ಗೂಗಲ್ ರೀಡರ್

ಗೂಗಲ್ ರೀಡರ್ ಎಂಬುದು ವೆಬ್ ಆಧಾರಿತ ಸಂಗ್ರಾಹಕವಾಗಿದ್ದು, ಆಟಮ್ ಮತ್ತು RSSಸಂಕ್ಷಿಪ್ತ ಸುದ್ದಿ ಮೂಲದ ಫೀಡ್ಸ್ ಅನ್ನು ಆನ್ ಲೈನ್ ಅಥವಾ ಆಫ್ ಲೈನ್ ನಲ್ಲಿ ಓದುವ ಸಾಮರ್ಥ್ಯ ಹೊಂದಿದೆ.

ಇದನ್ನು ಗೂಗಲ್ 2005 ರ ಅಕ್ಟೋಬರ್ 7 ರಂದು ಗೂಗಲ್ ಲ್ಯಾಬ್ಸ್ ನ ಮೂಲಕ ಬಿಡುಗಡೆ ಮಾಡಿತು. ಬೀಟಾವು ಉನ್ನತೀಕರಣದಿಂದ ರೀಡರ್ 2007 ರ ಸೆಪ್ಟೆಂಬರ್ 17 ರಂದು ಉನ್ನತ ಮಟ್ಟ ತಲುಪಿತು.

Google Reader
ಗೂಗಲ್ ರೀಡರ್
ಅಭಿವೃದ್ಧಿಪಡಿಸಿದವರುGoogle
ಗಣಕಯಂತ್ರದಲ್ಲಿWeb browsers
ವಿಧRSS feed reader
ಅಧೀಕೃತ ಜಾಲತಾಣhttp://reader.google.com/

ವಿಶಿಷ್ಟ ಲಕ್ಷಣಗಳು

ಅಂತರಸಂಪರ್ಕ

ಗೂಗಲ್, 2006 ರ ಸೆಪ್ಟೆಂಬರ್ 28 ರಂದು ರೀಡರ್ ಬಳಕೆದಾರರ ಹೆಚ್ಚುವರಿ ಅಂತರಸಂಪರ್ಕದ ಮರು ಪರಿಶೀಲನೆ ಮಾಡಿತು. ಉತ್ಪನ್ನದ ನಿರ್ವಾಹಕ ನಿಕ್ ಬಾಮ್, ಸಾರ್ವಜನಿಕರಿಗೆ ಆಸಕ್ತಿ ಬೆಳೆಸುವ, ಆಕರ್ಷಿಸುವ ಸುದ್ದಿಯ ಸಂಗ್ರಹದೆಡೆಗೆ ನಡೆಯುತ್ತಿರುವ ಒಂದು ಆಂದೋಲನದ ರೂಪದಲ್ಲಿ ಈ ಪುನರ್ವಿನ್ಯಾಸ ಮಾಡಿದರು. ಮರುಪರಿಶೀಲಿಸಿದ ಗೂಗಲ್ ರೀಡರ್ ನ ವಿನ್ಯಾಸಕ ಕೆವಿನ್ ಫಾಂಕ್ಸ್, ಪ್ರಕಾರ ಕನಿಷ್ಟ ಸುದ್ದಿಯ "ಪ್ರವಾಹ"ವನ್ನು ಓದಲು ಬಯಸುವವರಿಗೆ ಮೂಲ ಆವೃತ್ತಿಯು ಅತ್ಯುತ್ತಮವಾಗಿದೆ ಎಂದು ಟಿಪ್ಪಣಿ ಮಾಡಿದ್ದಾರೆ. ಹೊಸ ಆವೃತ್ತಿಯು, ಬಹುಪಾಲು ಓದುಗರು ಅವರ ಓದನ್ನು ಫೀಡ್, ಗ್ರೂಪ್ , ಟ್ಯಾಗ್, ಫೋಲ್ಡರ್ ಅಥವಾ "ಓದಲೇಬೇಕು" ಮತ್ತು "ನನಗೆ ಸಿಕ್ಕಿದರೆ" ಫೀಡ್ ಗಳಿಂದ ವಿಭಾಗಿಸುತ್ತಾರೆ ಎಂಬುದನ್ನು ಪರಿಗಣಿಸುತ್ತದೆ.

ಗೂಗಲ್ ರೀಡರ್ ಲಕ್ಷಣಗಳುas of 2010 ಕೆಳಕಂಡವುಗಳನ್ನು ಒಳಗೊಂಡಿವೆ:

  • ಕ್ಷಣದಲ್ಲಿಯೇ ಹೊಸ ಮಾಹಿತಿಗಳನ್ನು ನೋಡಲು ನಿಮಗೆ ಅವಕಾಶ ಒದಗಿಸುವ ಮುಖಪುಟ.
  • OPML ಫೈಲ್ ನ ರೂಪದಲ್ಲಿ ಬರುವ ಮತ್ತು ಹೋಗುವ ಚಂದಾ ಪಾವತಿಯ ದಾಖಲೆ ಪಟ್ಟಿ.
  • ಪ್ರಧಾನ ಕಾರ್ಯಗಳಿಗಾಗಿ ಕೀಲಿಕೈ ಶಾರ್ಟ್ ಕಟ್ ಗಳು
  • ಮಾಹಿತಿಯ ವೀಕ್ಷಣೆಗಾಗಿ(ಕಥೆಯ ಶೀರ್ಷಿಕೆಯನ್ನು ಮಾತ್ರ ಪ್ರದರ್ಶಿಸುವುದು ಅಥವಾ ಅನುಕ್ರಮವಾಗಿ ವಿವರಣೆ ಒಳಗೊಳ್ಳುವುದು) ಲಿಸ್ಟ್ ವ್ಯೂ (ಪಟ್ಟಿಮಾಡಲಾದ ವೀಕ್ಷಣೆ) ಅಥವಾ ಎಕ್ಸ್ ಪ್ಯಾಂಡೆಡ್ ವ್ಯೂ (ವಿಸ್ತೃತ ವೀಕ್ಷಣೆ) ನ ನಡುವೆ ಆಯ್ಕೆ.
  • ಅವುಗಳನ್ನು ಓದುತ್ತಾ ಹೋದಂತೆಲ್ಲಾ ಅಪ್ರಯತ್ನ ಪೂರ್ವಕವಾಗಿ ಮಾಹಿತಿಗಳನ್ನು ಗುರುತಿಸುತ್ತ ಹೋಗುತ್ತದೆ. (ವಿಸ್ತರಿಸಲಾದ ವೀಕ್ಷಣೆ ಮಾತ್ರ)
  • ಎಲ್ಲಾ ಫೀಡ್ಸ್ ಗಳಲ್ಲಿ ಚಂದಾ ಪಾವತಿ ಮೂಲದ ಎಲ್ಲಾ ಪರಿಷ್ಕರಣೆಗಳುದ್ದಕ್ಕೂ ಶೋಧನೆ

ಸಂಸ್ಥೆ(ಸಂಘಟನೆ)

ಬಳಕೆದಾರರು, ಗೂಗಲ್ ರೀಡರ್ ನ ಶೋಧನ ಕಾರ್ಯಕಾರಿತ್ವ ಬಳಸಿಕೊಂಡು ಅಥವಾ RSS ಅಥವಾ ಆಟಮ್ ಫೀಡ್ ನ ಖಚಿತವಾದ URLನಲ್ಲಿ ಪ್ರವೇಶಿಸುವ ಮೂಲಕವು ಫೀಡ್ಸ್ ಗೆ ಚಂದಾದಾರರಾಗಬಹುದು. ಅನಂತರ ಆ ಫೀಡ್ಸ್ ಗಳಿಂದ ಬರುವ ಹೊಸ ಪ್ರಕಟಣೆಗಳನ್ನು ಪಟಲದ ಎಡಬದಿಯಲ್ಲಿ ಪ್ರದರ್ಶಿಸಲಾಗುತ್ತದೆ. ಅನಂತರ ಯಾರು ಬೇಕಾದರೂ ದಿನಾಂಕ ಅಥವಾ ಪ್ರಸಕ್ತತೆಯ ಮೂಲಕ ಆ ಪಟ್ಟಿಯನ್ನು ಆದೇಶಿಸಬಹುದು. ಮಾಹಿತಿಗಳನ್ನು ಲೇಬಲ್ (ಗುರುತಿನ ಹೆಸರು)ಗಳೊಂದಿಗೆ ಕೂಡ ಸಂಯೋಜಿಸಬಹುದು. ಅಲ್ಲದೇ ಸುಲಭದ ಪ್ರವೇಶಕ್ಕಾಗಿ "ನಕ್ಷತ್ರ ಗುರುತಿನ ಮಾಹಿತಿ" ಗಳನ್ನು ಸೃಷ್ಟಿಸಬಹುದಾಗಿದೆ.

ಪರಸ್ಪರ ಹಂಚಿಕೆ

ಗೂಗಲ್ ರೀಡರ್ ನಲ್ಲಿರುವ ಮಾಹಿತಿಗಳನ್ನು ಇತರ ವೆಬ್ ಬಳಕೆದಾರರೊಂದಿಗೆ ವಿನಿಮಯದ ಮೂಲಕ ಹಂಚಿಕೊಳ್ಳಬಹುದು. ಹಿಂದೆ ಇದನ್ನು ಇ-ಮೇಲ್ ನ ಲಿಂಕ್ ಕಳಿಸಿ, ಕಳುಹಿಸಲಾದ ಲೇಖನವನ್ನು ಬಳಕೆದಾರನಿಗೆ ನಿರ್ದೇಶಿಸುವ ಮೂಲಕ ಒದಗಿಸಲಾಗುತ್ತಿತ್ತು; ಅಥವಾ ಬಳಕೆದಾರರ ಖಾತೆಯಿಂದ ವಿತರಿತ ಎಲ್ಲಾ ಮಾಹಿತಿಗಳನ್ನು ಒಳಗೊಂಡಿರುವ ಮೂಲ ವೆಬ್ ಪುಟವನ್ನು ನಿರ್ಮಿಸಿ ಮಾಡಲಾಗುತ್ತಿತ್ತು. ಗೂಗಲ್ 2007 ರ ಡಿಸೆಂಬರ್ ನಲ್ಲಿ, ಹಂಚಿಕೆಯ ನೀತಿಯನ್ನು ಬದಲಾಯಿಸಿತು. ಇದರಿಂದಾಗಿ ಬಳಕೆದಾರನು ಹಂಚಲಾಗಿದೆ ಎಂದು ಗುರುತಿಸಿದ ಮಾಹಿತಿಯು, ತನ್ನಿಂದತಾನೇ ಅವರ ಗೂಗಲ್ ಟಾಕ್ ಸಂಪರ್ಕಗಳಲ್ಲಿ ಕಾಣಿಸುವಂತಾಯಿತು. ಬಳಕೆದಾರರು ಈ ಬದಲಾವಣೆಯನ್ನು ಟೀಕಿಸಿದರು, ಏಕೆಂದರೆ ಅಲ್ಲಿ ಆಯ್ಕೆಗೆ ಅವಕಾಶವಿರಲಿಲ್ಲ. ಹಂಚಲಾದ ಮಾಹಿತಿಗಳನ್ನು ಒಳಗೊಂಡ ಬಳಕೆದಾರನ ಪುಟಕ್ಕಾಗಿ ಬಳಸುವ URL ಯಾದೃಚ್ಛಿಕ ಮಾದರಿ ಸರಣಿ ಹೊಂದಿರುತ್ತದೆ. ಅಲ್ಲದೇ ಗೂಗಲ್ ಮೂಲತಃ ಇದನ್ನು,ನೀವು ವಿಳಾಸ ನೀಡುವ ವ್ಯಕ್ತಿಗಳಿಗೆ ಮಾತ್ರ ಹಂಚುವ ರೂಪದಲ್ಲಿ ಪ್ರಕಟಪಡಿಸಿತು.

ಆಫ್ ಲೈನ್ ಪ್ರವೇಶ

ಗೂಗಲ್ ರೀಡರ್ ಎಂಬುದು ಗೂಗಲ್ ಗೇರ್ ಅನ್ನು ಬಳಸುವ ಮೊದಲ ಅನ್ವಯಿಕೆಯಾಗಿದೆ. ಅಲ್ಲದೇ ಆನ್ ಲೈನ್ ಅನ್ವಯಿಕೆಗಳನ್ನು ಆಫ್ ಲೈನ್ ನಲ್ಲಿ ಕಾರ್ಯನಿರ್ವಹಿಸುವಂತೆ ಮಾಡುವ ಬ್ರೌಸರ್ ನ ವಿಸ್ತೃತ ರೂಪ ಆಗಿದೆ. ಎಕ್ಸ್ ಟೆನ್ಷನ್ ಅನ್ನು ಅಳವಡಿಸಿಕೊಂಡ ಬಳಕೆದಾರರು, ಇತ್ತೀಚಿನ 2000 ವರೆಗೆ ಆಫ್ ಲೈನ್ ನಲ್ಲಿಯೇ ಓದಬಹುದಾದ ಮಾಹಿತಿಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಆನ್ ಲೈನ್ ಗೆ ಮರಳಿದ ನಂತರ ಗೂಗಲ್ ರೀಡರ್, ಫೀಡ್ಸ್ ಅನ್ನು ಪರಿಷ್ಕರಿಸುತ್ತದೆ. ಗೂಗಲ್ ರೀಡರ್,ಇತ್ತೀಚಿಗೆ 2010 ರ ಜೂನ್ 1 ರಿಂದ ಈ ಲಕ್ಷಣದ ಆಧಾರದ ನೆರವನ್ನು ಮುಂದುವರಿಸಿಲ್ಲ.

ಮೊಬೈಲ್ ಮೂಲಕ ಪ್ರವೇಶ ಮಾರ್ಗ

ಮೊಬೈಲ್ ಅಂತರಸಂಪರ್ಕ ವನ್ನು 2006 ರ ಮೇ 18 ರಂದು ಬಿಡುಗಡೆ ಮಾಡಲಾಯಿತು. ಈಗ ಇದನ್ನು XHTML ಅಥವಾ WAP 2.0 ಗೆ ಆಧಾರ ನೀಡುವ ಸಾಧನದ ಮೂಲಕ ಬಳಸಬಹುದಾಗಿದೆ. ಗೂಗಲ್, ಹೀಗೆ 2008 ರ ಮೇ 12 ರಂದು, ಐಫೋನ್ ಬಳಕೆದಾರರನ್ನು ಗುರಿಯಾಗಿಸಿ ಗೂಗಲ್ ರೀಡರ್ ನ ಆವೃತ್ತಿಯನ್ನು ಪ್ರಕಟಿಸಿತು. ಇದನ್ನು ಇಲ್ಲಿ ನೋಡಬಹುದಾಗಿದೆ.

ಐಗೂಗಲ್

ಅಲ್ಲದೇ ಗೂಗಲ್ 2006 ರ ಮೇ 4 ರಂದು, ಹೊಸ ಗುಣಲಕ್ಷಣಗಳನ್ನು ಬಿಡುಗಡೆ ಮಾಡಿತು, ಇದು ಐಗೂಗಲ್ (ಗೂಗಲ್ ಜಾರಿಗೊಳಿಸಿದ ಮುಖಪುಟ) ನ ಮೇಲೆ ಪ್ರದರ್ಶನವಾಗುವ ಫೀಡ್ ಅನ್ನು ರೀಡರ್ ನಿಂದ ಒದಗಿಸುತ್ತದೆ.

ಮೊಝಿಲ್ಲಾ ಸಮಗ್ರಗೊಳಿಸುವಿಕೆ

ಗೂಗಲ್ ರೀಡರ್ ಅನ್ನು ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಸೀಮಂಕಿಯ ಫೀಡ್ ಗುರುತಿಸುವಿಕೆಯಲ್ಲಿ ಸೇರಿಸಲಾಗಿದೆ. ಇದು ಅಪ್ರಯತ್ನಪೂರ್ವಕವಾಗಿ ಬಳಕೆದಾರರನ್ನು ಗೂಗಲ್ ರೀಡರ್ ನ ಆಡ್ ಸಬ್ ಸ್ಕ್ರಿಪ್ಷನ್ ಪಟಲಕ್ಕೆ ಹೋಗುವಂತೆ ಪುನರ್ನಿರ್ದೇಶಿಸುತ್ತದೆ.

Wii ಆವೃತ್ತಿ

ಗೂಗಲ್,2007 ರ ಮೇ 8 ರಂದು 'ಗೂಗಲ್ ರೀಡರ್'ಆವೃತ್ತಿಯನ್ನು ನಿರ್ಮಿಸಿತು. ಇದನ್ನು ವಿಶೇಷವಾಗಿ Wii ವೆಬ್-ಬ್ರೌಸರ್ ಗಾಗಿ ಸಿದ್ಧಗೊಳಿಸಲಾಗಿತ್ತು - http://www.google.com/reader/wii ಅನ್ನು ನೋಡಿ. ಇದನ್ನು 2009 ರ ಉತ್ತರಾರ್ಧದಲ್ಲಿ ಆರಂಭಿಸಲಾಯಿತು, Wii ಕನ್ ಸೋಲ್ ನಲ್ಲಿ Wii ಆವೃತ್ತಿಯನ್ನು ಬಳಸಿದಾಗ ಇದು ಸೀಮಿತ ಕಾರ್ಯಕಾರಿತ್ವ ಹೊಂದಿರುತ್ತದೆ.

ಪ್ಲೇ

ಗೂಗಲ್,2010 ರ ಮಾರ್ಚ್ 10 ರಂದು,ಗೂಗಲ್ ರೀಡರ್ ಪ್ಲೇಯನ್ನು ಹೊರತಂದು ಬಿಡುಗಡೆ ಮಾಡಿತು. ಪ್ಲೇ, ಪ್ರಸಿದ್ಧ ಮಾಹಿತಿಯನ್ನು ಒಂದರ ನಂತರ ಮತ್ತೊಂದರಂತೆ ಪ್ರದರ್ಶಿಸುವ ಸ್ಲೈಡ್ ಶೋ ಅಂತರಸಂಪರ್ಕವನ್ನು ಒದಗಿಸಿದೆ. ಈ ಮಾಹಿತಿಗಳನ್ನು ವರ್ಗೀಕರಿಸಲಾದ ತಾಣಗಳು, ಫೀಡ್ ಗಳಿಂದ ಒದಗಿಸಲಾಗುತ್ತದೆ. ಅಲ್ಲದೇ ಪ್ಲೇಗಳಲ್ಲಿ ಅವುಗಳ ಉಪಸ್ಥಿತಿಯು, ರೀಡರ್ ನ ಬಳಕೆದಾರರ ಪ್ರತಿಕ್ರಿಯೆ ಒದಗಿಸಿದ ದತ್ತಾಂಶವನ್ನು ಆಧರಿಸಿರುತ್ತದೆ.ಉದಾಹರಣೆಗೆ ಎಷ್ಟು ಜನರು ಇಷ್ಟಪಟ್ಟರು ಅಥವಾ ಹಂಚಿದರು ಎಂಬುದರ ಮೇಲೆ ಆಧರಿಸಿರುತ್ತದೆ. ಗೂಗಲ್ ರೀಡರ್ ನಂತೆ ಪ್ಲೇಯನ್ನು ಪ್ರವೇಶಿಸಲು ಗೂಗಲ್ ಖಾತೆಯ ಅಗತ್ಯವಿಲ್ಲ. ಗೂಗಲ್ ರೀಡರ್ ಪ್ಲೇ ತತ್ ಕ್ಷಣವೇ ಜನಪ್ರಿಯವಾಯಿತಲ್ಲದೇ, ಅತ್ಯಂತ ಹೆಚ್ಚು ಬಳಸಲಾದ ಗೂಗಲ್ ಉತ್ಪನ್ನಗಳಲ್ಲಿ ಒಂದಾಯಿತು.

ಅವಶ್ಯಕತೆಗಳು

ಗೂಗಲ್ ರೀಡರ್ ಗೆ ಕಾರ್ಯನಿರ್ವಹಿಸಲು ಗೂಗಲ್ ಖಾತೆ (ಉಚಿತ)ಯ ಜೊತೆಯಲ್ಲಿ, ಕೆಳಕಂಡ ವೆಬ್ ಬ್ರೌಸರ್ ಗಳಲ್ಲಿ ಒಂದರ ಅಗತ್ಯವಿರುತ್ತದೆ:

  • ಗೂಗಲ್‌ ಕ್ರೋಮ್‌
  • ಮೊಝಿಲ್ಲಾ 1.7+
  • ಮೊಝಿಲ್ಲಾ ಫೈರ್ ಫಾಕ್ಸ್ 1.0+
  • ನೆಟ್ ಸ್ಕೇಪ್ 7.2+
  • ಒಪೆರಾ 9.0+
  • ಸಫಾರಿ 1.3+
  • ವಿಂಡೋಸ್ ಇಂಟರ್ ನೆಟ್ ಎಕ್ಸ್ ಫ್ಲೋರರ್ 6+
  • Wii ಇಂಟರ್ ನೆಟ್ ಚಾನಲ್

ಎಲ್ಲಾ ಪ್ರಕರಣಗಳಲ್ಲಿಯೂ, ಗೂಗಲ್ ರೀಡರ್ ಕಾರ್ಯನಿರ್ವಹಿಸಲು ಜಾವಾ ಸ್ಕ್ರಿಪ್ಟ್ ಅನ್ನು ಒದಗಿಸಬೇಕಾಗುತ್ತದೆ.

ಉಲ್ಲೇಖಗಳು

ಬಾಹ್ಯ ಕೊಂಡಿಗಳು

ಗೂಗಲ್:

ಅನಧಿಕೃತ

Tags:

ಗೂಗಲ್ ರೀಡರ್ ವಿಶಿಷ್ಟ ಲಕ್ಷಣಗಳುಗೂಗಲ್ ರೀಡರ್ ಅವಶ್ಯಕತೆಗಳುಗೂಗಲ್ ರೀಡರ್ ಉಲ್ಲೇಖಗಳುಗೂಗಲ್ ರೀಡರ್ ಬಾಹ್ಯ ಕೊಂಡಿಗಳುಗೂಗಲ್ ರೀಡರ್ಗೂಗಲ್

🔥 Trending searches on Wiki ಕನ್ನಡ:

ಸಂಸ್ಕೃತ ಸಂಧಿಕರ್ನಾಟಕ ಪೊಲೀಸ್ಮಹಾಕವಿ ರನ್ನನ ಗದಾಯುದ್ಧಗಂಗ (ರಾಜಮನೆತನ)ಸಾರಾ ಅಬೂಬಕ್ಕರ್ಅಯೋಧ್ಯೆಆದಿ ಶಂಕರನರೇಂದ್ರ ಮೋದಿಅಂಬರೀಶ್ ನಟನೆಯ ಚಲನಚಿತ್ರಗಳುಅನಂತ್ ನಾಗ್ಪ್ರೇಮಾಶಬ್ದಶುಕ್ರಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಜಿ.ಪಿ.ರಾಜರತ್ನಂಮಳೆಶೈಕ್ಷಣಿಕ ಮನೋವಿಜ್ಞಾನತುಂಗಭದ್ರಾ ಅಣೆಕಟ್ಟುಕುರುಶಿವಮೊಗ್ಗಸಾಮಾಜಿಕ ಸಮಸ್ಯೆಗಳುಆದೇಶ ಸಂಧಿಬೆಂಗಳೂರು ಗ್ರಾಮಾಂತರ ಜಿಲ್ಲೆಆಮೆಕನ್ನಡ ಚಂಪು ಸಾಹಿತ್ಯಗಿರೀಶ್ ಕಾರ್ನಾಡ್ಕೃಷ್ಣಜೋಡು ನುಡಿಗಟ್ಟುಹೈದರಾಬಾದ್‌, ತೆಲಂಗಾಣತಾಳೀಕೋಟೆಯ ಯುದ್ಧಅರ್ಜುನಭಾರತದ ಸಂವಿಧಾನ ರಚನಾ ಸಭೆಶರಣಬಸವೇಶ್ವರ ದೇವಸ್ಥಾನ ಕಲಬುರಗಿದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ವೃದ್ಧಿ ಸಂಧಿಅಖ್ರೋಟ್ಅರ್ಥಶಾಸ್ತ್ರಕಾರ್ಮಿಕರ ದಿನಾಚರಣೆಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಸಮಾಜಶಾಸ್ತ್ರಶಬ್ದ ಮಾಲಿನ್ಯದೇಶಗಳ ವಿಸ್ತೀರ್ಣ ಪಟ್ಟಿಕುತುಬ್ ಮಿನಾರ್ಕವಿರಾಜಮಾರ್ಗಹಲ್ಮಿಡಿ ಶಾಸನಮಾಧ್ಯಮಗಾದೆ ಮಾತುಗಣರಾಜ್ಯೋತ್ಸವ (ಭಾರತ)ಮಂಡ್ಯಭಾರತದ ಸರ್ವೋಚ್ಛ ನ್ಯಾಯಾಲಯಸಂಗೊಳ್ಳಿ ರಾಯಣ್ಣಹಾಸನಕಲ್ಲುಹೂವು (ಲೈಕನ್‌ಗಳು)ಕನ್ನಡ ಬರಹಗಾರ್ತಿಯರುವಿಚ್ಛೇದನಕರ್ನಾಟಕದ ಇತಿಹಾಸಪಂಚಾಂಗತೆಲುಗುಮಲಬದ್ಧತೆಕ್ರಿಯಾಪದರನ್ನಡಾ ಬ್ರೋಕರ್ನಾಟಕ ಐತಿಹಾಸಿಕ ಸ್ಥಳಗಳುಬೆಟ್ಟದ ನೆಲ್ಲಿಕಾಯಿರಾಮ ಮಂದಿರ, ಅಯೋಧ್ಯೆಹಣಕೊಡಗುಶಬ್ದವೇಧಿ (ಚಲನಚಿತ್ರ)ಕೊಡಗು ಜಿಲ್ಲೆನಾಮಪದಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಕನ್ನಡದಲ್ಲಿ ವಚನ ಸಾಹಿತ್ಯಕ್ರಿಕೆಟ್ಕೆ. ಅಣ್ಣಾಮಲೈಭಾರತ🡆 More