ಹೊಂಗೆ ಮರ

ಹೊಂಗೆ ಮರ ಬಹಳ ಹಿಂದಿನ ಕಾಲದಿಂದಲೂ ಭಾರತೀಯರಿಗೆ ಚಿರಪರಿಚಿತವಿರುವ ಮರ.

Millettia pinnata
ಹೊಂಗೆ ಮರ
Flowers
Scientific classification e
ಸಾಮ್ರಾಜ್ಯ: ಸಸ್ಯ
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: ಯೂಡೈಕಾಟ್‍ಗಳು
ಏಕಮೂಲ ವರ್ಗ: ರೋಸಿಡ್ಸ್
ಗಣ: ಫ್ಯಾಬೇಲ್ಸ್
ಕುಟುಂಬ: ಫ್ಯಾಬೇಸಿಯೇ
ಕುಲ: ಮಿಲ್ಲೇಟಿಯಾ
ಪ್ರಜಾತಿ:
M. pinnata
Binomial name
Millettia pinnata
(L.) Panigrahi
Synonyms
List
    • Cytisus pinnatus L.
    • Derris indica (Lam.) Bennet
    • Galedupa indica Lam.
    • Galedupa pinnata (L.) Taub.
    • Pongamia glabra Vent.
    • Pongamia mitis Kurz
    • Pongamia pinnata (L.) Pierre

ಭಾರತದೆಲ್ಲೆಡೆಯೂ ಈ ಮರವನ್ನು ಬೆಳೆಸುತ್ತಾರೆ. ರೈತರು ಗದ್ದೆ ಮತ್ತು ಹೊಲಗಳ ಬದಿಯಲ್ಲಿ ಈ ಮರವನ್ನು ಬೆಳೆಸುತ್ತಾರೆ. ನೀರಿನ ನಾಲೆಗಳ ಬದಿಯಲ್ಲಿ ಸ್ವಾಭಾವಿಕವಾಗಿಯೇ ಬೆಳೆಯುತ್ತದೆ. ಇದು ನಿತ್ಯಹಸುರಿನ ಮರ. ಕರಾವಳಿ ಪ್ರದೇಶಗಳಲ್ಲಿಯೂ ಬೆಳೆಯುತ್ತದೆ. ಒಳನಾಡಿನಲ್ಲಿ ತೋಪುಗಳಲ್ಲಿ ಸಾಲು ಮರಗಳಾಗಿ ಇದನ್ನು ವಿಶೇಷವಾಗಿ ಬೆಳೆಸುತ್ತಾರೆ. ಬರಡು ಪ್ರದೇಶಗಳಲ್ಲಿಯೂ ಚೆನ್ನಾಗಿ ಬೆಳೆಯುತ್ತದೆ. ಅಲ್ಲಲ್ಲಿ ತೋಪುಗಳಲ್ಲಿ ಬೆಳೆಯುವುದುಂಟು. ಕುಳ್ಳು ಕಾಂಡದ ಇದು ಹರಡಿ ವಿಸ್ತಾರವಾಗಿ ಬೆಳೆಯುವುದು. ಇದರ ವೈಜ್ಞಾನಿಕ ಹೆಸರು ಪೊಂಗಾಮಿಯಾ ಪಿನ್ನಾಟ. ಇದು ಲೆಗ್ಯುಮಿನೋಸೀ ಸಸ್ಯಕುಟುಂಬಕ್ಕೆ ಸೇರಿದೆ. ಬೇಸಿಗೆಯಲ್ಲಿ ಇದರ ನೆರಳು ಬಹುಹಿತ.

ಬೇರೆ ಭಾಷೆಗಳಲ್ಲಿ

  • ಸಂಸ್ಕೃತ: ಕರಂಜ, ನಕ್ತಮಾಲ, ಉದಕೀರ್ಯ
  • ಆಂಗ್ಲ ಭಾಷೆಯಲ್ಲಿ ಇಂಡಿಯನ್ ಬೀಚ್
  • ಕನ್ನಡ: ಹೊಂಗೆ ಮರ
  • ಮಲಯಾಳಂ: ಉನ್ನು
  • ಮರಾಠಿ: ಕರಂಜ

ಪರಿಚಯ

ಇದು ಒಂದು ಮಧ್ಯಮ ಗಾತ್ರದ ಮರ. ಇದರ ಎಲೆಗಳು ಹಸಿರು ಮತ್ತು ಹೊಳಪಿನಿಂದ ಕೂಡಿರುತ್ತವೆ. ಹೂವುಗಳು ಗುಚ್ಛಾಕಾರವಾಗಿದ್ದು ಎಲೆಗಳ ನಡುವೆ ಕಂಗೊಳಿಸುತ್ತವೆ. ಹೂವುಗಳು ಗಾಢನೀಲಿವರ್ಣವನ್ನು ಹೊಂದಿರುತ್ತವೆ. ಕಾಯಿ ಗಟ್ಟಿಯಾಗಿದ್ದು ಉಬ್ಬಿರುತ್ತವೆ. ಬೀಜಗಳಿಂದ ಕಹಿಯಾದ ಎಣ್ಣೆಯನ್ನು ತೆಗೆಯುತ್ತಾರೆ.

ಬೀಜಬಿತ್ತಿ ಸುಲಭವಾಗಿ ಬೆಳೆಸಬಹುದು. ಏಪ್ರಿಲ್-ಮೇ ತಿಂಗಳಲ್ಲಿ ಇದರ ನೀಲಿ ಮಿಶ್ರಿತ ಬಿಳಿಯ ಹೂಗೊಂಚಲು ಮೂಡಿ, ಮುಂದಿನ ಮಾರ್ಚ್-ಮೇ ತಿಂಗಳಲ್ಲಿ ಕಾಯಿಗಳು ಮಾಗುತ್ತವೆ.

ಉಪಯುಕ್ತ ಅಂಗಗಳು

ಬೀಜ ಮತ್ತು ಎಲೆ

ಉಪಯೋಗ

ಹೊಂಗೆಯಿಂದ ಹಲವಾರು ಉಪಯೋಗಗಳಿವೆ. ಅವುಗಳು

  • ಇದನ್ನು ಮಧುಮೇಹ ನಿವಾರಣೆಯಲ್ಲಿ ಬಳಸುತ್ತಾರೆ.
  • ಹೇನು ಕೆರೆ, ಮೀಸೆ,ಗಡ್ಡ ಮತ್ತು ತಲೆಯಲ್ಲಿ ಕೂದಲಿನ ಉದುರಿವಿಕೆಯನ್ನು ತಡೆಯಲು, ಒಣಗಿದ ಹೊಂಗೆ ಬೀಜಗಳನ್ನು ನೀರಿನಲ್ಲಿ ತೇದು ಗಂಧವನ್ನು ಕೂದಲು ಉದುರುವ ಕಡೆ ಹಚ್ಚುವುದು.
  • ತಲೆನೋವಿನಲ್ಲಿ ಉಪಯೋಗಿಸುತ್ತಾರೆ
  • ಚರ್ಮ ಕಾಯಿಲೆಯಲ್ಲಿ ಅದರ ಬೀಜದ ಎಣ್ಣೆಯನ್ನು ಹಾಗೂ ಎಲೆಯ ಕಷಾಯವನ್ನು ಬಳಸುತ್ತಾರೆ.
  • ಕೈಕಾಲು ಮತ್ತು ಕೀಲು ನೋವಿಗೆ ಇದರ ಎಣ್ಣೆಯನ್ನು ಬಳಸುತ್ತಾರೆ
  • ಇದರ ಹೂಗಳು, ಎಲೆಗಳು ಉತ್ಕೃಷ್ಟವಾದ ಹಸಿರು ಗೊಬ್ಬರವನ್ನು ಒದಗಿಸುತ್ತದೆ. ಹೊಂಗೆ ಹಿಂಡಿಕೂಡ ಒಳ್ಳೆಯ ಗೊಬ್ಬರ.
  • ಬೀಜದಿಂದ ಹೊಂಗೆ ಎಣ್ಣೆ ಬರುತ್ತದೆ. ಎಣ್ಣೆಯನ್ನು ಡೀಸೆಲ್‌ಗೆ ಪರ್ಯಾಯವಾಗಿ ವಾಹನ ಇಂಧನವಾಗಿ ಬಳಸಬಹುದೆಂಬ ಕಾರಣದಿಂದ ಮರಕ್ಕೆ ಬೇಡಿಕೆ ಹೆಚ್ಚುತ್ತಿದೆ.
  • ಚೌಬೀನೆ ಹಳದಿಮಿಶ್ರಿತ ಬಿಳಿಯಬಣ್ಣ. ಬಾಳಿಕೆ ಬರುವುದಿಲ್ಲ. ಸೌದೆಗಾಗಿ ಉಪಯೋಗಿಸುವುದುಂಟು.

ಛಾಯಾಂಕಣ

ಉಲ್ಲೇಖ

ಹೊಂಗೆ ಮರ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಹೊಂಗೆ ಮರ ಬೇರೆ ಭಾಷೆಗಳಲ್ಲಿಹೊಂಗೆ ಮರ ಪರಿಚಯಹೊಂಗೆ ಮರ ಉಪಯುಕ್ತ ಅಂಗಗಳುಹೊಂಗೆ ಮರ ಉಪಯೋಗಹೊಂಗೆ ಮರ ಛಾಯಾಂಕಣಹೊಂಗೆ ಮರ ಉಲ್ಲೇಖಹೊಂಗೆ ಮರಕಾಂಡಕಾಲುವೆನೀರುನೆರಳುಬೇಸಿಗೆಭಾರತಮರ

🔥 Trending searches on Wiki ಕನ್ನಡ:

ಜನಪದ ಕ್ರೀಡೆಗಳುಕುಂದಾಪುರಸವರ್ಣದೀರ್ಘ ಸಂಧಿಅ. ರಾ. ಮಿತ್ರಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಬಾಲಕಾರ್ಮಿಕಕನ್ನಡಯು.ಆರ್.ಅನಂತಮೂರ್ತಿಕೈಗಾರಿಕಾ ಕ್ರಾಂತಿಶ್ರೀ ರಾಮ ನವಮಿಭಾವಗೀತೆವಿದ್ಯುತ್ ಮಂಡಲಗಳುಕನ್ನಡಪ್ರಭಹನುಮಾನ್ ಚಾಲೀಸಕೊರೋನಾವೈರಸ್ ಕಾಯಿಲೆ ೨೦೧೯ಕರಾವಳಿ ಚರಿತ್ರೆಭಾರತದ ಸಂಸತ್ತುಮಳೆಗಾಲಫ್ರಾನ್ಸ್ಪಾಂಡವರುಭ್ರಷ್ಟಾಚಾರಕೆ.ವಿ.ಸುಬ್ಬಣ್ಣಕನ್ನಡದಲ್ಲಿ ಸಣ್ಣ ಕಥೆಗಳುವಿಜಯಾ ದಬ್ಬೆಭೂಮಿಬಂಡವಾಳಶಾಹಿಕಾದಂಬರಿರನ್ನಭರತೇಶ ವೈಭವಮೈಸೂರುಚಿತ್ರದುರ್ಗಭಾರತದಲ್ಲಿ ಕಪ್ಪುಹಣಮ್ಯಾಂಚೆಸ್ಟರ್ಜಾಗತೀಕರಣಕರ್ನಾಟಕದಲ್ಲಿ ಕನ್ನಡೇತರ ಭಾಷೆಗಳು ಮತ್ತು ಸಾಹಿತ್ಯಚನ್ನವೀರ ಕಣವಿಸಿಂಧೂತಟದ ನಾಗರೀಕತೆಹಾ.ಮಾ.ನಾಯಕಎರಡನೇ ಎಲಿಜಬೆಥ್ರಾಜ್ಯಸಭೆಭತ್ತಭಾರತದ ರಾಷ್ಟ್ರಪತಿಗಳ ಪಟ್ಟಿಯಶವಂತರಾಯಗೌಡ ಪಾಟೀಲಯುಗಾದಿಕರ್ನಾಟಕದ ತಾಲೂಕುಗಳುಕನ್ನಡದಲ್ಲಿ ಕಾದಂಬರಿ ಸಾಹಿತ್ಯಆಂಡಯ್ಯನರಿರಗಳೆವಾಣಿವಿಲಾಸಸಾಗರ ಜಲಾಶಯಶ್ರೀಶೈಲಭಾರತೀಯ ಮಾಹಿತಿ ಹಕ್ಕು ಕಾಯಿದೆ, ೨೦೦೫ಅಲ್ಲಮ ಪ್ರಭುವಿರಾಮ ಚಿಹ್ನೆಸಮಾಸಭಾರತ ಸಂವಿಧಾನದ ಪೀಠಿಕೆದೆಹಲಿ ಸುಲ್ತಾನರುಬಹುರಾಷ್ಟ್ರೀಯ ನಿಗಮಗಳುಬಂಡಾಯ ಸಾಹಿತ್ಯಅಲಾವುದ್ದೀನ್ ಖಿಲ್ಜಿಹೊಯ್ಸಳ ವಿಷ್ಣುವರ್ಧನವಾಲಿಬಾಲ್ಕರ್ನಾಟಕ ಜನಪದ ನೃತ್ಯವಿಮರ್ಶೆಅಮೇರಿಕದ ಫುಟ್‌ಬಾಲ್ಕರ್ನಾಟಕದ ಸಂಸ್ಕೃತಿಮೈಸೂರು ದಸರಾವಾಣಿಜ್ಯ ಪತ್ರಕಟ್ಟುಸಿರುಕನ್ನಡ ವ್ಯಾಕರಣಪ್ರಾಣಾಯಾಮಕೂಡಲ ಸಂಗಮನೆಲ್ಸನ್ ಮಂಡೇಲಾಯೇಸು ಕ್ರಿಸ್ತಕಿರುಧಾನ್ಯಗಳುಕನ್ನಡ ಸಾಹಿತ್ಯ ಪ್ರಕಾರಗಳುಶಿವ🡆 More