ಮೊಹೆಂಜೊ-ದಾರೋ

ಮೊಹೆಂಜೊ-ದಾರೋ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿನ ಒಂದು ಪುರಾತತ್ವ ತಾಣ.

ಸುಮಾರು ಕ್ರಿ.ಪೂ. ೨೫೦೦ ರಲ್ಲಿ ಕಟ್ಟಲ್ಪಟ್ಟ ಇದು ಪ್ರಾಚೀನ ಸಿಂಧೂತಟದ ನಾಗರೀಕತೆಯ ಅತಿ ದೊಡ್ಡ ನೆಲೆಗಳಲ್ಲಿ ಒಂದು, ಮತ್ತು ವಿಶ್ವದ ಅತ್ಯಂತ ಮುಂಚಿನ ಪ್ರಮುಖ ನಗರಗಳಲ್ಲಿ ಒಂದಾಗಿತ್ತು, ಮತ್ತು ಪ್ರಾಚೀನ ಈಜಿಪ್ಟ್, ಮೆಸೊಪೊಟೇಮಿಯಾ ನಾಗರಿಕತೆಗಳೊಂದಿಗೆ ಸಮಕಾಲೀನವಾಗಿತ್ತು. ಸಿಂಧೂತಟದ ನಾಗರೀಕತೆ ಪತನವಾದಂತೆ ಮೊಹೆಂಜೊ-ದಾರೋವನ್ನು ಕ್ರಿ.ಪೂ. ೧೯ನೇ ಶತಮಾನದಲ್ಲಿ ತ್ಯಜಿಸಲಾಯಿತು, ಮತ್ತು ಈ ತಾಣವನ್ನು ೧೯೨೦ರ ದಶಕದವರೆಗೆ ಪುನರ್ಶೋಧಿಸಲಾಗಲಿಲ್ಲ. ಆಗಿನಿಂದ ನಗರದ ಪ್ರದೇಶದಲ್ಲಿ ಗಮನಾರ್ಹ ಉತ್ಖನನವನ್ನು ಕೈಗೊಳ್ಳಲಾಗಿದೆ, ಮತ್ತು ಈ ತಾಣವನ್ನು ೧೯೮೦ರಲ್ಲಿ ಯುನೆಸ್ಕೊ ವಿಶ್ವ ಪರಂಪರೆಯ ತಾಣವೆಂದು ಹೆಸರಿಸಲಾಯಿತು. ಈ ತಾಣವು ಪ್ರಸಕ್ತವಾಗಿ ಸವೆತ ಮತ್ತು ಅನುಚಿತ ಪುನಃಸ್ಥಾಪನೆಯಿಂದ ಅಪಾಯಕ್ಕೊಳಗಾಗಿದೆ.

ಮೊಹೆಂಜೊ-ದಾರೋ
ಮೊಹೆಂಜೊ-ದಾರೋದ ಉತ್ಖನನ ಮಾಡಿದ ಅವಶೇಷಗಳು

ಮೊಹೆಂಜೊ-ದಾರೋ ತನ್ನ ಕಾಲದ ಅತ್ಯಂತ ಮುಂದುವರಿದ ನಗರವಾಗಿತ್ತು, ಮತ್ತು ಗಮನಾರ್ಹವಾಗಿ ಅತ್ಯಾಧುನಿಕ ಪೌರ ಶಿಲ್ಪವಿಜ್ಞಾನ ಮತ್ತು ನಗರ ಯೋಜನೆಯನ್ನು ಹೊಂದಿತ್ತು. ಭಾರತದ ಪುರಾತತ್ವ ಸರ್ವೇಕ್ಷಣೆಯ ಅಧಿಕಾರಿ ಆರ್. ಡಿ. ಬ್ಯಾನರ್ಜಿ ೧೯೧೯-೨೦ರಲ್ಲಿ ಈ ತಾಣಕ್ಕೆ ಭೇಟಿಕೊಟ್ಟರು ಮತ್ತು ಅಲ್ಲಿದ್ದ ಬೌದ್ಧ ಸ್ತೂಪವನ್ನು ಗುರುತಿಸಿ, ಕಲ್ಲಿನ ಉಜ್ಜುಗವನ್ನು ಕಂಡುಹಿಡಿದು, ತಾಣದ ಪ್ರಾಚೀನತೆ ಬಗ್ಗೆ ಮನವರಿಕೆಗೊಂಡರು. ಮೊಹೆಂಜೊ-ದಾರೋ ಜಾಲರಿ ಯೋಜನೆ ಮೇಲೆ ವ್ಯವಸ್ಥೆಗೊಳಿಸಿದ ರೇಖೀಯ ಕಟ್ಟಡಗಳಿರುವ ಯೋಜಿತ ವಿನ್ಯಾಸ ಹೊಂದಿತ್ತು. ಬಹುತೇಕ ಕಟ್ಟಡಗಳು ಸುಟ್ಟ ಮತ್ತು ಗಾರೆಮಾಡಿದ ಇಟ್ಟಿಗೆಗಳಿಂದ ಕಟ್ಟಲ್ಪಟ್ಟಿದ್ದವು; ಕೆಲವು ಬಿಸಿಲಲ್ಲಿ ಒಣಗಿಸಿದ ಮಣ್ಣಿನ ಇಟ್ಟಿಗೆ ಹಾಗೂ ಕಟ್ಟಿಗೆಯ ಅಧಿರಚನೆಗಳನ್ನು ಅಳವಡಿಸಿಕೊಂಡಿದ್ದವು. ಮೊಹೆಂಜೊ-ದಾರೋದ ಆವೃತ ಪ್ರದೇಶ ೩೦೦ ಹೆಕ್ಟೇರ್ ಎಂದು ಅಂದಾಜಿಸಲಾಗಿದೆ.

ನಗರದ ಸಂಪೂರ್ಣ ಗಾತ್ರ, ಮತ್ತು ಸಾರ್ವಜನಿಕ ಕಟ್ಟಡಗಳು ಹಾಗೂ ಸೌಲಭ್ಯಗಳ ಅದರ ಸಂಪನ್ಮೂಲಗಳು ಉನ್ನತ ಮಟ್ಟದ ಸಾಮಾಜಿಕ ಸಂಘಟನೆಯನ್ನು ಸೂಚಿಸುತ್ತದೆ. ನಗರವನ್ನು ಎರಡು ಭಾಗಗಳಲ್ಲಿ ವಿಭಜಿಸಲಾಗಿದೆ, ದುರ್ಗ ಮತ್ತು ಕೆಳಗಿನ ನಗರ. ದುರ್ಗವು ಸುಮಾರು ೧೨ ಮೀಟರ್ ಎತ್ತರದ ಮಣ್ಣಿನ ಇಟ್ಟಿಗೆಗಳ ದಿಬ್ಬ. ಇದು ಸಾರ್ವಜನಿಕ ಸ್ನಾನಗೃಹಗಳು, ಸುಮಾರು ೫೦೦೦ ಜನರು ಹಿಡಿಸುವುದಕ್ಕೆ ವಿನ್ಯಾಸಗೊಳಿಸಲಾದ ದೊಡ್ಡ ವಸತಿ ರಚನೆ, ಮತ್ತು ಎರಡು ದೊಡ್ಡ ಸಭಾಂಗಣಗಳನ್ನು ಹೊಂದಿತ್ತು ಎಂದು ತಿಳಿಯಲಾಗಿದೆ. ನಗರವು ದೊಡ್ಡ ಬಾವಿಯಿರುವ ಒಂದು ಕೇಂದ್ರ ಮಾರುಕಟ್ಟೆಯನ್ನು ಹೊಂದಿತ್ತು.

ಉಲ್ಲೇಖಗಳು

Tags:

ನಗರಪಾಕಿಸ್ತಾನಸಿಂಧೂತಟದ ನಾಗರೀಕತೆ

🔥 Trending searches on Wiki ಕನ್ನಡ:

ಮಲೆಗಳಲ್ಲಿ ಮದುಮಗಳುದಿಕ್ಸೂಚಿಝಾನ್ಸಿ ರಾಣಿ ಲಕ್ಷ್ಮೀಬಾಯಿತೆಲಂಗಾಣವ್ಯಕ್ತಿತ್ವಮಳೆಶಿರ್ಡಿ ಸಾಯಿ ಬಾಬಾತಲಕಾಡುಟಿಪ್ಪು ಸುಲ್ತಾನ್ಕರ್ನಾಟಕದ ಮಹಾನಗರಪಾಲಿಕೆಗಳುಸುಮಲತಾಶ್ರೀನಿವಾಸ ರಾಮಾನುಜನ್ಸರ್ವೆಪಲ್ಲಿ ರಾಧಾಕೃಷ್ಣನ್೧೬೦೮ಕರ್ಮಧಾರಯ ಸಮಾಸನಿರ್ವಹಣೆ ಪರಿಚಯಮಿಲಾನ್ಹಲ್ಮಿಡಿರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಪರೀಕ್ಷೆಬಯಲಾಟಸಾಲುಮರದ ತಿಮ್ಮಕ್ಕರಸ(ಕಾವ್ಯಮೀಮಾಂಸೆ)ಬಂಗಾರದ ಮನುಷ್ಯ (ಚಲನಚಿತ್ರ)ಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಕನ್ನಡ ಛಂದಸ್ಸುಮಹಮದ್ ಬಿನ್ ತುಘಲಕ್ಆದೇಶ ಸಂಧಿಪು. ತಿ. ನರಸಿಂಹಾಚಾರ್ಮಂಟೇಸ್ವಾಮಿಬಡತನಬಾದಾಮಿಅರಬ್ಬೀ ಸಾಹಿತ್ಯಧರ್ಮಹುಲಿರನ್ನಸ್ಟಾರ್‌ಬಕ್ಸ್‌‌ಅನುರಾಗ ಅರಳಿತು (ಚಲನಚಿತ್ರ)ರಾಷ್ಟ್ರೀಯ ಶಿಕ್ಷಣ ನೀತಿಕರ್ನಾಟಕ ವಿಧಾನ ಸಭೆಮೂಢನಂಬಿಕೆಗಳುರೈತವಾರಿ ಪದ್ಧತಿಮೂಕಜ್ಜಿಯ ಕನಸುಗಳು (ಕಾದಂಬರಿ)ಉತ್ತರ ಕರ್ನಾಟಕಪ್ರಜಾವಾಣಿಮಂಕುತಿಮ್ಮನ ಕಗ್ಗಮೂಲಧಾತುಗಾದೆ ಮಾತುಸಾಮಾಜಿಕ ಸಮಸ್ಯೆಗಳುಭಾರತ ರತ್ನಮಾನ್ವಿತಾ ಕಾಮತ್ಸಂಯುಕ್ತ ರಾಷ್ಟ್ರ ಸಂಸ್ಥೆಹವಾಮಾನಕರ್ನಾಟಕ ಲೋಕಸೇವಾ ಆಯೋಗರಾಜಕೀಯ ಪಕ್ಷಶ್ಯೆಕ್ಷಣಿಕ ತಂತ್ರಜ್ಞಾನನಚಿಕೇತಭಾರತೀಯ ಸಂವಿಧಾನದ ತಿದ್ದುಪಡಿಹಿಂದೂ ಧರ್ಮಸಾವಯವ ಬೇಸಾಯಪ್ಯಾರಾಸಿಟಮಾಲ್ಭಾರತದಲ್ಲಿನ ಶಿಕ್ಷಣಪಶ್ಚಿಮ ಘಟ್ಟಗಳುಸಾಹಿತ್ಯವಿಷ್ಣುವರ್ಧನ್ (ನಟ)ಅನುರಾಧಾ ಧಾರೇಶ್ವರವಿನಾಯಕ ದಾಮೋದರ ಸಾವರ್ಕರ್ಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಕಲ್ಲಂಗಡಿಪುನೀತ್ ರಾಜ್‍ಕುಮಾರ್ಕಾಂತಾರ (ಚಲನಚಿತ್ರ)ರಾಜಧಾನಿಗಳ ಪಟ್ಟಿಕಲಿಯುಗಅಂಚೆ ವ್ಯವಸ್ಥೆಶಿಶುಪಾಲಕೊಡಗುಅವತಾರಖ್ಯಾತ ಕರ್ನಾಟಕ ವೃತ್ತ🡆 More