ವೇಮನ: ತೆಲುಗು ಕವಿ

ವೇಮನ ೧೫ನೆಯ ಶತಮಾನದಲ್ಲಿ ಆಂಧ್ರಪ್ರದೇಶದ ತೆಲುಗಿನ ಶ್ರೇಷ್ಠ ವಚನಕಾರ, ಕವಿ ಸಮಾಜ ಚಿಂತಕರು; ಮಾನವ ಕುಲದ ಏಳಿಗೆಗಾಗಿ ಶ್ರಮಿಸಿದರು.

ಕನ್ನಡದಲ್ಲಿ ಸರ್ವಜ್ಞ, ತಮಿಳಿನ ತಿರುವಳ್ಳುವರ್ ಅವರಂತೆ ತೆಲುಗಿಗೆ ವೇಮನ ವಚನಕಾರರು, ಮಾಹಾಕವಿ ಮಹಾಯೋಗಿಯಾಗಿದ್ದಾರೆ.ವೇಮನರ ಕೃತಿಗಳು ಇತಿಹಾಸದಲ್ಲಿ "ವೇಮನ ಶತಕಲು" ಎನ್ನುವರು

ಜನನ

ವೇಮನ ಕ್ರಿ.ಶ. 1421ರಲ್ಲಿ ಆಂಧ್ರಪ್ರದೇಶದ ಮೂಗಚಿಪಲ್ಲಿಯ ಕೋಮಗಿರಿ ವೇಮ ಭೂಪಾಲ ಮತ್ತು ಮಲ್ಲಮಾಂಬೆ ಎಂಬ ದಂಪತಿಗಳ ಮಗನಾಗಿ ಜನಿಸಿದನು.

ವೈರಾಗ್ಯ

ವೇಮನ ಹೆತ್ತವರಿಂದ, ಒಡಹುಟ್ಟಿದವರಿಂದ, ಸಂಬಂಧಿಕರಿಂದ ಅನಾದಾರಕ್ಕೆ ಗುರಿಯಾಗಿ ದುಶ್ಚಟಗಳ ದಾಸನಾಗುತ್ತಾನೆ. ಪರಸ್ತ್ರೀ ಸಂಗದಲ್ಲಿ ವಿಷಯಾಸಕ್ತನಾದ ವೇಮನ ಭೋಗಾಸಕ್ತನಾಗುತ್ತಾನೆ. ವೇಶ್ಯಾಸ್ತ್ರೀಯೊಬ್ಬಳ ಸಹವಾಸ ಮಾಡಿ, ಮನೆಯ ಸಂಪತ್ತನ್ನೆಲ್ಲಾ ಹಾಳುಗೆಡವುತ್ತಾನೆ. ವೇಮನನಿಗೆ ಅತ್ತಿಗೆಯಾಗಿ ಬಂದ ಹೇಮರೆಡ್ಡಿ ಮಲ್ಲಮ್ಮ ಮೈದುನನ ಮನ ತಿದ್ದುವಲ್ಲಿ ಪ್ರಯತ್ನಿಸಿ ಸಫಲಳಾಗುತ್ತಾಳೆ. ದುಶ್ಚಟಗಳ ದಾಸನಾದ ವೇಮನ ವೇಶ್ಯಾಸ್ತ್ರೀಯೊಬ್ಬಳ ಮನದಾಸೆ ಈಡೇರಿಸಲು, ಅತ್ತಿಗೆಯಾಗಿದ್ದ ಹೇಮರೆಡ್ಡಿ ಮಲ್ಲಮ್ಮನ ಮೂಗುತಿಯನ್ನು ಬೇಕೆಂದು ಕೇಳುತ್ತಾನೆ. ಹೇಮರೆಡ್ಡಿ ಮಲ್ಲಮ್ಮ ಮೈದುನನಾದ ವೇಮನನಿಗೆ ಮೂಗುತಿ ಕೊಡಲು ಒಪ್ಪಿ ಕರಾರೊಂದನ್ನು ವಿಧಿಸುತ್ತಾಳೆ. "ವೇಮನ ಹೇಮರೆಡ್ಡಿ ಮಲ್ಲಮ್ಮನ ಮೂಗುತಿಯನ್ನು ಆ ವೇಶ್ಯಾಸ್ತ್ರೀಗೆ ಕೊಡುವಾಗ, ಆಕೆ ನಗ್ನಳಾಗಿ ಬಂದು ವೇಮನ ಕುಳಿತದ್ದ ಮಂಚವನ್ನು ಮೂರು ಸುತ್ತು ಸುತ್ತಬೇಕು. ಮೂರು ಸುತ್ತು ಹಾಕಿದ ನಂತರ ಹಿಂಬದಿಗೆ ಬಾಗಿ, ಎರಡು ಕಾಲುಗಳ ನಡುವೆ ಬಗ್ಗಿ ಕೈ ಚಾಚಿ ವೇಮನನಿಂದ ಮೂಗುತಿಯನ್ನು ಪಡೆಯಬೇಕು. ಅವಳು ಆ ಮೂಗುತಿಯನ್ನು ಪಡೆಯುವವರೆಗೂ ವೇಮನ ಆಕೆಯ ನಗ್ನದೇಹವನ್ನು ತದೇಕ ಚಿತ್ತನಾಗಿ ನೋಡಬೇಕು". ವೇಮನ ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮನ ಮಾತನ್ನು ಚಾಚೂ ತಪ್ಪದೆ ಪಾಲಿಸುತ್ತಾನೆ.

ವೇಮನ ತನ್ನ ಪ್ರೇಯಸಿಯ ನಗ್ನ ಶರೀರವನ್ನು ಕಂಡೊಡನೆ ಅವನೊಳಗೆ ಭಯಂಕರವಾದ ಜಿಗುಪ್ಸೆ, ಅಸಹ್ಯಭಾವನೆ ಆವರಿಸಿ ಒಡನೆಯೇ ಗಾಬರಿಗೊಂಡು ಕಣ್ಮುಚ್ಚಿ

ತಾಯಿಯ ಗರ್ಭದಿಂದ ತಾಂ ಬರುವ ಸಮಯದಿ
ಮೊದಲು ವಸ್ತ್ರಮಿಲ್ಲ, ತುದಿಗುಮಿಲ್ಲ
ನಡುವೆ ಬಟ್ಟೆಯುಡುವುದೇಕೆಂದು ತಿಳಿಯಿರಿ
ವಿಶ್ವತೋಭಿರಾಮ ಕೇಳು ವೇಮ||

    -ಎಂದು ತತ್ವ್ತಜ್ಞಾನ ಹೇಳುತ್ತಾ, ತಾನು ನಗ್ನನಾಗಿ ವೈರಾಗಿಯಂತೆ ಕಾಲ್ತೆಗೆದು ಹೊರ ಹೊರಟವನು, ಮುಂದೆ ತನ್ನ ಸಾಧನೆಯಿಂದ ಮಹಾಯೋಗಿಯಾದನು.

ಕಾವ್ಯ

ತಂದೆತಾಯಿಯರಲಿ ದಯೆತೋರದ ಪುತ್ರ

ಹುಟ್ಟಲೇನು? ಮತ್ತೆ ಸತ್ತರೇನು?

ಹುತ್ತದಲಿ ಗೆದ್ದಲು ಹುಟ್ಟವೇ? ಸಾಯವೇ?

ವಿಶ್ವದಾಭಿರಾಮ ಕೇಳು ವೇಮ

ಧ್ವಜವೆತ್ತಿ ಸಾರು ದೇವನೊಬ್ಬನೆಂದು

ನಿಜವಿಹುದು ಒಳಗೆ ನಿಂತಿರುವನು ಚೊಕ್ಕ

ನೋಡುವವನು ಸಂತಸದಿ ಮುಳುಗುವೆ

ವಿಶ್ವದಾಭಿರಾಮ ಕೇಳು ವೇಮ

ಆತ್ಮಶುದ್ಧಿ ಇರದ ಆಚಾರವೇತಕೆ?

ಮಡಕೆ ಶುದ್ಧಿ ಇರದ ಅಡಿಗೆ ಯಾತಕೆ?

ಚಿತ್ತಶುದ್ಧಿ ಇರದ ಶಿವನ ಪೂಜೆ ಯಾಕೆ?

ವಿಶ್ವದಾಭಿರಾಮ ಕೇಳು ವೇಮ

ಒಂದು ತೊಗಲು ತಂದು ಚೆಂದ ಗೊಂಬೆಯ ಮಾಡಿ

ಕುಣಿವಂತೆ ಮಾಡಿ ಹಾಗೆ ಇಡುವ

ತನ್ನ ಆಡಿಸುವವನ ತಾನೇಕೆ ಕಾಣನೊ

ವಿಶ್ವದಾಭಿರಾಮ ಕೇಳು ವೇಮ

ಮಿಥ್ಯ ತಿಳಿವಿನಿಂದ ಮೋಕ್ಷ ದೊರಕಬಹುದೆ?

ಕೈಲಾಗದ ಕೆಲಸ ಗೆಯ್ಯಬೇಡ

ಗುರುವು ಎನ್ನಬೇಡ ಗುಣಹೀನನಾಗಿರೆ

ವಿಶ್ವದಾಭಿರಾಮ ಕೇಳು ವೇಮ

ಮರಣ

ಶಾರ್ವರಿ ನಾಮ ಸಂವತ್ಸರ ಶ್ರೀರಾಮನವಮಿ ದಿನದಂದು ಇಹಲೋಕ ತ್ಯಜಿಸಿದರು. ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಕದಿರು ತಾಲ್ಲೂಕಿನ ಕಟಾರುಪಳ್ಳಿಯಲ್ಲಿ ಅವರ ಸಮಾಧಿ ಇದ್ದು ಪ್ರತಿವರ್ಷ ಜಾತ್ರೆ ನಡೆಯುತ್ತದೆ.

ಆಕರ ನೆರವು

  1. ಮೂಗುತಿ ಮಹಿಮೆ -ಸಂ.: ಹನುಮಂತಪ್ಪ ಅಂಡಗಿ, ಚಿಲಕವಾಡಗಿ
  2. ಹೇಮರೆಡ್ಡಿ ಮಲ್ಲಮ್ಮನ ಪುರಾಣ -ರುದ್ರಕವಿ, ಜೈನಾಪುರ

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

Tags:

ವೇಮನ ಜನನವೇಮನ ವೈರಾಗ್ಯವೇಮನ ಕಾವ್ಯವೇಮನ ಮರಣವೇಮನ ಆಕರ ನೆರವುವೇಮನ ಉಲ್ಲೇಖಗಳುವೇಮನ ಬಾಹ್ಯ ಸಂಪರ್ಕಗಳುವೇಮನ

🔥 Trending searches on Wiki ಕನ್ನಡ:

ಅರ್ಥಶಾಸ್ತ್ರಗ್ರಹಕುಂಡಲಿಬೆಂಡೆಜೋಗಸುಂದರ್ ಪಿಚೈರಚಿತಾ ರಾಮ್ಬಿ.ಜಯಶ್ರೀಒಂದು ಮುತ್ತಿನ ಕಥೆಸೂರ್ಯರಾಷ್ಟ್ರೀಯತೆಹೂವುವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಸಂಶೋಧನೆಕೆ. ಎಸ್. ನಿಸಾರ್ ಅಹಮದ್ಮುದ್ದಣಜ್ಯೋತಿಷ ಶಾಸ್ತ್ರಸ್ತ್ರೀಸೆಸ್ (ಮೇಲ್ತೆರಿಗೆ)ಕೃಷ್ಣದೇವರಾಯಅಂತಿಮ ಸಂಸ್ಕಾರಸಾಮಾಜಿಕ ಸಮಸ್ಯೆಗಳುನಳಂದಬ್ರಾಹ್ಮಣಅಲಾವುದ್ದೀನ್ ಖಿಲ್ಜಿಚನ್ನವೀರ ಕಣವಿಭಗತ್ ಸಿಂಗ್ವಚನ ಸಾಹಿತ್ಯಗೋಕಾಕ್ ಚಳುವಳಿಗ್ರಂಥ ಸಂಪಾದನೆಆಕ್ಟೊಪಸ್ಟಿಪ್ಪು ಸುಲ್ತಾನ್ಪ್ರಬಂಧ ರಚನೆಅನುಭವ ಮಂಟಪಕನ್ನಡ ಕಾಗುಣಿತವಿಕಿಪೀಡಿಯಸರ್ವೆಪಲ್ಲಿ ರಾಧಾಕೃಷ್ಣನ್ಜಾತಿಬಬ್ರುವಾಹನತ. ರಾ. ಸುಬ್ಬರಾಯತೆಲುಗುಕರ್ನಾಟಕ ವಿಧಾನ ಸಭೆಭಾರತದ ರಾಜ್ಯಗಳ ಜನಸಂಖ್ಯೆಗಂಗ (ರಾಜಮನೆತನ)ರಗಳೆಹಳೇಬೀಡುಆದಿವಾಸಿಗಳುಕಾರ್ಲ್ ಮಾರ್ಕ್ಸ್ಮಲ್ಲಿಕಾರ್ಜುನ್ ಖರ್ಗೆಕನ್ನಡ ವ್ಯಾಕರಣತಾಲ್ಲೂಕುಹುರುಳಿನದಿಅರಣ್ಯನಾಶಬಾಹುಬಲಿಅಮೃತಬಳ್ಳಿಮಣ್ಣುವೀರಗಾಸೆವಿನೋಬಾ ಭಾವೆಯಜಮಾನ (ಚಲನಚಿತ್ರ)ಪ್ರಶಾಂತ್ ನೀಲ್ಶಬರಿಸಮಾಜಶಾಸ್ತ್ರಯೋಗ ಮತ್ತು ಅಧ್ಯಾತ್ಮಕಾಲಾಯ ತಸ್ಮೈ ನಮಃ (ಚಲನಚಿತ್ರ)ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಪೌರತ್ವಚರಕಯೂಟ್ಯೂಬ್‌ಭಾರತೀಯ ಸಂವಿಧಾನದ ತಿದ್ದುಪಡಿಧರ್ಮರಾಯ ಸ್ವಾಮಿ ದೇವಸ್ಥಾನಭಾರತೀಯ ರಿಸರ್ವ್ ಬ್ಯಾಂಕ್ಕನ್ನಡ ರಂಗಭೂಮಿ🡆 More