ವಾಣಿಜ್ಯ ಬ್ಯಾಂಕ್

ವಾಣಿಜ್ಯ ಬ್ಯಾಂಕುಗಳು ಹಣಕಾಸಿನ ಸಂಸ್ಥೆಗಳಾಗಿದ್ದು , ವ್ಯಾಪಾರ ಮತ್ತು ಇನ್ನಿತರ ಉದ್ಧೇಶಕ್ಕೈ ಸಾಲ ಕೊಡುವ ಮತ್ತು ಠೇವುಗಳನ್ನು ಸ್ವೀಕರಿಸುವ ಸಂಸ್ಥೆಗಳಾಗಿವೆ.

ವಾಣಿಜ್ಯ ಬ್ಯಾಂಕ್
Marriner S. Eccles Federal Reserve Board Building
ವಾಣಿಜ್ಯ ಬ್ಯಾಂಕ್
RBI

ವಾಣಿಜ್ಯ ಬ್ಯಾಂಕುಗಳು

ಈ ಸಂಸ್ಥೆಗಳ ಹುಟ್ಟು ಬೆಳಣೆಗೆಗೆ ಸುಮಾರು ಮೂರು ನೂರು ವರ್ಷಗಳ ಇತಿಹಾಸವಿದೆ. ಬ್ಯಾಂಕ್ ಎಂಬ ಪದವು ಇಟಾಲಿಯನ್ ಪದ `ಬ್ಯಾಂಕೋ' ಎಂಬ ಪದದಿಂದ ಬಂದಿರುತ್ತದೆ. ಬ್ಯಾಂಕೋ ಎಂದರೆ ಹಿಂದಿನ ಕಾಲದ ಸಾಹುಕಾರರ ಉಪಯೋಗಿಸುತ್ತಿದ್ದ ಬೆಂಚು ಅಥವಾ ಬಾಕು ಎಂದಾರ್ಥವಾಗುತ್ತದೆ. ಮಾರುಕಟ್ಟೆಯಲ್ಲಿ ಬೆಂಚು ಹಾಕಿಕೊಂಡು ಅದರ ಮೇಲೆ ಕುಳಿತು ಸಾಹುಕಾರರು ಹಣದ ಲೇವಾ ದೇವಿ ವ್ಯವಹಾರವನ್ನು ಮಾಡುತ್ತಿದ್ದರು. ಇಂಗ್ಲೆಂಡಿನಲ್ಲಿ ಅಕ್ಕಸಾಲಿಗರು ಕೈಗೊಂಡ ಹಣದ ಲೇವಾದೇವಿ ವ್ಯಾವಹಾರಗಳಲ್ಲಿ ಇಂದಿನ ಬ್ಯಾಂಕ್ ವ್ಯವಹಾರ ಪದ್ಧತಿಯ ಉಗಮವನ್ನು ಕಾಣಬಹುದು. ವ್ಯಾಪಾರಸ್ಥರು ತಮ್ಮಲ್ಲಿ ಅಧಿಕ ಇದ್ದ ಹಣವನ್ನು ಸುರಕ್ಶತೆಗಾಗಿ ಅಕ್ಕಸಾಲಿಗರಿಗೆ ಒಪ್ಪಿಸುತ್ತಿದ್ದರು. ಅಕ್ಕಸಾಲಿಗರು ಠೇವಣಿ ಇಟ್ಟ ವ್ಯಾಪಾರಸ್ತರಿಗೆ ಅವರಿಟ್ಟ ಠೇವಣಿಯ ಮೌಲ್ಯದಷ್ತು ರಾಶಿದಿಯನ್ನು ಕೊಡುತ್ತಿದ್ದರು. ರಶೀದಿಗಳಿಗೆ ಅಕ್ಕಸಾಲಿಗರ ಪಾವತಿ ಚೀಟಿ'ಗಳೆಂದು ಕರೆಯುತ್ತಿದ್ದರು. ಈ ಪಾವತಿ ಚೀಟಿಯನ್ನು ಹೊಂದಿದವರಿಗ ಠೇವಣಿಯ ಹಣ ವಾಪಾಸ ಪಡೆಯಲು ಹಕ್ಕು ಇರುತಿತ್ತು. ಬೇಡಿದಾಗ ಹಣವನ್ನು ಹಿಂದಿರುಗಿಸುವ ಹೊಣೆ ಅಕಸಾಲಿಗದಾಗಿತ್ತು. ಅಕ್ಕಸಾಲಿಗರ ಪಾವತಿ ಚೀಟಿಗಳು ಈ ಭರವಸೆಯ ಸಂಕೇತಗಳಾಗಿದ್ದವು. ಈ ಪ್ರಕಾರ ಹಣದ ಲೇವಾದೇವಿ ವ್ಯವಹಾರ ಮಾಡುವಾಗ ಅವರಿಗೆ ಹೊಸ ಅನುಭವದ ಅರಿವಾಯಿತು. ಎಲ್ಲಾ ಠೇವಣಿದಾರರು ಒಂದೇ ವೇಳೆಗೆ ತಾವಿಟ್ಟ ಠೇವಣಿಯ ಹಣವನ್ನು ವಾಪಾಸಕೇಳಲು ಬರುವುದಿಲ್ಲವೆಂಬ ವಿಶ್ವಾಸ ಅವರಗಾಯಿತು. ಅದರಿಂದಅವರ ಠೇವಣಿಯ ಹಣವನ್ನು ತಮ ಬಳಿ ಸೋಮಾರಿಯಾಗಿಡುವುದಕ್ಕೆ ಬದಲು ಅಗತ್ಯವಿದ್ದವರಿಗೆ ಸಾಲ ಕೊಟ್ಟು ಬಡ್ಡಿಯನ್ನು ಸಂಪಾದಿಸಲು ಪ್ರಾರಂಭಿಸಿದರು. ಈ ರೀತಿ ಕೇವಲ ಭದ್ರತೆಗಾಗಿ ಇಟ್ಟ ಠೇವಣಿಯ ರೂಪದಲ್ಲಿನ ಹಣವು ಸಾಲ ಕೊಡುವ ವ್ಯವಹಾರಕ್ಕಾಗಿ ಬಳಸಲ್ಪಡುವ ಸಾಧನವಾಯಿತು.ಕ್ರಮೇಣ ಸ್ವತಂತ್ರ ಬ್ಯಾಂಕಿಗ್ ಸಂಸ್ಥೆಗಳು ವಾಣಿಜ್ಯ ವ್ಯವಹಾರಗಳಿ ಸಾಲ ನೀಡಲು ಅಸ್ತಿತ್ವದಲ್ಲಿ ಬಂದವು.

ವಾಣಿಜ್ಯ ಬ್ಯಾಂಕುಗಳ ಕಾರ್ಯಗಳು

ವಿಂಗಡಿಸಬಹುದು. ಅವುಗಳೆಂದರೆ

ಪ್ರಧಾನ ಅಥವಾ ಪ್ರಾಥಮಿಕ ಕಾರ್ಯಗಳು

ವಾಣಿಜ್ಯ ಬ್ಯಾಂಕುಗಳ ಕೆಳಗಿನ ಎರಡ ಪ್ರಧಾನ ಕಾರ್ಯಗಳನ್ನು ನಿರ್ವಹಿಸುತ್ತವೆ.

ಠೇವಣಿಗಳನ್ನು ಸ್ವೀಕರಿಸುವುದು

ವಾಣಿಜ್ಯ ಬ್ಯಾಂಕುಗಳು ಸ್ವೀಕರಿಸುವ ಠೇವಣಿಗಳನ್ನು ಎರಡು ಪ್ರಕಾರಗಳಾಗಿ ವಿಂಗಡಿಸಬಹುದು.

  1. ಬೇಡಿಕೆ ಠೇವಣಿಗಳನ್ನು : ಠೇವಣಿದಾರರು ಬೇಡಿದ ತಕ್ಷಣ ಹಿಂದಿರುಗಿಸಬೇಕಾದ ಠೇವಣಿಗಳಾಗಿವೆ. ಇವುಗಳು ಕಳಗಿನಂತಿವೆ.

ಚಾಲ್ತಿ ಠೇವಣಿ: :ಠೇವಣಿದಾರನು ಈ ಖಾತೆಗೆ ಜಮಾ ಮಾಡುವುದಕ್ಕಾಗಲಿ ಅಥವಾ ಠೇವಣಿಯ ಹಣವನ್ನು ಹಿಂತೆಗದುಕೊಳ್ಳುವದಕ್ಕಾಗಲಿ ನಿರ್ಭ‍ಂಧವಿರುವುದಿಲ್ಲ. ಇಂತಹ ಠೇವಣಿಗಳ ಮೇಲೆ ಬ್ಯಾಂಕುಗಳು ಬಡ್ಡಿಯನ್ನು ಕೊಡುವುದಿಲ್ಲ. ವ್ಯಾಪಾರಿಗಳು, ಉದ್ದಿಮೆದಾರರಿಗೆ ಈ ಠೇವಣಿ ಅನುಕೂಲವಾಗಿರುತ್ತದೆ. ಉಳಿತಾಯ ಠೇವಣಿ; ಉಳಿತಾಯ ಠೇವಣಿ ಖಾತೆಗ ಹಣ ಜಮಾ ಮಾಡಲು ಯಾವ ನಿರ್ಬಂಧಗಳಿಲ್ಲ. ಆದೆರೆ ಹಣವನ್ನು ಮರಳಿ ಪಡಯುವುದಕ್ಕೆ ನಿರ್ಭಂಧಗಳಿರುತ್ತದೆ. ವಾರಕ್ಕೆ ಎರಡು ಬಾರಿ ಈ ಖಾತೆಯಿಂದ ಠೇವಣದಾರನು ತನ್ನ ಹಣವನು ವಾಪಸ್ ಪಡೆಯಬಹುದಾಗಿದೆ. ಬಡ ಮತ್ತು ಮಧ್ಯಮವರ್ಗದ ಜನರಿಗೆ ಇದು ಅನೂಕೂಲವಾಗಿರುತ್ತದೆ ಇಂತಹ ಠೇವಣಿಗಳ ಮೇಲೆ ಬ್ಯಾಂಕುಗಳು ಅಲ್ಪ ಬಡ್ತಿಯನ್ನು ನೀಡುತ್ತವೆ.

  1. ಅವಧಿ ಠೇವಣಗಳು: ನಿರ್ದಿ‍ಷ್ಠ ಅವಧಿಗಾಗಿ ಸ್ವೀಕರಿಸಿದ ಠೇವಣಿಗಳಿಗೆ ಅವಧಿ ಠೇವಣಿ ಎಂದು ಕರೆಯುತ್ತಾರೆ. ಅವುಗಳೆಂದರೆ :
  2. ಮುದ್ಧತಿ ಠೇವಣಿಗಳನ್ನು: ಮುದ್ದತಿಯ ಅವಧಿ ಮುಗಿಯುವವರೆಗೆ ಠೇವಣಿಯ ಹಣವನ್ನು ವಾಪಾಸ ಪಡೆಯಲು ಬರುವುದಿಲ್ಲ. ಈ ಠೇವಣಿಯ ಮೇಲೆ ವಾಣಿಜ್ಯ ಬ್ಯಾಂಕುಗಳು ಅಧಿಕ ಬಡ್ಡಿಯನ್ನು ಕೊಡುತವೆ. ಠೇವಣಿಯ ಮೊತ್ತ ಮತ್ತು ಅವಧಿ ಹೆಚ್ಚಿದ್ದರ ಬಡ್ಡಿಯು ಹೆಚ್ಚಿರುತ್ತದೆ. ಕಡಿಮೆಯಿದ್ದರೆ ಬಡ್ಡಿಯೂ ಕಡಿಮೆಯಿರುತ್ತದೆ.
  3. ಸಂಚಿತ(ಆವತ‍) ಠೇವಣಿಗಳು: ಈ ಠೇವಣಿಯನ್ನು ಸಹ ನಿರ್ದಿ‍ಷ್ಟ ಅವಧಿಗೆ ಇಡಲಾಗುತ್ತದೆ. ನಿರ್ದಿ‍ಷ್ಟ ಅವಧಿ ಮುಗಿಯುವವರೆಗೆ ಪ್ರತಿ ತಿಂಗಲು ಒಂದು ನಿಶ್ಚಿತ ಮೊತ್ತದ ಹಣವನ್ನು ಆವತ‍ ಠೇವಣಿ ಖಾತೆಗೆ ಜಮಾ ಮಾಡಬೇಕಾಗುತ್ತದೆ. ಒಟ್ಟು ಮೊತ್ತವನ್ನು ಬಡ್ಡಿಯೊಂದಿಗೆ ಅವಧಿ ಮುಗಿದ ನಂತರ ಹಿಂದಕ್ಕೆ ಪಡೆಯಬಹುದಾಗಿದೆ. ಉದ್ಯೋಗಿಗಳಿಗೆ ಮತ್ತು ನಿಗದಿತ ಆದಾಯದಾರರಿಗೆ ಈ ಠೇವಣಿ ಉಪಯುಕ್ತವಾಗಿದೆ.

ಸಾಲಗಳು ಮತ್ತು ಮುಂಗಡಗಳನ್ನು ನೀಡವುದು

ಇದು ವಾಣಿಜ್ಯ ಬ್ಯಾಂಕಿನ ಇನ್ನೊಂದು ಪ್ರಮುಖ ಕಾರ್ಯ‍ವಾಗಿರುತ್ತದೆ. ವಾಣಿಜ್ಯ ಬ್ಯಾಂಕುಗಳು ಈ ಕೆಳಗಿನಂತೆ ಈ ಕಾರ್ಯ‍ವನ್ನು ನಿವ‌ಹಿಸುತ್ತವೆ.

  1. ಸಾಲಗಳು ಮತ್ತು ಮುಂಗಡಗಳನ್ನು ನೀಡುವುದು: ವಾಣಿಜ ಬ್ಯಾಂಕುಗಳೂ ಸಾರ್ವಜನರಿಗೆ ಆಸ್ತಿಯ ಭದ್ರತೆ, ಬಂಗಾರದ ಭದ್ರತೆಯ ಮೇಲೆ ಅಲ್ಪ ಮತ್ತು ದೀರ್ಘ‌ಕಾಲಾವಧಿ ಸಾಲವನನು ನೀಡುತ್ತವೆ.
  2. ಹುಂಡಿಯನ್ನು ವಟಾಯಿಸುವುದು: ಹುಂಡಿಯೆಂದರೆ "ವಿನಿಮಯ ಪತ್ರ" ಎಂದು ಹೇಳಬಹುದು. ಒಬ್ಬ ವ್ಯಾಪಾರಿಯು ಇನ್ನೊಬ್ಬ ವ್ಯಾಪಾರಿಯಿಂದ ಸರಕುಗಳನ್ನು ಖರೀದಿಸಿದಾಗ ಹಣವನ್ನು ಪಾವತಿ ಮಾಡಲು ಕೂಡಲೇ ಸಾಧ್ಯವಾಗದಿದ್ದರೆ, ಒಂದು ನಿರ್ದಿಷ್ತ್ತ ವಾಯ್ದೆಯ ನಂತರ ಪಾವತಿ ಮಾಡುತ್ತೇನೆಂದು ವಾಗ್ದಾನ ಮಾಡಿ ಬರೆದುಕೊಟ್ಟ ಪತ್ರವೇ ಹುಂಡಿ. ಹುಂಡಿಯನ್ನಿಟ್ಟು ಕೊಂಡು ಸಾಲ ನೀಡುವಾಗ ಬಡ್ಡಿಗೆ ತಗುಲುವ ಹಣವನ್ನು ಮುರಿದುಕೊಂಡು ಉಳಿದ ಹಣವನ್ನು ಹುಂಡಿ ಮಾರಿದವನಿಗೆ ಸಂದಾಯಮಾಡುವುದು ಬ್ಯಾಂಕಿನ ನೀತಿಯಾಗಿದೆ. ಇದಕ್ಕೆ "ಹುಂಡಿಯನನು ಮುರಿಸುವದು. ಎಂದು ಕರೆಯಲಾಗುತ್ತದೆ.
  3. ಮೀರೆಳೆತ: ಇದು ವಾಣಿಜ್ಯ ಬ್ಯಾಂಕ್ ಒದಗಿಸುವ ತಾತ್ಕಾಲಿಕ ಸಾಲ ಸ್ಔಲಭ್ಯದ ವಿಧಾನವಾಗಿದೆ. ಈ ಪದ್ದತಿಯಲ್ಲಿ ಠೇವಣಿದಾರರು ತಮ್ಮ ಚಾಲ್ತಿ ಠೆವಣಿ ಮೊತ್ತಕ್ಕೈಂತ ಹೆಚ್ಚಿನ ಮೊಬಲಗನ್ನು ಸಾಲವಾಗಿ ಪಡೆಯಬಹುದು. ತಾವು ಇಟ್ಟಿರುವ ಠೇವಣಿಗಿಂತಮೀರಿ ಎಳೆಯುವಿಕೆ ಎಂಬುದನ್ನು ಈ ವಿಧಾನ ಸೂಚಿಸುತ್ತದೆ. ವ್ಯಾವಹಾರದಲ್ಲಿ ಪ್ರಾಮಾಣಿಕರಾದ ಹಾಗೂ ಹಣಕಾಸಿನ ಸುಭದ್ರತೆಯನ್ನೊಂದಿದವರಿಗೆ ಬ್ಯಾಂಕುಗಳು ಈ ಸ್ಔಲಭ್ಯಗಳನ್ನು ಕಲ್ಪಿಸುತ್ತವೆ.
  4. ನಗದು ಸಾಲ : ಇದರಡಿಯಲ್ಲಿ ವ್ಯಾಪಾರಿಗಳು, ಸ್ವಂತ ಉದ್ಯೋಗಿಗಳು, ವಿದ್ಯಾಥಿಗಳು, ಮೊದಲಾದ ವಗ‌‍ದ ಜನರಿಗೆ ಈ ಸಾಲದ ಸೌಲಭ್ಯವನ್ನೊದಗಿಸಲಾಗುತ್ತದೆ. ಸ್ವಂತ ಆಸ್ತಿಯ ಆಧಾರ, ಒಬ್ಬರು ಅಥವಾ ಇಬ್ಬರು ವ್ಯಕ್ತಿಗಳ ಜಾಮೀನಿನ ಮೇಲೆ ನಗದು ಸಾಲವನ್ನು ಬ್ಯಾಂಕುಗಳು ನೀಡುತ್ತವೆ. ಇಂತಹ ಸಾಲದ ಮೇಲೆ ವಾಣಿಜ್ಯ ಬ್ಯಾಂಕುಗಳ ಅಧಿಕ ಬಡ್ಡಿಯನ್ನು ವಿಧಿಸುತ್ತವೆ.

ಸಹಾಯಕ ಕಾರ್ಯ‍ಗಳು

ವಾಣಿಜ್ಯ ಬ್ಯಾಂಕುಗಳು ನಿವ‍ಹಿಸುವಾಗ ಸಹಾಯಕ ಕಾಯ‍ಗಳು ಕೆಳಗಿನಂತಿವೆ.

  1. ಗ್ರಾಹಕರ ಪರವಾಗಿ ಗ್ರಾಹಕರಿಗೆ ಬರಬೇಕಾದ ಬಡ್ಡಿ, ಲಾಭ, ವಿಶ್ರಾಂತಿ ವೇತನ, ವೃದ್ದಾಪ್ಯವೇತನ, ವಂತಿಗೆ, ಸಂಬಳ ಮೊದಲಾದವುಗಳನ್ನು ಬ್ಯಾಂಕುಗಳು ಪಡೆದು ಅವುಗಳನ್ನು ಅವರ ಖಾತೆಗೆ ಜಮಾ ಮಾಡುತ್ತವೆ. ಗ್ರಾಹಕರಿಗೆ ಬಂದ ಚೆಕ್ಕುಗಳು, ಹುಂಡಿಗಳನ್ನು ವಸೂಲಿ ಮಾಡಿ ಅವರ ಖಾತೆಗಳಿಗೆ ಜಮಾ ಮಾಡುತ್ತವೆ. ಗ್ರಾಹಕರ ಪರವಾಗಿ ವಚನ ಪಾತ್ರಗಳನ್ನು ಮತ್ತು ಅಂಚೆ ಆದೇಶಗಳನ್ನು ವಸೂಲಿ ಮಾಡುತ್ತದೆ.
  2. ಗ್ರಾಹಕರ ಪರವಾಗಿ ಪಾವತಿ ಮಾಡುವುದು: ಬ್ಯಾಂಕು ತನ್ನ ಗ್ರಾಹಕರು ಕೊಡಬೇಕಾಗಿರುವ ಬಾಡಿಗೆ, ಬಡ್ಡಿ, ವಿದ್ಯತ್ ಕರೆ, ವಿಮಾಕಂತು, ತೆರಿಗೆ, ವಂತಿಗೆ ಇತ್ಯಾದಿಗಳನನು ಅವರ ಪರವಾಗಿ ಪಾವತಿ ಮಾಡುತ್ತವೆ.
  3. ಗ್ರಾಹಕರ ಪರವಾಗಿ ವ್ನೀಯೋಜಕಗಳನ್ನು ಕೊಳ್ಳುತ್ತವೆ ಮತ್ತು ಮಾರುತ್ತವೆ.
  4. ಗ್ರಾಹಕರ ಪರವಾಗಿ ದೂರದ ಸ್ಥಳಗಳಿಗೆ ಹಣವನ್ನು ರವಾನಿಸುತ್ತವೆ.
  5. ಬ್ಯಾಂಕುಗಳು ಗ್ರಾಹಕರಿಗೆ ಷೇರು, ವಿನಿಯೋಜಕಗಳಿಗೆ ಸಂಬಂಧಿಸಿದಂತೆ ಸಲಹೆಗಳನ್ನು ನೀಡುತ್ತವೆ.
  6. ಬ್ಯಾಂಕುಗಳು ಗ್ರಾಹಕರ ಬಾತ್ಮೀದಾರನಾಗಿ ಮತ್ತು ಪ್ರತಿನಿಧಿಯಾಗಿ ಕಾರ್ಯ‍ ನಿರ್ವಹಿಸುತ್ತವೆ.
  7. ವಾಣಿಜ್ಯ ಬ್ಯಾಂಕುಗಳು ಗ್ರಾಹಕರಿಗೆ ಧರ್ಮದರ್ಶಿಯಾಗಿ ನಿರ್ವಾಹಕನಾಗಿ ಮತ್ತು ವಕೀಲನಾಗಿ ಸೇವೆಸಲ್ಲಿಸುತ್ತವೆ.
  8. ವಾಣಿಜ್ಯ ಬ್ಯಾಂಕುಗಳು ವಣಿಕ ಬ್ಯಾಂಕಿನ ಸೇವೆಗಳನ್ನೊದಗಿಸುತ್ತವೆ. ಬ್ಯಾಂಕುಗಳಲ್ಲಿ ಕರ್ಯಗಾರಿಕೊದ್ಯಮಿಗಳು, ವಣಿಕ ವೃಂದಕ್ಕೆ ತಾಂತ್ರಿಕ, ಹಣಕಾಸಿನ, ನಿರ್ವಹಣಾತ್ಮಕ ಮತ್ತಿತರ ಬ್ಯಾಂಕೇತರ ಸೇವೆಗಳನ್ನು ಒಂದೇ ಕಡೆಯಲ್ಲಿ ಬ್ಯಾಂಕು ಒದಗಿಸುತ್ತದೆ.

ಈ ಕಾರ್ಯಗಳಲ್ಲದೆ ವಾಣಿಜ್ಯ ಬ್ಯಾಂಕುಗಳು ಸರ್ವೋಪಯೋಗಿ ಸೇವೆಗಳನ್ನು ಸಲ್ಲಿಸುತ್ತದೆ. ಅವುಗಳೆಂದರೆ

  1. ಬೆಲೆಯುಳ್ಳ ವಸ್ತುಗಳ ಸುರಕ್ಷಿತೆಗೆ ಸುರಕ್ಷತಾ ಪಟ್ಟಿಗೆಗಳನ್ಒದಗಿಸುತ್ತದೆ.
  2. ಪ್ರಯಾಣಿಕರ ಚೆಕ್ಕುಗಳು ಮತ್ತು ಸಾಲದ ಪತ್ರಗಳನ್ನು ನೀಡಿ ಪ್ರಯಾಣಿಕರಿಗೆ ಮತ್ತು ವ್ಯಾಪಾರಿಗಳಿಗೆ ಉಪಯುಕ್ತ ಸೇವೆಗಳನ್ನು ಸಲ್ಲಿಸುತ್ತವೆ.
  3. ಕೈಗಾರಿಕೆಗಳು, ಸರ್ಕಾರಿ, ಅರೆಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಹೊರಡಿಸುವ ಷೇರುಗಳು ಮತ್ತು ಸಾಲ ಪತ್ರಗಳನ್ನು ಮಾರಾಟಮಾಡಿ ಕೊಡುವ ಸೇವೆಯನ್ನೊದಗಿಸುತ್ತದೆ.
  4. ಅಂಕಿ-ಅಂಶಗಳನ್ನು ಸಂಗ್ರಹಿಸಿ ಪ್ರಕಟಿಸುತ್ತವೆ.
  5. ಅಂತರಾಷ್ಟ್ರೀಯ ವ್ಯಾಪಾರಕ್ಕೆ ಹಣಕಾಸಿನ ನೆರವನ್ನೊದಗಿಸುತ್ತವೆ.ರಪ್ತುದಾರರಿಗೆ ಮತ್ತು ಆಮದುದಾರರರಿಗೆ ಸಂಸ್ಕರಣೆ, ಶೇಖರಣೆ, ಹುಂಡಿದಾರರಿಗೆ ಮುಂಗಡವನ್ನು ಕೊಡುತ್ತವೆ. ಇವರಿಗೆವಿದೇಶಿವಿನಿಮಯವನ್ನೊದಗಿಸುತ್ತವೆ.
  6. ವಾಣಿಜ್ಯಬ್ಯಾಂಕುಗಳು ಸಾಲದ ಕಾಡ್ಗಳನ್ನು ಚಿನ್ನದ ಕಾರ್ಡ್‍ ಗಳನ್ನು ನಿರ್ದಿ‍ಷ್ಟ ಮೊತ್ತಕ್ಕೆ ಗ್ರಾಹಕರಿಗೆ ನೀಡುತ್ತವೆ.
  7. ವಸತಿ ಠೇವಣಿ ಯೋಜನೆಯನ್ನು ತೆರೆದು ಅವಧಿ ಮುಗಿದ ನಂತರ ಠೇವಣಿದಾರನು ತನ್ನ ಠೇವಣಿಯ ಹಣದ ಮೇಲೆ ಮನೆ ಕಟ್ಟಿಸಿಕೊಳ್ಳಲು ಸಾಲವನ್ನು ಪಡೆಯಬಹುದಾಗಿದೆ.

ಬ್ಯಾಂಕೋದ್ಯಮ ಪದ್ಧತಿಯ ಪ್ರಕಾರಗಳು

ವಾಣಿಜ್ಯ ಬ್ಯಾಂಕುಗಳ ಸಂಘಟನೆ, ರಚನೆ, ಸ್ವರೂಪ ಮತ್ತು ಉದ್ದೇಶಗಳ ಆಧಾರದ ಮೇಲೆ ಅವುಗಳನ್ನು ವಿವಿಧ ಭಾಗಗಳಾಗಿ ವರ್ಗಿ‍ಕರಿಸಬಹುದು. ಅವುಗಳೆಂದರೆ

ಕವಲು ಬ್ಯಾಂಕು ಮತ್ತು ಏಕ ಬ್ಯಾಂಕು ಪದ್ಧತಿ

ವಾಣಿಜ್ಯ ಬ್ಯಾಂಕು ಒಂದು ದೊಡ್ಡ ಸಂಸ್ಥೆಯಾಗಿದ್ದು ರಾಷ್ಟ್ರಾದ್ಯಂತ ಹಲವಾರು ಶಾಖೆಗಳ ಮೂಲಕ ಬ್ಯಾಂಕಿನ ವ್ಯವಹಾರವನ್ನು ನಡೆಸುವ ವ್ಯವಸ್ಥೆಗೆ "ಕವಲು ಬ್ಯಾಂಕ್" ವ್ಯವಸ್ಥೆ ಎಂದು ಕರೆಯುತ್ತಾರೆ.ಈ ಬ್ಯಾಂಕಿನ ಶಾಖೆಗಳು ಆಂತರಿಕವಾಗಿಬಹುದು ಅಥವಾ ಅಂತರಾಷ್ಟ್ರೀಯವಾಗಿರಬಹುದು. ಈ ರೀತಿ ಶಾಖೆಗಳನ್ನು ಹೊಂದಿದ ಬ್ಯಾಂಕ್ ಪದ್ಧತಿಗೆ ವಿಕೇಂದ್ರಿಕೃತ ಬ್ಯಾಂಕ್ ಪದ್ಧತಿ ಎಂದು ಕರಯುತ್ತಾರೆ.

ಇದು ಕವಲು ಬ್ಯಾಂಕು ವ್ಯವಸ್ಥೆಗೆ ವಿರುದ್ಧವಾಗಿದೆ. ಪ್ರತಿಯೊಂದು ವಾಣಿಜ್ಯ ಬ್ಯಾಂಕು ಸ್ವತಂತ್ರವಾದ ಮತ್ತು ಪ್ರತ್ಯೇಕವಾದ ಸಂಸ್ಥೆಯಾಗಿದ್ದು ಒಂದೇ ಕಛೇರಿಯನ್ನು ಹೊಂದಿ ಅಥವಾ ನಿಗದಿತ ಸರಹದ್ದಿನಲ್ಲಿ ಒಂದೆರೆಡು ಶಾಖೆಗಳನ್ನು ತೆರೆದು ಉದ್ಯಮವನ್ನು ನಡೆಸುವ ವ್ಯವಸ್ಥೆಗೆ "ಏಕ ಬ್ಯಾಂಕ್ ಪದ್ಧತಿ" ಎಂದು ಕರೆಯುತ್ತಾರೆ.

ಸರಪಣಿ ಬ್ಯಾಂಕ್ ಮತ್ತು ಗುಂಪು ಬ್ಯಾಂಕ್ ಪದ್ಧತಿ

ಸರಪಣಿ ಬ್ಯಾಂಕ್ ವ್ಯವಸ್ಥಯಲ್ಲಿ ಎರಡು ಅಥವಾ ಎರಡಕ್ಕಿಂತ ಹೆಚ್ಚು ವಾಣಿಜ್ಯ ಬ್ಯಾಂಕುಗಳನ್ನು ಒಂದೇ ಆಡಳಿತದ ನಿಯಂತ್ರಣಕ್ಕೆ ತರಲಾಗತ್ತದೆ. ಇದಕ್ಕಾಗಿ ವಿವಿಧ ಮಾರ್ಗಗಳನ್ನು ಅನುಸರಿಸಬಹುದಾಗಿದೆ. ಉದಾ|| ಅದೇ ವ್ಯಕತಿಗಳು ವಿವಿಧ ಬ್ಯಾಂಕುಗಳ ನಿರ್ದೇ‍ಶಕರೆಂದು ಕೆಲಸ ಮಾಡುತ್ತಿದ್ದಾಗ ಆ ಎಲ್ಲ ಬ್ಯಾಂಕುಗಳು ಒಂದೇ ಆಡಳಿತದ ನಿಯಂತ್ರಣಕ್ಕೊಳಗಾಗುತ್ತದೆ. ಇಲ್ಲವೇ ಅದೇ ವ್ಯಕ್ತಿಗಳು ವಿವಿಧ ಬ್ಯಾಂಕ್ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಷೇರುಗಳನ್ನು ಹೊಂದಿರಬಹುದು. ಆಗ ಸಹ ಅವರಿಗೆ ಆ ಬ್ಯಾಂಕುಗಳ ಮೇಲೆ ತಮ್ಮ ನಿಯಂತ್ರಣವನ್ನಿಟ್ಟು ಕೊಳ್ಳಲು ಸಾಧ್ಯವಾಗುತ್ತದೆ.

ಗುಂಪು ಬ್ಯಾಂಕ್ ವ್ಯವಸ್ಥೆಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಬ್ಯಾಂಕುಗಳು ಒಂದು ಹೋಲ್ಡಿಂಗ್ ಕಂಪನಿ ಮೂಲಕ ಒಂದೇ ಆಡಳಿತ ಮತ್ತು ನಿಯಂತ್ರಣಕ್ಕೊಳಪಟ್ಟಿರುತ್ತವೆ.ಇಂತಹ ಒಟ್ಟು ಗೂಡಿದ ಬ್ಯಾಂಕುಗಳ ಕವಲು ಬ್ಯಾಂಕಗಳಾಗಿರಬಹುದು ಅಥವಾ ಏಕ ಬ್ಯಾಂಕುಗಳಾಗಿರಬಹುದು ಅಥವಾ ಎರಡೂ ಒಟ್ಟಾಗಿರಬಹುದು.

ಸರ್ವಜನಿಕ ಬ್ಯಾಂಕ ವ್ಯವಸ್ಥೆ, ಹೂಡಿಕೆ ಬ್ಯಾಂಕ್ ವ್ಯವಸ್ಥ ಮತ್ತು ಮಿಶ್ರ ಬ್ಯಾಂಕ್ ವ್ಯವಸ್ಥೆ

ಸಾವ‍ಜನಿಕರಿಂದ ಠೇವುಗಳನ್ನು ಸ್ವೀಕರಿಸಿ, ಅಂತಹ ಸಂಪನ್ಮೂಲಗಳನ್ನು ಅಲ್ಪಾವಧಿಗೆ ಸಾಲ ನೀಡುವ ಬ್ಯಾಂಕ್ ಪದ್ಧತಿಗೆ "ಠೇವಣಿ ವ್ಯವಸ್ಥೆ" ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಒಂದು ವರ್ಷದ ಅವಧಿಗೆ ವ್ಯಾಪಾರ ಮತ್ತು ಉದ್ಯಮಕ್ಕೆ ಹುಂಡಿಯನ್ನು ಮುರಿಯುವಿಕೆ, ಮೀರೆಳೆತ ಸೌಲಭ್ಯ ಮತ್ತು ಮುಂಗಡಗಳ ವಿಧದಲ್ಲಿ ಸಾಲವನ್ನು ಠೇವಣಿ ಬ್ಯಾಂಕು ವ್ಯವಸ್ಥೆಯಲ್ಲಿ ಒದಗಿಸಲಾಗುತ್ತದೆ. ವಾಣಿಜ್ಯ ಬ್ಯಾಂಕುಗಳು ಸಾರ್ವಜನಿಕ ಉಳಿತಾಯದ ಹಣದ ಪಾಲಕರಾಗಿರುವುದರಿಂದ ಆ ಹಣವ್ನು ದೀರ್ಘಾವಧಿಗೆ ಸಾಲ ನೀಡಿ ಭದ್ರತೆಯನ್ನು ಕಳೆದುಕೊಳ್ಳುವ ಬದಲು ಅಲ್ಪಾವಧಿಯಲ್ಲಿ ಮರುಪಾವತಿಯಾಗುವಂತಹ ಉದ್ದೇಶಗಳಲ್ಲಿ ಸುರಕ್ಷಿತವಾಗಿ ವಿನಿಯೋಗಿಸಬೇಕೆಂಬ ತತ್ವದ ಮೇಲೆ ಠೇವಣಿ ಬ್ಯಾಂಕ ಪದ್ಧತಿ ನಿಂತಿದೆ.

ಕೈಗಾರಿಕಗಳಿ ಅಲ್ಪಾವಧಿ ಸಾಲಗಳಂತೆಯೇ ಉದ್ಯಮದ ವಿಸ್ತರಣೆಗೆ ದೀರ್ಘಾವಧಿ ಸಾಲವನ್ನು ಅವಶ್ಯಕವಾಗಿದೆ. ದೀರ್ಘಾವಧಿ ಹಣಕಾಸನ್ನು ಪೂರೈಕೆ ಮಾಡುವ ಬ್ಯಾಂಕ್ಗಳಿಗೆ ಹೂಡಿಕೆಯ ಬ್ಯಾಂಕ್ಗಳು ಅಥವಾ ಕೈಗಾರಿಕಾ ಬ್ಯಾಂಕುಗಳು ಎಂದು ಕರೆಯುತ್ತಾರೆ. [ಸಾರ್ವಜನಿಕರಿಂದ ಠೇವಣಿಗಳನ್ನು ಸ್ವೀಕರಿಸಿ ಅಲ್ಪಾವಧಿ ಮತ್ತು ದೀರ್ಘಾವಧಿ ಸಾಲವನ್ನು ಒದಗಿಸುವ ಬ್ಯಾಂಕುಗಳಿಗೆ "ಮಿಶ್ರ ಬ್ಯಾಂಕುಗಳೆಂದು ಕರೆಯುತ್ತಾರ. ಇಂತಹ ಬ್ಯಾಂಕುಗಳು ಠೇವಣಿ ಬ್ಯಾಂಕಿನ ಮತ್ತು ಹೂಡಿಕೆ ಬ್ಯಾಂಕಿನ ಕಾರ್ಯಗಳನ್ನು ಸಂಯೋಜಿಸಿಕೊಂಡಿರುತ್ತವೆ.

ಅಭಿವೃದ್ಧಿ ಶೀಲಾರಾಷ್ಟ್ರಗಳಲ್ಲಿ ವಾಣಿಜ್ಯ ಬ್ಯಾಂಕುಗಳ ಪಾತ್ರ

ಪ್ರತಿಯೊಂದು ದೇಶದ ಅರ್ಥ ವ್ಯವಸ್ಥೆಯಲ್ಲಿ ವಾಣಿಜ್ಯ ಬ್ಯಾಂಕ್ಗಳು ಅತಿ ಮಹತ್ವದ ಪಾತ್ರವನ್ನು ನಿವಹಿಸುತ್ತವೆ. ಆರ್ಥಿಕ ಯೋಜನೆಯ ಮೂಲಕ ತ್ವರಿತಗತಿಯಲ್ಲಿ ಆರ್ಥಿಕ ಪ್ರಗತಿಯನ್ನು ಸಾಧಿಸಿ ಸಮಾಜವಾದಿ ಸಮಾಜವನ್ನು ಸ್ಥಾಪಿಸಲು ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ವಾಣಿಜ್ಯ ಬ್ಯಾಂಕುಗಳು ಇನ್ನೂ ಹೆಚ್ಚಿನ ಪಾತ್ರವನ್ನು ನಿರ್ವಹಿಸುತ್ತವೆ. ಯಾವ ದೇಶದಲ್ಲಿ ಬ್ಯಾಂಕುಗಳ ಅಭಿವೃದ್ಧಿ ಹೆಚ್ಚಾಗಿ ಆಗಿದೆಯೋ ಅಂಥಹ ದೇಶವು ಇಂದು ಆರ್ಥಿಕವಾಗಿ ಮುಂದುವರಿದ ದೇಶವಾಗಿದೆ. ದೇಶವು ಆರ್ಥಿಕವಾಗ ಹಿಂದುಳಿಯಲು ಬಂಡವಾಳದ ಕೊರತೆಯು ಮುಖ್ಯಕಾರಣವಾಗಿದೆ. ಬ್ಯಾಂಕುಗಳು ಇಂತಹ ಬಂಡವಾಳವನ್ನು ಒದಗಿಸುವುದರಿಂದ ದೇಶಕ್ಕೆ ತ್ವರಿತಗತಿಯಲ್ಲಿ ಆಥಿಕ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ವಾಣಿಜ್ಯ ಬ್ಯಾಂಕುಗಳು ಜನತೆಯ ಉಳಿತಾಯವನ್ನು ಸಂಗ್ರಹಿಸಿ ಅವುಗಳನ್ನು ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕೆಗಳಿಗೆ ಬಂಡವಾಳ ಹೂಡಲು ಸಾಲದ ರೂಪದಲ್ಲಿ ಒದಗಿಸುತ್ತವೆ. ಬಂಡವಾಳವಿಲ್ಲದೆ ಕೃಷಿ, ಕೈಗಾರಿಕೆ, ವಾಣಿಜ್ಯ, ಉತ್ಪಾದನೆ ಉದ್ಯೋಗಗಳು ಅಧಿಕವಾಗಲಾರವು. ಜನರ ಜೀವನ ಮಟ್ಟ ಸುಧಾರಿಸಲಾರದು. ಆದ್ದರಿಂದ ಆರ್ಥಿಕ ಪ್ರಗತಿಯ ಮೂಲವಾದ ಬಂಡವಾಳವನ್ನು ಒದಗಿಸುವ ಕಾರ್ಯ‍ವನ್ನು ಬ್ಯಾಂಕುಗಳು ನಿರ್ವಹಿಸುವುದರಿಂದ ಅವು ಆರ್ಥಿಕ ಅಭಿವೃದ್ಧಿಯಲ್ಲಿತಮ್ಮನ್ನು ತಾವು ತೊಡಗಿಸಿಕೊಳ್ಳುತ್ತವೆ.ಅಭವೃದ್ದಿ ಪ್ರಕ್ರಿಯೆಯಲ್ಲಿ ಬ್ಯಾಂಕಗಳ ಪಾತ್ರ ಬಹುಮುಖ್ಯವಾಗಿದೆ.ಅಭಿವೃದ್ದಿಗೆ ಬೇಕಾದ ಪತ್ತಿನ ಸೌಲಭ್ಯವನ್ನು ಒದಗಿಸಿ ಅದರ ಚಾಲನೆಗೆ ಕಾರಣವಾಗಿರುತ್ತದೆ.ಅಭಿವೃದ್ದಿ ಶೀಲ ರಾಷ್ಟ್ರದಂತಹ ನಮ್ಮ ದೇಶದಲ್ಲಿ ಹಣಕಾಸಿನ ಸಂಪನ್ಮೂಲ ಕೊರತೆಯಲ್ಲಿದೆ ಎನ್ನುವುದು ಒಪ್ಪಿಕೊಳ್ಳುವಂತಹ ಅಂಶವಾಗಿದ್ದು,ಬ್ಯಾಂಕುಗಳು ಇದನ್ನು ಪೂರೈಸಿ ಆರ್ಥಿಕ ಪ್ರಗತಿಯನ್ನು ತ್ವರಿತಗೊಳಿಸುತ್ತವೆ.ಸ್ವಾತಂತ್ರದ ನಂತರ ಭಾರತದ ಬ್ಯಾಂಕಿಂಗ ಪದ್ದತಿಯಲ್ಲಿ ಅನೇಕ ಬದಲಾವಣೆಗಳಾದವು. ಈ ಬದಲಾವಣೆ ೧೯೯೫ರಲ್ಲಿ ಇಂಪೀರಿಯಲ್ ಬ್ಯಾಂಕನಿಂದ ಭಾರತೀಯ ಸ್ಟೇಟ ಬ್ಯಾಂಕ ಪರಿವರ್ತನೆಯೊಂದಿಗೆ ಪ್ರಾರಂಭವಾಯಿತು.೧೯೬೭ರಲ್ಲಿ ವಾಣಿಜ್ಯ ಬ್ಯಾಂಕುಗಳು ಸಾಮಾಜಿಕ ಹತೊಟಿ ವ್ಯಾಪ್ತ್ತಿಗೆ ತರಲಾಯಿತು.೧೯೬೯ರಲ್ಲಿ ಪ್ರಧಾನ ವಾಣಿಜ್ಯ ಬ್ಯಾಂಕುಗಳುನ್ನು ರಾಷ್ಟ್ರೀಕರಿಸಲಾಯಿತು.೧೯೭೫ರಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು ಸ್ಥಾಪಿಸಿ ಪತ್ತಿನ ಸೌಲಭ್ಯವನ್ನು ಗ್ರಾಮೀಣ ಪ್ರದೇಶಕ್ಕೆ ವಿಸ್ತರಿಸಲಾಯಿತು.ಇವೆಲ್ಲ ಬ್ಯಾಂಕಿಂಗ್ ವ್ಯವಸ್ಥೆಯ ಬದಲಾವಣೆಗೆ ಒಂದು ಮುಖ್ಯವಾದ ಉದ್ದೇಶವಿದೆ.ಅದೇನೆಂದರೆ ಗ್ರಾಮೀಣ ಭಾಗದ ದುರ್ಬಲ ವರ್ಗಕ್ಕೆ ಸೇರಿದ ಜನರ ಆರ್ಥಿಕ ಪರಿಸ್ಥಿತಿಯನ್ನು ಸಂಧಾರಿಸಿ ರಾಷ್ಟ್ರದ ಅಭಿವೃದ್ಧಿಯನ್ನು ತ್ವರಿತಗೊಳಿಸುವ ಚಲನಾತ್ಮಕ ಪಾತ್ರವನ್ನು ಬ್ಯಾಂಕುಗಳು ನಿರ್ವಹಿಸಬಲ್ಲವೆನುವ ದೃಢ ವೆಶ್ವಾಸ ಬಹು ಮುಖ್ಯವಾದದಾಗಿದೆ.ಒಂದು ನಿರ್ದಿಷ್ಟವಾದ ವರ್ಗದ "ಬ್ಯಾಂಕಿಂಗ್ ಪದ್ದತಿಯಿಂದ ಬಹು ಜನರ" ಬ್ಯಾಂಕಿಂಗ್ ಪದ್ದತಿಗೆ ಬದಲಾಯಿಸುವ ನಿರ್ಧಾರ ತೆಗೆದುಕೊಳುಲಾಯಿತು. ಬದಲಾದ ಪದ್ದತಿಯಿಂದ ಗ್ರಾಮೀಣ ಭಾಗದ ದುರ್ಬಲ ವರ್ಗದ ಜನರಿಗೆ ಪತ್ತಿನ ಸೌಲಭ್ಯಾವನ್ನು ವಿಸ್ತರಿಸುವ ಮಹೆತ್ತರ ಕರ್ಯದಲ್ಲಿ ತೊಡಗಿದವು. ಸಾರ್ವಜನಿಕ ಬ್ಯಾಂಕಗಳು "ಲಾಭದ ಧ್ಯಯ "ದಿಂದ "ಪ್ರಗತಿಯೊಂದಿಗೆ ಲಾಭ" ಸಾಧಿಸುವ ಗುರಿಯನ್ನು ಇಟ್ಟುಕೊಂಡವು.ಆರ್ಥಿಕ ಅಭಿವೃದ್ಧಿಯು ಪ್ರಪಂಚದ ಎಲ್ಲಾ ರಾಷ್ಟ್ರಗಳಿಗೂ ಅವಶ್ಯವಿದೆ. ಆದರೆ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅದು ಅತೀ ಮುಖ್ಯವಾಗಿದೆ. ಪ್ರತಿಯೊಂದು ರಾಷ್ಟ್ರದ ಸಮಸ್ಯೆಗಳಿಗೆ ತನ್ನದೇ ಆದ ಉತ್ತರಗಳೆರುತ್ತವೆ. ಇತರ ಅಭಿವೃದ್ಧಿ ಶೀಲ ರಾಷ್ಟ್ರಗಳ ಅನುಭವವು ಈ ರಾಷ್ಟ್ರಗಳ ಒಟ್ಟಾರೆ ಅಭಿವೃದ್ಧಿಗೆ ಉಪಯುಕ್ತ್ತವಾದ ಮಾರ್ಗದರ್ಶನ ನೀಡಬಲ್ಲದು.

ಉಲ್ಲೇಖ

Tags:

ವಾಣಿಜ್ಯ ಬ್ಯಾಂಕ್ ವಾಣಿಜ್ಯ ಬ್ಯಾಂಕುಗಳುವಾಣಿಜ್ಯ ಬ್ಯಾಂಕ್ ವಾಣಿಜ್ಯ ಬ್ಯಾಂಕುಗಳ ಕಾರ್ಯಗಳುವಾಣಿಜ್ಯ ಬ್ಯಾಂಕ್ ಬ್ಯಾಂಕೋದ್ಯಮ ಪದ್ಧತಿಯ ಪ್ರಕಾರಗಳುವಾಣಿಜ್ಯ ಬ್ಯಾಂಕ್ ಅಭಿವೃದ್ಧಿ ಶೀಲಾರಾಷ್ಟ್ರಗಳಲ್ಲಿ ವಾಣಿಜ್ಯ ಬ್ಯಾಂಕುಗಳ ಪಾತ್ರವಾಣಿಜ್ಯ ಬ್ಯಾಂಕ್ ಉಲ್ಲೇಖವಾಣಿಜ್ಯ ಬ್ಯಾಂಕ್ಇಟಾಲಿಯನ್ಬ್ಯಾಂಕ್

🔥 Trending searches on Wiki ಕನ್ನಡ:

ಮೊಗಳ್ಳಿ ಗಣೇಶವಸುಧೇಂದ್ರಕಂಠೀರವ ನರಸಿಂಹರಾಜ ಒಡೆಯರ್ನಾಲ್ವಡಿ ಕೃಷ್ಣರಾಜ ಒಡೆಯರುಭಾರತದ ಸರ್ವೋಚ್ಛ ನ್ಯಾಯಾಲಯಭಾರತೀಯ ಸಶಸ್ತ್ರ ಪಡೆಅಲ್ಲಮ ಪ್ರಭುಪಾಂಡವರುಸಮಾಜಶಾಸ್ತ್ರಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣದೆಹಲಿ ಸುಲ್ತಾನರುಭೋವಿಹರಪ್ಪವೈದೇಹಿವಾಯು ಮಾಲಿನ್ಯಸಂಸ್ಕೃತವಿಶ್ವ ಮಹಿಳೆಯರ ದಿನಕರ್ನಾಟಕ ಪೊಲೀಸ್ಮಾನವ ಹಕ್ಕುಗಳುಲಕ್ಷ್ಮೀಶವೇದ (2022 ಚಲನಚಿತ್ರ)ದಾಸ ಸಾಹಿತ್ಯಸುದೀಪ್ದೇವನೂರು ಮಹಾದೇವಜವಾಹರ‌ಲಾಲ್ ನೆಹರುಕೇಂದ್ರಾಡಳಿತ ಪ್ರದೇಶಗಳುಸೋನು ಗೌಡಇಂದಿರಾ ಗಾಂಧಿಉಡುಪಿ ಜಿಲ್ಲೆಯಶವಂತರಾಯಗೌಡ ಪಾಟೀಲನಾಗೇಶ ಹೆಗಡೆಬಸವರಾಜ ಕಟ್ಟೀಮನಿಅಮೇರಿಕದ ಫುಟ್‌ಬಾಲ್ಬೆಸಗರಹಳ್ಳಿ ರಾಮಣ್ಣಬಿ. ಆರ್. ಅಂಬೇಡ್ಕರ್ಕ್ರೋಮ್ ಕಾರ್ಯಾಚರಣಾ ವ್ಯವಸ್ಥೆಭಾರತದ ಜನಸಂಖ್ಯೆಯ ಬೆಳವಣಿಗೆಮದಕರಿ ನಾಯಕಬೆಳವಡಿ ಮಲ್ಲಮ್ಮರೋಮನ್ ಸಾಮ್ರಾಜ್ಯಪುಟ್ಟರಾಜ ಗವಾಯಿವಾದಿರಾಜರುಆದೇಶ ಸಂಧಿವೀರಪ್ಪ ಮೊಯ್ಲಿರಾಶಿಶಿವಕುಮಾರ ಸ್ವಾಮಿಭಾರತೀಯ ರಿಸರ್ವ್ ಬ್ಯಾಂಕ್ಸುಭಾಷ್ ಚಂದ್ರ ಬೋಸ್ಬುದ್ಧಜನಪದ ಕ್ರೀಡೆಗಳುಪು. ತಿ. ನರಸಿಂಹಾಚಾರ್ವಿಕ್ರಮಾದಿತ್ಯ ೬ಬೆಟ್ಟದಾವರೆರಾಣಿ ಅಬ್ಬಕ್ಕಗೃಹ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳುನರಿಅಕ್ಷಾಂಶಶರಣಬಸವೇಶ್ವರ ದೇವಸ್ಥಾನ ಕಲಬುರಗಿರತ್ನತ್ರಯರುಹರಿಹರ (ಕವಿ)ಅಂತರಜಾಲಚಂದ್ರಶೇಖರ ವೆಂಕಟರಾಮನ್ಕಾಡ್ಗಿಚ್ಚುಕನ್ನಡದಲ್ಲಿ ಪ್ರವಾಸ ಸಾಹಿತ್ಯದೇವರ/ಜೇಡರ ದಾಸಿಮಯ್ಯಯು.ಆರ್.ಅನಂತಮೂರ್ತಿಹೃದಯಧರ್ಮಜ್ಞಾನಪೀಠ ಪ್ರಶಸ್ತಿಪಂಜೆ ಮಂಗೇಶರಾಯ್ಕಾಗೆಭಾರತದ ಮುಖ್ಯಮಂತ್ರಿಗಳುಋತುತುಳಸಿತತ್ಪುರುಷ ಸಮಾಸದಲಿತ🡆 More