ವಸುಂಧರಾ ದೊರೈಸ್ವಾಮಿ

'ವಸುಂಧರ ದೊರೈಸ್ವಾಮಿ', ದಿವಂಗತ ಶ್ರೀ ಕೆ.

ರಾಜರತ್ನಂ ಪಿಳ್ಳೆಯವರ ಬಳಿ ಶಿಕ್ಷಣ ಪಡೆದು ವಿದ್ವತ್ ನಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದರು. ಪಂಡನಲ್ಲೂರು ಶೈಲಿಯ ಇಂದಿನ ಪ್ರಮುಖ ನರ್ತಕರಲ್ಲಿ ಒಬ್ಬರು. ರಾಜ್ಯ, ರಾಷ್ಟ್ರದ ಪ್ರಮುಖ ಸಭೆ, ಸಮ್ಮೇಳನಗಳಲ್ಲಿ ನರ್ತಿಸಿದ್ದಾರೆ. ಸಿಂಗಾಪುರದಲ್ಲೂ ತಮ್ಮ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ದೂರದರ್ಶನ ವಾಹಿನಿಯ ಎ ಗ್ರೇಡ್ ಕಲಾವಿದೆಯಾಗಿರುವ ವಸುಂಧರಾರವರ ಭರತನಾಟ್ಯ ಕಾರ್ಯಕ್ರಮಗಳು, ರಾಷ್ಟ್ರೀಯ ವಾಹಿನಿಯಲ್ಲಿ ಹಲವಾರು ಬಾರಿ ಬಿತ್ತರಗೊಂಡಿವೆ. ಯೋಗ ಮತ್ತು ಭರತನಾಟ್ಯ ಕುರಿತು ತೌಲನಿಕ ಅಧ್ಯಯನ ಮಾಡಿರುವ 'ಡಾ. ವಸುಂಧರಾ ದೊರೈಸ್ವಾಮಿ' ಯವರು ನೃತ್ಯ ರೂಪಕಗಳನ್ನು ನಿರ್ದೇಶಿಸಿದ್ದಾರೆ. ಮೈಸೂರಿನಲ್ಲಿ 'ವಸುಂಧರಾ ಪರ್ಫಾರ್ಮಿಂಗ್ ಆ'ರ್ಟ್ಸ್' (VPAC) ಎಂಬ ಸಂಸ್ಥೆಯನ್ನು ೧೯೮೭, ರ, ಏಪ್ರಿಲ್, ೭ ರಂದು ಸ್ಥಾಪಿಸಿ, ಕಿರಿಯರಿಗೆ, ನೃತ್ಯಾಸಕ್ತರಿಗೆ ಶಿಕ್ಷಣವನ್ನು ನೀಡುತ್ತಿದ್ದಾರೆ. ೨೦೧೦-೧೧ ರ ಸಾಲಿನಲ್ಲಿ ಇವರ 'ವಿ.ಪಿ.ಎ.ಸಿ ಸಂಸ್ಥೆ' ಗೆ ೨೫ ವರ್ಷ ತುಂಬಿದ್ದು ಹಲವಾರು ಕಾರ್ಯಕ್ರಮಗಳನ್ನು ವರ್ಷವಿಡೀ ಹಮ್ಮಿಕೊಳ್ಳಲಾಗಿತ್ತು. ವಿ. ಪಿ. ಎ. ಸಿ. ಸಂಸ್ಥೆ, ತಪ್ಪದೆ ೪ ಪ್ರಮುಖ ಹಬ್ಬಗಳನ್ನು ವರ್ಷದಲ್ಲಿ ಆಚರಿಸುವ ಏರ್ಪಾಡುಮಾಡುತ್ತಾ ಬಂದಿದೆ.

  • ಪಲ್ಲವೋತ್ಸವ-ಇದು ಉದಯೋನ್ಮುಖ ಕಲಾವಿದರಿಗಾಗಿಯೇ ವಿಶೇಷವಾಗಿ ಆಯೋಜಿಸಲಾಗಿದೆ.
  • ನಟರಾಜೋತ್ಸವ- ಪುರುಷ ನೃತ್ಯ ಪಟುಗಳು ಮತ್ತು ಪುರುಷ-ಸ್ತ್ರೀ ಕಲಾವಿದರು ಜೊತೆಯಲ್ಲಿ ಮಾಡುವ ನೃತ್ಯ ಕ್ಕಾಗಿ ಮೀಸಲು.
  • ಪಾರಂಗೋತ್ಸವ-ನೃತ್ಯದಲ್ಲಿ ಸಾಕಷ್ಟು ಸಾಧಿಸಿದ ಕಲಾವಿದರಿಗೆ.
  • ಚಿಗುರು ಸಂಜೆ-ಚಿಕ್ಕ ಮಕ್ಕಳಿಗೆ, ಅಂದರೆ, ೧೨ ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕ-ಬಾಲಕಿಯರಿಗೆ, ಉತ್ತೇಜಿನ ಕೊಡುವ ಮಾರ್ಗದಲ್ಲಿ ಆಯೋಜಿಸಲಾಗಿದೆ.
ವಸುಂಧರಾ ದೊರೈಸ್ವಾಮಿ
ವಸುಂಧರಾ ದೊರೈಸ್ವಾಮಿ

ಇದಲ್ಲದೆ ಈ ನೃತ್ಯಶಾಲೆಯಲ್ಲಿ ತರಪೇತಾಗಿ ಸಾಧನೆಮಾಡಿದ ಕಲಾವಿದರಿಗೆ ಪ್ರೋತ್ಸಾಹನೀಡಲು, ಬಿರುದು, ಹಾಗೂ ಪದಕಗಳನ್ನು ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ.

  • ಶೃತಿ ಸಾಗರ, (ಸಂಗೀತ ವಿಭಾಗದಲ್ಲಿ)
  • ನೃತ್ಯ ಸುಂದರಿ,(ನರ್ತನ ವಿಭಾಗದಲ್ಲಿ)
  • ವಿದ್ಯಾಸಾಗರ, (ಸಾಹಿತ್ಯ ವಿಭಾಗದಲ್ಲಿ) ಎನ್ನುವ ಪ್ರಶಸ್ತಿ, ಬಿರುದುಗಳನ್ನು ಪ್ರದಾನಮಾಡಲಾಗುತ್ತದೆ.

ಜನನ, ವಿದ್ಯಾಭ್ಯಾಸ

ವಸುಂಧರ, ದಿವಂಗತ, 'ಮೂಡ ಬಿದ್ರಿಯ ಪಿ. ನಾಗರಾಜ್', ಮತ್ತು 'ವರದಾ ದೇವಿ'ಯವರ ಪ್ರೀತಿಯ ಮಗಳಾಗಿ ಜನಿಸಿದರು. ೪ ವರ್ಷ ಪ್ರಾಯದಲ್ಲೇ ನರ್ತನದಲ್ಲಿ ಅಸಕ್ತಿ ತೋರಿಸುತ್ತಿದ್ದರು. ಮುರಳೀಧರ ರಾವ್ ಎನ್ನುವ ಗುರುಗಳು ಬಾಲೆಗೆ ನೃತ್ಯ ಕಲೆಯ ಪರಿಚಯ ಮಾಡಿದರು. ಯುವ ವಯಸ್ಸಿನ ವಸುಂಧರ, ಎಚ್. ಎಸ್. ದೊರೈಸ್ವಾಮಿಯವರನ್ನು ವಿವಾಹವಾಗಿ ಮೈಸೂರು ನಗರಕ್ಕೆ ಸೇರಿದರು. ಅಲ್ಲಿ ಪತಿ, ಹಾಗೂ ಪರಿವಾರದ ಸಹಕಾರದಿಂದ ಬೇಗ ಮೈಸೂರರಮನೆಯ ಪ್ರಮುಖರ ಪರಿಚಯಮಾಡಿಕೊಂಡರು. ಹೀಗಾಗಿ ಸಂಗೀತ ಮತ್ತು ನೃತ್ಯಕಲೆಯಲ್ಲಿ ಬೇಗ ಸಾಧನೆಮಾಡಲು ಅವಕಾಶವಾಯಿತು.

ಮೆಲ್ಬರ್ನ್ ಕೇಂದ್ರ

ಇವರ ಸಕ್ರಿಯ ಭರತನಾಟ್ಯ ತರಬೇತಿ ಕೇಂದ್ರದ ಕಚೇರಿ, ಆಸ್ಟ್ರೇಲಿಯದ ಮೆಲ್ಬರ್ನ್ ನಗರದಲ್ಲಿದೆ. ಅದರ ಮೇಲ್ವಿಚಾರಣೆಯನ್ನು ಅವರ ಸೊಸೆ, 'ಭಟ್' ನೋಡಿಕೊಳ್ಳುತ್ತಿದ್ದಾರೆ. ಎರಡು ಅವಧಿಯಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕ್ಯಾಡೆಮಿಯ ಸದಸ್ಯೆಯೂ ಆಗಿ ಕಾರ್ಯ ನಿರ್ವಹಿಸಿದ್ದರು.

ಪ್ರಶಸ್ತಿಗಳು

  • ಸುರಸಿಂಗಾರ್ ಸಂಸದ್ ನ ಶಿಂಗಾರಮಣಿ ಬಿರುದು
  • ೧೯೯೦-೯೧ ರ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕ್ಯಾಡೆಮಿಯ ಕರ್ನಾಟಕ ಕಲಾರತ್ನ ಪ್ರಶಸ್ತಿ

ಬಾಹ್ಯ ಸಂಪರ್ಕ

Tags:

ವಸುಂಧರಾ ದೊರೈಸ್ವಾಮಿ ಜನನ, ವಿದ್ಯಾಭ್ಯಾಸವಸುಂಧರಾ ದೊರೈಸ್ವಾಮಿ ಮೆಲ್ಬರ್ನ್ ಕೇಂದ್ರವಸುಂಧರಾ ದೊರೈಸ್ವಾಮಿ ಪ್ರಶಸ್ತಿಗಳುವಸುಂಧರಾ ದೊರೈಸ್ವಾಮಿ ಬಾಹ್ಯ ಸಂಪರ್ಕವಸುಂಧರಾ ದೊರೈಸ್ವಾಮಿ

🔥 Trending searches on Wiki ಕನ್ನಡ:

ನಾಲಿಗೆಕನ್ನಡ ನ್ಯೂಸ್ ಟುಡೇಮಲ್ಲಿಕಾರ್ಜುನ ಜ್ಯೋತಿರ್ಲಿಂಗಮಂಗಳ (ಗ್ರಹ)ಕಾನೂನುಆದಿ ಶಂಕರಹಲ್ಮಿಡಿವೇದಾವತಿ ನದಿಕರ್ಣಾಟ ಭಾರತ ಕಥಾಮಂಜರಿಧರ್ಮಸ್ಥಳಬುಡಕಟ್ಟುಕೃಷ್ಣರಾಜಸಾಗರಭಾರತದ ರಾಷ್ಟ್ರೀಯ ಚಿನ್ಹೆಗಳುಆಭರಣಗಳುಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಮಾಸ್ತಿ ವೆಂಕಟೇಶ ಅಯ್ಯಂಗಾರ್ದ್ರಾವಿಡ ಭಾಷೆಗಳುಗಂಗಾಗುಬ್ಬಚ್ಚಿಗಂಗ (ರಾಜಮನೆತನ)ಶೃಂಗೇರಿ ಶಾರದಾಪೀಠದಿಕ್ಕುಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆನಿರುದ್ಯೋಗಸಂಭೋಗಹುಬ್ಬಳ್ಳಿಶ್ರೀಕೃಷ್ಣದೇವರಾಯಗೋಡಂಬಿಭಾರತದಲ್ಲಿನ ಶಿಕ್ಷಣಛಂದಸ್ಸುಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಕೃಷ್ಣದೇವರಾಯಬ್ರಾಹ್ಮಣಸಾರಾ ಅಬೂಬಕ್ಕರ್ಆದಿ ಶಂಕರರು ಮತ್ತು ಅದ್ವೈತವಿಶ್ವ ಕನ್ನಡ ಸಮ್ಮೇಳನಅಮ್ಮಚಿತ್ರದುರ್ಗ ಕೋಟೆರಾಷ್ಟ್ರಕವಿಬೆರಳ್ಗೆ ಕೊರಳ್ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಭಾರತದಲ್ಲಿನ ಚುನಾವಣೆಗಳುಕಂದಭಾರತದ ರಾಷ್ಟ್ರಪತಿಗಳ ಪಟ್ಟಿಕರ್ನಾಟಕ ಸರ್ಕಾರಕೊಡಗುತಾಜ್ ಮಹಲ್ಶೈಕ್ಷಣಿಕ ಮನೋವಿಜ್ಞಾನಯೋಗಒಗಟುಬಿರಿಯಾನಿಮುಖ್ಯ ಪುಟಲಡಾಖ್ಸೂರ್ಯ (ದೇವ)ಪಿ.ಲಂಕೇಶ್ಪಂಪಕನ್ನಡ ವ್ಯಾಕರಣಬಿ. ಎಂ. ಶ್ರೀಕಂಠಯ್ಯವಾಟ್ಸ್ ಆಪ್ ಮೆಸ್ಸೆಂಜರ್ತಾಳಗುಂದ ಶಾಸನಕನ್ನಡ ಸಂಧಿದುರ್ಯೋಧನಕರ್ನಾಟಕದ ಜಲಪಾತಗಳುದಾವಣಗೆರೆಉಪನಯನಓಂ ನಮಃ ಶಿವಾಯಪೂನಾ ಒಪ್ಪಂದಕನ್ನಡದಲ್ಲಿ ಸಣ್ಣ ಕಥೆಗಳುಶಬ್ದಕೋಟಿ ಚೆನ್ನಯಸಮುದ್ರಗುಪ್ತಮಾಟ - ಮಂತ್ರಜಿ.ಎಸ್. ಘುರ್ಯೆನಕ್ಷತ್ರತೆರಿಗೆ೨೦೧೬🡆 More