ಅನಂತನಾಥ ಸ್ವಾಮಿ ಬಸದಿ ಕೋಟೆಕೇರಿ

ಕೋಟೆಕೇರಿ ಬಸದಿ ಮೂಲ್ಕಿ ಇದನ್ನು ಮಂಜುನಾಥ ಸ್ವಾಮಿ ಬಸದಿ ಎಂದೂ ಕರೆಯುತ್ತಾರೆ.

ಈ ಬಸದಿಯು ಮಂಗಳೂರು ತಾಲೂಕು ಬಪ್ಪನಾಡು ಗ್ರಾಮದ ಮೂಲ್ಕಿಯಲ್ಲಿದೆ.

ಬಸದಿಯಲ್ಲಿರುವ ವಿಗ್ರಹಗಳು

ಬಸದಿಯ ಮೂರು ದಿಕ್ಕಿನಲ್ಲೂ ಗದ್ದೆಯಿದೆ. ಬಸದಿಯ ಎದುರು ಮಾನಸ್ತಂಭವಿದೆ. ಈ ಬಸದಿಗೆ ಮೇಗಿನ ನೆಲೆ ಇದೆ. ಆದರೆ ಇಲ್ಲಿ ಯಾವ ತೀರ್ಥಂಕರ ಮೂರ್ತಿ ಇಲ್ಲ. ಬಸದಿಯಲ್ಲಿ ದೇವರ ವಿಗ್ರಹ ಮತ್ತು ಒಂದು ದೇವಿಯ ವಿಗ್ರಹ ಇದೆ. ಶ್ರೀ ಚಂದ್ರನಾಥ ಸ್ವಾಮಿ ಬಿಳಿ ಪಂಚಲೋಹದ ನಿಂತ ಭಂಗಿಯಲ್ಲಿದೆ. ಬಿಳಿ ಅಮೃತಶಿಲೆಯ ಶ್ರೀ ಅನಂತನಾಥ ಸ್ವಾಮಿ ಪರ್ಯಂಕಸನ ಭಂಗಿಯಲ್ಲಿದೆ. ಸಣ್ಣದಾದ ಕಪ್ಪುಶಿಲೆಯ ಪರ್ಯಂಕಸನ ಭಂಗಿಯಲ್ಲಿ ಶ್ರೀ ಪಾರ್ಶ್ವನಾಥ ಸ್ವಾಮಿ, ಕಂಚಿನ ನಿಂತ ಭಂಗಿಯಲ್ಲಿ ಪಂಚ ಪರಮೇಷ್ಠಿ ದೇವರ ವಿಗ್ರಹ, ಕಂಚಿನ ೨೪ ತೀರ್ಥಂಕರರಿರುವ ದೇವರ ಮೂರ್ತಿ, ಕಂಚಿನ ಶ್ರುತಗಣದೇವರ ಮೂರ್ತಿ, ಕಂಚಿನ ಶ್ರೀ ಸರಸ್ವತೀದೇವಿಯ ಮೂರ್ತಿ, ಪದ್ಮಾವತಿದೇವಿಯ ವಿಗ್ರಹವಿದೆ.

ಬಸದಿಯ ಹೊರಾಂಗಣ

ಬಸದಿಯ ಎದುರು ಕಲ್ಲಿನಲ್ಲಿ ಕೆತ್ತಿರುವ ಮಾನಸ್ತಂಭವಿದೆ. ಮಾನಸ್ತಂಭದ ಎದುರುಗಡೆ ಬಲಿಕಲ್ಲು, ನಾಲ್ಕು ದಿಕ್ಕುಗಳಲ್ಲಿ ೬ ರಂತೆ ದೇವರ ಕುಣಿತದ ಭಂಗಿಯಲ್ಲಿ ದೇವರ ಮೂರ್ತಿಗಳು ಇವೆ. ಸ್ವಲ್ಪ ಮೇಲೆ ನಾಲ್ಕು ದಿಕ್ಕಿನಲ್ಲಿಯೂ ಕುಳಿತ ಭಂಗಿಯಲ್ಲಿಒಂದೊಂದು ದೇವರ ಮೂರ್ತಿಯಿದೆ. ಎಲ್ಲಾ ದೇವರ ಮೂರ್ತಿಗಳ ಕೆಳಗಡೆ ನಾಲ್ಕು ದಿಕ್ಕಿನಲ್ಲಿ ನರ್ತಕಿಯರ ನರ್ತನ ಮಾಡುವ ಕೆತ್ತನೆ ಚಿತ್ರವಿದೆ. ಮಾನಸ್ತಂಭದ ತುದಿಯಲ್ಲಿಒಂದು ಸಣ್ಣ ಮಂಟಪವಿದ್ದು, ಅಲ್ಲೊಂದು ಸಣ್ಣ ದೇವರ ಮೂರ್ತಿಯಿದೆ. ಅಂಗಳದ ಬದಿಯಲ್ಲಿ ಕಲ್ಲಿನಲ್ಲಿ ಕ್ಷೇತ್ರಪಾಲನ ಸನ್ನಿಧಿಯಿದೆ. ಕ್ಷೇತ್ರಪಾಲನ ಕೆಳಗಡೆ ಕಲ್ಲಿನ ನಾಗರ ಮೂರ್ತಿ, ತ್ರಿಶೂಲ ಕೂಡಇದೆ. ಬೇರೆಯಾವ ಮೂರ್ತಿಗಳು ಇಲ್ಲ. ೪ ಅಡಿ ಎತ್ತರದ ಬಲಿಕಲ್ಲು ಮಾನಸ್ತಂಭದೆದುರು ಇದೆ. ಶಿಲಾಶಾಸನ ಇತ್ಯಾದಿ ಇಲ್ಲ. ಬಸದಿಯ ಸುತ್ತಲೂ ಮೂರು ಅಡಿ ದೂರದಲ್ಲಿ ಕಲ್ಲಿನಿಂದ ಕಟ್ಟಿದ ಪ್ರಾಕಾರ ಮೂರು ದಿಕ್ಕುಗಳಲ್ಲಿ ಮಾತ್ರಇದೆ. ಶ್ರೀ

ಮೂರ್ತಿಗಳು ಹಾಗೂ ಪೂಜಾ ವಿಧಾನ

ಜಗಲಿಯಿಂದ ಪ್ರಾರ್ಥನಾ ಮಂಟಪಕ್ಕೆ ಬರುವಲ್ಲಿ ದ್ವಾರಪಾಲಕರ ಚಿತ್ರವಿದೆ. ಪ್ರಾರ್ಥನಾ ಮಂಟಪವಿಲ್ಲ. ಈಗ ಇರುವ ಮಂಟಪವನ್ನುಘಂಟ ಮಂಟಪ ಎಂದುಕರೆಯುತ್ತಾರೆ. ಇದರಲ್ಲಿ ಜಾಗಟೆ, ಜಯ ಗಂಟೆಗಳನ್ನು ತೂಗುಹಾಕಲಾಗಿದೆ. ಈ ಮಂಟಪದ ನಂತರ ಸಿಗುವುದೇ ತೀರ್ಥಂಕರ ಮಂಟಪ. ತೀರ್ಥಂಕರ ಮಂಟಪದಲ್ಲಿಗಂಧಕುಟಿಯಿದೆ. ನಂತರ ಗಂಧದಕೋಟೆಯ ಬಳಿಯಲ್ಲಿ ಶ್ವೇತಾಗಣದರ ಪಾದದ ಮೂರ್ತಿಗಳಿವೆ. ಇದಕ್ಕೆ ನಿತ್ಯವೂ ಪೂಜೆ ಮಾಡುತ್ತಾರೆ. ಮಾತೆ ಪದ್ಮಾವತಿ ದೇವಿಗೆ ನಿತ್ಯ ಹೂಗಳಿಂದ ಅಲಂಕಾರ ಮಾಡಿ ಪೂಜೆ ಮಾಡುತ್ತಾರೆ. ಈ ಬಸದಿಯು ಉತ್ತರಕ್ಕೆ ಮುಖ ಮಾಡಿರುತ್ತದೆ. ಅವರ ಕಾಲಬಳಿಯಲ್ಲಿ ಕುಕ್ಕುಟ ಸರ್ಪಇದೆ. ಈ ಬಸದಿಯಲ್ಲಿ ವಾರ್ಷಿಕೋತ್ಸವ, ರಥೋತ್ಸವ ಮೊದಲಿನಿಂದಲೂ ಇಲ್ಲ.

ಪೂಜಾ ವಿಧಾನ ಹಾಗೂ ಹಬ್ಬಗಳ ಆಚರಣೆ

ಬಸದಿಯ ಮೂಲ ಸ್ವಾಮಿಯಾಗಿರುವ ಶ್ರೀ ಚಂದ್ರನಾಥ ಸ್ವಾಮಿಯ ಮೂರ್ತಿ ಬಿಳಿ ಬಣ್ಣದ ಪಂಚಲೋಹ ಎರಡು ಅಡಿ ಎತ್ತರದ ನಿಂತ ವಿಗ್ರಹ ಶ್ರೀದೇವರ ಕಾಲಬಳಿಯಲ್ಲಿ ಎಡಬಲಗಳಲ್ಲಿ ಯಕ್ಷಯಕ್ಷಿಯರ ಮೂರ್ತಿಗಳಿವೆ. ದೇವರ ಸುತ್ತಲೂ ಪ್ರಭಾವಳಿ ಇದೆ. ದಿನಂಪ್ರತಿ ಶ್ರೀದೇವರಿಗೆ ಜಲಾಭಿಷೇಕ, ಕ್ಷೀರಾಭಿಷೇಕ, ಪಂಚಾಮೃತಅಭಿಷೇಕ, ಪೂಜೆ ಇತ್ಯಾದಿ ಮಾಡಲಾಗುತ್ತಿದೆ. ಪ್ರತಿ ವರ್ಷ ನಾಗರಪಂಚಮಿ, ಶ್ರಾವಣ, ನವರಾತ್ರಿ, ದೀಪಾವಳಿ, ಯುಗಾದಿ ಹಬ್ಬಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ನವರಾತ್ರಿ ಹಬ್ಬದಲ್ಲಿ ಪದ್ಮಾವತಿ ಅಮ್ಮನವರಿಗೆ ದಿನಕ್ಕೊಂದು ಸೀರೆ ಉಡಿಸಿ, ಹೂವಿನಿಂದ ಅಲಂಕಾರ ಮಾಡಿ ಪೂಜೆ ಮಾಡುತ್ತಾರೆ. ಹಿಂದಿನಿಂದಲೂ ಬಂದಂತಹ ಹರಕೆಯ ೧೦ ಪೂಜೆಗಳನ್ನು ನೆರವೇರಿಸುತ್ತಾರೆ.

ಉಲ್ಲೇಖಗಳು

Tags:

ಅನಂತನಾಥ ಸ್ವಾಮಿ ಬಸದಿ ಕೋಟೆಕೇರಿ ಬಸದಿಯಲ್ಲಿರುವ ವಿಗ್ರಹಗಳುಅನಂತನಾಥ ಸ್ವಾಮಿ ಬಸದಿ ಕೋಟೆಕೇರಿ ಬಸದಿಯ ಹೊರಾಂಗಣಅನಂತನಾಥ ಸ್ವಾಮಿ ಬಸದಿ ಕೋಟೆಕೇರಿ ಮೂರ್ತಿಗಳು ಹಾಗೂ ಪೂಜಾ ವಿಧಾನಅನಂತನಾಥ ಸ್ವಾಮಿ ಬಸದಿ ಕೋಟೆಕೇರಿ ಉಲ್ಲೇಖಗಳುಅನಂತನಾಥ ಸ್ವಾಮಿ ಬಸದಿ ಕೋಟೆಕೇರಿ

🔥 Trending searches on Wiki ಕನ್ನಡ:

ಪರಮ ವೀರ ಚಕ್ರಶಂ.ಬಾ. ಜೋಷಿಕಂದರಗಳೆಬಿ. ಎಂ. ಶ್ರೀಕಂಠಯ್ಯಸೀತೆಕಾದಂಬರಿಆರ್ಯಭಟ (ಗಣಿತಜ್ಞ)ಮಂಕುತಿಮ್ಮನ ಕಗ್ಗಅನುಪಮಾ ನಿರಂಜನವ್ಯಾಯಾಮರನ್ನಟಿ. ವಿ. ವೆಂಕಟಾಚಲ ಶಾಸ್ತ್ರೀಕನ್ನಡ ಚಂಪು ಸಾಹಿತ್ಯಅ. ರಾ. ಮಿತ್ರಪ್ಲೇಟೊವೇದಜಾಗತಿಕ ತಾಪಮಾನ ಏರಿಕೆವಾಯು ಮಾಲಿನ್ಯಭಾರತದಲ್ಲಿ ಬಡತನಅಗ್ನಿ(ಹಿಂದೂ ದೇವತೆ)ಕದಂಬ ಮನೆತನಹುಲಿನಗರೀಕರಣಕರ್ಮಧಾರಯ ಸಮಾಸಚನ್ನಬಸವೇಶ್ವರಮಾರುಕಟ್ಟೆಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣರೇಡಿಯೋಅಂಬಿಗರ ಚೌಡಯ್ಯರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಸಾಮಾಜಿಕ ಸಮಸ್ಯೆಗಳುಭಾರತದ ಚುನಾವಣಾ ಆಯೋಗಕಿರುಧಾನ್ಯಗಳುವೆಂಕಟೇಶ್ವರ ದೇವಸ್ಥಾನಮಂತ್ರಾಲಯಪಾಟೀಲ ಪುಟ್ಟಪ್ಪಅಕ್ಷಾಂಶಕೀರ್ತನೆಬೆಂಗಳೂರುಏಷ್ಯಾ ಖಂಡವಿಜಯದಾಸರುಕಳಿಂಗ ಯುದ್ದ ಕ್ರಿ.ಪೂ.261ಭತ್ತಯಕ್ಷಗಾನಸ್ವರವಾಸ್ಕೋ ಡ ಗಾಮಜನಪದ ಕಲೆಗಳುಅಂಬರೀಶ್ಕರ್ನಾಟಕ ಸಂಗೀತಕರ್ನಾಟಕ ಸ್ವಾತಂತ್ರ್ಯ ಚಳವಳಿಸಮಾಜಶಾಸ್ತ್ರಮೂಲಧಾತುವಲ್ಲಭ್‌ಭಾಯಿ ಪಟೇಲ್ಹಿಂದೂ ಧರ್ಮಜನಪದ ಕ್ರೀಡೆಗಳುಬಾಲಕಾರ್ಮಿಕಮನೋಜ್ ನೈಟ್ ಶ್ಯಾಮಲನ್ಸೂಳೆಕೆರೆ (ಶಾಂತಿ ಸಾಗರ)ಮರುಭೂಮಿಪಿ.ಲಂಕೇಶ್ಜಲ ಚಕ್ರಗರ್ಭಧಾರಣೆಕುವೆಂಪುಭಾರತದ ಪ್ರಧಾನ ಮಂತ್ರಿಗಳ ಪಟ್ಟಿಕರ್ನಾಟಕ ಲೋಕಸೇವಾ ಆಯೋಗಮಾರ್ಕ್ಸ್‌ವಾದಕಾನೂನುಭಂಗ ಚಳವಳಿಕೆಂಗಲ್ ಹನುಮಂತಯ್ಯಹೆಚ್.ಡಿ.ದೇವೇಗೌಡಸಿದ್ದಲಿಂಗಯ್ಯ (ಕವಿ)ಅಶ್ವತ್ಥಮರವಿಷ್ಣುವರ್ಧನ್ (ನಟ)ಒಡೆಯರ್ಗೌರಿ ಹಬ್ಬಸಾರಾ ಅಬೂಬಕ್ಕರ್ಕಲ್ಯಾಣ ಕರ್ನಾಟಕ🡆 More