ಮೀರಾಬಾಯಿ

ಮೀರಾಬಾಯಿ (೧೫೦೪-೧೫೫೮) ಶ್ರೀಕೃಷ್ಣ-ಭಕ್ತಿ ಮಾರ್ಗದ ಬಹುಮುಖ್ಯ ಕವಯಿತ್ರಿ.

ಈಕೆಯ ರಚನೆಗಳಲ್ಲಿ ಶ್ರೀಕೃಷ್ಣನನ್ನು ಕುರಿತು ಸಮರ್ಪಣ ಭಾವವಿದೆ.

ಮೀರಾಬಾಯಿ
ಮೀರಾಬಾಯಿ
ಮೀರಾಬಾಯಿ
ಜನನc. ೧೪೯೮
ಕುಡಕಿ, ಪಲ್ಲಿ, ರಾಜಸ್ಥಾನ, ಭಾರತ
ಜನ್ಮ ನಾಮಮೀರಾ
ಗುರುಸಂತ ರವಿದಾಸ
ತತ್ವಶಾಸ್ತ್ರಭಕ್ತಿ ಮಾರ್ಗ
ಪ್ರಮುಖ ಕೃತಿಗಳುಶ್ರೀಕೃಷ್ಣನನ್ನು ಕುರಿತು ಪದಾವಲಿಗಳು
ಮೀರಾಬಾಯಿ
ರಾಜಾ ರವಿವರ್ಮ ಬಿಡಿಸಿದ ಮೀರಾಬಾಯಿಯ ಚಿತ್ರ

ಜೀವನ ಪರಿಚಯ

ಮೀರಾಬಾಯಿ 
ಮೀರಾಬಾಯಿಯ ಮಂದಿರ, ಚಿತ್ತೌಡಗಢ (೧೯೯೦)

ಮೀರಾಬಾಯಿಯ ಹುಟ್ಟಿದ್ದು ಯಾವ ವರ್ಷದಲ್ಲಿ ಎಂಬುದನ್ನು ಕುರಿತು ನಿಖರವಾದ ಮಾತಿಲ್ಲ. ಈಕೆ ೧೫೦೪ರಲ್ಲಿ ರಾಜಸ್ಥಾನದ ಜೋಧಪುರದಲ್ಲಿ ಕುಡಕಿ ಎಂಬ ಗ್ರಾಮದಲ್ಲಿ ಹುಟ್ಟಿದಳು ಎಂದು ಅಂದಾಜು ಮಾಡಲಾಗಿದೆ. ಈಕೆಯ ತಂದೆ ರತ್ನಸಿಂಹ. ಬಾಲ್ಯದಲ್ಲೇ ಈಕೆಗೆ ಶ್ರೀಕೃಷ್ಣನಲ್ಲಿ ಮೋಹ ಉಂಟಾಯಿತು. ಒಮ್ಮೆ ಮದುವೆಯ ದಿಬ್ಬಣ ಮನೆಯ ಮುಂದೆ ಹಾದು ಹೋಗುತ್ತಿದ್ದಾಗ ಬಾಲಿಕೆ ಮೀರಾ ತನ್ನ ಅಜ್ಜನನ್ನು ತನಗೆ ಯಾವಾಗ ಮದುವೆ ಎಂದು ಕೇಳಿದಳೆಂದೂ, ಆತ ತಮಾಷೆಗೆ "ನಿನ್ನ ಮದುವೆ ಆಗಲೇ ಶ್ರೀಕೃಷ್ಣನೊಂದಿಗೆ ಕೊಟ್ಟು ಮಾಡಿದ್ದೇವೆ" ಎಂದುದನ್ನೇ ಮೀರಾ ಗಂಭೀರವಾಗಿ ಸ್ವೀಕರಿಸಿದಳೆಂದೂ ಒಂದು ಕಥೆ ಇದೆ.

ಮುಂದೆ ಉದಯಪುರದ ಮಾಹಾರಾಣಾ ಸಾಂಗಾ ಅವರ ಮಗ ಮಹಾರಾಣಾ ಕುಂವರ್ ಭೋಜರಾಜನ ಜೊತೆ ಮೀರಾಳ ವಿವಾಹವನ್ನು ನೆರವೇರಿಸಲಾಯಿತು. ಇದಾದ ಕೆಲವೇ ಸಮಯದ ನಂತರ ಈಕೆಯ ಪತಿ ಸ್ವರ್ಗಸ್ಥನಾದ. ಆಗಿನ ಕಾಲದ ರೂಢಿಯಂತೆ ಮೀರಾಳಿಗೆ ಸತಿ ಮಾಡಿಕೊಳ್ಳುವ ಅವಕಾಶವಿತ್ತು, ಆದರೆ ಮೀರಾ ಇದಕ್ಕೆ ಒಪ್ಪಲಿಲ್ಲ. ಆಕೆ ಸಂಸಾರದಲ್ಲಿ ವಿರಕ್ತಳಾಗಿ ಸಾಧುಗಳ ಸಂಗದಲ್ಲಿ ಹರಿ ಸಂಕೀರ್ತನೆ ಮಾಡುತ್ತಾ ಇದ್ದುಬಿಟ್ಟಳು. ದೇವಸ್ಥಾನಗಳಲ್ಲಿ ಭಕ್ತರ ಸಮ್ಮುಖದಲ್ಲಿ ಆಕೆ ತಲ್ಲೀನಳಾಗಿ ಪದಗಳನ್ನು ಹಾಡುತ್ತಾ ನರ್ತಿಸುತ್ತಿದ್ದಳು. ಅವಳ ಬಂಧುಬಳಗದವರಿಗೆ ಇದು ಒಪ್ಪಿಗೆಯಾಗಲಿಲ್ಲ. ಮಾವನ ಮನೆಯವರು ಎಷ್ಟೋ ಸಲ ಅವಳಿಗೆ ವಿಷ ಕೊಟ್ಟು ಸಾಯಿಸುವ ಪ್ರಯತ್ನ ನಡೆಸಿದರು. ಇದರಿಂದ ಮನನೊಂದ ಮೀರಾಬಾಯಿ ದ್ವಾರಕಾ ಪಟ್ಟಣಕ್ಕೆ ಮತ್ತು ವೃಂದಾವನಕ್ಕೆ ಹೋಗಿರುತ್ತಿದ್ದಳು. ಅವಳಿಗೆ ಹೋದಲ್ಲೆಲ್ಲಾ ಗೌರವ ಪ್ರಾಪ್ತವಾಗುತ್ತಿತ್ತು. ದ್ವಾರಕಾ ನಗರದಲ್ಲೇ ಈಕೆ ೧೫೫೮ರಲ್ಲಿ ಕೊನೆಯುಳಿರೆಳೆದಳು.

ಕೃತಿಗಳು

ಮೀರಾಬಾಯಿಯ ಕೃತಿಗಳು ಭೋಜಪುರಿ ಭಾಷೆಯಲ್ಲಿವೆ. ಈ ಕೃತಿಗಳಲ್ಲಿ ನಮಗೆ ಮುಖ್ಯವಾಗಿ ಕಾಣುವುದು ಶ್ರೀಕೃಷ್ಣನನ್ನು ಕುರಿತು ಅನನ್ಯ ಭಕ್ತಿ ಮತ್ತು ಸಮರ್ಪಣ ಭಾವ. "ಗಿರಿಧರ ಗೋಪಾಲ" ಎಂಬುದು ಅವಳ ಅಂಕಿತ. "ನನಗೆ ಏನಿದ್ದರೂ ಗಿರಿಧರ ಗೋಪಾಲ, ಬೇರಾರೂ ಇಲ್ಲ" ಎಂಬುದು ಅವಳ ಪದಗಳಲ್ಲಿ ವ್ಯಕ್ತವಾಗುವ ಭಾವ. ಮೀರಾಬಾಯಿ ಕುರಿತು ಅನೇಕ ಚಲನಚಿತ್ರಗಳನ್ನು ಭಾರತೀಯ ಭಾಷೆಗಳಲ್ಲಿ ತಯಾರಿಸಲಾಗಿದೆ . ಮೀರಾಬಾಯಿಯ ಕೃತಿಗಳನ್ನು ಲತಾ ಮಂಗೇಶ್ಕರ್ ಮತ್ತು ಎಂ.ಎಸ್.ಸುಬ್ಬುಲಕ್ಷ್ಮಿ ಅವರು ಹಾಡಿದ್ದಾರೆ,.

  • ನರಸಿಯ ಉಪಾಹಾರ
  • ಗೀತಗೋವಿಂದದ ಭಾಷ್ಯ
  • ರಾಗ ಗೋವಿಂದ
  • ರಾಗ ಸೋರಠದ ಪದಗಳು
  • ಮೀರಾಬಾಯಿಯ ಪದಾವಲಿ (ಭಕ್ತಿಗೀತೆಗಳ ಸಂಗ್ರಹ)

ಇದನ್ನೂ ಗಮನಿಸಿ

ಹೊರಗಿನ ಕೊಂಡಿಗಳು

ಉಲ್ಲೇಖಗಳು

Tags:

ಮೀರಾಬಾಯಿ ಜೀವನ ಪರಿಚಯಮೀರಾಬಾಯಿ ಕೃತಿಗಳುಮೀರಾಬಾಯಿ ಇದನ್ನೂ ಗಮನಿಸಿಮೀರಾಬಾಯಿ ಹೊರಗಿನ ಕೊಂಡಿಗಳುಮೀರಾಬಾಯಿ ಉಲ್ಲೇಖಗಳುಮೀರಾಬಾಯಿಕವಯಿತ್ರಿಶ್ರೀಕೃಷ್ಣ

🔥 Trending searches on Wiki ಕನ್ನಡ:

ತಾಜ್ ಮಹಲ್ಇಮ್ಮಡಿ ಪುಲಕೇಶಿಕವಿರಾಜಮಾರ್ಗಹಾಸನ ಜಿಲ್ಲೆಈಸ್ಟರ್ಆದಿ ಶಂಕರರು ಮತ್ತು ಅದ್ವೈತಮೀರಾಬಾಯಿಹಗ್ಗದಿಕ್ಸೂಚಿಧರ್ಮಇಸ್ಲಾಂಪ್ರಧಾನ ಖಿನ್ನತೆಯ ಅಸ್ವಸ್ಥತೆಸೀತೆಕರ್ಬೂಜದೆಹಲಿಅಸಹಕಾರ ಚಳುವಳಿಔರಂಗಜೇಬ್ಧರ್ಮಸ್ಥಳಉದ್ಯಮಿಅಮೇರಿಕ ಸಂಯುಕ್ತ ಸಂಸ್ಥಾನಕನ್ನಡ ವ್ಯಾಕರಣಶ್ರೀಶೈಲಭತ್ತಭಾರತದ ರಾಜಕೀಯ ಪಕ್ಷಗಳುಎತ್ತಿನಹೊಳೆಯ ತಿರುವು ಯೋಜನೆಕ್ಷಯಬುಧಹಣಕಲೆಪಂಚಾಂಗಹವಾಮಾನಹಂಪೆವಿಜಯಪುರ ಜಿಲ್ಲೆದಿಕ್ಕುತುಂಗಭದ್ರಾ ಅಣೆಕಟ್ಟುಪು. ತಿ. ನರಸಿಂಹಾಚಾರ್ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಮಲೈ ಮಹದೇಶ್ವರ ಬೆಟ್ಟಮೊಘಲ್ ಸಾಮ್ರಾಜ್ಯರಕ್ತಪೂರಣರಚಿತಾ ರಾಮ್ಕಲಬುರಗಿಕರ್ನಾಟಕದಲ್ಲಿ ಬ್ಯಾಂಕಿಂಗ್ಅಟಲ್ ಬಿಹಾರಿ ವಾಜಪೇಯಿಕರ್ನಾಟಕ ವಿಧಾನ ಪರಿಷತ್ಶ್ರೀನಿವಾಸ ರಾಮಾನುಜನ್ಕನ್ನಡ ಅಕ್ಷರಮಾಲೆಪ್ರಲೋಭನೆಗರ್ಭಪಾತಕಾಂತಾರ (ಚಲನಚಿತ್ರ)ಕೊಡವರುಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನಪ್ರಕಾಶ್ ರೈಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕನ್ನಡ ಸಾಹಿತ್ಯ ಪರಿಷತ್ತುಅರ್ಥ ವ್ಯವಸ್ಥೆಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ರತನ್ ನಾವಲ್ ಟಾಟಾಹಸ್ತ ಮೈಥುನಮೈಸೂರು ಅರಮನೆಪುರಾಣಗಳುಕೂಡಲ ಸಂಗಮಮಣ್ಣುಜಲ ಮಾಲಿನ್ಯಹರಿಹರ (ಕವಿ)ದಾಳಿಂಬೆಗರ್ಭಧಾರಣೆಆದೇಶ ಸಂಧಿಒಕ್ಕಲಿಗಕರ್ನಾಟಕದ ಮುಖ್ಯಮಂತ್ರಿಗಳುಬಾಲಕಾರ್ಮಿಕಶಿವಉಪ್ಪಿನ ಸತ್ಯಾಗ್ರಹವರ್ಣಕೋಶ(ಕ್ರೋಮಟೊಫೋರ್)ಅಬೂ ಬಕರ್ತತ್ಪುರುಷ ಸಮಾಸಕ್ಯಾನ್ಸರ್ಜ್ಯೋತಿಬಾ ಫುಲೆ🡆 More