ಜಾಗಟೆ

ಜಾಗಟೆಯು ವಾದ್ಯೋಪಕರಣಗಳಲ್ಲೊಂದು.

ಪಂಚಮಹಾವಾದ್ಯಗಳಲ್ಲಿ ಇದನ್ನು ಸೇರಿಸಲಾಗಿದೆ. ಜೇಗಟೆ, ಜೇಗಂಟೆ ಎಂದೂ ಇದನ್ನು ಕರೆವುದಿದೆ. ಬಹುಶಃ ಜಯಘಂಟೆ ಎಂಬುದರ ತದ್ಭವ ರೂಪವೇ ಜಾಗಟೆ ಇರಬಹುದು.

ಜಾಗಟೆಯನ್ನು ಕಂಚಿನಿಂದ ತಯಾರಿಸುತ್ತಾರೆ. ನಾಜೂಕಾಗಿ ಬೆಳ್ಳಿಯಿಂದಲೂ ಮಾಡುವುದುಂಟು. ಇದು ಆಕಾರದಲ್ಲಿ ತಟ್ಟೆಯಂತಿರುತ್ತದೆ. ತಟ್ಟೆ ಅಂಚಿಲ್ಲದ ದೋಸೆಯ ಕಾವಲಿಯಂತೆ ಗುಂಡಾಗಿರಬಹುದು ಇಲ್ಲವೆ ಎತ್ತರ ಅಂಚಿನ ಬೋಗುಣಿಯಂತಿರಬಹುದು. ದಪ್ಪ ಹುರಿಯೊಂದನ್ನು ಕಟ್ಟಿ ಎಡಗೈಯಲ್ಲಿ ಹಿಡಿದು ದಪ್ಪನೆಯ ಮರದ ದಾಂಡೊಂದರಿಂದ ಬಡಿಯುತ್ತಾರೆ. ಆಗ ಢಣಾರ್ ಢಣಾರ್ ಎಂಬ ನಾದ ಹೊಮ್ಮುತ್ತದೆ. ಜಗನ್ನಾಥದ ಜಾಗಟೆ ಬಹು ಪ್ರಸಿದ್ಧವಾದ್ದು. ಇದು ತೆಳ್ಳಗೆ ಅಗಲವಾಗಿರುತ್ತದಾಗಿ ಒಳ್ಳೆಯ ನಾದ ಹೊಮ್ಮಿ ಚೆನ್ನಾಗಿ ಅನುರಣನಗೊಳ್ಳುತ್ತದೆ. ದೇವರ ಪೂಜಾಸಮಯದಲ್ಲಿ ಶಂಖ, ಘಂಟೆ, ತುತೂರಿಗಳೊಂದಿಗೆ ಜಾಗಟೆಯನ್ನೂ ಬಳಸುವುದಿದೆ. ಯಕ್ಷಗಾನ ಪ್ರಸಂಗಗಳಲ್ಲಿ ಇದನ್ನು ಭಾಗವತರು ತಾಳವನ್ನಾಗಿ ಬಳಸುತ್ತಾರೆ. ಲೌಕಿಕ ವ್ಯವಹಾರದಲ್ಲಿ ಜಾಗಟೆಗೆ ಸ್ಥಾನವಿಲ್ಲದಿಲ್ಲ. ಕಚೇರಿಗಳಲ್ಲಿ ಕಾಲ ತೋರಿಸಲು ಗಂಟೆಗೆ ಬದಲು ಜಾಗಟೆಯನ್ನೂ ಬಳಸುವುದಿದೆ.


ಉಲ್ಲೇಖಗಳು

ಜಾಗಟೆ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಾಗಟೆ

Tags:

🔥 Trending searches on Wiki ಕನ್ನಡ:

ಭಾರತದ ಮಾನವ ಹಕ್ಕುಗಳುಸಂವತ್ಸರಗಳುಜನ್ನರಾಷ್ತ್ರೀಯ ಐಕ್ಯತೆದ್ವೈತಭಗತ್ ಸಿಂಗ್ಭಾರತದ ಇತಿಹಾಸದಿ ಡೋರ್ಸ್‌ಬ್ಲಾಗ್ಕರ್ನಾಟಕ ಸ್ವಾತಂತ್ರ್ಯ ಚಳವಳಿಕ್ರಿಯಾಪದಮೂಲಧಾತುಕನ್ನಡ ಸಾಹಿತ್ಯ ಪರಿಷತ್ತುಕರ್ನಾಟಕದಲ್ಲಿ ಸಹಕಾರ ಚಳವಳಿಪಾಂಡವರುಗೋಳಭಾರತದ ವಿಜ್ಞಾನಿಗಳುRX ಸೂರಿ (ಚಲನಚಿತ್ರ)ಬ್ರಾಹ್ಮಣಋಗ್ವೇದನಯನ ಸೂಡಸಿಂಧೂತಟದ ನಾಗರೀಕತೆಭಾರತದ ಬ್ಯಾಂಕುಗಳ ಪಟ್ಟಿಓಂ (ಚಲನಚಿತ್ರ)ಕಪ್ಪು ಇಲಿಶಿವಕುಮಾರ ಸ್ವಾಮಿಗೀಳು ಮನೋರೋಗಫೆಬ್ರವರಿಭಾರತದ ಪ್ರಧಾನ ಮಂತ್ರಿಆಂಧ್ರ ಪ್ರದೇಶಸಂಸ್ಕೃತ ಸಂಧಿಮಾನವನಲ್ಲಿ ರಕ್ತ ಪರಿಚಲನೆಕನ್ನಡ ಸಾಹಿತ್ಯ ಸಮ್ಮೇಳನದಿಯಾ (ಚಲನಚಿತ್ರ)ಪ್ರಸ್ಥಭೂಮಿತತ್ತ್ವಶಾಸ್ತ್ರಹರಿದಾಸತಾಪಮಾನಭೂಮಿಯ ವಾಯುಮಂಡಲದುಂಡು ಮೇಜಿನ ಸಭೆ(ಭಾರತ)ದಕ್ಷಿಣ ಭಾರತದ ನದಿಗಳುಹಯಗ್ರೀವರಂಜಾನ್ಭಾರತದಲ್ಲಿ ಪಂಚಾಯತ್ ರಾಜ್ಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆನಿರ್ವಹಣೆ ಪರಿಚಯಹಿಮಅಬೂ ಬಕರ್ಮಹಾಭಾರತನಾಲ್ವಡಿ ಕೃಷ್ಣರಾಜ ಒಡೆಯರುಚಾಣಕ್ಯಆಸ್ಟ್ರೇಲಿಯಶಿವಗ್ರಾಮ ಪಂಚಾಯತಿಹೊಸ ಆರ್ಥಿಕ ನೀತಿ ೧೯೯೧ಅಗ್ನಿ(ಹಿಂದೂ ದೇವತೆ)ಹೊಯ್ಸಳಪ್ಯಾರಾಸಿಟಮಾಲ್ಶ್ರೀ ರಾಮಾಯಣ ದರ್ಶನಂಸಂಸದೀಯ ವ್ಯವಸ್ಥೆವಿಜಯಪುರ ಜಿಲ್ಲೆಪೃಥ್ವಿರಾಜ್ ಚೌಹಾಣ್ಫ್ರೆಂಚ್ ಕ್ರಾಂತಿಡಬ್ಲಿನ್ಕುದುರೆಕರ್ನಾಟಕದ ಇತಿಹಾಸವಿಜಯದಾಸರುಹೋಳಿಕೃಷ್ಣಭಾರತೀಯ ಜನತಾ ಪಕ್ಷಕಾವ್ಯಮೀಮಾಂಸೆಹಂಪೆಹಿಂದೂ ಮಾಸಗಳುದಿ ಪೆಂಟಗನ್ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಶ್ರೀಲೋಕಸಭೆಮಯೂರ (ಚಲನಚಿತ್ರ)🡆 More