ಮಾಯಾ ರಾವ್

(೧೯೨೮ ಮೇ, ೨,- ಸೆಪ್ಟೆಂಬರ್, ೧,೨೦೧೪) 'ಮಾಯಾರಾವ್' ಒಬ್ಬ ಪ್ರಸಿದ್ಧ ಕಥಕ್ ನೃತ್ಯಾಂಗನೆ.

ಒಡಿಷಾದ ಕಥಕ್ ನೃತ್ಯ ಪ್ರಕಾರವನ್ನು ಕರ್ನಾಟಕಕ್ಕೆ ಪರಿಚಯಿಸಿ ಅದನ್ನು ಜನಪ್ರಿಯತೆಯತ್ತ ಕೊಂಡೊಯ್ದ ಶ್ರೇಯಸ್ಸು ಗಳಿಸಿದರು.

ಡಾ. ಮಾಯಾ ರಾವ್
ಮಾಯಾ ರಾವ್
Born
ಮಾಯ

೧೯೨೮ರಲ್ಲಿ ತಂದೆ ಹಟ್ಟಂಗಡಿ ಸಂಜೀವರಾವ್, ಕಟ್ಟಡ ನಿರ್ಮಾಪಕ, ತಾಯಿ ಸುಭದ್ರಾಬಾಯಿ, ಪತಿ ಎಂ.ಎಸ್.ನಟರಾಜ್, ಒಳ್ಳೆಯ ಸಂಗೀತ ಕಲಾವಿದರು. ಮಗಳು,'ಮಧು ನಟರಾಜ್.
ಬೆಂಗಳೂರಿನಲ್ಲಿ ಕೊಂಕಣಿ ಸಾರಸ್ವತ ಬ್ರಾಹ್ಮಣ ಪರಿವಾರದಲ್ಲಿ ಜನನ.
Died೧, ಸೆಪ್ಟೆಂಬರ್, ೨೦೧೪ ರಂದು ಮಧ್ಯರಾತ್ರಿ.
ಬೆಂಗಳೂರಿನಲ್ಲಿ, ಹೃದಯಾಘಾತದಿಂದ ನಿಧನ.
Occupation(s)ಮಹಾರಾಣಿ ಕಾಲೇಜಿನಲ್ಲಿ ಬಿ.ಎ.ಪದವಿ ಗಳಿಸಿದರು. ಬೆಂಗಳೂರಿನ ಸೆಂಟ್ರೆಲ್ ಕಾಲೇಜಿನಲ್ಲಿ ಇಂಗ್ಲೀಷಿನಲ್ಲಿ ಸ್ನಾತಕೋತ್ತರ ಪದವಿ. ಭರತನಾಟ್ಯ, ಮಣಿಪುರಿ, ರಷಿಯಾದ ಬ್ಯಾಲೆ ಹಾಗೂ ಶ್ರೀಲಂಕಾದ ಕ್ಯಾಂಡನ್ ನೃತ್ಯಗಳಲ್ಲಿ ಪ್ರವೀಣೆ.
Years activeಗುರು ಸೋಹನ್ ಲಾಲ್ ರವರಿಂದ 'ಜೈಪುರ ಘರಾನದ ಕಥಕ್ ನೃತ್ಯ' ಕಲಿತರು. ೧೯೮೭ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು. 'ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ,'
  • ಬೆಂಗಳೂರು ಗಾಯನ ಸಮಾಜದಿಂದ. ನಾಟ್ಯ ಕಲಾರತ್ನ ಪ್ರಶಸ್ತಿ, * ಸಾಹಿತ್ಯ ಕಲಾ ಪ್ರಶಸ್ತಿ,
  • ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ
Known for'ನಾಟ್ಯ ಸರಸ್ವತಿ ನೃತ್ಯಶಾಲೆ' ಸ್ಥಾಪಿಸಿದರು. ಕುವೆಂಪುರವರ ರಾಮಾಯಣ ದರ್ಶನಿಂದ ಆಯ್ದ ಭಾಗಗಳನ್ನು ನಾಟ್ಯರೂಪದಲ್ಲಿ ಪ್ರದರ್ಶಿಸಿದ್ದಾರೆ. ಶಾಕುಂತಲ ಅತ್ಯಂತ ಜನಪ್ರಿಯ ರೂಪಕ.
Websitewww.natyamaya.in/director.html

ಕಥಕ್ ನಲ್ಲಿ ಸಾಧನೆ

ತಮ್ಮ ಇಳಿ ವಯಸ್ಸಿನಲ್ಲೂ 'ಕಥಕ್ ತ್ರೂ ದ ಏಜಸ್' ('Kathak through the ages') ಮೂಲಕ ಗೆಜ್ಜೆ ಕಟ್ಟಿ, ಅಚ್ಚರಿ ಮೂಡಿಸಿದ್ದರು. ಶತಮಾನಗಳ ಪರಂಪರೆಯ ಕಟ್ಟಿಕೊಡುವ ಕಥಕ್ ಗತವೈಭವವನ್ನು ಕಟ್ಟಿಕೊಡುವ ಇಂತಹ ಪ್ರಯತ್ನ, ಇದೇ ಮೊದಲೆಂಬ ಹೆಗ್ಗಳಿಕೆಗೆ ಪಾತ್ರರಾದರು. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ 'ಇನ್ಸ್ಟಿಟ್ಯೂಟ್ ಆಫ್ ಕಥಕ್ ಅಂಡ್ ಕೊರಿಯಾಗ್ರಫಿ,' ಶನಿವಾರ, ಆಗಸ್ಟ್ ೩೦, ರಂದು ನೃತ್ಯ ತರಗತಿಯನ್ನು ನಡೆಸಿದ್ದರು. ನೃತ್ಯ ಅವರ ಜೀವನಾಡಿಯಾಗಿತ್ತು. ಅದರ ಹೆಸರು ಕೇಳಿದಾಗ, ಅವರು ಜಿಂಕೆಯಾಗುತ್ತಿದ್ದರು. ಕೆಲ ಸಮಯದಿಂದ ಭುಜದ ನೋವಿನಿಂದ ಬಳಲುತ್ತಿದ್ದರೂ ಕುಣಿತದಲ್ಲಿ ಆ ನೋವನ್ನು ಮರೆಯುತ್ತಿದ್ದರು.

ಹಿನ್ನೆಲೆ

ಮಾಯಾ ರಾವ್ ಇವರು ೧೯೨೮ರಲ್ಲಿ ಬೆಂಗಳೂರಿನಲ್ಲಿ ಕೊಂಕಣಿ ಸಾರಸ್ವತ ಬ್ರಾಹ್ಮಣ ಪರಿವಾರದಲ್ಲಿ ಜನಿಸಿದರು. ತಂದೆ ಹಟ್ಟಂಗಡಿ ಸಂಜೀವರಾವ್, ಕಟ್ಟಡ ನಿರ್ಮಾಣದಲ್ಲಿ ಪ್ರಸಿದ್ಧರು. ಇವರ ತಾಯಿ ಸುಭದ್ರಾ ಬಾಯಿ; ಮಾಯಾರವರಿಗೆ, ಮೂವರು ಸೋದರರು ಮತ್ತು ಮೂವರು ಸೋದರಿಯರು. ಮಾಯಾ ತಮ್ಮ, ೬ ನೇ ವಯಸ್ಸಿನಲಿ ಪಂಡಿತ್ ರಾಮರಾವ್ ಹೊನ್ನಾವರ, ಬಳಿ ಹಿಂದೂಸ್ತಾನಿ ಸಂಗೀತ ಶಿಕ್ಷಣ ಪಡೆದರು. ಮಹಾರಾಣಿ ಕಾಲೇಜಿನಲ್ಲಿ ಬಿ.ಎ.ಪದವಿ ಗಳಿಸಿದರು. ಬೆಂಗಳೂರಿನ ಸೆಂಟ್ರೆಲ್ ಕಾಲೇಜಿನಲ್ಲಿ ಇಂಗ್ಲೀಷಿನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಭರತನಾಟ್ಯ, ಮಣಿಪುರಿ, ರಶಿಯಾದ ಬ್ಯಾಲೆ ಹಾಗು ಶ್ರೀಲಂಕಾದ ಕ್ಯಾಂಡನ್ ನೃತ್ಯಗಳಲ್ಲಿ ಸಹ ಪರಿಣಿತಿ ಪಡೆದಿದ್ದಾರೆ.

ಆಕಸ್ಮಿಕ ಕಥಕ್ ನಂಟು

'ಕಥಕ್ ನೃತ್ಯ ಪಟು ಸೋಹನ್ ಲಾಲ್' ಬೆಂಗಳೂರಿಗೆ ಬಂದಾಗ ಮಾಯಾರಾವ್ ರವರ ಮನೆಯಲ್ಲೇ ಇಳಿದುಕೊಳ್ಳುತ್ತಿದ್ದರು. ಇವರ ಸೋದರಿಯರು ನೃತ್ಯ ಕಲಿಕೆ ಆರಂಭಿಸಿದಾಗ, ತಂಗಿಯರ ಜೊತೆ ಗುರು ಸೋಹನ್ ಲಾಲ್ ರವರಿಂದ 'ಜೈಪುರ ಘರಾನದ ಕಥಕ್ ನೃತ್ಯ' ಕಲಿತರು. ಪತಿ ಎಂ.ಎಸ್.ನಟರಾಜ್ ಒಳ್ಳೆಯ ಸಂಗೀತ ಕಲಾವಿದರು. ೧೯೫೦ರಲ್ಲಿ ಬೆಂಗಳೂರಿನಲ್ಲಿ 'ನಾಟ್ಯ ಸರಸ್ವತಿ ನೃತ್ಯಶಾಲೆ'ಯನ್ನು ತೆರೆದು ಅನೇಕ ಶಿಷ್ಯರನ್ನು ತರಬೇತು ಗೊಳಿಸಿದ್ದಾರೆ. 'ಪಂಡಿತ್ ಸತ್ಯನಾರಾಯಣ ಚರ್ಕ' ಇವರ ಖ್ಯಾತ ಶಿಷ್ಯರೊಲ್ಲಬ್ಬರು. ದೇವರ ನಾಮ, ಗೀತಗೋವಿಂದ, ರವೀಂದ್ರರ ಕೃತಿಗಳನ್ನು, ಕುವೆಂಪುರವರ ರಾಮಾಯಣ ದರ್ಶನಂದ ಆಯ್ದ ಭಾಗಗಳನ್ನು ಇವರು ನಾಟ್ಯರೂಪದಲ್ಲಿ ಪ್ರದರ್ಶಿಸಿದ್ದಾರೆ. ಶಾಕುಂತಲ ಇವರ ಅತ್ಯಂತ ಜನಪ್ರಿಯ ರೂಪಕ.

ಪ್ರಶಸ್ತಿಗಳು, ಗೌರವ, ಪುರಸ್ಕಾರಗಳು

  • ನವದೆಹಲಿ 'ರಾಜ್ಯ ಸಾಹಿತ್ಯ ಕಲಾ ಪರಿಷತ್ ಪ್ರಶಸ್ತಿ',
  • ಬೆಂಗಳೂರು ಗಾಯನ ಸಮಾಜದಿಂದ-'ನಾಟ್ಯ ಕಲಾರತ್ನ ಪ್ರಶಸ್ತಿ',
  • ಸಾಹಿತ್ಯ ಕಲಾ ಪ್ರಶಸ್ತಿ
  • ೧೯೮೬ ರಲ್ಲಿ, 'ಕರ್ನಾಟಕ ರಾಜ್ಯೋದಯ ಪ್ರಶಸ್ತಿ',
  • ೧೯೬೮ ರಲ್ಲಿ, 'ಕರ್ನಾಟಕ ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ',
  • 'ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ',
  • ೨೦೦೦ ರಲ್ಲಿ, 'ಕರ್ನಾಟಕ ಸರಕಾರದ ಪ್ರತಿಷ್ಠಿತ ಶಾಂತಲಾ ಪ್ರಶಸ್ತಿ',
  • ಫಿನ್ಲೆಂಡಿನಲ್ಲಿ ನಡೆದ,'ಕಲೆ ಮತ್ತು ವಿಶ್ವಶಾಂತಿ ಕುರಿತ ಸಮ್ಮೇಳನದಲ್ಲಿ ಸ್ವರ್ಣಪದಕ' ದೊರೆತಿವೆ
  • ೧೯೮೭ರಲ್ಲಿ ಇವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು.
  • 'ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ,'
  • ಪ್ರತಿಷ್ಠಿತ ಮಣಿಪಾಲ್ 'ಟಿ.ಎಮ್.ಎ ಪೈ ಪ್ರತಿಷ್ಠಾನದ ಕೊಂಕಣಿ ಪ್ರಶಸ್ತಿ',
  • ಅಮೆರಿಕದ ಕನ್ನಡ ಕೂಟದಿಂದಾ, ಪ್ರತಿಷ್ಠಿತ ಗುರು ಪ್ರಶಸ್ತಿ,
  • ಮುಂಬೈನ 'ಸುರ ಸಿಂಗಾರ್ ಸಂಸದ್' ನಿಂದ,ನೃತ್ಯ ವಿಲಾಸ್ ಪ್ರಶಸ್ತಿ,
  • ೧೯೯೯ ರಲ್ಲಿ ಭಾರತ ಸರ್ಕಾರದ ಸಂಪನ್ಮೂಲ ಖಾತೆಯ, ನೃತ್ಯದಲ್ಲಿ ಮಾಡಿದ ಮಹತ್ತರ ಸಾಧನೆಗಾಗಿ, 'ಎಮಿರಿಟಸ್ ಫೆಲೋಷಿಪ್' ಪ್ರದಾನ ಮಾಡಲಾಯಿತು.

ನಿಧನ

ಕಥಕ್ ಗುರು, ನೃತ್ಯಸಂಯೋಜಕಿ,(೮೭) 'ಮಾಯಾರಾವ್, ಬೆಂಗಳೂರಿನಲ್ಲಿ ಸೋಮವಾರ, ೧, ಸೆಪ್ಟೆಂಬರ್, ೨೦೧೪ ರಂದು ಮಧ್ಯರಾತ್ರಿ ಹೃದಯಾಘಾತದಿಂದ ನರಳುತ್ತಿದ್ದು ನಿಧನರಾದರು. ತೀವ್ರವಾದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಸೇರಿಸಲ್ಪಟ್ಟಿದ್ದರು. 'ಮಾಯಾರಾವ್, ತಮ್ಮ ಪುತ್ರಿ 'ಮಧು ನಟರಾಜ್' ಅಗಲಿ ತೆರಳಿದ್ದಾರೆ.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

Tags:

ಮಾಯಾ ರಾವ್ ಕಥಕ್ ನಲ್ಲಿ ಸಾಧನೆಮಾಯಾ ರಾವ್ ಹಿನ್ನೆಲೆಮಾಯಾ ರಾವ್ ಆಕಸ್ಮಿಕ ಕಥಕ್ ನಂಟುಮಾಯಾ ರಾವ್ ಪ್ರಶಸ್ತಿಗಳು, ಗೌರವ, ಪುರಸ್ಕಾರಗಳುಮಾಯಾ ರಾವ್ ನಿಧನಮಾಯಾ ರಾವ್ ಉಲ್ಲೇಖಗಳುಮಾಯಾ ರಾವ್ ಬಾಹ್ಯ ಸಂಪರ್ಕಗಳುಮಾಯಾ ರಾವ್

🔥 Trending searches on Wiki ಕನ್ನಡ:

ಭಾರತದ ಚುನಾವಣಾ ಆಯೋಗರಾಮಾಯಣಭಾರತೀಯ ಮೂಲಭೂತ ಹಕ್ಕುಗಳುಗುರುರಾಜ ಕರಜಗಿಸಾಮ್ರಾಟ್ ಅಶೋಕರಾಶಿಲೋಹರಾಜಧಾನಿಗಳ ಪಟ್ಟಿಸಾರಾ ಅಬೂಬಕ್ಕರ್ಅದ್ವೈತದ್ಯುತಿಸಂಶ್ಲೇಷಣೆಚಂದ್ರಶೇಖರ ಕಂಬಾರಗುಪ್ತಗಾಮಿನಿ (ಧಾರಾವಾಹಿ)ಪಠ್ಯಪುಸ್ತಕಪ್ರಚ್ಛನ್ನ ಶಕ್ತಿಉಪನಯನಬಾದಾಮಿ ಶಾಸನಭಾರತದಲ್ಲಿ ಬ್ರಿಟಿಷ್ ಆಳ್ವಿಕೆಸಿಂಧನೂರುಅಭಿಮನ್ಯುಗಣರಾಜ್ಯಸಂಸ್ಕಾರಪ್ರೀತಿಪುರಂದರದಾಸಹಿಂದುಸ್ತಾನಿ ಶಾಸ್ತ್ರೀಯ ಸಂಗೀತವಾಯು ಮಾಲಿನ್ಯಆಮ್ಲ ಮಳೆಹೈನುಗಾರಿಕೆಆಯ್ದಕ್ಕಿ ಲಕ್ಕಮ್ಮಮುಖ್ಯ ಪುಟಕಥೆಯಾದಳು ಹುಡುಗಿಹಸ್ತಪ್ರತಿಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುದೆಹಲಿಶರಣಬಸವೇಶ್ವರ ದೇವಸ್ಥಾನ ಕಲಬುರಗಿಅಮೀಬಾಪಕ್ಷಿಮಂಗಳಮುಖಿದೇವರ/ಜೇಡರ ದಾಸಿಮಯ್ಯಗೌತಮ ಬುದ್ಧಬಿಳಿ ರಕ್ತ ಕಣಗಳುಮೊದಲನೆಯ ಕೆಂಪೇಗೌಡಕನ್ನಡ ಸಾಹಿತ್ಯವಿಷ್ಣುಎಮಿನೆಮ್ದಕ್ಷಿಣ ಭಾರತದ ನದಿಗಳುಭಾರತದ ಜನಸಂಖ್ಯೆಯ ಬೆಳವಣಿಗೆಸಮಾಜಶಾಸ್ತ್ರಛಂದಸ್ಸುನದಿಶಾಂತರಸ ಹೆಂಬೆರಳುಭೌಗೋಳಿಕ ಲಕ್ಷಣಗಳುಒಂದನೆಯ ಮಹಾಯುದ್ಧಕನ್ನಡ ರಂಗಭೂಮಿಕೇಂದ್ರ ಲೋಕ ಸೇವಾ ಆಯೋಗಹೈಡ್ರೊಕ್ಲೋರಿಕ್ ಆಮ್ಲನೈಟ್ರೋಜನ್ ಚಕ್ರತೇಜಸ್ವಿನಿ ಗೌಡಭಾರತ ಸಂವಿಧಾನದ ಪೀಠಿಕೆಗಾದೆರನ್ನಬಾದಾಮಿ ಚಾಲುಕ್ಯರ ವಾಸ್ತುಶಿಲ್ಪರಕ್ತಚಂದನವಿಧಾನ ಪರಿಷತ್ತುಆಹಾರ ಸಂಸ್ಕರಣೆಶನಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಕಲ್ಲಿದ್ದಲುಮುದ್ದಣಭಾರತದ ಬಂದರುಗಳುಬಾಬು ಜಗಜೀವನ ರಾಮ್ನರ್ಮದಾ ನದಿಡಿಎನ್ಎ -(DNA)ರೇಯಾನ್ತೆಲುಗುಏಲಕ್ಕಿಕರ್ನಾಟಕ🡆 More