ಎಚ್. ಕೆ. ನರಸಿಂಹಮೂರ್ತಿ

'ಎಚ್.

ಕೆ. ನರಸಿಂಹಮೂರ್ತಿ', ಮೈಸೂರಿನ ಶ್ರೇಷ್ಠ ಪಿಟೀಲುವಾದಕರಲ್ಲೊಬ್ಬರು.

ಜನನ, ವಿದ್ಯಾಭ್ಯಾಸ, ವಯೋಲಿನ್ ಕಲಿಕೆ

ನರಸಿಂಹಮೂರ್ತಿಯವರು, ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬರಾಗಿದ್ದ ಎಚ್. ಎಸ್. ಕೃಷ್ಣ ಮೂರ್ತಿ, ಹಾಗೂ ಜಯಲಕ್ಷ್ಮಿ ದಂಪತಿಗಳಿಗೆ ಮಗನಾಗಿ ೧೯೪೬ ರ ಮೇ, ೪ ನೇ ತಾರೀಖು ಜನಿಸಿದರು. ಬಾಲ್ಯದಿಂದ ಸಂಗೀತ ಕಲಿಯುವ ಆಸೆ. ಮೈಸೂರು ವಿಶ್ವವಿದ್ಯಾಲಯದಿಂದ ಬಿ. ಎಸ್. ಸಿ. ಪದವಿ ಗಳಿಸಿದರು. ಗುರು, ಶ್ರೀ ಕೇಶವಯ್ಯನವರಿಂದ ಗಾಯನಕಲೆಯ ಅಭ್ಯಾಸಮಾಡಿದರು. ಎಚ್. ಟಿ.ಪುಟ್ಟಸ್ವಾಮಯ್ಯ , ಎಚ್. ವಿ. ಕೃಷ್ಣನ್, ಎಮ್. ಸಿ. ಪುಟ್ಟಸ್ವಾಮಯ್ಯ , ಟಿ . ಪುಟ್ಟಸ್ವಾಮಯ್ಯ,, ಎ. ಕೆ. ಮುತ್ತಣ್ಣ ಮೊದಲಾದ ಶ್ರೇಷ್ಟ ಪಿಟೀಲು ವಿದ್ವಾಂಸರ ಬಳಿ ಪಿಟಿಲು ಮತ್ತು ಗಾಯನ ಕಲೆಯನ್ನು ಕಲಿತರು.

ಎಚ್. ಕೆ. ಎನ್. ರವರ ಸಾಧನೆಗಳು

  • ಮೈಸೂರು ಸರ್ಕಾರದ ಟೆಕ್ನಿಕಲ್ ಬೋರ್ಡ್ ಸೀನಿಯರ್ ಮ್ಯೂಸಿಕ್, ಸರ್ಟಿಫಿಕೇಟ್ ಗಳಿಸಿದರು.
  • ಮದ್ರಾಸ್ ಸೆಂಟ್ರೆಲ್ ಕಾಲೇಜ್ ಆಫ್ ಮ್ಯೂಸಿಕ್ ನಿಂದ ಪ್ರಥಮ ದರ್ಜೆಯಲ್ಲಿ ಸಂಗೀತ ವಿದ್ವಾನ್ ಪದವಿ ಗಳಿಕೆ.
  • ಹಿರಿಯ ಮೇರು ಕಲಾವಿದರಾದ ಎಂ.ಎಸ್. ಅನಂತರಾಮನ್, ಎಂ.ಎಸ್. ಗೋಪಾಲಕೃಷ್ಣನ್ ಬಳಿ ಪ್ರೌಢ ಶಿಕ್ಷಣ.
  • ಕೇಂದ್ರ ಸರ್ಕಾರದ ವಿದ್ಯಾರ್ಥಿ ವೇತನಗಳಿಸಿ, ಕರೂರ್ ಸುಂದರಂ ಪಿಲ್ಳ್ಳೆಯವರ ಹತ್ತಿರ ಉನ್ನತ ಶಿಕ್ಷಣ ಗಳಿಸಿದರು.
  • ೧೯೬೬ ರಿಂದ ಮೈಸೂರು ಆಕಾಶವಾಣಿ ನಿಲಯದ ಕಲಾವಿದರಾಗಿ ಸೇವೆ ಸಲ್ಲಿಸಿದರು.
  • ಆಕಾಶವಾಣಿ ರಾಷ್ಟ್ರೀಯ ಸಂಗೀತ ಕಾರ್ಯಕ್ರಮಗಳಲ್ಲಿ, ಜನಪ್ರಿಯ ಕಲಾವಿದರಾದ, ಮುಂಬಯಿ ಸಹೋದರಿಯರು, ರುದ್ರಪಟ್ಣಂ ಸೋದರರು, ಡಾ. ಸುಕನ್ಯಾ ಪ್ರಭಾಕರ್, ಮೊದಲಾದ ಕಲಾವಿದರಿಗೆ ಸಂಗತಿ ನೀಡಿದರು.
  • ಹಲವಾರು ಸೋಲೋ ಕಾರ್ಯಕ್ರಮಗಳನ್ನೂ ನಡೆಸಿಕೊಟ್ಟಿದ್ದಾರೆ.

ಪಕ್ಕವಾದ್ಯದ ನೆರವು ನೀಡಿದ ಸಂಗೀತ ಕಚೇರಿಗಳು

ದೇಶದಾದ್ಯಂತ ಜರುಗುತ್ತಿದ್ದ ಎಲ್ಲಾ ಶಾಸ್ತ್ರೀಯ ಸಂಗೀತ ಕಛೇರಿಗಳಲ್ಲಿ, ಹಾಗೂ ಹಿರಿಯ ಕಲಾವಿದರಿಗೆ, ಮಹಾರಾಜಪುರಂ ವಿಶ್ವನಾಥ್ ಅಯ್ಯರ್, ಚೆಂಬೈ ವೈದ್ಯನಾಥ ಭಾಗವತರ್, ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ಆಲತ್ತೂರ್ ಶ್ರೀನಿವಾಸ ಅಯ್ಯರ್, ಬಿ. ರಾಜಮ್ ಅಯ್ಯಂಗಾರ್ ಡಾ., ಎಸ್. ರಾಮನಾಥನ್, ಶ್ರೀಮತಿ ಡಿ. ಕೆ. ಪಟ್ಟಮ್ಮಾಳ್, ಕದ್ರಿ ಗೋಪಾಲನಾಥ್, ಬಿ. ದೇವೇಂದ್ರಪ್ಪ ಪಿಟೀಲುವಾದನ ಸಹಕಾರ ನೀಡಿದರು.

ವಿದೇಶಗಳಲ್ಲೂ

೮೦ ರ ದಶಕದಲ್ಲಿ, ಮೊಟ್ಟಮೊದಲು ಮುಂಬಯಿ ಸಿಸ್ಟರ್ಸ್ ಜೊತೆಯಲ್ಲಿ ಅಮೆರಿಕದಲ್ಲಿ ಕರ್ನಾಟಕ ಸಂಗೀತ ಕಾರ್ಯಕ್ರಮ ಕೊಟ್ಟಬಳಿಕ, ಕೆನಡಾ, ದುಬೈ, ಅಬುಧಾಬಿ, ಮಸ್ಕಟ್, ರಾಷ್ಟ್ರಗಳಲ್ಲಿ ನಿಯಮಿತರೂಪದಲ್ಲಿ ಕಾರ್ಯಕ್ರಮಗಳು ಆಯೋಜಿಸಲ್ಪಡುತ್ತಿವೆ. ಬೆಹ್ರೆನ್ ದೇಶದಲ್ಲಿ ಭಾರತೀಯ ಸಂಗೀತದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಈಗ ಅಮೆರಿಕದ ವಾಷಿಂಗ್ಟನ್ ನಗರದ ಹತ್ತಿರದ ಮೇರಿಲ್ಯಾಂಡ್ ನಲ್ಲಿ ಸಂಗೀತ ಉಪಾಧ್ಯಾಯರಾಗಿ ಪಿಟೀಲು ಶಿಕ್ಷಣವನ್ನು ಅಲ್ಲಿನ ನಿವಾಸಿಗಳಿಗೆ ಹೇಳಿಕೊಡುತ್ತಿದ್ದಾರೆ.

ಪ್ರಶಸ್ತಿ ಸನ್ಮಾನಗಳು

  • ಹಲವಾರು ಸಂಗೀತ ಸ್ಪರ್ಧೆಗಳಲ್ಲಿ, ವಾರ್ಷಿಕ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಗಳಿಸಿದ್ದಾರೆ.
  • ಮದ್ರಾಸ್ ಮ್ಯೂಸಿಕ್ ಅಕ್ಯಾಡೆಮಿ, ಬೆಸ್ಟ್ ಜೂನಿಯರ್ ಕಲಾವಿದರೆಂದು ಗೌರವಿಸಲ್ಪಟ್ಟರು.
  • ಬೆಸ್ಟ್ ವಯೊಲಿನಿಸ್ಟ್ ಪ್ರಶಸ್ತಿ.
  • ಧನುರ್ವೀಣಾ ರತ್ನ,
  • ಗಾನಕಲಾಭಾಸ್ಕರ
  • ಶ್ರೇಷ್ಠಾಚಾರ್ಯ,
  • ಆಸ್ಥಾನ್ ವಿದ್ವಾನ್
  • ಸಂಗೀತ ಕಲಾತಪಸ್ವಿ,
  • ಸಂಗೀತ ಕಲಾಭೂಷಣ,
  • ಪ್ರಣವ ಶ್ರೀ ಪ್ರಶಸ್ತಿ,
  • ಆಚಾರ್ಯ ರತ್ನ, ಬಿರುದುಗಳು.

Tags:

ಎಚ್. ಕೆ. ನರಸಿಂಹಮೂರ್ತಿ ಜನನ, ವಿದ್ಯಾಭ್ಯಾಸ, ವಯೋಲಿನ್ ಕಲಿಕೆಎಚ್. ಕೆ. ನರಸಿಂಹಮೂರ್ತಿ ಎಚ್. ಕೆ. ಎನ್. ರವರ ಸಾಧನೆಗಳುಎಚ್. ಕೆ. ನರಸಿಂಹಮೂರ್ತಿ ಪಕ್ಕವಾದ್ಯದ ನೆರವು ನೀಡಿದ ಸಂಗೀತ ಕಚೇರಿಗಳುಎಚ್. ಕೆ. ನರಸಿಂಹಮೂರ್ತಿ ವಿದೇಶಗಳಲ್ಲೂಎಚ್. ಕೆ. ನರಸಿಂಹಮೂರ್ತಿ ಪ್ರಶಸ್ತಿ ಸನ್ಮಾನಗಳುಎಚ್. ಕೆ. ನರಸಿಂಹಮೂರ್ತಿ

🔥 Trending searches on Wiki ಕನ್ನಡ:

ನೈಲ್ಗಸಗಸೆ ಹಣ್ಣಿನ ಮರಬಸವರಾಜ ಬೊಮ್ಮಾಯಿಕರ್ನಾಟಕ ವಿಧಾನ ಪರಿಷತ್ಜಲ ಮಾಲಿನ್ಯಮಂಗಳಮುಖಿಗೂಬೆಸಂಕ್ಷಿಪ್ತ ಪೂಜಾಕ್ರಮಅಂತರಜಾಲತೆಲುಗುಮೈಗ್ರೇನ್‌ (ಅರೆತಲೆ ನೋವು)ಬಿರಿಯಾನಿಸಿಂಧನೂರುಬಂಗಾರದ ಮನುಷ್ಯ (ಚಲನಚಿತ್ರ)ಸ್ವರದಾವಣಗೆರೆಕುರುಕನ್ನಡ ಸಾಹಿತ್ಯ ಪ್ರಕಾರಗಳುಭಾರತರತ್ನಾಕರ ವರ್ಣಿಕುಟುಂಬಸಂಸ್ಕೃತ ಸಂಧಿನಾಟಕಸೌರಮಂಡಲಭಾರತೀಯ ಕಾವ್ಯ ಮೀಮಾಂಸೆಕರ್ಣಾಟ ಭಾರತ ಕಥಾಮಂಜರಿಲಕ್ಷ್ಮೀಶಪ್ರಾಣಾಯಾಮಅಲಾವುದ್ದೀನ್ ಖಿಲ್ಜಿಬೇವುಮಂಜುಳವಾಣಿ ಹರಿಕೃಷ್ಣಜಿ.ಎಸ್.ಶಿವರುದ್ರಪ್ಪಮಳೆಬಿಲ್ಲುಅಳಿಲುಶಿವಮೊಗ್ಗಮೊದಲನೆಯ ಕೆಂಪೇಗೌಡಕಪ್ಪೆ ಅರಭಟ್ಟಎಸ್. ಬಂಗಾರಪ್ಪಮೂಲಧಾತುಕರ್ನಾಟಕದ ವಾಸ್ತುಶಿಲ್ಪಸಿಂಹಕನ್ನಡ ರಂಗಭೂಮಿಶಾಮನೂರು ಶಿವಶಂಕರಪ್ಪಮಾಲ್ಡೀವ್ಸ್ದೇಶಗಳ ವಿಸ್ತೀರ್ಣ ಪಟ್ಟಿಶಿವರಾಮ ಕಾರಂತಕನ್ನಡ ಚಂಪು ಸಾಹಿತ್ಯಯಕ್ಷಗಾನಕೆ ವಿ ನಾರಾಯಣಜೋಡು ನುಡಿಗಟ್ಟುಆಗಮ ಸಂಧಿಗೋಡಂಬಿಭಾರತದಲ್ಲಿ ಕೃಷಿತೇಜಸ್ವಿ ಸೂರ್ಯಒಂದೆಲಗಜಾಗತೀಕರಣದೊಡ್ಡಬಳ್ಳಾಪುರಕೃತಕ ಬುದ್ಧಿಮತ್ತೆತಾಳೀಕೋಟೆಯ ಯುದ್ಧಈಸ್ಟ್‌ ಇಂಡಿಯ ಕಂಪನಿಕುರು ವಂಶಸೂಪರ್ (ಚಲನಚಿತ್ರ)ವರ್ಗೀಯ ವ್ಯಂಜನರಾಸಾಯನಿಕ ಗೊಬ್ಬರಡಿ.ವಿ.ಗುಂಡಪ್ಪಕೊಪ್ಪಳಗಣಗಲೆ ಹೂಮಳೆಯೋಜಿಸುವಿಕೆಹುಚ್ಚೆಳ್ಳು ಎಣ್ಣೆಭೀಮಾ ತೀರದಲ್ಲಿ (ಚಲನಚಿತ್ರ)ಇಮ್ಮಡಿ ಪುಲಕೇಶಿದೆಹಲಿ ಸುಲ್ತಾನರು🡆 More