ಚಂದ್ರಯಾನ-೨ (ಸಂಸ್ಕೃತ:चंद्रयान-२, lit: Moon-vehicle pronunciation (ಸಹಾಯ·ಮಾಹಿತಿ)), ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆಯ ಸಂಪೂರ್ಣ ದೇಶೀಯ ತಂತ್ರಜ್ಞಾನ ಅಳವಡಿಸಿ ನಿರ್ಮಿಸಿರುವ ಚಾಂದ್ರ ಪರಿಶೋಧನಾ ಅಭಿಯಾನ.
೨೨ ಜುಲೈ ೨೦೧೯ ರ ಅಪರಾಹ್ನ ೦೨ ಗಂಟೆ ೪೩ (2ಗಂ.43 ನಿ.ಕ್ಕೆ)ನಿಮಿಷ ಭಾರತೀಯ ಕಾಲಮಾನಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮಾರ್ಕ್ 3 (ಜಿ ಎಸ್ ಎಲ್ ವಿ ಎಂಕೆ 3-ಎಂ1 ) ರಾಕೆಟ್ ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.
Operator | ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ |
---|---|
Mission type | ಕಕ್ಷೆಗಾಮಿ, ಭೂಸ್ಪರ್ಶಕ and one ರೋವರ್ |
Launch date | ಜುಲೈ ೨೨, ೨೦೧೯, ೧೪:೪೩ IST (೦೯:೧೩ UTC) |
Launch vehicle | ಜಿ.ಎಸ್.ಎಲ್.ವಿ |
Mission duration | One year (orbiter and rover) |
Satellite of | Moon |
Homepage | ISRO |
Mass | ೨,೬೫೦ Kg (orbiter, lander and rover) |
ಇಸ್ರೋದ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ಒಂದು ಚಾಂದ್ರ ಕಕ್ಷೆಗಾಮಿ, ರೋವರ್ ಹಾಗು ಒಂದು ಭೂಸ್ಪರ್ಶಕ ಒಳಗೊಂಡಿರುವ ಇದು ಸೆಪ್ಟೆಂಬರ್ ವೇಳೆಗೆ ಚಂದ್ರನ ದಕ್ಷಿಣ ದ್ರುವಕ್ಕೆ ಇಳಿಯುವ ಯೋಜನೆ ಇದೆ. ಚಂದ್ರನ ದಕ್ಷಿಣ ಧ್ರುವ ಪ್ರದೇಶಕ್ಕೆ ಭೂಸ್ಪರ್ಶಕವನ್ನು ಇಳಿಸುವ ಮೊಟ್ಟ ಮೊದಲ ಯೋಜನೆ ಇದಾಗಿದೆ. ಇದಕ್ಕೆ ತಗಲುವ ವೆಚ್ಚ ಸುಮಾರು ₹೪೨೫ ಕೋಟಿ (ಯುಎಸ್$೯೦ ದಶಲಕ್ಷ)ರಷ್ಟೆಂದು ಅಂದಾಜಿಸಲಾಗಿದೆ. ಇಸ್ರೋ ಪ್ರಕಾರ, ಈ ಅಭಿಯಾನವು ವಿವಿಧ ಹೊಸ ತಂತ್ರಜ್ಞಾನಗಳನ್ನು ಪರೀಕ್ಷಿಸಿ ಬಳಕೆಮಾಡುವುದರ ಜೊತೆಗೆ 'ಹೊಸ' ಪ್ರಯೋಗಗಳನ್ನು ನಡೆಸುತ್ತದೆ. ಗಾಲಿಗಳಿರುವ ರೋವರ್ ಚಂದ್ರನ ಮೇಲ್ಮೈ ತಲುಪಿ, ಆ ಸ್ಥಳದ ರಾಸಾಯನಿಕ ವಿಶ್ಲೇಷಣೆ ನಡೆಸಲು ಮಣ್ಣು ಅಥವಾ ಶಿಲೆಯ ಮಾದರಿಯನ್ನು ಸಂಗ್ರಹಿಸುತ್ತದೆ. ಅಲ್ಲಿನ ಅಗತ್ಯ ಅಂಕಿಅಂಶದ ದತ್ತಾಂಶವನ್ನು ಭೂಮಿಗೆ ಚಂದ್ರಯಾನ-೨ ಕಕ್ಷೆಗಾಮಿಯ ಮೂಲಕ ತಲುಪಿಸಲಾಗುತ್ತದೆ. ಚಂದ್ರಯಾನ-1 ಅಭಿಯಾನದ ಯಶಸ್ಸಿಗೆ ಕಾರಣರಾದ ಮೈಲ್ಸ್ವಾಮಿ ಅಣ್ಣಾದೊರೈ ನೇತೃತ್ವದ ತಂಡವು ಚಂದ್ರಯಾನ-೨ ಅಭಿಯಾನದಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಅಭಿಯಾನಕ್ಕೆ, ಭಾರತ ಸರ್ಕಾರವು ೧೮ ಸೆಪ್ಟೆಂಬರ್ ೨೦೦೮ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ರ ಅಧ್ಯಕ್ಷತೆಯಲ್ಲಿ ನಡೆದ ಯೂನಿಯನ್ ಕ್ಯಾಬಿನೆಟ್(ಕೇಂದ್ರ ಸಚಿವ ಸಂಪುಟ ಸಭೆ) ಸಭೆಯಲ್ಲಿ ಅನುಮೋದನೆ ನೀಡಲಾಯಿತು. ನವೆಂಬರ್ ೧೨, ೨೦೦೭ರಲ್ಲಿ, ರಷ್ಯನ್ ಫೆಡರಲ್ ಸ್ಪೇಸ್ ಏಜೆನ್ಸಿ(ರೋಸ್ಕೊಸ್ಮೊಸ್) ಹಾಗು ISROನ ಪ್ರತಿನಿಧಿಗಳು, ಎರಡೂ ಏಜೆನ್ಸಿಗಳೂ ಚಂದ್ರಯಾನ-೨ ಯೋಜನೆಯಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸಲು ಒಪ್ಪಂದಕ್ಕೆ ಸಹಿ ಹಾಕಿದವು. ಕಕ್ಷೆಗಾಮಿ ಹಾಗು ರೋವರ್ ನ ತಯಾರಿಕೆಗೆ ISRO ಪ್ರಮುಖ ಜವಾಬ್ದಾರಿ ವಹಿಸಿಕೊಂಡರೆ, ರೋಸ್ಕೊಸ್ಮೊಸ್ ಗಗನನೌಕೆ ತಯಾರಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿತು. ಬಾಹ್ಯಾಕಾಶ ನೌಕೆಯ ವಿನ್ಯಾಸವು ಆಗಸ್ಟ್ ೨೦೦೯ರ ಹೊತ್ತಿಗೆ ಪೂರ್ಣಗೊಂಡಿತು, ಜೊತೆಗೆ ಎರಡೂ ರಾಷ್ಟ್ರಗಳ ವಿಜ್ಞಾನಿಗಳು ಇದರ ಬಗ್ಗೆ ಜಂಟಿಯಾಗಿ ವಿಧ್ಯುಕ್ತ ಪರಿಶೀಲನೆ ನಡೆಸಿದರು. ಲ್ಯಾಡರ್ ತಯಾರಿಕೆಯಲ್ಲಿ ರಷ್ಯಾದಿಂದ ವಿಳಂಬಗೂಂಡ ಕಾರಣ ಉಡಾವಣೆಯನ್ನು ೩೦೧೬ಕ್ಕೆ ಮುಂದೊಡಲಾಯಿತು. ಆದರೆ ರೋಸ್ಕೊಸ್ಮೊಸ್ ನ ಫೂಬೊಸ್-ಗ್ರಂಟ್ ಮಂಗಳ ಗ್ರಹದ ಉಡಾವಣೆ ಗುರಿಯು ವಿಫಲಗೊಂಡ ಕಾರಣ ರಷ್ಯಾ ಈ ಉಡಾವಣೆಯಿಂದ ಹೊರ ಬಂದಿತು. ಫೂಬೊಸ್-ಗ್ರಂಟ್ ಅಭಿಯಾನದ ಕೆಲವು ತಾಂತ್ರಿಕ ಅಂಶಗಳು ಚಂದ್ರಯಾನ-೨ ರಲ್ಲಿಯು ಬಳಸಲಾಗಿತ್ತು. ೨೦೧೫ ರ ಹೊತ್ತಿಗೆ ಲ್ಯಾಂಡರ್ ಅನ್ನು ಒದಗಿಸಲು ರಷ್ಯಾ ತನ್ನ ಅಸಾಮರ್ಥ್ಯವನ್ನು ಉಲ್ಲೇಖಿಸಿದಾಗ, ಭಾರತವು ಚಂದ್ರನ ಕಾರ್ಯಾಚರಣೆಯನ್ನು ಸ್ವತಂತ್ರವಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಿತು.
ಅಭಿಯಾನವು ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ Mk-II(GSLV)ನ ಮೂಲಕ ಉಡಾವಣೆ ಮಾಡಲು ಉದ್ದೇಶಿಸಲಾಗಿದೆ, ಜೊತೆಗೆ ಶ್ರೀಹರಿಕೋಟ ದ್ವೀಪದ ಮೇಲಿರುವ ಸತೀಶ್ ಧವನ್ ಸ್ಪೇಸ್ ಸೆಂಟರ್ ನಿಂದ ಉಡಾವಣೆ ಮಾಡಲಾಯಿತು. ಚಂದ್ರಯಾನ–2ರ ನೌಕೆಯನ್ನು ಹೊತ್ತ ರಾಕೆಟ್ ‘ಬಾಹುಬಲಿ’ 22-7-2019 ಸೋಮವಾರ ಮಧ್ಯಾಹ್ನ 2.43ಕ್ಕೆ ಶ್ರೀಹರಿಕೋಟಾದ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ನಭಕ್ಕೆ ಹಾರಿತು.ಇಸ್ರೊ ನಿರ್ಮಿತ ಅತ್ಯಂತ ಬಲಶಾಲಿ ರಾಕೆಟ್, ಜಿಎಸ್ಎಲ್ವಿ ಮಾರ್ಕ್–3 ‘ಬಾಹುಬಲಿ’ಯು 3,850ಕೆ.ಜಿ. ತೂಕದ ಉಪಕರಣಗಳನ್ನು ಭೂಮಿಯಕಕ್ಷೆಗೆ ಸೇರಿಸಿತು(ಇದರ ಸರಾಸರಿ ಉಡಾವಣೆ ತೂಕ ೨,೬೫೦ ಕೆಜಿ.?)
ISRO, ಕಕ್ಷೆಗಾಮಿಯನ್ನು ವಿನ್ಯಾಸಗೊಳಿಸುತ್ತದೆ, ಇದು ೨೦೦ ಕಿಮೀ ಎತ್ತರದಲ್ಲಿ ಚಂದ್ರನನ್ನು ಪರಿಭ್ರಮಿಸುತ್ತದೆ. ಅಭಿಯಾನವು ಕಕ್ಷೆಗಾಮಿಗೆ ಐದು ಉಪಕರಣಗಳನ್ನು ಕೊಂಡೊಯ್ಯಬೇಕೆಂದು ನಿರ್ಧರಿಸಲಾಗಿದೆ. ಇದರಲ್ಲಿ ಮೂರು ಉಪಕರಣಗಳು ಹೊಸತಾಗಿದ್ದು, ಮತ್ತೆರಡು ಉಪಕರಣಗಳು ಚಂದ್ರಯಾನ-1ರಲ್ಲಿ ಕಕ್ಷೆಗಾಮಿಗೆ ಹೊತ್ತೊಯ್ಯಲಾದ ಸುಧಾರಿತ ರೂಪಾಂತರಗಳಾಗಿದೆ. ಸರಾಸರಿ ಉಡಾವಣಾ ಮಾಸ್ (ದ್ರವ್ಯರಾಶಿ-ತೂಕ) ೧,೪೦೦ ಕೆಜಿಯಷ್ಟಿರುತ್ತದೆ.
ಚಂದ್ರನ ಮೇಲ್ಮೈನ ಮೇಲೆ ಪರಿಣಾಮ ಬೀರಿದ ಚಂದ್ರಯಾನ-೧ರ ಚಾಂದ್ರ ಶೋಧಕಕ್ಕಿಂತ ಭಿನ್ನವಾಗಿ, ಗಗನನೌಕೆಯು ಹಗುರವಾಗಿ ನಿಲುಗಡೆ ಮಾಡುತ್ತದೆ. ರಷ್ಯನ್ ಫೆಡರಲ್ ಸ್ಪೇಸ್ ಏಜೆನ್ಸಿ ಗಗನನೌಕೆಯನ್ನು ಒದಗಿಸುತ್ತದೆ. ಗಗನನೌಕೆ ಹಾಗು ರೋವರ್ ನ ಸರಾಸರಿ ತೂಕ ೧,೨೫೦ ಕೆಜಿ. ರಷ್ಯನ್ ಸ್ಪೇಸ್ ಏಜೆನ್ಸಿ ರೋಸ್ಕೊಸ್ಮೊಸ್ ಗಗನನೌಕೆಯನ್ನು ೨೦೧೧ರಲ್ಲಿ ಪರೀಕ್ಷಿಸಲು ಉದ್ದೇಶಿಸಿದೆ.
ರೋವರ್ ೩೦-೧೦೦ ಕೆಜಿ ತೂಕ ಹೊಂದಿದ್ದು ಸೌರಶಕ್ತಿಯ ಮೇಲೆ ಕಾರ್ಯನಿರ್ವಹಿಸುತ್ತದೆ. ರೋವರ್ ಗಾಲಿಗಳ ಮೇಲೆ ಚಂದ್ರನ ಮೇಲ್ಮೈಯನ್ನು ತಲುಪಿ, ಮಣ್ಣು ಅಥವಾ ಶಿಲೆಯ ಮಾದರಿಯನ್ನು ಸಂಗ್ರಹಿಸಿ, ರಾಸಾಯನಿಕ ವಿಶ್ಲೇಷಣೆಯನ್ನು ನಡೆಸುತ್ತದೆ, ಹಾಗು ಮೇಲಿರುವ ಕಕ್ಷೆಗಾಮಿಗೆ ಶೋಧಿತ,ದೊರೆತ ದತ್ತಾಂಶವನ್ನು ಕಳುಹಿಸುತ್ತದೆ, ಇದು ಭೂಮಿಯ ಸ್ಟೇಶನ್ ಗೆ ತನ್ನ ಪರಿಧಿ ಕೇಂದ್ರದ ಮುಖಾಂತರ ಮಾಹಿತಿ ಪ್ರಸಾರ ಮಾಡುತ್ತದೆ.
ತಜ್ಞ ಸಮಿತಿಯು, ಕಕ್ಷೆಗಾಮಿ ಐದು ಉಪಕರಣಗಳನ್ನು, ಹಾಗು ರೋವರ್ ಎರಡು ಉಪಕರಣಗಳನ್ನು ಕೊಂಡೊಯ್ಯಬೇಕೆಂದು ಸಲಹೆ ನೀಡಿದೆಯೆಂದು ISRO ಪ್ರಕಟಿಸಿತು. ಕಕ್ಷೆಗಾಮಿಗೆ ಕೆಲವು ವೈಜ್ಞಾನಿಕ ಉಪಕರಣಗಳನ್ನು ಒದಗಿಸುವ ಮೂಲಕ NASA ಹಾಗು ESA ಅಭಿಯಾನದಲ್ಲಿ ಪಾಲ್ಗೊಳ್ಳುತ್ತದೆಂದು ಆರಂಭದಲ್ಲಿ ವರದಿ ಮಾಡಲಾಗಿತ್ತು,ತೂಕ ನಿರ್ಬಂಧದಿಂದಾಗಿ ಬಾಹ್ಯ ಉಪಕರಣಗಳನ್ನು ಅಭಿಯಾನವು ಕೊಂಡೊಯ್ಯುವುದಿಲ್ಲವೆಂದು ISRO ನಂತರದಲ್ಲಿ ಸ್ಪಷ್ಟಪಡಿಸಿತು.
ಆಗಸ್ಟ್ ೩೦, ೨೦೧೦ರ ಹೊತ್ತಿಗಿನ ಪ್ರಯೋಗಕ್ಕೆ, ಇಸ್ರೋ, ಚಂದ್ರಯಾನ-೨ರ ಅಭಿಯಾನಕ್ಕೆ ಉಪಕರಣಗಳನ್ನು ಅಂತಿಮಗೊಳಿಸಿತು.
Phase | Date | Event | Detail | Result | References | |
---|---|---|---|---|---|---|
Apogee / Aposelene | Perigee / Periselene | |||||
Geocentric phase | 22 July 2019 09:13:12 UTC | Launch | Burn time: 16 min 14 sec | 45,475 km (28,257 mi) | 169.7 km (105.4 mi) | |
24 July 2019 09:22 UTC | 1st orbit-raising maneuver | Burn time: 48 sec | 45,163 km (28,063 mi) | 230 km (140 mi) | ||
25 July 2019 19:38 UTC | 2nd orbit-raising maneuver | Burn time: 883 sec | 54,829 km (34,069 mi) | 251 km (156 mi) | ||
29 July 2019 09:42 UTC | 3rd orbit-raising maneuver | Burn time: 989 sec | 71,792 km (44,609 mi) | 276 km (171.5 mi) | ||
2 August 2019 09:57 UTC | 4th orbit-raising maneuver | Burn time: 646 sec | 89,472 km (55,595 mi) | 277 km (172 mi) | ||
6 August 2019 09:34 UTC | 5th orbit-raising maneuver | Burn time: 1041 sec | 142,975 km (88,841 mi) | 276 km (171 mi) | ||
13 August 2019 20:51 UTC | Trans-lunar injection | Burn time: 1203 sec | — | — | ||
Selenocentric phase | 20 August 2019 03:32 UTC | Lunar orbit insertion 1st lunar bound maneuver | Burn time: 1738 sec | 18,072 km (11,229 mi) | 114 km (71 mi) | |
21 August 2019 07:20 UTC | 2nd lunar bound maneuver | Burn time: 1228 sec | 4,412 km (2,741 mi) | 118 km (73 mi) | ||
28 August 2019 03:34 UTC | 3rd lunar bound maneuver | Burn time: 1190 sec | 1,412 km (877 mi) | 179 km (111 mi) | ||
30 August 2019 12:48 UTC | 4th lunar bound maneuver | Burn time: 1155 sec | 164 km (102 mi) | 124 km (77 mi) | ||
1 September 2019 12:51 UTC | 5th lunar bound maneuver | Burn time: 52 sec | 127 km (79 mi) | 119 km (74 mi) | ||
Vikram lunar landing | 2 September 2019 7:45 UTC | Vikram separation | — | 127 km (79 mi) | 119 km (74 mi) | |
3 September 2019 3:20 UTC | 1st deorbit burn | Burn time: 4 sec | 128 km (80 mi) | 104 km (65 mi) | ||
3 September 2019 22:12 UTC | 2nd deorbit burn | Burn time: 9 sec | 101 km (63 mi) | 35 km (22 mi) | ||
6 September 2019 UTC (planned) | Powered descent | |||||
6 September 2019 UTC (planned) | Vikram landing | |||||
7 September 2019 UTC (planned) | Pragyan rover deployment | — | — |
This article uses material from the Wikipedia ಕನ್ನಡ article ಚಂದ್ರಯಾನ-೨, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.