ಬಾಗುರುಂಬಾ

ಬಾಗುರುಂಬಾ (ಬೋಡೋ:बागुरुम्बा) ಇದು ಅಸ್ಸಾಂ ಮತ್ತು ಈಶಾನ್ಯ ಭಾರತದಲ್ಲಿ ವಾಸಿಸುವ ಸ್ಥಳೀಯ ಬೊರೊ ಜನರ ಸಾಂಪ್ರದಾಯಿಕ ನೃತ್ಯವಾಗಿದೆ.

ಚಿಟ್ಟೆಗಳು ಮತ್ತು ಪಕ್ಷಿಗಳ ಚಲನವಲನಗಳ ವ್ಯಕ್ತೀಕರಣವಾಗಿ ಇದನ್ನು '''ಚಿಟ್ಟೆ ನೃತ್ಯ''' ಎಂದೂ ಕರೆಯುತ್ತಾರೆ. ಈ ಸಂದರ್ಭದಲ್ಲಿ, ಬೋಡೋ ಮಹಿಳೆಯರು ಮಾತ್ರ ತಮ್ಮ ವರ್ಣರಂಜಿತ ಸಾಂಪ್ರದಾಯಿಕ ಉಡುಗೆ ದೋಖ್ನಾ, jwmgra ( ಫಸ್ರಾ ) ಮತ್ತು ಅರೋನೈ ಧರಿಸಿ ನೃತ್ಯ ಮಾಡುತ್ತಾರೆ. ನೃತ್ಯವು ಕೈಯಿಂದ ಮಾಡಿದ ತಾಳವಾದ್ಯಗಳಾದ 'ಖಾಮ್' (ಉದ್ದವಾದ ಸಿಲಿಂಡರಾಕಾರದ ಡ್ರಮ್, ಮರ ಮತ್ತು ಮೇಕೆ ಚರ್ಮ ಅಥವಾ ಇತರ ಪ್ರಾಣಿಗಳ ಚರ್ಮದಿಂದ ತಯಾರಿಸಿದ), ಸಿಫಂಗ್ (ಕೊಳಲು, ಬಿದಿರಿನಿಂದ ಕೆತ್ತಲಾದ), ಜೋಟಾ (ಕಬ್ಬಿಣದಿಂದ ತಯಾರಿಸಿದ) ಸೆರ್ಜಾ (ಬಾಗಿದ ವಾದ್ಯ, ಮರ ಮತ್ತು ಪ್ರಾಣಿಗಳ ಚರ್ಮದಿಂದ ತಯಾರಿಸಿದ), ಮತ್ತು ಗಾಂಗ್ವಾನ (ಬಿದಿರಿನಿಂದ ತಯಾರಿಸಿದ), ಥರ್ಖಾ (ಒಡೆದ ಬಿದಿರಿನ ತುಂಡು) ಇಂತಹ ವಸ್ತುಗಳನ್ನು ಬಳಸಿ ನಡೆಯುತ್ತದೆ.

ಬಾಗುರುಂಬಾ
ಬೋಡೋ ಕುಣಿತ
ಬಾಗುರುಂಬಾ

ಬೊರೊ ಸಂಗೀತವು ಸ್ಥಾಪಿತ ಶಾಲೆಗಳು ಮತ್ತು ಸಂಗೀತದ ಪ್ರಕಾರಗಳ ಅತ್ಯಾಧುನಿಕತೆಯನ್ನು ಹೊಂದಿರುವುದಿಲ್ಲ, ಆದರೂ ಖಾಮ್ಸ್ (ಉದ್ದವಾದ ಸಿಲಿಂಡರಾಕಾರದ ಡ್ರಮ್) ಬಾಗುರುಂಬಾ ನೃತ್ಯ ಸಮೂಹಕ್ಕೆ ಬೀಟ್ಸ್ ಮತ್ತು ಲಯವನ್ನು ಒದಗಿಸುತ್ತದೆ, ಆದರೆ ಸಿಫಂಗ್ (ಕೊಳಲು) ಮತ್ತು ಸೆರ್ಜಾ ಅವುಗಳು ಒಟ್ಟಾಗಿ ಮಧುರ್ಯವನ್ನು ಒದಗಿಸುತ್ತವೆ. ಹಬ್ಬಗಳಿಗೆ ಅಥವಾ ಆಚರಣೆಗೆ ಈ ಕುಣಿತದ ಯುವಕರನ್ನು 'ಆಹ್ವಾನಿಸುತ್ತಾರೆ. ಬಾಗುರುಂಬಾ ನೃತ್ಯವು ಚಿಟ್ಟೆಗಳ ಶಾಂತ ಮತ್ತು ಕಾವ್ಯಾತ್ಮಕ ಚಲನೆಯನ್ನು ಹೋಲುತ್ತದೆ. ಇದು ಪ್ರಕೃತಿಯ ಅಂಶಗಳಿಂದ ಪ್ರಭಾವಿತವಾಗಿದೆ/ಪ್ರಚೋದಿತವಾಗಿದೆ ಎಂದು ನಂಬಲಾಗಿದೆ. ಬೋರೋ ಜನರ ಈ ನೃತ್ಯದ ಅಭ್ಯಾಸವು ಸಾವಿರ ವರ್ಷಗಳಷ್ಟು ಹಳೆಯದು. ಸಾಮಾನ್ಯವಾಗಿ, ಬೋರೋ ಜನರು ಹಸಿರು ಸಸ್ಯಗಳು ಮತ್ತು ಪರಿಸರದೊಂದಿಗೆ ಶಾಂತಿ ಮತ್ತು ಸಾಮರಸ್ಯದಿಂದ ಬದುಕುತ್ತಾರೆ ಮತ್ತು ಪ್ರಕೃತಿಯ ಸೌಂದರ್ಯವನ್ನು ಪೂಜಿಸುತ್ತಾರೆ. ನಿತ್ಯಹರಿದ್ವರ್ಣ ಅರಣ್ಯವಾಗಿರುವ ಪೂರ್ವ ಮತ್ತು ದಕ್ಷಿಣ ಹಿಮಾಲಯದ ತಪ್ಪಲಿನಲ್ಲಿ ಬೋರೋ ಜನರು ವಾಸಿಸುತ್ತಾರೆ ಮತ್ತು ಕೃಷಿ ಮಾಡುತ್ತಾರೆ. ಈ ಸಾಂಪ್ರದಾಯಿಕ ನೃತ್ಯವು ಹಲವಾರು ಸಾಂಕೇತಿಕ ಅಂಶಗಳನ್ನು ಒಳಗೊಂಡಿದೆ, ಇದು ನೈಸರ್ಗಿಕವಾಗಿ ಸುತ್ತಮುತ್ತಲಿನ ಪರಿಸರದಿಂದ ಹೊರಹೊಮ್ಮುತ್ತದೆ. ಉದಾಹರಣೆಗೆ, ಸಸ್ಯಗಳ ನೃತ್ಯ, ಪ್ರಾಣಿಗಳು, ಪಕ್ಷಿಗಳ ನೃತ್ಯ, ಚಿಟ್ಟೆ ನೃತ್ಯ, ಹರಿಯುವ ನದಿಯ ಅಲೆ, ಗಾಳಿ ಇತ್ಯಾದಿ.

ಬಾಗುರುಂಬಾ ನೃತ್ಯ ಒಂದು ಶಕ್ತಿಯುತ ಮತ್ತು ಸುಂದರವಾಗಿ ಸಂಯೋಜಿಸಲ್ಪಟ್ಟ ಯುವ ನೃತ್ಯವಾಗಿರುವುದರಿಂದ, ಬೊರೊ ಜನರು ಸಾಮಾನ್ಯವಾಗಿ ಈ ಮೇಳಕ್ಕೆ ಆಕರ್ಷಿತರಾಗುತ್ತಾರೆ. ಈ ನೃತ್ಯವನ್ನು ನೋಡುವ ಸಂದರ್ಭದಲ್ಲಿ ಹೆಚ್ಚಿನ ಬೋರೋ ಜನರು ಅರಿವಿಲ್ಲದೆ ಹಾಡುತ್ತಾರೆ ಮತ್ತು ನೃತ್ಯ ಮಾಡುತ್ತಾರೆ. ಬೋರೋ ಜನರು ಪರಿಸರ ಮತ್ತು ಸುತ್ತಮುತ್ತಲಿನ ಸುಂದರವಾದ ನಿತ್ಯಹರಿದ್ವರ್ಣ ಸಸ್ಯಗಳೊಂದಿಗೆ ಶಾಂತಿಯಿಂದ ಬದುಕಲು ಇಷ್ಟಪಡುತ್ತಾರೆ.

ಈ ನೃತ್ಯವನ್ನು ಪ್ರದರ್ಶಿಸಲು ಯಾವುದೇ ನಿರ್ದಿಷ್ಟ ದಿನಗಳು ಮತ್ತು ಸಮಯಗಳಿಲ್ಲ; ಹಬ್ಬಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಂತಹ ಅನೇಕ ಸಂದರ್ಭಗಳಲ್ಲಿ ಈ ನೃತ್ಯವನ್ನು ಪ್ರದರ್ಶಿಸಲಾಗುತ್ತದೆ. ಪ್ರಸ್ತುತ, ಬಾಗುರುಂಬಾ ನೃತ್ಯವು ಪ್ರಪಂಚದಾದ್ಯಂತ ಗಮನ ಸೆಳೆಯುತ್ತಿದೆ. ನಿಜವಾದ ನೃತ್ಯಕ್ಕಾಗಿ, ಓದುಗರು YouTube ಅನ್ನು ಪರಿಶೀಲಿಸಬೇಕು.

 “Jat nongabwla, Cool nongabwla, tabwrwm homnanwi- bamnanwi lagwomwnka hai lwgw lagwomwnka”

ಬಾಗುರುಂಬಾ ಹಾಡಿನ ಮೂಲ ಮತ್ತು ಹೊರಹೊಮ್ಮುವಿಕೆಯು ತಿಳಿದಿಲ್ಲ, ಬಹುಶಃ ಸಾವಿರಾರು ವರ್ಷಗಳ ಹಿಂದೆ ರಚನೆಯಾಗಿರಬಹುದು. ಈ ಬಗ್ಗೆ ಹಲವಾರು ವ್ಯಾಖ್ಯಾನಗಳಿದ್ದರೂ ಸಾಮಾನ್ಯ ವಿಷಯವೆಂದರೆ ಬಾಗುರುಂಬಾ ಹಾಡು ಮತ್ತು ನೃತ್ಯವು ಪರಸ್ಪರ ಗೌರವ, ಸ್ನೇಹವನ್ನು ಗೌರವಿಸಲು, ಸಂಬಂಧವನ್ನು ಗೌರವಿಸಲು ಮತ್ತು ಪರಿಸರದೊಂದಿಗೆ ಶಾಂತಿಯಿಂದ ಬದುಕಲು ಸೂಚಿಸುತ್ತದೆ. ಬಾಗುರುಂಬಾ ಜೀವನದ ಆಚರಣೆ, ಸಂತೋಷ ಮತ್ತು ಒಗ್ಗಟ್ಟಿನ ಯುವ ಅಭಿವ್ಯಕ್ತಿಯಾಗಿದೆ.

ಸಂಗೀತ ವಾದ್ಯಗಳು

ಅನೇಕ ವಿಭಿನ್ನ ಸಂಗೀತ ವಾದ್ಯಗಳನ್ನು ಬೋಡೋಗಳು ಬಾಗುರುಂಬಾ ನೃತ್ಯಕ್ಕಾಗಿ ಬಳಸುತ್ತಾರೆ:

ಸಿಫಂಗ್ : ಇದು ಉತ್ತರ ಭಾರತದ ಬಾನ್ಸುರಿಯಂತೆ ಆರು ರಂಧ್ರಗಳಿಗಿಂತ ಐದು ರಂಧ್ರಗಳನ್ನು ಹೊಂದಿರುವ ಉದ್ದವಾದ ಬಿದಿರಿನ ಕೊಳಲು ಮತ್ತು ಅದಕ್ಕಿಂತ ಹೆಚ್ಚು ಉದ್ದವಾಗಿದೆ, ಇದು ಕಡಿಮೆ ಸ್ವರವನ್ನು ಉತ್ಪಾದಿಸುತ್ತದೆ.

  • ಸೆರ್ಜಾ : ಪಿಟೀಲು ತರಹದ ವಾದ್ಯ. ಇದು ದುಂಡಗಿನ ಆಕಾರವನ್ನು ಹೊಂದಿದೆ ಮತ್ತು ಸುರುಳಿಯು ಮುಂದಕ್ಕೆ ಬಾಗುತ್ತದೆ.
  • ಖಮ್ : ಮರ ಮತ್ತು ಮೇಕೆ ಚರ್ಮದಿಂದ ಮಾಡಿದ ಉದ್ದನೆಯ ಡ್ರಮ್.
  • ಜೋತ : ಕಬ್ಬಿಣದಿಂದ ಮಾಡಲ್ಪಟ್ಟಿದೆ.
  • ಗೊಂಗ್ವಾನಾ : ಬಿದಿರಿನಿಂದ ಮಾಡಲ್ಪಟ್ಟಿದೆ.

ಸಂಯೋಜನೆ

ಬಾಗುರುಂಬಾ ಎಫ್ ಮೇಜರ್ ಪೆಂಟಾಟೋನಿಕ್ ಸ್ಕೇಲ್ ಅನ್ನು ಬಳಸುತ್ತದೆ, ಇದು ಚೀನೀ ಸಾಂಪ್ರದಾಯಿಕ ಸಂಗೀತವನ್ನು ಹೋಲುತ್ತದೆ, ಇದು ಪ್ರಾಚೀನ ಚೀನೀ ಪ್ರಭಾವದ ಸೂಚನೆಯಾಗಿದೆ.

ಇವುಗಳನ್ನು ನೋಡಿ

  • ಅಸ್ಸಾಂನ ಜಾನಪದ ನೃತ್ಯಗಳು
  • ಬೋಡೋ ಜನರು
  • ಬಾಥೋವ್ ಪೂಜೆ

ಉಲ್ಲೇಖಗಳು

ಪುಸ್ತಕಗಳು

 

ಬಾಹ್ಯ ಕೊಂಡಿಗಳು

Tags:

ಬಾಗುರುಂಬಾ ಸಂಗೀತ ವಾದ್ಯಗಳುಬಾಗುರುಂಬಾ ಸಂಯೋಜನೆಬಾಗುರುಂಬಾ ಇವುಗಳನ್ನು ನೋಡಿಬಾಗುರುಂಬಾ ಉಲ್ಲೇಖಗಳುಬಾಗುರುಂಬಾ ಪುಸ್ತಕಗಳುಬಾಗುರುಂಬಾ ಬಾಹ್ಯ ಕೊಂಡಿಗಳುಬಾಗುರುಂಬಾಅಸ್ಸಾಂ

🔥 Trending searches on Wiki ಕನ್ನಡ:

ಅಳಲೆ ಕಾಯಿಒಡೆಯರ್ಪ್ರದೀಪ್ ಈಶ್ವರ್ಪ್ರವಾಸೋದ್ಯಮಗುಪ್ತ ಸಾಮ್ರಾಜ್ಯನದಿಗೋತ್ರ ಮತ್ತು ಪ್ರವರದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಮೊದಲನೆಯ ಕೆಂಪೇಗೌಡಜಿ.ಎಸ್.ಶಿವರುದ್ರಪ್ಪದೀಪಾವಳಿಕಾವೇರಿ ನದಿ ನೀರಿನ ವಿವಾದಜಯಪ್ರಕಾಶ್ ಹೆಗ್ಡೆಮಲಬದ್ಧತೆವಚನ ಸಾಹಿತ್ಯತಂತಿವಾದ್ಯಭಗತ್ ಸಿಂಗ್ದಾಳಿಂಬೆಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಮಾರುಕಟ್ಟೆಪ್ರಜಾವಾಣಿನೀರುಸು.ರಂ.ಎಕ್ಕುಂಡಿಸಾಲುಮರದ ತಿಮ್ಮಕ್ಕದ.ರಾ.ಬೇಂದ್ರೆಋತುಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ಅಕ್ಕಮಹಾದೇವಿಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಧರ್ಮಭಾರತದ ರಾಷ್ಟ್ರಪತಿಗಳ ಚುನಾವಣೆ ೨೦೧೭ಗಣರಾಜ್ಯೋತ್ಸವ (ಭಾರತ)ಇಮ್ಮಡಿ ಪುಲಿಕೇಶಿಪ್ರಜ್ವಲ್ ರೇವಣ್ಣಬ್ಯಾಂಕ್ಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗನುಡಿ (ತಂತ್ರಾಂಶ)ಜಶ್ತ್ವ ಸಂಧಿಸೀತಾ ರಾಮಷಟ್ಪದಿರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಸಮಾಸಬೆಂಗಳೂರಿನ ಇತಿಹಾಸಸಜ್ಜೆಭಾರತದ ಉಪ ರಾಷ್ಟ್ರಪತಿಜನಪದ ಕಲೆಗಳುಹಕ್ಕ-ಬುಕ್ಕಕೂಡಲ ಸಂಗಮಮೈನಾ(ಚಿತ್ರ)ಅಲಂಕಾರಕೇಂದ್ರಾಡಳಿತ ಪ್ರದೇಶಗಳುಕಲ್ಲುಹೂವು (ಲೈಕನ್‌ಗಳು)ಕನ್ನಡ ಬರಹಗಾರ್ತಿಯರುಹನುಮಾನ್ ಚಾಲೀಸಮಹಾವೀರಭಾರತದಲ್ಲಿ ಮೀಸಲಾತಿಮಂತ್ರಾಲಯಬಾಬರ್ಕರ್ನಾಟಕ ಸಂಘಗಳುಕರ್ಕಾಟಕ ರಾಶಿರಾಜ್ಯಸಭೆರೋಸ್‌ಮರಿಶಿವರಾಮ ಕಾರಂತಪು. ತಿ. ನರಸಿಂಹಾಚಾರ್ಕೈಗಾರಿಕಾ ನೀತಿಪಿ.ಲಂಕೇಶ್ಶರಣಬಸವೇಶ್ವರ ದೇವಸ್ಥಾನ ಕಲಬುರಗಿಉಪೇಂದ್ರ (ಚಲನಚಿತ್ರ)ಭಾರತೀಯ ಸಂವಿಧಾನದ ತಿದ್ದುಪಡಿಅಲಾವುದ್ದೀನ್ ಖಿಲ್ಜಿಲೋಪಸಂಧಿನವರಾತ್ರಿಅಸಹಕಾರ ಚಳುವಳಿಬಿ. ಆರ್. ಅಂಬೇಡ್ಕರ್🡆 More