ಟೂವಟಾರ

ಟೂವಟಾರ- ರಿಂಕೊಸಿಫೇಲಿಯ ಗಣಕ್ಕೆ ಸೇರಿದ ಏಕೈಕ ಜೀವಂತ ಸರೀಸೃಪ.

ಸ್ಫೀನೊಡಾನ್ ಪಂಕ್ಟೇಟಸ್ ಇದರ ಶಾಸ್ತ್ರೀಯ ಹೆಸರು.

ಟೂವಟಾರ

ನ್ಯೂಜಿಲೆಂಡಿನಲ್ಲಿ ಹಿಂದೊಮ್ಮೆ ಹೇರಳ ಸಂಖ್ಯೆಯಲ್ಲಿ ಜೀವಿಸಿದ್ದ ಈ ಪ್ರಾಣಿ ಈಗ ಅದರ ಸುತ್ತಲಿನ ಸಣ್ಣ ದ್ವೀಪಗಳಿಗೇ ಸೀಮಿತ.

ಸುಮಾರು 60-75 ಸೆಂ.ಮೀ. ಉದ್ದದ ಪ್ರಾಣಿಯಿದು. ನೋಡಲು ಓತಿಕೇತದಂತೆ ಕಾಣುತ್ತದೆ. ಆದರೂ ಟೂವಟಾರಕ್ಕೂ ಓತಿಗಳಿಗೂ ಕೆಲವು ಮುಖ್ಯ ವ್ಯತ್ಯಾಸಗಳುಂಟು. ಟೂವಟಾರದ ಕಣ್ಣಿನಲ್ಲಿ ನಿಕ್ಟಿಟೇಟಿಂಗ್ ಪೊರೆ ಎಂಬ ಮೂರನೆಯ ರೆಪ್ಪೆಯುಂಟು. ಇದು ಕಣ್ಣುಗುಡ್ಡೆಯ ಮೇಲೆ ಅಡ್ಡಡ್ಡವಾಗಿ ಚಲಿಸುತ್ತದೆ. ಅಲ್ಲದೆ ಕಣ್ಣಿನ ಹಿಂಭಾಗದಲ್ಲಿ ತಲೆಬುರುಡೆಯ ಮೇಲೆ ಒಂದು ಮೂಳೆಕವಾನು ಇದೆ. ಓತಿಗಳಲ್ಲಿ ನಿಕ್ಟಿಟೇಟಿಂಗ್ ಪೊರೆಯಾಗಲಿ ಮೂಲೆಕಮಾನು ಆಗಲಿ ಇಲ್ಲ. ಟೂವಟಾರಕ್ಕೆ ನಾಲ್ಕು ಕಾಲುಗಳು, ಬಲವಾದ ಒಂದು ಬಾಲ, ಕತ್ತು ಮತ್ತು ಬೆನ್ನುಗಳ ಮೇಲೆ ಗರಗಸದಂಥ ಹುರುಪೆಗಳ ಒಂದು ಉಬ್ಬೇಣು ಉಂಟು. ದೇಹದ ಮೇಲೆಲ್ಲ ಶಲ್ಕಗಳ ಹೊದಿಕೆ ಇದೆ. ಟೂವಟಾರ ತುಂಬ ಗೋಪ್ಯ ಸ್ವಭಾವದ ಪ್ರಾಣಿ. ಹಗಲೆಲ್ಲ ಬಿಲಗಳಲ್ಲಿ ಹುದುಗಿಕೊಂಡಿದ್ದು ರಾತ್ರಿ ಆಹಾರಾನ್ವೇಷಣೆಗೆ ಹೊರಡುತ್ತದೆ. ಸಾಧಾರಣವಾಗಿ ಬಸವನಹುಳು ಮತ್ತು ಕ್ರಿಮಿಕೀಟಗಳು ಇದರ ಆಹಾರ. ಸಾಮಾನ್ಯವಾಗಿ ಇತರ ಪ್ರಾಣಿಗಳು ತನ್ನ ವಾಸಸ್ಥಳಕ್ಕೆ ಪ್ರವೇಶಿಸಿದಾಗ ಅಥವಾ ಮೊಟ್ಟೆಯಿಡುವ ವೇಳೆಗಳಲ್ಲಿ ಇದು ಒಂದು ವಿಧವಾಗಿ ಲೊಚಗುಟ್ಟುತ್ತದೆ. ಇದರಲ್ಲಿ ನಿಷೇಚನೆ ಆಂತರಿಕ. ಮಣ್ಣಿನ ಕುಳಿಗಳಲ್ಲಿ ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಗಳಿಗೆ ತೊಗಲಿನಂತಿರುವ ಚಿಪ್ಪಿದೆ. ಸುಮಾರು 12-13 ತಿಂಗಳ ಅನಂತರ ಮೊಟ್ಟೆಗಳನ್ನು ಒಡೆದುಕೊಂಡು ಮರಿಗಳು ಹೊರಬರುತ್ತವೆ. ಸಾಮಾನ್ಯವಾಗಿ ಮರಿಗಳ ಮೂತಿಯಲ್ಲಿ ಹರಿತವಾದ ರಚನೆಯೊಂದಿರುತ್ತದೆ. ಇದರ ಸಹಾಯದಿಂದ ಮರಿ ಮೊಟ್ಟೆಯ ಚಿಪ್ಪನ್ನು ಒಡೆಯುತ್ತದೆ. ಮರಿ ಹೊರಬಂದಮೇಲೆ ಈ ರಚನೆ ಅಳಿದುಹೋಗುತ್ತದೆ. ಮರಿಗಳಿಗೆ 6 ತಿಂಗಳವರೆಗೂ ನೆತ್ತಿಯ ಮೇಲೆ ಒಂದು ಅನಾಚ್ಛಾದಿತ ಗುರುತು ಇರುತ್ತದೆ. ಇದಕ್ಕೆ ಪೈನಿಯಲ್ ಕಣ್ಣು ಎಂದು ಹೆಸರು.

ಟೂವಟಾರ
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಸರೀಸೃಪ

🔥 Trending searches on Wiki ಕನ್ನಡ:

ತೆಲುಗುಹೊಂಗೆ ಮರಲೋಕಸಭೆಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುರೊಸಾಲಿನ್ ಸುಸ್ಮಾನ್ ಯಲೋವ್ಎಚ್.ಎಸ್.ವೆಂಕಟೇಶಮೂರ್ತಿಗೋಕಾಕ ಜಲಪಾತಕಲ್ಯಾಣಿಕ್ರಿಸ್ ಇವಾನ್ಸ್ (ನಟ)ಬೃಂದಾವನ (ಕನ್ನಡ ಧಾರಾವಾಹಿ)ರಾಷ್ಟ್ರೀಯ ಶಿಕ್ಷಣ ನೀತಿಜನ್ನಅರ್ಥಶಾಸ್ತ್ರಝೆನಾನ್ಅಲಾವುದ್ದೀನ್ ಖಿಲ್ಜಿಗೋದಾವರಿಪನಾಮ ಕಾಲುವೆಸಾಲುಮರದ ತಿಮ್ಮಕ್ಕಬುದ್ಧಕ್ಷಯಹದ್ದುಭಾರತದ ಪ್ರಧಾನ ಮಂತ್ರಿಗಳ ಪಟ್ಟಿಶ್ರೀಶೈಲಸಂಯುಕ್ತ ರಾಷ್ಟ್ರ ಸಂಸ್ಥೆಅರವಿಂದ್ ಕೇಜ್ರಿವಾಲ್ಅದ್ವೈತಸಂಗೊಳ್ಳಿ ರಾಯಣ್ಣಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಹರಿಶ್ಚಂದ್ರಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಮೀರಾಬಾಯಿಆಯುರ್ವೇದಭಾರತ ಸಂವಿಧಾನದ ಪೀಠಿಕೆಶಿವಕೋಟ್ಯಾಚಾರ್ಯಹಲ್ಮಿಡಿ ಶಾಸನಬೇಡಿಕೆಯ ಬೆಲೆ ಸ್ಥಿತಿಸ್ಥಾಪಕತ್ವಮೊದಲನೇ ಕೃಷ್ಣಕೃಷ್ಣಶಿರ್ಡಿ ಸಾಯಿ ಬಾಬಾದಾಕ್ಷಾಯಿಣಿ ಭಟ್ಉತ್ತರ ಕರ್ನಾಟಕಪಾಲಕ್ಗೋಪಾಲಕೃಷ್ಣ ಅಡಿಗಭಾರತೀಯ ಸಂಸ್ಕೃತಿನಾಗಮಂಡಲ (ಚಲನಚಿತ್ರ)ಭಾರತದಲ್ಲಿನ ಚುನಾವಣೆಗಳುಬಿ. ಎಂ. ಶ್ರೀಕಂಠಯ್ಯಭೂಮಿಬಾಬು ಜಗಜೀವನ ರಾಮ್ಕನಕದಾಸರುಅಂಜನಿ ಪುತ್ರಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಆಧುನಿಕ ವಿಜ್ಞಾನಅಶೋಕನ ಶಾಸನಗಳುಅಂತರಜಾಲತೆಂಗಿನಕಾಯಿ ಮರಮುಹಮ್ಮದ್ಸಿಂಧನೂರುಭರತ-ಬಾಹುಬಲಿಜಿ.ಪಿ.ರಾಜರತ್ನಂಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಬ್ಲಾಗ್ಸೀತೆಕನ್ನಡಇಮ್ಮಡಿ ಪುಲಕೇಶಿರಾಷ್ಟ್ರೀಯತೆಅಕ್ಬರ್ಗಣರಾಜ್ಯೋತ್ಸವ (ಭಾರತ)ನೈಸರ್ಗಿಕ ಸಂಪನ್ಮೂಲಕಾಲಾಯ ತಸ್ಮೈ ನಮಃ (ಚಲನಚಿತ್ರ)ಬ್ರಾಹ್ಮಣಕರ್ನಾಟಕದ ಮಹಾನಗರಪಾಲಿಕೆಗಳುಗುಪ್ತ ಸಾಮ್ರಾಜ್ಯ🡆 More