ಧೋಲಾವೀರಾ

ಇತ್ತೀಚೆಗೆ ಇದು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದ ೪೦ನೇ ತಾನವಾಗಿದೆ

ಧೋಲಾವೀರಾ
ಧೋಲಾವೀರಾದ ಮೆಟ್ಟಿಲುಗಳಿರುವ ಜಲಾಶಯಗಳಲ್ಲಿ ಒಂದು

ಧೋಲಾವೀರಾ ಗುಜರಾತ್‍ನ ಕಚ್ ಜಿಲ್ಲೆಯ ಭಚವು ತಾಲೂಕಿನಲ್ಲಿನ ಒಂದು ಪುರಾತತ್ವ ತಾಣ. ಈ ತಾಣವು ಪ್ರಾಚೀನ ಸಿಂಧೂತಟದ ನಾಗರೀಕತೆಯ ಒಂದು ನಗರದ ಅವಶೇಷಗಳನ್ನು ಹೊಂದಿದೆ. ಇದು ಐದು ಅತಿ ದೊಡ್ಡ ಹರಪ್ಪಾ ತಾಣಗಳಲ್ಲಿ ಒಂದು ಮತ್ತು ಸಿಂಧೂತಟದ ನಾಗರೀಕತೆಗೆ ಸೇರಿದ ಭಾರತದಲ್ಲಿನ ಅತ್ಯಂತ ಪ್ರಮುಖ ಪುರಾತತ್ವ ತಾಣಗಳಲ್ಲಿ ಒಂದು. ಇದು ತನ್ನ ಕಾಲದ ನಗರಗಳಲ್ಲಿ ಅತ್ಯಂತ ಭವ್ಯವೆಂದೂ ಪರಿಗಣಿತವಾಗಿದೆ. ಈ ತಾಣದಲ್ಲಿ ಕ್ರಿ.ಪೂ. ೨೬೫೦ ರಿಂದ ಜನರು ನೆಲೆಸಲು ಆರಂಭಿಸಿದ್ದರು, ಮತ್ತು ಸುಮಾರು ಕ್ರಿ.ಪೂ. ೨೧೦೦ರ ನಂತರ ಈ ತಾಣ ನಿಧಾನವಾಗಿ ಕ್ಷೀಣಿಸಿತು.

ಈ ತಾಣವನ್ನು ೧೯೬೭-೧೯೬೮ರಲ್ಲಿ ಭಾರತದ ಪುರಾತತ್ವ ಸರ್ವೇಕ್ಷಣೆಯ (ಎ.ಎಸ್.ಐ) ಜೆ. ಪಿ. ಜೋಷಿ ಶೋಧಿಸಿದರು ಮತ್ತು ಇದು ಎಂಟು ಪ್ರಮುಖ ಹರಪ್ಪಾ ತಾಣಗಳಲ್ಲಿ ಐದನೇ ಅತಿ ದೊಡ್ಡ ತಾಣ. ಈ ತಾಣದ ಉತ್ಖನನ ೧೯೯೦ರಿಂದ ನಡೆದಿದೆ, ಮತ್ತು ಧೋಲಾವೀರಾ ಸಿಂಧೂತಟದ ನಾಗರೀಕತೆಯ ವ್ಯಕ್ತಿತ್ವಕ್ಕೆ ನಿಜಕ್ಕೂ ಹೊಸ ಆಯಾಮಗಳನ್ನು ಸೇರಿಸಿದೆ ಎಂದು ಎ.ಎಸ್.ಐ ಅಭಿಪ್ರಾಯ ಪಡುತ್ತದೆ. ಉತ್ಖನನವು ನಗರ ಯೋಜನೆ ಮತ್ತು ವಾಸ್ತುಶಿಲ್ಪವನ್ನು ಬೆಳಕಿಗೆ ತಂದಿತು, ಮತ್ತು ಮುದ್ರೆಗಳು, ಮಣಿಗಳು, ಪ್ರಾಣಿ ಮೂಳೆಗಳು, ಚಿನ್ನ, ಬೆಳ್ಳಿ, ಬೇಯುಮಣ್ಣಿನ ಆಭರಣಗಳು, ಕುಂಬಾರಿಕೆ ಹಾಗೂ ಕಂಚಿನ ಪಾತ್ರೆಗಳಂತಹ ದೊಡ್ಡ ಸಂಖ್ಯೆಯ ಪುರಾತನ ವಸ್ತುಗಳನ್ನು ಬೆಳಕಿಗೆ ತಂದಿತು. ಧೋಲಾವೀರಾ ದಕ್ಷಿಣ ಗುಜರಾತ್, ಸಿಂಧ್, ಪಂಜಾಬ್ ಮತ್ತು ಪಶ್ಚಿಮ ಏಷ್ಯಾದ ನೆಲೆಗಳ ನಡುವಿನ ಒಂದು ಪ್ರಮುಖ ವ್ಯಾಪಾರ ಕೆಂದ್ರವಾಗಿತ್ತು ಎಂದು ಪುರಾತತ್ವಶಾಸ್ತ್ರಜ್ಞರು ನಂಬುತ್ತಾರೆ.

ಬಂದರು ನಗರ ಲೋಥಲ್‍ಗಿಂತ ಹಳೆಯದೆಂದು ಅಂದಾಜಿಸಲಾದ ಧೋಲಾವೀರಾ ಆಯತಾಕಾರ ಮತ್ತು ವ್ಯವಸ್ಥೆಯನ್ನು ಹೊಂದಿದೆ, ಮತ್ತು ೨೨ ಹೆಕ್ಟೇರ್‍ನಷ್ಟು ಹರಡಿದೆ. ಹರಪ್ಪ ಮತ್ತು ಮೊಹೆಂಜೊ-ದಾರೋ ಗೆ ಭಿನ್ನವಾಗಿ, ಈ ನಗರವನ್ನು ಮೊದಲೇ ಅಸ್ತಿತ್ವದಲ್ಲಿದ್ದ ಮೂರು ವಿಭಾಗಗಳ ಜ್ಯಾಮಿತೀಯ ಯೋಜನೆಯಲ್ಲಿ ನಿರ್ಮಿಸಲಾಗಿತ್ತು – ದುರ್ಗ, ಮಧ್ಯ ಪಟ್ಟಣ, ಮತ್ತು ಕೆಳ ಪಟ್ಟಣ. ದುರ್ಗ ಮತ್ತು ಮಧ್ಯ ಪಟ್ಟಣಗಳು ತಮ್ಮದೇ ಸ್ವಂತ ರಕ್ಷಣಾ ಕೃತಿ, ಪ್ರವೇಶದ್ವಾರಗಳು, ನಿರ್ಮಿತ ಕ್ಷೇತ್ರಗಳು, ಬೀದಿ ವ್ಯವಸ್ಥೆ, ಬಾವಿಗಳು, ಮತ್ತು ದೊಡ್ಡ ತೆರೆದ ಸ್ಥಳಗಳೊಂದಿಗೆ ಸುಸಜ್ಜಿತವಾಗಿದ್ದವು. ದುರ್ಗವು ನಗರದಲ್ಲಿನ ಅತ್ಯಂತ ಸಂಪೂರ್ಣವಾಗಿ ಬಲಪಡಿಸಿದ ಮತ್ತು ಸಂಕೀರ್ಣ ಪ್ರದೇಶವಾಗಿತ್ತು. ಎತ್ತರದ ಕೋಟೆಯ ನಿಲ್ಲುಕಟ್ಟೆಗಳು ಇಮ್ಮಡಿ ಆಳುವೇರಿಗಳಿಂದ ರಕ್ಷಿತವಾಗಿವೆ. ಇದರ ಪಕ್ಕ ಪ್ರಮುಖ ಅಧಿಕಾರಿಗಳು ವಾಸಿಸುತ್ತಿದ್ದ ಒಳಾಂಗಣ ಸ್ಥಳವಿದೆ. ಸಾಮಾನ್ಯ ರಕ್ಷಣಾ ಗೋಡೆಗಳ ಒಳಗಿನ ನಗರ ೪೮ ಹೆಕ್ಟೇರ್‍ನಷ್ಟಿದೆ. ಗೋಡೆಗಳ ಹೊರಗೆ, ಮತ್ತೊಂದು ನೆಲಸುಸ್ಥಳವನ್ನು ಕಂಡುಹಿಡಿಯಲಾಗಿದೆ. ನಗರದ ಅತ್ಯಂತ ಆಕರ್ಷಕ ವೈಶಿಷ್ಟ್ಯವೆಂದರೆ ಎಲ್ಲ ಕಟ್ಟಡಗಳು ಕಲ್ಲಿನಿಂದ ಕಟ್ಟಲ್ಪಟ್ಟಿವೆ, ಹರಪ್ಪ ಮತ್ತು ಮೊಹೆಂಜೊ-ದಾರೋವನ್ನು ಒಳಗೊಂಡಂತೆ, ಬಹುತೇಕ ಇತರ ಹರಪ್ಪನ್ ತಾಣಗಳಲ್ಲಿನ ಕಟ್ಟಡಗಳು ಕೇವಲ ಇಟ್ಟಿಗೆಯಿಂದ ಕಟ್ಟಲ್ಪಟ್ಟಿವೆ.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಕುಮಾರವ್ಯಾಸಗೋವಕೆಂಗಲ್ ಹನುಮಂತಯ್ಯಮೂಲಧಾತುಗಳ ಪಟ್ಟಿಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಗುರುನಾನಕ್ಗಾಂಧಿ ಜಯಂತಿರಷ್ಯಾಯುಗಾದಿಸೂರ್ಯ (ದೇವ)ಮೂಢನಂಬಿಕೆಗಳುಜನಪದ ಕರಕುಶಲ ಕಲೆಗಳುಮಂಕುತಿಮ್ಮನ ಕಗ್ಗಲಾವಣಿಕರ್ನಾಟಕ ವಿಧಾನ ಪರಿಷತ್ಸಾಲುಮರದ ತಿಮ್ಮಕ್ಕಕರ್ನಾಟಕದ ಮುಖ್ಯಮಂತ್ರಿಗಳುಭಾರತೀಯ ಕಾವ್ಯ ಮೀಮಾಂಸೆಬಾದಾಮಿ ಚಾಲುಕ್ಯರ ವಾಸ್ತುಶಿಲ್ಪನವಿಲುಕೋಸುಪತ್ರಿಕೋದ್ಯಮಕಂಠೀರವ ನರಸಿಂಹರಾಜ ಒಡೆಯರ್ಆವಕಾಡೊರಾಮ ಮನೋಹರ ಲೋಹಿಯಾದೊಡ್ಡರಂಗೇಗೌಡಲಕ್ನೋವಾಣಿವಿಲಾಸಸಾಗರ ಜಲಾಶಯಬಾಲ ಗಂಗಾಧರ ತಿಲಕಪೆರಿಯಾರ್ ರಾಮಸ್ವಾಮಿಮಾನವನಲ್ಲಿ ರಕ್ತ ಪರಿಚಲನೆಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಮಾನವ ಸಂಪನ್ಮೂಲ ನಿರ್ವಹಣೆಪೌರತ್ವವಿದ್ಯುತ್ ಮಂಡಲಗಳುಕರ್ಮಧಾರಯ ಸಮಾಸಎಸ್. ಶ್ರೀಕಂಠಶಾಸ್ತ್ರೀಪ್ರಾಚೀನ ಈಜಿಪ್ಟ್‌ಒಂದನೆಯ ಮಹಾಯುದ್ಧಜೋಳಮಕ್ಕಳ ದಿನಾಚರಣೆ (ಭಾರತ)ಕಳಿಂಗ ಯುದ್ಧಭಾರತ ಸಂವಿಧಾನದ ಪೀಠಿಕೆಕಲ್ಯಾಣಿಶುಕ್ರಒಲಂಪಿಕ್ ಕ್ರೀಡಾಕೂಟನಾಗರಹಾವು (ಚಲನಚಿತ್ರ ೧೯೭೨)ಸಂಯುಕ್ತ ರಾಷ್ಟ್ರ ಸಂಸ್ಥೆಊಳಿಗಮಾನ ಪದ್ಧತಿಸುದೀಪ್ಪಟ್ಟದಕಲ್ಲುರೆವರೆಂಡ್ ಎಫ್ ಕಿಟ್ಟೆಲ್ಮುಟ್ಟುಚಾಲುಕ್ಯಪಾಟೀಲ ಪುಟ್ಟಪ್ಪಹೊಯ್ಸಳ ವಿಷ್ಣುವರ್ಧನಕನ್ನಡ ಗುಣಿತಾಕ್ಷರಗಳುಗ್ರಾಮ ಪಂಚಾಯತಿಸಾಮವೇದಶಿವನ ಸಮುದ್ರ ಜಲಪಾತರೋಸ್‌ಮರಿಭಾರತೀಯ ಮಾಹಿತಿ ಹಕ್ಕು ಕಾಯಿದೆ, ೨೦೦೫ರೈತವಾರಿ ಪದ್ಧತಿಪೀನ ಮಸೂರಸಂತಾನೋತ್ಪತ್ತಿಯ ವ್ಯವಸ್ಥೆಹಂಸಲೇಖಮಫ್ತಿ (ಚಲನಚಿತ್ರ)ವಚನಕಾರರ ಅಂಕಿತ ನಾಮಗಳುಕನ್ನಡಪ್ರಭದ್ರವ್ಯಸರ್ ಐಸಾಕ್ ನ್ಯೂಟನ್ಕರ್ನಾಟಕ ಪೊಲೀಸ್ಭಾರತದ ಉಪ ರಾಷ್ಟ್ರಪತಿಗಳ ಪಟ್ಟಿ1935ರ ಭಾರತ ಸರ್ಕಾರ ಕಾಯಿದೆಏಷ್ಯಾ ಖಂಡನಡುಕಟ್ಟುರಾಮ್ ಮೋಹನ್ ರಾಯ್ಎಸ್.ಎಲ್. ಭೈರಪ್ಪಹರಪ್ಪ🡆 More