ಅಕ್ಕಿ ಪತಂಗ: ಒಂದು ಬಗೆಯ ಪತಂಗದ ಪ್ರಭೇದ

ಶೇಖರಣೆ ಮಾಡಿದ ಖಾದ್ಯ ವಸ್ತುಗಳಿಗೆ ಅತ್ಯಂತ ಹಾನಿಯನ್ನುಂಟು ಮಾಡುವ ಪತಂಗದ (ಚಿಟ್ಟೆಯ) ಗುಂಪಿಗೆ ಸೇರಿದ ಜೀವಿಯೆಂದರೆ ಅಕ್ಕಿ ಚಿಟ್ಟೆ.

ಅಕ್ಕಿ ಪತಂಗ
ಅಕ್ಕಿ ಪತಂಗ: ಒಂದು ಬಗೆಯ ಪತಂಗದ ಪ್ರಭೇದ
ಅಕ್ಕಿ ಪತಂಗ: ಒಂದು ಬಗೆಯ ಪತಂಗದ ಪ್ರಭೇದ
Scientific classification
ಸಾಮ್ರಾಜ್ಯ:
Animalia
ವಿಭಾಗ:
Arthropoda
ವರ್ಗ:
Insecta
ಗಣ:
Lepidoptera
ಕುಟುಂಬ:
Pyralidae
ಉಪಕುಟುಂಬ:
Galleriinae
ಪಂಗಡ:
Tirathabini
ಕುಲ:
Corcyra

Ragonot, 1885
ಪ್ರಜಾತಿ:
C. cephalonica
Binomial name
Corcyra cephalonica
(Stainton, 1866)

ಕಾರ್ಸೈರಾ ಕಿಫಲೋನಿಕ ಎಂಬ ಹೆಸರುಳ್ಳ ಈ ಕೀಟ ಲೆಪಿಡಾಪ್ಟಿರ ಗಣದ ಪೈರಾಲಿಡೀ ಕುಟುಂಬಕ್ಕೆ ಸೇರಿದ್ದು. ಈ ಹುಳುವಿನ ಕಾಟಕ್ಕೆ ತುತ್ತಾಗುವ ಆಹಾರ ಪದಾರ್ಥಗಳ ಶ್ರೇಣಿ ಅತ್ಯಂತ ವಿಸ್ತಾರ. ಉದಾಹರಣೆಗೆ: ಆಹಾರ ಧಾನ್ಯಗಳು ಅದರಲ್ಲೂ ಒಡೆದು ಬೀಸಿದವು (ನುಚ್ಚು, ತರಿ, ರವೆ, ಹಿಟ್ಟು, ಆಟ್ಟ, ಬೂಸ, ಬೇಸಿನ್, ಮೈದಾ, ಇತ್ಯಾದಿ), ಸಾಂಬಾರ ವಸ್ತುಗಳು, ಸೇಂಗಾ ಬೀಜ, ಒಣ ಹಣ್ಣುಗಳು, ಬಿಸ್ಕತ್, ಹಿಂಡಿ, ಕೋಕೋ, ಇತ್ಯಾದಿಗಳು. ತಿಂದು ಮುಗಿಸುವುದಕ್ಕಿಂತ ಹೆಚ್ಚಾಗಿ ನೂಲು ಎಳೆಗಳಿಂದ ಆಹಾರ ಪದಾರ್ಥಗಳ ಆದ್ಯಂತ ದಟ್ಟವಾದ ಬಲೆ ಕಟ್ಟುವುದರಿಂದ, ಹುಳುಬಿದ್ದ ಖಾದ್ಯ ವಸ್ತುಗಳನ್ನು ಶುಚಿಮಾಡಿ ಉಪಯೋಗಿಸಲು ಸಾಧ್ಯವಿಲ್ಲವಾಗುವುದು. ಪ್ರಾಯದ ಚಿಟ್ಟೆ ಕಂದು ಬಣ್ಣದ್ದು; ರೆಕ್ಕೆ ಪುರ್ತಿ ಪಸರಿಸಿದಾಗ ತುದಿಯಿಂದ ತುದಿಗೆ 1.25 - 2 ಸೆಂಮೀ ಇರುತ್ತದೆ. ಗಂಡು ಚಿಟ್ಟೆ ಹೆಣ್ಣಿಗಿಂತ ಚಿಕ್ಕದು. ಹಗಲಿನಲ್ಲಿ ಉಗ್ರಾಣದ ಕತ್ತಲು ಪ್ರದೇಶಗಳಲ್ಲಿ ಅಂದರೆ ಗೋಡೆ, ಚಾವಣಿ, ಮೂಟೆ ಮುಂತಾದ ಜಾಗಗಳಲ್ಲಿ ಕುಳಿತಿದ್ದು, ರಾತ್ರಿಕಾಲದಲ್ಲಿ ಚಟುವಟಿಕೆಯಿಂದ ಹಾರಾಡುತ್ತದೆ. ತಾಯಿ ಚಿಟ್ಟೆ ಸು. 200 ದುಂಡುತತ್ತಿಗಳನ್ನು ಒಂಟಿ ಒಂಟಿಯಾಗಿ ಆಹಾರ ವಸ್ತುಗಳ ಬಳಿ ಇಡುತ್ತದೆ. ಮರಿಹುಳು ರೇಷ್ಮೆನೂಲಿನ ಬಲೆಯಿಂದ ಆಹಾರವನ್ನು ಆವರಿಸಿ, ಒಳಗೆ ಮೇಯುತ್ತಾ ಪ್ರವರ್ಧಮಾನಕ್ಕೆ ಬರುತ್ತದೆ. ಈ ರೀತಿ ಬಲೆಯಿಂದ ಆವರಿಸುವುದಕ್ಕೆ ತೆಂಡೆ ಕಟ್ಟುವುದು ಎಂದು ಕರೆಯುತ್ತಾರೆ. ಮರಿ ಹುಳ ನಸು ಹಳದಿಬಣ್ಣದ್ದು; ಇದು ರೂಪಪರಿವರ್ತನೆಯಾಗಿ ಹೊರಬರಲು ಸು. 6 ವಾರ ಬೇಕು; ವರ್ಷಕ್ಕೆ 6-8 ಬಾರಿ ಸಂತಾನೋತ್ಪತ್ತಿ ಮಾಡುತ್ತವೆ.

Tags:

ಪತಂಗ

🔥 Trending searches on Wiki ಕನ್ನಡ:

ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಸಾಮ್ರಾಟ್ ಅಶೋಕಸಾಲ್ಮನ್‌ಹೈದರಾಲಿಸಹಕಾರಿ ಸಂಘಗಳುಕನ್ನಡ ಚಳುವಳಿಗಳುಭಾರತದ ಸ್ವಾತಂತ್ರ್ಯ ಚಳುವಳಿಬ್ಲಾಗ್ಕರ್ನಾಟಕದ ಕಲೆ ಮತ್ತು ಸಂಸ್ಕೃತಿಚನ್ನಬಸವೇಶ್ವರತೆನಾಲಿ ರಾಮ (ಟಿವಿ ಸರಣಿ)ನಿರ್ವಹಣೆ ಪರಿಚಯಕರ್ನಾಟಕಭೂಕಂಪರುಡ್ ಸೆಟ್ ಸಂಸ್ಥೆರಾಮಾಚಾರಿ (ಕನ್ನಡ ಧಾರಾವಾಹಿ)ಸಂಭೋಗವಾಸ್ತುಶಾಸ್ತ್ರಪಾಲಕ್ರವಿಕೆಕೃಷ್ಣರಾಜಸಾಗರವಚನ ಸಾಹಿತ್ಯನದಿಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಭರತನಾಟ್ಯಮಾನಸಿಕ ಆರೋಗ್ಯಪೆಟ್ರೋಮ್ಯಾಕ್ಸ್ (ಚಲನಚಿತ್ರ)ಝಾನ್ಸಿ ರಾಣಿ ಲಕ್ಷ್ಮೀಬಾಯಿಮಲೆಗಳಲ್ಲಿ ಮದುಮಗಳುಸೂಫಿಪಂಥಶಬ್ದಬೆಳ್ಳುಳ್ಳಿ೨೦೨೪ರಲ್ಲಿ ಕೆನಡಾದ ಕ್ರಿಕೆಟ್ ತಂಡದ ಅಮೇರಿಕ ಸಂಯುಕ್ತ ಸಂಸ್ಥಾನ ಪ್ರವಾಸಕಾಂತಾರ (ಚಲನಚಿತ್ರ)ಮುಪ್ಪಿನ ಷಡಕ್ಷರಿಭೀಮಸೇನಗ್ರಹಕುಂಡಲಿಮೂಕಜ್ಜಿಯ ಕನಸುಗಳು (ಕಾದಂಬರಿ)ಏಡ್ಸ್ ರೋಗನಿಯತಕಾಲಿಕಶಬ್ದ ಮಾಲಿನ್ಯನಾಮಪದಕರ್ನಾಟಕದ ಜಾನಪದ ಕಲೆಗಳುಸಾರ್ವಜನಿಕ ಆಡಳಿತಮಾರೀಚಆದಿ ಶಂಕರದಿವ್ಯಾಂಕಾ ತ್ರಿಪಾಠಿವಿಜಯ ಕರ್ನಾಟಕಮೂಢನಂಬಿಕೆಗಳುನಾಗರೀಕತೆಸೂರ್ಯರೇಣುಕಪುಟ್ಟರಾಜ ಗವಾಯಿಡಿ.ವಿ.ಗುಂಡಪ್ಪಗಾಂಧಿ- ಇರ್ವಿನ್ ಒಪ್ಪಂದಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಹತ್ತಿಮಾಹಿತಿ ತಂತ್ರಜ್ಞಾನಕರ್ಬೂಜನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡಮಾತೃಭಾಷೆಅರಬ್ಬೀ ಸಾಹಿತ್ಯಗುಪ್ತ ಸಾಮ್ರಾಜ್ಯಕನ್ನಡ ವ್ಯಾಕರಣಮಂಗಳೂರುಹುಬ್ಬಳ್ಳಿಯಮವಿಜಯವಾಣಿಕೃಷ್ಣಅರ್ಜುನಮೋಳಿಗೆ ಮಾರಯ್ಯತಾಜ್ ಮಹಲ್ಶ್ರುತಿ (ನಟಿ)🡆 More