ಶಿಖೆ

ಶಿಖೆ ಒಂದು ಹಿಂದೂ / ಭಾರತೀಯ ಮೂಲದ ಹೆಸರು.

ಇದು ಒಂದು ಸಂಸ್ಕೃತ ಪದವಾಗಿದೆ. ಇದರರ್ಥ ಪುರುಷ ಸಂಪ್ರದಾಯಸ್ಥ ಹಿಂದುವಿನ ಬೋಳಿಸಿದ ತಲೆಯ ಮೇಲೆ ಅಥವಾ ಹಿಂದೆ ಬಿಡಲಾದ ಕೂದಲಿನ ಉದ್ದನೆಯ ಜುಟ್ಟು ಅಥವಾ ಚಂಡಿಕೆ. ಸಾಂಪ್ರದಾಯಿಕವಾಗಿ ಎಲ್ಲ ಹಿಂದೂಗಳು ಶಿಖೆಯನ್ನು ಹೊಂದಿರಬೇಕೆಂದು ಇತ್ತಾದರೂ, ಇಂದು ಇದನ್ನು ಮುಖ್ಯವಾಗಿ ಬ್ರಾಹ್ಮಣರು ಮತ್ತು ದೇವಸ್ಥಾನದ ಅರ್ಚಕರಲ್ಲಿ ಕಾಣಲಾಗುತ್ತದೆ.

ಶಿಖೆ

ಸಾಂಪ್ರದಾಯಿಕವಾಗಿ, ಹಿಂದೂ ಪುರುಷರು ಮಕ್ಕಳಾಗಿದ್ದಾಗ ಚೂಡಾಕರಣ ಎಂದು ಕರೆಯಲ್ಪಡುವ ಸಂಸ್ಕಾರದಲ್ಲಿ ತಮ್ಮ ಎಲ್ಲ ಕೂದಲನ್ನು ಬೋಳಿಸಿಕೊಳ್ಳಿತ್ತಾರೆ. ನೆತ್ತಿಯ ಮೇಲೆ ಕೂದಲಿನ ಜುಟ್ಟನ್ನು ಹಾಗೆಯೇ ಬಿಡಲಾಗುತ್ತದೆ (ಸಹಸ್ರಾರ). ಭಾರತದಲ್ಲಿ ಈ ಪ್ರೌಢಾವಸ್ಥೆಗೆ ಪೂರ್ವದ ಕೇಶಶೈಲಿಯನ್ನು ಪುರುಷನ ಜೀವನದಾದ್ಯಂತ ಬೆಳೆಯಲು ಬಿಡಲಾಗುತ್ತದೆ, ಆದರೆ ಸಾಮಾನ್ಯವಾಗಿ ಕೇವಲ ಅತಿ ಸಂಪ್ರದಾಯಸ್ಥ ಧಾರ್ಮಿಕ ಪುರುಷರು ಈ ಕೇಶಶೈಲಿಯನ್ನು ಮುಂದುವರಿಸುವರು.

ಧಾರ್ಮಿಕ ಕ್ರಿಯಾವಿಧಿಗಳನ್ನು ಮಾಡಲು ಶಿಖೆಯನ್ನು ಹಿಂದೆ ಕಟ್ಟಲಾಗುತ್ತದೆ ಅಥವಾ ಗಂಟು ಹಾಕಲಾಗುತ್ತದೆ. ಕೇವಲ ಶವಸಂಸ್ಕಾರಗಳು ಮತ್ತು ಪುಣ್ಯತಿಥಿಗಳನ್ನು ಮಾಡುವಾಗ ಶಿಖೆಯನ್ನು ಬಿಚ್ಚಲಾಗುತ್ತದೆ ಅಥವಾ ಕೂದಲು ಕೆದರಿರುತ್ತದೆ. ಕೆದರಿದ ಕೂದಲನ್ನು ಅಮಂಗಳಕರವೆಂದು ಪರಿಗಣಿಸಲಾಗುತ್ತದೆ, ಮತ್ತು ಭಾರೀ ದುಃಖ ಅಥವಾ ವಿಪತ್ತಿನ ಸಮಯವನ್ನು ಪ್ರತಿನಿಧಿಸುತ್ತದೆ. ಹಿಂದೂ ಧರ್ಮಗ್ರಂಥಗಳಲ್ಲಿ, ದುಶ್ಶಾಸನನು ಅವಳೊಂದಿಗೆ ಅಸಭ್ಯವಾಗಿ ವರ್ತಿಸಿದಾಗ, ಶತ್ರುಗಳ ಮೇಲೆ ಸರಿಯಾಗಿ ಸೇಡು ತೀರಿಸಿಕೊಳ್ಳದವರೆಗೆ ತಾನು ತನ್ನ ಕೂದಲನ್ನು ಕಟ್ಟುವುದಿಲ್ಲ ಎಂದು ದ್ರೌಪದಿ ಕುರುಗಳ ಸಭೆಯಲ್ಲಿ ಪ್ರತಿಜ್ಞೆ ಮಾಡುತ್ತಾಳೆ. ಹಾಗೆಯೇ, ಚಾಣಕ್ಯನು ಅವನನ್ನು ಅವಮಾನಿಸಿದ ನಂದ ರಾಜರ ಗರ್ವಭಂಗ ಮಾಡುವವರೆಗೆ ತನ್ನ ಶಿಖೆಯನ್ನು ಕಟ್ಟದೇ ಹಾಗೇಯೇ ಬಿಡುತ್ತೇನೆ ಎಂದು ಪ್ರತಿಜ್ಞೆ ಮಾಡಿದನು ಎಂದು ಹೇಳಲಾಗಿದೆ.

ವರದಿಯ ಪ್ರಕಾರ, ಶಿಖೆಯು ಒಂದು ಆಧ್ಯಾತ್ಮಿಕ ಗುರಿಯ ಮೇಲೆ ಏಕನಿಷ್ಠ ಗಮನ, ಮತ್ತು ದೇವರ ಪ್ರತಿ ಭಕ್ತಿಯನ್ನು ಸೂಚಿಸುತ್ತದೆ. ಇದು ಸ್ವಚ್ಛತೆ, ಜೊತೆಗೆ ದೇವರಿಗೆ ವೈಯಕ್ತಿಕ ತ್ಯಾಗದ ಸೂಚಕ ಕೂಡ ಆಗಿದೆ. ಸ್ಮೃತಿ ಶಾಸ್ತ್ರಗಳ ಪ್ರಕಾರ, ಎಲ್ಲ ಹಿಂದೂಗಳು ಶಿಖೆಯನ್ನು ಬಿಡುವುದು ಕಡ್ಡಾಯವಾಗಿದೆ ಮತ್ತು ಮೊದಲ ಮೂರು ದ್ವಿಜ ವರ್ಣಗಳಾದ ಬ್ರಾಹ್ಮಣರು, ಕ್ಷತ್ರಿಯರು ಹಾಗೂ ವೈಶ್ಯರು ಯಜ್ಞೋಪವೀತವನ್ನು ಧರಿಸುವುದು ಕಡ್ಡಾಯ. ದೇವರು ಶಿಖೆಯ ಮೂಲಕ ಒಬ್ಬರನ್ನು ಸ್ವರ್ಗಕ್ಕೆ ಎಳೆಯಲು ಅವಕಾಶವಾಗುತ್ತದೆ, ಅಥವಾ ಕನಿಷ್ಠಪಕ್ಷ ಮಾಯೆಯ ಈ ಭೌತಿಕ ಪ್ರಪಂಚದಿಂದ ಎಂದು ಹೇಳಲಾಗಿದೆ. ಜಾತಿ, ಭಾಷೆ ಅಥವಾ ಪ್ರಾದೇಶಿಕ ಅಡೆತಡೆಗಳನ್ನು ಮೀರಿದ ಹಿಂದೂಗಳ ಕೆಲವು ಸಂಕೇತಗಳಲ್ಲಿ ಶಿಖೆಯು ಒಂದಾಗಿದೆ. ಸಮುದಾಯಗಳೊಳಗೆ ಶಿಖೆಯ ಶೈಲಿಯಲ್ಲಿ ಬದಲಾವಣೆಗಳು ಇದ್ದವಾದರೂ, ಅದು ಎಲ್ಲ ಪುರುಷರಿಗೆ ಕಡ್ಡಾಯವಾಗಿತ್ತು.

ಉಲ್ಲೇಖಗಳು

Tags:

ಬ್ರಾಹ್ಮಣಹಿಂದೂ

🔥 Trending searches on Wiki ಕನ್ನಡ:

ನಾಲ್ವಡಿ ಕೃಷ್ಣರಾಜ ಒಡೆಯರುಪ್ರೀತಿದೆಹಲಿಯ ಇತಿಹಾಸಭಾರತದ ಮುಖ್ಯಮಂತ್ರಿಗಳುಒಂದನೆಯ ಮಹಾಯುದ್ಧವಾಣಿವಿಲಾಸಸಾಗರ ಜಲಾಶಯವೈದಿಕ ಯುಗಭಾರತದ ತ್ರಿವರ್ಣ ಧ್ವಜವಿಜ್ಞಾನಶಿವಮೊಗ್ಗಉಡಹಿಂದೂ ಧರ್ಮಚಿನ್ನವಿಧಾನಸೌಧಹೃದಯರುಮಾಲುಭಾರತದ ಸಂವಿಧಾನಗೂಬೆಹಂಪೆಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಗುರು (ಗ್ರಹ)ಭಾರತದ ಜನಸಂಖ್ಯೆಯ ಬೆಳವಣಿಗೆತಿರುಪತಿಜೀವನ ಚೈತ್ರಘಾಟಿ ಸುಬ್ರಹ್ಮಣ್ಯನಗರೀಕರಣಆರ್ಯಭಟ (ಗಣಿತಜ್ಞ)ಸುದೀಪ್ಭೌಗೋಳಿಕ ಲಕ್ಷಣಗಳುಯೋಗಿ ಆದಿತ್ಯನಾಥ್‌ಮಾನವನ ವಿಕಾಸರಾಜ್ಯಗಳ ಪುನರ್ ವಿಂಗಡಣಾ ಆಯೋಗಕೋಟಿಗೊಬ್ಬಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಮೂಲಭೂತ ಕರ್ತವ್ಯಗಳುಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಭಾರತೀಯ ಶಾಸ್ತ್ರೀಯ ನೃತ್ಯಬ್ಯಾಂಕ್ ಖಾತೆಗಳುಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಉತ್ತಮ ಪ್ರಜಾಕೀಯ ಪಕ್ಷದಾಳಿಂಬೆಕರ್ನಾಟಕ ಹೈ ಕೋರ್ಟ್ಭಾರತದ ಮಾನವ ಹಕ್ಕುಗಳುಬೆಳಗಾವಿಈಡನ್ ಗಾರ್ಡನ್ಸ್ಕಲಬುರಗಿರಾಜಧಾನಿಗಳ ಪಟ್ಟಿಹೆಚ್.ಡಿ.ದೇವೇಗೌಡರೌಲತ್ ಕಾಯ್ದೆಅಶ್ವತ್ಥಮರಅಸಹಕಾರ ಚಳುವಳಿಮಂಡಲ ಹಾವುಭಾರತೀಯ ರಾಷ್ಟ್ರೀಯ ಕಾಂಗ್ರೆಸ್ವಿವಾಹವಾಟ್ಸ್ ಆಪ್ ಮೆಸ್ಸೆಂಜರ್ಹಲ್ಮಿಡಿಗಣರಾಜ್ಯೋತ್ಸವ (ಭಾರತ)ಮಫ್ತಿ (ಚಲನಚಿತ್ರ)ಸಮಾಜ ಸೇವೆಜಿ.ಎಸ್. ಘುರ್ಯೆಒಂದೆಲಗದೇಶಗಳ ವಿಸ್ತೀರ್ಣ ಪಟ್ಟಿಕೃಷಿಕರ್ನಾಟಕ ಸರ್ಕಾರಭಾರತದ ಭೌಗೋಳಿಕತೆಚರ್ಚ್ವಿಷ್ಣುವರ್ಧನ್ (ನಟ)ಸಾಮ್ರಾಟ್ ಅಶೋಕಹದ್ದುಮಲೈ ಮಹದೇಶ್ವರ ಬೆಟ್ಟಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಧನಂಜಯ್ (ನಟ)ಆಭರಣಗಳುನಾಡ ಗೀತೆಇಂಡಿಯನ್‌ ಎಕ್ಸ್‌ಪ್ರೆಸ್‌ಗುಡಿಸಲು ಕೈಗಾರಿಕೆಗಳುಹೆಚ್.ಡಿ.ಕುಮಾರಸ್ವಾಮಿಭಾರತೀಯ ನದಿಗಳ ಪಟ್ಟಿ🡆 More