ಸಂಜೀವ್ ಕಪೂರ್

ಸಂಜೀವ್ ಕಪೂರ್ (ಜನನ ೧೦ ಎಪ್ರಿಲ್ ೧೯೬೪) ಒಬ್ಬ ಭಾರತೀಯ ಬಾಣಸಿಗ ಹಾಗೂ ಉದ್ಯಮಿ.

ಕಪೂರ್ ರವರು ಖಾನಾ ಖಜಾನಾ ಶೋ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಶೋ ೧೨೦ ದೇಶಗಳಲ್ಲಿ ಪ್ರಸಾರವಾಗಿತ್ತು. ೨೦೧೦ರಲ್ಲಿ ೫೦೦ ದಶಲಕ್ಷಕ್ಕೂ ಹೆಚ್ಚು ವೀಕ್ಷಕರನ್ನು ಹೊಂದಿತ್ತು.ಕಪೂರ್ ೨೦೧೧ರಲ್ಲಿ ತಮ್ಮದೇ ಆದ ಫೂಡ್ ಫೂಡ್ ಚಾನೆಲ್ ಅನ್ನು ಪ್ರಾರಂಭಿಸಿದ್ದಾರೆ.ಡಿಸ್ಕವೆರಿ ಕಮ್ಯುನಿಕೇಷನ್ ತನ್ನ ಭಾರತೀಯ ಸಂಘಟನೆಯ ಮೂಲಕ, ಕಪೂರ್ ಚಾನೆಲ್ ನಲ್ಲಿ ಬಹುಪಾಲು ಪಾಲನ್ನು ಪಡೆದುಕೊಂಡಿದೆ.

ಪಾಕಕಲೆ

೧೯೯೩ ರಿಂದ ಝೀ ಟಿವಿಯಲ್ಲಿ ಪ್ರತಿ ರವಿವಾರ, ಪಾಕಶಾಸ್ತ್ರದ ವೈವಿಧ್ಯಗಳನ್ನು ಅತ್ಯಂತ ಸರಳವಾಗಿ ಹಾಗೂ ಮಾಡಲು ಅತಿ-ಸುಲಭವೇನೋ ಅನ್ನಿಸುವ ರೀತಿಯಲ್ಲಿ ಪ್ರಸ್ತುತ ಪಡಿಸುತ್ತಿರುವ ಸಂಜೀವ್ ಕಪೂರ್ ಒಬ್ಬ ಪ್ರತಿಭಾನ್ವಿತ ಬಾಣಸಿಗನೆನ್ನಬಹುದು. ಈಗಾಗಲೇ ಅವರು ಟಿ.ವಿ ಯಲ್ಲಿ, ೪೫೦ ಎಪಿಸೋಡ್‍ಗಳನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಕೇವಲ ಬಾಣಸಿಗನಲ್ಲದೆ, ಮಾಡಿದ ಅಡುಗೆಯನ್ನು ಮನವೊಪ್ಪುವಂತೆ ವಿವರಿಸಿ, ಮನದಟ್ಟುಮಾಡಿ, ಪಾಕಶಾಸ್ತ್ರವನ್ನು ಇನ್ನೂ ಕಲಿಯಲು ಹವಣಿಸುತ್ತಿರುವ ಎಳೆಯರ ಮನಸ್ಸಿಗೆ ನಾಟುವಂತೆ ಹಾಗೂ ಆಸಕ್ತಿ ಇಮ್ಮಡಿಸುವ ರೀತಿಯಲ್ಲಿ ಪ್ರಸ್ತುತಪಡಿಸುವ ಜಾಣತನ ಅವರದು.

ವಿದ್ಯಾಭ‍್ಯಾಸ

ಸಂಜೀವ್ ಕಪೂರ್ ಹರಿಯಾಣದಲ್ಲಿ ಜನಿಸಿದರು. ಸಂಜೀವ್ ಕಪೂರ್, ದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೆಜ್ಮೆಂಟ್ ಕಟೆರಿಂಗ್ ಆಂಡ್ ನ್ಯೂಟ್ರೀಶನ್ ಕಾಲಿಜಿನಲ್ಲಿ ಹೋಟೆಲ್ ಮ್ಯಾನೆಜ್ಮೆಂಟ್ ನಲ್ಲಿ ಡಿಪ್ಲೊಮ ಶಿಕ್ಷನವನ್ನು ಪಡೆದಿದ್ದಾರೆ. ತಮ್ಮ ಶಿಕ್ಷಣದ ತರುವಾಯ ಅವರು ಬೊಂಬಾಯಿಯ ಸೆಂಟಾರ್ ಹೋಟೆಲ್ ನಲ್ಲಿ ಪ್ರಮುಖ ಚೆಫ್ ಆಗಿ ಸೇವೆಸಲ್ಲಿಸಿದರು. ಟೆಲೆವಿಶನ್‍ನ "ಇಂಡಿಯಾನ್ ಟೆಲಿವಿಷನ್ ಅಕಾಡೆಮಿ" ಅವರಿಗೆ, ೨೦೦೧ ರಲ್ಲಿ "ದ ಬೆಸ್ಟ್ ಕುಕೆರಿ ಅವಾರ್ಡ್"(ITA) ದಯಪಾಲಿಸಿತು. ಸಿಂಗಪುರ್ ಏರ್ಲೈನ್ಸ್ ಅವರನ್ನು "ಇಂಟರ್ನ್ಯಾಷನಲ್ ಕ್ಯುಲಿನರಿ ಪ್ಯಾನೆಲ್" ನ ಒಬ್ಬ ಸಹಾಯಕನನ್ನಾಗಿ ಆರಿಸಿಕೊಂಡಿದೆ. ಅದರಲ್ಲಿ ಅವರು ತಮ್ಮ ಸುಪ್ರಸಿದ್ಧ ಶಹಿ ಥಲಿ ಊಟದ ಥಾಲಿಯನ್ನು ಸಜ್ಜುಗೊಳಿಸಿ ಬಡಿಸುತ್ತಾರೆ. ಇಂಡಿಯನ್ ಕ್ಯುಲಿನರಿ ಅಸೋಸಿಯೆಷನ್ ಬೆಸ್ಟ್ ಚೆಫ್ ಅವಾರ್ಡ್ ಗೆ ಅವರ ಹೆಸರನ್ನು ನಾಮಿನೇಟ್ ಮಾಡಲಾಗಿದೆ. ಅಲ್ಲಿ ಅವರು ಒಂದು ಹೆಸರುವಾಸಿಯಾದ ಬಕ್ಸಸ್ ಒಬ್ಟುಸಿಫೋಲಿಯಾ ವ್ಯಂಜನವನ್ನು ಭಾರತೀಯ ಅಡುಗೆಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಿದ್ದರು.

ರಾಷ್ಟ್ರಪತಿ ಹಾಗೂ ವಿಐಪಿ ಗಳಿಗೆ ಅವರ ಊಟದ ವ್ಯವಸ್ಥೆ

ತಮ್ಮ ಪಾಕಶಾಸ್ತ್ರ ಕಲೆಯ ವೈವಿಧ್ಯತೆಗಳಿಂದ ಅವರು ದೇಶ-ವಿದೇಶಗಳಲ್ಲಿ ಮನೆಮಾತಾಗಿದ್ದಾರೆ. ಪರಂಪರಾಗತ ಭಾರತೀಯ ಪಾಕವಿಧಾನಗಳನ್ನು ಮರೆತಿದ್ದ ಅದೆಷ್ಟೋ ಸ್ಥಳೀಯ, ಪ್ರಾಂತೀಯ ಅಡುಗೆ ವೈವಿಧ್ಯಗಳ ಸ್ವಾದಸರಣಿಯನ್ನು ಪತ್ತೆಹಚ್ಚಿ, ತಮ್ಮ ಸಹಚರರೊಂದಿಗೆ ಆ ಬಗ್ಗೆ ಸಂಶೋಧನೆ ನಡೆಸಿ, ಚಾಲ್ತಿಗೆತಂದ ಶ್ರೇಯಸ್ಸು, ಕಪೂರ್ ಅವರದು. ಭಾರತದ ರಾಷ್ಟ್ರಾಧ್ಯಕ್ಷರು, ಪ್ರಧಾನಿಗಳ ಸಮೇತ ಇನ್ನಿತರ ವಿ.ವಿ.ಐ.ಪಿ ಗಳಿಗೆ ತಮ್ಮ ಖಾದ್ಯವನ್ನು ಉಣಬಡಿಸಿದ್ದಾರೆ. ಈಗ ದುಬೈನಲ್ಲಿ, ಕಪೂರ್ ತಮ್ಮದೇ ಆದ ಹೋಟೆಲ್ ಒಂದನ್ನು ನಡೆಸುತ್ತಿದ್ದಾರೆ. ಅವರ ಬಹುಚಾಲ್ತಿಯಲ್ಲಿರುವ ಕೆಲವು ವಿಶೇಷ ಖಾದ್ಯಗಳನ್ನು ಇಲ್ಲಿ ಕೊಡಲಾಗಿದೆ. ಅವರು ಹೇಳಿರುವ ಕ್ರಮದಲ್ಲೇ ಆಯಾ ಸಾಂಬಾರವಸ್ತುಗಳನ್ನು ಉಪಯೋಗಿಸಿದರೆ ಮಾತ್ರ, ನಿರೀಕ್ಷಿಸಿದಷ್ಟು ಪರಿಮಳ, ರುಚಿಯನ್ನು ಖಂಡಿತ ಪಡೆಯಬಹುದು.

ಸಂಜೀವ್ ರಚಿಸಿದ ಖಜಾನ ಆಫ್ ಈಂಡಿಯನ್ ರೆಸಿಪಿ ಬಹುಪಯುಕ್ತ ಪುಸ್ತಕ

ಇವರ ಜನಪ್ರಿಯ ಪುಸ್ತಕ, ಖಜಾನ ಆಫ್ ಇಂಡಿಯನ್ ರೆಸಿಪಿ. ಈ ಮಾಲಿಕೆಯಲ್ಲಿ ಇನ್ನೂ ಹಲವಾರು ಪುಸ್ತಕಗಳನ್ನು ಬರೆದು ಪ್ರಕಟಿಸಿರುತ್ತಾರೆ. ನಾನಾ ಭಾರತೀಯ ಭಾಷೆಗಳಲ್ಲಿ ಅವು ಭಾಷಾಂತರಗೊಂಡಿವೆ. ಸಿ. ಡಿ ರೋಮ್ ಕೂಡ ಹೊರತಂದಿದ್ದಾರೆ. ೧೯೮೨ ರಲ್ಲಿ ನಡೆದ, ಏಷ್ಯನ್ ಗೇಮ್ಸ್, ಹಾಗೂ ಶಿಲ್ಲಾಂಗ್ ನಲ್ಲಿ ನಡೆದ, ಸಾರ್ಕ್ ಶೃಂಗಸಭೆ ಯ ಕೇಟರಿಂಗ್ ಟೀಮ್‍ನಲ್ಲಿದ್ದ ಸಂಜೀವ್ ಕಪೂರ್ ಹಲವಾರು ಆಹಾರೋತ್ಸವಗಳನ್ನೂ ಆಯೋಜಿಸಿರುತ್ತಾರೆ. ಅವರು ಎಹ್ ಆಂಡ್ ಎಫ್ಎಸ್ ರವರ ಅತ್ಯುತ್ತಮ ಕಾರ್ಯನಿರ್ವಾಹಕ ಚೆಫ್ ಆಫ್ ಇಂಡಿಯಾ ಪ್ರಶಸ್ತಿ ಮತ್ತು ಸ್ವಿಟ್ಜರ್ಲ್ಯಾಂಡ್ನ ಜಿನೀವಾದಲ್ಲಿ ಮರ್ಕ್ಯುರಿ ಗೋಲ್ಡ್ ಅವಾರ್ಡ್ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.

ಸಂಜೀವ್ ಕಪೂರ್ ರ ಕೆಲವು ವಿಶೇಷ ವ್ಯಂಜನಗಳು

ಮಶ್ರೂಂ ಸೋಯವಾಡಿ, ಮಶೋಬ್ರಾ ಮಶ್ರೂಂ ಕರಿ (ಕ್ರೀಂ ಯುಕ್ತ ಮಶ್ರೂಂ ಕರಿ), ಟೊಮೆಟೊ ಪರಪ್ಪು ರಸಂ, ಬೋಂಬೆ ಪಾವ್ ಬಾಜಿ, ಅಂಬಟ್ ಟೀಕಟ್ ಪಾಂಫ್ರೆಟೆ, ಪ್ರಾನ್ ಉರುವಲ್, ಚೋರ್ ಚೋರಿ (ಬಂಗಾಳಿ ಸ್ಟೈಲ್ ನಲ್ಲಿ ತರಕಾರಿ ಮಿಶ್ರಣ), ಆರೆಂಜ್ ರೈಸ್ (ಪುಡ್ಡಿಂಗ್), ಫೂಲ್ ಗೋಭಿ ಸಾಂಭಾರಿ (ತೆಂಗಿನ ಹಾಲು ಮತ್ತು ಕಾಲಿ ಫ್ಲವರ್).

ಸಂಜೀವ್ ಕಪೂರ್, ಖಾದ್ಯಾನ್ನಗಳ ಬಗ್ಗೆ, ಬರೆದ ಹಲವು ಪ್ರಸಿದ್ಧ ಪುಸ್ತಕಗಳು

  • ಖಜಾನ ಆಫ್ ಇಂಡಿಯನ್ ರೆಸಿಪೀಸ್
  • ಖಜಾನ ಆಫ್ ಹೆಲ್ತಿ ಟೆಸ್ಟಿ ರೆಸಿಪೀಸ್
  • ಖಾನ ಖಜಾನ ಸೆಲೆಬ್ರೆಶನ್ ಆಫ್ ಇಂಡಿಯನ್ ಕುಕ್ಕೆರಿ
  • ಲೊ ಕ್ಯಾಲೋರಿ ವೆಜಿಟೆರಿಯನ್ ಕುಕ್ ಬುಕ್
  • ಸೂಪ್ಸ್, ಸಲಾಡ್ಸ್ ಆಂಡ್ ಸ್ಯಾಂಡ್ವಿಚೆಸ್

ಉಲ್ಲೇಖಗಳು

Tags:

ಸಂಜೀವ್ ಕಪೂರ್ ಪಾಕಕಲೆಸಂಜೀವ್ ಕಪೂರ್ ವಿದ್ಯಾಭ‍್ಯಾಸಸಂಜೀವ್ ಕಪೂರ್ ರಾಷ್ಟ್ರಪತಿ ಹಾಗೂ ವಿಐಪಿ ಗಳಿಗೆ ಅವರ ಊಟದ ವ್ಯವಸ್ಥೆಸಂಜೀವ್ ಕಪೂರ್ ಸಂಜೀವ್ ರಚಿಸಿದ ಖಜಾನ ಆಫ್ ಈಂಡಿಯನ್ ರೆಸಿಪಿ ಬಹುಪಯುಕ್ತ ಪುಸ್ತಕಸಂಜೀವ್ ಕಪೂರ್ ರ ಕೆಲವು ವಿಶೇಷ ವ್ಯಂಜನಗಳುಸಂಜೀವ್ ಕಪೂರ್ , ಖಾದ್ಯಾನ್ನಗಳ ಬಗ್ಗೆ, ಬರೆದ ಹಲವು ಪ್ರಸಿದ್ಧ ಪುಸ್ತಕಗಳುಸಂಜೀವ್ ಕಪೂರ್ ಉಲ್ಲೇಖಗಳುಸಂಜೀವ್ ಕಪೂರ್en:Discovery, Inc.

🔥 Trending searches on Wiki ಕನ್ನಡ:

ನಡುಕಟ್ಟುಮೂರನೇ ಮೈಸೂರು ಯುದ್ಧಹಸಿರುಮನೆ ಪರಿಣಾಮಕುಕ್ಕೆ ಸುಬ್ರಹ್ಮಣ್ಯ ದೇವಾಲಯಗೌತಮಿಪುತ್ರ ಶಾತಕರ್ಣಿರಜಪೂತಮೈಸೂರುವಚನಕಾರರ ಅಂಕಿತ ನಾಮಗಳುಸೌರಮಂಡಲಶಿವಮಾಧ್ಯಮಕಾನೂನುಭಂಗ ಚಳವಳಿಇರುವುದೊಂದೇ ಭೂಮಿಎಚ್.ಎಸ್.ವೆಂಕಟೇಶಮೂರ್ತಿಎಸ್. ಬಂಗಾರಪ್ಪವೀರಗಾಸೆಚಿಪ್ಕೊ ಚಳುವಳಿಮಳೆಗಾಲದೊಡ್ಡರಂಗೇಗೌಡಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಸಾವಿತ್ರಿಬಾಯಿ ಫುಲೆಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಮೂಲಸೌಕರ್ಯಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಅರ್ಜುನಬಾಬು ಜಗಜೀವನ ರಾಮ್ತಿಂಥಿಣಿ ಮೌನೇಶ್ವರಹೆಚ್.ಡಿ.ದೇವೇಗೌಡಕೇಂದ್ರ ಸಾಹಿತ್ಯ ಅಕಾಡೆಮಿದ್ವಿಗು ಸಮಾಸರುಮಾಲುಬೆಳವಡಿ ಮಲ್ಲಮ್ಮಅವ್ಯಯಜಯಮಾಲಾಕೇಂದ್ರ ಪಟ್ಟಿಐತಿಹಾಸಿಕ ನಾಟಕಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳುಜೋಡು ನುಡಿಗಟ್ಟುಭಾರತದಲ್ಲಿ ತುರ್ತು ಪರಿಸ್ಥಿತಿದ.ರಾ.ಬೇಂದ್ರೆಆದೇಶ ಸಂಧಿಅಕ್ಷಾಂಶ ಮತ್ತು ರೇಖಾಂಶಭರತ-ಬಾಹುಬಲಿರಾಜ್ಯಪಾಲಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಪಂಪ ಪ್ರಶಸ್ತಿಉಡಕನ್ನಡ ರಾಜ್ಯೋತ್ಸವಚಕ್ರವರ್ತಿ ಸೂಲಿಬೆಲೆಹುಲಿಆಗಮ ಸಂಧಿಸ್ವಚ್ಛ ಭಾರತ ಅಭಿಯಾನಕಿತ್ತೂರು ಚೆನ್ನಮ್ಮರಾಜ್ಯಸಭೆತತ್ಸಮ-ತದ್ಭವಪಿತ್ತಕೋಶಭ್ರಷ್ಟಾಚಾರಐಹೊಳೆಫುಟ್ ಬಾಲ್ಕನ್ನಡದಲ್ಲಿ ಪ್ರವಾಸ ಸಾಹಿತ್ಯರವಿ ಡಿ. ಚನ್ನಣ್ಣನವರ್ಜವಾಹರ‌ಲಾಲ್ ನೆಹರುನೇಮಿಚಂದ್ರ (ಲೇಖಕಿ)ಕರ್ನಾಟಕ ಪತ್ರಿಕೋದ್ಯಮ ಇತಿಹಾಸಚನ್ನವೀರ ಕಣವಿಬಾರ್ಬಿಆಕೃತಿ ವಿಜ್ಞಾನಹಂಸಲೇಖದ್ರವ್ಯ ಸ್ಥಿತಿಏಡ್ಸ್ ರೋಗಕನ್ನಡ ಸಾಹಿತ್ಯ ಪ್ರಕಾರಗಳುಪ್ರಬಂಧ ರಚನೆಜನಪದ ಕಲೆಗಳುಶಿಶುನಾಳ ಶರೀಫರುಬುಡಕಟ್ಟುಬ್ಯಾಬಿಲೋನ್ಭಾರತದಲ್ಲಿ ಬಡತನಎಚ್.ಎಸ್.ಶಿವಪ್ರಕಾಶ್🡆 More