ದಖ್ಖನ್ ಪೀಠಭೂಮಿ

ದಖ್ಖನ್ ಪೀಠಭೂಮಿ ಅಥವಾ ದಖ್ಖನ್ ಪ್ರಸ್ಥಭೂಮಿ ಭಾರತದ ಒಂದು ವಿಶಾಲವಾದ ಪೀಠಭೂಮಿಯಾಗಿದೆ.

ಈ ಪ್ರದೇಶದ ಹೆಸರನ್ನು ಹಲವಾರು ರೀತಿಯಲ್ಲಿ ಬರೆಯಲಾಗುತ್ತದೆ; ಅವು ದಕ್ಕಿನ-ದಕ್ಕಿನ್, ದಕ್ಖಿನ್-ದಕ್ಖನ್, ದಖನ್-ದಖಿನ್ ಇತ್ಯಾದಿ. ದಖ್ಖನ್ ಪೀಠಭೂಮಿಯು ಭಾರತ ಜಂಬೂದ್ವೀಪದ ಬಹುಪಾಲು ಪ್ರದೇಶವನ್ನು ಆವರಿಸಿದೆ. ರಾಷ್ಟ್ರದ ಮೂರು ಪರ್ವತ ಶ್ರೇಣಿಗಳ ನಡುವೆ ವ್ಯಾಪಿಸಿರುವ ಈ ಪೀಠಭೂಮಿಯು ಎಂಟು ರಾಜ್ಯಗಳಲ್ಲಿ ಹರಡಿದೆ. ಮಧ್ಯಭಾರತದ ಸಾತ್ಪುರ ಪರ್ವತಗಳು, ಪಶ್ಚಿಮ ಘಟ್ಟಗಳು ಹಾಗೂ ಪೂರ್ವ ಘಟ್ಟಗಳನ್ನು ಗಡಿಯಾಗಿ ಹೊಂದಿರುವ ದಖ್ಖನ್ ಪೀಠಭೂಮಿಯು ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ಬಹಳಷ್ಟು ಭಾಗ ಮತ್ತು ಆಂಧ್ರಪ್ರದೇಶದ ಕೆಲಭಾಗಗಳನ್ನು ವ್ಯಾಪಿಸಿದೆ. ದಖ್ಖನ್ ಪೀಠಭೂಮಿಯ ಸರಾಸರಿ ಎತ್ತರ ಉತ್ತರದ ಭಾಗಗಳಲ್ಲಿ ೧೦೦ ಮೀ. ಗಳಷ್ಟಿದ್ದರೆ ದಕ್ಷಿಣದ ಭಾಗಗಳಲ್ಲಿ ೧೦೦೦ ಮೀ. ಗಳಷ್ಟು. ಈ ಪ್ರದೇಶವು ಜಗತ್ತಿನಲ್ಲಿ ಭೂಗರ್ಭಶಾಸ್ತ್ರದ ಪ್ರಕಾರ ಅತಿ ಸ್ಥಿರವಾದ ಭೂ ಪ್ರದೇಶಗಳಲ್ಲಿ ಒಂದಾಗಿದೆ. ಭಾರತದ ಹಲವು ಮಹಾನದಿಗಳ ಜಲಾನಯನ ಪ್ರದೇಶಗಳು ದಖ್ಖನ್ ಪೀಠಭೂಮಿಯಲ್ಲಿವೆ. ಗೋದಾವರಿ ನದಿಯು ದಖ್ಖನ್ ಪೀಠಭೂಮಿಯ ಉತ್ತರದಲ್ಲಿ ಹರಿದರೆ ಕೃಷ್ಣಾ ಮತ್ತು ತುಂಗಭದ್ರಾ ನದಿಗಳು ಮಧ್ಯಭಾಗದಲ್ಲಿ ಹಾಗೂ ಕಾವೇರಿ ನದಿಯು ದಖ್ಖನ್ ಪೀಠಭೂಮಿಯ ದಕ್ಷಿಣಭಾಗದ ಪ್ರದೇಶಗಳಿಗೆ ನೀರುಣಿಸುತ್ತವೆ. ಈ ಪ್ರದೇಶದಲ್ಲಿ ಇಂಡೋ-ಆರ್ಯನ್ ಮತ್ತು ದ್ರಾವಿಡ ಭಾಷಾ ಸಂಸ್ಕೃತಿಗಳೆರಡರ ಜನರೂ ನೆಲೆಸಿದ್ದಾರೆ. ದಖ್ಖನ್ ಪೀಠಭೂಮಿ ಪ್ರದೇಶದ ಮುಖ್ಯ ಬೆಳೆ ಹತ್ತಿ. ಉಳಿದಂತೆ ಕಬ್ಬು ಹಾಗೂ ಭತ್ತವನ್ನು ಸಹ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಈ ಪ್ರದೇಶದ ಪ್ರಮುಖ ನಗರಗಳೆಂದರೆ - ಬೆಂಗಳೂರು, ಹೈದರಾಬಾದ್, ತಿರುಪತಿ,ಪುಣೆ, ನಾಗಪುರ, ಔರಂಗಾಬಾದ್ ಮತ್ತು ಮೈಸೂರು.

ದಖ್ಖನ್ ಪೀಠಭೂಮಿ
ಭಾರತದ ದಕ್ಷಿಣದಲ್ಲಿ ದಖ್ಖನ್ ಪೀಠಭೂಮಿ

Tags:

ಆಂಧ್ರಪ್ರದೇಶಕಬ್ಬುಕರ್ನಾಟಕಕಾವೇರಿ ನದಿಕೃಷ್ಣಾಜಲಾನಯನ ಪ್ರದೇಶತಿರುಪತಿತುಂಗಭದ್ರಾ ನದಿದ್ರಾವಿಡನಾಗಪುರಪಶ್ಚಿಮ ಘಟ್ಟಗಳುಪುಣೆಬೆಂಗಳೂರುಭತ್ತಭಾರತಮಹಾರಾಷ್ಟ್ರಮೈಸೂರುಸಾತ್ಪುರ ಪರ್ವತಗಳುಹತ್ತಿಹೈದರಾಬಾದ್

🔥 Trending searches on Wiki ಕನ್ನಡ:

ಮಾಸ್ಕೋಕಲಿಕೆಹೊಯ್ಸಳಬಾಂಗ್ಲಾದೇಶವಿರಾಟ್ ಕೊಹ್ಲಿಶಿವರಾಮ ಕಾರಂತಸೂರ್ಯವ್ಯೂಹದ ಗ್ರಹಗಳುಯೇಸು ಕ್ರಿಸ್ತಸಿದ್ದಲಿಂಗಯ್ಯ (ಕವಿ)ಭಾರತೀಯ ಸ್ಟೇಟ್ ಬ್ಯಾಂಕ್ಮಂಗಳೂರುಕನ್ನಡ ಕಾವ್ಯನರೇಂದ್ರ ಮೋದಿರಾಷ್ಟ್ರೀಯತೆಇಂಡಿಯನ್ ಪ್ರೀಮಿಯರ್ ಲೀಗ್ಆರೋಗ್ಯಕರ್ನಾಟಕ ಐತಿಹಾಸಿಕ ಸ್ಥಳಗಳುಗ್ರಾಮ ಪಂಚಾಯತಿದಿಕ್ಕುಶಬ್ದಜೋಸೆಫ್ ಸ್ಟಾಲಿನ್ವಿಷ್ಣುಅಂಬಿಗರ ಚೌಡಯ್ಯಸೌರ ಶಕ್ತಿವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುರಕ್ತದೊತ್ತಡಅನುಭವ ಮಂಟಪವಲ್ಲಭ್‌ಭಾಯಿ ಪಟೇಲ್ಮಾಸ್ತಿ ವೆಂಕಟೇಶ ಅಯ್ಯಂಗಾರ್ಆಮ್ಲಬಾಳೆ ಹಣ್ಣುನೀರಿನ ಸಂರಕ್ಷಣೆ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಶ್ರೀರಂಗಪಟ್ಟಣಸಹಾಯಧನಫೇಸ್‌ಬುಕ್‌ಸಾರಾ ಅಬೂಬಕ್ಕರ್ಆದಿ ಗೋದ್ರೇಜ್ಮಹಾಭಾರತಶಿಶುನಾಳ ಶರೀಫರುಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಮ್ಯಾಕ್ಸ್ ವೆಬರ್ವೃದ್ಧಿ ಸಂಧಿಪೊನ್ನಕನ್ನಡ ಪತ್ರಿಕೆಗಳುಅರವಿಂದ ಮಾಲಗತ್ತಿಚೆನ್ನಕೇಶವ ದೇವಾಲಯ, ಬೇಲೂರುಹಸ್ತ ಮೈಥುನಭಾರತೀಯ ಸಂಸ್ಕೃತಿಭಾರತದ ಆರ್ಥಿಕ ವ್ಯವಸ್ಥೆಶನಿಸಮಾಜಶಾಸ್ತ್ರಗೊರೂರು ರಾಮಸ್ವಾಮಿ ಅಯ್ಯಂಗಾರ್ಏಡ್ಸ್ ರೋಗಕವಿಗಳ ಕಾವ್ಯನಾಮಷೇರು ಮಾರುಕಟ್ಟೆಸಮಾಜ ವಿಜ್ಞಾನಸಿದ್ಧಾಂತಕರ್ನಾಟಕದ ಜಿಲ್ಲೆಗಳುಬಾರ್ಲಿಪ್ರಬಂಧದಶಾವತಾರಶ್ರೀ ರಾಮಾಯಣ ದರ್ಶನಂಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಹುರುಳಿಪಾಂಡವರುಅಲ್ಲಮ ಪ್ರಭುಮಹಾಕಾವ್ಯಹನುಮಾನ್ ಚಾಲೀಸಕನ್ನಡ ರಾಜ್ಯೋತ್ಸವರಾಮ ಮನೋಹರ ಲೋಹಿಯಾಪ್ರೀತಿವಾಟ್ಸ್ ಆಪ್ ಮೆಸ್ಸೆಂಜರ್🡆 More