ಗೋಕರ್ಣ ಮಠ

ಗೋಕರ್ಣ ಮಠ, ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಪ್ರಮುಖ ಗುರು ಪೀಠಗಳಲ್ಲಿ ಒಂದಾಗಿದೆ.

ಕ್ರಿ.ಶ ೧೩ನೇ ಶತಮಾನದಲ್ಲಿ ಜಗದ್ಗುರು ಮಧ್ವಾಚಾರ್ಯರು ಸ್ಥಾಪಿಸಿದ ದ್ವೈತ ಸಿದ್ಧಾಂತವನ್ನು ಪ್ರತಿಪಾಸಿದ ಮೊದಲ ಗೌಡ ಸಾರಸ್ವತ ಮಠ ಇದು ಎಂದು ಹೇಳಲಾಗಿದೆ. ಈ ಮಠಕ್ಕೆ ಗೋಕರ್ಣ ಪರ್ತಗಾಳಿ ಮಠ ಅಥವಾ ಜೀವೋತ್ತಮ ಮಠ ಎಂಬ ಹೆಸರೂ ಇದೆ. ಈ ಮಠದ ಕೇಂದ್ರ ಗೋವಾ ರಾಜ್ಯದ ದಕ್ಷಿಣ ಭಾಗ ಕುಶಾವತಿ ನದಿಯ ದಡದಲ್ಲಿರುವ ಪರ್ತಗಾಳಿ ಎಂಬ ಸಣ್ಣ ಪಟ್ಟಣದಲ್ಲಿ ಇದೆ.

ಗೋಕರ್ಣ ಮಠ
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ
ಭೂಗೋಳ
ದೇಶಭಾರತ
ರಾಜ್ಯಗೋವ
ಜಿಲ್ಲೆದಕ್ಷಿಣ ಗೋವಾ
ಸ್ಥಳಪರ್ತಗಾಳಿ, ಕಾಣಕೋಣ

ಇತಿಹಾಸ

ಗೋಕರ್ಣ ಮಠವನ್ನು ನಿರ್ದಿಷ್ಠವಾಗಿ ಯಾರು ಸ್ಥಾಪಿಸಿದರು ಎಂಬ ವಿಚಾರ ಇದುವರೆಗೂ ಬೆಳಕಿಗೆ ಬಂದಿರುವುದಿಲ್ಲ. ಈ ಬಗ್ಗೆ ಸಂಶೋಧನೆಗಳು ಇನ್ನೂ ಸಾಗುತ್ತಿವೆಯಾದರೂ, ಸಧ್ಯಕ್ಕೆ ಲಭಿಸಿರುವ ಕೆಲವು ಪರಾವೆಗಳ ಅನುಸಾರ ಉತ್ತರಾದಿ ಮಠದ ರಘೋತ್ತಮ ತೀರ್ಥರು (ಸಾ.ಯು. ೧೫೩೭-೧೫೯೬) ಸ್ಥಾಪಿಸಿದರು ಎನ್ನುತ್ತಾರೆ. ಇವರನ್ನು ಭವಬೋಧರು ಅಥವಾ ರಘೋತ್ತಮ ಯತಿ ಎಂದೂ ಕರೆಯುತ್ತಾರೆ. ಶ್ರೀಮಂತ ದೇಶಸ್ಥ ಬ್ರಾಹ್ಮಣರ ಕುಟುಂಬದಲ್ಲಿ ಜನಿಸಿದ್ದ ಇವರು ರಘುವರ್ಯ ತೀರ್ಥರ ಶಿಷ್ಯರಾಗಿ ಸನ್ಯಾಸವನ್ನು ಸ್ವೀಕರಿಸಿದ್ದರು.

ಇನ್ನು ಕೆಲವು ಸಂಶೋಧನೆಗಳ ಪ್ರಕಾರ, ಉಡುಪಿಯ ಫಲಿಮಾರು ಮಠದಿಂದ ಒಡೆದು ಆನಂದ ತೀರ್ಥರು ಸ್ಥಾಪಿಸಿದ್ದಾರೆ ಎನ್ನಲಾಗುತ್ತದೆ. ಆನಂದ ತೀರ್ಥರನ್ನು ಮಧ್ವಾಚಾರ್ಯರೆಂದೂ ಕರೆಯುತ್ತಾರೆ. ೧೪ನೇ ಶತಮಾನದ ಮಧ್ಯ ಭಾಗದಲ್ಲಿ ಪಶ್ಚಿಮ ಘಟ್ಟಗಳ ಕೆಳಗೆ ನೆಲಸಿದ್ದ ಸಾರಸ್ವತ ಬ್ರಾಹ್ಮಣರು ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಫಲಿಮಾರು ಮಠವನ್ನು ಗುರು ಮಠವಾಗಿ ಸ್ವೀಕರಿಸಿದ್ದರು. ಬಳಿಕ ಮಧ್ವಾಚಾರ್ಯರ ಕಾಲದಲ್ಲಿ ಸಾರಸ್ವತರಗಾಗಿಯೇ ಪ್ರತ್ಯೇಕ ಮಠವನ್ನು ಸ್ಥಾಪಿಸಲು ನಿರ್ಧರಿಸಲಾಯ್ತು. ಮಠ ಸ್ಥಾಪನೆಯ ಧಾರ್ಮಿಕ ಕ್ರಿಯೆಗಳು ಭಾರತದ ಉತ್ತರ ಭಾಗದಲ್ಲಿರುವ ಬದರಿಕಾಶ್ರಮದಲ್ಲಿ ಜರುಗಿತು ಎನ್ನಲಾಗಿದೆ. ಪ್ರಸ್ತುತ ಇದನ್ನೇ ಮಠದ ಅಧಿಕೃತ ಇತಿಹಾಸವಾಗಿ ಪರಿಗಣಿಸಲಾಗಿದೆ. ಈ ಮಠದ ಮೊದಲ ಪೀಠಾಧಿಪತಿ ಶ್ರೀ ನಾರಾಯಣ ತೀರ್ಥರೆಂದು ದಾಖಲಾಗಿದೆ. ನಾರಾಯಣ ತೀರ್ಥರು ದ್ವೈತ ಮತದ ಪ್ರತಿಪಾದಕರಾಗಿದ್ದು ಮಠವು ದ್ವೈತ ಮತದ ಸಂಪ್ರದಾಯವನ್ನೇ ಅನುಸರಿಸಿದೆ. ದ್ವೈತ ಸಿದ್ದಾಂತದಲ್ಲಿ ವಿಧ್ವಾಂಸರಾಗಿದ್ದ ಇವರಿಗೆ ಶ್ರೀ ಪಾದ ಒಡೆಯರ್ ಎಂಬ ಬಿರುದು ಇತ್ತು. ಈ ಬಿರುದು ನಂತರದ ಎಲ್ಲಾ ಪೀಠಾಧಿಪತಿಗಳ ಹೆಸರಿನೊಂದಿಗೂ ಸೇರಿಸಲಾಗಿದೆ. ಈ ಮಠದ ಆರಾಧ್ಯ ದೈವವಾಗಿ ಶ್ರೀ ವೀರ ಮೂಲರಾಮ ದೇವರು ಹಾಗೂ ವೀರ ವಿಠಲ ದೇವರನ್ನು ಸ್ವೀಕರಿಸಲಾಗಿದೆ. ೧೬ನೇ ಶತಮಾನದ ಆರಂಭಲ್ಲಿ ಗೋವಾವನ್ನು ಪೋರ್ಚುಗೀಸರು ಆಕ್ರಮಿಸಿದರು. ಇದು ಕೇವಲ ರಾಜಕೀಯ ಆಕ್ರಮಣವಾಗಿರಲಿಲ್ಲ, ಬದಲಿಗೆ ಕ್ರೈಸ್ತೇತರ ಧಾರ್ಮಿಕತೆಗಳ ಮೇಲೆಯೂ ತೀವ್ರ ದಾಳಿ ಎಸಗಲಾಯ್ತು. ಪೋರ್ಚುಗೀಸರಿಂದ ತೊಂದರೆಗೊಳಪಟ್ಟ ಮಠವು ಹಲವಾರು ವರ್ಷಗಳ ಕಾಲ ಗೋವಾದ ಮುಖ್ಯ ಮಠವನ್ನು ತೊರೆದು ಕರ್ನಾಟಕದ ಭಟ್ಕಳದಿಂದ ತನ್ನ ಕಾರ್ಯ ನಿರ್ವಹಿಸಿತು.

ಸಾಮಾಜಿಕ ಕಾರ್ಯಗಳು

ಸಾಮಾನ್ಯ ಯುಗ ೧೯೫೦ರವರಗೂ ಮಠವು ಧಾರ್ಮಿಕ ಚಟುವಟಿಕೆಗಳತ್ತ ಮಾತ್ರ ಗಮನ ಹರಿಸುತ್ತಿತ್ತು. ಆದರೆ ಅದರ ಬಳಿಕ, ಅಣದರೆ ದ್ವಾರಕಾನಾಥ ತೀರ್ಥರು ಪೀಠಾಧಿಪತಿಗಳಾಗಿದ್ದ ಸಂದರ್ಭದಲ್ಲಿ ಮಠವು ಇತರ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿತು. ಸಾಕಷ್ಟು ಶೈಕ್ಷಣಿಕ ಸಂಸ್ಥೆಗಳನ್ನು ನಿರ್ಮಿಸಲಾಯ್ತು. ಆರೋಗ್ಯ ಸಂಬಂಧಿತ ಸೇವೆಗಳಿಗೂ ಪ್ರಾಶಸ್ತ್ಯ ನೀಡಲಾಗಿದೆ.

ಗುರು ಪರಂಪರೆ

ಗುರು ಪರಂಪರೆ
ಕ್ರ.ಸಂ ಸ್ವಾಮಿಗಳು ಜನ್ಮಸ್ಥಳ ಅವಧಿ ಸಮಾಧಿ ಸ್ಥಳ
೦೧ ಶ್ರೀ ನಾರಾಯಣ ತೀರ್ಥ ನಿಖರ ಮಾಹಿತಿ ಇಲ್ಲ ಭಟ್ಕಳ
೦೨ ಶ್ರೀ ವಾಸುದೇವ ತೀರ್ಥ ಪಂಡರಾಪುರ
೦೩ ಶ್ರೀ ಜೀವೋತ್ತಮ ತೀರ್ಥ ಭಟ್ಕಳ
೦೪ ಶ್ರೀ ಪುರುಷೋತ್ತಮ ತೀರ್ಥ ಗೋಕರ್ಣ
೦೫ ಶ್ರೀ ಅಣುಜೀವೋತ್ತಮ ತೀರ್ಥ ಡಿಛೋಲಿ
೦೬ ಶ್ರೀ ರಾಮಚಂದ್ರ ತೀರ್ಥ ರಿವೋನ್‌
೦೭ ಶ್ರೀ ದಿಗ್ವಿಜಯ ರಾಮಚಂದ್ರ ತೀರ್ಥ ಅಂಕೋಲ
೦೮ ಶ್ರೀ ರಘುಚಂದ್ರ ತೀರ್ಥ ಹೊನ್ನಾವರ
೦೯ ಶ್ರೀ ಲಕ್ಷ್ಮೀ ನಾರಾಯಣ ತೀರ್ಥ ನಾಸಿಕ್
೧೦ ಶ್ರೀ ಲಕ್ಷ್ಮಿಕಾಂತ ತೀರ್ಥ ಹೊನ್ನಾವರ
೧೧ ಶ್ರೀ ರಮಾಕಾಂತ ತೀರ್ಥ ಅಂಕೋಲ
೧೨ ಶ್ರೀ ಕಮಲಕಾಂತ ತೀರ್ಥ ಗೋಕರ್ಣ
೧೩ ಶ್ರೀ ಶ್ರೀಕಾಂತ ತೀರ್ಥ ಪರ್ತಗಾಳಿ
೧೪ ಶ್ರೀ ಭೂ ವಿಜಯ ರಾಮಚಂದ್ರ ತೀರ್ಥ ಅಂಕೋಲ
೧೫ ಶ್ರೀ ರಮಾನಾಥ ತೀರ್ಥ ವೆಂಕಟಾಪುರ
೧೬ ಶ್ರೀ ಲಕ್ಷ್ಮೀನಾಥ ತೀರ್ಥ ಬರೋಡ
೧೭ ಶ್ರೀ ಆನಂದ ತೀರ್ಥ ಪರ್ತಗಾಳಿ
೧೮ ಶ್ರೀ ಪೂರ್ಣಪ್ರಜ್ಞ ತೀರ್ಥ ಪರ್ತಗಾಳಿ
೧೯ ಶ್ರೀ ಪದ್ಮನಾಭ ತೀರ್ಥ ಪರ್ತಗಾಳಿ
೨೦ ಶ್ರೀ ಇಂದಿರಾಕಾಂತ ತೀರ್ಥ ಪರ್ತಗಾಳಿ
೨೧ ಶ್ರೀ ಕಮಲನಾಥ ತೀರ್ಥ ಪರ್ತಗಾಳಿ
೨೨ ಶ್ರೀ ದ್ವಾರಕಾನಾಥ ತೀರ್ಥ ಪರ್ತಗಾಳಿ
೨೩ ಶ್ರೀ ವಿಧ್ಯಾಧಿರಾಜ ತೀರ್ಥ ಗಂಗೊಳ್ಳಿ ಪರ್ತಗಾಳಿ
೨೪ ಶ್ರೀ ವಿಧ್ಯಾಧೀಶ ತೀರ್ಥ ಬೆಂಗಳೂರು ಪ್ರಸ್ತುತ ಪೀಠಾಧಿಪತಿ

ಬಾಹ್ಯಕೊಂಡಿ

ಗೋಕರ್ಣ ಮಠದ ಜಾಲತಾಣ

ಉಲ್ಲೇಖಗಳು

Tags:

ಗೋಕರ್ಣ ಮಠ ಇತಿಹಾಸಗೋಕರ್ಣ ಮಠ ಸಾಮಾಜಿಕ ಕಾರ್ಯಗಳುಗೋಕರ್ಣ ಮಠ ಗುರು ಪರಂಪರೆಗೋಕರ್ಣ ಮಠ ಬಾಹ್ಯಕೊಂಡಿಗೋಕರ್ಣ ಮಠ ಉಲ್ಲೇಖಗಳುಗೋಕರ್ಣ ಮಠಗೋವಗೌಡ ಸಾರಸ್ವತ ಬ್ರಾಹ್ಮಣರುದ್ವೈತಮಧ್ವಾಚಾರ್ಯ

🔥 Trending searches on Wiki ಕನ್ನಡ:

ಸೂರ್ಯಮಾದರ ಚೆನ್ನಯ್ಯಮಳೆಸಾರ್ವಜನಿಕ ಆಡಳಿತಹಾರೆಭಾರತ ರತ್ನಪುನೀತ್ ರಾಜ್‍ಕುಮಾರ್ಅವರ್ಗೀಯ ವ್ಯಂಜನಮಿಥುನರಾಶಿ (ಕನ್ನಡ ಧಾರಾವಾಹಿ)ರಮ್ಯಾನ್ಯೂಟನ್‍ನ ಚಲನೆಯ ನಿಯಮಗಳುರಂಗಭೂಮಿಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಬಿ.ಎಸ್. ಯಡಿಯೂರಪ್ಪಪಂಪ ಪ್ರಶಸ್ತಿಪಾಂಡವರುಅಮೃತಧಾರೆ (ಕನ್ನಡ ಧಾರಾವಾಹಿ)ಸಂದರ್ಶನಗೋವಿಂದ ಪೈಭಾರತದ ಮುಖ್ಯಮಂತ್ರಿಗಳುಚಾಣಕ್ಯಬಿಳಿಗಿರಿರಂಗನ ಬೆಟ್ಟಅಮ್ಮಕನ್ನಡ ಕಾಗುಣಿತಕಲ್ಯಾಣಿಭಾರತೀಯ ಅಂಚೆ ಸೇವೆಮೈಸೂರು ದಸರಾಸೂರ್ಯ (ದೇವ)ವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಸಂಗೊಳ್ಳಿ ರಾಯಣ್ಣಹೊನ್ನಾವರದ್ಯುತಿಸಂಶ್ಲೇಷಣೆವ್ಯಂಜನಸಂಧಿಕರ್ನಾಟಕದ ತಾಲೂಕುಗಳುಬಾಬು ಜಗಜೀವನ ರಾಮ್ನಗರಮಳೆನೀರು ಕೊಯ್ಲುಕನ್ನಡ ಸಾಹಿತ್ಯ ಸಮ್ಮೇಳನಅಕ್ಕಮಹಾದೇವಿರಾಷ್ಟ್ರಕೂಟಎ.ಪಿ.ಜೆ.ಅಬ್ದುಲ್ ಕಲಾಂಮಲ್ಲಿಕಾರ್ಜುನ್ ಖರ್ಗೆನೀನಾದೆ ನಾ (ಕನ್ನಡ ಧಾರಾವಾಹಿ)ಸಂಸ್ಕೃತವಿಜ್ಞಾನಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕರ್ನಾಟಕದ ಅಣೆಕಟ್ಟುಗಳುಸೂರ್ಯ ಗ್ರಹಣವಾದಿರಾಜರುಚಂಡಮಾರುತಚಿತ್ರಲೇಖಧರ್ಮಸ್ಥಳವಾಲಿಬಾಲ್ಪಟ್ಟದಕಲ್ಲುಬಹುವ್ರೀಹಿ ಸಮಾಸಕೆ.ಎಲ್.ರಾಹುಲ್ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳುಸಿಂಧನೂರುಸನ್ನಿ ಲಿಯೋನ್ತಾಜ್ ಮಹಲ್ಬೇಲೂರುಭಾರತೀಯ ಸಂವಿಧಾನದ ತಿದ್ದುಪಡಿಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಭಾರತದಲ್ಲಿ ತುರ್ತು ಪರಿಸ್ಥಿತಿಕನ್ನಡ ಗುಣಿತಾಕ್ಷರಗಳುಕರ್ನಾಟಕದ ಜಿಲ್ಲೆಗಳುಭಾರತದ ಜನಸಂಖ್ಯೆಯ ಬೆಳವಣಿಗೆಜಾನಪದಕರಗತ್ರಿವೇಣಿಕಾವ್ಯಮೀಮಾಂಸೆಭಾರತದ ಇತಿಹಾಸನಗರೀಕರಣಬಡತನಸುಗ್ಗಿ ಕುಣಿತತಂತ್ರಜ್ಞಾನಐಹೊಳೆಸಂಗ್ಯಾ ಬಾಳ್ಯ🡆 More