ಮುಕ್ತಾಯಕ್ಕ

ಮುಕ್ತಾಯಕ್ಕ ಅನುಭಾವಿ ಶಿವಶರಣೆ , ಜನ್ಮಸ್ಥಳ- ಲಕ್ಕುಂಡಿ.

ಅಂಕಿತ ನಾಮ - ಅಜಗಣ್ಣ.

ಮುಕ್ತಾಯಕ್ಕನ ಹಿನ್ನೆಲೆ

ಮುಕ್ತಾಯಕ್ಕ ಲಕ್ಕುಂಡಿ ಗ್ರಾಮದವಳು. ಲಕ್ಕುಂಡಿ ಗ್ರಾಮ ಗದಗ ಜಿಲ್ಲೆಯಲ್ಲಿದೆ. ಮುಕ್ತಾಯಕ್ಕ ಅಜಗಣ್ಣನ ಸೋದರಿ. ಇವರಿಬ್ಬರದು ಅನನ್ಯ ಭ್ರಾತೃಪ್ರೇಮ. ಈಕೆಯ ಆಧ್ಯಾತ್ಮದ ಗುರು, ತಂದೆ ಎಲ್ಲವೂ ಅಣ್ಣನೇ ಆಗಿದ್ದನು. ಮುಕ್ತಾಯಕ್ಕನಿಗೆ ೧೦ವರ್ಷದಲ್ಲಿ 'ಮಸಳಿಕಲ್ಲು' ಎಂಬ ಗ್ರಾಮಕ್ಕೆ ಮದುವೆ ಮಾಡಿ ಕೊಡುವರು. ೧೨ನೇ ಶತಮಾನದ ಶಿವಶರಣೆಯರ ಸಮೂಹದ ಆಧ್ಯಾತ್ಮಿಕ ಸಿದ್ದಾಂತದ ವಿಷಯದಲ್ಲಿ, ವಿಶಾಲ ಮನೋಭಾವ, ದಿಟ್ಟ ವ್ಯಕ್ತಿತ್ವ, ಸ್ವತಂತ್ರ ಪ್ರವೃತ್ತಿಯ ಹೆಣ್ಣೆಂದು ಮುಕ್ತಾಯಕ್ಕನನ್ನು ಗುರುತಿಸುತ್ತೇವೆ. ಈಕೆ ಪ್ರಖರ ವೈಚಾರಿಕತೆಯ, ತಾತ್ವಿಕ ಪರಿಜ್ಞಾನದ, ಸೈದ್ಧಾಂತಿಕ ವಿಶ್ಲೇಷಣೆಯ ಉನ್ನತ ತತ್ವಜ್ಞಾನಿ. ಕಾಯದ ಸೀಮೆಯ, ಭಾವದ ಭ್ರಾಂತಿಯ, ಜೀವ ಮಾಯೆಯನ್ನು ಕಳೆದುಕೊಂಡರೂ ದ್ವೇತಾದ್ವೇತದ ಸಾಕಾರ, ನಿರಾಕಾರದ ನಾನು-ನೀನುಎಂಬ ವಿಭಿನ್ನ ತಿಳುವಳಿಕೆಯ ತಿಮಿರದಂಚಿನಲಿ ಸಿಲುಕಿ ತೊಳಲಾಡುವ ಸಾಧಕಿಯಾಗಿ ಮುಕ್ತಾಯಕ್ಕ ನಮಗೆ ಕಾಣಿಸುತ್ತಾಳೆ. ಅವಳು ತನ್ನ ವಚನಗಳಲ್ಲಿ ಅಲ್ಲಮಪ್ರಭು, ಚನ್ನಬಸವಣ್ಣ, ಮರುಳ ಶಂಕರದೇವ ಮುಂತಾದ ಶರಣರ ಕಾರುಣ್ಯದಿಂದ ತಾನು ಪರಿಣಾಮಿಯಾದುದನ್ನು ವಿನಮ್ರತೆಯಿಂದ ಸ್ಮರಿಸಿದ್ದಾಳೆ.

ಮುಕ್ತಾಯಕ್ಕನ ಪ್ರಮುಖ ವಚನಗಳು

ಮುಕ್ತಾಯಕ್ಕನನ್ನು ವಚನಸಾಹಿತ್ಯದ ಧೃವತಾರೆ ಎಂದು ಕರೆಯಲಾಗುತ್ತದೆ. ಅಕ್ಕಮಹಾದೇವಿ ಭಕ್ತಿಮಾರ್ಗ, ತಾರ್ಕಿಕ ಜ್ಞಾನಮಾರ್ಗ ಹೊಂದಿದರೆ, ಮುಕ್ತಾಯಕ್ಕ ವೈಚಾರಿಕತೆಯ ದಿಟ್ಟನಿಲುವಿನ ಜ್ಞಾನಮಾರ್ಗ ಹೊಂದಿದವಳು. ಈಕೆಯ ಸುಮಾರು ೩೭ವಚನಗಳು ಈವರೆಗೆ ನಮಗೆ ಲಭ್ಯವಾಗಿವೆ. ಈಕೆಯ ವಚನಗಳ ಅಂಕಿತ ಅಜಗಣ್ಣ, ಅಜಗಣ್ಣ ತಂದೆ ಎಂಬುದು.

೧.ಅಲರೊಳಡಗಿದ
ಪತಂಗದೊಳಡಗಿದ ಅನಲನಂತೆ
ಶಶಿಯೊಳಡಗಿದ ಷೋಡಶ ಕಳೆಯಂತೆ
ಉಲುಹಳಡಗಿದ ವಾಯುವಿನಂತೆ
ಸಿಡಿಲೊಳಡಗಿದ ಗಾತ್ರದ ತೇಜದಂತೆ
ಇರಬೇಕಯ್ಯ ಯೋಗ ಎನ್ನ
ಅಜಗಣ್ಣ ತಂದೆಯಂತೆ

೨.ಆರು ಇಲ್ಲದವಳೆಂದು
ಆಳಿಗೊಳಲು ಬೇಡ
ಆಳಿಗೊಂಡೆಡೆ ಆನು
ಅಂಜುವವಳಲ್ಲ ಒಲವಿನ
ಒತ್ತೆ ಕಲ್ಲನು ಬೆವರಿಸಬಲ್ಲೆ
ಕಾಣಿರೊ ಅಪ್ಪಿದವರನಪ್ಪಿದಡೆ
ತರಗೆಲೆಯಂತೆ ರಸವನು
ಅರಸಿದಡುಂಟೇ ಅಜಗಣ್ಣ ತಂದೆ

Tags:

🔥 Trending searches on Wiki ಕನ್ನಡ:

ಶಿವಮೊಗ್ಗಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಮ್ಯಾಕ್ಸ್ ವೆಬರ್ಗೋವಿಂದ ಪೈಭಾರತೀಯ ಧರ್ಮಗಳುಅರವಿಂದ ಘೋಷ್ಭಾರತೀಯ ಅಂಚೆ ಸೇವೆಭಾರತ ಸರ್ಕಾರಸಂಪತ್ತಿಗೆ ಸವಾಲ್ಹರಕೆವಾರ್ತಾ ಭಾರತಿಬಿ. ಎಂ. ಶ್ರೀಕಂಠಯ್ಯಮಹಿಳೆ ಮತ್ತು ಭಾರತಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಬೆಂಗಳೂರು ನಗರ ಜಿಲ್ಲೆಗೌತಮ ಬುದ್ಧಸಮುದ್ರತ. ರಾ. ಸುಬ್ಬರಾಯಗುಣ ಸಂಧಿವ್ಯಕ್ತಿತ್ವಬೆಸಗರಹಳ್ಳಿ ರಾಮಣ್ಣವಿಕಿಪೀಡಿಯಬರವಣಿಗೆಕನ್ನಡ ವ್ಯಾಕರಣರಾಷ್ಟ್ರಕವಿಸೀಮೆ ಹುಣಸೆನುಗ್ಗೆ ಕಾಯಿಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಕೆ. ಅಣ್ಣಾಮಲೈಕರ್ಮಧಾರಯ ಸಮಾಸಸವರ್ಣದೀರ್ಘ ಸಂಧಿಸಂಚಿ ಹೊನ್ನಮ್ಮಚಂಪೂಬ್ಯಾಡ್ಮಿಂಟನ್‌ಜಗತ್ತಿನ ಅತಿ ಎತ್ತರದ ಪರ್ವತಗಳುಯಶ್(ನಟ)ಡಿ.ವಿ.ಗುಂಡಪ್ಪಅಂತಾರಾಷ್ಟ್ರೀಯ ಸಂಬಂಧಗಳುಪ್ಲೇಟೊಹಲ್ಮಿಡಿಮಾರುಕಟ್ಟೆಟಿ.ಪಿ.ಕೈಲಾಸಂಗಾದೆ ಮಾತುಸರ್ಪ ಸುತ್ತುದೇವರ ದಾಸಿಮಯ್ಯಸಾರಾ ಅಬೂಬಕ್ಕರ್ಬೆಕ್ಕುಕೈಗಾರಿಕಾ ಕ್ರಾಂತಿತ್ರಿಶೂಲಸೌರಮಂಡಲಇಂದಿರಾ ಗಾಂಧಿನಂಜನಗೂಡುಕರ್ಬೂಜಭಾರತೀಯ ಭೂಸೇನೆಧೃತರಾಷ್ಟ್ರಹಲ್ಮಿಡಿ ಶಾಸನಟೈಗರ್ ಪ್ರಭಾಕರ್ಭಾರತದ ಸಂವಿಧಾನದ ೩೭೦ನೇ ವಿಧಿಕವಿರಾಜಮಾರ್ಗಹನುಮಾನ್ ಚಾಲೀಸಚಂದ್ರಯಾನ-೩ಸರ್ವಜ್ಞಪ್ರಾಥಮಿಕ ಶಿಕ್ಷಣಕೃಷ್ಣದೇವರಾಯಹರಿಹರ (ಕವಿ)ಹೈದರಾಲಿಹಂಪೆಶಾತವಾಹನರುಪರಿಸರ ಕಾನೂನುಕಪ್ಪೆಚಿಪ್ಪುಪಂಜುರ್ಲಿಭಾರತದ ಪಂಚಾಯತ್ ರಾಜ್ ವ್ಯವಸ್ಥೆರವೀಂದ್ರನಾಥ ಠಾಗೋರ್ರಾಷ್ಟ್ರೀಯ ಉತ್ಪನ್ನಕರ್ನಾಟಕದ ಶಾಸನಗಳುಕನ್ನಡ ಛಂದಸ್ಸುಸಾಂಗತ್ಯಕನ್ನಡಕರ್ನಾಟಕ ಜನಪದ ನೃತ್ಯ🡆 More