ಜೆಫ್ರಿ ಹಿಂಟನ್

ಜೆಫ್ರಿ ಎವರೆಸ್ಟ್ ಹಿಂಟನ್ (ಜನನ 6 ಡಿಸೆಂಬರ್ 1947) ಒಬ್ಬ ಕೆನಡಾದ ಅರಿವಿನ ಮನಶ್ಶಾಸ್ತ್ರಜ್ಞ ಮತ್ತು ಗಣಕ ವಿಜ್ಞಾನಿ.

ಅವರು ಕೃತಕ ನರ ಜಾಲಗಳ ಬಗೆ ಅವರ ಕೆಲಸಕ್ಕೆ ಹೆಚ್ಚು ಹೆಸರುವಾಸಿಯಾಗಿದ್ದಾರೆ. ೨೦೧೩ರಿಂದ ಅವರು ತಮ್ಮ ಕೆಲಸದ ಸಮಯವನ್ನು ಗೂಗಲ್ (ಗೂಗಲ್ ಬ್ರೈನ್) ಮತ್ತು ಟೊರೊಂಟೊ ವಿಶ್ವವಿದ್ಯಾಲಯದ ನಡುವೆ ವಿಂಗಡಿಸುತ್ತಿದ್ದಾರೆ. ೨೦೧೭ರಲ್ಲಿ ಅವರು ಟೊರೊಂಟೊದ ವೆಕ್ಟರ್ ಇನ್ಸ್ಟಿಟ್ಯೂಟ್ನ ಸಹ ಸಂಸ್ಥಾಪಕರು ಹಾಗು ಮುಖ್ಯ ವೈಜ್ಞಾನಿಕ ಸಲಹೆಗಾರರಾದರು.

ಜೆಫ್ರಿ ಹಿಂಟನ್
CC, FRS, FRSC
ಜೆಫ್ರಿ ಹಿಂಟನ್
೨೦೧೩ರಲ್ಲಿ ಹಿಂಟನ್
ಜನನಜೆಫ್ರಿ ಎವರೆಸ್ಟ್ ಹಿಂಟನ್
(1947-12-06) ೬ ಡಿಸೆಂಬರ್ ೧೯೪೭ (ವಯಸ್ಸು ೭೬)
ಲಂಡನ್
ಕಾರ್ಯಕ್ಷೇತ್ರ
ಸಂಸ್ಥೆಗಳುಟೊರೊಂಟೊ ವಿಶ್ವವಿದ್ಯಾಲಯ
ಗೂಗಲ್
ಯೂನಿವರ್ಸಿಟಿ ಕಾಲೇಜ್ ಲಂಡನ್‌
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಸ್ಯಾನ್‌ ಡಿಯಾಗೋ
ಕಾರ್ನೆಗೀ ಮೆಲಾನ್ ವಿಶ್ವವಿದ್ಯಾಲಯ
ಅಭ್ಯಸಿಸಿದ ವಿದ್ಯಾಪೀಠ
ಡಾಕ್ಟರೇಟ್ ಸಲಹೆಗಾರರುಕ್ರಿಸ್ಟೋಫರ್ ಲಾಂಗುಯೆಟ್-ಹಿಗ್ಗಿನ್ಸ್
ಡಾಕ್ಟರೇಟ್ ವಿದ್ಯಾರ್ಥಿಗಳು
  • ರಿಚರ್ದ ಝೆಮೆಲ್
  • ಬ್ರೆನ್ಡನ್ ಫ್ರೇ, ರ್ಯಾಡ್ಫರ್ಡ ಎಮ್. ನೀಲ್
  • ರುಸ್ಲಾನ್ ಸಾಲಾಖುತ್ದಿನಾವ್
  • ಇಲ್ಯಾ ಸುಟ್ಸಕೆವರ್
ಪ್ರಸಿದ್ಧಿಗೆ ಕಾರಣ
  • ಬ್ಯಾಕ್‌ಪ್ರೊಪಾಗೇಶನ್ ಅಲ್ಗಾರಿದಮ್ನ ಬಳಕೆ
  • ಬೋಲ್ಟ್ಜ್ಮನ್ ಯಂತ್ರ
  • ಆಳವಾದ ಕಲಿಕೆ
ಗಮನಾರ್ಹ ಪ್ರಶಸ್ತಿಗಳು
  • ಫೆಲೋ ಆಫ್ ರಾಯಲ್ ಸೋಸೈಟಿ (೧೯೯೮)
  • ರೂಮೆಲ್ಹಾರ್ಟ್ ಪ್ರಶಸ್ತಿ (೨೦೦೧)
  • ಗೌರವಾನ್ವಿತ ದಾಕ್ಟರೇಟ, ಎಡಿನ್ಬರ ವಿಶ್ವವಿದ್ಯಾಲಯ
  • ಐ.ಜೇ.ಸಿ.ಏ.ಐ. ಅವಾರ್ಡ ಫಾರ್ ರಿಸರ್ಚ ಎಕ್ಸಲೇನ್ಸ್ (೨೦೦೫)
  • ಹರ್ಝಬರ್ಗ ಕೆನಡ ಗೋಲ್ಡ ಮೆಡಲ್ ಫಾರ್ ಸಯನ್ಸ್ ಆ್ಯಂಡ್ ಇಂಜಿನೀರಿಂಗ್ (೨೦೧೧)
  • ಗೌರವಾನ್ವಿತ ದಾಕ್ಟರೇಟ, ಯುನಿವರ್ಸಿಟೆ ಡೆ ಶರ್ಬ್ರೂಕ್ (೨೦೧೩)
  • ಐ.ಈ.ಈ.ಈ./ಆರ್.ಎಸ್.ಈ. ಜೇಮ್ಸ್ ಕ್ಲಾರ್ಕ್ ಮ್ಯಾಕ್ಸವೇಲ್ ಪ್ರಶಸ್ತಿ (೨೦೧೬)

ನ್ಯಾಶನಲ್ ಆಕೇಡೆಮಿ ಆಫ್ ಇಂಜಿನೀರಿಂಗ್ನ ವಿದೇಶಿ ಸದಸ್ಯರು (೨೦೧೬)

  • ಟ್ಯೂರಿಂಗ್ ಪ್ರಶಸ್ತಿ (೨೦೧೮)
ಜಾಲತಾಣ
www.cs.toronto.edu/~hinton/

೧೯೮೬ರಲ್ಲಿ ಪ್ರಕಟವಾದ ಡೇವಿಡ್ ರುಮೆಲ್ಹಾರ್ಟ್ ಮತ್ತು ರೊನಾಲ್ಡ್ ಜೆ. ವಿಲಿಯಮ್ಸ್ ಅವರೊಂದಿಗೆ ಹಿಂಟನ್ ಸಹ-ಲೇಖಿಸಿದ ಬಹು ಉಲ್ಲೇಖಿತವಾದ ಸಂಶೋಧನ ಪತ್ರದಲ್ಲಿ ಅವರು ಬಹು-ಪದರದ ನರ ಜಾಲಗಳಿಗೆ ತರಬೇತಿ ನೀಡಲು ಬ್ಯಾಕ್‌ಪ್ರೊಪಾಗೇಶನ್ ಅಲ್ಗಾರಿದಮ್ ಅನ್ನು ಜನಪ್ರಿಯಗೊಳಿಸಿದರು. ಆದರೇ ಅವರು ಈ ವಿಧಾನವನ್ನು ಮೊದಲು ಪ್ರಸ್ತಾಪಿಸಲಿಲ್ಲ. ಹಿಂಟನ್ ಅವರನ್ನು ಆಳವಾದ ಕಲಿಕೆಯ ಸಮುದಾಯದ ಪ್ರಮುಖ ವ್ಯಕ್ತಿ ಎಂದು ಗುರಿತಿಸುತ್ತಾರೆ ಮತ್ತು ಕೆಲವರು ಅವರನ್ನು "ಗಾಡ್ ಫಾದರ್ ಆಫ್ ಡೀಪ್ ಲರ್ನಿಂಗ್" ಎಂದು ಕರೆಯುತ್ತಾರೆ. ಅವರ ವಿದ್ಯಾರ್ಥಿ ಅಲೆಕ್ಸ್ ಕ್ರಿಝೆವ್ಸ್ಕಿ ವಿನ್ಯಾಸಗೊಳಿಸಿದ ಅಲೆಕ್ಸ್ನೆಟ್‌ ಎಂಬ ಹೆಸರಿನ ಚಿತ್ರ-ಗುರುತಿಸುವಿಕೆಯ ಮಾದರಿ ೨೦೧೨ರಿನ ಇಮೇಜ್ ನೆಟ್ ಚಾಲೆಂಜ್ ನಲ್ಲಿ ಮೈಲಿಗಲ್ಲು ಆಯಿತು. ಈ ಮಾದರಿ ಕಂಪ್ಯೂಟರ್ ದೃಷ್ಟಿ ಕ್ಷೇತ್ರದಲ್ಲಿ ಕ್ರಾಂತಿಯುಂಟುಮಾಡಿತು. ಆಳವಾದ ಕಲಿಕೆಯ ಕೆಲಸಕ್ಕಾಗಿ ಹಿಂಟನ್ ಅವರಿಗೆ ೨೦೧೮ರ ಟ್ಯೂರಿಂಗ್ ಪ್ರಶಸ್ತಿಯನ್ನು ಯೋಶುವಾ ಬೆಂಜಿಯೊ ಮತ್ತು ಯಾನ್ ಲೆಕುನ್ ಅವರೊಂದಿಗೆ ನೀಡಲಾಯಿತು.

ಶಿಕ್ಷಣ

ಹಿಂಟನ್ ಕೇಂಬ್ರಿಡ್ಜ್‌‌‌‌‌‌‌‌‌‌‌ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ಪಡೆದರು. ೧೯೭೦ರಲ್ಲಿ ಪ್ರಾಯೋಗಿಕ ಮನೋವಿಜ್ಞಾನದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದರು. ಅವರು ಎಡಿನ್ಬರ ವಿಶ್ವವಿದ್ಯಾಲಯದಲ್ಲಿ ತಮ್ಮ ಅಧ್ಯಯನವನ್ನು ಮುಂದುವರೆಸಿದರು. ಅಲ್ಲಿ ಕ್ರಿಸ್ಟೋಫರ್ ಲಾಂಗುಯೆಟ್-ಹಿಗ್ಗಿನ್ಸ್ ಅವರ ಮೇಲ್ವಿಚಾರಣೆಯಲ್ಲಿ ನಡೆಸಿದ ಸಂಶೋಧನೆಗಾಗಿ ೧೯೭೮ರಲ್ಲಿ ಕೃತಕ ಬುದ್ಧಿಮತ್ತೆಯಲ್ಲಿ ಡಾಕ್ಟರೇಟ್ ಪಡೆದರು.

ವೃತ್ತಿ ಮತ್ತು ಸಂಶೋಧನೆ

ಪಿಎಚ್‌ಡಿ ನಂತರ ಅವರು ಸಸೆಕ್ಸ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡಿದರು. ಮುಂದಿನ ಕೆಲಸಕ್ಕೆ ಅನುಕೂಲವಾಗದಿದ್ದರಿಂದ ಅಮೇರಿಕಾಗೆ ತೆರಳಿ ಅಲ್ಲಿನ ಸ್ಯಾನ್‌ ಡಿಯಾಗೋ ನಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಮತ್ತು ಕಾರ್ನೆಗೀ ಮೆಲಾನ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡಿದರು. ಯೂನಿವರ್ಸಿಟಿ ಕಾಲೇಜ್ ಲಂಡನ್‌ನಲ್ಲಿ ಗ್ಯಾಟ್ಸ್‌ಬಿ ಚಾರಿಟಬಲ್ ಫೌಂಡೇಶನ್ ಕಂಪ್ಯೂಟೇಶನಲ್ ನ್ಯೂರೋಸೈನ್ಸ್ ಘಟಕದ ಸ್ಥಾಪಕ ನಿರ್ದೇಶಕರಾಗಿದ್ದರು. ಹಾಲಿಯಲ್ಲಿ ಅವರು ಟೊರೊಂಟೊ ವಿಶ್ವವಿದ್ಯಾಲಯದ ಗಣಕ ವಿಜ್ಞಾನ ವಿಭಾಗದಲ್ಲಿ ಎಮೆರಿಟಸ್ ಪ್ರಖ್ಯಾತ ಪ್ರಾಧ್ಯಾಪಕರಾಗಿದ್ದಾರೆ. ಅವರು ಯಂತ್ರ ಕಲಿಕೆಯಲ್ಲಿ ಕೆನಡಾ ರಿಸರ್ಚ್ ಚೇರ್‌ ಪದವಿಯನ್ನು ಹೊಂದಿದ್ದಾರೆ. ಪ್ರಸ್ತುತ ಕೆನಡಿಯನ್ ಇನ್‌ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ಡ್ ರಿಸರ್ಚ್‌ನಲ್ಲಿ "ಲರ್ನಿಂಗ್ ಇನ್ ಮಶೀನ್ಸ್ ಆ್ಯಂಡ್ ಬ್ರೈನ್ಸ್" ಕಾರ್ಯಕ್ರಮದ ಸಲಹೆಗಾರರಾಗಿದ್ದಾರೆ. ಮಾರ್ಚ್ ೨೦೧೩ರಲ್ಲಿ ಹಿಂಟನ್ ತಮ್ಮ ಡಿಎನ್‌ಎನ್‌ ರಿಸರ್ಚ್ ಇಂಕ್ ಎಂಬ ಹೆಸರಿನ ಸಂಸ್ಥೆಯನ್ನು ಗೂಗಲ್ ಸ್ವಾಧೀನಪಡಿಸಿಕೊಂಡಾಗ ಗೂಗಲ್‌ಗೆ ಸೇರಿದರು. ಅವರು ತಮ್ಮ ಸಮಯವನ್ನು ಗೂಗಲ್ ಮತ್ತು ವಿಶ್ವವಿದ್ಯಾಲಯದಲ್ಲಿ ಸಂಶೋಧನೆಯ ನಡುವೆ ವಿಂಗಡಿಸುತ್ತಿದ್ದಾರೆ.

ಯಂತ್ರ ಕಲಿಕೆ, ಜ್ಞಾಪಕ, ಗ್ರಹಿಕೆ ಮತ್ತು ಚಿಹ್ನೆ ಸಂಸ್ಕರಣೆಗಾಗಿ ನರ ಜಾಲಗಳನ್ನು ಬಳಸುವ ವಿಧಾನಗಳನ್ನು ಹಿಂಟನ್ ಅವರು ಸಂಶೋಧನೆಯಲ್ಲಿ ಅಧ್ಯಯನ ನಡೆಸುತ್ತಾರೆ. ಅವರು ೨೦೦ಕ್ಕೂ ಹೆಚ್ಚು ಪೀರ್ ವಿಮರ್ಶಿತ ಪ್ರಕಟಣೆಗಳ ಲೇಖಕರು ಅಥವಾ ಸಹ-ಲೇಖಕರು ಆಗಿದ್ದಾರೆ. ಕಾರ್ನೆಗೀ ಮೆಲಾನ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾಗ, ಡೇವಿಡ್ ಇ. ರುಮೆಲ್‌ಹಾರ್ಟ್ ಮತ್ತು ರೊನಾಲ್ಡ್ ಜೆ. ವಿಲಿಯಮ್ಸ್ ಅವರೊಂದಿಗೆ ಹಿಂಟನ್ ಅವರು ಬಹು-ಪದರದ ನರ ಜಾಲಗಳಲ್ಲಿ ಕಲಿಕೆಗೆ ಬ್ಯಾಕ್‌ಪ್ರೊಪಾಗೇಶನ್ ಅಲ್ಗಾರಿದಮ್ ಅನ್ನು ಅನ್ವಯಿಸಿದರು. ಅಂತಹ ನೆಟ್‌ವರ್ಕ್‌ಗಳು ಡೇಟಾದ ಉಪಯುಕ್ತ ಆಂತರಿಕ ಪ್ರಾತಿನಿಧ್ಯಗಳನ್ನು ಕಲಿಯಬಹುದು ಎಂದು ಅವರ ಪ್ರಯೋಗಗಳು ತೋರಿಸಿಕೊಟ್ಟವು. ಅವರು ಪ್ರಕಾಶಿಸಿದ ಸಂಶೋಧನ ಪತ್ರ ಈ ವಿಧಾನವನ್ನು ಸೂಚಿಸಿದ ಮೊದಲು ಪ್ರಕಾಶನವಲ್ಲ, ಆದರೆ ಬ್ಯಾಕ್‌ಪ್ರೊಪಾಗೇಶನ್ ಅನ್ನು ಜನಪ್ರಿಯಗೊಳಿಸಲು ಯಶಸ್ವಿ ಆಯಿತು. ಸೆಪ್ಪೊ ಲಿನ್ನೈನ್ಮಾ ಸೂಚಿಸಿದ ರಿವರ್ಸ್ ಮೋಡ್ ಆಟೋಮ್ಯಾಟಿಕ್ ಡಿಫರೆನ್ಸಿಯೇಶನ್ ನ ನಿರ್ದಿಷ್ಟ ನಿದರ್ಶನ ಬ್ಯಾಕ್‌ಪ್ರೊಪಾಗೇಶನ್. ನರ ಜಾಲಗಳಿಗೆ ತರಬೇತಿ ನೀಡಲು ಈ ವಿಧಾನವನ್ನು ಪಾಲ್ ವರ್ಬೋಸ್ ಅವರು ಬಳಸಿದರು.

ಅದೇ ಅವಧಿಯಲ್ಲಿ, ಡೇವಿಡ್ ಅಕ್ಲೆ ಮತ್ತು ಟೆರಿ ಸೆಜ್ನೋವ್ಸ್ಕಿ ಅವರೊಂದಿಗೆ ಹಿಂಟನ್ ಅವರು ಬೋಲ್ಟ್ಜ್ಮನ್ ಯಂತ್ರಗಳನ್ನು ಕಂಡುಹಿಡಿದರು. ನರ ಜಾಲಗಳ ಸಂಶೋಧನೆಗೆ ಅವರ ಇತರ ಕೊಡುಗೆಗಳು ವಿತರಣೆ ಪ್ರಾತಿನಿಧ್ಯಗಳು, ಸಮಯ ವಿಳಂಬ ನರ ಜಾಲ, ಮಿಕ್ಸಚರ್ ಆಫ್ ಎಕ್ಸ್ಪರ್ಟ್ಸ್, ಹೆಲ್ಮ್‌ಹೋಲ್ಟ್ಜ್ ಯಂತ್ರಗಳು ಮತ್ತು ಪ್ರಾಡಕ್ಟ್ ಆಫ್ ಎಕ್ಸ್ಪರ್ಟ್ಸ್. ಜೆಫ್ರಿ ಹಿಂಟನ್ ಅವರ ಸಂಶೋಧನೆಯ ಪರಿಚಯ ಮಾಡಿಕೊಳ್ಳಲು "ಸೈಂಟಿಫಿಕ್ ಅಮೆರಿಕನ್"ನ ಸೆಪ್ಟೆಂಬರ್ ೧೯೯೨ ಮತ್ತು ಅಕ್ಟೋಬರ್ ೧೯೯೩ರ ಸಂಚಿಕೆಗಳಲ್ಲಿ ಅವರ ಲೇಖನಗಳನ್ನು ಓದಬಹುದು. ರಿಚರ್ಡ್ ಝೆಮೆಲ್, ಬ್ರೆನ್ಡನ್ ಫ್ರೇ, ರಾಡ್ಫರ್ಡ್ ಎಮ್. ನೀಲ್ , ರುಸ್ಲಾನ್ ಸಾಲಾಖುತ್ದಿನಾವ್, ಇಲ್ಯಾ ಸುಟ್ಸ್ಕೆವರ್, ಯಾನ್ ಲೆಕುನ್, ಮತ್ತು ಝೂಬಿನ್ ಘಾಹ್ರಾಮಾನಿ ಅವರು ಜೆಫ್ರಿ ಹಿಂಟನ್ ಅವರ ಪ್ರಮುಖ ಪಿಎಚ್‌ಡಿ ವಿದ್ಯಾರ್ಥಿಯರು ಅಥವಾ ಅವರೊಂದಿಗೆ ಕೆಲಸ ಮಾಡಿದ ಪ್ರಮುಖ ಪೋಸ್ಟ್ಡಾಕ್ಟೋರಲ್ ಸಂಶೋಧಕರು.

ಪ್ರಶಸ್ತಿಗಳು ಹಾಗು ಸಮ್ಮಾನಗಳು

  • ಫೆಲೋ ಆಫ್ ರಾಯಲ್ ಸೊಸೈಟಿ (೧೯೯೮)
  • ರೂಮೆಲ್ಹಾರ್ಟ್ ಪ್ರಶಸ್ತಿ (೨೦೦೧)
  • ಗೌರವಾನ್ವಿತ ಡಾಕ್ಟರೇಟ್, ಎಡಿನ್ಬರ ವಿಶ್ವವಿದ್ಯಾಲಯ
  • ಐ.ಜೇ.ಸಿ.ಏ.ಐ. ಅವಾರ್ಡ್ ಫಾರ್ ರಿಸರ್ಚ್ ಎಕ್ಸಲೇನ್ಸ್ (೨೦೦೫)
  • ಹರ್ಝಬರ್ಗ್ ಕೆನಡ ಗೋಲ್ಡ್ ಮೆಡಲ್ ಫಾರ್ ಸಯನ್ಸ್ ಆ್ಯಂಡ್ ಇಂಜಿನೀರಿಂಗ್ (೨೦೧೧)
  • ಗೌರವಾನ್ವಿತ ಡಾಕ್ಟರೇಟ್, ಯುನಿವರ್ಸಿಟೆ ಡೆ ಶರ್ಬ್ರೂಕ್ (೨೦೧೩)
  • ಐ.ಈ.ಈ.ಈ./ಆರ್.ಎಸ್.ಈ. ಜೇಮ್ಸ್ ಕ್ಲಾರ್ಕ್ ಮ್ಯಾಕ್ಸವೇಲ್ ಪ್ರಶಸ್ತಿ (೨೦೧೬)
  • ನ್ಯಾಶನಲ್ ಆಕಾಡೆಮಿ ಆಫ್ ಇಂಜಿನೀರಿಂಗ್ನ ವಿದೇಶಿ ಸದಸ್ಯರು (೨೦೧೬)
  • ಟ್ಯೂರಿಂಗ್ ಪ್ರಶಸ್ತಿ (೨೦೧೮)

ಹೆಚ್ಚಿನ ಮಾಹಿತಿಗಾಗಿ

Tags:

ಜೆಫ್ರಿ ಹಿಂಟನ್ ಶಿಕ್ಷಣಜೆಫ್ರಿ ಹಿಂಟನ್ ವೃತ್ತಿ ಮತ್ತು ಸಂಶೋಧನೆಜೆಫ್ರಿ ಹಿಂಟನ್ ಹೆಚ್ಚಿನ ಮಾಹಿತಿಗಾಗಿಜೆಫ್ರಿ ಹಿಂಟನ್

🔥 Trending searches on Wiki ಕನ್ನಡ:

ಶ್ರೀಲಂಕಾ ಕ್ರಿಕೆಟ್ ತಂಡಸಂಗೊಳ್ಳಿ ರಾಯಣ್ಣಭಾರತ ಸಂವಿಧಾನದ ಪೀಠಿಕೆಬಾಹುಬಲಿ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಈಸೂರುಶಾಂತಲಾ ದೇವಿಕರ್ನಾಟಕ ಸಂಗೀತರಚಿತಾ ರಾಮ್ಶಿವರಾಜ್‍ಕುಮಾರ್ (ನಟ)ಟಿಪ್ಪು ಸುಲ್ತಾನ್ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಉತ್ತರ ಕನ್ನಡಅಭಿಮನ್ಯುಜಯಮಾಲಾಮತದಾನಪ್ರಾಥಮಿಕ ಶಿಕ್ಷಣರಾಜಕೀಯ ವಿಜ್ಞಾನಕಾರ್ಮಿಕರ ದಿನಾಚರಣೆಷೇರು ಮಾರುಕಟ್ಟೆಅಜಯ್ ರಾವ್‌ಭಾರತೀಯ ನದಿಗಳ ಪಟ್ಟಿದಕ್ಷಿಣ ಕನ್ನಡ (ಲೋಕ ಸಭೆ ಚುನಾವಣಾ ಕ್ಷೇತ್ರ)ಯೇಸು ಕ್ರಿಸ್ತವಿರಾಟ್ ಕೊಹ್ಲಿಸಂಗೀತಭಾರತದಲ್ಲಿ ಪಂಚಾಯತ್ ರಾಜ್ಜಾನಪದಸ್ವಾಮಿ ವಿವೇಕಾನಂದಬನವಾಸಿಸಮಾಜ ವಿಜ್ಞಾನಜಯಚಾಮರಾಜ ಒಡೆಯರ್ಭಾರತೀಯ ಜ್ಞಾನಪೀಠಭಾರತೀಯ ಕಾವ್ಯ ಮೀಮಾಂಸೆಆಂಧ್ರ ಪ್ರದೇಶಛತ್ರಪತಿ ಶಿವಾಜಿಭಾರತದ ಸರ್ವೋಚ್ಛ ನ್ಯಾಯಾಲಯಚೋಳ ವಂಶಸವರ್ಣದೀರ್ಘ ಸಂಧಿಶಕ್ತಿಸವದತ್ತಿಕರ್ಮಧಾರಯ ಸಮಾಸಜಲ ಮಾಲಿನ್ಯಮಾಸ್ತಿ ವೆಂಕಟೇಶ ಅಯ್ಯಂಗಾರ್ಹೈದರಾಬಾದ್‌, ತೆಲಂಗಾಣಸ್ಕೌಟ್ಸ್ ಮತ್ತು ಗೈಡ್ಸ್ರಾಮನಗರಹಲಸುಬಾಗಲಕೋಟೆಸಮುಚ್ಚಯ ಪದಗಳುಭಾರತೀಯ ಶಾಸ್ತ್ರೀಯ ಸಂಗೀತಕ್ರಿಕೆಟ್ಸಂಸ್ಕಾರಯಣ್ ಸಂಧಿಕೃಷ್ಣದೇವರಾಯವರ್ಗೀಯ ವ್ಯಂಜನಭಾರತೀಯ ರಿಸರ್ವ್ ಬ್ಯಾಂಕ್ಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಮಂಡ್ಯಕನ್ನಡ ರಾಜ್ಯೋತ್ಸವಮಾರಾಟ ಪ್ರಕ್ರಿಯೆಕನ್ನಡದಲ್ಲಿ ಸಣ್ಣ ಕಥೆಗಳುಭೂತಕೋಲಯಕ್ಷಗಾನಸ್ಮಾರ್ಟ್ ಫೋನ್ನುಡಿಗಟ್ಟುತ. ರಾ. ಸುಬ್ಬರಾಯಗುರುರಾಜ ಕರಜಗಿಶ್ರವಣಬೆಳಗೊಳರಾಮ ಮನೋಹರ ಲೋಹಿಯಾನಾಗೇಶ ಹೆಗಡೆಸಿ ಎನ್ ಮಂಜುನಾಥ್ವಿತ್ತೀಯ ನೀತಿಚೀನಾ🡆 More