ಕಂಪನಿ ಸಂಘಟಿತ ವ್ಯಾಪಾರಿ ಸಂಸ್ಥೆ

ಒಂದು ಸಂಘಟಿತ ವ್ಯಾಪಾರಿ ಸಂಸ್ಥೆ ಯು ಎರಡು ಅಥವಾ ಅದಕ್ಕಿಂತ ಹೆಚ್ಚು ಸಂಘಟನೆಗಳ ಒಂದು ಸಂಯೋಜನವಾಗಿದೆ, ಈ ಸಂಘಟನೆಗಳು ಸಂಪೂರ್ಣ ವಿಭಿನ್ನ ವ್ಯವಹಾರಗಳಲ್ಲಿ ಒಟ್ಟಿಗೆ ಒಂದು ಸಂಘಟಿತ ರಚನೆಯಾಗಿ ಕಾರ್ಯನಿರ್ವಹಿಸುತ್ತವೆ.

ಇದು ಸಾಮಾನ್ಯವಾಗಿ ಒಂದು ಮಾತೃ ಸಂಸ್ಥೆ ಮತ್ತು ಕೆಲವು (ಅಥವಾ ಅನೇಕ) ಅಂಗಸಂಸ್ಥೆಗಳನ್ನು ಒಳಗೊಂಡಿರುತ್ತದೆ. ಹೆಚ್ಚಾಗಿ ಒಂದು ಸಂಘಟಿತ ವ್ಯಾಪಾರಿ ಸಂಸ್ಥೆಯು ವಿವಿದೋದ್ದೇಶ-ಕೈಗಾರಿಕಾ ಕಂಪನಿ ಯಾಗಿರುತ್ತದೆ. ಸಂಘಟಿತ ವ್ಯಾಪಾರಿ ಸಂಸ್ಥೆಗಳು ಹೆಚ್ಚಾಗಿ ದೊಡ್ಡವಾಗಿರುತ್ತವೆ. ಅಲ್ಲದೇ ಬಹುರಾಷ್ಟ್ರೀಯವಾಗಿರುತ್ತವೆ.

ಆಧುನಿಕೀಕರಣ

ಸಂಘಟಿತ ವ್ಯಾಪಾರಿ ಸಂಸ್ಥೆಗಳು 1960ರ ಸಂದರ್ಭದಲ್ಲಿ ಕನಿಷ್ಠ ಬಡ್ಡಿ ದರ(ಗಳು) ಮತ್ತು ಪುನರಾವರ್ತಿಸುವ ಬೆಲೆ ತಗ್ಗಿಸುವ/ತೇಜಿ(ಬೆಲೆಯೇರುತ್ತಿರುವ) ಮಾರುಕಟ್ಟೆಯ ಸಂಯೋಗದಿಂದಾಗಿ ಜನಪ್ರಿಯವಾಗಿದ್ದವು. ಅದು ಸಂಘಟಿತ ವ್ಯಾಪಾರಿ ಸಂಸ್ಥೆಗಳಿಗೆ ಕಂಪನಿಗಳನ್ನು ನಿಯಂತ್ರಿತ ಕ್ರಯದಲ್ಲಿ, ಕೆಲವೊಮ್ಮೆ ತಾತ್ಕಾಲಿಕವಾಗಿ ಹಣದುಬ್ಬರ ತಗ್ಗಿಸುವ ಮೌಲ್ಯದಲ್ಲಿ ಖರೀದಿಸುವಂತೆ ಮಾಡಿತು. 1960ರ ಪ್ರಸಿದ್ಧ ಉದಾಹರಣೆಗಳೆಂದರೆ - ಲಿಂಗ್-ಟೆಮ್ಕೊ-ವೋಟ್, ITT ಕಾರ್ಪೊರೇಶನ್, ಲಿಟ್ಟನ್ ಇಂಡಸ್ಟ್ರೀಸ್, ಟೆಕ್ಸ್‌ಟ್ರಾನ್, ಟೆಲಿಡೈನ್, ಗಲ್ಫ್ ಆಂಡ್ ವೆಸ್ಟರ್ನ್ ಇಂಡಸ್ಟ್ರೀಸ್ ಮತ್ತು ಟ್ರಾನ್ಸಮೆರಿಕ. ಉದ್ದೇಶಿತ ಕಂಪನಿಯು ಸಾಲಗಳ ಮೇಲಿನ ಬಡ್ಡಿಗಿಂತ ಹೆಚ್ಚಿನ ಲಾಭಗಳನ್ನು ಹೊಂದಿರುವವರೆಗೆ, ಸಂಘಟಿತ ವ್ಯಾಪಾರಿ ಸಂಸ್ಥೆಯ ಒಟ್ಟು ಬಂಡವಾಳದ ಪ್ರತಿಫಲ (ROI)ವು ಬೆಳೆಯುತ್ತಿರುತ್ತದೆ. ಅಲ್ಲದೆ, ಸಣ್ಣ ಸಂಸ್ಥೆಗಳು ಅವುಗಳ ಸಮುದಾಯ ಬ್ಯಾಂಕಿನಿಂದ ಸಾಲವನ್ನು ಪಡೆಯುವ ಸಾಮರ್ಥ್ಯಕ್ಕಿಂತ, ಸಂಘಟಿತ ವ್ಯಾಪಾರಿ ಸಂಸ್ಥೆಯು ಹಣದ ಮಾರುಕಟ್ಟೆಯಲ್ಲಿ ಅಥವಾ ಬಂಡವಾಳ ಮಾರುಕಟ್ಟೆಯಲ್ಲಿ ಸಾಲವನ್ನು ಪಡೆಯುವ ಉತ್ತಮ ಸಾಮರ್ಥ್ಯ ಹೊಂದಿರುತ್ತವೆ.

ಕಂಪನಿಗಳು ಅವುಗಳ ROI ಗೆ ಹೆಚ್ಚು ಮಹತ್ವ ಕೊಡುತ್ತಿದ್ದುದರಿಂದ, ಅನೇಕ ವರ್ಷಗಳವರೆಗೆ ಕಂಪನಿಯ ಷೇರು ದರವನ್ನು ಹೆಚ್ಚಾಗಿರಿಸುವುದು ಸಾಕಾಗಿತ್ತು. ಸಂಘಟಿತ ವ್ಯಾಪಾರಿ ಸಂಸ್ಥೆಗಳ ಉತ್ಸಾಹಿ ಲಕ್ಷಣವೇ ವ್ಯಾಪಾರದಲ್ಲಿ ಪ್ರಬಲ ಮತ್ತು ನಿರೋಧಿಸಲಾಗದ ಪ್ರಭಾವ ಹೊಂದಿರುವ ಹೆಚ್ಚಿನ ಹೂಡಿಕೆದಾರರು ಅವುಗಳ ಷೇರನ್ನು ಖರೀದಿಸುವಂತೆ ಮಾಡುವಂತಿತ್ತು. ಹೆಚ್ಚಿನ ಷೇರು ದರಗಳು ಅವುಗಳ ಷೇರಿನ ಮೌಲ್ಯದ ಆಧಾರದಲ್ಲಿ ಅವುಗಳು ಅಧಿಕ ಸಾಲಗಳನ್ನು ತೆಗೆದುಕೊಳ್ಳುವಂತೆ ಮಾಡಿದವು ಹಾಗೂ ಆ ಮೂಲಕ ಹೆಚ್ಚು ಕಂಪನಿಗಳನ್ನು ಖರೀದಿಸುವಂತೆ ಮಾಡಿದವು. ಇದು ಸರಪಣಿ ಕ್ರಿಯೆಗೆ ಕಾರಣವಾಯಿತು, ಅವುಗಳಿಗೆ ಅತಿ ಶೀಘ್ರವಾಗಿ ಅಭಿವೃದ್ಧಿ ಹೊಂದಲು ಅವಕಾಶ ಮಾಡಿಕೊಟ್ಟಿತು.

ಆದರೂ ಈ ಬೆಳವಣಿಗೆಯು ಸ್ವಲ್ಪ ಭ್ರಾಂತಿಕಾರಕವಾಗಿದೆ. ಹಣದುಬ್ಬರವನ್ನು ಸರಿದೂಗಿಸಲು ಬಡ್ಡಿ ದರಗಳು ಏರಿಕೆಯಾಗಲು ಆರಂಭವಾದಾಗ, ಸಂಘಟಿತ ವ್ಯಾಪಾರಿ ಸಂಸ್ಥೆಗಳ ಲಾಭಗಳು ಇಳಿಕೆ ಕಂಡವು. ಸಂಘಟಿತ ವ್ಯಾಪಾರಿ ಸಂಸ್ಥೆಯ ಕಂಪನಿಗಳು ಹಿಂದೆ ಖರೀದಿಸಿದಷ್ಟು ವೇಗದಲ್ಲಿ ಬೆಳೆಯುತ್ತಿಲ್ಲವೆಂಬುದನ್ನು ಹೂಡಿಕೆದಾರರು ಗಮನಿಸಿದರು. ಕಂಪನಿಯನ್ನು ಖರೀದಿಸುವ ತಾರ್ಕಿಕ ವಿವರಣೆಯು ಒಟ್ಟು ಪರಿಣಾಮವು ಹೆಚ್ಚು ಪ್ರಭಾವ ಉಂಟುಮಾಡುವುದಾಗಿತ್ತು. 1960ರ ಉತ್ತರಾರ್ಧದಲ್ಲಿ ಅವುಗಳು ಮಾರುಕಟ್ಟೆಯಲ್ಲಿ ಕುಸಿತ ಕಂಡವು. ಅಲ್ಲದೇ ಪಾಲುದಾರಿಕೆ ಪ್ರಮಾಣಗಳ ಬೆಲೆ ಇಳಿಸಿ ಮಾರಾಟ ಮಾಡಿದವು. ಕಂಪನಿಗಳ ಮುಂದುವರಿಕೆಗಾಗಿ, ಹೆಚ್ಚಿನ ಸಂಘಟಿತ ವ್ಯಾಪಾರಿ ಸಂಸ್ಥೆಗಳು ಆಗತಾನೆ ಖರೀದಿಸಿದ ಉದ್ಯಮಗಳನ್ನು ತ್ಯಜಿಸುವಂತೆ ಒತ್ತಾಯಕ್ಕೊಳಗಾದವು. ಅಲ್ಲದೇ 1970ರ ಮಧ್ಯದೊಳಗೆ ಹೆಚ್ಚಿನವು (ಶೆಲ್‌ )ಘಟಕಗಳಾದವು.[ಸೂಕ್ತ ಉಲ್ಲೇಖನ ಬೇಕು] ಸಂಘಟಿತ ವ್ಯಾಪಾರಿ ಸಂಸ್ಥೆಯ ವಿಚಿತ್ರ ಲಕ್ಷಣವು ಅನಂತರ ಕಂಪನಿಯ ಆಂತರಿಕ ಸಾಮರ್ಥ್ಯಕ್ಕೆ ಹೆಚ್ಚು ಒತ್ತುಕೊಡುವಂತಹ ಹೊಸ ಚಿಂತನೆಗಳಿಂದ ಸ್ಥಾನಾಂತರವಾದವು.

ಸಂಘಟಿತ ವ್ಯಾಪಾರಿ ಸಂಸ್ಥೆಗಳು ಮೇಲಿನ ಲಿಖಿತ ROI ನ ಕುಶಲ ನಿರ್ವಹಣೆಯ ಬದಲಿಗೆ ಬಂಡವಾಳ ವೈವಿಧ್ಯತೆಯ ನಿಜವಾದ ಬಡ್ಡಿಗಳಿಗಾಗಿ ರೂಪುಗೊಂಡವು. ಈ ನಿಲುವನ್ನು ಹೊಂದಿರುವ ಕಂಪನಿಗಳು ಮಾತ್ರ ಗಳಿಸುತ್ತವೆ ಅಥವಾ ಲಾಭ ಅಥವಾ ದೃಢತೆಯನ್ನು ಹೆಚ್ಚಿಸುತ್ತದೆಂದು ನಂಬುವ ಇತರ ವಿಭಾಗಗಳಲ್ಲಿ ಹೊಸ ಶಾಖೆಗಳನ್ನು ಆರಂಭಿಸುತ್ತವೆ. 1980ರಲ್ಲಿ ಹಣದಿಂದ ಉದ್ದೀಪನಗೊಂಡ ಜನರಲ್ ಎಲೆಕ್ಟ್ರಿಕ್ ಸಹ ಆರ್ಥಿಕ ನೆರವು ಮತ್ತು ಹಣಕಾಸಿನ ಸೇವೆಯನ್ನು ಒದಗಿಸುವುದಕ್ಕಾಗಿ ಸರಿಯಿತು. ಇದು 2005ರಲ್ಲಿ ಆ ಕಂಪನಿಯ ಸುಮಾರು 45%ನಷ್ಟು ಒಟ್ಟು ಗಳಿಕೆಗೆ ಆಧಾರವಾಯಿತು. GE NBC ದೂರದರ್ಶನ ಜಾಲ ಮತ್ತು ಅನೇಕ ಕೇಬಲ್ ಜಾಲ‌ಗಳನ್ನು ಹೊಂದಿರುವ ಪ್ರಮುಖ NBC ಯೂನಿವರ್ಸಲ್‌ ಅನ್ನೂ ಒಳಗೊಂಡಿದೆ. ಕೆಲವು ರೀತಿಯಲ್ಲಿ GE ಯು "ವಿಶಿಷ್ಟ" 1960ರ ಸಂಘಟಿತ ವ್ಯಾಪಾರಿ ಸಂಸ್ಥೆಗೆ ವಿರುದ್ಧವಾಗಿದೆ. ಇದರಲ್ಲಿ ಕಂಪನಿಯು ಹೆಚ್ಚು ಪ್ರಭಾವಯುತವಾಗಿರುವುದಿಲ್ಲ. ಅಲ್ಲದೇ ಬಡ್ಡಿ ದರಗಳು ಏರಿಕೆಯಾದಾಗ ಅವು ಇದನ್ನು ಅವುಗಳ ಪ್ರಯೋಜನಕ್ಕಾಗಿ ಬಳಸುವ ಸಾಮರ್ಥ್ಯವನ್ನು ಹೊಂದಿರುತ್ತವೆ ಏಕೆಂದರೆ ಸಾಲಗಳಿಂದ ಹೊಸ ಸಾಧನವನ್ನು ಕೊಂಡುಕೊಳ್ಳುವುದಕ್ಕಿಂತ GE ಯಿಂದ ಗುತ್ತಿಗೆಗಾಗಿ ತೆಗೆದುಕೊಳ್ಳುವುದು ಕಡಿಮೆ ದುಬಾರಿಯಾಗಿರುತ್ತದೆ. ಯುನೈಟೆಡ್ ಟೆಕ್ನಾಲಜೀಸ್ಅನ್ನೂ ಸಂಘಟಿತ ವ್ಯಾಪಾರಿ ಸಂಸ್ಥೆಯ ಒಂದು ಯಶಸ್ವಿ ಉದಾಹರಣೆಯೆಂದು ಸಾಬೀತುಪಡಿಸಲಾಗಿದೆ.

ಮ್ಯೂಚ್ವಲ್ ಫಂಡ್‌ನ (1976ರಿಂದ ವಿಶೇಷವಾಗಿ ಇಂಡೆಕ್ಸ್ ಫಂಡ್) ಹರಡಿಕೆಯೊಂದಿಗೆ, ಹೂಡಿಕೆದಾರರು ಸಂಘಟಿತ ವ್ಯಾಪಾರಿ ಸಂಸ್ಥೆಯಲ್ಲಿ ಪಾಲುಗಳನ್ನು ಹೊಂದುವುದರ ಬದಲಿಗೆ ಬಂಡವಾಳದಲ್ಲಿ ಸಣ್ಣ ಅನೇಕ ಪ್ರತ್ಯೇಕ ಕಂಪನಿಗಳನ್ನು ಹೊಂದುವ ಮೂಲಕ ಹೆಚ್ಚು ಸುಲಭ ಮತ್ತು ಅಗ್ಗವಾಗಿ ಬಂಡವಾಳ ವೈವಿಧ್ಯತೆಯನ್ನು ಪಡೆಯಬಹುದು.

ಯಶಸ್ವಿ ಸಂಘಟಿತ ವ್ಯಾಪಾರಿ ಸಂಸ್ಥೆಗೆ ಮತ್ತೊಂದು ಉದಾಹರಣೆಯೆಂದರೆ ವಾರೆನ್ ಬಫೆಟ್‌ನ ಬರ್ಕ್‌ಶೈರ್ ಹ್ಯಾಥವೇ. ಇದು ವಿವಿಧ ಉತ್ಪಾದನಾ ಮತ್ತು ಸೇವಾ ವ್ಯವಹಾರಗಳಲ್ಲಿ ಬಂಡವಾಳ ಹೂಡಲು ಅದರ ವಿಮಾ ಅಂಗಸಂಸ್ಥೆಗಳಿಂದ ಹೆಚ್ಚುವರಿ ಬಂಡವಾಳವನ್ನು ಬಳಸುವ ಹಿಡುವಳಿ ಕಂಪನಿಯಾಗಿದೆ.

ಅಂತಾರಾಷ್ಟ್ರೀಯ

ಮೊದಲ ವಿಶ್ವ ಸಮರದ ಕೊನೆಯಲ್ಲಿ ವೈಮರ್ ಜರ್ಮನಿಯಲ್ಲಿ ಪ್ರಮುಖ ಆರ್ಥಿಕ ಬಿಕ್ಕಟ್ಟು ಉಂಟಾಯಿತು. ಇದು ವಾಣಿಜ್ಯೋದ್ಯಮಿಗಳು ಅತ್ಯಂತ ಕಡಿಮೆ ಬೆಲೆಗಳಲ್ಲಿ ವಿವಿಧ ವ್ಯವಹಾರಗಳನ್ನು ಖರೀದಿಸುವಂತೆ ಮಾಡಿತು. ಅತ್ಯಂತ ಯಶಸ್ವಿ ಹ್ಯೂಗೊ ಸ್ಟಿನ್ನೆಸ್ 1920ರಲ್ಲಿ ಯುರೋಪ್‌ನಲ್ಲಿ ಸ್ಟೆನ್ನೆಸ್ ಎಂಟರ್‌ಪ್ರೈಸಸ್ ಎಂಬ ಹೆಚ್ಚು ಪ್ರಬಲ ಖಾಸಗಿ ಆರ್ಥಿಕ ಸಂಘಟಿತ ವ್ಯಾಪಾರಿ ಸಂಸ್ಥೆಯೊಂದನ್ನು ಸ್ಥಾಪಿಸಿತು. ಇದು ತಯಾರಿಕೆ, ಗಣಿಗಾರಿಕೆ, ಹಡಗು-ನಿರ್ಮಾಣ, ಹೋಟೆಲ್‌ಗಳು, ಸುದ್ದಿಪತ್ರಿಕೆಗಳು ಮತ್ತು ಇತರ ಆರ್ಥಿಕ ಎಂಟರ್‌ಪ್ರೈಸ್‌ಗಳ ಗುಂಪು ಮೊದಲಾದ ಭಿನ್ನ ವಿಭಾಗಗಳನ್ನು ಒಳಗೊಂಡಿದೆ.

ಅತ್ಯಂತ ಪ್ರಸಿದ್ಧ ಬ್ರಿಟಿಷ್ ಸಂಘಟಿತ ವ್ಯಾಪಾರಿ ಸಂಸ್ಥೆಯೆಂದರೆ ಹ್ಯಾನ್ಸನ್ plc(ಪಬ್ಲಿಕ್ ಲಿಮಿಟೆಡ್ ಕಂಪನಿ). ಇದು ಮೇಲೆ ಸೂಚಿಸಿದ U.S. ಉದಾಹರಣೆಗಳಿಗಿಂತ ಭಿನ್ನವಾದ ಕಾಲಾವಧಿ ಹೊಂದಿದೆ. ಇದು 1964ರಲ್ಲಿ ಸ್ಥಾಪನೆಯಾಯಿತು. ಅಲ್ಲದೇ 1995ರಿಂದ 1997ರವರೆಗಿನ ಮಧ್ಯಾವಧಿಯಲ್ಲಿ ನಾಲ್ಕು ಪ್ರತ್ಯೇಕ ಕಂಪನಿಗಳಾಗಿ ವಿಭಾಗಿಸಲ್ಪಟ್ಟಾಗ ಸಂಘಟಿತ ವ್ಯಾಪಾರಿ ಸಂಸ್ಥೆಯಾಯಿತು.

ಜಪಾನ್‌ನಲ್ಲಿ ಸಂಘಟಿತ ವ್ಯಾಪಾರಿ ಸಂಸ್ಥೆಯ ಒಂದು ಭಿನ್ನ ಮಾದರಿ (ಕಂಪನಿಗಳ ಸಮೂಹ) ಕೈರೆಟ್ಸು ಹುಟ್ಟಿಕೊಂಡಿತು. ಸಂಘಟಿತ ವ್ಯಾಪಾರಿ ಸಂಸ್ಥೆಯ ಪಾಶ್ಚಿಮಾತ್ಯ ಮಾದರಿಯು ಏಕ ಸಂಘಟನೆಯಿಂದ ನಿಯಂತ್ರಿಸಲ್ಪಡುವ ಬಹು ಅಂಗಸಂಸ್ಥೆಗಳನ್ನು ಒಳಗೊಂಡಿರುತ್ತದೆ. ಕೈರೆಟ್ಸುವಿನ ಕಂಪನಿಗಳು ಪರಸ್ಪರ ಸಂಬಂಧಿತ ಷೇರುಹಿಡುವಳಿಗಳು ಮತ್ತು ಒಂದು ಪ್ರಮುಖ ಪಾತ್ರವಹಿಸುವ ಬ್ಯಾಂಕ್ಅನ್ನು ಹೊಂದಿರುತ್ತವೆ. ಮಿಟ್ಸುಬಿಶಿಯು ಜಪಾನ್‌ನ ಒಂದು ಪ್ರಸಿದ್ಧ ಕೈರೆಟ್ಸುವಾಗಿದೆ. ಇದು ಮೋಟಾರು-ಗಾಡಿಯ ತಯಾರಿಕೆಯಿಂದ ಹಿಡಿದು ದೂರದರ್ಶನದಂತಹ ಎಲೆಕ್ಟ್ರಾನಿಕ್ಸ್ ಉತ್ಪಾದನೆಯವರೆಗೆ ವ್ಯಾಪಿಸಿದೆ.

ದಕ್ಷಿಣ ಕೊರಿಯಾದಲ್ಲಿ ಚೇಬಾಲ್ ಒಂದು ಕುಟುಂಬವು ಹೊಂದಿರುವ ಮತ್ತು ಕಾರ್ಯನಿರ್ವಹಿಸುವ ಒಂದು ಪ್ರಕಾರದ ಸಂಘಟಿತ ವ್ಯಾಪಾರಿ ಸಂಸ್ಥೆಯಾಗಿದೆ. ಚೇಬಾಲ್ ವಂಶಪಾರಂಪರ್ಯವಾಗಿ ಮುಂದುವರಿಯುತ್ತದೆ. ಚೇಬಾಲ್‌ನ ಹೆಚ್ಚಿನ ಪ್ರಸ್ತುತದ ಅಧ್ಯಕ್ಷರು ಆ ಸ್ಥಾನವನ್ನು ಅವರ ತಂದೆ ಅಥವಾ ತಾತಂದಿರಿಂದ ವಂಶಾನುಕ್ರಮದಿಂದ ಪಡೆದಿದ್ದಾರೆ. ಕೆಲವು ಪ್ರಸಿದ್ಧ ಕೊರಿಯನ್ ಚೇಬಾಲ್‌ಗಳೆಂದರೆ ಸ್ಯಾಮ್‌ಸಂಗ್, LG ಮತ್ತು ಹೈಯುಂಡೈ ಕಿಯಾ ಆಟೊಮೋಟಿವ್ ಗ್ರೂಪ್.

ಭಾರತದ ಲೈಸೆನ್ಸ್ ರಾಜ್ ಯುಗವು (1947–1990) ಏಷ್ಯಾದ ಕೆಲವು ಅತಿದೊಡ್ಡ ಸಂಘಟಿತ ವ್ಯಾಪಾರಿ ಸಂಸ್ಥೆಗಳನ್ನು ರಚಿಸಿತು, ಅವುಗಳೆಂದರೆ - ಟಾಟಾ ಗ್ರೂಪ್, ಕಿರ್ಲೋಸ್ಕರ್ ಗ್ರೂಪ್, ಎಸ್ಸಾರ್ ಗ್ರೂಪ್, ರಿಲಯನ್ಸ್ ADA ಗ್ರೂಪ್, ರಿಲಯನ್ಸ್ ಇಂಡಸ್ಟ್ರೀಸ್, ಆದಿತ್ಯ ಬಿರ್ಲಾ ಗ್ರೂಪ್ ಮತ್ತು ಭಾರತಿ ಎಂಟರ್‌ಪ್ರೈಸಸ್.

ಪ್ರಯೋಜನಗಳು

  • ಬಂಡವಾಳದ ವೈವಿಧ್ಯತೆಯು ಹೂಡಿಕೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಉದಾಹರಣೆಗಾಗಿ, ಒಂದು ಅಂಗಸಂಸ್ಥೆಯಿಂದ ಉಂಟಾಗುವ ಇಳಿಮುಖವು ಮತ್ತೊಂದು ವಿಭಾಗದಲ್ಲಿನ ದೃಢತೆ ಅಥವಾ ವಿಸ್ತರಣೆಯಿಂದಾಗಿ ಸಮತೋಲನಗೊಳ್ಳುತ್ತದೆ. ಬರ್ಕ್‍‌ಶೈರ್ ಹ್ಯಾಥವೇಯ ನಿರ್ಮಾಣ ವ್ಯವಹಾರವು ಒಂದು ನಷ್ಟದ ವರ್ಷವನ್ನು ಅನುಭವಿಸಿದರೆ, ಆ ನಷ್ಟವು ಅದರ ವಿಮಾ ವ್ಯವಹಾರದಲ್ಲಿನ ಲಾಭದ ವರ್ಷದಿಂದ ಸರಿದೂಗುತ್ತದೆ. ವ್ಯವಹಾರ ಚಕ್ರವು ಉದ್ಯಮಗಳ ಮೇಲೆ ವಿವಿಧ ರೀತಿಗಳಲ್ಲಿ ಪ್ರಭಾವ ಬೀರುತ್ತದೆ ಎಂಬ ಅಂಶದಿಂದ ಈ ಪ್ರಯೋಜನವು ವರ್ಧಿಸುತ್ತದೆ.
  • ಹೊರಗಿನ ಬಂಡವಾಳ ಮಾರುಕಟ್ಟೆಯು ಸಾಕಷ್ಟು ಅಭಿವೃದ್ಧಿಯಾಗಿರದಿದ್ದರೆ ಸಂಘಟಿತ ವ್ಯಾಪಾರಿ ಸಂಸ್ಥೆಯು ಆಂತರಿಕ ಬಂಡವಾಳ ಮಾರುಕಟ್ಟೆಯನ್ನು ರಚಿಸುತ್ತದೆ. ಆಂತರಿಕ ಮಾರುಕಟ್ಟೆಯ ಮೂಲಕ, ಸಂಘಟಿತ ವ್ಯಾಪಾರಿ ಸಂಸ್ಥೆಯ ವಿವಿಧ ವಿಭಾಗಗಳು ಬಂಡವಾಳವನ್ನು ಹೆಚ್ಚು ಪರಿಣಾಮಕಾರಿಯಾಗಿರಿಸುತ್ತವೆ.
  • ಸಂಘಟಿತ ವ್ಯಾಪಾರಿ ಸಂಸ್ಥೆಯು ಅದರ ಸ್ವಂತಕ್ಕಿಂತ ಹೆಚ್ಚು ರಿಯಾಯಿತಿ ದರದಲ್ಲಿ ಷೇರುಗಳನ್ನು ಮಾರಾಟಮಾಡುವ ಕಂಪನಿಗಳನ್ನು ಹೊಂದುವ ಮೂಲಕ ಗಳಿಕೆಯನ್ನು ಹೆಚ್ಚಿಸಬಹುದು. ಟೆಲಿಡೈನ್, GE ಮತ್ತು ಬರ್ಕ್‌ಶೈರ್ ಹ್ಯಾಥವೇ ಮೊದಲಾದವು ಸ್ವಲ್ಪ ಕಾಲ ಗಳಿಕೆಯಲ್ಲಿ ಹೆಚ್ಚಿನ ಬೆಳವಣಿಗೆಯನ್ನು ಕಂಡವು.

ಅನನುಕೂಲಗಳು

  • ಒಟ್ಟು ಪರಿಣಾಮವು ಭ್ರಾಂತಿಕಾರಕವಾಗಿರುತ್ತದೆ.
  • ನಿರ್ವಹಣೆಯ ಹೆಚ್ಚುವರಿ ವಲಯಗಳು ಖರ್ಚಗಳನ್ನು ಅಧಿಕಗೊಳಿಸುತ್ತವೆ.
  • ಲೆಕ್ಕದ ಬಹಿರಂಗಪಡಿಸುವಿಕೆಯು ಕಡಿಮೆ ಪ್ರಯೋಜನಕಾರಿ ಮಾಹಿತಿಯಾಗಿರುತ್ತದೆ. ಪ್ರತಿಯೊಂದು ವ್ಯವಹಾರದಲ್ಲಿ ಹೆಚ್ಚಿನ ಸಂಖ್ಯೆಗಳನ್ನು ಪ್ರತ್ಯೇಕವಾಗಿ ಬಹಿರಂಗ ಪಡಿಸುವ ಬದಲಿಗೆ ಗುಂಪಾಗಿ ಪ್ರಕಟಗೊಳಿಸಲಾಗುತ್ತದೆ. ಸಂಘಟಿತ ವ್ಯಾಪಾರಿ ಸಂಸ್ಥೆಯ ಲೆಕ್ಕಗಳ ಸಂಕೀರ್ಣತೆಯು ಅವನ್ನು ವಿಶ್ಲೇಷಿಸಲು ವ್ಯವಸ್ಥಾಪಕರಿಗೆ, ಹೂಡಿಕೆದಾರರಿಗೆ ಮತ್ತು ನಿಯಂತ್ರಕರಿಗೆ ಕಷ್ಟಗೊಳಿಸುತ್ತದೆ ಹಾಗೂ ವಸ್ತುಗಳನ್ನು ಅಡಗಿಸಿಡುವುದನ್ನು ನಿರ್ವಹಿಸಲು ಸುಲಭಗೊಳಿಸುತ್ತದೆ.
  • ಸಂಘಟಿತ ವ್ಯಾಪಾರಿ ಸಂಸ್ಥೆಗಳು ಅವುಗಳ ವ್ಯವಹಾರದ ಒಟ್ಟು ವೈಯಕ್ತಿಕ ಮೌಲ್ಯಕ್ಕೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಬಹುದು ಏಕೆಂದರೆ ಹೂಡಿಕೆದಾರರು ಬಹು ಷೇರುಗಳನ್ನು ಖರೀದಿಸುವ ಮೂಲಕ ಸ್ವಂತ ಬಂಡವಾಳ ವೈವಿಧ್ಯತೆ ಹೊಂದಬಹುದು. ಅದರ ವಿಭಾಗಗಳ ಮೊತ್ತಕ್ಕಿಂತ ಒಟ್ಟು ಕಡಿಮೆ ಮೌಲ್ಯವುಳ್ಳದ್ದಾಗಿರುತ್ತದೆ.
  • ಸಂಸ್ಕೃತಿ ಸಂಘರ್ಷಗಳು ಮೌಲ್ಯವನ್ನು ನಾಶಮಾಡಬಹುದು.
  • ಜಡತ್ವವು ಹೊಸತನದ ಅಭಿವೃದ್ಧಿಯನ್ನು ತಡೆಯುತ್ತದೆ.
  • ಗಮನದ ಕೊರತೆ ಮತ್ತು ಅಸಂಬಂಧಿತ ವ್ಯವಹಾರಗಳನ್ನು ನಿರ್ವಹಿಸುವ ಅಸಮರ್ಥತೆ.

ಈ ಅನನುಕೂಲತೆಗಳಿಂದಾಗಿ ಸಂಘಟಿತ ವ್ಯಾಪಾರಿ ಸಂಸ್ಥೆಯ ಷೇರಿನ ದರ ಇಳಿಮುಖವಾಗುತ್ತದೆ. (ಇದನ್ನು ಸಂಘಟಿತ ವ್ಯಾಪಾರಿ ಸಂಸ್ಥೆಯ ರಿಯಾಯಿತಿ ಎಂದು ಕರೆಯಲಾಗುತ್ತದೆ) ಎಂದು ಕೆಲವರು ಉಲ್ಲೇಖಿಸುತ್ತಾರೆ. ಅಲ್ಲದೇ ಕೆಲವು ವ್ಯಾಪಾರಿಗಳು, ಇದು ಮಾರುಕಟ್ಟೆ ಪರಿಣಾಮಕಾರಿಯಾಗಿಲ್ಲವೆಂದು ಹಾಗೂ ಈ ಷೇರುಗಳ ನಿಜವಾದ ಸಾಮರ್ಥ್ಯವನ್ನು ಕಡಿಮೆಮಾಡುತ್ತದೆ ಎಂದೂ ನಂಬುತ್ತಾರೆ.

ಮಾಧ್ಯಮ ಸಂಘಟಿತ ವ್ಯಾಪಾರಿ ಸಂಸ್ಥೆಗಳು

1999ರ ಪುಸ್ತಕ ನೊ ಲೋಗೊ ದಲ್ಲಿ ನವೋಮಿ ಕ್ಲೈನ್, ಒಟ್ಟು ಪರಿಣಾಮಗಳನ್ನು ಉಂಟುಮಾಡುವ ಕಾರಣಕ್ಕಾಗಿ ಸಂಘಟಿತ ವ್ಯಾಪಾರಿ ಸಂಸ್ಥೆ ಗಳನ್ನು ರಚಿಸಲು ವಿನ್ಯಾಸಗೊಳಿಸಿದ ಮಾಧ್ಯಮ ಕಂಪನಿಗಳ ನಡುವಿನ ಒಕ್ಕೂಟಗಳು ಮತ್ತು ಗಳಿಕೆಗಳ ಅನೇಕ ಉದಾಹರಣೆಗಳನ್ನು ಒದಗಿಸುತ್ತಾಳೆ:

  • ಟೈಮ್ ವಾರ್ನರ್ - ಇಂಟರ್ನೆಟ್ ಪ್ರವೇಶ ಮತ್ತು ಮಾಹಿತಿ, ಚಲನಚಿತ್ರ ಹಾಗೂ ಕೇಬಲ್ ವ್ಯವಸ್ಥೆಗಳು ಮತ್ತು ದೂರದರ್ಶನವನ್ನೂ ಒಳಗೊಂಡಂತೆ ಸೂಕ್ಷ್ಮ ಸಂಬಂಧ ಹೊಂದಿದ ವ್ಯವಹಾರಗಳ ಸರಣಿಯನ್ನು ಒಳಗೊಳ್ಳುತ್ತದೆ. ಅವುಗಳ ಆಸ್ತಿಗಳ ವೈವಿಧ್ಯಮಯ ಬಂಡವಾಳಗಳ ಪಟ್ಟಿಯು ಪ್ರತಿ-ಪ್ರವರ್ತನೆ ಮತ್ತು ಪ್ರಮಾಣಾನುಗುಣವಾದ ಉಳಿತಾಯಕ್ಕೆ ಅವಕಾಶ ಮಾಡಿಕೊಡುತ್ತದೆ.
  • ಕ್ಲಿಯರ್ ಚಾನೆಲ್ ಕಮ್ಯೂನಿಕೇಶನ್ಸ್ - ಒಂದು ಉಲ್ಲೇಖಿತ ಕಂಪನಿಯಾದ ಇದು ವಿಭಿನ್ನ TV ಮತ್ತು ರೇಡಿಯೊ ಕೇಂದ್ರಗಳು ಹಾಗೂ ಬಿಲ್‌ಬೋರ್ಡ್ ಕಾರ್ಯಾಚರಣೆಗಳನ್ನು ಹೊಂದಿದೆ. ಇದರೊಂದಿಗೆ U.S.ಯಾದ್ಯಂತ ಅನೇಕ ಸಂಗೀತ ಕಛೇರಿ ಸ್ಥಳಗಳು ಹಾಗೂ UK ಮತ್ತು ಪ್ರಪಂಚದ ಇತರ ರಾಷ್ಟ್ರಗಳಲ್ಲಿ ಆಸ್ತಿಗಳ ವೈವಿಧ್ಯಮಯ ಬಂಡವಾಳಗಳ ಪಟ್ಟಿಯನ್ನೂ ಒಳಗೊಂಡಿದೆ. ಈ ಒಂದು ಸಂಸ್ಥೆಯಲ್ಲಿನ ಪರಸ್ಪರ ಪ್ರಭಾವ ಬೀರುವ ಸಾಮರ್ಥ್ಯದ ಮೇಲಿನ ಹೆಚ್ಚಿನ ಗಮನವು ಅದರ ಎಲ್ಲಾ ವ್ಯವಹಾರ ಘಟಕಗಳಿಗೆ ಉತ್ತಮ ಒಪ್ಪಂದಗಳನ್ನು ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಉದಾಹರಣೆಗಾಗಿ, ಅದರ ರೇಡಿಯೊ ಕೇಂದ್ರಗಳಲ್ಲಿ ಪ್ರಸಾರದ-ಪಟ್ಟಿಯನ್ನು ಮಾಡುವ(ಪ್ಲೇಲಿಸ್ಟಿಂಗ್) ಭರವಸೆಯನ್ನು ನೀಡುವ ಮೂಲಕ (ಕೆಲವೊಮ್ಮೆ ಬ್ಲ್ಯಾಕ್‌ಲಿಸ್ಟ್ ಮಾಡುವ ಬೆದರಿಕೆಯೊಂದಿಗೆ ಸಂಯೋಜಿತವಾಗುತ್ತಿತ್ತು), ಮನರಂಜನಾ ವಿಭಾಗದಲ್ಲಿ ಆಯೋಜಿಸಲಾಗುವ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡುವ ಕಲಾವಿದರೊಂದಿಗೆ ಉತ್ತಮ ಸುಭದ್ರ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತಿತ್ತು. ಈ ನಿಯಮಗಳು ಯುಕ್ತವಾಗಿಲ್ಲವೆಂದು ಮತ್ತು ಏಕಸ್ವಾಮ್ಯವನ್ನು ಸಮರ್ಥಿಸುತ್ತವೆಂದು ಖಂಡಿಸಲಾಯಿತು. ಆದರೆ ಅವು ಸಂಘಟಿತ ವ್ಯಾಪಾರಿ ಸಂಸ್ಥೆಯ ಕಾರ್ಯವಿಧಾನದ ಒಂದು ಸ್ಪಷ್ಟವಾದ ಪ್ರಯೋಜನವಾಗಿವೆ. 2005ರ ಡಿಸೆಂಬರ್ 21ರಂದು ಕ್ಲಿಯರ್ ಚಾನೆಲ್ ಲೈವ್ ನೇಶನ್‌ನ ಮಾರಾಟವನ್ನು ಪೂರ್ಣಗೊಳಿಸಿತು.ಅಲ್ಲದೇ 2007ರಲ್ಲಿ ಕಂಪನಿಯು ಅದರ ದೂರದರ್ಶನ ಕೇಂದ್ರಗಳನ್ನು ಇತರ ಕಂಪನಿಗಳಿಗೆ ಮಾರಾಟ ಮಾಡಿತು, ಅವುಗಳಲ್ಲಿ ಕೆಲವುದರ ಮೇಲೆ ಕ್ಲಿಯರ್ ಚಾನೆಲ್ ಕಡಿಮೆ ಆಸಕ್ತಿಯನ್ನು ಹೊಂದಿತ್ತು. ಲೈವ್ ನೇಷನ್ ಹಿಂದೆ ಕ್ಲಿಯರ್ ಚಾನೆಲ್ ಕಮ್ಯೂನಿಕೇಶನ್ಸ್ ಹೊಂದಿದ್ದ ಕಾರ್ಯಕ್ರಮಗಳು ಮತ್ತು ಸಂಗೀತ ಕಛೇರಿ ಜಾಗಗಳನ್ನು ಹೊಂದಿದೆ.

ಆಹಾರ ಸಂಘಟಿತ ವ್ಯಾಪಾರಿ ಸಂಸ್ಥೆಗಳು

ಇತರ ಉದ್ಯಮಗಳಂತೆ ಸಂಘಟಿತ ವ್ಯಾಪಾರಿ ಸಂಸ್ಥೆಗಳೆಂದು ಹೇಳಬಹುದಾದ ಅನೇಕ ಕಂಪನಿಗಳಿವೆ.

  • ಫಿಲಿಪ್ ಮೋರಿಸ್ ಗ್ರೂಪ್ — ಇದು ಒಮ್ಮೆ ಆಲ್ಟ್ರಿಯಾ ಗ್ರೂಪ್‌, ಫಿಲಿಪ್ ಇಂಟರ್‌ನ್ಯಾಷನಲ್ ಮತ್ತು ಕ್ರಾಫ್ಟ್ ಫುಡ್ಸ್‌ಗೆ ಮಾತೃ ಸಂಸ್ಥೆಯಾಗಿತ್ತು. ಇದರ ಒಟ್ಟು ವಾರ್ಷಿಕ ವರಮಾನವು $80 bn ನಷ್ಟಿತ್ತು.

ಇವನ್ನೂ ಗಮನಿಸಿ

  • ಸಂಘಟಿತ ವ್ಯಾಪಾರಿ ಸಂಸ್ಥೆಗಳ ಪಟ್ಟಿ
  • ಮಾಧ್ಯಮ ಸಂಘಟಿತ ವ್ಯಾಪಾರಿ ಸಂಸ್ಥೆ
  • ಹಿಡುವಳಿ ಸಂಸ್ಥೆ
  • ಅಂಗಸಂಸ್ಥೆ
  • ಸಂಘಟಿತ ಸಂಸ್ಥೆ
  • ಚೇಬಾಲ್
  • ಕೈರೆಟ್ಸು
  • ಜೈಬೆಟ್ಸು
  • ವಾಣಿಜ್ಯ ಸಂಸ್ಥೆ (ವ್ಯವಹಾರ)

ಟಿಪ್ಪಣಿಗಳು

ಬಾಹ್ಯ ಕೊಂಡಿಗಳು

Tags:

ಕಂಪನಿ ಸಂಘಟಿತ ವ್ಯಾಪಾರಿ ಸಂಸ್ಥೆ ಆಧುನಿಕೀಕರಣಕಂಪನಿ ಸಂಘಟಿತ ವ್ಯಾಪಾರಿ ಸಂಸ್ಥೆ ಅಂತಾರಾಷ್ಟ್ರೀಯಕಂಪನಿ ಸಂಘಟಿತ ವ್ಯಾಪಾರಿ ಸಂಸ್ಥೆ ಪ್ರಯೋಜನಗಳುಕಂಪನಿ ಸಂಘಟಿತ ವ್ಯಾಪಾರಿ ಸಂಸ್ಥೆ ಅನನುಕೂಲಗಳುಕಂಪನಿ ಸಂಘಟಿತ ವ್ಯಾಪಾರಿ ಸಂಸ್ಥೆ ಮಾಧ್ಯಮ ಸಂಘಟಿತ ವ್ಯಾಪಾರಿ ಸಂಸ್ಥೆಗಳುಕಂಪನಿ ಸಂಘಟಿತ ವ್ಯಾಪಾರಿ ಸಂಸ್ಥೆ ಆಹಾರ ಸಂಘಟಿತ ವ್ಯಾಪಾರಿ ಸಂಸ್ಥೆಗಳುಕಂಪನಿ ಸಂಘಟಿತ ವ್ಯಾಪಾರಿ ಸಂಸ್ಥೆ ಇವನ್ನೂ ಗಮನಿಸಿಕಂಪನಿ ಸಂಘಟಿತ ವ್ಯಾಪಾರಿ ಸಂಸ್ಥೆ ಟಿಪ್ಪಣಿಗಳುಕಂಪನಿ ಸಂಘಟಿತ ವ್ಯಾಪಾರಿ ಸಂಸ್ಥೆ ಬಾಹ್ಯ ಕೊಂಡಿಗಳುಕಂಪನಿ ಸಂಘಟಿತ ವ್ಯಾಪಾರಿ ಸಂಸ್ಥೆಅಂಗಸಂಸ್ಥೆಸಂಘಟನೆ

🔥 Trending searches on Wiki ಕನ್ನಡ:

ಮೂಲಧಾತುಹೋಳಿಕರ್ನಾಟಕದ ತಾಲೂಕುಗಳುಕನ್ನಡದಲ್ಲಿ ವಚನ ಸಾಹಿತ್ಯಜೈನ ಧರ್ಮಸಾರ್ವಜನಿಕ ಆಡಳಿತಅಂಬರೀಶ್ಅಂತರ್ಜಾಲ ಆಧಾರಿತ ಕರೆ ಪ್ರೋಟೋಕಾಲ್‌ದ್ವಿರುಕ್ತಿವ್ಯವಸಾಯಪಕ್ಷಿವೃತ್ತಪತ್ರಿಕೆಭೂಶಾಖದ ಶಕ್ತಿಟೊಮೇಟೊಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಅಲ್ಲಮ ಪ್ರಭುನೀನಾದೆ ನಾ (ಕನ್ನಡ ಧಾರಾವಾಹಿ)ಲಕ್ಷ್ಮೀಶಬಿ.ಎಫ್. ಸ್ಕಿನ್ನರ್ಉದ್ಯಮಿಕರ್ಬೂಜಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಕರ್ನಾಟಕ ರತ್ನತತ್ಸಮ-ತದ್ಭವಭಾರತೀಯ ಕಾವ್ಯ ಮೀಮಾಂಸೆಪರಿಸರ ವ್ಯವಸ್ಥೆಕ್ರಿಕೆಟ್‌ ಪರಿಭಾಷೆಸಜ್ಜೆಕವನಹಣಹನುಮಾನ್ ಚಾಲೀಸಸೌರಮಂಡಲದ್ವೈತಯಶ್(ನಟ)ಭಾರತೀಯ ನದಿಗಳ ಪಟ್ಟಿದ್ರಾವಿಡ ಭಾಷೆಗಳುಕರ್ತವ್ಯಭಗವದ್ಗೀತೆಮಹಾಭಾರತಜಿ.ಪಿ.ರಾಜರತ್ನಂಏಡ್ಸ್ ರೋಗಅಗ್ನಿ(ಹಿಂದೂ ದೇವತೆ)ರಾಮಕೃಷ್ಣ ಪರಮಹಂಸಮೊದಲನೇ ಕೃಷ್ಣವಿಜಯದಾಸರುಸುಮಲತಾಹರಿದಾಸಸತಿಬಹಮನಿ ಸುಲ್ತಾನರುಹಿಂದೂ ಮಾಸಗಳುವಿಭಕ್ತಿ ಪ್ರತ್ಯಯಗಳುಭಾರತದಲ್ಲಿ ತುರ್ತು ಪರಿಸ್ಥಿತಿಭಾರತದ ರಾಜಕೀಯ ಪಕ್ಷಗಳುಅಜಿಮ್ ಪ್ರೇಮ್‍ಜಿದಿ ಡೋರ್ಸ್‌ಪ್ರಬಂಧ ರಚನೆಹೊಯ್ಸಳಬುಧಷೇರು ಮಾರುಕಟ್ಟೆಔರಂಗಜೇಬ್ವರ್ಣಕೋಶ(ಕ್ರೋಮಟೊಫೋರ್)ಮೆಂತೆಭಾರತಗರ್ಭಪಾತಜಾಹೀರಾತುಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಜೀವನದುಂಬಿಆತ್ಮಚರಿತ್ರೆಸ್ವರಭಾರತೀಯ ಧರ್ಮಗಳುಚದುರಂಗ (ಆಟ)ಬ್ರಾಹ್ಮಣನಯಾಗರ ಜಲಪಾತ🡆 More