ಬಿ. ವಿ. ಕಾರಂತ್

ಬಾಬುಕೋಡಿ ವೆಂಕಟರಮಣ ಕಾರಂತ (ಅಕ್ಟೋಬರ್ ೭, ೧೯೨೮ - ಸೆಪ್ಟಂಬರ್ ೧, ೨೦೦೨) ಅವರು ಚಲನಚಿತ್ರ ನಿರ್ದೇಶಕ, ನಾಟಕಕಾರ, ನಟ, ಚಿತ್ರಕಥೆಗಾರ, ಸಂಯೋಜಕರಾಗಿದ್ದರು.

ಪ್ಯಾರಲಲ್ ಸಿನಿಮಾದ ಪ್ರವರ್ತಕರಲ್ಲಿ ಕಾರಂತರು ಕೂಡ ಒಬ್ಬರು. ಕಾರಂತರು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದ (೧೯೬೨) ಹಳೆಯ ವಿದ್ಯಾರ್ಥಿಯಾಗಿದ್ದರು. ನಂತರ ಅದರ ನಿರ್ದೇಶಕರಾಗಿದ್ದರು. ಅವರಿಗೆ ೧೯೭೬ ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಆರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಕಲಾ ಕ್ಷೇತ್ರಕ್ಕೆ ಅವರ ಕೊಡುಗೆಗಳಿಗಾಗಿ ನಾಗರಿಕ ಗೌರವ ಪದ್ಮಶ್ರೀ ಪ್ರಶಸ್ತಿ ಲಭಿಸಿತು.

ಬಿ. ವಿ. ಕಾರಂತ್
ಬಿ. ವಿ. ಕಾರಂತ್
Born
ಬಾಬುಕೋಡಿ ವೆಂಕಟರಮಣ ಕಾರಂತ

(೧೯೨೯-೦೯-೧೯)೧೯ ಸೆಪ್ಟೆಂಬರ್ ೧೯೨೯
ಮಂಚಿ, ಮೈಸೂರು ಸಾಮ್ರಾಜ್ಯ, ಬ್ರಿಟಿಷ್ ಭಾರತ
Died1 September 2002(2002-09-01) (aged 72)
Nationalityಭಾರತೀಯ
Occupation(s)ಸಂಯೋಜಕ, ಚಲನಚಿತ್ರ ನಿರ್ದೇಶಕ, ಚಿತ್ರಕಥೆಗಾರ, ನಟ
Spouseಪ್ರೇಮ ರಾವ್ (೧೯೫೮-೨೦೦೨)

ಜೀವನಚರಿತ್ರೆ

ಬಿ.ವಿ. ಕಾರಂತರು ೧೯೨೮ ರಲ್ಲಿ ದಕ್ಷಿಣ ಕನ್ನಡದ ಬಂಟ್ವಾಳ ತಾಲ್ಲೂಕಿನ ಮಂಚಿ ಎಂಬ ಹಳ್ಳಿಯಲ್ಲಿ ಜನಿಸಿದರು. ಕಾರಂತರು ಮೂರನೇ ತರಗತಿಯಲ್ಲಿರುವಾಗ ಪಿ.ಕೆ. ನಾರಾಯಣ ಅವರು ನಿರ್ದೇಶಿಸಿದ ನನ್ನ ಗೋಪಾಲ ನಾಟಕದಲ್ಲಿ ನಟಿಸಿದರು. ನಂತರ ಅವರು ಗುಬ್ಬಿ ವೀರಣ್ಣ ನಾಟಕ ಕಂಪನಿಗೆ ಸೇರಿದರು. ಅಲ್ಲಿ ಅವರು ರಾಜ್‌ಕುಮಾರ್ ಅವರೊಂದಿಗೆ ಕೆಲಸ ಮಾಡಿದರು.

ಗುಬ್ಬಿ ವೀರಣ್ಣ ಅವರು ಕಾರಂತರನ್ನು ಬನಾರಸ್‌ಗೆ ಮಾಸ್ಟರ್ ಆಫ್ ಆರ್ಟ್ಸ್ ಪದವಿಯನ್ನು ಕಲಿಯಲು ಕಳುಹಿಸಿದರು. ಅಲ್ಲಿ ಅವರು ಗುರು ಓಂಕಾರನಾಥ ಠಾಕೂರ್ ಅವರಲ್ಲಿ ಹಿಂದೂಸ್ತಾನಿ ಸಂಗೀತದಲ್ಲಿ ತರಬೇತಿಯನ್ನು ಪಡೆದರು. ನಂತರ ಅವರ ಪತ್ನಿ ಪ್ರೇಮಾ ಕಾರಂತರೊಂದಿಗೆ ಕಾರಂತರು ಬೆಂಗಳೂರಿನಲ್ಲಿ "ಬೆನಕ" ಎಂಬ ನಾಟಕ ತಂಡವನ್ನು ಸ್ಥಾಪಿಸಿದರು. ಪ್ರೇಮಾ ಅವರು ದೆಹಲಿಯಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರು. ಬಿ.ವಿ. ಕಾರಂತರು ೧೯೬೨ ರಲ್ಲಿ ನವದೆಹಲಿಯಲ್ಲಿರುವ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್‌ಎಸ್‌ಡಿ) ದಲ್ಲಿ ಪದವಿಯನ್ನು ಪಡೆದರು. ೧೯೬೯ ಮತ್ತು ೧೯೭೨ ರ ನಡುವೆ ಅವರು ನವದೆಹಲಿಯ ಸರ್ದಾರ್ ಪಟೇಲ್ ವಿದ್ಯಾಲಯದಲ್ಲಿ ನಾಟಕ ಬೋಧಕರಾಗಿ ಕೆಲಸ ಮಾಡಿದರು. ನಂತರ ದಂಪತಿಗಳು ಬೆಂಗಳೂರಿಗೆ ಮರಳಿದರು. ೧೯೭ ರಲ್ಲಿ ಎನ್‌ಎಸ್‌ಡಿಯ ನಿರ್ದೇಶಕರಾಗಿದ್ದರು. ಅವರು ತಮಿಳುನಾಡಿನ ಮಧುರೈನಂತಹ ದೂರದ ಸ್ಥಳಗಳಲ್ಲಿ ಹಲವಾರು ಕಾರ್ಯಾಗಾರಗಳನ್ನು ನಡೆಸಿದರು. ಅವರು ಎನ್‌ಎಸ್‌ಡಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ನಂತರ, ೧೯೮೧ ಮತ್ತು ೧೯೮೬ ರ ನಡುವೆ ಮಧ್ಯಪ್ರದೇಶದ ಭಾರತ್ ಭವನದ ಅಧೀನದಲ್ಲಿ ರಂಗಮಂಡಲದ ರೆಪರ್ಟರಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು. ನಂತರ, ಕಾರಂತರು ಕರ್ನಾಟಕಕ್ಕೆ ಮರಳಿದರು.

೧೯೮೯ ರಲ್ಲಿ ಕರ್ನಾಟಕದ ಮೈಸೂರಿನಲ್ಲಿ ರಂಗಾಯಣ ಎಂಬ ರೆಪರ್ಟರಿಯನ್ನು ಸ್ಥಾಪಿಸಿದರು. ೧೯೯೫ ರವರೆಗೆ ಕಾರಂತರು ಅದರ ಮುಖ್ಯಸ್ಥರಾಗಿದ್ದರು. ಅವರು ೧೯೯೦ ರ ದಶಕದ ಅಂತ್ಯದಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಸೆಪ್ಟೆಂಬರ್ ೧ ೨೦೦೨ ರಲ್ಲಿ ರಾತ್ರಿ 8 ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅನುವಾದಗಳು

ಬಿ.ವಿ. ಕಾರಂತರು ಸ್ವಪ್ನ ವಾಸವದತ್ತ, ಉತ್ತರರಾಮ ಚರಿತಾ ಮತ್ತು ಮೃಚ್ಛಕಟಿಕ ಎಂಬ ಕೃತಿಗಳನ್ನು ಸಂಸ್ಕೃತದಿಂದ ಹಿಂದಿಗೆ ಅನುವಾದಿಸಿದರು. ಅವರು ಕನ್ನಡದಿಂದ ಹಿಂದಿಗೆ ಮತ್ತು ಹಿಂದಿಯಿಂದ ಕನ್ನಡಕ್ಕೆ ಹಲವಾರು ನಾಟಕಗಳನ್ನು ಅನುವಾದಿಸಿದ್ದಾರೆ. ಗಿರೀಶ್ ಕಾರ್ನಾಡರ ತುಘಲಕ್ ಎಂಬ ನಾಟಕವನ್ನು ಹಿಂದಿ ಮತ್ತು ಉರ್ದು ಭಾಷೆಗೆ ಅನುವಾದಿಸಿದರು.

ಸಂಸ್ಥೆಗಳು

  • ೧೯೭೭-೧೯೮೧: ನ್ಯಾಷನಲ್ ಸ್ಕೂಲ್ ಅಫ್ ಡ್ರಾಮಾದ ನಿರ್ದೇಶಕರಾಗಿದ್ದರು.
  • ೧೯೮೧- ೧೯೮೮: ಭೋಪಾಲ್‌ನ ಭಾರತ್ ಭವನದಲ್ಲಿ ರಂಗಮಂಡಲದ ಸಂಸ್ಥಾಪಕ ನಿರ್ದೇಶಕರಾಗಿದ್ದರು.
  • ೧೯೮೯- ೧೯೯೫: ಮೈಸೂರಿನ ರಂಗಾಯಣದ ‍ಸಂಸ್ಥಾಪಕ ನಿರ್ದೇಶಕರಾಗಿದ್ದರು.

ನಾಟಕಗಳು

ಬಿ.ವಿ. ಕಾರಂತರು ಕನ್ನಡ, ಹಿಂದಿ, ಇಂಗ್ಲಿಷ್, ತೆಲುಗು, ಮಲಯಾಳಂ, ತಮಿಳು, ಪಂಜಾಬಿ, ಉರ್ದು, ಸಂಸ್ಕೃತ ಮತ್ತು ಗುಜರಾತಿ ಭಾಷೆಗಳಲ್ಲಿ ನಾಟಕಗಳನ್ನು ನಿರ್ದೇಶಿಸಿದರು. ಹಯವದನ (ಗಿರೀಶ್ ಕಾರ್ನಾಡರ), ಕತ್ತಲೆ ಬೆಳಕು, ಹುಚ್ಚು ಕುದುರೆ, ಏವಂ ಇಂದ್ರಜಿತ್, ಈಡಿಪಸ್, ಸಂಕ್ರಾಂತಿ, ಜೋಕುಮಾರ ಸ್ವಾಮಿ, ಸತ್ತವರ ನೇರಳು, ಹುಟ್ಟುವ ಬಡಿದರೆ ಮತ್ತು ಗೋಕುಲ ನಿರ್ಗಮನ ಇವು ಕನ್ನಡದ ನಾಟಕಗಳು. ಮ್ಯಾಕ್‌ಬೆತ್, ಕಿಂಗ್ ಲಿಯರ್, ಚಂದ್ರಹಾಸ, ಹಯವದನ, ಘಾಸಿರಾಮ್ ಕೊತ್ವಾಲ್, ಮೃಚ್ಛಾ ಕಟಿಕ, ಮುದ್ರಾ ರಾಕ್ಷಸ ಮತ್ತು ಮಾಳವಿಕಾಗ್ನಿ ಮಿತ್ರ ಎಂಬ ಹಿಂದಿ ಭಾಷೆಯಲ್ಲಿ ನಾಟಕಗಳನ್ನು ರಚಿಸಿದರು. ಪಂಜರ ಶಾಲೆ, ನೀಲಿ ಕುದುರೆ, ಹೆಡ್ಡಯಾನ, ಅಳಿಲು ರಾಮಾಯಣ ಎಂಬ ಮಕ್ಕಳ ನಾಟಕಗಳನ್ನು ರಚಿಸಿದರು.

ಪ್ರಶಸ್ತಿಗಳು ಮತ್ತು ಗೌರವಗಳು

ನಾಗರಿಕ ಗೌರವಗಳು

  • ಪದ್ಮಶ್ರೀ - ಭಾರತ ಸರ್ಕಾರ (೧೯೮೧)
  • ಕಾಳಿದಾಸ್ ಸಮ್ಮಾನ್ - ಮಧ್ಯಪ್ರದೇಶ ಸರ್ಕಾರ (೧೯೭೬)
  • ಕಾಳಿದಾಸ್ ಸಮ್ಮಾನ್ - ಮಧ್ಯಪ್ರದೇಶ ಸರ್ಕಾರ (೧೯೭೬)

ರಾಷ್ಟ್ರೀಯ ಗೌರವಗಳು

  • ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (೧೯೭೬)

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು

  • ೧೯೭೧- ಅತ್ಯುತ್ತಮ ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ವಂಶವೃಕ್ಷ
  • ೧೯೭೧- ಕನ್ನಡದ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ವಂಶವೃಕ್ಷ
  • ೧೯೭೫- ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ಚೋಮನ ದುಡಿ
  • ೧೯೭೬- ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ರಿಷ್ಯ ಶೃಂಗ
  • ೧೯೭೭- ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಘಟಶ್ರಾದ್ಧ
  • ೧೯೭೭- ಕನ್ನಡದ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ತಬ್ಬಲಿಯು ನೀನಾದೆ ಮಗನೇ

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು

  • ೧೯೭೧- ೧೯೭೨ - ಮೊದಲ ಅತ್ಯುತ್ತಮ ಚಿತ್ರ - ವಂಶವೃಕ್ಷ
  • ೧೯೭೧- ೧೯೭೨ - ಅತ್ಯುತ್ತಮ ಸಂಭಾಷಣೆ ಬರಹಗಾರ - ವಂಶವೃಕ್ಷ
  • ೧೯೭೫- ೧೯೭೬ - ಮೊದಲ ಅತ್ಯುತ್ತಮ ಚಿತ್ರ - ಚೋಮನ ದುಡಿ
  • ೧೯೭೫- ೧೯೭೬ - ಅತ್ಯುತ್ತಮ ಸಂಗೀತ ನಿರ್ದೇಶಕ - ಹಂಸಗೀತೆ

ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್

  • ೧೯೭೨- ಕನ್ನಡದ ಅತ್ಯುತ್ತಮ ನಿರ್ದೇಶಕ - ವಂಶವೃಕ್ಷ
  • ೧೯೭೫- ಕನ್ನಡದ ಅತ್ಯುತ್ತಮ ನಿರ್ದೇಶಕ - ಚೋಮನ ದುಡಿ

ಬಿ.ವಿ.ಕಾರಂತರ ಕುರಿತಾದ ಸಾಕ್ಷ್ಯಚಿತ್ರ

೨೦೧೨ ರಲ್ಲಿ ಫಿಲ್ಮ್ಸ್ ಡಿವಿಷನ್ ಬಿವಿ ಕಾರಂತ ಅವರ ಮೇಲೆ ೯೩ ನಿಮಿಷಗಳ ಬಿವಿ ಕಾರಂತ್:ಬಾಬಾ ಎಂಬ ಚಲನಚಿತ್ರವನ್ನು ನಿರ್ಮಿಸಿತು. ಕನ್ನಡದ ಲೇಖಕಿ ವೈದೇಹಿ ಅವರು ಸಂಕಲಿಸಿದ ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ ಎಂಬ ಬಿ.ವಿ.ಕಾರಂತರ ಆತ್ಮಕಥನವನ್ನು ಈ ಚಿತ್ರ ಆಧರಿಸಿದೆ.

ಉಲ್ಲೇಖಗಳು

Tags:

ಬಿ. ವಿ. ಕಾರಂತ್ ಜೀವನಚರಿತ್ರೆಬಿ. ವಿ. ಕಾರಂತ್ ಅನುವಾದಗಳುಬಿ. ವಿ. ಕಾರಂತ್ ಸಂಸ್ಥೆಗಳುಬಿ. ವಿ. ಕಾರಂತ್ ನಾಟಕಗಳುಬಿ. ವಿ. ಕಾರಂತ್ ಪ್ರಶಸ್ತಿಗಳು ಮತ್ತು ಗೌರವಗಳುಬಿ. ವಿ. ಕಾರಂತ್ ಬಿ.ವಿ.ಕಾರಂತರ ಕುರಿತಾದ ಸಾಕ್ಷ್ಯಚಿತ್ರಬಿ. ವಿ. ಕಾರಂತ್ ಉಲ್ಲೇಖಗಳುಬಿ. ವಿ. ಕಾರಂತ್

🔥 Trending searches on Wiki ಕನ್ನಡ:

ವರ್ಗೀಯ ವ್ಯಂಜನಕುಟುಂಬಬಾಂಗ್ಲಾದೇಶಕಾಂತಾರ (ಚಲನಚಿತ್ರ)ವ್ಯಾಸರಾಯರುಮುಕ್ತಾಯಕ್ಕಕೆ. ಅಣ್ಣಾಮಲೈಹನುಮಂತಮಂಡ್ಯಮೇಲುಮುಸುಕುಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಅತ್ತಿಮಬ್ಬೆದೇವರ ದಾಸಿಮಯ್ಯಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಕೇಶಿರಾಜಗೋಲ ಗುಮ್ಮಟಶ್ರೀಕೃಷ್ಣದೇವರಾಯಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಚಾಮುಂಡರಾಯಸ್ತ್ರೀಧರ್ಮಕನ್ನಡ ವ್ಯಾಕರಣಭಾರತದ ನದಿಗಳುಅಮರೇಶ ನುಗಡೋಣಿನಿರುದ್ಯೋಗಝೊಮ್ಯಾಟೊಜಯಚಾಮರಾಜ ಒಡೆಯರ್ಮುದ್ದಣಮಹೇಂದ್ರ ಸಿಂಗ್ ಧೋನಿಕಾಲಾಯ ತಸ್ಮೈ ನಮಃ (ಚಲನಚಿತ್ರ)ಸವದತ್ತಿಎ.ಎನ್.ಮೂರ್ತಿರಾವ್ಕವಿಗಳ ಕಾವ್ಯನಾಮಕೆ. ಎಸ್. ನಿಸಾರ್ ಅಹಮದ್ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಗೋತ್ರ ಮತ್ತು ಪ್ರವರವಿರಾಟ್ ಕೊಹ್ಲಿಹೊಂಗೆ ಮರರಾಷ್ಟ್ರೀಯ ಉತ್ಪನ್ನವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಬಡತನವಸಾಹತುಭಾರತದ ಚುನಾವಣಾ ಆಯೋಗಆಮ್ಲಗಳು ಮತ್ತು ಪ್ರತ್ಯಾಮ್ಲಗಳುಒಂದು ಮುತ್ತಿನ ಕಥೆಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಕುಕ್ಕೆ ಸುಬ್ರಹ್ಮಣ್ಯ ದೇವಾಲಯತೆನಾಲಿ ರಾಮಕೃಷ್ಣಗ್ರಂಥಾಲಯಗಳುಭಾರತದ ರಾಷ್ಟ್ರಪತಿರಾಘವಾಂಕಪ್ರಾಥಮಿಕ ಶಾಲೆಇತಿಹಾಸಪೆನೆಲೋಪ್ ಫಿಟ್ಜ್‌ಗೆರಾಲ್ಡ್ವಿಜಯನಗರ ಸಾಮ್ರಾಜ್ಯನ್ಯೂಟನ್‍ನ ಚಲನೆಯ ನಿಯಮಗಳುಕಲ್ಯಾಣ ಕರ್ನಾಟಕವಿನೋಬಾ ಭಾವೆಕಲ್ಯಾಣಿಹೃದಯಸಮಾಜ ವಿಜ್ಞಾನತುಳಸಿತಾಳೆಮರಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಅಥಣಿ ಮುರುಘೕಂದ್ರ ಶಿವಯೋಗಿಗಳುಯೂಟ್ಯೂಬ್‌ಭಾರತೀಯ ಧರ್ಮಗಳುಜಾಗತಿಕ ತಾಪಮಾನ ಏರಿಕೆಬಹಮನಿ ಸುಲ್ತಾನರುಭಾರತೀಯ ಸಂವಿಧಾನದ ತಿದ್ದುಪಡಿಫೇಸ್‌ಬುಕ್‌ವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುವೆಂಕಟೇಶ್ವರ ದೇವಸ್ಥಾನಭಾರತೀಯ ರೈಲ್ವೆಜಿ.ಎಸ್.ಶಿವರುದ್ರಪ್ಪಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಸಿದ್ದಲಿಂಗಯ್ಯ (ಕವಿ)🡆 More