‘ಮಾಯಾಪೆಟ್ಟಿಗೆ’ ಕವನ ಸಂಕಲನ, ‘ಈ ಕ್ಷಣ’ ಅಂಕಣ ಬರಹ ಸಂಗ್ರಹ ಪ್ರಕಟಿಸಿರುವ ಜ್ಯೋತಿ ಗುರುಪ್ರಸಾದ್ ‘ಪ್ರೀತಿ ಮತ್ತು ಪ್ರೀತಿ ಮಾತ್ರ’ ಗದ್ಯ ಸಂಕಲನ ಪ್ರಕಟವಾದಗಿದೆ. "ವರನಂದಿ ಪ್ರತಿಮೆ" ಹಸ್ತಪ್ರತಿಗೆ ಕಾವ್ಯ ಪ್ರಶಸ್ತಿ ಪಡೆದಿರುವ ಜ್ಯೋತಿ ಗುರುಪ್ರಸಾದ್ ಅನೇಕ ಕೃತಿಗಳನ್ನು ರಚಿಸಿದ್ದಾರೆ ೨೦೧೦ ಜು.31ರಂದು ಶಿವಮೊಗ್ಗ ಕರ್ನಾಟಕ ಸಂಘದ ವತಿಯಿಂದ ಪ್ರತಿ ವರ್ಷ ಕನ್ನಡದ ಅತ್ಯುತ್ತಮ ಅಂಕಣ ಬರಹಗಳ ಕೃತಿಗೆ ನೀಡಲಾಗುವ ‘ಹಾ.ಮಾ.ನಾಯಕ’ ಬಹುಮಾನವನ್ನು ಈ ಬಾರಿ ಕನ್ನಡದ ಖ್ಯಾತ ಕವಯಿತ್ರಿ ಹಾಗೂ ಅಂಕಣಕಾರ್ತಿ ಕಾರ್ಕಳದ ಜ್ಯೋತಿ ಗುರುಪ್ರಸಾದ್‌ರ ‘ಈ ಕ್ಷಣ’ಕ್ಕೆ ನೀಡಲಾಗಿದೆ.

ಕುಟುಂಬ

ಜ್ಯೋತಿ ಗುರುಪ್ರಸಾದ್ ರವರ ಪತಿ ಗುರುಪ್ರಸಾದ್, ತಹಶೀಲ್ದಾರ್ ರಾಗಿ ವಿವಿಧ ತಾಲೂಕುಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇವರ ಪುತ್ರ ಗೌತಮ್ ಜ್ಯೋತ್ಸ್ನಾ ಜಿ.ಜೆ, ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಇಂಗ್ಲೀಷ ಪ್ರಾದ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇವರು ಕನ್ನಡದಲ್ಲಿ ಸಣ್ಣ ಕಥೆಗಳನ್ನು ರಚಿಸಿದ್ದಾರೆ, ಹಾಗೂ ದೂರದರ್ಶನ ಕ್ಕೆ ಆರ್ಡಿನರಿ ಎಂಬ ಟೆಲಿಫಿಲ್ಮ್ ಅನ್ನು ನಿರ್ದೇಶಿಸಿದ್ದಾರೆ.

Tags:

ಜ್ಯೋತಿ ಗುರುಪ್ರಸಾದ್ ಜ್ಯೋತಿ ಗುರುಪ್ರಸಾದ್ ಕೃತಿಗಳುಜ್ಯೋತಿ ಗುರುಪ್ರಸಾದ್ ಪ್ರಶಸ್ತಿಗಳುಜ್ಯೋತಿ ಗುರುಪ್ರಸಾದ್ ಕುಟುಂಬಜ್ಯೋತಿ ಗುರುಪ್ರಸಾದ್ಕನ್ನಡಕರ್ನಾಟಕಜುಲೈ

🔥 Trending searches on Wiki ಕನ್ನಡ:

ಏಕೀಕರಣನವರತ್ನಗಳುನೈಟ್ರೋಜನ್ ಚಕ್ರಜೋಡು ನುಡಿಗಟ್ಟುಆವರ್ತ ಕೋಷ್ಟಕಬಸವೇಶ್ವರಇತಿಹಾಸನವೋದಯಇಂಡಿಯಾನಾಆಮ್ಲ ಮಳೆಸಿಂಗಾಪುರವಿತ್ತೀಯ ನೀತಿಪಾರ್ವತಿಕೈವಾರ ತಾತಯ್ಯ ಯೋಗಿನಾರೇಯಣರುಭಾರತದಲ್ಲಿ ನಿರುದ್ಯೋಗಹ್ಯಾರಿ ಪಾಟರ್ ಅಂಡ್ ದಿ ಹಾಫ್-ಬ್ಲಡ್ ಪ್ರಿನ್ಸ್ಬಿ. ಆರ್. ಅಂಬೇಡ್ಕರ್ಭೂಕಂಪಗ್ರೀಸ್ಮಾರಿಕಾಂಬಾ ದೇವಸ್ಥಾನ (ಸಾಗರ)ಪರೀಕ್ಷೆವಿಮರ್ಶೆಭಾರತೀಯ ಧರ್ಮಗಳುತತ್ಪುರುಷ ಸಮಾಸಅಂತಾರಾಷ್ಟ್ರೀಯ ಸಂಬಂಧಗಳುರತ್ನತ್ರಯರುವಿಜಯ ಕರ್ನಾಟಕರಾಗಿಅರ್ಜುನಜೋಳದಶಾವತಾರಜವಾಹರ‌ಲಾಲ್ ನೆಹರುಆರ್ಥಿಕ ಬೆಳೆವಣಿಗೆವಾಯುಗುಣ ಬದಲಾವಣೆಅಂಜನಿ ಪುತ್ರರಾವಣಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಜೀವಸತ್ವಗಳುಎನ್ ಆರ್ ನಾರಾಯಣಮೂರ್ತಿಮಹಾಕಾವ್ಯಲಿಂಗಾಯತ ಧರ್ಮಆದಿ ಕರ್ನಾಟಕಕರ್ನಾಟಕ ಸ್ವಾತಂತ್ರ್ಯ ಚಳವಳಿಬಂಡೀಪುರ ರಾಷ್ಟ್ರೀಯ ಉದ್ಯಾನವನವಾದಿರಾಜರುಮಹಾವೀರಗ್ರಾಮ ಪಂಚಾಯತಿಶ್ಯೆಕ್ಷಣಿಕ ತಂತ್ರಜ್ಞಾನಎಸ್.ಜಿ.ಸಿದ್ದರಾಮಯ್ಯಸುಧಾ ಮೂರ್ತಿಕನ್ನಡ ಸಾಹಿತ್ಯ ಪ್ರಕಾರಗಳುಕರ್ನಾಟಕದ ಇತಿಹಾಸಭಾರತದ ಸ್ವಾತಂತ್ರ್ಯ ಚಳುವಳಿರುಕ್ಮಾಬಾಯಿಸಂಶೋಧನೆಡೊಳ್ಳು ಕುಣಿತದುಂಡು ಮೇಜಿನ ಸಭೆ(ಭಾರತ)ಜೋಗಿ (ಚಲನಚಿತ್ರ)ಪಾಂಡವರುಕಾಳಿದಾಸಶಕ್ತಿಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಗಣಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಮೋಂಬತ್ತಿಕ್ರೀಡೆಗಳುಸಿಂಧನೂರುಟಿಪ್ಪು ಸುಲ್ತಾನ್ವರ್ಣಾಶ್ರಮ ಪದ್ಧತಿಕನ್ನಡಪ್ರಭಕವಿರಾಜಮಾರ್ಗಕನ್ನಡ ಸಾಹಿತ್ಯಸಮಸ್ಥಾನಿನೈಸರ್ಗಿಕ ಸಂಪನ್ಮೂಲಚದುರಂಗದ ನಿಯಮಗಳುಚಂಡಮಾರುತ🡆 More