ಭಾರತದಲ್ಲಿ ಪ್ರಸವ ಮರಣ

ಭಾರತದಲ್ಲಿ ಪ್ರಸವ ಮರಣವು ಗರ್ಭಾವಸ್ಥೆಯಲ್ಲಿ ಅಥವಾ ಜನನದ ನಂತರ ಮಹಿಳೆಯ ಮರಣವಾಗಿದೆ.

ಪ್ರಸವದ ಸಮಯದಲ್ಲಿ ಮಹಿಳೆಯ ಸಾವಿನ ದರಕ್ಕೆ ವಿವಿಧ ಪ್ರಾಂತ ಮತ್ತು ವಿಭಿನ್ನ ಸಂಸ್ಕೃತಿಗಳು ಕಾರಣವಾಗಿವೆ. ಭಾರತದಲ್ಲಿಯೂ ಪ್ರಸವ ಮರಣದ ಸಂಖ್ಯೆಯು ವಿವಿಧ ರಾಜ್ಯಗಳು, ಪ್ರದೇಶಗಳಲ್ಲಿ ಬೇರೆ ಬೇರೆಯಾಗಿವೆ.

ವೈದ್ಯಕೀಯ ಸ್ಥಿತಿಯ ಅನುಸಾರವಾಗಿ

೧೯೮೦-೨೦೧೫ ರವರೆಗೆ ಭಾರತದಲ್ಲಿ ಶೇಕಡ ೧.೫ ತಾಯಂದಿರ ಸಾವಿಗೆ ಬಸಿರುನಂಜು ಕಾರಣವಾಗಿದೆ. ಹಲವು ವರ್ಷಗಳಿಂದ ಈ ಖಾಯಿಲೆಯಿಂದ ನರಳುವವರ ಸಂಖ್ಯೆ ಬಹುತೇಕ ಒಂದೇ ಮಟ್ಟದಲ್ಲಿದೆ. ಆದರೂ ಇತ್ತೀಚೆಗೆ ಈ ಸಂಖ್ಯೆ ಇಳಿಮುಖವಾಗುತ್ತಿದೆ.

ಹರಡುವಿಕೆ

ಸ್ಯಾಂಪಲ್ ರಿಜಿಸ್ಟ್ರೇಶನ್ ಸಿಸ್ಟೆಮ್ ಬುಲೆಟಿನ್ -೨೦೧೬ ರ ಪ್ರಕಾರ, ಭಾರತದಲ್ಲಿ ೨೦೧೩ ರಿಂದ ತಾಯಿಯ ಮರಣ ಅನುಪಾತದಲ್ಲಿ (ಎಂಎಂಆರ್) ಶೇಕಡ ೨೬.೯ ರಷ್ಟು ಕಡಿತವನ್ನು ದಾಖಲಿಸಲಾಗಿದೆ. ಎಂಎಂಆರ್ ೨೦೧೧-೨೦೧೩ ರಲ್ಲಿ ೧೬೭ ರಿಂದ ೨೦೧೪-೨೦೧೬ ರಲ್ಲಿ ೧೩೦ ಕ್ಕೆ ಮತ್ತು ೨೦೧೫-೧೭ ರಲ್ಲಿ ೧೨೨ ಕ್ಕೆ ಇಳಿದಿದೆ, ಇದು ೨೦೧೪-೧೬ ರ ಕೊನೆಯ ಸಮೀಕ್ಷೆಯ ಅಂಕಿ ಅಂಶಗಳ ಪ್ರಕಾರ ಇದು ಶೇಕಡಾ ೬.೧೫ ರಷ್ಟು ಇಳಿಮುಖವಾಗಿದೆ.

ಎಂಎಂಆರ್ (ಪ್ರತಿ ೧೦೦೦೦೦ ಲೈವ್ ಜನನಗಳಿಗೆ) ೨೦೦೪-೦೬ ೨೦೦೭-೦೯ ೨೦೧೦-೧೨ ೨೦೧೧-೧೩ ೨೦೧೪-೧೬
ಭಾರತ ಒಟ್ಟು ೨೫೪ ೨೧೨ ೧೭೮ ೧೬೭ ೧೩೦
ಅಸ್ಸಾಂ ೪೮೦ ೩೯೦ ೩೨೮ ೩೦೦ ರೂ ೨೩೭
ಬಿಹಾರ / ಜಾರ್ಖಂಡ್ ೩೧೨ ೨೬೧ ೨೧೯ ೨೦೮ ೧೬೫
ಮಧ್ಯಪ್ರದೇಶ / ಛತ್ತೀಸ್‍ಗಢ ೩೩೫ ೨೬೯ ೨೩೦ ೨೨೧ ೧೭೩
ಒಡಿಶಾ ೩೦೩ ೨೫೮ ೨೩೫ ೨೨೨ ೧೮೦
ರಾಜಸ್ಥಾನ ೩೮೮ ೩೧೮ ೨೫೫ ೨೪೪ ೧೯೯
ಉತ್ತರ ಪ್ರದೇಶ / ಉತ್ತರಾಖಂಡ ೪೪೦ ೩೫೯ ೨೯೨ ೨೮೫ ೨೦೧
ಇಎಜಿ ಮತ್ತು ಅಸ್ಸಾಂ ಉಪಮೊತ್ತ§ ೩೭೫ ೩೦೮ ೨೫೭ ೨೪೬ ೧೮೮
ಆಂಧ್ರಪ್ರದೇಶ ೧೫೪ ೧೩೪ ೧೧೦ ೯೨ ೭೪
ತೆಲಂಗಾಣ ೮೧
ಕರ್ನಾಟಕ ೨೧೩ ೧೭೮ ೧೪೪ ೧೩೩ ೧೦೮
ಕೇರಳ ೯೫ ೮೧ ೬೬ ೬೧ ೪೬
ತಮಿಳುನಾಡು ೧೧೧ ೯೭ ೯೦ ೭೯ ೬೬
ದಕ್ಷಿಣ ಉಪಮೊತ್ತ ೧೪೯ ೧೨೭ ೧೦೫ ೯೩ ೭೭
ಗುಜರಾತ್ ೧೬೦ ೧೪೮ ೧೨೨ ೧೧೨ ೯೧
ಹರಿಯಾಣ ೧೮೬ ೧೫೩ ೧೪೬ ೧೨೭ ೧೦೧
ಮಹಾರಾಷ್ಟ್ರ ೧೩೦ ೧೦೪ ೮೭ ೬೮ ೬೧
ಪಂಜಾಬ್ ೧೯೨ ೧೭೨ ೧೫೫ ೧೪೧ ೧೨೨
ಪಶ್ಚಿಮ ಬಂಗಾಳ ೧೪೧ ೧೪೫ ೧೧೭ ೧೧೩ ೧೦೧
ಇತರ ರಾಜ್ಯಗಳು ೨೦೬ ೧೬೦ ೧೩೬ ೧೨೬ ೯೭
ಇತರೆ ಉಪಮೊತ್ತ ೧೭೪ ೧೪೯ ೧೨೭ ೧೧೫ ೯೩

§ ಇಎಜಿ = ಬಿಹಾರ, ಝಾರ್ಖಂಡ, ಮಧ್ಯಪ್ರದೇಶ, ಛತ್ತೀಸಗಢ, ಒಡಿಶಾ, ರಾಜಸ್ಥಾನ, ಉತ್ತರಪ್ರದೇಶ, ಉತ್ತರಾಖಂಡ ಮತ್ತು ಅಸ್ಸಾಂ

ಪ್ರದೇಶದ ಪ್ರಕಾರ

ಭಾರತದ ಶ್ರೀಮಂತ ರಾಜ್ಯಗಳಲ್ಲಿನ ಗ್ರಾಮೀಣ ಮತ್ತು ನಗರ ಮಹಿಳೆಯರು ತಾಯಿಯ ಆರೋಗ್ಯ ರಕ್ಷಣೆಯ ಸವಲತ್ತುಗಳನ್ನು ಪಡೆಯುವ ದರಗಳು ಒಂದೇ ಆಗಿರುತ್ತವೆ. ಆದರೆ ಬಡ ರಾಜ್ಯಗಳಲ್ಲಿ, ನಗರ ಮಹಿಳೆಯರು ಗ್ರಾಮೀಣ ಮಹಿಳೆಯರಿಗಿಂತ ಹೆಚ್ಚಾಗಿ ಆರೋಗ್ಯ ಸೇವೆಯನ್ನು ಬಳಸುತ್ತಾರೆ.

ಅತಿ ಹಿಂದುಳಿದ ರಾಜ್ಯಗಳು (BIMARU states) ಪ್ರಸವ ಮರಣ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತವೆ.

ಅಸ್ಸಾಂ

ಭಾರತದಲ್ಲಿ ಅತ್ಯಧಿಕ ಪ್ರಸವ ಮರಣದ ಪ್ರಮಾಣವನ್ನು ಅಸ್ಸಾಂ ಹೊಂದಿದೆ. ಅಸ್ಸಾಂನೊಳಗೆ, ಚಹಾ ತೋಟ ಕಾರ್ಮಿಕರಲ್ಲಿ ಪ್ರಸವ ಮರಣದ ಪ್ರಮಾಣವು ಅತಿ ಹೆಚ್ಚು.

ಆಂಧ್ರಪ್ರದೇಶ (ತೆಲಂಗಾಣ ಸಹಿತ)

ಆಂಧ್ರಪ್ರದೇಶದ ಒಂದು ಪ್ರಾದೇಶಿಕ ಕಾರ್ಯಕ್ರಮವು ಸ್ಥಳೀಯ ಸಮುದಾಯಗಳಲ್ಲಿ ತಾಯಂದಿರ ಮರಣದ ಕಾರಣಗಳ ಬಗ್ಗೆ ವೈದ್ಯರು ಮತ್ತು ದಾದಿಯರನ್ನು ಕೇಳಲು ಪ್ರಯತ್ನಿಸುತ್ತದೆ. ಪ್ರಸವ ಮರಣಕ್ಕೆ ವಿಭಿನ್ನ ಸ್ಥಳಗಳಲ್ಲಿ ವಿಭಿನ್ನ ಕಾರಣಗಳಿರುತ್ತವೆ. ಆದರೆ ಚಿಕಿತ್ಸಾಲಯಗಳು ಆ ಪ್ರದೇಶದ ಸಾಮಾನ್ಯ ಕಾರಣಗಳನ್ನು ತಿಳಿದಿದ್ದರೆ, ಭವಿಷ್ಯದ ಸಾವುಗಳನ್ನು ತಡೆಯಲು ಅವರು ಉತ್ತಮವಾಗಿ ಸಿದ್ಧರಾಗಿರುತ್ತಾರೆ.

ಬಿಹಾರ

ಭಾರತದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಬಿಹಾರದಲ್ಲಿ ಆರೋಗ್ಯ ನಿಗಾ ವ್ಯವಸ್ಥೆಗಳು ತುಂಬ ಕೆಳಮಟ್ಟದಲ್ಲಿವೆ. ೨೦೧೨ರ ಒಂದು ಸಮೀಕ್ಷೆಯ ಪ್ರಕಾರ ಬಿಹಾರದಲ್ಲಿ ನವಜಾತ ಶಿಶುಗಳ ಮರಣ ಶೇಕಡ ೩೨.೨ ರಷ್ಟಿದೆ. ಪ್ರಸವ ಸಂಬಂಧಿ ಸಮಸ್ಯೆಗಳು ನವಜಾತ ಶಿಶು ಮರಣದ ಸಂಖ್ಯೆಗಿಂತ ದ್ವಿಗುಣವಾಗಿದೆ. ಶೇಕಡ ೨೧.೨ ರಷ್ಟು ಮಹಿಳೆಯರು ಮಾತ್ರ ಎರಡು ವಾರಗಳ ಪ್ರಸವಾನಂತರದ ಸುಶ್ರೂಶೆಯನ್ನು ಪಡೆದಿದ್ದರು ಎಂದು ಅದೇ ವರದಿ ಹೇಳಿದೆ.

ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳದ ಗ್ರಾಮೀಣ ಪ್ರದೇಶದಲ್ಲಿ ೨೦೧೯ ರಲ್ಲಿ ನಡೆಸಿದ ಸಮೀಕ್ಷೆಯೊಂದರ ಪ್ರಕಾರ "ಮೂರು ವಿಳಂಬಗಳು" ಪ್ರಸವ ಮರಣಕ್ಕೆ ಕಾರಣವಾಗಿವೆ. ಆಸ್ಪತ್ರೆಗೆ ಹೋಗಲು ನಿರ್ಧರಿಸುವಲ್ಲಿ ವಿಳಂಬ, ವಾಸ್ತವವಾಗಿ ಆಸ್ಪತ್ರೆಗೆ ಬರಲು ವಿಳಂಬ, ಮತ್ತು ಆಸ್ಪತ್ರೆಯಲ್ಲಿ ಆರೈಕೆ ಪಡೆಯುವಲ್ಲಿ ವಿಳಂಬ -ಇವೇ ಆ ಮೂರು ಕಾರಣಗಳು.

ಕರ್ನಾಟಕ

ದಕ್ಷಿಣ ಭಾರತದಲ್ಲಿ ಅತ್ಯಧಿಕ ಪ್ರಸವ ಮರಣದ ಪ್ರಮಾಣವನ್ನು ಕರ್ನಾಟಕ ಹೊಂದಿದೆ. ತಾಯಂದಿರು ಆರೋಗ್ಯ ಸೇವೆಗಳನ್ನು ಬಳಸದಿದ್ದಾಗ, ಅವರ ಕಾರಣಗಳು ಕ್ಲಿನಿಕ್‍ಗೆ ಸಾಗಿಸಲು ಸೌಲಭ್ಯದ ಕೊರತೆ, ಆರೈಕೆಯ ವೆಚ್ಚ ಮತ್ತು ಕ್ಲಿನಿಕ್ ಭೇಟಿಯಿಂದ ಕಡಿಮೆ ಪ್ರಯೋಜನ ಇವು ಪ್ರಮುಖ ಕಾರಣಗಳಾಗಿವೆ ಎಂದು ಸಂದರ್ಶನಗಳಿಂದ ತಿಳಿದುಬಂದಿದೆ. ಈ ಪ್ರದೇಶದಲ್ಲಿ ತಾಯಿ ಸತ್ತಾಗ ಸಾಮಾನ್ಯವಾಗಿ ಅದು ಪ್ರಸವಾನಂತರದ ಅವಧಿಯಲ್ಲಾಗಿರುತ್ತದೆ.

ಉತ್ತರ ಪ್ರದೇಶ

ಉತ್ತರ ಪ್ರದೇಶದಲ್ಲಿ ಹೆಚ್ಚು ವಿದ್ಯಾವಂತ ಮತ್ತು ಹೆಚ್ಚು ಹಣ ಹೊಂದಿರುವ ಮಹಿಳೆಯರು ಹೆಚ್ಚು ಆರೋಗ್ಯ ಸೇವೆಗಳನ್ನು ಬಳಸುತ್ತಾರೆ ಎಂದು ಸಮೀಕ್ಷೆಗಳು ಕಂಡುಹಿಡಿದಿದೆ.

ತಡೆಗಟ್ಟುವಿಕೆ

೨೦೧೮ ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಭಾರತದಲ್ಲಿ ಪ್ರಸವ ಮರಣದ ದರವನ್ನು ಕಡಿಮೆ ಮಾಡುವ ಇತ್ತೀಚಿನ ನಾಲ್ಕು ಬದಲಾವಣೆಗಳನ್ನು ಗಮನಿಸಿದೆ:

  1. ಗರ್ಭಿಣಿ ಮಹಿಳೆಯರು ಮತ್ತು ಹೊಸ ತಾಯಂದಿರಿಗೆ ಆರೋಗ್ಯ ಸೇವೆಯನ್ನು ಸರ್ಕಾರ ಹೆಚ್ಚಿಸಿದೆ.
  2. ಜನನಿ ಶಿಶು ಸುರಕ್ಷ ಕಾರ್ಯಕ್ರಮದಂತಹ ಧನಸಹಾಯ ಯೋಜನೆಗಳು ಆಸ್ಪತ್ರೆಗೆ ಸಾಗಿಸಲು ಮತ್ತು ಹೆರಿಗೆಯ ವೆಚ್ಚವನ್ನು ಭರಿಸುತ್ತಿವೆ.
  3. ಮಹಿಳಾ ಶಿಕ್ಷಣದಲ್ಲಿನ ಹೂಡಿಕೆಗಳು ಇತರ ಪ್ರಯೋಜನಗಳೊಂದಿಗೆ ಆರೋಗ್ಯದ ಫಲಿತಾಂಶಗಳನ್ನೂ ಸುಧಾರಿಸುತ್ತವೆ.
  4. ಪ್ರಧಾನ್ ಮಂತ್ರಿ ಸುರಕ್ಷಿತ್ ಮಾತೃತ್ವ ಅಭಿಯಾನ ಕಾರ್ಯಕ್ರಮದ ಮೂಲಕ ಖಾಸಗಿ ಮತ್ತು ಸರ್ಕಾರಿ ಚಿಕಿತ್ಸಾಲಯಗಳ ನಡುವಿನ ಸಹಯೋಗವನ್ನು ಸರ್ಕಾರ ಪ್ರೋತ್ಸಾಹಿಸುತ್ತಿದೆ.

೨೦೧೭ ರ ಮೊದಲು ಸರಕಾರವು ಪ್ರಸವ ಮರಣವನ್ನು ತಡೆಗಟ್ಟುವ ಯೋಜನೆಯನ್ನು ಅಭಿವೃದ್ಧಿಪಡಿಸಲು ಗಮನ ಹರಿಸಿ ಅದನ್ನು ತಡೆಗಟ್ಟಲು ಯೋಜನೆಯನ್ನು ಪ್ರಾರಂಭಿಸಿತು. ೨೦೧೭ ರಲ್ಲಿ ಭಾರತ ಸರ್ಕಾರವು ಅಪಾಯಗಳನ್ನು ಪತ್ತೆಹಚ್ಚಲು ತನ್ನ ಕಾರ್ಯಕ್ರಮಗಳಲ್ಲಿ ಗಮನ ಹರಿಸಿತು ಮತ್ತು ನಂತರ ಸಾವನ್ನು ತಡೆಗಟ್ಟಲು ಆರೋಗ್ಯ ಸೇವೆಯನ್ನು ನೀಡಿತು.

೨೦೧೬ ರ ರಾಷ್ಟ್ರೀಯ ಸಮೀಕ್ಷೆಯ ಪ್ರಕಾರ, ಮನೆಯೊಂದು ಮಹಿಳೆಯನ್ನು ಪ್ರಸವ ಮರಣದಲ್ಲಿ ಕಳೆದುಕೊಂಡರೆ, ಮನೆಯ ಇತರೆ ಮಹಿಳೆಯರು ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ನಂತರ ಹೆಚ್ಚಿನ ಕ್ಲಿನಿಕ್ ಸೇವೆಗಳನ್ನು ಪಡೆಯುತ್ತಾರೆ. ನಿರೀಕ್ಷೆಯ ವಿರುದ್ಧವಾಗಿ, ತಾಯಿಯ ಮರಣದ ನಂತರ ಮಹಿಳೆಯರು ಆಸ್ಪತ್ರೆಗಳನ್ನು ತಪ್ಪಿಸುತ್ತಾರೆ ಮತ್ತು ಬದಲಿಗೆ ಸೂಲಗಿತ್ತಿಯರ ಸಹಾಯವನ್ನು ಪಡೆಯುತ್ತಾರೆ ಎಂದು ಅಧ್ಯಯನವು ಕಂಡುಹಿಡಿದಿದೆ. ಇದಕ್ಕೆ ಕಾರಣಗಳು ಬದಲಾಗುತ್ತಿರುತ್ತವೆ, ಆದರೆ ವಿವರಣೆಯ ಒಂದು ಭಾಗವೆಂದರೆ ಈ ಮಹಿಳೆಯರಲ್ಲಿ ಅನೇಕರು ಆರೈಕೆಗಾಗಿ ಆಸ್ಪತ್ರೆಗೆ ಹೋಗಬಹುದು ಆದರೆ ಹಾಗೆ ಮಾಡುವುದನ್ನು ತಪ್ಪಿಸಲು ಆಯ್ಕೆ ಮಾಡಿಕೊಳ್ಳಬಹುದು.

ಭಾರತದಲ್ಲಿ ತಾಯಿಯ ಮರಣದ ಮೇಲೆ ಪ್ರಭಾವ ಬೀರುವ ಸಾಮಾಜಿಕ ಅಂಶಗಳು ಭಾರತದಲ್ಲಿನ ಆದಾಯ ಅಸಮಾನತೆ; ಪ್ರಸವಾನಂತರದ ಅವಧಿಯಲ್ಲಿ ಪ್ರಸವಪೂರ್ವ ಆರೈಕೆ ಮತ್ತು ಆರೈಕೆಯ ಸವಲತ್ತುಗಳ ಲಭ್ಯತೆಯ ಮಟ್ಟ; ಮಹಿಳಾ ಶಿಕ್ಷಣದ ಮಟ್ಟ; ಪ್ರಾದೇಶಿಕ ಗ್ರಾಮೀಣ-ನಗರ ವಿಭಜನೆಯಲ್ಲಿ ತಾಯಿಯ ಸಮುದಾಯದ ಸ್ಥಾನ; ಗರ್ಭಾವಸ್ಥೆಯಲ್ಲಿ ತಾಯಿಯ ಪೋಷಣೆಯ ಲಭ್ಯತೆ; ಸ್ಥಳೀಯ ನೈರ್ಮಲ್ಯ; ಮತ್ತು ತಾಯಿಯ ಜಾತಿ.   [ ಉಲ್ಲೇಖದ ಅಗತ್ಯವಿದೆ] ತಾಯಿಯ ಮರಣವನ್ನು ಪತ್ತೆಹಚ್ಚುವ ಅದೇ ಆರೋಗ್ಯ ಮೇಲ್ವಿಚಾರಣಾ ವ್ಯವಸ್ಥೆಗಳು ಆಸ್ಪತ್ರೆಯ ಸಿಬ್ಬಂದಿಯಿಂದ ಉತ್ತಮ ಚಿಕಿತ್ಸೆಯ ಕೊರತೆಯಂತಹ ಇತರ ಸಮಸ್ಯೆಗಳನ್ನು ವರದಿ ಮಾಡಲು ಮಹಿಳೆಯರನ್ನು ಕೇಳಬಹುದು. ಭಾರತದಲ್ಲಿನ ಆರೋಗ್ಯ ರಕ್ಷಣೆ ತಾಯಿಯ ಮರಣದ ಪ್ರಮಾಣವನ್ನು ಅಳೆಯುತ್ತದೆ ಮತ್ತು ವರದಿ ಮಾಡುತ್ತದೆ. ಮಹಿಳೆಯರಿಗೆ ಸಾಮಾನ್ಯ ಬೆಂಬಲ ಸೇವೆಗಳನ್ನು ನೀಡುವುದರಿಂದ ಆರೋಗ್ಯ ರಕ್ಷಣೆಯ ಹಲವು ಅಂಶಗಳನ್ನು ಸುಧಾರಿಸಬಹುದು.

ತಾಯಿಯ ಆರೋಗ್ಯವನ್ನು ಸುಧಾರಿಸಲು ೨೦೦೦-೨೦೧೫ ರವರೆಗೆ ಭಾರತ ಸಹಸ್ರಮಾನದ ಅಭಿವೃದ್ಧಿ ಗುರಿಯಲ್ಲಿ ಭಾಗಿಯಾಗಿತ್ತು.   [ ಉಲ್ಲೇಖದ ಅಗತ್ಯವಿದೆ ] ಸುರಕ್ಷಿತ ವಾತಾವರಣವನ್ನು ಒದಗಿಸಲು ಭಾರತ ಸರ್ಕಾರ ವಿವಿಧ ಸಾರ್ವಜನಿಕ ಆರೋಗ್ಯ ಉಪಕ್ರಮಗಳನ್ನು ಪ್ರಾರಂಭಿಸಿದೆ. ಈ ಕೆಲವು ಉಪಕ್ರಮಗಳು -

  • ಜನನಿ ಸುರಕ್ಷ ಯೋಜನೆ (ಜೆಎಸ್‌ವೈ),
  • ಪ್ರಧಾನ್ ಮಂತ್ರಿ ಮಾತೃ ವಂದನ ಯೋಜನೆ (ಪಿಎಂಎಂವಿವೈ),
  • ಪ್ರಧಾನ್ ಮಂತ್ರಿ ಸುರಕ್ಷಿತ್ ಮಾತೃತ್ವ ಅಭಿಯಾನ (ಪಿಎಂಎಸ್ಎಂಎ)
  • ಪೋಶಣ್ ಅಭಿಯಾನ್ ಮತ್ತು ಲಕ್ಷ್ಯ

ರಸ್ತೆಗಳನ್ನು ಸುಧಾರಿಸುವ ಮೂಲಕ ಮತ್ತು ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ (ಪಿಎಚ್‌ಸಿ) ಉಚಿತ ಆಂಬ್ಯುಲೆನ್ಸ್ ಸೇವೆಗಳನ್ನು ಒದಗಿಸುವ ಮೂಲಕ ದೇಶದ ಮೂಲಸೌಕರ್ಯಗಳನ್ನು ಸುಧಾರಿಸಲು ಸರ್ಕಾರವು ಉಪಕ್ರಮಗಳನ್ನು ಕೈಗೊಂಡಿದೆ.

ಇತಿಹಾಸ

೨೦೦೫ ರಿಂದ ತಾಯಿಯ ಮರಣ ಪ್ರಮಾಣವನ್ನು ಕಡಿಮೆಗೊಳಿಸಿದ್ದಕ್ಕಾಗಿ, ವಿಶ್ವ ಆರೋಗ್ಯ ಸಂಸ್ಥೆಯು ೨೦೧೮ ರಲ್ಲಿ ಭಾರತವನ್ನು ಅಭಿನಂದಿಸಿತು.

ಅದಕ್ಕೂ ಮೊದಲು, ವಿವಿಧ ವರದಿಗಳು ಭಾರತದಲ್ಲಿ ತಾಯಂದಿರ ಮರಣ ಪ್ರಮಾಣ ಹೆಚ್ಚಾಗಿವೆ ಎಂದು ವರದಿ ಮಾಡಿವೆ.

ಸಂಶೋಧನೆ

ಪ್ರಸವ ಮರಣವನ್ನು ಅಧ್ಯಯನ ಮಾಡುವುದು ಒಂದು ಸವಾಲಾಗಿದೆ. ಏಕೆಂದರೆ ಇದು ವಿವಿಧ ಕಾರಣಗಳಿಂದಾಗಿ ಸಂಭವಿಸಬಹುದು ಮತ್ತು ವರದಿ ಮಾಡುವುದು ಸವಾಲಿನ ಸಂಗತಿಯಾಗಿದೆ. ಅಖಿಲ ಭಾರತದಲ್ಲಿ ತಾಯಂದಿರ ಮರಣದ ಬಗ್ಗೆ ರಾಷ್ಟ್ರೀಯವಾಗಿ ಪ್ರತಿನಿಧಿಸುವ ಮೊದಲ ಅಧ್ಯಯನ ೨೦೧೪ ರಲ್ಲಾಯಿತು.

೨೦೧೫ ರಲ್ಲಿ ಎರಡು ಪ್ರಮುಖ ಜಾಗತಿಕ ಅಧ್ಯಯನಗಳು ಭಾರತದಲ್ಲಿ ತಾಯಂದಿರ ಮರಣವನ್ನು ವರದಿ ಮಾಡಿವೆ ಮತ್ತು ರಾಷ್ಟ್ರೀಯ ಯೋಜನೆಗೆ ಕೊಡುಗೆ ನೀಡಿವೆ. ಒಂದು ಅಧ್ಯಯನವೆಂದರೆ ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಸ್ಟಡಿ, ಇದು ೨೦೧೫ ರಲ್ಲಿ ಮೊದಲ ಬಾರಿಗೆ ಭಾರತದ ಬಗ್ಗೆ ರಾಷ್ಟ್ರೀಯ ವರದಿಯನ್ನು ಪ್ರಕಟಿಸಿತು. ಇನ್ನೊಂದು ವಿಶ್ವಸಂಸ್ಥೆಯ ಪ್ರಸವ ಮರಣದ ಪ್ರಮಾಣ ಇಂಟೆರ್-ಏಜೆನ್ಸಿ ಗುಂಪಿನ (ಯುಎನ್ ಎಂಎಂಇಐಜಿ) ೨೦೧೫ ರ ವರದಿಯಾಗಿದೆ. ಈ ಎರಡು ಅಧ್ಯಯನಗಳ ಹಿಂದಿನ ೨೦೧೩ರ ಆವೃತ್ತಿಗಳಿಗಾಗಿ, ಭಾರತದಲ್ಲಿ ತಾಯಂದಿರ ಮರಣದ ಸಮಯದ ಬದಲಾವಣೆಗಳ ಬಗ್ಗೆ ವಿಭಿನ್ನ ತೀರ್ಮಾನಗಳಿಗೆ ಬರಲು ಅವರು ವಿಭಿನ್ನ ಮಾಹಿತಿ ಮತ್ತು ವಿಶ್ಲೇಷಣೆಯನ್ನು ಬಳಸಿದ್ದಾರೆ ಎಂದು ಸಂಶೋಧಕರು ಗಮನಿಸಿದ್ದಾರೆ.

ತಾಯಿಯ ಆರೋಗ್ಯ ಮತ್ತು ಹೆರಿಗೆ ಫಲಿತಾಂಶವನ್ನು ಸುಧಾರಿಸಲು ಒಂದು ವಾರದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ೧೬೦,೦೦೦ ಗರ್ಭಿಣಿ ಮಹಿಳೆಯರ ಅಧ್ಯಯನದ ನಂತರ ೨೦೧೭ ರ ವರದಿಯಲ್ಲಿ ಯಾವುದೇ ಮಹತ್ವದ ಬದಲಾವಣೆ ಕಂಡುಬಂದಿಲ್ಲ.

ಉಲ್ಲೇಖಗಳು

ಹೆಚ್ಚಿನ ಓದುವಿಕೆ

Tags:

ಭಾರತದಲ್ಲಿ ಪ್ರಸವ ಮರಣ ವೈದ್ಯಕೀಯ ಸ್ಥಿತಿಯ ಅನುಸಾರವಾಗಿಭಾರತದಲ್ಲಿ ಪ್ರಸವ ಮರಣ ಹರಡುವಿಕೆಭಾರತದಲ್ಲಿ ಪ್ರಸವ ಮರಣ ಪ್ರದೇಶದ ಪ್ರಕಾರಭಾರತದಲ್ಲಿ ಪ್ರಸವ ಮರಣ ತಡೆಗಟ್ಟುವಿಕೆಭಾರತದಲ್ಲಿ ಪ್ರಸವ ಮರಣ ಇತಿಹಾಸಭಾರತದಲ್ಲಿ ಪ್ರಸವ ಮರಣ ಸಂಶೋಧನೆಭಾರತದಲ್ಲಿ ಪ್ರಸವ ಮರಣ ಉಲ್ಲೇಖಗಳುಭಾರತದಲ್ಲಿ ಪ್ರಸವ ಮರಣ ಹೆಚ್ಚಿನ ಓದುವಿಕೆಭಾರತದಲ್ಲಿ ಪ್ರಸವ ಮರಣ

🔥 Trending searches on Wiki ಕನ್ನಡ:

ಸಂಚಿ ಹೊನ್ನಮ್ಮನಕ್ಷತ್ರಬೀಚಿದಡಾರಶ್ರೀವಿಜಯಉಡುಪಿ ಜಿಲ್ಲೆಕೇಂದ್ರಾಡಳಿತ ಪ್ರದೇಶಗಳುಚಂದ್ರಶೇಖರ ವೆಂಕಟರಾಮನ್ಕಟ್ಟುಸಿರುಕೆ ವಿ ನಾರಾಯಣಯುರೋಪ್ಜಿ.ಎಸ್.ಶಿವರುದ್ರಪ್ಪಸಂಸ್ಕೃತಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಕರ್ನಾಟಕದ ಜಾನಪದ ಕಲೆಗಳುಹರ್ಡೇಕರ ಮಂಜಪ್ಪಗಾಂಧಿ ಜಯಂತಿಗಂಗ (ರಾಜಮನೆತನ)ಭಾರತೀಯ ಜನತಾ ಪಕ್ಷಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಭಾರತದ ರಾಷ್ಟ್ರೀಯ ಚಿನ್ಹೆಗಳುರಾಜ್ಯಪಾಲಬಂಜಾರಕಪ್ಪೆ ಅರಭಟ್ಟಎಸ್.ಜಿ.ಸಿದ್ದರಾಮಯ್ಯಪಟ್ಟದಕಲ್ಲುಕರ್ನಾಟಕದ ಮಹಾನಗರಪಾಲಿಕೆಗಳುನಾಟಕಪುರಂದರದಾಸವಿಕ್ರಮಾರ್ಜುನ ವಿಜಯಧರ್ಮಶಿಶುನಾಳ ಶರೀಫರುಮಣ್ಣುಅವಾಹಕಹೆಣ್ಣು ಬ್ರೂಣ ಹತ್ಯೆಭೂಮಿರತ್ನತ್ರಯರುಚಂದ್ರಪತ್ರಿಕೋದ್ಯಮಉಪ್ಪಿನ ಸತ್ಯಾಗ್ರಹಮನೋಜ್ ನೈಟ್ ಶ್ಯಾಮಲನ್ಮಳೆಕರ್ನಾಟಕ ಸಂಗೀತಪರಮಾಣುಕರಗಎಚ್.ಎಸ್.ವೆಂಕಟೇಶಮೂರ್ತಿಕಬಡ್ಡಿಪಂಚತಂತ್ರಮುಖ್ಯ ಪುಟಶ್ಯೆಕ್ಷಣಿಕ ತಂತ್ರಜ್ಞಾನಮೊದಲನೆಯ ಕೆಂಪೇಗೌಡಋಗ್ವೇದಸಮಾಸಅಗ್ನಿ(ಹಿಂದೂ ದೇವತೆ)ಚಿಪ್ಕೊ ಚಳುವಳಿಅಖಿಲ ಭಾರತ ಬಾನುಲಿ ಕೇಂದ್ರಭಾರತದ ಪ್ರಧಾನ ಮಂತ್ರಿಗಳ ಪಟ್ಟಿಮಾನವನಲ್ಲಿ ರಕ್ತ ಪರಿಚಲನೆತಾಜ್ ಮಹಲ್ಜವಾಹರ‌ಲಾಲ್ ನೆಹರುಪರಿಸರ ವ್ಯವಸ್ಥೆಶ್ರೀಪಾದರಾಜರುಸುಬ್ಬರಾಯ ಶಾಸ್ತ್ರಿಭಾರತದಲ್ಲಿ ಮೀಸಲಾತಿಶಂಕರ್ ನಾಗ್ಸಂಸ್ಕಾರಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಗುಬ್ಬಚ್ಚಿಸಂಶೋಧನೆಭಾಷೆಮಲೆನಾಡುಸೂರ್ಯ (ದೇವ)ರತ್ನಾಕರ ವರ್ಣಿಕರ್ನಾಟಕದ ನದಿಗಳುವಾಣಿವಿಲಾಸಸಾಗರ ಜಲಾಶಯಅಂಟಾರ್ಕ್ಟಿಕಭರತೇಶ ವೈಭವ🡆 More