ಯಶ್ನಟ: ಭಾರತೀಯ ಚಲನಚಿತ್ರ ನಟ

ಯಶ್ (ನವೀನ್ ಕುಮಾರ್ ಗೌಡ ಜನ್ಮ ಹೆಸರು) ಭಾರತೀಯ ಚಲನಚಿತ್ರ ನಟ, ಮುಖ್ಯವಾಗಿ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಚಲನಚಿತ್ರಗಳಲ್ಲಿ ಅಭಿನಯಿಸುವದಕ್ಕೆ ಮೊದಲು ಅವರು ರಂಗಕಲೆ ನಾಟಕಗಳು ಮತ್ತು ದೂರದರ್ಶನ ಸೋಪ್ಗಳಲ್ಲಿ ಕಾಣಿಸಿಕೊಂಡರು.

ಯಶ್
ಯಶ್ನಟ: ಆರಂಭಿಕ ಜೀವನ, ವೈಯಕ್ತಿಕ ಜೀವನ, ನಟನಾಗಿ
ಯಶ್, ೨೦೧೭ ರಲ್ಲಿ
Born
ನವೀನ್ ಕುಮಾರ್ ಗೌಡ

(1986-01-08) ೮ ಜನವರಿ ೧೯೮೬ (ವಯಸ್ಸು ೩೮)
ಭುವನಹಳ್ಳಿ, ಹಾಸನ, ಕರ್ನಾಟಕ, ಭಾರತ
Nationalityಭಾರತೀಯ
Other namesರಾಕಿಂಗ್ ಸ್ಟಾರ್ ಯಶ್, ರಾಕಿ ಭಾಯಿ
Occupationನಟ
Years active2004– ಪ್ರಸ್ತುತ
Spouseರಾಧಿಕಾ ಪಂಡಿತ್ (ವಿವಾಹ 2016)
Children2

ಯಶ್ ೨೦೦೭ ರಲ್ಲಿ ಜಂಭದ ಹುಡುಗಿ ಅವರ ಚಲನಚಿತ್ರದ ಚೊಚ್ಚಲ ಪ್ರವೇಶವನ್ನು ಮಾಡಿದರು, ಈ ಚಿತ್ರದಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸಿದರು. ಅವರ ಎರಡನೆಯ ಚಿತ್ರವಾದ ಮೊಗ್ಗಿನ ಮನಸು (೨೦೦೮) ರಲ್ಲಿ, ಅವರು ರಾಧಿಕಾ ಪಂಡಿತ್ ವಿರುದ್ಧ ಪುರುಷ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರವು ಯಶಸ್ಸು ಗಳಿಸಿತು ಮತ್ತು ಅವರಿಗೆ ಅತ್ಯುತ್ತಮ ಪೋಷಕ ನಟ ಫಿಲ್ಮ್ ಫೇರ್ ಪ್ರಶಸ್ತಿಯನ್ನು ತಂದುಕೊಟ್ಟಿತು. ಅವರು ಮೊದಲ ಸಲ(೨೦೧೦), ಕಿರಾತಕ (೨೦೧೧), ಡ್ರಾಮ (೨೦೧೨), ಗೂಗ್ಲಿ (೨೦೧೩), ರಾಜಾ ಹುಲಿ (೨೦೧೩), ಗಜಕೇಸರಿ (೨೦೧೪), ಮುಂತಾದ ಹಲವು ವಾಣಿಜ್ಯ ಯಶಸ್ಸಿನ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಮತ್ತು ಮಿ.ಮಿಸ್ಟರ್ ರಾಮಚಾರಿ (೨೦೧೪) ಮತ್ತು ಮಾಸ್ಟರ್ ಪೀಸ್.(೨೦೧೫) ೨೦೧೬ ಸಂತು ಸ್ಟ್ರೈಟ್ ಫಾರ್ವರ್ಡ್ (೨೦೧೮) ಕೆಜಿಎಫ್ ಚಾಪ್ಟರ್ ೧ (೨೦೨೧) ಕೆಜಿಎಫ್ ಚಾಪ್ಟರ್ ೨. ಕಿರಾತಕ, ನರ್ತನ್ ನಿರ್ದೇಶನದಲ್ಲಿ ಹೊಸ ಚಿತ್ರ. ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಕೂಡ ಆಗಿದ್ದಾರೆ.

ಆರಂಭಿಕ ಜೀವನ

ಅರುಣ್ ಕುಮಾರ್ ಮತ್ತು ಪುಷ್ಪಾ ದಂಪತಿಗಳಿಗೆ ೮ ಜನವರಿ ೧೯೮೬ ರಂದು ಹಾಸನ ಜಿಲ್ಲೆಯಲ್ಲಿ ಜನಿಸಿದರು. ಅವರಿಗೆ ನಂದಿನಿ ಎಂಬ ಹೆಸರಿನ ತಂಗಿ ಇದ್ದಾರೆ. ಅವರ ತಂದೆ ಬಿಎಂಟಿಸಿ ಸಾರಿಗೆ ಸೇವೆಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಮಹಾರಾಜ ಹೈಸ್ಕೂಲ್‌ನಲ್ಲಿ ಶಾಲಾಶಿಕ್ಷಣವನ್ನು ಪಡೆದು, ಬಾಲ್ಯದ ದಿನಗಳನ್ನು ಮೈಸೂರಿನ ಪಡವಾರಹಳ್ಳಿಯಲ್ಲಿ ಕಳೆದರು. ತಮ್ಮ ಶಾಲಾಶಿಕ್ಷಣದ ನಂತರ, ಅವರು ನಾಟಕಕಾರ ಬಿ.ವಿ ಕಾರಂತರಿಂದ ರೂಪುಗೊಂಡ ಬೆನಕ ನಾಟಕ ಶಾಲೆಯನ್ನು ಸೇರಿದರು. ಯಶ್ ಒಕ್ಕಲಿಗ ಸಮುದಾಯಕ್ಕೆ ಸೇರಿದವರು.

ವೈಯಕ್ತಿಕ ಜೀವನ

ಯಶ್ ತಮ್ಮ ಬಹುಕಾಲದ ಪ್ರೇಯಸಿ ರಾಧಿಕಾ ಪಂಡಿತ್ ಅನ್ನು ೨೦೧೬ ರಲ್ಲಿ ವಿವಾಹವಾದರು. ದಂಪತಿಗಳಿಗಿಬ್ಬರಿಗೆ ೨೦೧೮ ಡಿಸೆಂಬರ್ ೨ ರಲ್ಲಿ ಜನಿಸಿದ ಹೆಣ್ಣು ಮಗು ಮತ್ತು ೨೦೧೯ ಅಕ್ಟೋಬರ್ ೩೦‌‌ ರಲ್ಲಿ ಜನಿಸಿದ ಗಂಡು ಮಗನಿದ್ದಾನೆ.

ನಟನಾಗಿ

ಯಶ್ ಈಟಿವಿ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾದ ಅಶೋಕ್ ಕಶ್ಯಪ್ ನಿರ್ದೇಶನದ ಗೋಕುಲ ಧಾರವಾಹಿಯಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಅಂತಹ ಮಳೆಬಿಲ್ಲು ಮತ್ತು ಪ್ರೀತಿ ಇಲ್ಲದ ಮೇಲೆ ಹಾಗೂ ಇನ್ನೂ ಹಲವಾರು ಧಾರವಾಹಿಗಳಲ್ಲಿ ಕಾಣಿಸಿಕೊಂಡರು. ಇವರು ಪ್ರಿಯಾ ಹಾಸನ್ ನಿರ್ದೇಶನದ ಜಂಭದ ಹುಡುಗಿ (೨೦೦೭) ಚಲನಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರು. ನಂತರ ಅವನು ನಂದ ಗೋಕುಲ ಧಾರಾವಾಹಿಯ ಸಹನಟಿ ರಾಧಿಕಾ ಪಂಡಿತ್ ಜೊತೆ ಪೋಷಕ ಪಾತ್ರದಲ್ಲಿ, ಶಶಾಂಕ್ ನಿರ್ದೇಶನದ ಮೊಗ್ಗಿನ ಮನಸ್ಸು ಅಭಿನಯಿಸಿದ್ದಾರೆ. ಅವರು ಇದರಲ್ಲಿನ ಅಭಿನಯಕ್ಕಾಗಿ ಪೋಷಕ ನಟನೆಗಾಗಿ ಫಿಲಂ ಫೇರ್ ಪ್ರಶಸ್ತಿ ಪಡೆದರು. ಯಶ್ ನಂತರ ಚಿತ್ರಗಳಲ್ಲಿ ರಾಕಿ (೨೦೦೮), ಕಳ್ಳರ ಸಂತೆ (೨೦೦೯), ಗೋಕುಲ (೨೦೦೯) ನಲ್ಲಿ ನಾಯಕ ಪಾತ್ರಗಳಲ್ಲಿ ನಟಿಸಿದರು.

ಮಾಧ್ಯಮ ಚಿತ್ರ

2022 ರಲ್ಲಿ, ಯಶ್ ಸಂದರ್ಶನವೊಂದರಲ್ಲಿ ನಟ ವಿಜಯ್ ಭಾರತೀಯ ಚಲನಚಿತ್ರೋದ್ಯಮದಲ್ಲಿ ತಮ್ಮ ಆದರ್ಶಗಳಲ್ಲಿ ಒಬ್ಬರು ಎಂದು ಬಹಿರಂಗಪಡಿಸಿದರು.

ಚಲನಚಿತ್ರಗಳು

ವರ್ಷ ಚಿತ್ರ ಪಾತ್ರ ಟಿಪ್ಪಣಿ
೨೦೦೭ ಜಂಭದ ಹುಡುಗಿ
೨೦೦೮ ಮೊಗ್ಗಿನ ಮನಸ್ಸು
೨೦೦೮ ರಾಕಿ ರಾಕಿ
೨೦೦೯ ಕಳ್ಳರ ಸಂತೆ ಸೋಮು
೨೦೦೯ ಗೋಕುಲ ರಾಜಾ
೨೦೧೦ ತಮಸ್ಸು ಇಮ್ರಾನ್
೨೦೧೦ ಮೊದಲಸಲ ಕಾರ್ತಿಕ್
೨೦೧೧ ರಾಜಾಧಾನಿ ರಾಜಾ
೨೦೧೧ ಕಿರಾತಕ ನಂದೀಶ alias ಗೂಳಿ
೨೦೧೨ ಲಕ್ಕಿ ಲಕ್ಕಿ / ವಿಕ್ರಮ್
೨೦೧೨ ಜಾನು ಸಿಧ್ಧಾರ್ಥ್
೨೦೧೨ ಡ್ರಾಮ ವೆಂಕಟೇಶ
೨೦೧೩ ಚಂದ್ರ ಹಾಡೊಂದರಲ್ಲಿ ವಿಶೇಷ ಪಾತ್ರ
೨೦೧೩ ಗೂಗ್ಲಿ ಶರತ್
೨೦೧೩ ರಾಜಾಹುಲಿ ರಾಜಾಹುಲಿ
೨೦೧೪ ಗಜಕೇಸರಿ ಕೃಷ್ಣ
೨೦೧೪ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ರಾಮಾಚಾರಿ
೨೦೧೫ ಮಾಸ್ಟರ್ ಪೀಸ್ ಯುವ
೨೦೧೬ ಸಂತು ಸ್ಟ್ರೇಟ್ ಫ಼ಾರ್ವರ್ಡ್ ಸಂತು
೨೦೧೮ ಕೆಜಿಎಫ್ ಭಾಗ ೧ ರಾಕಿ
೨೦೨೨ ಕೆಜಿಎಫ್ ಭಾಗ ೨ ರಾಕಿ
" ಮೈ ನೆಮ್ ಈಸ್ ಕಿರಾತಕ"
ರಾಣಾ
ಯಶ್, ನರ್ತನ್(ಮಫ್ತಿ) ಜೋಡಿ

ಕಿರುತೆರೆ ಧಾರಾವಾಹಿಗಳು

  • ನಂದ ಗೋಕುಲ (ಈಟಿವಿ)
  • ಮಳೆಬಿಲ್ಲು (ಈಟಿವಿ)
  • ಉತ್ತರಾಯಣ (ಉದಯ ಟಿವಿ)
  • ಪ್ರೀತಿ ಇಲ್ಲದ ಮೇಲೆ (ಈಟಿವಿ)
  • ಶಿವ (ಡಿಡಿ೯)

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

Year Film Award Category Result Ref
2009 ಮೊಗ್ಗಿನ ಮನಸು ಫೀಲ್ಮ್ಫೆರ್  ಅವಾರ್ಡ್ಸ್ ಸೌತ್ ಅತ್ಯುತ್ತಮ ಪೋಷಕ ನಟ - ಕನ್ನಡ ಗೆಲುವು
2013 ಡ್ರಾಮಾ ಫೀಲ್ಮ್ಫೆರ್  ಅವಾರ್ಡ್ಸ್ ಸೌತ್ ಅತ್ಯುತ್ತಮ ನಟ - ಕನ್ನಡ ನಾಮನಿರ್ದೇಶನ
2014 ಗೂಗ್ಲಿ ಫೀಲ್ಮ್ಫೆರ್  ಅವಾರ್ಡ್ಸ್ ಸೌತ್ ಅತ್ಯುತ್ತಮ ನಟ - ಕನ್ನಡ ನಾಮನಿರ್ದೇಶನ
2015 ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ ಫೀಲ್ಮ್ಫೆರ್ ಅವಾರ್ಡ್ಸ್ ಸೌತ್ ಅತ್ಯುತ್ತಮ ನಟ - ಕನ್ನಡ ಗೆಲುವು
2015 ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ ಫೀಲ್ಮ್ಫೆರ್ ಅವಾರ್ಡ್ಸ್ ಸೌತ್ ಅತ್ಯುತ್ತಮ ನಟ - ಕನ್ನಡ ಗೆಲುವು
ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ ಸೈಮಾ ಅತ್ಯುತ್ತಮ ನಟ - ಕನ್ನಡ ಗೆಲುವು
2016 ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ ಐಐಎಫ್ಎ ಉತ್ಸವಂ ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ಅಭಿನಯ - ಕನ್ನಡ ಗೆಲುವು
ಮಾಸ್ಟರ್‌ಪೀಸ್ ಫೀಲ್ಮ್ಫೆರ್ ಅವಾರ್ಡ್ಸ್ ಸೌತ್ ಅತ್ಯುತ್ತಮ ನಟ - ಕನ್ನಡ ನಾಮನಿರ್ದೇಶನ
ಮಾಸ್ಟರ್‌ಪೀಸ್ ಸೈಮಾ ಅತ್ಯುತ್ತಮ ನಟ - ಕನ್ನಡ ನಾಮನಿರ್ದೇಶನ
ಮಾಸ್ಟರ್‌ಪೀಸ್ ಐಐಎಫ್ಎ ಉತ್ಸವಂ ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ಅಭಿನಯ - ಕನ್ನಡ ನಾಮನಿರ್ದೇಶನ
2017 ಸಂತು ಸ್ಟ್ರೇಟ್ ಫಾರ್ವರ್ಡ್ ಸೈಮಾ ಅತ್ಯುತ್ತಮ ನಟ - ಕನ್ನಡ ನಾಮನಿರ್ದೇಶನ
2018 ಕೆಜಿಎಫ್ ಭಾಗ ೧ ಫಿಲ್ಮೀಬೀಟ್ ಅತ್ಯುತ್ತಮ ನಟ – ಕನ್ನಡ ಗೆಲುವು
2019 ಝೀ ಕನ್ನಡ ಹೆಮ್ಮೆಯ ಕನ್ನಡಿಗ ಅತ್ಯುತ್ತಮ ನಟ - ಕನ್ನಡ ಗೆಲುವು


ಉಲ್ಲೇಖಗಳು

Tags:

ಯಶ್ನಟ ಆರಂಭಿಕ ಜೀವನಯಶ್ನಟ ವೈಯಕ್ತಿಕ ಜೀವನಯಶ್ನಟ ನಟನಾಗಿಯಶ್ನಟ ಮಾಧ್ಯಮ ಚಿತ್ರಯಶ್ನಟ ಚಲನಚಿತ್ರಗಳುಯಶ್ನಟ ಕಿರುತೆರೆ ಧಾರಾವಾಹಿಗಳುಯಶ್ನಟ ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳುಯಶ್ನಟ ಉಲ್ಲೇಖಗಳುಯಶ್ನಟ

🔥 Trending searches on Wiki ಕನ್ನಡ:

ರಾಮಾಚಾರಿ (ಕನ್ನಡ ಧಾರಾವಾಹಿ)ವಿಧಾನ ಸಭೆಕುತುಬ್ ಮಿನಾರ್ದ್ಯುತಿಸಂಶ್ಲೇಷಣೆವಿಷ್ಣುವರ್ಧನ್ (ನಟ)ಶಿವರಾಜ್‍ಕುಮಾರ್ (ನಟ)ಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿದೇವತಾರ್ಚನ ವಿಧಿಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆವೆಬ್‌ಸೈಟ್‌ ಸೇವೆಯ ಬಳಕೆಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಮಲ್ಲಿಕಾರ್ಜುನ್ ಖರ್ಗೆಮೊಘಲ್ ಸಾಮ್ರಾಜ್ಯಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಕೈವಾರ ತಾತಯ್ಯ ಯೋಗಿನಾರೇಯಣರುಶ್ಯೆಕ್ಷಣಿಕ ತಂತ್ರಜ್ಞಾನಅಳಿಲುರಾಘವಾಂಕಉತ್ತರ ಪ್ರದೇಶಉತ್ತರ ಕರ್ನಾಟಕಸಾಲ್ಮನ್‌ಜಾನಪದಗಿಡಮೂಲಿಕೆಗಳ ಔಷಧಿಸಾದರ ಲಿಂಗಾಯತಋತುಸಂಖ್ಯೆಅಂತರಜಾಲಲಕ್ಷ್ಮೀಶಏಡ್ಸ್ ರೋಗಗೋಪಾಲಕೃಷ್ಣ ಅಡಿಗವ್ಯಾಸರಾಯರುಆಟಬೆಳಕುಭಾರತೀಯ ರೈಲ್ವೆಭಾರತೀಯ ಅಂಚೆ ಸೇವೆಮಹಿಳೆ ಮತ್ತು ಭಾರತಭಾರತದ ಪ್ರಧಾನ ಮಂತ್ರಿವಿಜಯದಾಸರುದಕ್ಷಿಣ ಕನ್ನಡಭಾರತದ ಸಂಸತ್ತುಮೌರ್ಯ ಸಾಮ್ರಾಜ್ಯಹೊಯ್ಸಳೇಶ್ವರ ದೇವಸ್ಥಾನಭೂತಾರಾಧನೆಮನೆಜೋಗಕನ್ನಡ ರಂಗಭೂಮಿಆಮ್ಲಗಳು ಮತ್ತು ಪ್ರತ್ಯಾಮ್ಲಗಳುಜಾತ್ಯತೀತತೆಭತ್ತಹೊಯ್ಸಳಶಾಂತಲಾ ದೇವಿಹನುಮಂತಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಸಾವಿತ್ರಿಬಾಯಿ ಫುಲೆಹವಾಮಾನಹಾಗಲಕಾಯಿಅಲ್ಲಮ ಪ್ರಭುಜನಪದ ಕಲೆಗಳುಕಾದಂಬರಿಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಮಾನವ ಹಕ್ಕುಗಳುಹಿಂದೂ ಧರ್ಮಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುನಗರಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಲೆಕ್ಕ ಬರಹ (ಬುಕ್ ಕೀಪಿಂಗ್)೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿ (ಸುತ್ತು ೨)ಅವತಾರಶಿವಮೊಗ್ಗತಾಜ್ ಮಹಲ್ಚಂಡಮಾರುತಹೆಸರುಕರ್ಣವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳು🡆 More