ಹಕ್ಕುಗಳು

ಹಕ್ಕುಗಳು ಸ್ವಾತಂತ್ರ್ಯ ಅಥವಾ ಅರ್ಹತೆಯ ಕಾನೂನಾತ್ಮಕ, ಸಾಮಾಜಿಕ, ಅಥವಾ ನೈತಿಕ ತತ್ವಗಳು; ಅಂದರೆ, ಹಕ್ಕುಗಳು ಯಾವುದಾದರೂ ಕಾನೂನು ವ್ಯವಸ್ಥೆ, ಸಾಮಾಜಿಕ ಸಂಪ್ರದಾಯ, ಅಥವಾ ನೈತಿಕ ಸಿದ್ದಾಂತದ ಪ್ರಕಾರ, ಜನರಿಗೆ ಏನು ಅವಕಾಶವಿದೆ ಎಂಬುವುದರ ಬಗ್ಗೆ ಮೂಲಭೂತ ಪ್ರಮಾಣಕ ನಿಯಮಗಳು.

ಕಾನೂನು ಮತ್ತು ನೀತಿಶಾಸ್ತ್ರದಂತಹ ವಿಭಾಗಗಳಲ್ಲಿ, ಹಕ್ಕುಗಳು ಅತ್ಯಗತ್ಯ ಪ್ರಾಮುಖ್ಯತೆ ಇರುವಂಥವು, ವಿಶೇಷವಾಗಿ ನ್ಯಾಯ ಮತ್ತು ಕರ್ತವ್ಯಶಾಸ್ತ್ರದ ಸಿದ್ಧಾಂತಗಳಲ್ಲಿ.

ಹಕ್ಕುಗಳು ಹಲವುವೇಳೆ ನಾಗರಿಕತೆಗೆ ಮೂಲಭೂತವಾಗಿರುವಂಥವು ಎಂದು ಪರಿಗಣಿತವಾಗಿವೆ, ಮತ್ತು ಸಮಾಜ ಹಾಗೂ ಸಂಸ್ಕೃತಿಯ ಸ್ಥಾಪಿತ ಆಧಾರಸ್ತಂಭಗಳು ಎಂದು ಪರಿಗಣಿತವಾಗಿವೆ, ಮತ್ತು ಸಾಮಾಜಿಕ ಸಂಘರ್ಷಗಳ ಇತಿಹಾಸವನ್ನು ಪ್ರತಿಯೊಂದು ಹಕ್ಕು ಮತ್ತು ಅದರ ಬೆಳವಣಿಗೆಯ ಇತಿಹಾಸದಲ್ಲಿ ಕಂಡುಕೊಳ್ಳಬಹುದು. ಹಕ್ಕುಗಳು ಪ್ರಸ್ತುತವಾಗಿ ಗ್ರಹಿಸಲಾದ ಸರ್ಕಾರಗಳ ರೂಪವನ್ನು, ಕಾನೂನುಗಳ ವಿಷಯವನ್ನು, ಮತ್ತು ನೈತಿಕತೆಯ ಆಕಾರವನ್ನು ರಚಿಸುತ್ತವೆ.

ಸ್ವಾಭಾವಿಕ ಹಕ್ಕುಗಳು ಎಂದರೆ ಸ್ವಭಾವಸಿದ್ಧ ಹಕ್ಕುಗಳು, ಕೃತಕವಲ್ಲ, ಮಾನವ ನಿರ್ಮಿತವಲ್ಲ ಎಂಬ ಅರ್ಥದಲ್ಲಿ, ಉದಾಹರಣೆಗೆ ಕರ್ತವ್ಯ ತರ್ಕ, ಮಾನವ ಸಹಜಗುಣ, ಅಥವಾ ದೇವರ ಶಾಸನಗಳಿಂದ ಹುಟ್ಟಿಕೊಂಡ ಹಕ್ಕುಗಳು. ಅವು ವಿಶ್ವವ್ಯಾಪಿ; ಅಂದರೆ, ಅವು ಎಲ್ಲ ಜನರಿಗೆ ಅನ್ವಯಿಸುತ್ತವೆ, ಮತ್ತು ಯಾವುದೇ ನಿರ್ದಿಷ್ಟ ಸಮಾಜದ ಕಾನೂನುಗಳಿಂದ ಹುಟ್ಟಿಕೊಳ್ಳುವುದಿಲ್ಲ. ಅವು ಅಗತ್ಯವಾಗಿ ಇರುತ್ತವೆ, ಪ್ರತಿ ವ್ಯಕ್ತಿಯನ್ನು ಒಳಗೊಂಡಿರುತ್ತವೆ, ಮತ್ತು ಅವನ್ನು ಕಸಿದುಕೊಳ್ಳಲಾಗುವುದಿಲ್ಲ. ಉದಾಹರಣೆಗೆ ಮಾನವರು ಸ್ವಾಭಾವಿಕ ಜೀವಿಸುವ ಹಕ್ಕು ಹೊಂದಿರುತ್ತಾರೆ. ಇವನ್ನು ಕೆಲವೊಮ್ಮೆ ನೈತಿಕ ಹಕ್ಕುಗಳು ಅಥವಾ ಪರಭಾರೆ ಮಾಡಲಾಗದ ಹಕ್ಕುಗಳು ಎಂದು ಕರೆಯಲಾಗುತ್ತದೆ.

ಇದಕ್ಕೆ ವಿರುದ್ಧವಾಗಿ, ಕಾನೂನಾತ್ಮಕ ಹಕ್ಕುಗಳು ಸಮಾಜದ ಪದ್ಧತಿಗಳು, ಕಾನೂನುಗಳು, ಶಾಸಕಾಂಗದಿಂದ ಕಾಯಿದೆಗಳನ್ನು ಆಧರಿಸಿರುತ್ತವೆ. ನಾಗರಿಕರ ಮತದಾನದ ಹಕ್ಕು ಕಾನೂನಾತ್ಮಕ ಹಕ್ಕಿನ ಒಂದು ಉದಾಹರಣೆ. ಸ್ವತಃ ಪೌರತ್ವವನ್ನು ಹಲವುವೇಳೆ ಕಾನೂನಾತ್ಮಕ ಹಕ್ಕುಗಳನ್ನು ಹೊಂದಲು ಆಧಾರವೆಂದು ಪರಿಗಣಿಸಲಾಗುತ್ತದೆ, ಮತ್ತು ಇದನ್ನು "ಹಕ್ಕುಗಳನ್ನು ಹೊಂದಲು ಹಕ್ಕು" ಎಂದು ವ್ಯಾಖ್ಯಾನಿಸಲಾಗಿದೆ. ಕಾನೂನಾತ್ಮಕ ಹಕ್ಕುಗಳನ್ನು ಕೆಲವೊಮ್ಮೆ ನಾಗರಿಕ ಹಕ್ಕುಗಳು ಅಥವಾ ಶಾಸನಬದ್ಧ ಹಕ್ಕುಗಳು ಎಂದು ಕರೆಯಲಾಗುತ್ತದೆ, ಮತ್ತು ಸಾಂಸ್ಕೃತಿಕವಾಗಿ ಹಾಗೂ ರಾಜಕೀಯವಾಗಿ ತುಲನಾತ್ಮಕವಾಗಿವೆ ಏಕೆಂದರೆ ಅವು ಅರ್ಥವನ್ನು ಹೊಂದಲು ನಿರ್ದಿಷ್ಟ ಸಾಮಾಜಿಕ ಸಂದರ್ಭದ ಮೇಲೆ ಅವಲಂಬಿತವಾಗಿವೆ.

ಉಲ್ಲೇಖಗಳು

Tags:

ಕಾನೂನುಸ್ವಾತಂತ್ರ್ಯ

🔥 Trending searches on Wiki ಕನ್ನಡ:

ಗ್ರಾಹಕರ ಸಂರಕ್ಷಣೆಪುನೀತ್ ರಾಜ್‍ಕುಮಾರ್ಬ್ರಾಟಿಸ್ಲಾವಾಪರೀಕ್ಷೆಭಾರತೀಯ ಸಂವಿಧಾನದ ತಿದ್ದುಪಡಿಅಮೇರಿಕ ಸಂಯುಕ್ತ ಸಂಸ್ಥಾನಅಗ್ನಿ(ಹಿಂದೂ ದೇವತೆ)ಭೌಗೋಳಿಕ ಲಕ್ಷಣಗಳುಮದಕರಿ ನಾಯಕಸಮಸ್ಥಾನಿಕುಡಿಯುವ ನೀರುಶಾಸನಗಳುಪ್ಲೇಟೊಬಾಹುಬಲಿನೀರಾವರಿಕಾನೂನುಹಂಪೆಶೇಷಾದ್ರಿ ಅಯ್ಯರ್ಮಹಾತ್ಮ ಗಾಂಧಿಸಮಾಸಮೋಕ್ಷಗುಂಡಂ ವಿಶ್ವೇಶ್ವರಯ್ಯಸುಭಾಷ್ ಚಂದ್ರ ಬೋಸ್ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳುಜ್ಯೋತಿಷ ಶಾಸ್ತ್ರರತನ್ ನಾವಲ್ ಟಾಟಾಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕ್ಲಾರಾ ಜೆಟ್‌ಕಿನ್ಭಾರತೀಯ ನಾಗರಿಕ ಸೇವೆಗಳುಬೆಂಗಳೂರುಸಂಧಿಗ್ರಂಥಾಲಯಗಳುಕಬೀರ್ಧೂಮಕೇತುಮೊದಲನೇ ಅಮೋಘವರ್ಷಕರ್ಬೂಜಚಂದನಾ ಅನಂತಕೃಷ್ಣಭಾರತದ ಪ್ರಧಾನ ಮಂತ್ರಿಗಳ ಪಟ್ಟಿಪ್ರವಾಸೋದ್ಯಮಯುರೇನಿಯಮ್ನಾಗಮಂಡಲ (ಚಲನಚಿತ್ರ)ಭಾರತದ ರಾಷ್ಟ್ರಪತಿಗಳ ಪಟ್ಟಿಪೆಟ್ರೋಲಿಯಮ್ಶ್ರೀ ರಾಮಾಯಣ ದರ್ಶನಂಎಸ್.ಜಿ.ಸಿದ್ದರಾಮಯ್ಯಕೃಷ್ಣಸಚಿನ್ ತೆಂಡೂಲ್ಕರ್ಕಾವ್ಯಮೀಮಾಂಸೆಮರಣದಂಡನೆಆಸ್ಟ್ರೇಲಿಯಉಪ್ಪು (ಖಾದ್ಯ)ಪತ್ರರಂಧ್ರಉಡುಪಿ ಜಿಲ್ಲೆಮಳೆನೀರು ಕೊಯ್ಲುಅಣುರತ್ನತ್ರಯರುಕದಂಬ ರಾಜವಂಶಪೊನ್ನಬಂಡೀಪುರ ರಾಷ್ಟ್ರೀಯ ಉದ್ಯಾನವನವಿದ್ಯುತ್ ಪ್ರವಾಹಭಾರತದ ಇತಿಹಾಸಜಲಶುದ್ಧೀಕರಣಹರಿಹರ (ಕವಿ)ಗುರುರಾಜ ಕರಜಗಿಚಂದ್ರಯಾನ-೩ಭಾರತದ ವಿಭಜನೆಶ್ರವಣಬೆಳಗೊಳಡಿಎನ್ಎ -(DNA)ಕರ್ನಾಟಕ ಐತಿಹಾಸಿಕ ಸ್ಥಳಗಳುಐಹೊಳೆಮೊದಲನೆಯ ಕೆಂಪೇಗೌಡದ.ರಾ.ಬೇಂದ್ರೆಅಭಿಮನ್ಯುನಾಲ್ವಡಿ ಕೃಷ್ಣರಾಜ ಒಡೆಯರುವಾದಿರಾಜರುತ್ರಿಪದಿಒಂದನೆಯ ಮಹಾಯುದ್ಧನ್ಯೂಟನ್‍ನ ಚಲನೆಯ ನಿಯಮಗಳುಕನ್ನಡ ಗುಣಿತಾಕ್ಷರಗಳು🡆 More