ಹೊನ್ನಾವರ: ಕರ್ನಾಟಕದ ಕರಾವಳಿ ಪಟ್ಟಣ

ಹೊನ್ನಾವರ ಉತ್ತರ ಕನ್ನಡ ಜಿಲ್ಲೆಯ ಒಂದು ಸುಂದರ ಬಂದರು ಪ್ರದೇಶ.

ಹೊನ್ನಾವರ ಪಟ್ಟಣವು ತಾಲೂಕಿನ ಕೇಂದ್ರ. ಅರಬ್ಬಿ ಸಮುದ್ರದ ತೀರದಲ್ಲಿ ಶರಾವತಿ ನದಿಯ ದಂಡೆಯಲ್ಲಿ ಸ್ಥಿತವಾಗಿರುವ ಈ ಪಟ್ಟಣ ಐತಿಹಾಸಿಕ ಪ್ರದೇಶ ಕೂಡ. ಐತಿಹಾಸಿಕವಾಗಿ ಗಮನಿಸಲು ಹೋದರೆ ಗೇರುಸೊಪ್ಪೆಯ ಚೆನ್ನಭೈರಾದೇವಿ ಈ ಪ್ರದೇಶವನ್ನು ಆಳಿದ ದಾಖಲೆಗಳು ಇತಿಹಾಸ ಪುಟಗಳಲ್ಲಿ ಸಿಗುತ್ತವೆ. ಪುರಾತನ ಕಾಲದಿಂದಲೂ ಪ್ರಸಿದ್ಧಿ ಹೊಂದಿರುವ ಯಕ್ಷಗಾನ ಕಲೆ ಹಾಗೂ ತಾಳಮದ್ದಳೆ ಕಾರ್ಯಕ್ರಮ ಇಲ್ಲಿಯ ವೈಶಿ‌‌‌ಷ್ಟ್ಯ.

Honnavar
ಹೊನ್ನಾವರ
Town
Countryಹೊನ್ನಾವರ: ಜನಸಂಖ್ಯೆ ಮತ್ತು ಭಾಷೆ, ಸಾರಿಗೆ ವ್ಯವಸ್ಥೆ, ಪ್ರೇಕ್ಷಣೀಯ ಸ್ಥಳಗಳು ಭಾರತ
StateKarnataka
RegionCanara
DistrictUttara Kannada
TalukHonnavar
Established1890
ಸರ್ಕಾರ
 • ಮಾದರಿMunicipality
 • ಪಾಲಿಕೆHonnavar Town Panchayat
Area
 • Town೯.೩೮ km (೩.೬೨ sq mi)
Elevation
೨ m (೭ ft)
Population
 (2011)
 • Town೧,೪೨,೫೦೭
 • Urban
೧೯,೩೦೭
Languages
 • OfficialKannada
ಸಮಯ ವಲಯಯುಟಿಸಿ+5:30 (IST)
PIN
581334, 581395, 581342
Telephone code+91-8387
ವಾಹನ ನೋಂದಣಿKA 47
ಜಾಲತಾಣwww.honnavaratown.gov.in
ಹೊನ್ನಾವರ: ಜನಸಂಖ್ಯೆ ಮತ್ತು ಭಾಷೆ, ಸಾರಿಗೆ ವ್ಯವಸ್ಥೆ, ಪ್ರೇಕ್ಷಣೀಯ ಸ್ಥಳಗಳು
Colonel Hill - 30m tall column

ಜನಸಂಖ್ಯೆ ಮತ್ತು ಭಾಷೆ

೨೦೦೧ರ ಗಣತಿಯ ಪ್ರಕಾರ ಸುಮಾರು ೧೮ ಸಾವಿರ ಜನಸಂಖ್ಯೆ ಹೊಂದಿರುವ ಇಲ್ಲಿ ೫೧% ಪುರುಷರು ಹಾಗು ೪೯% ಮಹಿಳೆಯರು ಇದ್ದಾರೆ. ಸುಮಾರು ೭೮ ಪ್ರತಿಶತ ಸಾಕ್ಷರತೆ ಇರುವ ಈ ಪಟ್ಟಣದ ಸಾಕ್ಷರತೆ ಭಾರತದ ಸರಾಸರಿ ಸಾಕ್ಷರತೆಗಿಂತ (೫೯.೫%)ಹೆಚ್ಛಾಗಿದೆ. ಸಾಕ್ಷರ ಪುರುಷರ ಸರಾಸರಿ ೮೩% ಹಾಗು ಮಹಿಳೆಯರ ಸರಾಸರಿ ೭೪%. ಕನ್ನಡವು ಅಧಿಕೃತ ಭಾಷೆಯಾಗಿ ಚಲಾವಣೆಯಲ್ಲಿದ್ದರೂ ಸಹ ಕೊಂಕಣಿ ಭಾಷೆ ತನ್ನದೆ ಆದ ಸ್ಥಾನ ಪಡೆದಿದೆ.

ಸಾರಿಗೆ ವ್ಯವಸ್ಥೆ

ದಕ್ಷಿಣದಲ್ಲಿ ಮಂಗಳೂರು ಮತ್ತು ಉತ್ತರದಲ್ಲಿ ಪಣಜಿಯನ್ನು ಜೋಡಿಸುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ೬೬ ಹಾದು ಹೋಗುವ ಈ ಪ್ರದೇಶ ಈ ಎರಡು ಸ್ಥಳಗಳಿಂದ ಸಮ ದೂರದಲ್ಲಿದೆ. ಹೊನ್ನಾವರ - ತುಮಕೂರು ರಾ. ಹೆದ್ದಾರಿ ಸಂಖ್ಯೆ ೨೦೬, ರಾಜ್ಯದ ರಾಜಧಾನಿ ಯನ್ನು ಜೋಡಿಸುತ್ತದೆ. ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಮುಖ್ಯ ಸಾರಿಗೆಯಾಗಿದ್ದರೂ, ಕೊಂಕಣ ರೇಲ್ವೆ ಸಹ ತನ್ನ ಅಳಿಲು ಸೇವೆ ಸಲ್ಲಿಸುತ್ತಿದೆ. ಜನರು ಖಾಸಗಿ ಸಾರಿಗೆ ವ್ಯವಸ್ಥೆಯನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ.

  • ಹತ್ತಿರದ ರೈಲು ನಿಲ್ದಾಣ : ಹೊನ್ನಾವರ ರೈಲು ನಿಲ್ದಾಣ (ಹೊನ್ನಾವರದ ಹೊರಭಾಗದ ಕರ್ಕಿಯಲ್ಲಿದೆ. ಹೊನ್ನಾವರದಿಂದ ಸುಮಾರು ೫ ಕೀ.ಮೀ. ದೊರದಲ್ಲಿದೆ)
  • ಹತ್ತಿರದ ವಿಮಾನ ನಿಲ್ದಾಣ: ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರಿನಲ್ಲಿದೆ. (ಸುಮಾರು ೧೭೫ ಕೀ.ಮೀ ದೊರದಲ್ಲಿದೆ)

ಪ್ರೇಕ್ಷಣೀಯ ಸ್ಥಳಗಳು

ಹೊನ್ನಾವರ: ಜನಸಂಖ್ಯೆ ಮತ್ತು ಭಾಷೆ, ಸಾರಿಗೆ ವ್ಯವಸ್ಥೆ, ಪ್ರೇಕ್ಷಣೀಯ ಸ್ಥಳಗಳು 
ಅಪ್ಸರಕೊಂಡ ಸಮುದ್ರ ತೀರದ ಒಂದು ರಮಣೀಯ ದ್ರಶ್ಯ

ಸುಂದರವಾದ ಸಮುದ್ರ ತೀರಗಳಿಂದ,

  • ಶ್ರೀ ಆದಿಶಕ್ತಿ ಜಗದಂಬಾ ದೇವಸ್ಥಾನ ಜಡ್ಡಿಕೇರಿ ಹೊನ್ನಾವರ: ಅತ್ಯಂತ ಶಕ್ತಿಶಾಲಿ ದೇವಿ, ಬೇಡಿದ್ದನ್ನು ಕರುಣಿಸುವ ದೇವಿ , ವಿಶಾಲವಾದ ರಾಜಗೋಪುರ ಹೊನ್ನಾವರದಲ್ಲೆ ಅತ್ಯಂತ ಎತ್ತರದ ರಾಜಗೋಪುರ , ಹಾಗೂ ಉತ್ತಮ ನೈಸರ್ಗಿಕ ಪರಿಸರ ಹೊಂದಿದೆ . ಇದು ಸುಮಾರು 500 ಮಿಟರ ದೂರವಿದೆ .
ಪುರಾಣ ಪ್ರಸಿಧ್ಧ ದೇವಾಲಯಗಳು, ಮನಮೋಹಕ ಜಲಪಾತಗಳು,ಅತಿ ಪುರಾತನ ದೇವಸ್ಥಾನ ಮಂಕಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಹಸಿರು ಪರ್ವತಗಳಿಂದ ಕೂಡಿರುವ ಹೊನ್ನಾವರ ಪ್ರವಾಸಿಗರ ಉತ್ತಮ ಆಯ್ಕೆ. ಗುಂಡಬಾಳಾ ಮುಖ್ಯಪ್ರಾಣ ದೇವಸ್ಥಾನ ಸುಮಾರು ೮೦೦ ವರ್ಷಗಳ ಇತಿಹಾಸ ಹೊಂದಿದೆ.  ವರ್ಷದ ೧೨ ತಿಂಗಳು ಪ್ರತಿ ರಾತ್ರಿ ನಡೆಯುವ ಯಕ್ಷಗಾನ ಈ ದೇವರ ಮಹಿಮೆಯ ಪ್ರತೀಕ. ಜಲಪಾತ ಮತ್ತು ಸಮುದ್ರ ತೀರ ಎರಡನ್ನೂ ಹೊಂದಿರುವ ಅಪ್ಸರಕೊಂಡ ಪ್ರಮುಖ ಆಕರ್ಷಣೆ. 
  • ಇಡಗುಂಜಿ ಮಹಾಗಣಪತಿ ದೇವಸ್ಥಾನ: ಇದು ಸುಮಾರು ೧೨ ಕೀ.ಮೀ. ದೂರದಲ್ಲಿದೆ.
  • ಮುಗ್ವಾ ಸುಬ್ರಹ್ಮಣ್ಯ ದೇವಸ್ಥಾನ: ಸುಮಾರು ೮ ಕಿ.ಮೀ. ಅಂತರದಲ್ಲಿದೆ
  • ಮುರುಡೇಶ್ವರ ದೇವಸ್ಥಾನ: ಇದು ಸುಮಾರು ೨೫ ಕಿ.ಮೀ. ದೂರದಲ್ಲಿದೆ.
  • ಗೇರುಸೊಪ್ಪ ವೀರಾಂಜನೇಯ ದೇವಸ್ಥಾನ: ಇದು ಸುಮಾರು ೩೦ ಕಿ.ಮೀ. ದೂರದಲ್ಲಿದೆ.
  • ಗೇರುಸೊಪ್ಪೆಯ ಚರ್ತುಮುಖ ಬಸದಿ.
  • ಕರಿಕಾನ ಪರಮೇಶ್ವರಿ ದೇವಸ್ಥಾನ: ಇದು ಸುಮಾರು ೧೦ ಕಿ.ಮೀ. ದೂರದಲ್ಲಿದೆ.
  • ಅಪ್ಸರಕೊಂಡ ಜಲಪಾತ: ಇದು ಸುಮಾರು ೦೪ ಕಿ.ಮೀ. ದೂರದಲ್ಲಿದೆ.
  • ಗುಣವಂತೆ: ಯಕ್ಷಗಾನ ಕಲೆಯಿಂದ ಪ್ರಸಿದ್ಧವಾಗಿದೆ. ಸುಮಾರು ೦೯ ಕಿ.ಮೀ ದೂರದಲ್ಲಿದೆ.
  • ಗುಂಡಿಬೈಲ್ ಮಹಾಗಣಪತಿ ದೇವಸ್ಥಾನ:
  • ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ : ಇದು ಸುಮಾರು 14 ಕೀ.ಮೀ ದೂರದಲ್ಲಿರುವ ಅಂತ್ಯಂತ ಶಕ್ತಿಯುತ ದೇವಸ್ಥಾನವಾಗಿದೆ. ಇದು ಹೊನ್ನಾವರದ ಮಂಕಿ ಗ್ರಾಮದ ತಾಳಮಕ್ಕಿ (ದೇವಿಕಾನ) ಎಂಬಲ್ಲಿ ಇದೆ

ಉಲ್ಲೇಖಗಳು

Tags:

ಹೊನ್ನಾವರ ಜನಸಂಖ್ಯೆ ಮತ್ತು ಭಾಷೆಹೊನ್ನಾವರ ಸಾರಿಗೆ ವ್ಯವಸ್ಥೆಹೊನ್ನಾವರ ಪ್ರೇಕ್ಷಣೀಯ ಸ್ಥಳಗಳುಹೊನ್ನಾವರ ಉಲ್ಲೇಖಗಳುಹೊನ್ನಾವರಅರಬ್ಬಿ ಸಮುದ್ರಉತ್ತರ ಕನ್ನಡಗೇರುಸೊಪ್ಪೆತಾಳಮದ್ದಳೆಬಂದರುಯಕ್ಷಗಾನಶರಾವತಿ

🔥 Trending searches on Wiki ಕನ್ನಡ:

ದ್ಯುತಿಸಂಶ್ಲೇಷಣೆಮಲೇರಿಯಾಇಸ್ಲಾಂ ಧರ್ಮವಚನಕಾರರ ಅಂಕಿತ ನಾಮಗಳುಲೋಪಸಂಧಿಅಂತರಜಾಲಕನ್ನಡ ಸಾಹಿತ್ಯನಾಗವರ್ಮ-೧ಮೆಂತೆಬಿಳಿಗಿರಿರಂಗಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕಾರ್ಮಿಕರ ದಿನಾಚರಣೆನಯನತಾರಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಸುಂದರ ಕಾಂಡಸಂಶೋಧನೆಬೆಳಗಾವಿರಾಯಲ್ ಚಾಲೆಂಜರ್ಸ್ ಬೆಂಗಳೂರುಪ್ಲೇಟೊಕರ್ನಾಟಕದ ಮುಖ್ಯಮಂತ್ರಿಗಳುಮಾವುಇನ್ಸ್ಟಾಗ್ರಾಮ್ಭಾರತದ ಸಂವಿಧಾನ ರಚನಾ ಸಭೆಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಕನ್ನಡ ಗುಣಿತಾಕ್ಷರಗಳುಭತ್ತಧರ್ಮಸ್ಥಳವಾಯು ಮಾಲಿನ್ಯಕರಗರಾಧಿಕಾ ಗುಪ್ತಾವ್ಯಂಜನಭಾರತದ ಸಂಸತ್ತುಜ್ಞಾನಪೀಠ ಪ್ರಶಸ್ತಿಜಾಗತಿಕ ತಾಪಮಾನಗೌತಮ ಬುದ್ಧಬೇಲೂರುರೇಣುಕಕುತುಬ್ ಮಿನಾರ್ಕನ್ನಡದಲ್ಲಿ ಗದ್ಯ ಸಾಹಿತ್ಯಸೌರಮಂಡಲಮಹಮದ್ ಬಿನ್ ತುಘಲಕ್ಹಿಂದಿ ಭಾಷೆಸಿದ್ದರಾಮಯ್ಯಮೂಲಧಾತುಸಮಾಜ ವಿಜ್ಞಾನದಕ್ಷಿಣ ಕನ್ನಡಉಪ್ಪು ನೇರಳೆನದಿಜಯಮಾಲಾಗೋಲಗೇರಿಕನ್ನಡ ಸಾಹಿತ್ಯ ಸಮ್ಮೇಳನಕಿರುಧಾನ್ಯಗಳುಕಲ್ಕಿಪುನೀತ್ ರಾಜ್‍ಕುಮಾರ್ಜ್ಯೋತಿಷ ಶಾಸ್ತ್ರಆದಿವಾಸಿಗಳುಜಗನ್ನಾಥದಾಸರುಬೇಸಿಗೆಕರ್ನಾಟಕ ಯುದ್ಧಗಳುಮಾರುತಿ ಸುಜುಕಿಚಂದ್ರಯಾನ-೩ಭಗವದ್ಗೀತೆಬ್ಯಾಡ್ಮಿಂಟನ್‌ಕರ್ನಾಟಕದಲ್ಲಿ ಪಂಚಾಯತ್ ರಾಜ್ಭರತ-ಬಾಹುಬಲಿಅನುನಾಸಿಕ ಸಂಧಿಬಿದಿರುತಲಕಾಡುತಂತ್ರಜ್ಞಾನದ ಉಪಯೋಗಗಳುಹೆಚ್.ಡಿ.ದೇವೇಗೌಡಕೊಬ್ಬರಿ ಎಣ್ಣೆರಾವಣವಾಲಿಬಾಲ್ಚೆನ್ನಕೇಶವ ದೇವಾಲಯ, ಬೇಲೂರುಹೆಳವನಕಟ್ಟೆ ಗಿರಿಯಮ್ಮರವಿ ಬೆಳಗೆರೆತೆಂಗಿನಕಾಯಿ ಮರಮುಟ್ಟು🡆 More