ಹನೂರು

ಇದು ಚಾಮರಾಜನಗರ ಜಿಲ್ಲೆಯ ಒಂದು ತಾಲೂಕು ಕೇಂದ್ರ.

ಮಹದೇಶ್ವರಬೆಟ್ಟವಿರುವ ತಾಲೂಕು, ಕರ್ನಾಟಕದಿಂದ ತಮಿಳುನಾಡನ್ನು ಬೇರ್ಪಡಿಸುವ,ಕೊಯಮತ್ತೂರು ಜಿಲ್ಲೆಗೆ ಈ ತಾಲೂಕಿನಿಂದ ಹಾದು ಹೋಗಬಹುದು. ಮಲೈ ಮಹದೇಶ್ವರ ಬೆಟ್ಟದಿಂದ ಸ್ವಲ್ಪ ದೂರದಲ್ಲಿ ಹೊಗೆಯನಕಲ್ಲು ಜಲಪಾತವಿದೆ. ಇದು ತಮಿಳುನಾಡಿಗೂ ಕರ್ನಾಟಕ ರಾಜ್ಯಕ್ಕೂ ವಿವಾದವಾಗಿರುವ ಸ್ಥಳ. ಹನೂರಿನ 'ಕ್ರಿಸ್ತರಾಜ ಶಾಲೆ'ತನ್ನ ಒಳ್ಳೆಯ ಶಿಕ್ಷಣ ಮತ್ತು ಫಲಿತಾಂಶದಿಂದ ಜಿಲ್ಲೆಯಲ್ಲೇ ಹೆಸರುವಾಸಿಯಾಗಿದೆ. ಈ ಶಾಲೆ ಕಲಿಕೆಯ ಜೊತೆ ಆಟ, ಓಟದಲ್ಲೂ ಒಳ್ಳೆಯ ಫಲಿತಾಂಶವನ್ನು ಕೊಟ್ಟಿದೆ. ವೀರಪ್ಪನ್ ನಿಂದ ಹತ್ಯಗೀಡಾದ ನಾಗಪ್ಪನವರು ಹನೂರಿನ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಬಂದವರು. ಹನೂರು ಸುತ್ತಮುತ್ತಲಿನ ಊರುಗಳಾದ ಬಂಡಳ್ಳಿ, ಲೊಕ್ಕನಹಳ್ಳಿ, ಅಜ್ಜೀಪುರ,ರಾಮಾಪುರ,ಗೋಪಿಶೆಟ್ಟಿಯೂರು,ಕೌದಳ್ಳಿ, ಕುರಟ್ಟಿ ಹೊಸೂರು ಗ್ರಾಮಗಳಿಗೆ ಪ್ರಮುಖ ವಾಣಿಜ್ಯ ಸ್ಥಳವಾಗಿದೆ. ಹನೂರನ್ನು ಅಧಿಕೃತವಾಗಿ 30-11-2017 ರ ಗೆಝೆಟ್‌ ನೋಟಿಫಿಕೇಸನ್‌ ಹೊರಡಿಸಲಾಗಿದ್ದು, ಪ್ರತ್ಯೇಕ ತಾಲೂಕಾಗಿ ಸನ್ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇದು ಈ ಹಿಂದೆ ಇದ್ದ ಕೊಳ್ಳೇಗಾಲ ತಾಲೂಕಿನಿಂದ ಬೇರ್ಪಟ್ಟು ಹನೂರು, ರಾಮಪುರ ಮತ್ತು ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಬರುವ 50 ಗ್ರಾಮಗಳಿಂದ ಕೂಡಿದ ಹೊಸ ತಾಲೂಕಾಗಿದೆ.

ಹನೂರಿನ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇವಸ್ಥಾನ, ಆಂಜನೇಯ ಸ್ವಾಮಿ ದೇವಸ್ಥಾನ, ಕನ್ಯಾಕಪರಮೇಶ್ವರಿ ದೇವಸ್ಥಾನ, ಚಾಮುಂಡೇಶ್ವರಿ ದೇವಸ್ಥಾನ, ಚೆಲುವ ನಾರಾಯಣ ಸ್ವಾಮಿ ದೇವಸ್ಥಾನ, ಸಿದ್ದಪ್ಪಾಜಿ, ದೊಡ್ಡಮ್ಮತಾಯಿ, ಶನೈಶ್ಚರ ದೇವಸ್ಥಾನ ಹೆಸರುವಾಸಿ ಆಗಿದೆ.ಮಾರಮ್ಮನ ದೇವಸ್ಥಾನದ ಲ್ಲಿ ವರ್ಷಕೊಮ್ಮೆ ನೆಡೆಯುವ ಜಾತ್ರೆ ಬಹಳ ಹೆಸರುವಾಸಿ ಆಗಿದೆ ಈ ಜಾತ್ರೆ 5 ದಿನ ನೆಡೆಯಲ್ಲಿದ್ದು ಬಾಯಿಬೀಗ ಪ್ರಮುಖ ಆಕರ್ಷಣೆ ಆಗಿದೆ ಸುಮಾರು 2000 ಸಣ್ಣ ಬಾಯಿಬೀಗ ಹಾಗೂ 15 ರಿಂದ 20 ಅಡಿ ಬಾಯಿಬೀಗ ಹಾಕಿಸಿಕೊಳ್ಳುತ್ತಾರೆ ಇಲ್ಲಿನ ಭಕ್ತಾದಿಗಳು.

ಇಲ್ಲಿನ ನಿವಾಸಿಗಳ ಪ್ರಮುಖ ಬೇಡಿಕೆ ಕನಕಪುರ ಬಳಿ ಕಾವೇರಿ ನದಿಗೆ ಮೆಕೆದಾಟು ಸೇತುವೆ ನಿರ್ಮಾಣ ಮಾಡಬೇಕು ಎಂಬುದು.

ಸಾಧ್ಯವಾದರೆ ಬೆಂಗಳೂರು ಇಂದ ಹನೂರು ಈಗಿರುವ ಮಾರ್ಗದ ರಸ್ತೆ ಸಂಚಾರ ಕಡಿತ ವಾಗುತ್ತದೆ ಸುಮಾರು 2.5 ಗಂಟೆಯಲ್ಲಿ ಬೆಂಗಳೂರು ತಲುಪಬಹುದು ರಾಮನಗರ, ಬೆಂಗಳೂರು ಗ್ರಾಮಾಂತರ. ಮತ್ತು ನಗರ ಪ್ರದೇಶಗಳ ಎಷ್ಟು ಜನರ ಮನೆ ದೇವರು ಶ್ರೀ ಮಲೆ ಮಹದೇಶ್ವರ ಈ ಕ್ಷೇತ್ರಕ್ಕೆ ಲಕ್ಷ ಲಕ್ಷ ಸಂಂಖ್ಯೆಯಲ್ಲಿ ಜನ ಬರುತ್ತಾರೆ. ಅಷ್ಟು ಜನರಿಗೆ ಸೇತುವೆ ನಿರ್ಮಾಣದಿಂದ ಸುಲಭವಾಗಿ (ರಾಮನಗರ-ಕನಕಪುರ-ಮೇಕೆದಾಟು-ಮಹದೇಶ್ವರ ಬೆಟ್ಟ) ಮಾರ್ಗ ನಿರ್ಮಾಣ.

ಮತ್ತೊಂದು ಬೇಡಿಕೆಯಿವರು ಮಾರ್ಗ ಕ್ಷೇತ್ರ ಚಿಕ್ಕಲ್ಲೂರು ಸಿದ್ದಪ್ಪಾಜಿ ಕ್ಷೇತ್ರಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನ ಬರುತ್ತಾರೆ ಮಾರ್ಗ (ರಾಮನಗರ-ಅಕ್ಕೂರು-ಹಲಗೂರು-ಮತ್ತತ್ತಿ-ಚಿಕ್ಕಲ್ಲೂರು-ಹನೂರು)

ಶ್ರೀ ಮಲೆ ಮಹದೇಶ್ವರ ಬೆಟ್ಟ

ಇದು ಪುಣ್ಯಕೇತ್ರವಾಗಿದ್ದು ಇಲ್ಲಿ ಸಾಲೂರು ಮಠವು ಇದೆ. ಇಲ್ಲಿಂದ ಮುಂದುವರೆದು ನಾಗಮಲೈ ದೇವಾಲವು ಕೂಡ ಇಲ್ಲಿದ್ದು, ನಾಗರ ಹೆಡೆಯಂತೆ ಬಂಡೆಗಳಿರುವ ಕಾರಣ ಇದನ್ನು ನಾಗಮಲೈ ಎಂದು ಕರೆಯುತ್ತಾರೆ ಹಾಗೂ ಮಹದೇಶ್ವರನು ಪ್ರಸ್ತುತ ಇಲ್ಲಿ ನೆಲೆಸಿರುವುದಾಗಿ ನಂಬಿಕೆಯಿದೆ. ಈ ದೇವಾಲಯಕ್ಕೆ ಎಲ್ಲೇಮಾಳ ಮಾರ್ಗವಾಗಿಯೂ ಮತ್ತು ರಾಮಾಪುರ ಮಾರ್ಗವಾಗಿಯೂ ಪ್ರಯಾಣ ಬೆಳೆಸಬಹುದಾಗಿದೆ.

Hanur
ಹನೂರು 
Hanur
ರಾಜ್ಯ
 - ಜಿಲ್ಲೆ
ಕರ್ನಾಟಕ
 - Chamarajanagar
ನಿರ್ದೇಶಾಂಕಗಳು 12.083° N 77.283° E
ವಿಸ್ತಾರ
 - ಎತ್ತರ
2.12 km²
 - 727 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
10682
 - 5038.68/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 571 439
 - +08224
 - KA-10

ಮಿಣ್ಯ ಗುರುಸಿದ್ಧ ಕವಿಯು ಶ್ರೀ ಮಲೈಮಹದೇಶ್ವರ ಕುರಿತು ಮಹದೇಶ್ವರ ವಿಳಾಸ ಕಾವ್ಯವನ್ನು ಬರೆದಿದ್ದು ಇದು ಮಹದೇಶ್ವರರ ಪವಾಡವನ್ನು ಕುರಿತು ಮಾಹಿತಿಯನ್ನು ನೀಡುತ್ತದೆ. ಈ ಕೃತಿಯು ಮಹದೇಶ್ವರ ಬಗ್ಗೆ ಮಾಹಿತಿಯನ್ನು ನೀಡುವ ಪ್ರಾಚೀನವಾಗಿದ್ದಾಗಿದೆ. ಜಾನಪದ ಮಹಾಕಾವ್ಯಗಳಲ್ಲಿ ಈ ಪ್ರದೇಶವನ್ನು ಕತ್ತಲೆಯ ರಾಜ್ಯವೆಂದು ಬರ್ಣಿಸಿದ್ದು, ಮಹದೇಶ್ವರರ ಆಗಮನದಿಂದಾಗಿ ಈ ಪ್ರದೇಶ ಸಂಸ್ಕೃತಿಯ ನಾಯಕನ ಪ್ರವೇಶವಾಯಿತು ಎಂದು ಹೇಳಲಾಗುತ್ತದೆ. ಈ ಭೂಮಿಯು ಕೆಲವು ಮೊದಲೇ ಜಾಗೃತ ಭೂಮಿಯಾಗಿದ್ದು, ಕೆಲವು ಮಾಂತ್ರಿಕರಿಂದ ಕಟ್ಟಲ್ಪಟ್ಟು ಕಲ್ತ್ಲೆ ರಾಜ್ಯವಾಗಿರಲು ಬಹುದು ನಂತರ ಮಹದೇಶ್ವರ ಆಗಮನದಿಂದ ಮಾಂತ್ರಿಕ ಶಕ್ತಿಯ ಪೊರೆಯಿಳಿಸಿ ಸಂಸ್ಕೃತಿಯ ನಾಡಾಗಿ ಪರಿಣಮಿಸಿಹುದು ಎಂಬುದನ್ನು ಮಹದೇಶ್ವರನ ಪವಾಡದ ಲೀಲೆಗಳಿಂದ ತಿಳಿದು ಬರುತ್ತದೆ ಎಂಬುದನ್ನು ನಾವು ಅರಯಲೇ ಬೇಕಾಗಿದೆ.

Tags:

ಚಾಮರಾಜನಗರ

🔥 Trending searches on Wiki ಕನ್ನಡ:

ರಜಪೂತಕನ್ಯಾಕುಮಾರಿಹಂಪೆಕದಂಬ ಮನೆತನಹರಿಹರ (ಕವಿ)ಜಾತ್ರೆಫ್ರಾನ್ಸ್ವಾಣಿವಿಲಾಸಸಾಗರ ಜಲಾಶಯಶ್ರೀ ಭಾರತಿ ತೀರ್ಥ ಸ್ವಾಮಿಗಳುಜೈಮಿನಿ ಭಾರತವಿಜ್ಞಾನಕಲೆಕಾದಂಬರಿಭಾರತದಲ್ಲಿ ಮೀಸಲಾತಿಧರ್ಮಸ್ಥಳಏಷ್ಯಾ ಖಂಡಪರಮಾಣುದುರ್ಯೋಧನಕರ್ನಾಟಕದ ಹಬ್ಬಗಳುಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಜೋಳಐಹೊಳೆಭಾರತೀಯ ಭೂಸೇನೆಚಿತ್ರದುರ್ಗ ಕೋಟೆಕಾನೂನುಭಂಗ ಚಳವಳಿಭತ್ತಕರ್ನಾಟಕದ ರಾಜ್ಯಪಾಲರುಗಳ ಪಟ್ಟಿನುಡಿಗಟ್ಟುವಿಜಯಾ ದಬ್ಬೆದ್ರವ್ಯಕೆ.ವಿ.ಸುಬ್ಬಣ್ಣಆಲೂರು ವೆಂಕಟರಾಯರುಕರ್ನಾಟಕ ಪತ್ರಿಕೋದ್ಯಮ ಇತಿಹಾಸಪಟ್ಟದಕಲ್ಲುಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಟಿಪ್ಪು ಸುಲ್ತಾನ್ಗ್ರಾಹಕರ ಸಂರಕ್ಷಣೆಜಾಹೀರಾತುಭಾರತೀಯ ಜನತಾ ಪಕ್ಷಸೌರಮಂಡಲಭಾರತದ ರಾಷ್ಟ್ರಪತಿಗಳ ಪಟ್ಟಿವಿಕಿಮಗುವಿನ ಬೆಳವಣಿಗೆಯ ಹಂತಗಳುದಶರಥಮಯೂರವರ್ಮಯಶವಂತರಾಯಗೌಡ ಪಾಟೀಲಅ. ರಾ. ಮಿತ್ರಬಾರ್ಲಿಭಾರತದಲ್ಲಿನ ಜಾತಿ ಪದ್ದತಿಮಾರ್ಟಿನ್ ಲೂಥರ್ ಕಿಂಗ್ಕೃತಕ ಬುದ್ಧಿಮತ್ತೆಆಕೃತಿ ವಿಜ್ಞಾನಶಿಶುನಾಳ ಶರೀಫರುಭಾರತದ ತ್ರಿವರ್ಣ ಧ್ವಜವೈದೇಹಿಅಂಕಿತನಾಮರಾಮ್ ಮೋಹನ್ ರಾಯ್ಬಾನು ಮುಷ್ತಾಕ್ಅರ್ಥಶಾಸ್ತ್ರಕನ್ನಡ ಚಂಪು ಸಾಹಿತ್ಯಯೂಟ್ಯೂಬ್‌ಜೋಗಐತಿಹಾಸಿಕ ನಾಟಕವಾರ್ಧಕ ಷಟ್ಪದಿಅರುಣಿಮಾ ಸಿನ್ಹಾಹರಿಶ್ಚಂದ್ರಹನುಮಂತತಲಕಾಡುಸರ್ ಐಸಾಕ್ ನ್ಯೂಟನ್ಹಣಕಾಸುಸರ್ವೆಪಲ್ಲಿ ರಾಧಾಕೃಷ್ಣನ್ಶಂ.ಬಾ. ಜೋಷಿನರೇಂದ್ರ ಮೋದಿಇರುವುದೊಂದೇ ಭೂಮಿರಾಹುಲ್ ಗಾಂಧಿಎಸ್. ಶ್ರೀಕಂಠಶಾಸ್ತ್ರೀಮೈಸೂರು ದಸರಾ🡆 More