ಉಡುಪಿ ಮಲ್ಲಿಗೆ

ಉಡುಪಿ ಮಲ್ಲಿಗೆ ಉಡುಪಿ ಸಮೀಪದ ಶಂಕರಪುರ ಎಂಬಲ್ಲಿ ಬೆಳೆಯುವ ಮಲ್ಲಿಗೆಯ ಒಂದು ಪ್ರಭೇದ.

ಉಡುಪಿ ಮಲ್ಲಿಗೆ
ಉಡುಪಿ ಮಲ್ಲಿಗೆ
ಉಡುಪಿ ಮಲ್ಲಿಗೆ ಗಿಡ.
Scientific classification e
ಸಾಮ್ರಾಜ್ಯ: ಸಸ್ಯ
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: ಯೂಡೈಕಾಟ್‍ಗಳು
ಏಕಮೂಲ ವರ್ಗ: ಆಸ್ಟರಿಡ್ಸ್
ಗಣ: ಲ್ಯಾಮಿಯೇಲ್ಸ್
ಕುಟುಂಬ: ಓಲಿಯೇಸೀ
ಪಂಗಡ: ಜಾಸ್ಮಿನೀ
ಕುಲ: ಜಾಸ್ಮಿನಮ್
ಪ್ರಜಾತಿ:
J. sambac
Binomial name
Jasminum sambac
(L.) Aiton
Synonyms
Basionym
  • Nyctanthes sambac L.
  • Mogorium sambac (L.) Lam.
  • Jasminum fragrans Salisb.
  • Jasminum sambac var. normale Kuntze
  • Jasminum bicorollatum Noronha
  • Jasminum blancoi Hassk.
  • Jasminum heyneanum Wall. ex G.Don
  • Jasminum odoratum Noronha
  • Jasminum pubescens Buch.-Ham. ex Wall.
  • Jasminum quadrifolium Buch.-Ham. ex Wall.
  • Jasminum quinqueflorum B.Heyne ex G.Don
  • Jasminum quinqueflorum var. pubescens G.Don
  • Jasminum sambac var. duplex Voigt
  • Jasminum sambac var. gimea (Zuccagni) DC.
  • Jasminum sambac var. goaense (Zuccagni) DC.
  • Jasminum sambac var. heyneanum Wall. ex G.Don) C.B.Clarke in J.D.Hooker
  • Jasminum sambac var. kerianum Kuntze
  • Jasminum sambac var. nemocalyx Kuntze
  • Jasminum sambac var. plenum Stokes
  • Jasminum sambac var. syringifolium Wall. ex Kuntze
  • Jasminum sambac var. trifoliatum Vahl
  • Jasminum sambac var. undulatum (L.) Kuntze
  • Jasminum sambac var. verum DC.
  • Jasminum sanjurium Buch.-Ham. ex DC.
  • Jasminum undulatum (L.) Willd.
  • Mogorium gimea Zuccagni
  • Mogorium goaense Zuccagni
  • Mogorium undulatum (L.) Lam.
  • Nyctanthes goa Steud.
  • Nyctanthes grandiflora Lour.
  • Nyctanthes undulata L.

ಇದು ಅತ್ಯಂತ ಸುವಾಸನಾಯುಕ್ತವಾಗಿದ್ದು, ಇದಕ್ಕೆ ಭಾರತದ ಭೌಗೋಳಿಕ ಚೆನ್ಹೆಯ ಮಾನ್ಯತೆ ದೊರೆತಿದೆ.

ವೈಜ್ಞಾನಿಕ ವರ್ಗೀಕರಣ

ಉಡುಪಿ ಮಲ್ಲಿಗೆಯು ಮಲ್ಲಿಗೆ ಹೂವಿನ ಒಂದು ಪ್ರಭೇದವಾಗಿದ್ದು,ವೈಜ್ಞಾನಿಕವಾಗಿ ಜಾಸ್ಮಿನಮ್ ಸಂಬಾಕ್ ಎಂದು ಕರೆಯಲ್ಪಡುತ್ತದೆ.ಈ ಪ್ರಭೇದವು ಭಾರತದ ಹಲವಾರು ಕಡೆ ಮಾತ್ರವಲ್ಲದೆ ದಕ್ಷಿಣ ಏಷಿಯಾ ಪ್ರದೇಶ ಬಹುತೇಕ ಕಡೆ ಬೆಳೆಯುವುದಾದರೂ ಉಡುಪಿ ಮಲ್ಲಿಗೆಯ ಸುವಾಸನೆಯು ಈ ಪ್ರದೇಶಕ್ಕೇ ಸೀಮಿತವಾಗಿದೆ. ಅದರಲ್ಲೂ ಶಂಕರಪುರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆದ ಮಲ್ಲಿಗೆಯಲ್ಲಿ ಈ ಸುವಾಸನೆಯು ವಿಶಿಷ್ಟವಾಗಿರುವುದರಿಂದ ಅದಕ್ಕೆ ಭೌಗೋಳಿಕ ಚಿನ್ಹೆಯ ಮಾನ್ಯತೆ ದೊರೆತಿದೆ.

ಲಕ್ಷಣಗಳು

ಇದು ಸಣ್ಣ ಪೊದೆಯಂತೆ ಬೆಳೆಯುವ ಸಸ್ಯ. ಇದರ ಎಲೆಯು ಹಸಿರು ಬಣ್ಣವನ್ನು ಹೊಂದಿದ್ದು ಹಳದಿ ಬಣ್ಣದ ಛಾಯೆ ಇದೆ.ಎಲೆಯ ಉದ್ದಳತೆ ೫ ರಿಂದ ೭ ಸೆಂ.ಮೀ ಉದ್ದ ಹಾಗೂ ೨.೫ ರಿಂದ ೩.೫ ಸೆಂಟಿಮೀಟರ್ ಅಗಲವಿದೆ. ಬಿಳಿಯ ಬಣ್ಣದ ಹೂವು ಸುವಾಸನಾಯುಕ್ತವಾಗಿದೆ.

ಬೇಸಾಯ

ಮರಳು ಮಿಶ್ರಿತಮಣ್ಣು ,ಮತ್ತು ಇಳಿಜಾರು ಪ್ರದೇಶದಲ್ಲಿ ಈ ಗಿಡವನ್ನು ನೆಡುತ್ತಾರೆ. ದೊಡ್ಡ ಮರದ ಬೇರು ಬರದಂತೆ ನೋಡಿಕೊಳ್ಳಬೇಕು ಸಸ್ಯ ನಡಿವಾಗ ಅಗತ್ಯಕ್ಕೆ ಅನುಸಾರವಾಗಿ ಗುಂಡಿಯನ್ನು ತೆಗೆಯಬೇಕು. ಹೆಚ್ಚು ಬಿಸಿಲು ಬೀಳುವ ಪ್ರದೇಶವಾಗಿರಬೇಕು. ಅಗತ್ಯಕ್ಕೆ ಅನುಸಾರವಾಗಿ ನೀರನ್ನು ನೀಡಬೇಕು. ಇದಕ್ಕೆ ಕೀಟಬಾದೆ ಇರುವುದರಿಂದ ಕೀಟನಾಶಗಳ ಸಿಂಪಡಣೆ ಅಗತ್ಯ. ಅದರ ಬುಡದಲ್ಲಿ ಬೆಳೆಯುವ ಕಳೆಯನ್ನು ಆಗಾಗ ತೆಗೆಯುತ್ತಿರಬೇಕು. ಮಳೆಗಾಲದ ಸಮಯದಲ್ಲಿ ಬಿಸಿಲು ಸರಿಯಾಗಿ ಬೀಳದೆ ಮೊಗ್ಗುಗಳು ಸಣ್ಣದಾಗುತ್ತದೆ . ಗಿಡದ ಕತ್ತರಿಸಿದ ತುಂಡುಗಳಿಂದ ಇದರ ಗಿಡವನ್ನು ಬೆಳೆಸುತ್ತಾರೆ.

ಉಪಯೋಗಗಳು

ಉಡುಪಿ ಮಲ್ಲಿಗೆಯನ್ನು ದೇವರ ಪೂಜೆಗೆ, ಹೂಮಾಲೆ ತಯಾರಿಸಲು, ಮುಡಿಯಲು ಉಪಯೋಗಿಸುತ್ತಾರೆ. ಈ ಪ್ರದೇಶದ ಮದುವೆ ಹಾಗೂ ಇತರ ಸಮಾರಂಭಗಳಲ್ಲಿ ಉಡುಪಿ ಮಲ್ಲಿಗೆಯ ಮಾಲೆ ಅನಿವಾರ್ಯ ಎಂಬಷ್ಟು ಇದು ಉಪಯೋಗದಲ್ಲಿದೆ.

ಔಷಧೀಯ ಗುಣಗಳು

ಮಲ್ಲಿಗೆ ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದು ಅದರಲ್ಲಿ ನಂಜು ನಿರೋಧಕ, ಕಾಮೋತ್ತೇಜಕ,ಉಪಶಮನಕಾರಿ ಗುಣಗಳು ಮುಖ್ಯವಾದವುದಗಳು.

ವಾಣಿಜ್ಯ ಪ್ರಾಮುಖ್ಯತೆ

ಉಡುಪಿಯ ಸುತ್ತಮುತ್ತ ಉಡುಪಿ ಮಲ್ಲಿಗೆಯ ಕೃಷಿ ಮತ್ತು ಮಾರಾಟ ಒಂದು ಉದ್ಯಮದ ರೂಪವನ್ನು ಪಡೆದಿದೆ. ಸ್ಥಳೀಯವಾಗಿ ಹಾಗೂ ಮಂಗಳೂರು, ಮುಂಬಯಿಹಾಗೂ ದುಬೈ ಹೂವಿನ ಮಾರುಕಟ್ಟೆಯಲ್ಲಿ ಇದು ಪ್ರಮುಖ ಸ್ಥಾನವನ್ನು ಪಡೆದಿದೆ.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

  • "Jasminum L." Integrated Taxonomic Information System. Retrieved 3 June 2008.
  • "Flora Europaea Search Results". Flora Europaea. Royal Botanic Garden, Edinburgh. Retrieved 2008-06-03.
  • "Jasminum Linn". Flora of Pakistan: Page 12. Archived from the original on 2011-01-07. Retrieved 2008-06-03.
  • "Jasminum L. record n° 1950". African Plants Database. South African National Biodiversity Institute, the Conservatoire et Jardin botaniques de la Ville de Genève and Tela Botanica. Archived from the original on 2012-12-06. Retrieved 2008-06-03.
  • "Jasminum". Natural Resources Conservation Service PLANTS Database. USDA. Retrieved 2008-06-03.
  • Metcalf, Allan A. (1999). The World in So Many Words. Houghton Mifflin. ISBN 0-395-95920-9.

Tags:

ಉಡುಪಿ ಮಲ್ಲಿಗೆ ವೈಜ್ಞಾನಿಕ ವರ್ಗೀಕರಣಉಡುಪಿ ಮಲ್ಲಿಗೆ ಲಕ್ಷಣಗಳುಉಡುಪಿ ಮಲ್ಲಿಗೆ ಬೇಸಾಯಉಡುಪಿ ಮಲ್ಲಿಗೆ ಉಪಯೋಗಗಳುಉಡುಪಿ ಮಲ್ಲಿಗೆ ಔಷಧೀಯ ಗುಣಗಳುಉಡುಪಿ ಮಲ್ಲಿಗೆ ವಾಣಿಜ್ಯ ಪ್ರಾಮುಖ್ಯತೆಉಡುಪಿ ಮಲ್ಲಿಗೆ ಉಲ್ಲೇಖಗಳುಉಡುಪಿ ಮಲ್ಲಿಗೆ ಬಾಹ್ಯ ಸಂಪರ್ಕಗಳುಉಡುಪಿ ಮಲ್ಲಿಗೆಉಡುಪಿಭಾರತಶಂಕರಪುರ

🔥 Trending searches on Wiki ಕನ್ನಡ:

ದಾಳಿಂಬೆಜೋಳಹಾವೇರಿರೈತವಾರಿ ಪದ್ಧತಿಜ್ಯೋತಿಬಾ ಫುಲೆಭಾರತೀಯ ಮೂಲಭೂತ ಹಕ್ಕುಗಳುಕಾಮಾಲೆಕರ್ನಾಟಕದ ತಾಲೂಕುಗಳುಕರ್ನಾಟಕದ ಶಾಸನಗಳುವಿ. ಕೃ. ಗೋಕಾಕಬಿರಿಯಾನಿಬಂಗಾರದ ಮನುಷ್ಯ (ಚಲನಚಿತ್ರ)ಮಂಗಳೂರುಬಿಳಿಗಿರಿರಂಗನ ಬೆಟ್ಟಕೋಟಿಗೊಬ್ಬಭಾರತದ ಸ್ವಾತಂತ್ರ್ಯ ದಿನಾಚರಣೆಇಚ್ಛಿತ್ತ ವಿಕಲತೆರಾಸಾಯನಿಕ ಗೊಬ್ಬರಸ್ವರಸಿಗ್ಮಂಡ್‌ ಫ್ರಾಯ್ಡ್‌ಬಿ. ಆರ್. ಅಂಬೇಡ್ಕರ್2ನೇ ದೇವ ರಾಯರಾಷ್ಟ್ರಕೂಟಕೈಗಾರಿಕಾ ಕ್ರಾಂತಿಎಂ.ಬಿ.ಪಾಟೀಲಬಾಲ್ಯ ವಿವಾಹರೇಣುಕವಚನ ಸಾಹಿತ್ಯಭೋವಿಸಂವತ್ಸರಗಳುಮೈಸೂರು ಅರಮನೆಅವಯವಭಾರತಹವಾಮಾನಉತ್ತರಾಖಂಡಕನ್ನಡದಲ್ಲಿ ಮಹಿಳಾ ಸಾಹಿತ್ಯಲಕ್ಷ್ಮಣಛತ್ರಪತಿ ಶಿವಾಜಿರುಮಾಲುಕೃಷಿ ಉಪಕರಣಗಳುಶ್ಯೆಕ್ಷಣಿಕ ತಂತ್ರಜ್ಞಾನಅಣ್ಣಯ್ಯ (ಚಲನಚಿತ್ರ)ಸಂವಹನವೇದಭಾರತದಲ್ಲಿನ ಶಿಕ್ಷಣಲಡಾಖ್ಮಂಗಳಮುಖಿಗೂಗಲ್ಚಂದ್ರಗರುಡ ಪುರಾಣಬ್ರಾಹ್ಮಣಭಾರತದ ಬಂದರುಗಳುಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಕನ್ನಡ ಛಂದಸ್ಸುಒಂದನೆಯ ಮಹಾಯುದ್ಧಕರ್ನಾಟಕವಿಜಯಪುರ ಜಿಲ್ಲೆವಿವಾಹಕರ್ನಾಟಕ ಸರ್ಕಾರಕೆ.ಎಲ್.ರಾಹುಲ್ವಿಶ್ವ ಕನ್ನಡ ಸಮ್ಮೇಳನಭಾರತದ ರೂಪಾಯಿರಾಜಧಾನಿಗಳ ಪಟ್ಟಿರಾಜ್ಯಸಭೆಜೋಗಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಅರ್ಜುನಕೃಷ್ಣರಾಜಸಾಗರರಮ್ಯಾಶಾಲೆಪ್ರವಾಸೋದ್ಯಮಹಾಗಲಕಾಯಿಉಪನಿಷತ್ಯೋಗವಾಹನೈಸರ್ಗಿಕ ಸಂಪನ್ಮೂಲಹುಚ್ಚೆಳ್ಳು ಎಣ್ಣೆಬಿ. ಎಂ. ಶ್ರೀಕಂಠಯ್ಯಬಸವರಾಜ ಬೊಮ್ಮಾಯಿಲೋಪಸಂಧಿ🡆 More