ಕೊಂಕಣಿ: ಭಾರತದಲ್ಲಿ ಮಾತನಾಡುವ ಇಂಡೋ-ಆರ್ಯನ್ ಭಾಷೆ.

ಕೊಂಕಣಿಯು ಭಾರತ ದೇಶದ ಪಶ್ಚಿಮ ಕರಾವಳಿಯ ಒಂದು ಆಡುಭಾಷೆಯಾಗಿದೆ.

ಗೋವಾ ರಾಜ್ಯದ ಅಧಿಕೃತ ಭಾಷೆ ಕೊಂಕಣಿಯಾಗಿದೆ. ಕೊಂಕಣಿಗೆ ತನ್ನದೇ ಆದ ಲಿಪಿಯಿಲ್ಲ. ಕೊಂಕಣಿಯು ಭಾರತದ ಸಂವಿಧಾನದ ೮ನೇ ಪರಿಚ್ಛೇದದಲ್ಲಿ ಸೇರಿಸಲ್ಪಟ್ಟ ೨೨ಭಾಷೆಗಳಲ್ಲಿ ಒಂದಾಗಿದೆ.ಕೊಂಕಣಿಯು ಅನೇಕ ಉಪಭಾಷೆಗಳನ್ನು ಹೊಂದಿದೆ.

ಕೊಂಕಣಿ
कोंकणी
ಕೊಂಕಣಿ: ಸ್ವಾತಂತ್ರ್ಯನಂತರದ ಅವಧಿಯಲ್ಲಿ, ಸ್ವತಂತ್ರ ಭಾಷೆಯಾಗಿ ಗುರುತಿಸುವಿಕೆ, ಅಧಿಕೃತ ಭಾಷೆಯ ಸ್ಥಾನಮಾನ
ಬಳಕೆಯಲ್ಲಿರುವ 
ಪ್ರದೇಶಗಳು:
ಭಾರತ 
ಪ್ರದೇಶ: ಕೊಂಕಣವು , ಮಹಾರಾಷ್ಟ್ರ, ಗೋವಾ,ಕರ್ನಾಟಕ ಮತ್ತು ಕೇರಳದ ಕೆಲವು ಭಾಗಗಳನ್ನು ಒಳಗೊಂಡಿದೆ; ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಅಂತಹ ಭಾರತೀಯ ಕೇಂದ್ರಾಡಳಿತ ಪ್ರದೇಶಗಳನ್ನು ಸಹ ಒಳಗೊಂಡಿದೆ.

ಕೊಂಕಣಿಯನ್ನು ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್ಡಮ್, ಕೆನ್ಯಾ, ಉಗಾಂಡಾ, ಪಾಕಿಸ್ತಾನ, ಪರ್ಷಿಯನ್ ಗಲ್ಫ್, ಪೋರ್ಚುಗಲ್ನಲ್ಲೂ ಸಹ ಮಾತನಾಡುತ್ತಾರೆ.

ಒಟ್ಟು 
ಮಾತನಾಡುವವರು:
7.4 ದಶಲಕ್ಷ
ಭಾಷಾ ಕುಟುಂಬ:
 ಕೊಂಕಣಿ
 
ಬರವಣಿಗೆ: ಪೂರ್ವ ವಸಾಹತುಶಾಹಿ: ಗೋಯ್ಕನಾಡಿ
ವಸಾಹತುೋತ್ತರ: ದೇವನಾಗರಿ (ಅಧಿಕೃತ), ರೋಮನ್, ಕನ್ನಡ, ಮತ್ತು ಮಲಯಾಳಂ
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ: ಕೊಂಕಣಿ: ಸ್ವಾತಂತ್ರ್ಯನಂತರದ ಅವಧಿಯಲ್ಲಿ, ಸ್ವತಂತ್ರ ಭಾಷೆಯಾಗಿ ಗುರುತಿಸುವಿಕೆ, ಅಧಿಕೃತ ಭಾಷೆಯ ಸ್ಥಾನಮಾನ ಭಾರತ ಗೋವಾ
ನಿಯಂತ್ರಿಸುವ
ಪ್ರಾಧಿಕಾರ:
ವಿವಿಧ ಅಕಾಡೆಮಿಗಳು ಮತ್ತು ಗೋವಾ ಸರ್ಕಾರ
ಭಾಷೆಯ ಸಂಕೇತಗಳು
ISO 639-1: ಯಾವುದೂ ಇಲ್ಲ
ISO 639-2: kok
ISO/FDIS 639-3: either:
gom – ಗೋವಾ ಕೊಂಕಣಿ
knn – ಮಹಾರಾಷ್ಟ್ರ ಕೊಂಕಣಿ 
ಕೊಂಕಣಿ: ಸ್ವಾತಂತ್ರ್ಯನಂತರದ ಅವಧಿಯಲ್ಲಿ, ಸ್ವತಂತ್ರ ಭಾಷೆಯಾಗಿ ಗುರುತಿಸುವಿಕೆ, ಅಧಿಕೃತ ಭಾಷೆಯ ಸ್ಥಾನಮಾನ
Indic script
Indic script
ಈ ಪುಟ ಭಾರತೀಯ ಪದಗಳನ್ನು ಹೊಂದಿದೆ. ಸರಿಯಾದ ಪ್ರದರ್ಶನ ಬೆಂಬಲವಿಲ್ಲದೆದ್ದರೆ ನಿಮಗೆ ಅನಿಯತ ಸ್ವರಾಕ್ಷರ ಸ್ಥಾನ ಮತ್ತು ಸೇರ್ಪಡೆಗಳಲ್ಲಿ ತೊಂದರೆಗಲನ್ನು ಕಾಣಬಹುದು. ಹೆಚ್ಚು...

ಸಮಕಾಲೀನ ಕೊಂಕಣಿ

ಸಮಕಾಲೀನ ಕೊಂಕಣಿಯನ್ನು ದೇವನಾಗರಿ, ಕನ್ನಡ, ಮಲಯಾಳಂ, ಪರ್ಷಿಯನ್ ಮತ್ತು ಲ್ಯಾಟಿನ್ ಬರವಣಿಗೆಗಳಲ್ಲಿ ಬರೆಯಲಾಗುತ್ತದೆ. ಇದನ್ನು ತಮ್ಮ ತಮ್ಮ ಸ್ಥಳೀಯ ಭಾಷೆಗಳ ಲಿಪಿಯಲ್ಲಿ ಹೆಚ್ಚಾಗಿ ಬರೆಯುತ್ತಾರಾದರೂ ದೇವನಾಗರಿ ಲಿಪಿಯಲ್ಲಿ ಗೋವಾದವರ Antruz ಭಾಷೆ ಸ್ಟ್ಯಾಂಡರ್ಡ್ ಕೊಂಕಣಿ ಎಂದು ಗುರುತಿಸಲಾಗಿದೆ.

ಕೊಂಕಣಿಯ ಪುನರುಜ್ಜೀವನ

ಗೋವಾದ ಕ್ರಿಶ್ಚಿಯನ್ ಸಮುದಾಯದವರು ಅಧಿಕೃತವಾಗಿ ಹಾಗು ಸಾಮಾಜಿಕವಾಗಿ ಪೋರ್ಚುಗೀಸ್ ಭಾಷೆಯನ್ನು ಬಳಸುತ್ತಿದ್ದರಾದ್ದರಿಂದ ಕೊಂಕಣಿಯ ಸ್ಥಿತಿ ದಯನೀಯವಾಗಿತ್ತು.ಕೊಂಕಣಿಯಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ವಿಭಾಗಗಳಿತ್ತು. ಅದಲ್ಲದೆ ಹಿಂದೂಗಳ ಕೊಂಕಣಿಯ ಮೇಲೆ ಮರಾಠಿಯ ಪ್ರಾಬಲ್ಯವಿತ್ತು.ಹೀಗಿರಲು ವಾಮನ ರಘುನಾಥ ಶೆಣೈ ವರ್ದೆ ವಲೌಲಿಕರ್ ಅವರು ಜಾತಿ ಧರ್ಮದ ಭೇಧವಿಲ್ಲದೆ ಕೊಂಕಣಿ ಸಮುದಾಯದವರನ್ನು ಒಗ್ಗೂಡಿಸಲು ಶ್ರಮಿಸಿದರು . ಪೋರ್ಚುಗೀಸರ ವಿರುದ್ಧ ಮತ್ತು ಮರಾಠಿ ಪ್ರಾಬಲ್ಯತೆಯ ವಿರುದ್ಧ ಬಹುತೇಕ ಏಕಾಂಗಿಯಾಗಿ ಹೋರಾಡಿದರು.ಕೊಂಕಣಿಯಲ್ಲಿ ಅನೇಕ ಲೇಖನಗಳನ್ನು ಬರೆದರು.ಹಾಗಾಗಿ ಅವರನ್ನು ಆಧುನಿಕ ಕೊಂಕಣಿ ಸಾಹಿತ್ಯದ ಪ್ರವರ್ತಕರೆಂದು ಪರಿಗಣಿಸಲಾಗಿದೆ.ಅವರು ನಿಧನ ಹೊಂದಿದ ದಿನದಂದು(ಏಪ್ರಿಲ್ ೯) "ವಿಶ್ವ ಕೊಂಕಣಿ ದಿನ"ವನ್ನು ಆಚರಿಸಲಾಗುತ್ತಿದೆ.

ಸ್ವಾತಂತ್ರ್ಯನಂತರದ ಅವಧಿಯಲ್ಲಿ

೧೯೬೧ ರಲ್ಲಿ ಪೋರ್ಚುಗೀಸರಿಂದ ಸ್ವಾಧೀನಪಡಿಸಿಕೊಂಡ ನಂತರ ಗೋವಾ ರಾಜ್ಯವು ಕೇಂದ್ರದ ಆಡಳಿತಕ್ಕೊಳಪಟ್ಟಿತು.ಕೊಂಕಣಿ ಸ್ವತಂತ್ರ ಭಾಷೆಯೊ ಅಥವಾ ಮರಾಠಿಯ ಉಪಭಾಷೆಯೊ ಎಂಬ ಬಗ್ಗೆ ಚರ್ಚಿಸಲಾಯಿತು.ಜನಾಭಿಪ್ರಾಯ ಸಂಗ್ರಹಿಸಿದ ನಂತರ ಗೋವಾವನ್ನು ಸ್ವತಂತ್ರ ರಾಜ್ಯವಾಗಿಯೆ ಉಳಿಸಲಾಯಿತು.

ಸ್ವತಂತ್ರ ಭಾಷೆಯಾಗಿ ಗುರುತಿಸುವಿಕೆ

ಕೊಂಕಣಿ ಮರಾಠಿ ಪ್ರಾಂತ್ಯ ಮತ್ತು ಒಂದು ಸ್ವತಂತ್ರ ಭಾಷೆಯಲ್ಲ ಎಂದು ಕೆಲವು ಮರಾಠಿಗರ ಒತ್ತಾಯ ಮುಂದುವರಿಯಿತು.ವಿವಾದ ಇತ್ಯರ್ಥಗೊಳಿಸಲು ಭಾಷಾ ತಜ್ಞರ ಒಂದು ಸಮಿತಿಯನ್ನು ನೇಮಿಸಲಾಯಿತು. ೨೬ ಫೆಬ್ರವರಿ ೧೯೭೫ ರಂದು ಸಮಿತಿಯು ಕೊಂಕಣಿಯು ಒಂದು ಸ್ವತಂತ್ರ ಮತ್ತು ಸಾಹಿತ್ಯಕ ಭಾಷೆ ಮತ್ತು ಅದರ ಮೇಲೆ ಪೋರ್ಚುಗೀಸ್ ಭಾಷೆಯ ಗಾಢ ಪ್ರಭಾವವಿದೆ ಎಂಬ ತೀರ್ಮಾನಕ್ಕೆ ಬಂದಿತು.

ಅಧಿಕೃತ ಭಾಷೆಯ ಸ್ಥಾನಮಾನ

ಕೊಂಕಣಿ ಪ್ರೇಮಿಗಳು ೧೯೮೬ ರಲ್ಲಿ ಕೊಂಕಣಿಗೆ ಅಧಿಕೃತ ಸ್ಥಾನಮಾನದ ಬೇಡಿಕೆಯೊಂದಿಗೆ ಚಳುವಳಿ ಪ್ರಾರಂಭಿಸಿದರು. ವಿವಿಧೆಡೆ ಚಳುವಳಿ ಹಿಂಸೆಗೆ ತಿರುಗಿತು. ಕ್ಯಾಥೋಲಿಕ್ ಸಮುದಾಯದ ಎಲ್ಲಾ ಆರು ಚಳುವಳಿಗಾರರ ಸಾವು ಸಂಭವಿಸುತು.ಅಂತಿಮವಾಗಿ ೪ ಫೆಬ್ರುವರಿ ೧೯೮೭ ರಂದು ಗೋವಾ ಶಾಸಕಾಂಗ ಕೊಂಕಣಿ ಯನ್ನುಗೋವಾದ ಅಧಿಕೃತಭಾಷೆ ಎಂದು ಘೋಷಿಸಿತು.೨೦ ಆಗಸ್ಟ್ ೧೯೯೨ ರಂದು ಭಾರತದ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಕೊಂಕಣಿಯನ್ನು ಸೇರಿಸಿದಾಗ ಅದು ಭಾರತದ ರಾಷ್ಟ್ರೀಯ ಅಧಿಕೃತ ಭಾಷೆಗಳಲ್ಲಿ ಒಂದಾಯಿತು.

ಉಲ್ಲೇಖಗಳು

ಬಾಹ್ಯ ಕೊಂಡಿಗಳು


Tags:

ಕೊಂಕಣಿ ಸ್ವಾತಂತ್ರ್ಯನಂತರದ ಅವಧಿಯಲ್ಲಿಕೊಂಕಣಿ ಸ್ವತಂತ್ರ ಭಾಷೆಯಾಗಿ ಗುರುತಿಸುವಿಕೆಕೊಂಕಣಿ ಅಧಿಕೃತ ಭಾಷೆಯ ಸ್ಥಾನಮಾನಕೊಂಕಣಿ ಉಲ್ಲೇಖಗಳುಕೊಂಕಣಿಗೋವಾಭಾರತ

🔥 Trending searches on Wiki ಕನ್ನಡ:

ಜ್ಞಾನಪೀಠ ಪ್ರಶಸ್ತಿಹಳೆಗನ್ನಡಚಂದ್ರಗುಪ್ತ ಮೌರ್ಯಸಾರಜನಕಕೃಷ್ಣರಾಜಸಾಗರಲೋಹಆಯುರ್ವೇದಪಂಚ ವಾರ್ಷಿಕ ಯೋಜನೆಗಳುಅನುಶ್ರೀಶಿವನ ಸಮುದ್ರ ಜಲಪಾತಭಾರತೀಯ ಶಾಸ್ತ್ರೀಯ ನೃತ್ಯಹರಿಹರ (ಕವಿ)ರವಿಚಂದ್ರನ್ಮಹಾವೀರ ಜಯಂತಿಕರಗ (ಹಬ್ಬ)ಮೈಸೂರು ಸಂಸ್ಥಾನಬಸವಲಿಂಗ ಪಟ್ಟದೇವರುರನ್ನರಾವಣಖೊಖೊಸರ್ವೆಪಲ್ಲಿ ರಾಧಾಕೃಷ್ಣನ್ಶಿವಇನ್ಸ್ಟಾಗ್ರಾಮ್ಪಕ್ಷಿಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುನಿರಂಜನಕರ್ನಾಟಕದ ನದಿಗಳುಜಾತ್ರೆಸುಧಾರಾಣಿಸ್ವಾತಂತ್ರ್ಯಜಾಗತಿಕ ತಾಪಮಾನ ಏರಿಕೆಬೆಸಗರಹಳ್ಳಿ ರಾಮಣ್ಣರಾಘವಾಂಕತಂತ್ರಜ್ಞಾನವೆಂಕಟೇಶ್ವರ ದೇವಸ್ಥಾನಹಯಗ್ರೀವಕನ್ನಡ ಕಾಗುಣಿತಕರ್ನಾಟಕ ಜನಪದ ನೃತ್ಯಪಿ.ಲಂಕೇಶ್ಕಾಳಿ ನದಿಭಾರತದ ಜನಸಂಖ್ಯೆಯ ಬೆಳವಣಿಗೆಬಸವೇಶ್ವರಚಿತ್ರದುರ್ಗಚಿತ್ರದುರ್ಗ ಕೋಟೆಕೆರೆಗೆ ಹಾರ ಕಥನಗೀತೆಕರ್ನಾಟಕ ಲೋಕಸಭಾ ಚುನಾವಣೆ, ೨೦೦೯ವೀರಗಾಸೆಶ್ರೀಕೃಷ್ಣದೇವರಾಯಅರಸೀಕೆರೆನಿರುದ್ಯೋಗಮುಹಮ್ಮದ್ಸಾಲುಮರದ ತಿಮ್ಮಕ್ಕಕೇಂದ್ರಾಡಳಿತ ಪ್ರದೇಶಗಳುಯೇಸು ಕ್ರಿಸ್ತಆನೆಮೈಸೂರು ಅರಮನೆಭಾರತ ರತ್ನದಯಾನಂದ ಸರಸ್ವತಿಪ್ಲಾಸಿ ಕದನರಾಷ್ಟ್ರೀಯ ಉತ್ಪನ್ನಕೇಸರಿ (ಬಣ್ಣ)ಮ್ಯಾಕ್ಸ್ ವೆಬರ್ಏಷ್ಯಾಚಾಮರಾಜನಗರಕ್ರಿಕೆಟ್ಬಾದಾಮಿ ಶಾಸನಕುರಿಕಾರ್ಯಾಂಗಸಂಸದೀಯ ವ್ಯವಸ್ಥೆಕೆಂಬೂತ-ಘನಭಾರತದ ಸಂಸತ್ತುಓಂ ನಮಃ ಶಿವಾಯಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಲೆಕ್ಕ ಪರಿಶೋಧನೆಕ್ರಿಯಾಪದಹಣ್ಣು🡆 More