ನಿಸರ್ಗಾನಿಲ

ನಿಸರ್ಗಾನಿಲ (ಪಳೆಯುಳಿಕೆ ಅನಿಲ ಎಂದೂ ಕರೆಯಲ್ಪಡುತ್ತದೆ) ಎಂದರೆ ನೈಸರ್ಗಿಕವಾಗಿ ದೊರೆಯುವ ಅನಿಲರೂಪದ ಹೈಡ್ರೊಕಾರ್ಬನ್ನುಗಳ ಮಿಶ್ರಣ.

ಈ ಮಿಶ್ರಣದಲ್ಲಿ ಮುಖ್ಯವಾಗಿ ಮೀಥೇನ್ ಇರುತ್ತದೆ, ಜೊತೆಗೆ ಸಣ್ಣ ಪ್ರಮಾಣದಲ್ಲಿ ವಿವಿಧ ಇತರ ಹೆಚ್ಚಿನ ಅಣುತೂಕದ ಆಲ್ಕೇನ್‌ಗಳು ಇರುತ್ತವೆ. ಸ್ವಲ್ಪ ಮಟ್ಟದಲ್ಲಿ ಇಂಗಾಲದ ಡೈಆಕ್ಸೈಡ್, ಸಾರಜನಕ, ಹೈಡ್ರೋಜನ್ ಸಲ್ಫೈಡ್ ಮತ್ತು ಹೀಲಿಯಮ್‍ನಂತಹ ಸುಳಿವು ಸಿಗದಷ್ಟು ಪ್ರಮಾಣದಲ್ಲಿರುವ ಅನಿಲಗಳು ಸಾಮಾನ್ಯವಾಗಿ ಇರುತ್ತವೆ. ನಿಸರ್ಗಾನಿಲವು ಬಣ್ಣ ಅಥವಾ ವಾಸನೆಯನ್ನು ಹೊಂದಿರುವುದಿಲ್ಲ. ಹಾಗಾಗಿ ಮರ್ಕ್ಯಾಪ್ಟನ್‍ನಂತಹ (ಗಂಧಕ ಅಥವಾ ಕೊಳೆತ ಮೊಟ್ಟೆಗಳ ವಾಸನೆ ಹೊಂದಿರುತ್ತದೆ) ವಾಸನೆಕಾರಕಗಳನ್ನು ಸಾಮಾನ್ಯವಾಗಿ ನಿಸರ್ಗಾನಿಲ ಸರಬರಾಜಿಗೆ ಸೇರಿಸಲಾಗುತ್ತದೆ. ಇದರಿಂದ ಅನಿಲ ಸೋರಿಕೆಗಳನ್ನು ಸರಾಗವಾಗಿ ಪತ್ತೆಹಚ್ಚಬಹುದು.

ನಿಸರ್ಗಾನಿಲ
ಗ್ಯಾಸ್ ಸ್ಟವ್ ಮೇಲೆ ದಹಿಸುತ್ತಿರುವ ನಿಸರ್ಗಾನಿಲ

ಇತಿಹಾಸ

ಅಮೆರಿಕದಲ್ಲಿ ಹೆಚ್ಚು ಬಳಕೆಯಲ್ಲಿರುವ ನಿಸರ್ಗಾನಿಲದ ಕಥೆ ಪ್ರಾರಂಭವಾದದ್ದು ಬಹಳ ಕಾಲಾನಂತರ. 1175ರಲ್ಲಿ ವೆಸ್ಟ್ ವರ್ಜೀನಿಯ ಸಂಸ್ಥಾನದಲ್ಲಿನ ಚಾರ್ಲ್ಸ್‌ಟನ್ ನಗರದ ಬಳಿ ಒಂದು ಉರಿವ ಚಿಲುಮೆ (ಬರ‍್ನಿಂಗ್ ಸ್ಪ್ರಿಂಗ್) ಕಂಡುಬಂದದ್ದರ ಬಗ್ಗೆ ಪ್ರಸ್ತಾಪವಿದೆ. ಅದು ಭೂಮಿಯೊಳಗಿನಿಂದ ಸೂಸುತ್ತಿದ್ದ ನಿಸರ್ಗಾನಿಲವಿರಬೇಕು. 1821ರಲ್ಲಿ ನ್ಯೂಯರ್ಕ್ ಸಂಸ್ಥಾನದ ಫ್ರೆಡೋನಿಯ ಎಂಬಲ್ಲಿದ್ದ ಒಂದು ಉರಿವ ಚಿಲುಮೆಯ ಬಳಿ ಮೊಟ್ಟಮೊದಲ ಅನಿಲದ ಬಾವಿಯನ್ನು ತೋಡಲಾಯಿತು. ಅದರ ಆಳ ಕೇವಲ 27’. 1200’ಯಷ್ಟು ಹೆಚ್ಚು ಆಳದ ಬಾವಿಯನ್ನು ಮೊಟ್ಟ ಮೊದಲು ತೋಡಿದ್ದು 1854ರಲ್ಲಿ. ಫ್ರೆಡೋನಿಯದಲ್ಲಿ ಮೊದಲಬಾರಿಗೆ (1858) ನಿಸರ್ಗಾನಿಲದ ಕಂಪನಿಯೊಂದು ಸ್ಥಾಪಿತವಾಯಿತು. ಅಲ್ಲಿಂದ ಈ ಉದ್ಯಮ ಅಗಾಧವಾಗಿ ಬೆಳೆದಿದೆ. ಈ ದಶಕದ ಮಧ್ಯದಲ್ಲಿ ಮಾಡಿದ ಒಂದು ಅಂದಾಜಿನ ಪ್ರಕಾರ ಅಮೆರಿಕದಲ್ಲಿ ಒಂದು ಲಕ್ಷ ಅನಿಲದ ಬಾವಿಗಳಿವೆ. ವರ್ಷ ಒಂದಕ್ಕೆ 15,500,000,000,000 ಘನ ಅಡಿ ಅನಿಲವನ್ನು ಉತ್ಪಾದಿಸಲಾಗುತ್ತಿದೆ.

ಉಪಯೋಗಗಳು

ನಿಸರ್ಗಾನಿಲವನ್ನು ದಹಿಸಿ ಕಾಯಿಸಲು, ಅಡಿಗೆಗೆ, ವಿದ್ಯುಚ್ಛಕ್ತಿ ಉತ್ಪಾದನೆಗೆ ಬಳಸಬಹುದು. ಇದನ್ನು ಪ್ಲಾಸ್ಟಿಕ್ಗಳು ಮತ್ತು ವಾಣಿಜ್ಯಿಕವಾಗಿ ಮುಖ್ಯವಾದ ಇತರ ಸಾವಯವ ರಾಸಾಯನಿಕಗಳ ತಯಾರಿಕೆಯಲ್ಲಿ ರಾಸಾಯನಿಕ ಪೂರಕ ವಸ್ತುವಾಗಿ ಕೂಡ ಬಳಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ವಾಹನಗಳ ಇಂಧನವಾಗಿ ಬಳಸಲ್ಪಡುತ್ತದೆ.

ಉಲ್ಲೇಖಗಳು

ಹೆಚ್ಚಿನ ಓದಿಗೆ

  • Blanchard, Charles (2020). The Extraction State: A History of Natural Gas in America. U of Pittsburgh Press. online review.
ನಿಸರ್ಗಾನಿಲ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ನಿಸರ್ಗಾನಿಲ ಇತಿಹಾಸನಿಸರ್ಗಾನಿಲ ಉಪಯೋಗಗಳುನಿಸರ್ಗಾನಿಲ ಉಲ್ಲೇಖಗಳುನಿಸರ್ಗಾನಿಲ ಹೆಚ್ಚಿನ ಓದಿಗೆನಿಸರ್ಗಾನಿಲಅಂಡಆಲ್ಕೇನ್‌ಗಳುಇಂಗಾಲದ ಡೈಆಕ್ಸೈಡ್ಗಂಧಕಮೀಥೇನ್ಸಾರಜನಕಹೀಲಿಯಮ್

🔥 Trending searches on Wiki ಕನ್ನಡ:

ನಿರುದ್ಯೋಗಕನ್ನಡ ಸಾಹಿತ್ಯ ಸಮ್ಮೇಳನಇಸ್ಲಾಂ ಧರ್ಮಸೂಳೆಕೆರೆ (ಶಾಂತಿ ಸಾಗರ)ಹೆಚ್.ಡಿ.ಕುಮಾರಸ್ವಾಮಿಇಮ್ಮಡಿ ಪುಲಿಕೇಶಿಪರಮಾಣುದಾಸವಾಳವಾಯು ಮಾಲಿನ್ಯಭಾರತದ ಪ್ರಧಾನ ಮಂತ್ರಿಗೌತಮ ಬುದ್ಧಟೊಮೇಟೊಸಂಗೊಳ್ಳಿ ರಾಯಣ್ಣಮೊಘಲ್ ಸಾಮ್ರಾಜ್ಯಶ್ರೀರಂಗಪಟ್ಟಣವ್ಯಂಜನರಾಮಬಳ್ಳಿಗಾವೆಗೋವವಿಕಿಪೀಡಿಯಯುರೋಪ್ಜ್ಯೋತಿಬಾ ಫುಲೆಶಂ.ಬಾ. ಜೋಷಿಗುರುನಾನಕ್ಓಂ ನಮಃ ಶಿವಾಯರೆವರೆಂಡ್ ಎಫ್ ಕಿಟ್ಟೆಲ್ದೇವರ/ಜೇಡರ ದಾಸಿಮಯ್ಯವೀರೇಂದ್ರ ಹೆಗ್ಗಡೆವ್ಯಕ್ತಿತ್ವಬಸವರಾಜ ಕಟ್ಟೀಮನಿಗಾಂಧಾರಕೆ. ಎಸ್. ನರಸಿಂಹಸ್ವಾಮಿಕೊರೋನಾವೈರಸ್ ಕಾಯಿಲೆ ೨೦೧೯ವಡ್ಡಾರಾಧನೆಬೆಳವಡಿ ಮಲ್ಲಮ್ಮಬಾಬು ಜಗಜೀವನ ರಾಮ್ಟಿ. ವಿ. ವೆಂಕಟಾಚಲ ಶಾಸ್ತ್ರೀಕರ್ನಾಟಕ ಜನಪದ ನೃತ್ಯಗಿಳಿಸ್ವಚ್ಛ ಭಾರತ ಅಭಿಯಾನಭಾರತದ ಸ್ವಾತಂತ್ರ್ಯ ಚಳುವಳಿಹೆಚ್.ಡಿ.ದೇವೇಗೌಡರವೀಂದ್ರನಾಥ ಠಾಗೋರ್ಕೈಗಾರಿಕಾ ನೀತಿದರ್ಶನ್ ತೂಗುದೀಪ್ಪಿತ್ತಕೋಶಕನ್ನಡಶ್ರೀವಿಜಯಸನ್ನತಿಸತಿ ಪದ್ಧತಿಪ್ರಗತಿಶೀಲ ಸಾಹಿತ್ಯಜಂಬೂಸವಾರಿ (ಮೈಸೂರು ದಸರಾ)ಕರ್ನಾಟಕಕೇಂದ್ರ ಸಾಹಿತ್ಯ ಅಕಾಡೆಮಿಜಾಗತೀಕರಣಕರ್ಮಧಾರಯ ಸಮಾಸ೨೦೨೩ ಕರ್ನಾಟಕ ವಿಧಾನಸಭೆ ಚುನಾವಣೆಶಿರ್ಡಿ ಸಾಯಿ ಬಾಬಾಸಂಸ್ಕೃತಸಂಖ್ಯಾಶಾಸ್ತ್ರಯಶವಂತರಾಯಗೌಡ ಪಾಟೀಲಚನ್ನವೀರ ಕಣವಿಶ್ರೀ ರಾಘವೇಂದ್ರ ಸ್ವಾಮಿಗಳುಭಾರತೀಯ ಕಾವ್ಯ ಮೀಮಾಂಸೆಕನ್ನಡ ಛಂದಸ್ಸುಕರ್ನಾಟಕದಲ್ಲಿ ಕನ್ನಡೇತರ ಭಾಷೆಗಳು ಮತ್ತು ಸಾಹಿತ್ಯಭಾರತದಲ್ಲಿ ಮೀಸಲಾತಿಜೀವಕೋಶಯಶ್(ನಟ)ವಾಣಿಜ್ಯ(ವ್ಯಾಪಾರ)ರತ್ನಾಕರ ವರ್ಣಿತಾಳಗುಂದ ಶಾಸನಭಾರತದ ಆರ್ಥಿಕ ವ್ಯವಸ್ಥೆಬಾರ್ಬಿಗುಬ್ಬಚ್ಚಿಬಹಮನಿ ಸುಲ್ತಾನರುರಸ(ಕಾವ್ಯಮೀಮಾಂಸೆ)🡆 More