ಬಾಬಿ ಫಿಷರ್

ಬಾಬಿಫಿಷರ್ (1943-).

ಪ್ರಮುಖ ಚದುರಂಗ ಆಟಗಾರ.

ಬಾಬಿ ಫಿಷರ್

ಬದುಕು

ಹುಟ್ಟಿದ್ದು ಅಮೆರಿಕದ ಷಿಕಾಗೋ ನಗರದಲ್ಲಿ. ತಂದೆ ತಾಯಿ ಅನುಕ್ರಮವಾಗಿ ಬರ್ಲಿನ್ ಹಾಗೂ ಸ್ವಿಟ್ಜರ್‍ಲ್ಯಾಂಡ್ ದೇಶದವರಾಗಿದ್ದು ಅಮೆರಿಕದಲ್ಲಿ ನೆಲಸಿದ್ದರು. ಅವರು ವಿಚ್ಛೇದನ ಪಡೆದಾಗ ಫಿಷರ್ ತಾಯಿಯೊಂದಿಗೆ ಉಳಿದ. ಬಾಲ್ಯದಿಂದಲೇ ಚದುರಂಗದತ್ತ ವಿಶೇಷ ಆಸಕ್ತಿ. ಚದುರಂಗದಲ್ಲಿಯೇ ಸದಾ ಧ್ಯಾನ, ಶಾಲಾಪಾಠಗಳಲ್ಲಿ ಆಸಕ್ತಿ ಕಡಿಮೆಯಾಗುತ್ತ ಬಂತು. ರಷ್ಯದಿಂದ ಬರುತ್ತಿದ್ದ ಚದುರಂಗ ಕುರಿತ ಪುಸ್ತಕಗಳನ್ನು ಓದಲೆಂದೇ ರಷ್ಯನ್ ಭಾಷೆ ಕಲಿತ. ಶಾಲೆಯನ್ನು ಸಂಪೂರ್ಣವಾಗಿ ತೊರೆದ. ಕ್ರಮೇಣ ಚದುರಂಗವೇ ಈತನ ಪ್ರಪಂಚವಾಯಿತು.

ಚದುರಂಗದ ಆಟ

ಹದಿಮೂರನೆಯ ವಯಸ್ಸಿನಲ್ಲಿ ಅಮೆರಿಕದ ಡೊನಾಲ್ಡ್ ಬರ್ನರೊಂದಿಗೆ ಈತ ಆಡಿದ ಆಟ ಈ ಶತಮಾನದ ಶ್ರೇಷ್ಠ ಆಟ ಎನಿಸಿಕೊಂಡಿದೆ. ಹದಿನೈದನೆಯ ವಯಸ್ಸಿನಲ್ಲಿಯೆ ಚದುರಂಗದ ಶ್ರೇಷ್ಠ ಆಟಗಾರರಿಗೆ ನೀಡಲಾಗುವ ಗ್ರಾಂಡ್‍ಮಾಸ್ಟರ್ ಎಂಬ ಹೆಸರು ಪಡೆದ. 1962ರಲ್ಲಿ ಪ್ರಪಂಚ ಚಾಂಪಿಯನ್‍ಷಿಪ್ ಸ್ಪರ್ಧೆಯಲ್ಲಿ ಭಾಗವಹಿಸಿ ಸೋತರೂ ಧೈರ್ಯಗುಂದದೆ ಮತ್ತೆ ಎರಡು ವರ್ಷಗಳ ಕಾಲ ಕ್ಯಾಲಿಫೋರ್ನಿಯದಲ್ಲಿ ಕಠಿಣ ಅಭ್ಯಾಸ ನಡೆಸಿದ. 1972ರಲ್ಲಿ ಪ್ರಪಂಚ ಚದುರಂಗ ಚಾಂಪಿಯನ್‍ಷಿಪ್ ಸ್ಪರ್ಧೆಯಲ್ಲಿ ಬೋರಿಸ್ ಸ್ಪಾಸ್ಕಿಯನ್ನು ಸೋಲಿಸಿ ಪ್ರಪಂಚ ಚಾಂಪಿಯನ್ ಆದ. ಆ ವರೆಗೆ ಶ್ರೇಷ್ಠ ಚದುರಂಗ ಆಟಕ್ಕೆ ಹೆಸರಾದ ರಷ್ಯದ ಕೀರ್ತಿ ಅಮೆರಿಕದ ಪಾಲಾಯಿತು. ಚದುರಂಗದ ಶ್ರೇಷ್ಠ ಆಟಗಾರನಾಗಬೇಕೆಂಬ ಫಿಷರ್‍ನ ಜೀವನೋದ್ದೇಶ ಪೂರ್ಣಗೊಂಡಿತು.

ಬಾಬಿ ಫಿಷರ್ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಚದುರಂಗ (ಆಟ)

🔥 Trending searches on Wiki ಕನ್ನಡ:

ಭಾರತದ ಚುನಾವಣಾ ಆಯೋಗಉತ್ತರ ಪ್ರದೇಶಕೊರೋನಾವೈರಸ್ಭಾರತ ಸಂವಿಧಾನದ ಪೀಠಿಕೆಒನಕೆ ಓಬವ್ವಕರ್ಮಮಿಲಿಟರಿ ಪ್ರಶಸ್ತಿಗಳು ಮತ್ತು ಬಿರುದುಗಳುಜಾಹೀರಾತುನವರತ್ನಗಳುಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಕೊಡವರುಬ್ಯಾಡ್ಮಿಂಟನ್‌ಕೃಷ್ಣದೇವರಾಯಭಾರತದ ಸರ್ವೋಚ್ಛ ನ್ಯಾಯಾಲಯಧಾರವಾಡತೆಲಂಗಾಣಜಶ್ತ್ವ ಸಂಧಿಸಂಭೋಗವರದಕ್ಷಿಣೆದುಶ್ಯಲಾಎ.ಎನ್.ಮೂರ್ತಿರಾವ್ಆನೆಪೂರ್ಣಚಂದ್ರ ತೇಜಸ್ವಿವ್ಯಾಪಾರ ಸಂಸ್ಥೆಮಾನವನಲ್ಲಿ ನಿರ್ನಾಳ ಗ್ರಂಥಿಗಳುಹೆಚ್.ಡಿ.ಕುಮಾರಸ್ವಾಮಿಸಾಲುಮರದ ತಿಮ್ಮಕ್ಕತಾಳೀಕೋಟೆಯ ಯುದ್ಧಜಯಪ್ರಕಾಶ್ ಹೆಗ್ಡೆವಚನ ಸಾಹಿತ್ಯಆಮ್ಲಗಳು ಮತ್ತು ಪ್ರತ್ಯಾಮ್ಲಗಳುನಾಗರೀಕತೆಮಹಿಳೆ ಮತ್ತು ಭಾರತಪಂಚತಂತ್ರಪ್ರಾಥಮಿಕ ಶಾಲೆಮೂಕಜ್ಜಿಯ ಕನಸುಗಳು (ಕಾದಂಬರಿ)ವಂದೇ ಮಾತರಮ್ವಾಸ್ತುಶಾಸ್ತ್ರಅಶೋಕನ ಶಾಸನಗಳುಹಲ್ಮಿಡಿ ಶಾಸನಅರಿಸ್ಟಾಟಲ್‌ಚಿತ್ರದುರ್ಗ ಜಿಲ್ಲೆಗೋವಿಂದ ಪೈಚಾಣಕ್ಯಸವರ್ಣದೀರ್ಘ ಸಂಧಿಛತ್ರಪತಿ ಶಿವಾಜಿಶ್ರೀವಿಜಯಜಪಾನ್ರಾಜಧಾನಿಗಳ ಪಟ್ಟಿಹೆಚ್.ಡಿ.ದೇವೇಗೌಡಜರಾಸಂಧಮಹಾತ್ಮ ಗಾಂಧಿನೀನಾದೆ ನಾ (ಕನ್ನಡ ಧಾರಾವಾಹಿ)ಕನ್ನಡದಲ್ಲಿ ಸಣ್ಣ ಕಥೆಗಳುವಿದ್ಯಾರಣ್ಯವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಕೈವಾರ ತಾತಯ್ಯ ಯೋಗಿನಾರೇಯಣರುಭಾರತದ ಸಂವಿಧಾನ ರಚನಾ ಸಭೆಮಲಬದ್ಧತೆಸಂವಹನಕೆ.ಎಲ್.ರಾಹುಲ್ರಾಧೆವಿಜಯ್ ಮಲ್ಯಅನುನಾಸಿಕ ಸಂಧಿರತ್ನತ್ರಯರುಸಜ್ಜೆತಲಕಾಡುಕೃಷ್ಣಾ ನದಿಹಳೆಗನ್ನಡದಿಕ್ಕುಚಂದ್ರಯಾನ-೩ಅಂತರಜಾಲರಗಳೆರಸ(ಕಾವ್ಯಮೀಮಾಂಸೆ)ಜಿ.ಪಿ.ರಾಜರತ್ನಂಗುರುರಾಜ ಕರಜಗಿ🡆 More