ಕಿಕ್ಕೇರಿ: ಕರ್ನಾಟಕದ ಒಂದು ಪಟ್ಟಣ


ಕಿಕ್ಕೇರಿ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಒಂದು ಹೋಬಳಿ ಕೇಂದ್ರ. ೧೯೮೦ರವರೆಗೆ ಇದು ತಾಲ್ಲೂಕು ಕೇಂದ್ರವೇ ಆಗಿತ್ತು. ಹೊಯ್ಸಳರ ಕಾಲದಲ್ಲಿ ಇದು ಅಗ್ರಹಾರವಾಗಿತ್ತು. ಸರ್ವಜ್ನಪುರಿ ಎಂಬ ಹೆಸರೂ ಗ್ರಾಮಕ್ಕಿದೆ. ಕೈಮಗ್ಗದ ವಸ್ತ್ರಗಳಿಗೂ ಈ ಗ್ರಾಮ ಹೆಸರುವಾಸಿ. ಗ್ರಾಮದಲ್ಲಿ ಹೊಯ್ಸಳ ಶಿಲ್ಪಕಲೆಯ ಬ್ರಹ್ಮೇಶ್ವರ ದೇವಾಲಯ ಇದೆ. ಹೊಯ್ಸಳ ದೊರೆ ಒಂದನೇ ನರಸಿಂಹನ ಕಾಲದಲ್ಲಿ ಬಮ್ಮವ್ವೆ ನಾಯಕಿತಿ ಎಂಬಾಕೆ ಕ್ರಿ.ಶ.೧೧೭೧ ರಲ್ಲಿ ಈ ಏಕಕೂಟ ದೇವಾಲಯ ಕಟ್ಟಿ ಸಿದಳು ಎಂದು ದಾಖಲೆಗಳು (ಶಾಸನ- ಕೃ.ಪೇ.೨೭) ತಿಳಿಸುತ್ತವೆ. ಇಲ್ಲಿನ ಗ್ರಾಮದೇವತೆ ಕಿಕ್ಕೇರಮ್ಮ ನ ದೇವಾಲಯ ಬೃಹತ್ ಆಕಾರವನ್ನು ಹೊಂದಿದ್ದು, ವಿಜಯನಗರದ ಹರಿಹರ - ಬುಕ್ಕರಾಯರ ಕಾಲದಲ್ಲಿ ನಿರ್ಮಾಣವಾದದ್ದು ಎಂದು ಹೇಳಲಾಗುತ್ತದೆ. ಕಿಕ್ಕೇರಮ್ಮನ ಹಬ್ಬದ ಸಂದರ್ಭದಲ್ಲಿ ಕೊಂತನನ್ನು ಕುಣಿಸುವ ಆಚರಣೆ ವಿಶಿಷ್ಟ್ವ ವಾದದ್ದು. ವಸಂತನ ಆಗಮನದ ಹಿನ್ನೆಲೆಯಲ್ಲಿ ನಡೆಯುವ ಈ ಹಬ್ಬ ಜಾನಪದೀಯ ಹಿನ್ನೆಲೆ ಹೊಂದಿದೆ. ದಿಮ್ಮಸಾಲೆ ಎಂಬ ದೇವರ ಗುಡ್ಡ ಜನರ ಲೈಂಗಿಕ ಭಾವನೆಗಳನ್ನು ಸಾಂಕೇತೀಕರಿಸಿ ಅಶ್ಲೀಲ ಹಾಡುಗಳ ಜೊತೆಗೆ ಶಿಶ್ನಾಕಾರದ ಕೊಂತವನ್ನು ಕುಣಿಸುತ್ತಾನೆ. ದೇವತೆಯನ್ನು ಒಲಿಸಿಕೊಳ್ಳ ಲು ಈ ಪದ್ದತಿ ಅನುಸರಿಸಲಾಗುತ್ತದೆ ಎಂಬುದು ಹಿರಿಯರ ಅಭಿಪ್ರಾಯ. ಮಹಾತ್ಮಾ ಗಾಂಧೀಜಿ ೧೯೪೨ರಲ್ಲಿ ಕರೆ ನೀಡಿದ ಕ್ವಿಟ್ ಇಂಡಿಯಾ ಚಳವಳಿಗೆ ಇಲ್ಲಿನ ಜನ ಓಗೊಟ್ಟಿದ್ದು ಹೆಮ್ಮೆಯ ಸಂಗತಿ. ಕಾನೂನು ಉಲ್ಲಂಘನೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ಹಾಳುಮಾಡುವ ಯೋಜನೆಗಳ ಭಾಗವಾಗಿ ೧೯೪೨ರ ಸೆಪ್ಟೆಂಬರ್ ೧೯ರ ರಾತ್ರಿ ಕಿಕ್ಕೇರಿ ಮತ್ತು ಆನೆಗೊಳ ನಡುವಿನ ಚನ್ನರಾಯಪಟ್ಟಣ ಮಾರ್ಗದಲ್ಲಿ ಸಾವಿರಾರು ಅಡಿಗಳಷ್ಟು ಟೆಲಿಗ್ರಾಫ್ ತಂತಿಯನ್ನು ಕತ್ತರಿಸಿ ಹಾಕಿ, ಕಂಬಗಳನ್ನು ಮುರಿದು ಹಾಕಲಾಯಿತು ಎಂದು ಚರಿತ್ರೆಯ ಪುಟಗಳು ತಿಳಿಸುತ್ತವೆ.

ಪ್ರಸಿದ್ಧ ವ್ಯಕ್ತಿಗಳು

ಪ್ರಮುಖ ದೇವಾಲಯಗಳು

  • ಮಲ್ಲೇಶ್ವರ,
  • ಜನಾರ್ಧನ,
  • ಲಕ್ಷ್ಮೀ ನರಸಿಂಹಸ್ವಾಮಿ,
  • ಯೋಗಾನರಸಿಂಹ ಸ್ವಾಮಿ,

Tags:

🔥 Trending searches on Wiki ಕನ್ನಡ:

ಪತ್ರದಲಿತಊಳಿಗಮಾನ ಪದ್ಧತಿಐರ್ಲೆಂಡ್ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಶಬ್ದಮಣಿದರ್ಪಣಸೀತೆಪ್ರೇಮಾಸಂಯುಕ್ತ ರಾಷ್ಟ್ರ ಸಂಸ್ಥೆಭಾರತದ ಪ್ರಧಾನ ಮಂತ್ರಿಗಳ ಪಟ್ಟಿರಾಜಸ್ಥಾನ್ ರಾಯಲ್ಸ್ಆಸ್ಟ್ರೇಲಿಯಹಂಪೆಸರ್ಪ ಸುತ್ತುವಿಶಿಷ್ಟಾದ್ವೈತಆಂಗ್‌ಕರ್ ವಾಟ್ಭೂಕಂಪಸಾರ್ವಜನಿಕ ಆಡಳಿತಯೋನಿಕೈಗಾರಿಕಾ ಕ್ರಾಂತಿಬಂಗಾಳ ಕೊಲ್ಲಿ ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರವಿಕ್ರಮಾದಿತ್ಯ ೬ಅಡಿಕೆಹಾಕಿಎ.ಪಿ.ಜೆ.ಅಬ್ದುಲ್ ಕಲಾಂಬಹರೇನ್ಕಪ್ಪೆ ಅರಭಟ್ಟಉಡಪಂಚಾಂಗಜಾಗತಿಕ ತಾಪಮಾನ ಏರಿಕೆಲೋಕೋಪಯೋಗಿ ಶಿಲ್ಪ ವಿಜ್ಞಾನಜೀವನಚರಿತ್ರೆಗಿಡಮೂಲಿಕೆಗಳ ಔಷಧಿಯೋಗ ಮತ್ತು ಅಧ್ಯಾತ್ಮಕರ್ನಾಟಕದಲ್ಲಿ ಪಂಚಾಯತ್ ರಾಜ್ದಿಯಾ (ಚಲನಚಿತ್ರ)ಅಂಬರೀಶ್ಪೌರತ್ವಷಟ್ಪದಿಕನ್ನಡದಲ್ಲಿ ಕಾದಂಬರಿ ಸಾಹಿತ್ಯಕರ್ನಾಟಕದ ಹಬ್ಬಗಳುಭೂಶಾಖದ ಶಕ್ತಿರಣಹದ್ದುಶ್ಯೆಕ್ಷಣಿಕ ತಂತ್ರಜ್ಞಾನಕನ್ನಡದಲ್ಲಿ ಮಹಿಳಾ ಸಾಹಿತ್ಯಸವರ್ಣದೀರ್ಘ ಸಂಧಿರವೀಂದ್ರನಾಥ ಠಾಗೋರ್ಭಾರತದ ಚುನಾವಣಾ ಆಯೋಗಹಿಂದುಸ್ತಾನಿ ಶಾಸ್ತ್ರೀಯ ಸಂಗೀತಪ್ಲಾಸಿ ಕದನವಿಭಕ್ತಿ ಪ್ರತ್ಯಯಗಳುಕ್ಷಯಭಾರತೀಯ ಸ್ಟೇಟ್ ಬ್ಯಾಂಕ್ರೈತವಾರಿ ಪದ್ಧತಿಆರ್ಚ್ ಲಿನಕ್ಸ್ಚನ್ನವೀರ ಕಣವಿಮೈಸೂರು ಸಂಸ್ಥಾನಕಾರವಾರಕರ್ನಾಟಕ ಐತಿಹಾಸಿಕ ಸ್ಥಳಗಳುವಿರೂಪಾಕ್ಷ ದೇವಾಲಯರಂಗಭೂಮಿಜೇನು ಹುಳುಸಂಭೋಗಬಾಲಕಾರ್ಮಿಕಭಾರತದ ಮಾನವ ಹಕ್ಕುಗಳುತ್ಯಾಜ್ಯ ನಿರ್ವಹಣೆಪರಿಸರ ರಕ್ಷಣೆಜ್ಞಾನಪೀಠ ಪ್ರಶಸ್ತಿಜಿ.ಎಸ್.ಶಿವರುದ್ರಪ್ಪಹರಿದಾಸಕನಕದಾಸರುಪ್ರಕಾಶ್ ರೈಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮನಯಾಗರ ಜಲಪಾತಚಂದ್ರಯಾನ-೩ಒಡಲಾಳವಡ್ಡಾರಾಧನೆ🡆 More