ಯುನೈಟೆಡ್ ಕಿಂಗ್ಡಮ್ ಸಾರ್ವತ್ರಿಕ ಚುನಾವಣೆ, 2017

ಯುನೈಟೆಡ್ ಕಿಂಗ್ಡಮ್ ಸಾರ್ವತ್ರಿಕ ಚುನಾವಣೆ, 2017
ಯೂರೋಪಿನಲ್ಲಿ ಯು.ಕೆ. Location UK EU Europe

ಅವಧಿ ಪೂರ್ವ ಚುನಾವಣೆ

  • 2017 ರ ಯುನೈಟೆಡ್ ಕಿಂಗ್ಡಮ್ ಸಾರ್ವತ್ರಿಕ ಚುನಾವಣೆಯು 8 ಜೂನ್ 2017 ರಂದು ನಡೆಯಿತು. 650 ಸಂಸದೀಯ ಕ್ಷೇತ್ರಗಳಲ್ಲಿ ಪ್ರತಿಯೊಂದೂ ಸಂಸತ್ತಿನ ಕೆಳಮನೆಯಾದ ಹೌಸ್ ಆಫ್ ಕಾಮನ್ಸ್ಗೆ ಸಂಸತ್ತಿನ ಎಲ್ಲಾ ಸ್ಥಾನಗಳಿಗೆ ಸಂಸತ್ ಸದಸ್ಯರನ್ನು(ಎಂಪಿ) ಚುನಾಯಿಸಿತು. ನಿಯತಕಾಲಿಕ (Fixed-term) ಪಾರ್ಲಿಮೆಂಟ್ ಆಕ್ಟ್ 2011 ರ ಅನುಸಾರ, ಚುನಾವಣೆ 7 ಮೇ 2020 ರ ವರೆಗೆ ಅಗತ್ಯ ಇರಲಿಲ್ಲ.
ಯುನೈಟೆಡ್ ಕಿಂಗ್ಡಮ್ ಸಾರ್ವತ್ರಿಕ ಚುನಾವಣೆ, 2017 
ಜೆರೆಮಿ ಕೋರ್ಬಿನ ಲೇಬರ್ ಪಕ್ಷದ ನಾಯಕ (Jeremy Corbyn speaking at the Labour Party General Election Launch 2017 cropped)
  • ತಮ್ಮ ಬಹುಮತ ಹೆಚ್ಚಿಸಿಕೊಳ್ಳುವುದಕ್ಕಾಗಿ ಅವಧಿಗೆ ಮೊದಲೇ ಚುನಾವಣೆಗೆ ಹೋದ ಬ್ರಿಟನ್‌ ಪ್ರಧಾನಿ ತೆರೆಸಾ ಮೇ ಅವರಿಗೆ ಭಾರಿ ಮುಖಭಂಗವಾಗಿದೆ. ಅವರ ಕನ್ಸರ್ವೇಟಿವ್‌ ಪಾರ್ಟಿ ಅತಿ ದೊಡ್ಡ ಪಕ್ಷವಾಗಿ ಮೂಡಿ ಬಂದಿದ್ದರೂ ಬಹುಮತ ಕಳೆದುಕೊಂಡಿದೆ. ಆದರೆ ಡೆಮಾಕ್ರಟಿಕ್‌ ಯೂನಿಯನಿಸ್ಟ್‌ ಪಾರ್ಟಿ (ಡಿಯುಪಿ) ಬೆಂಬಲದಲ್ಲಿ ಸರ್ಕಾರ ರಚಿಸುವುದಾಗಿ ಮೇ ಅವರು ಹೇಳಿದ್ದಾರೆ. ಗುರುವಾರದ ಮತ ಎಣಿಕೆಯಲ್ಲಿ ಯಾರಿಗೂ ಸ್ಪಷ್ಟ ಬಹುಮತ ದೊರಕಿಲ್ಲ. ಪ್ರಬಲ ಜನಾದೇಶದ ನಿರೀಕ್ಷೆಯಲ್ಲಿದ್ದ ಬ್ರಿಟಿಷ್‌ ಪ್ರಧಾನಿ ತೆರೇಸಾ ಮೇ ತೀವ್ರ ನಿರಾಶೆಗೆ ಗುರಿಯಾಗಿರುವ ನಡುವೆಯೂ ತಾನು ದೇಶಕ್ಕೆ ಸ್ಥಿರತೆಯನ್ನು ಒದಗಿಸಲು ಶ್ರಮಿಸುವೆ ಎಂದಿದ್ದಾರೆ. ಲೇಬರ್‌ ಪಕ್ಷದ ಆಕೆಯ ಎದುರಾಳಿ ಜೆರೆಮಿ ಕಾರ್ಬಿನ್‌ ಅವರು "ತೆರೇಸಾ ಮೇ ತಮ್ಮ ಹುದ್ದೆಯಿಂದ ಕೆಳಗಿಳಿಯಬೇಕು' ಎಂದು ಆಗ್ರಹಿಸಿದ್ದಾರೆ. 650 ಸದಸ್ಯ ಬಲದ ಬ್ರಿಟನ್‌ ಕೆಳಮನೆಯಲ್ಲಿ ಸರ್ಕಾರ ರಚಿಸಲು 326 ಸ್ಥಾನಗಳು ಬೇಕು. ಕನ್ಸರ್ವೇಟಿವ್ ಪಾರ್ಟಿ 318 ಕ್ಷೇತ್ರಗಳಲ್ಲಿ ಗೆದ್ದಿದ್ದರೆ ಲೇಬರ್‌ ಪಾರ್ಟಿಗೆ 261 ಸ್ಥಾನಗಳು ದೊರೆತಿವೆ.

ಚುನಾವಣೆಗೆ ಕಾರಣ

  • 25/06/2016 ಐರೋಪ್ಯ ಒಕ್ಕೂಟದಿಂದ (ಇ.ಯು) ಬ್ರಿಟನ್‌ ಹೊರಗೆ ಬರಬೇಕು (ಬ್ರೆಕ್ಸಿಟ್) ಎಂದು ಅಲ್ಲಿನ ಜನರು ತೀರ್ಪು ನೀಡಿದ್ದಾರೆ (24-6-2016). ಈ ಬಗ್ಗೆ ಗುರುವಾರ ನಡೆದ ಜನಮತಗಣನೆಯ ಫಲಿತಾಂಶ ಪ್ರಕಟವಾಗಿದ್ದು ಶೇ 51.9ರಷ್ಟು ಜನರು ಇ.ಯು ಕೂಟದಿಂದ ಪ್ರತ್ಯೇಕವಾಗಬೇಕು ಎಂದು ಹೇಳಿದ್ದಾರೆ.ಇದು ಬ್ರೆಕ್ಸಿಟ್‌ ವಿರುದ್ಧ ನಿಂತಿದ್ದ ಪ್ರಧಾನಿ ಡೇವಿಡ್‌ ಕ್ಯಾಮರೂನ್‌ ಅವರ ರಾಜೀನಾಮೆಗೆ ಕಾರಣವಾಗಿದೆ. ಯುರೋಪ್‌ನ ಒಗ್ಗಟ್ಟಿಗಾಗಿ ರಚನೆಯಾದ 28 ದೇಶಗಳ ಸದಸ್ಯತ್ವವಿರುವ ಐರೋಪ್ಯ ಒಕ್ಕೂಟದ ಏಕತೆಗೆ ದೊಡ್ಡ ಹೊಡೆತ ನೀಡಿದೆ. ಐರೋಪ್ಯ ಒಕ್ಕೂಟದಿಂದ ‘ವಿಚ್ಛೇದನ’ಕ್ಕೆ ಮುಂದಾಗಿರುವ ಬ್ರಿಟನ್‌, ಜಗತ್ತಿನ ಐದನೇ ಅತಿ ದೊಡ್ಡ ಅರ್ಥ ವ್ಯವಸ್ಥೆ.
  • ಥೆರೇಸಾ ಮೇ , ‘’ಬ್ರೆಕ್ಸಿಟ್ ಅಂದರೆ ಬ್ರೆಕ್ಸಿಟ್ ಅಷ್ಟೇ. ಐರೋಪ್ಯ ಒಕ್ಕೂಟದಿಂದ ಹೊರಬರಬೇಕು ಎಂದು ನಿರ್ಧಾರ ಕೈಗೊಂಡಾಗಿದೆ. ಮುಂದಿನ ದಿನಗಳಲ್ಲಿ ಅದರಿಂದ ಯಶಸ್ಸು ಕಂಡುಕೊಂಡಿರುವುದನ್ನು ಎಂದು ತೋರಿಸಬೇಕಾಗಿದೆ. ಇನ್ನು ಎರಡನೇಯದಾಗಿ ನಮ್ಮ ದೇಶವನ್ನು ಮತ್ತು ಪಕ್ಷವನ್ನು ಒಗ್ಗಟ್ಟಾಗಿ ಇರಿಸಬೇಕು. ಮೂರನೇಯದಾಗಿ ದೇಶಕ್ಕಾಗಿ ಧೈರ್ಯದ ನಿರ್ಣಯಗಳನ್ನು ಕೈಗೊಳ್ಳಬೇಕಾಗಿದೆ. ಅದು ಆಯ್ದ ವ್ಯಕ್ತಿಗಳಿಗಾಗಿ ಇರಬಾರದು. ಒಟ್ಟಾರೆ ದೇಶಕ್ಕೇ ಅನುಕೂಲವಾಗಿರಬೇಕು’’, ಎಂದಿದ್ದಾರೆ.
  • ಬಲವಾದ ಜನಾದೇಶವನ್ನು ಪಡೆಯಬೇಕೆಂಬ ಬ್ರಿಟನ್‌ ಪ್ರಧಾನಿ ಥೆರೆಸಾ ಮೇ ಅವರ ಲೆಕ್ಕಾಚಾರ ಸಂಪೂರ್ಣವಾಗಿ ಉಲ್ಟಾ ಹೊಡೆದಿದೆ. ಇದೇ ವೇಳೆ ಸ್ಕಾಟ್ಲಂಡ್‌ನ‌ಲ್ಲಿ ಸ್ವಾತಂತ್ರ್ಯ ಪರ ಸ್ಕಾಟಿಶ್‌ ನ್ಯಾಶನಲಿಸ್ಟ್‌ ಪಾರ್ಟಿ ಭಾರೀ ಹಿನ್ನಡೆಗೆ ಗುರಿಯಾಗಿದೆ. 2015ರಲ್ಲಿ ಇದು ಸ್ಕಾಟ್ಲಂಡ್‌ನ‌ 59ರಲ್ಲಿ 56 ಸ್ಥಾನಗಳನ್ನು ಪಡೆದಿತ್ತು. ಈ ಬಾರಿ ಅದರ ನಿರ್ವಹಣೆ ಅತ್ಯಂತ ಕಳಪೆಯಾಗಿದೆ. ತನ್ನ ಬಹುತೇಕ ಸ್ಥಾನಗಳನ್ನು ಅದು ಕನ್‌ಸರ್ವೇಟಿವ್‌, ಲೇಬರ್‌ ಮತ್ತು ಲಿಬರಲ್‌ ಡೆಮೊಕ್ರಾಟ್ಸ್‌ಗಳಿಗೆ ಬಿಟ್ಟುಕೊಟ್ಟಿದೆ.

ಫಲಿತಾಂಶ

  • ಬ್ರಿಟಿಷ್‌ ಪ್ರಧಾನಿ ತೆರೆಸಾ ಮೇ ಅವರ ಕನ್‌ಸರ್ವೇಟಿವ್‌ ಪಕ್ಷ ಬ್ರಿಟನ್‌ ಸಂಸತ್ತಿಗೆ ನಡೆದ ದಿಢೀರ್‌ ಚುನಾವಣೆಯಲ್ಲಿ ಬಹುಮತ ಪಡೆಯಲು ವಿಫ‌ಲವಾಗಿದೆ. ಪರಿಣಾಮವಾಗಿ ಬ್ರಿಟಿಷ್‌ ಸಂಸತ್ತು ತ್ರಿಶಂಕು ಸ್ಥಿತಿಯನ್ನು ತಲುಪಿದೆ ಎಂದು ಮಾಧ್ಯಮ ವರದಿಗಳು ಇಂದು ಶುಕ್ರವಾರತಿಳಿಸಿವೆ.
  • ದಿ.೯-೮-೨೦೧೭ರ ಗುರುವಾರದ ಮತ ಎಣಿಕೆಯಲ್ಲಿ ಯಾರಿಗೂ ಸ್ಪಷ್ಟ ಬಹುಮತ ದೊರಕಿಲ್ಲ. ಪ್ರಬಲ ಜನಾದೇಶದ ನಿರೀಕ್ಷೆಯಲ್ಲಿದ್ದ ಬ್ರಿಟಿಷ್‌ ಪ್ರಧಾನಿ ತೆರೇಸಾ ಮೇ ತೀವ್ರ ನಿರಾಶೆಗೆ ಗುರಿಯಾಗಿರುವ ನಡುವೆಯೂ ತಾನು ದೇಶಕ್ಕೆ ಸ್ಥಿರತೆಯನ್ನು ಒದಗಿಸಲು ಶ್ರಮಿಸುವೆ ಎಂದಿದ್ದಾರೆ. ಲೇಬರ್‌ ಪಕ್ಷದ ಆಕೆಯ ಎದುರಾಳಿ ಜೆರೆಮಿ ಕಾರ್ಬಿನ್‌ ಅವರು "ತೆರೇಸಾ ಮೇ ತಮ್ಮ ಹುದ್ದೆಯಿಂದ ಕೆಳಗಿಳಿಯಬೇಕು' ಎಂದು ಆಗ್ರಹಿಸಿದ್ದಾರೆ.
  • 650 ಸದಸ್ಯ ಬಲದ ಬ್ರಿಟನ್‌ ಕೆಳಮನೆಯಲ್ಲಿ ಸರ್ಕಾರ ರಚಿಸಲು 326 ಸ್ಥಾನಗಳು ಬೇಕು. ಕನ್ಸರ್ವೇಟಿವ್ ಪಾರ್ಟಿ 318 (317*) ಕ್ಷೇತ್ರಗಳಲ್ಲಿ ಗೆದ್ದಿದ್ದರೆ ಲೇಬರ್‌ ಪಾರ್ಟಿಗೆ 261 ಸ್ಥಾನಗಳು ದೊರೆತಿವೆ. ಪರಿಣಾಮವಾಗಿ ಬ್ರಿಟನ್‌ "ತ್ರಿಶಂಕು ಸಂಸತ್‌' ನಿಶ್ಚಿತವಾದಂತಾಗಿದೆ. ಜೆರೆಮಿ ಕಾರ್ಬಿನ್‌ ನೇತೃತ್ವದ ಮುಖ್ಯ ವಿರೋಧ ಪಕ್ಷ ಲೇಬರ್ ಪಾರ್ಟಿ ತನ್ನ ಬಲವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದೆ.

ಫಲಿತಾಂಶದ ವಿವರ

  • ಅಂಕಿ–ಅಂಶ
  • 4.9 ಕೋಟಿ ಮತದಾರರು
  • 15 ಲಕ್ಷ ಭಾರತ ಮೂಲದ ಮತದಾರರು
  • 650 ಆಯ್ಕೆಯಾಗಲಿರುವ ಸಂಸದರ ಸಂಖ್ಯೆ
  • ಆವರಣದಲ್ಲಿ ೨೦೧೫ರ ಫಲಿತಾಂಸಕ್ಕೆ ಇರುವ ವ್ಯತ್ಯಾಸ:
  • ಒಟ್ಟು ಸಂಸತ್ತಿನ ಸದಸ್ಯ ಬಲ 650
  • ಕನ್ಸರ್ವೇಟಿವ್ ಪಾರ್ಟಿ 318 (-13)
  • ಡೆಮೊಕ್ರಟಿಕ್ ಊನಿಯನ್ ಪಾರ್ಟಿ :10(+2)
  • ಲೇಬರ್ ಪಾರ್ಟಿ : 262 (+30)
  • ಸ್ಕಾಟಿಶ್ ನ್ಯಾಶನಲ್ ಪಾರ್ಟಿ. : 35 (-20)
  • ಲಿಬರಲ್ ಡೆಮೊಕ್ರಟಿಕ್ ಪಾರ್ಟಿ : 12(+4)
  • ಫಿನ್ ಫೇನ್ :7
  • ಫ್ಲೈಡ್ ಕಮ್ರಿ  : 4
  • ಗ್ರೀನ್ ಪೀಸ್ : 1

ಪರಿಣಾಮ

  • ಬ್ರೆಕ್ಸಿಟ್‌ (ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರ ಹೋಗುವುದು) ಮಾತುಕತೆ ಸಂದರ್ಭದಲ್ಲಿ ತಮಗೆ ಹೆಚ್ಚಿನ ಬಹುಮತ ಬೇಕು ಎಂಬ ಕಾರಣಕ್ಕೆ ಮೇ ಅವರು ಮಧ್ಯಂತರ ಚುನಾವಣೆ ಘೋಷಿಸಿದ್ದರು. ಯಾವ ಪಕ್ಷಕ್ಕೂ ಬಹುಮತ ದಕ್ಕದೆ ಇರುವುದರಿಂದ ಇದೇ 19ರಿಂದ ನಡೆಯಬೇಕಿರುವ ಬ್ರೆಕ್ಸಿಟ್‌ ಮಾತುಕತೆಯ ಮೇಲೆ ಕರಿಛಾಯೆ ಕವಿದಿದೆ.
  • ಅವಧಿಗೆ ಮುನ್ನವೇ ನಡೆದ ಈ ಚುನಾವಣೆಯನ್ನು ‘ಬ್ರೆಕ್ಸಿಟ್‌’ ಚುನಾವಣೆ ಎಂದೇ ಬಣ್ಣಿಸಲಾಗಿತ್ತು. ಬ್ರೆಕ್ಸಿಟ್‌ ಪರವಾಗಿ ಇನ್ನಷ್ಟು ಬಹುಮತ ತಮಗೆ ದೊರೆಯಬಹುದು ಎಂದು ಮೇ ಅವರು ನಂಬಿದ್ದರು. ಆದರೆ, 2016ರ ಜೂನ್‌ನಲ್ಲಿ ನಡೆದ ಜನಮತಗಣನೆಯಲ್ಲಿ ಬ್ರೆಕ್ಸಿಟ್‌ ವಿರುದ್ಧ ಮತ ಚಲಾಯಿಸಿದವರಲ್ಲಿಯೂ ಈ ಚುನಾವಣೆ ಆಶಾಭಾವನೆ ಸೃಷ್ಟಿಸಿತ್ತು. ಈ ಚುನಾವಣೆಯು 2016ರ ಜನಮತಗಣನೆ ಮತ್ತು ಬ್ರೆಕ್ಸಿಟ್‌ ಪರವಾದ ಮೇ ಅವರ ‘ದೃಢ ನಿಲುವ’ನ್ನು ಜನರು ತಿರಸ್ಕರಿಸಬಹುದು ಎಂದು ಅವರು ಭಾವಿಸಿದ್ದರು.
  • ಫಲಿತಾಂಶ ಈ ಎರಡೂ ಗುಂಪಿನ ಆಶಾಭಾವಕ್ಕೆ ತಣ್ಣೀರೆರಚಿದೆ. ಫಲಿತಾಂಶದ ಬಳಿಕ ಮಾತನಾಡಿದ ಮೇ ಅವರು, ‘ನನ್ನ ನಿಲುವು ಹಿಂದಿನಷ್ಟೇ ದೃಢವಾಗಿ ಈಗಲೂ ಇದೆ. ಕನ್ಸರ್ವೇಟಿವ್‌ ಪಾರ್ಟಿಯು ಸ್ಥಿರತೆಯ ಪಕ್ಷವಾಗಿಯೇ ಮುಂದುವರಿಯಲಿದೆ’ ಎಂದು ಹೇಳಿದ್ದಾರೆ. ಈ ಮೂಲಕ ಅವರು ಬ್ರೆಕ್ಸಿಟ್‌ ಪರವಾದ ನಿಲುವಿನಲ್ಲಿ ಯಾವ ಬದಲಾವಣೆಯೂ ಇಲ್ಲ ಎಂಬ ಸುಳಿವು ನೀಡಿದ್ದಾರೆ. ಆದರೆ ಅಲ್ಪಮತದ ಸರ್ಕಾರಕ್ಕೆ ತನಗೆ ಬೇಕಿರುವಂತಹ ಕಾನೂನುಗಳನ್ನು ರೂಪಿಸುವುದು ಅಷ್ಟು ಸುಲಭವಾಗಲಿಕ್ಕಿಲ್ಲ.

ತಪ್ಪು ಸಮೀಕ್ಷೆ

  • ಚುನಾವಣೆಗೆ ಮೊದಲು ನಡೆದ ಹಲವು ಸಮೀಕ್ಷೆಗಳಲ್ಲಿ ಕನ್ಸರ್ವೇಟಿವ್‌ ಪಾರ್ಟಿ ಮತ್ತು ಪ್ರಧಾನಿ ಮೇ ಅವರ ಜನಪ್ರಿಯತೆ ಕುಸಿಯುತ್ತಿದೆ ಎಂಬ ಫಲಿತಾಂಶ ಬಂದಿತ್ತು. ಆದರೆ ಪಕ್ಷವು ಸರಳ ಬಹುಮತ ಪಡೆಯಲು ಯಾವ ಸಮಸ್ಯೆಯೂ ಆಗದು ಎಂದು ಸಮೀಕ್ಷೆಗಳು ಹೇಳಿದ್ದವು. ಆದರೆ ಈಗ ಅದು ಸುಳ್ಳಾಗಿದೆ.

ಡೆಮಾಕ್ರಟಿಕ್‌ ಯೂನಿಯನಿಸ್ಟ್‌ ಪಾರ್ಟಿಯ ಬೆಂಬಲ

  • ಬೆಲ್‌ಫಾಸ್ಟ್‌ (ರಾಯಿಟರ್ಸ್‌): ಮೇ ಅವರ ಹಿನ್ನಡೆಯಿಂದಾಗಿ ಉತ್ತರ ಐರ್ಲೆಂಡ್‌ನ ಸಣ್ಣ ಪಕ್ಷ ಡೆಮಾಕ್ರಟಿಕ್‌ ಯೂನಿಯನಿಸ್ಟ್‌ ಪಾರ್ಟಿಯ (ಡಿಯುಪಿ) ಅದೃಷ್ಟದ ಬಾಗಿಲು ತೆರೆದಿದೆ. ಬ್ರೆಕ್ಸಿಟ್‌ ಮಾತುಕತೆಯಲ್ಲಿ ಈ ಮೂಲಕ ಉತ್ತರ ಐರ್ಲೆಂಡ್‌ ಪ್ರಾಂತ್ಯದ ವಾದಕ್ಕೆ ಹೆಚ್ಚಿನ ಬಲ ದೊರೆಯಲಿದೆ. ಬ್ರಿಟನ್‌ನ ಭಾಗವಾಗಿಯೇ ಉತ್ತರ ಐರ್ಲೆಂಡ್‌ ಮುಂದುವರಿಯಬೇಕು ಎಂದು ಪ್ರತಿಪಾದಿಸುವ ಈ ಪಕ್ಷಕ್ಕೆ ಈ ಬಾರಿ 10 ಸ್ಥಾನಗಳು ದೊರೆತಿವೆ. 318 ಸ್ಥಾನಗಳನ್ನು ಹೊಂದಿರುವ ಮೇ ಅವರಿಗೆ ಡಿಯುಪಿ ಬೆಂಬಲದಿಂದಾಗಿ ಸರಳ ಬಹುಮತ ಪಡೆಯುವುದು ಸಾಧ್ಯವಾಗುತ್ತದೆ.
  • ಸರ್ಕಾರ ರಚಿಸುವುದಕ್ಕಾಗಿ ಡಿಯುಪಿ ಮತ್ತು ಕನ್ಸರ್ವೇಟಿವ್‌ ಪಾರ್ಟಿಯ ನಡುವೆ ಒಪ್ಪಂದ ಏರ್ಪಟ್ಟರೆ ಉತ್ತರ ಐರ್ಲೆಂಡ್‌ನ ರಾಜಕೀಯ ಸಮತೋಲನ ತಪ್ಪುತ್ತದೆ. ಐರ್ಲೆಂಡ್‌ ಜತೆಗೆ ಉತ್ತರ ಐರ್ಲೆಂಡ್‌ ಸೇರಿಸಿ ‘ಯುನೈಟೆಡ್‌ ಐರ್ಲೆಂಡ್‌’ ಎಂಬ ದೇಶ ರಚಿಸಬೇಕು ಎಂಬ ಹೋರಾಟ ಉತ್ತರ ಐರ್ಲೆಂಡ್‌ನಲ್ಲಿ ನಡೆಯುತ್ತಿದೆ. ಆದರೆ ಡಿಯುಪಿ ಈ ಹೋರಾಟದ ವಿರುದ್ಧ ಇದೆ. ಸರ್ಕಾರದ ಭಾಗವಾಗುವ ಮೂಲಕ ಡಿಯುಪಿ ಪ್ರಭಾವ ಹೆಚ್ಚುತ್ತದೆ.

ಬ್ರಿಟನ್ ಸಂಸತ್ತಿನಲ್ಲಿ ಭಾರತೀಯ ಸಂಜಾತರು

  • ಯು.ಕೆ. 2017ರ ಚುನಾವಣೆಯಲ್ಲಿ ಆಯ್ಕೆಯಾದ ೧೦ ಜನ ಭಾರತೀಯ ಸಂಜಾತರು. ಕೀತ್ ವಾಸ್ , ವೀರೇಂದ್ರ ಶರ್ಮಾ, ಸೀಮಾ ಮಲ್ಲೋತ್ರಾ , ವಲೇರಿ ವೇಸ್ , ಲೀಸಾ ನಂದಿ ಎಲ್ಲ ಲೇಬರ್ ಪಕ್ಷದವರು. ಪ್ರೀತಿ ಪಟೇಲ್, ಅಲೋಕ್ ಶರ್ಮಾ , ಶೈಲೇಶ್ ವಾರ ರಿಷಿ ಸುನಾಕ್ ಸುಎಲ್ಲಾ ಫರ್ನಾಂಡಿಸ್ ಇವರು ಕನ್ಸರ್ವೇಟಿವ್ ಪಕ್ಷದಿಮದ ಆಯ್ಕೆಯಾದವರು. 2017ರ ಬ್ರಿಟನ್‌ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಪ್ರೀತ್‌ಕೌರ್‌ ಗಿಲ್‌ ಅವರು ಬ್ರಿಟನ್‌ ಸಂಸತ್‌ಗೆ ಆಯ್ಕೆಯಾದ ಮೊದಲ ಸಿಖ್‌ ಮಹಿಳೆ ಎಂಬ ಹೆಗ್ಗಳಿಕೆ ಗಳಿಸಿದ್ದಾರೆ. ಅವರು ಎಡ್ಜ್‌ಬಾಸ್ಟನ್‌ನಲ್ಲಿ ಸಂಸದರಾಗಿದ್ದ ಗಿಸೆಲಾ ಸ್ಟುವರ್ಟ್‌ರ ಬದಲು ಲೇಬರ್‌ ಪಕ್ಷದಿಂದ ಸ್ಪರ್ಧಿಸಿದ್ದರು.

ನೋಡಿ

ಉಲ್ಲೇಖ

Tags:

ಯುನೈಟೆಡ್ ಕಿಂಗ್ಡಮ್ ಸಾರ್ವತ್ರಿಕ ಚುನಾವಣೆ, 2017 ಅವಧಿ ಪೂರ್ವ ಚುನಾವಣೆಯುನೈಟೆಡ್ ಕಿಂಗ್ಡಮ್ ಸಾರ್ವತ್ರಿಕ ಚುನಾವಣೆ, 2017 ಚುನಾವಣೆಗೆ ಕಾರಣಯುನೈಟೆಡ್ ಕಿಂಗ್ಡಮ್ ಸಾರ್ವತ್ರಿಕ ಚುನಾವಣೆ, 2017 ಫಲಿತಾಂಶಯುನೈಟೆಡ್ ಕಿಂಗ್ಡಮ್ ಸಾರ್ವತ್ರಿಕ ಚುನಾವಣೆ, 2017 ಪರಿಣಾಮಯುನೈಟೆಡ್ ಕಿಂಗ್ಡಮ್ ಸಾರ್ವತ್ರಿಕ ಚುನಾವಣೆ, 2017 ತಪ್ಪು ಸಮೀಕ್ಷೆಯುನೈಟೆಡ್ ಕಿಂಗ್ಡಮ್ ಸಾರ್ವತ್ರಿಕ ಚುನಾವಣೆ, 2017 ಡೆಮಾಕ್ರಟಿಕ್‌ ಯೂನಿಯನಿಸ್ಟ್‌ ಪಾರ್ಟಿಯ ಬೆಂಬಲಯುನೈಟೆಡ್ ಕಿಂಗ್ಡಮ್ ಸಾರ್ವತ್ರಿಕ ಚುನಾವಣೆ, 2017 ಬ್ರಿಟನ್ ಸಂಸತ್ತಿನಲ್ಲಿ ಭಾರತೀಯ ಸಂಜಾತರುಯುನೈಟೆಡ್ ಕಿಂಗ್ಡಮ್ ಸಾರ್ವತ್ರಿಕ ಚುನಾವಣೆ, 2017 ನೋಡಿಯುನೈಟೆಡ್ ಕಿಂಗ್ಡಮ್ ಸಾರ್ವತ್ರಿಕ ಚುನಾವಣೆ, 2017 ಉಲ್ಲೇಖಯುನೈಟೆಡ್ ಕಿಂಗ್ಡಮ್ ಸಾರ್ವತ್ರಿಕ ಚುನಾವಣೆ, 2017

🔥 Trending searches on Wiki ಕನ್ನಡ:

ನರ್ಮದಾ ನದಿಪ್ರಲೋಭನೆಜನ್ನಪೃಥ್ವಿರಾಜ್ ಚೌಹಾಣ್ಪ್ರಜಾಪ್ರಭುತ್ವದ ವಿಧಗಳುಚೀನಾದ ಇತಿಹಾಸಹುಣಸೆಯಕೃತ್ತುಬಿ. ಆರ್. ಅಂಬೇಡ್ಕರ್ಚಂದ್ರಶೇಖರ ಕಂಬಾರಶಿವಕುಮಾರ ಸ್ವಾಮಿಕೆ. ಎಸ್. ನಿಸಾರ್ ಅಹಮದ್ಕನ್ನಡವಿರೂಪಾಕ್ಷ ದೇವಾಲಯಭಾರತದ ಪ್ರಧಾನ ಮಂತ್ರಿಗಳ ಪಟ್ಟಿಕೋಲಾರ ಚಿನ್ನದ ಗಣಿ (ಪ್ರದೇಶ)ಪಿತ್ತಕೋಶತೆರಿಗೆವ್ಯಕ್ತಿತ್ವಕರ್ಣಮೂಲಧಾತುಗಳ ಪಟ್ಟಿವಿಶ್ವ ಮಹಿಳೆಯರ ದಿನವಿಷ್ಣುವರ್ಧನ್ (ನಟ)ಸಂಚಿ ಹೊನ್ನಮ್ಮಕುವೆಂಪುಕರ್ನಾಟಕದಲ್ಲಿ ಬ್ಯಾಂಕಿಂಗ್ದಯಾನಂದ ಸರಸ್ವತಿಗೋಕಾಕ ಜಲಪಾತಜ್ಞಾನಪೀಠ ಪ್ರಶಸ್ತಿರಾಮಾಯಣಮುಂಬಯಿ ವಿಶ್ವವಿದ್ಯಾಲಯಡಿ.ವಿ.ಗುಂಡಪ್ಪಬುದ್ಧಕರ್ನಾಟಕ ರತ್ನಜೀವನಚರಿತ್ರೆಅವಲೋಕನಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಹೈನುಗಾರಿಕೆಪುರಾಣಗಳುಭಾರತೀಯ ನೌಕಾಪಡೆರಾಷ್ಟ್ರೀಯ ವರಮಾನನಾಯಕನಹಟ್ಟಿಓಂ ನಮಃ ಶಿವಾಯಶಿಲ್ಪಾ ಶಿಂಧೆಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಮಹಾಭಾರತಋತುಭೂತಾರಾಧನೆಗೀಳು ಮನೋರೋಗಭಾರತೀಯ ಮೂಲಭೂತ ಹಕ್ಕುಗಳುಪ್ರಧಾನ ಖಿನ್ನತೆಯ ಅಸ್ವಸ್ಥತೆಕಾಟೇರಕಾರ್ಲ್ ಮಾರ್ಕ್ಸ್ಕವಿಗಳ ಕಾವ್ಯನಾಮಜೀವವೈವಿಧ್ಯರಾಷ್ಟ್ರೀಯತೆಹೊಯ್ಸಳ ವಾಸ್ತುಶಿಲ್ಪಉಪನಯನಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗರನ್ನಕರ್ನಾಟಕ ಪೊಲೀಸ್ಕನ್ನಡ ಸಾಹಿತ್ಯ ಪ್ರಕಾರಗಳುಡಿಜಿಟಲ್ ಇಂಡಿಯಾಯುಗಾದಿಕುಮಾರವ್ಯಾಸಜಾನ್ ನೇಪಿಯರ್ಪ್ರೀತಿಸುಭಾಷ್ ಚಂದ್ರ ಬೋಸ್ಕಾವೇರಿ ನದಿ ನೀರಿನ ವಿವಾದಮೈಗ್ರೇನ್‌ (ಅರೆತಲೆ ನೋವು)ಲಕ್ಷ್ಮಿಧೂಮಕೇತುಕನ್ನಡ ಅಕ್ಷರಮಾಲೆದ್ವಿರುಕ್ತಿಭಾರತದ ಚುನಾವಣಾ ಆಯೋಗಕರ್ನಾಟಕದ ಜಾನಪದ ಕಲೆಗಳುಜ್ಯೋತಿಷ ಶಾಸ್ತ್ರದ ನಕ್ಷತ್ರಗಳುನಿರ್ವಹಣೆ ಪರಿಚಯ🡆 More