ಗೋರಖನಾಥ

ಗೋರಖ್‍ನಾಥ ಭಾರತದ ಪ್ರಸಿದ್ಧ ಹಠಯೋಗಿಗಳಲ್ಲೊಬ್ಬ.

ಕಾನ್‍ಫಟ ಎಂಬ ಪಂಥದ ಸ್ಥಾಪಕ. ಈತನ ಕಾಲ ನಿಷ್ಕರ್ಷೆಯಾಗಿಲ್ಲ. ಏಳನೆಯ ಶತಮಾನದ ನೇಪಾಳಿ ರಾಜಮನೆತನಕ್ಕೆ ಸಂಬಂಧಪಟ್ಟವನೆಂದು ಒಂದು ಪ್ರತೀತಿ ಇದೆ. ಸು. 1120 ಎಂದು ಹೇಳುವವರೂ ಇದ್ದಾರೆ. ಈತ ಮತ್ಸ್ಯೇಂದ್ರನಾಥನ ಶಿಷ್ಯನೆಂದು ಹೇಳಲಾಗಿದೆ. ಗುರುವಿಗೆ ಒಮ್ಮೆ ಉಂಟಾದ ಅತೀವ ಸ್ತ್ರೀವ್ಯಾಮೋಹವನ್ನು ಈತ ಹೋಗಲಾಡಿಸಿ ಅಧಃಪತನದಿಂದ ಆತನನ್ನು ಪಾರುಮಾಡಿದನಂತೆ. ತನ್ನ ಪಂಥದ ಶಿಷ್ಯರನ್ನು ಗುರುತು ಹಚ್ಚುವ ಸಲುವಾಗಿ ಅವರ ಕಿವಿಗಳನ್ನು ಸೀಳುವ ಪದ್ಧತಿಯನ್ನು ಈತ ಜಾರಿಗೆ ತಂದ. ಕಾನ್ಫಟ ಎಂದರೆ ಕಿವಿ ಸೀಳಿದ ಯೋಗಿಗಳು ಎಂದು ಅರ್ಥ. ಸೀಳಿದ ಕಿವಿಗಳಲ್ಲಿವರು ದೊಡ್ಡ ದೊಡ್ಡ ಕುಂಡಲಗಳನ್ನು ಧರಿಸುತ್ತಾರೆ. ಗೋರಖ್‍ನಾಥ ಸಂಸ್ಕೃತದಲ್ಲಿ ರಚಿಸಿರುವ ಹಠಯೋಗ ಮತ್ತು ಗೋರಕ್ಷಕ ಶತಕ ಎಂಬೆರಡು ಕೃತಿಗಳು ಉಪಲಬ್ಧವಿವೆ. ಹಠಯೋಗದಿಂದ ಪಡೆಯಬಹುದಾದ ದೇಹಶುದ್ಧಿಗೆ ಗೋರಖ್‍ನಾಥ ಹೆಚ್ಚು ಗಮನ ಕೊಟ್ಟಿದ್ದಾನೆ. ಆಸನ, ಶೋಧನ, ಪ್ರಾಣಾಯಾಮ, ಮುದ್ರಾ-ಇವುಗಳಿಂದ ಅನೇಕ ಸಿದ್ಧಿಗಳನ್ನು ಪಡೆದು ಕಡೆಗೆ ಸಮಾಧಿಯನ್ನು ಹೊಂದಬಹುದೆಂದು ಈತನ ಅಭಿಮತ. ಈತ ದೇವಾಂಶಸಂಭೂತನೆಂದು ಇವನ ಪಂಥದವರು ನಂಬುತ್ತಾರೆ. ನೇಪಾಳದಲ್ಲಂತೂ ಇವನನ್ನು ಸಂರಕ್ಷಕ ದೇವತೆಯೆಂದು ಆರಾಧಿಸುತ್ತಾರೆ. ಉತ್ತರಭಾರತದಲ್ಲಿ ಇವನ ಹೆಸರಿನಲ್ಲಿ ಅನೇಕ ದೇವಸ್ಥಾನಗಳಿವೆ. ಇವನ ಮುಖ್ಯ ಮಂದಿರ ಗೋರಖ್‍ನಾಥ ಎನ್ನುವ ಸ್ಥಳದಲ್ಲಿದೆ.

ಗೋರಖನಾಥ
Gorakhnath, Old Pratima (At Gorakhnath Temple, odadar, Porbandar, Gujarat, India)

ವೀರಶೈವ ವಿಭೂತಿಗಳಾದ ಪ್ರಭುದೇವ, ರೇವಣಿಸಿದ್ಧ, ಸಿದ್ಧರಾಮರು, ಗೋರಖ್‍ನಾಥನನ್ನು ಜಯಸಿದಂತೆ ತತ್ಸಂಬಂಧವಾದ ಪುರಾಣಗಳಲ್ಲಿ ಉಲ್ಲೇಖವಿದೆ. ಸತಾರ ಜಿಲ್ಲೆಯಲ್ಲಿ ಗೋರಖ್‍ನಾಥ ಹೆಸರಿನ ಒಂದು ವನವಿದೆ. ಅಲ್ಲಿನ ಆರು ಹುಣಸೆಮರಗಳನ್ನು ಬಹು ಪವಿತ್ರವೆಂದು ಪರಿಗಣಿಸಲಾಗಿದೆ.

ಸತ್ತಾಗ ಈ ಪಂಥದ ಯೋಗಿಗಳನ್ನು ಸುಡುವುದಿಲ್ಲ. ಪದ್ಮಾಸನದಲ್ಲಿ ಕೂಡಿಸಿ ಸಮಾಧಿ ಮಾಡುತ್ತಾರೆ.ಈ ಪಂಥದವರಲ್ಲಿ ಅನೇಕ ವಾಮಾಚಾರಗಳು ಬಳಕೆಯಲ್ಲಿವೆ.

ಬಾಹ್ಯ ಕೊಂಡಿಗಳು

ಗೋರಖನಾಥ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ದೇವಸ್ಥಾನಪ್ರಾಣಾಯಾಮಮತ್ಸ್ಯೇಂದ್ರನಾಥ

🔥 Trending searches on Wiki ಕನ್ನಡ:

ಜಾತಿಕಿತ್ತಳೆಜೀವವೈವಿಧ್ಯಕರ್ನಾಟಕದ ಮುಖ್ಯಮಂತ್ರಿಗಳುತೂಕಕದಂಬ ರಾಜವಂಶಗ್ರಾಮ ಪಂಚಾಯತಿಕೃಷ್ಣದೇವರಾಯಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಪ್ರಚ್ಛನ್ನ ಶಕ್ತಿಹೈಡ್ರೊಜನ್ ಕ್ಲೋರೈಡ್ಶಬ್ದಮಣಿದರ್ಪಣನೀನಾದೆ ನಾ (ಕನ್ನಡ ಧಾರಾವಾಹಿ)ಗಣರಾಜ್ಯೋತ್ಸವ (ಭಾರತ)ವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಉದ್ಯಮಿಸೂರ್ಯವ್ಯೂಹದ ಗ್ರಹಗಳುನೈಸರ್ಗಿಕ ಸಂಪನ್ಮೂಲಕಲ್ಲಿದ್ದಲುಮಡಿವಾಳ ಮಾಚಿದೇವಗೊರೂರು ರಾಮಸ್ವಾಮಿ ಅಯ್ಯಂಗಾರ್ಕುಮಾರವ್ಯಾಸರೇಣುಕಆಯ್ಕಕ್ಕಿ ಮಾರಯ್ಯಅಕ್ಬರ್ಕೆ. ಅಣ್ಣಾಮಲೈನಿರ್ವಹಣೆ ಪರಿಚಯಒಂದನೆಯ ಮಹಾಯುದ್ಧಮಾನವನ ನರವ್ಯೂಹಭರತ-ಬಾಹುಬಲಿಕನ್ನಡಪ್ರಭಬೇಡಿಕೆವಾಲ್ಮೀಕಿಮೂಲವ್ಯಾಧಿಜಿ.ಎಸ್.ಶಿವರುದ್ರಪ್ಪಅಕ್ಷಾಂಶ ಮತ್ತು ರೇಖಾಂಶಹರ್ಡೇಕರ ಮಂಜಪ್ಪಶ್ಯೆಕ್ಷಣಿಕ ತಂತ್ರಜ್ಞಾನಧರ್ಮಎಂ. ಎಸ್. ಸ್ವಾಮಿನಾಥನ್ಉಪ್ಪಿನ ಸತ್ಯಾಗ್ರಹಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಧೂಮಕೇತುಯಮಸ್ವಾಮಿ ವಿವೇಕಾನಂದಬಾಹುಬಲಿಕೊಡಗುಹಲ್ಮಿಡಿ ಶಾಸನಕನ್ನಡಸಂವಹನಕವಿಗಳ ಕಾವ್ಯನಾಮಕಿರಗೂರಿನ ಗಯ್ಯಾಳಿಗಳು (ಪುಸ್ತಕ)ಜ್ಯೋತಿಬಾ ಫುಲೆಜಾನಪದಪಿತ್ತಕೋಶದೆಹಲಿವಿಕ್ರಮಾರ್ಜುನ ವಿಜಯಮುಮ್ಮಡಿ ಕೃಷ್ಣರಾಜ ಒಡೆಯರುಪಶ್ಚಿಮಬಂಗಾ ಬಾಂಗ್ಲಾ ಅಕಾಡೆಮಿರಚಿತಾ ರಾಮ್ಗುಡುಗುಭಾರತ ಬಿಟ್ಟು ತೊಲಗಿ ಚಳುವಳಿಆದಿ ಶಂಕರನರ್ಮದಾ ನದಿಜೀವಸತ್ವಗಳುವೆಂಕಟೇಶ್ವರ ದೇವಸ್ಥಾನಗುರುಲಿಂಗ ಕಾಪಸೆರತ್ನತ್ರಯರುಆಮ್ಲ ಮಳೆಶಿಕ್ಷಕಅಲಾವುದ್ದೀನ್ ಖಿಲ್ಜಿಬಂಡೀಪುರ ರಾಷ್ಟ್ರೀಯ ಉದ್ಯಾನವನಕಪ್ಪೆ ಅರಭಟ್ಟಲಿಪಿಡಿಜಿಲಾಕರ್ಬಾಬು ಜಗಜೀವನ ರಾಮ್ಕಪ್ಪುಭಾರತದ ಸಂವಿಧಾನ ರಚನಾ ಸಭೆ🡆 More